ಹೇಮಾ ಚೌಧರಿ ದಕ್ಷಿಣ ಭಾರತ ಚಲನಚಿತ್ರರಂಗದ ಹೆಸರಾಂತ ಕಲಾವಿದೆ. ಕನ್ನಡ ಸೇರಿದಂತೆ ತೆಲುಗು, ಮಲಯಾಳಂ ಮತ್ತು ತಮಿಳು ಸುಮಾರು 180ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಾ ಹೆಸರಾಂತ ಕೂಚಿಪುಡಿ ಕಲಾವಿದೆಯೂ ಆಗಿದ್ದಾರೆ. ವೃತ್ತಿ ಜೀವನದ ಆರಂಭದಲ್ಲಿ ನಾಯಕಿಯಾಗಿ ಅಭಿನಯಿಸಿದ ಹೇಮಾ 80ರ ದಶಕದಲ್ಲಿ ಋಣಾತ್ಮಕ ಪಾತ್ರಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದಾರೆ.ಇವರು ದಕ್ಷಿಣ ಭಾರತದ ಹೆಸರಾಂತ ಕಲಾವಿದರಾದ ನಂದಮೂರಿ ತಾರಕ ರಾಮಾರಾವ್, ಕೃಷ್ಣ (ತೆಲುಗು ನಟ), ರಾಜಕುಮಾರ್, ವಿಷ್ಣುವರ್ಧನ್, ಅಂಬರೀಷ್, ಕಮಲ್ ಹಾಸನ್, ಚಿರಂಜೀವಿ, ಕಾಂತಾರಾವ್, ಮೋಹನ್ ಬಾಬು, ಮಲಯಾಳಂ ಸೂಪರ್ ಸ್ಟಾರ್ ಪ್ರೇಮ್ ನಜೀರ್, ಸುಕುಮಾರನ್, ಅನಂತ್ ನಾಗ್, ಶಂಕರ್ ನಾಗ್, ರವಿಚಂದ್ರನ್, ಕೃಷ್ಣಂರಾಜು, ಚಂದ್ರಮೋಹನ್, ರಾಜೇಂದ್ರಪ್ರಸಾದ್, ಉದಯ್ ಕುಮಾರ್, ಕಲ್ಯಾಣ್ ಕುಮಾರ್, ರಾಜೇಶ್, ಮುರಳಿಮೋಹನ್, ವೆಂಕಟೇಶ್, ರಾಜಶೇಖರ್, ಶ್ರೀನಾಥ್, ಟೈಗರ್ ಪ್ರಭಾಕರ್ ಹೀಗೆ ಮೊದಲಾದ ಮೇರು ನಟರ ಜೊತೆ ನಟಿಸಿ ಸೈ ಅನಿಸಿಕೊಂಡಿದ್ದಾರೆ.ಅಷ್ಟೇ ಅಲ್ಲದೆ ಸಾವಿತ್ರಿ, ಬಿ.ಸರೋಜಾದೇವಿ, ಪಂಡರೀಬಾಯಿ, ಎಂ.ವಿ.ರಾಜಮ್ಮ, ಲೀಲಾವತಿ, ಜಮುನ, ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಕಾಂಚನ, ಭಾರತಿ (ನಟಿ), ಶಾರದ, ಜಯಭಾರತಿ, ಚಂದ್ರಕಲಾ, ಸೂರ್ಯಕಾತಂ, ಅಂಜಲಿದೇವಿ, ಜಯಂತಿ (ನಟಿ) ಹೀಗೆ ಹಿರಿಯಕಲಾವಿದರಲ್ಲದೇ ತಮ್ಮ ಸಮಕಾಲಿನವರಾದ ಜಯಪ್ರಧಾ, ಜಯಸುಧಾ, ಶ್ರೀದೇವಿ, ಜಯಮಾಲ, ಆರತಿ, ಮಂಜುಳಾ, ಪದ್ಮಪ್ರಿಯ, ಲಕ್ಷ್ಮೀ ಮೊದಲಾದವರ ಜೊತೆ ತೆರೆಹಂಚಿಕೊಂಡಿದ್ದಾರೆ ಹೇಮಾ ಚೌಧರಿ...ವಿಜಯವಾಣಿ (ಚಲನಚಿತ್ರ) (1976), ಶುಭಾಶಯ (ಚಲನಚಿತ್ರ) (1977), ಗಾಳಿಮಾತು(1981) ಮತ್ತು ವೀರಪ್ಪನಾಯ್ಕ(1997) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಜನಮನ್ನಣೆ ಗಳಿಸಿದ "ಅಭಿನೇತ್ರಿ". ಮನ್ಮಥ ಲೀಲೈ(1976) ಹೇಮಾ ಅವರ ಗಮನಾರ್ಹ ತಮಿಳು ಚಿತ್ರ. ಸುವರ್ಣ ವಾಹಿನಿಯ ಅಮೃತವರ್ಷಿಣಿ ಎಂಬ ಟಿ.ಆರ್.ಪಿ ಯಲ್ಲಿ ಇತಿಹಾಸ ಸೃಷ್ಟಿಸಿದ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿಯೂ ಜನಪ್ರಿಯರಾಗಿದ್ದಾರೆ.[][]

