ಸುಂದರ್ ರಾಜ್
ಸುಂದರ್ ರಾಜ್ ಭಾರತದ ಚಲನಚಿತ್ರ ನಟ. ಸುಂದರ್ ರಾಜ್ ನಟಿಸಿರುವ ಕೆಲವು ಗಮನಾರ್ಹ ಚಿತ್ರಗಳೆಂದರೆ ಕುರಿಗಳು ಸಾರ್ ಕುರಿಗಳು(೨೦೦೧),ಮತದಾನ(೨೦೦೧),ಆಕಸ್ಮಿಕ(೧೯೯೩).[೧]
ವೈಯಕ್ತಿಕ ಜೀವನ
ಬದಲಾಯಿಸಿಸುಂದರ್ ರಾಜ್ ಅವರು ಪ್ರಮೀಳಾ ಜೋಷಾಯಿರವರನ್ನು ಮದುವೆಯಾಗಿದ್ದಾರೆ.ಇವರಿಬ್ಬರಿಗೆ ಒಬ್ಬಳು ಮಗಳಿದ್ದಾಳೆ.ಅವಳ ಹೆಸರು ಮೇಘನಾ ರಾಜ್.ಪ್ರಮೀಳಾ ಜೋಷಾಯಿ ಮತ್ತು ಮೇಘನಾ ರಾಜ್ ಇಬ್ಬರೂ ಕನ್ನಡ ಚಲನಚಿತ್ರ ರಂಗದ ನಟಿಯರಾಗಿದ್ದಾರೆ. ಮೇಘನಾರವರು ಹಲವು ಮಲಯಾಳಂ ಹಾಗೂ ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ.[೨]
ಉದ್ಯೋಗ
ಬದಲಾಯಿಸಿಸುಂದರ್ ರಾಜ್ ಕನ್ನಡದಲ್ಲಿ ಸುಮಾರು ೧೮೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಫೋಷಕ ಪಾತ್ರಗಳಲ್ಲಿ ಕಾಣಿಸುತ್ತಿದ್ದ ಅವರು ಕೆಲವು ಚಿತ್ರಗಳಲ್ಲಿ ಖಳನಾಯಕನಾಗಿಯೂ ಅಭಿನಯಿಸಿದ್ದಾರೆ. ಅವರು ಕನ್ನಡ ಸಿನೆಮಾ ಅಸೋಸಿಯೇಷನ್ನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.[೩]
ಚಲನಚಿತ್ರಗಳು
ಬದಲಾಯಿಸಿ- ಸ್ಟೈಲ್ ಕಿಂಗ್(೨೦೧೬)
- ಆಟಗಾರ(೨೦೧೫)
- ರಾವಣ(೨೦೦೯)
- ಸಮರಸಿಂಹ ನಾಯ್ಕ(೨೦೦೫)
- ನ್ಯಾಯಕ್ಕಾಗಿ ಸವಾಲ್(೧೯೯೪)
- ವಿಜಯ ಕ್ರಾಂತಿ(೧೯೯೩)
- ಮನ ಗೆದ್ದ ಮಗ(೧೯೯೨)
- ಗಗನ(೧೯೮೯)
- ಬದ್ರಕಾಳಿ(೧೯೮೭)
- ಸಂಸಾರದ ಗುಟ್ಟು(೧೯೮೬)
- ಒಂದೇ ರಕ್ತ(೧೯೮೪)
- ನನ್ನ ದೇವರು(೧೯೮೨)
- ಇಮ್ಮಡಿ ಪುಲಿಕೇಶಿ(೧೯೬೭)[೪]
ಉಲ್ಲೇಖಗಳು
ಬದಲಾಯಿಸಿ- ↑ "ಆರ್ಕೈವ್ ನಕಲು". Archived from the original on 2020-09-30. Retrieved 2018-09-15.
- ↑ https://timesofindia.indiatimes.com/topic/Sundar-Raj
- ↑ https://www.revolvy.com/page/Sundar-Raj?
- ↑ https://chiloka.com/celebrity/sundararajan