ಭಲೇ ಹುಚ್ಚ (ಚಲನಚಿತ್ರ)

ಕನ್ನಡ ಚಲನಚಿತ್ರ

ಭಲೇ ಹುಚ್ಚ 1972 ರ ಭಾರತೀಯ ಕನ್ನಡ-ಭಾಷೆಯ ಚಲನಚಿತ್ರವಾಗಿದ್ದು, ವೈ.ಆರ್.ಸ್ವಾಮಿ ನಿರ್ದೇಶಿಸಿ, ಗೋಪಾಲ್ ಲಕ್ಷ್ಮಣ್ ನಿರ್ಮಿಸಿದ್ದಾರೆ. ರಾಜ್‌ಕುಮಾರ್ ಮತ್ತು ಆರತಿ ಇದರಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ತೆಲುಗಿಗೆ ದಸರಾ ಪಿಚ್ಚೋಡು ಎಂದು ಡಬ್ ಮಾಡಿ 1973ರಲ್ಲಿ ಬಿಡುಗಡೆ ಮಾಡಲಾಯಿತು.

ಭಲೇ ಹುಚ್ಚ (ಚಲನಚಿತ್ರ)
ಭಲೇ ಹುಚ್ಚ
ನಿರ್ದೇಶನವೈ.ಆರ್.ಸ್ವಾಮಿ
ನಿರ್ಮಾಪಕಗೋಪಾಲ್-ಲಕ್ಷ್ಮಣ್
ಚಿತ್ರಕಥೆಚಿ.ಉದಯಶಂಕರ್
ಕಥೆಚಿ.ಉದಯಶಂಕರ್
ಸಂಭಾಷಣೆಚಿ.ಉದಯಶಂಕರ್
ಪಾತ್ರವರ್ಗರಾಜಕುಮಾರ್ ಆರತಿ ಶ್ರೀನಾಥ್, ವಜ್ರಮುನಿ, ಬಿ.ವಿ.ರಾಧ, ಆದವಾನಿ ಲಕ್ಷ್ಮಿದೇವಿ, ದಿನೇಶ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಮನೋಹರ್
ಬಿಡುಗಡೆಯಾಗಿದ್ದು೧೯೭೨
ಅವಧಿ150 ನಿಮಿಷ
ಚಿತ್ರ ನಿರ್ಮಾಣ ಸಂಸ್ಥೆಶ್ರೀನಿಧಿ ಆರ್ಟ್ಸ್ ಪ್ರೊಡಕ್ಷನ್ಸ್
ಸಾಹಿತ್ಯಹುಣಸೂರು ಕೃಷ್ಣಮೂರ್ತಿ, ಗೀತಪ್ರಿಯ, ಚಿ.ಉದಯಶಂಕರ್

ಕಥಾವಸ್ತು

ಬದಲಾಯಿಸಿ

ಬುದ್ಧಿವಂತ ಮತ್ತು ವಿದ್ಯಾವಂತ ವ್ಯಕ್ತಿಯಾದ ಗೋಪಿಯನ್ನು ಅವನ ಸಹೋದರರು ಹುಚ್ಚನೆಂದು ಹೇಳಿಕೊಂಡು ಮಾನಸಿಕ ಆಸ್ಪತ್ರೆಗೆ ಕಳಿಸುತ್ತಾರೆ. ಆದರೆ ಅವನ ಸಹೋದರರು ಭೂಗತ ದರೋಡೆಕೋರನೊಂದಿಗೆ ತೊಂದರೆಗೆ ಸಿಲುಕಿದಾಗ, ಗೋಪಿ ಅವರನ್ನು ಉಳಿಸಲು ಪ್ರಯತ್ನಿಸುತ್ತಾನೆ.. ಆದರೆ ನಿಜಕ್ಕೂ ಗೋಪಿ ಕೇವಲ ಹುಚ್ಚನೆ? ಅಲ್ಲವೆ? ಕೊನೆಯವರೆಗೂ ಗೊತ್ತಾಗುವುದಿಲ್ಲ. ಉತ್ತಮ ಸಸ್ಪೆನ್ಸ್ ತುಂಬಿದ ಕಥೆ

ಪಾತ್ರವರ್ಗ

ಬದಲಾಯಿಸಿ

ಧ್ವನಿಮುದ್ರಿಕೆ

ಬದಲಾಯಿಸಿ

ಈ ಚಿತ್ರದ ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ರಾಜನ್-ನಾಗೇಂದ್ರ ನಿರ್ದೇಶಿಸಿದ್ದಾರೆ


# ಶೀರ್ಷಿಕೆ ಗಾಯಕರು ರಚನೆ
1 "ಯಾರು ನೀನು" ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ ವಿಜಯನಾರಸಿಂಹ
2 "ಹೇ ಏನೇ ಸುಬ್ಬಿ" ಪಿ ಬಿ.ಶ್ರೀನಿವಾಸ್ ಹುಣಸೂರು ಕೃಷ್ಣಮೂರ್ತಿ
3 "ನೋಡು ನನ್ನ ಬ್ಯೂಟಿ" ಎಸ್. ಜಾನಕಿ
4 "ಬಳ್ಳಿಗೆ ಹೂವು ಚೆಂದ" ಪಿ.ಬಿ.ಶ್ರೀನಿವಾಸ್,ಎಸ್. ಜಾನಕಿ ಚಿ.ಉದಯಶಂಕರ್
5 "ಕಲ್ಲಾದೆ ಏಕೆಂದು ಬಲ್ಲೆ!" ಪಿ.ಬಿ.ಶ್ರೀನಿವಾಸ್ ವಿಜಯನಾರಸಿಂಹ