ಹೇಮಾ ಚೌಧರಿ
Born
ದುರ್ಗ ಪ್ರಭಾ

12th October 1955
ಹೈದರಾಬಾದ್, ಆಂಧ್ರಪ್ರದೇಶ (ಇಂದಿನ ತೆಲಂಗಾಣ), ಭಾರತ
Occupation(s)ನಟಿ, ಕೂಚಿಪುಡಿ ಕಲಾವಿದೆ
Years active1975-ಪ್ರಸ್ತುತ

ಆರಂಭಿಕ ಜೀವನ

ಬದಲಾಯಿಸಿ

ಹೇಮಾ ಚೌಧರಿ ತೆಲುಗಿನ ಜನಪ್ರಿಯ ನಟಿ ಮತ್ತು ಕಂಠದಾನ ಕಲಾವಿದೆ ಬೃಂದಾವನ್ ಚೌಧರಿಯವರ ಮಗಳು. ಚಿಕ್ಕಂದಿನಲ್ಲಿ ಎಂ.ಜಿ.ಆರ್, ಎನ್.ಟಿ.ಆರ್. ಮತ್ತು ಶಿವಾಜಿ ಗಣೇಶನ್, ಎ.ಎನ್.ಆರ್, ಎಸ್.ವಿ.ಆರ್ ರಂತಹ ಮೇರು ನಟರ ಚಿತ್ರಗಳನ್ನು ನೋಡುತ್ತಿದ್ದ ಹೇಮಾರಿಗೆ ಮನೆಯಲ್ಲಿ ಸಿನೆಮಾ ವಾತಾವರಣವಿದ್ದುದರಿಂದ ಸಹಜವಾಗಿ ಅಭಿನಯದೆಡೆಗೆ ಆಸಕ್ತಿ ಬೆಳೆಯಿತು. ಚೆನ್ನೈ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಅಭಿನಯದ ತರಬೇತಿ ಪಡೆದ ಹೇಮಾ ನಂತರದಲ್ಲಿ ಚಿತ್ರರಂಗ ಪ್ರವೇಶಿಸಿದರು.[] ಖ್ಯಾತನಾಮ ಕಲಾವಿದರಾದ ರಜನೀಕಾಂತ್ ಮತ್ತು ಅಶೋಕ್ ಅವರು ಚೆನ್ನೈ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಹೇಮಾ ಚೌಧರಿ ಅವರ ಸಹಪಾಠಿಗಳಾಗಿದ್ದರು.

