ರೂಪಾದೇವಿ
ಭಾರತೀಯ ನಟಿ
ರೂಪಾದೇವಿ ೮೦ರ ದಶಕದ ದಕ್ಷಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ಇವರು ೫೦ರ ದಶಕದ ಜನಪ್ರಿಯ ತಾರೆ ಆದವಾನಿ ಲಕ್ಷ್ಮಿದೇವಿಯವರ ಪುತ್ರಿ. ಕನ್ನಡದಲ್ಲಿ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಅನಂತ್ ನಾಗ್, ಶಂಕರ್ ನಾಗ್ ಮುಂತಾದ ಎಲ್ಲ ನಾಯಕರೊಂದಿಗೆ ನಟಿಸಿರುವ ಇವರ ಪ್ರಮುಖ ಚಿತ್ರಗಳೆಂದರೆ ಕಮಲ, ಅವಳ ಅಂತರಂಗ, ಸಮಯದ ಗೊಂಬೆ, ಹಾಲುಜೇನು, ತ್ರಿಶೂಲ, ಮರಳಿ ಗೂಡಿಗೆ ಮತ್ತು ಬಂಧನ.