ವೃತ್ತಿ ಜೀವನ

ಬದಲಾಯಿಸಿ

ನಟಿಯಾಗಿ

ಬದಲಾಯಿಸಿ
ಬೆಳ್ಳಿ ತೆರೆ
ಬದಲಾಯಿಸಿ

ಈ ಕಾಲಂ ದಂಪತುಲು ಎಂಬ ತೆಲುಗು ಚಿತ್ರದಿಂದ ಇವರು ಸಿನಿಮಾರಂಗಕ್ಕೆ ಪರಿಚಿತರಾದರು. ಪೆಳ್ಳಿ ಕಾನಿ ಪಿಲ್ಲಲು(೧೯೭೬) ಹೇಮಾ ನಾಯಕಿಯಾಗಿ ಅಭಿನಯಿಸಿದ ಮೊದಲ ಚಿತ್ರ. ತೆಲುಗಿನ ಜನಪ್ರಿಯ ನಟ ಶ್ರೀಧರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸಿ ಚಿತ್ರರಸಿಕರ ಗಮನ ಸೆಳೆದ ಹೇಮಾ ಮಿನುಗು ತಾರೆ ಕಲ್ಪನಾ ಅಭಿನಯದ ವಿಜಯವಾಣಿ(೧೯೭೬) ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ವಿಭಿನ್ನ ವೈಚಾರಿಕ ನೆಲೆಗಟ್ಟಿನಲ್ಲಿ ತಮ್ಮ ಪತಿಯೊಂದಿಗೆ ಸುಖಿ ಸಂಸಾರ ನಡೆಸುತ್ತಿರುವ ಸಹೋದರಿಯರಿಬ್ಬರು ಪರಸ್ಪರರ ಜೀವನ ಶೈಲಿಯೆಡೆಗೆ ಆಕರ್ಷಿತರಾಗಿ, ಅದಕ್ಕಾಗಿ ಹಂಬಲಿಸಿ ಕೊನೆಗೆ ದುಃಖ ಅನುಭವಿಸುವ ಕಥಾನಕವಿದ್ದ ಈ ಚಿತ್ರದಲ್ಲಿ ಕಲ್ಪನಾರಂತಹ ಖ್ಯಾತನಾಮ ನಟಿಯೆದುರು ಹೇಮಾ ಶ್ಲಾಘನೀಯ ಅಭಿನಯ ನೀಡಿದ್ದಾರೆ. ತುಲಾವರ್ಷಂ(೧೯೭೬) ಎಂಬ ಮಲಯಾಳಂ ಚಿತ್ರದಲ್ಲಿ ಮೇರುನಟ ಪ್ರೇಮ್ ನಜೀರ್ ಅವರೊಂದಿಗೆ ನಾಯಕಿಯಾಗಿ ಅಭಿನಯಿಸುವ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದ ಹೇಮಾ ಸುಂದರಿಮಾರುದೆ ಸ್ವಪ್ನಂಗಳ್(೧೯೭೮), ತಾರೂ ಒರು ಜನ್ಮಂ ಕೂಡಿ(೧೯೭೮) ಮತ್ತು ಕೊಚು ಕೊಚು ತೊಟ್ಟುಕಳ್(೧೯೮೦) ಮುಂತಾದ ಬೆರಳೆಣಿಕೆಯ ಮಲಯಾಳಂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಅಭಿನಯದ ಕೆಲವು ಪ್ರಮುಖ ತೆಲುಗು ಚಿತ್ರಗಳೆಂದರೆ ಕೊತ್ತ ಅಲ್ಲುಡು(೧೯೭೯) ನಿಜಂ(೧೯೮೦), ಮೇಸ್ತ್ರಿ, ತಾಂಡ್ರಪಾಪಾರಾಯುಡು, ಸುಂದರಕಾಂಡ, ಪ್ರೇಮವಿಜೇತಾ, ಲೇಡಿ ಇಸ್ಪೆಕ್ಟರ್, ಗೋರಿಂಟಾಕು, ಪುಟ್ಟಿಂಟಿಕಿ ರಾ ಚೆಲ್ಲಿ ಮೊದಲಾದವು.[]

ಕೆಲವು ತಮಿಳು ಚಿತ್ರಗಳಲ್ಲಿ ಅಭಿನಯಿಸಿರುವ ಹೇಮಾ ಅವರ ಪ್ರಮುಖ ಚಿತ್ರವೆಂದರೆ ಪ್ರಖ್ಯಾತ ನಟ ಕಮಲ್ ಹಾಸನ್ ಅವರೊಂದಿಗೆ ಅಭಿನಯಿಸಿದ ಕೆ.ಬಾಲಚಂದರ್ ನಿರ್ದೇಶನದ ಮನ್ಮಥ ಲೀಲೈ(೧೯೭೬). ನಾನ್ ಅವನ್ ಇಲೈ(2008),ಸ್ಟಾರ್ (2003),ತೂಟಾ (2009) ಹೀಗೆ ಮೊದಲಾದ ತಮಿಳುಚಿತ್ರಗಳಲ್ಲೂ ನಟನಸಿದ್ದಾರೆ.

ಶ್ರೀನಾಥ್ ಅವರ ಜೊತೆಗೆ ಶುಭಾಶಯ(೧೯೭೭) ಮತ್ತು ಅಶೋಕ್ ಅವರೊಂದಿಗೆ ವರದಕ್ಷಿಣೆ (ಚಲನಚಿತ್ರ)(೧೯೮೦) ಚಿತ್ರಗಳಲ್ಲಿ ನಾಯಕಿಯಾಗಿ ಗಮನಾರ್ಹ ಅಭಿನಯ ನೀಡಿದ ಹೇಮಾ ಸಿದ್ಧಲಿಂಗಯ್ಯ ಅವರ ಹಾಸ್ಯಮಯ ಚಿತ್ರ ನಾರದ ವಿಜಯ(೧೯೮೦)ದಲ್ಲಿ ಅನಂತ್ ನಾಗ್ ಅವರೊಂದಿಗೆ ಹಾಸ್ಯ ಪಾತ್ರದಲ್ಲಿ ಮಿಂಚಿದ್ದಾರೆ. ದೀಪ(೧೯೭೭) ಮತ್ತು ದೇವರ ದುಡ್ಡು(೧೯೭೭) ಚಿತ್ರಗಳಲ್ಲಿ ಋಣಾತ್ಮಕ ಛಾಯೆಯ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ ಹೇಮಾ ಅವರ ವೃತ್ತಿ ಜೀವನಕ್ಕೆ ಮಹತ್ವದ ತಿರುವು ನೀಡಿದ ಚಿತ್ರ ಗಾಳಿಮಾತು(೧೯೮೧). ಗೆಳತಿ ಮದುವೆಯಾಗಿ ಸುಖ ಸಂಸಾರವನ್ನು ನಡೆಸುವುದನ್ನು ಸಹಿಸದೆ ಆಕೆ ಮದುವೆಯಾಗುವುದನ್ನು ತಪ್ಪಿಸಲು ಆಕೆಗೆ ಅನಾಮಿಕ ಪತ್ರಗಳನ್ನು ಕಳುಹಿಸಿ ಮಾನಸಿಕವಾಗಿ ಹಿಂಸಿಸಿ ಕೊನೆಗೆ ಆಕೆಯ ಜೀವವನ್ನೇ ಬಲಿ ತೆಗೆದುಕೊಳ್ಳುವ ಋಣಾತ್ಮಕ ಪಾತ್ರದ ಅಭಿನಯಕ್ಕೆ ಚಿತ್ರರಸಿಕರ ಸರ್ವಾನುಮತದ ಪ್ರಶಂಸೆಗೆ ಪಾತ್ರರಾಗಿದ್ದಾರೆ.[] ೮೦ರ ದಶಕದಲ್ಲಿ ತೆರೆಗೆ ಬಂದ ಯಾರಿವನು(೧೯೮೪), ನೀ ಬರೆದ ಕಾದಂಬರಿ(೧೯೮೫), ಕೃಷ್ಣ ರುಕ್ಮಿಣಿ(೧೯೮೮) ಮತ್ತು ಸಂಸಾರ ನೌಕೆ(೧೯೮೯)ಯಂತಹ ಯಶಸ್ವಿ ಚಿತ್ರಗಳೂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಖಳ ನಟಿಯಾಗಿ ಅಭಿನಯಿಸಿ ಮನೆಮಾತಾಗಿರುವ ಹೇಮಾ ಜಿಮ್ಮಿಗಲ್ಲು(೧೯೮೨) ಮತ್ತು ಗೂಂಡಾಗುರು(೧೯೮೫) ಚಿತ್ರಗಳಲ್ಲಿ ಮೃಧು ಸ್ವಭಾವದ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ. ವಿಷ್ಣುವರ್ಧನ್ ಅವರು ಶೀರ್ಷಿಕೆ ಪಾತ್ರದಲ್ಲಿ ಅಭಿನಯಿಸಿದ್ದ ವೀರಪ್ಪನಾಯಕ(೧೯೯೭) ಚಿತ್ರದಲ್ಲಿ ವೀರಪ್ಪನಾಯಕನ ತಾಯಿಯಾಗಿ ಅವಿಸ್ಮರಣೀಯ ಅಭಿನಯ ನೀಡಿದ ಹೇಮಾ ನಮ್ಮ ಸಂಸಾರ ಆನಂದ ಸಾಗರ(೨೦೦೧) ಚಿತ್ರದಲ್ಲಿ ಕೂಡು ಕುಟುಂಬದ ಮುಖ್ಯಸ್ಥೆಯಾಗಿ ಅತ್ತ್ಯುತ್ತಮ ಅಭಿನಯ ನೀಡಿದ್ದಾರೆ.

ತವರಿಗೆ ಬಾ ತಂಗಿ(೨೦೦೨), ಅಣ್ಣ ತಂಗಿ(೨೦೦೫) ಮತ್ತು ದೇವರು ಕೊಟ್ಟ ತಂಗಿ(೨೦೦೯) ಚಿತ್ರಗಳಲ್ಲಿ ಕೆಟ್ಟ ಅತ್ತೆಯಾಗಿ ಇವರ ಅಭಿನಯ ಪ್ರಶಂಸನೀಯ.

ದಶಕಗಳಿಂದ ತಮ್ಮ ಅದ್ಭುತ ನಟನಾ ಕೌಶಲ್ಯದಿಂದ ಚಿತ್ರರಸಿಕರ ಮನರಂಜಿಸಿರುವ ಹೇಮಾ ಪ್ರೇಮ್ ನಜೀರ್, ಕಮಲ್ ಹಾಸನ್, ಶ್ರೀನಾಥ್, ಅಶೋಕ್, ಎಂ.ಜಿ.ಸೋಮನ್, ಸುಕುಮಾರನ್, ರಾಜೇಂದ್ರ ಪ್ರಸಾದ್ ಮತ್ತು ರವಿಕುಮಾರ್ರಂತಹ ದಕ್ಷಿಣ ಭಾರತದ ಹೆಸರಾಂತ ನಟರೊಂದಿಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಎಂ.ಆರ್.ವಿಠಲ್, ಕೆ.ಎಸ್.ಎಲ್.ಸ್ವಾಮಿ, ಸಿದ್ಧಲಿಂಗಯ್ಯ, ಕೆ. ಬಾಲಚಂದರ್, ದೊರೈ-ಭಗವಾನ್, ಡಿ. ಯೋಗಾನಂದ್, ಎ. ಭೀಮ್ ಸಿಂಗ್, ಪಿ.ಸಾಂಬಶಿವರಾವ್, ಕೆ.ರಾಘವೇಂದ್ರ ರಾವ್, ಪುಟ್ಟಣ್ಣ ಕಣಗಾಲ್,ಮಲಯಾಳಂನ ಶಂಕರನ್, "ಕೋಡಿ ರಾಮಕೃಷ್ಣ, ಸಂಗೀತಂ ಶ್ರೀನಿವಾಸ್ ರಾವ್, ವಿಜಯ್ ಮತ್ತು ದಾಸರಿ ನಾರಾಯಣ ರಾವ್ರಂತಹ ಮೇರು ನಿರ್ದೇಶಕರೊಂದಿಗೆ ಕೆಲಸ ಮಾಡಿದ ಹಿರಿಮೆ ಇವರದ್ದು.[]

ಕಿರುತೆರೆ
ಬದಲಾಯಿಸಿ

ಸುವರ್ಣ ವಾಹಿನಿಯ ಜನಪ್ರಿಯ ಧಾರವಾಹಿ ಅಮೃತವರ್ಷಿಣಿಯಲ್ಲಿ ನಿಷ್ಠುರವಾದಿ ಅತ್ತೆ ಶಕುಂತಲಾ ದೇವಿಯಾಗಿ ಅಮೋಘ ಅಭಿನಯ ನೀಡಿ ಮನೆಮಾತಾಗಿದ್ದಾರೆ.[]

ಚಲನಚಿತ್ರಕ್ಕೆ ಸಂಬಂಧಿಸಿದ ವಿವಿಧ ಸಂಸ್ಥೆಗಳ ಸದಸ್ಯೆಯಾಗಿ

ಬದಲಾಯಿಸಿ

ಹೇಮಾ ಚೌಧರಿ ಚಲನಚಿತ್ರಕ್ಕೆ ಸಂಬಂಧಿಸಿದ ಅನೇಕ ಸಂಸ್ಥೆಗಳಲ್ಲಿ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿ ಮೂರು ಬಾರಿ ಸೇವೆ ಸಲ್ಲಿಸಿರುವ ಹೇಮಾ ಸೆನ್ಸಾರ್ ಮಂಡಳಿಯ ಸದಸ್ಯೆಯಾಗಿಯೂ ಮೂರು ಬಾರಿ ಕೆಲಸ ನಿರ್ವಹಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯೆಯಾಗಿಯೂ ಸೇವೆ ಸಲ್ಲಿಸಿದ್ದಾರೆ.[]

ಕೂಚಿಪುಡಿ ಕಲಾವಿದೆಯಾಗಿ

ಬದಲಾಯಿಸಿ

ಹೆಸರಾಂತ ಕೂಚಿಪುಡಿ ನೃತ್ಯ ಕಲಾವಿದರೂ ಆಗಿರುವ ಹೇಮಾ ಚೌಧರಿ ಪದ್ಮಭೂಷಣ ವೆಂಕಟಸತ್ಯಂ ಅವರೊಡನೆ ವಿಶ್ವದಾದ್ಯಂತ ಸುಮಾರು 700ಕ್ಕೂ ಹೆಚ್ಚು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.[]

ಪ್ರಶಸ್ತಿ/ಪುರಸ್ಕಾರ

ಬದಲಾಯಿಸಿ
  • ರಾಜ್ಯೋತ್ಸವ ಪ್ರಶಸ್ತಿ 2024
  • ಪನೋರಮಾ ಪ್ರಶಸ್ತಿ
  • ಸುವರ್ಣ ಪರಿವಾರದ ಜನ ಮೆಚ್ಚಿದ ತಾರೆ ಪ್ರಶಸ್ತಿ
  • ಸುವರ್ಣ ರತ್ನ ಪಶಸ್ತಿ
  • 82ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ
  • ದಕ್ಷಿಣ ಭಾರತದ ಚಿತ್ರರಂಗದ ಸೇವೆಗಾಗಿ ತೆಲುಗಿನ ಸಂತೋಷಂ ಜೀವಮಾನ ಸಾಧನೆ ಪ್ರಶಸ್ತಿ
  • ಸ್ಟಾರ್ ಸುವರ್ಣದ ಜೀವಮಾನ ಸಾಧನೆ ಪ್ರಶಸ್ತಿ
  • ಸ್ಟಾರ್ ಸುವರ್ಣದ ಅಮೋಘ ರತ್ನ ಪ್ರಶಸ್ತಿ
  • ಇನೋವೇಟಿವ್ ಫಿಲ್ಮ್ ಪ್ರಶಸ್ತಿ
  • ಸುವರ್ಣ ಸಾಧಕಿ ಪ್ರಶಸ್ತಿ.[]

ಕಿರುತೆರೆ

ಬದಲಾಯಿಸಿ
  • ಅಮೃತವರ್ಷಿಣಿ (2012-2017)
  • ನಾಯಕಿ (2019-2020)

ಹೇಮಾ ಚೌಧರಿ ಅಭಿನಯದ ಕೆಲವು ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
1975 ಈ ಕಾಲಂ ದಂಪತುಲು ತೆಲುಗು ಡಿ.ಯೋಗಾನಂದ್ ಜಮುನಾ, ಕೈಕಾಲ ಸತ್ಯನಾರಾಯಣ, ಹೇಮಾ ಚೌಧರಿ.
1976 ತುಲಾವರ್ಷಂ ಮಲಯಾಳಂ ಎನ್.ಶಂಕರನ್ ನಾಯರ್ ಪ್ರೇಮ್ ನಜೀರ್, ಹೇಮಾ ಚೌಧರಿ

, ಶ್ರೀದೇವಿ.

1976 ಪೆಳ್ಳಿ ಕಾನಿ ಪಿಲ್ಲಲು ತೆಲುಗು ಆನಂದ್ ಮೋಹನ್ ಶ್ರೀಧರ್, ಹೇಮಾ ಚೌಧರಿ.
1976 ಮನ್ಮಥ ಲೀಲೈ ತಮಿಳು ಕೆ.ಬಾಲಚಂದರ್ ಕಮಲ್ ಹಾಸನ್, ಜಯಪ್ರಧಾ, ಹೇಮಾ ಚೌಧರಿ.
1976 ವಿಜಯವಾಣಿ ಕನ್ನಡ ಎನ್.ವೆಂಕಟೇಶ್ ಕಲ್ಪನಾ, ಶ್ರೀನಾಥ್, ಅಶೋಕ್, ಹೇಮಾ ಚೌಧರಿ.
1977 ದೀಪ ಕನ್ನಡ ಸಿ.ವಿ.ರಾಜೇಂದ್ರನ್ ಮಂಜುಳಾ, ಹೇಮಾ ಚೌಧರಿ, ಅಶೋಕ್, ಉಪಾಸನೆ ಸೀತಾರಾಮ್.
1977 ದೇವರ ದುಡ್ಡು ಕನ್ನಡ ಕೆ.ಎಸ್.ಎಲ್.ಸ್ವಾಮಿ ರಾಜೇಶ್, ಜಯಂತಿ, ಶ್ರೀನಾಥ್, ಚಂದ್ರಶೇಖರ್, ಹೇಮಾ ಚೌಧರಿ.
1977 ಶುಭಾಶಯ ಕನ್ನಡ ತ್ಯಾಗರಾಜನ್ ಜಯಂತಿ, ಕಲ್ಯಾಣ್ ಕುಮಾರ್, ಶ್ರೀನಾಥ್, ಹೇಮಾ ಚೌಧರಿ.
1978 ಅನುಬಂಧ ಕನ್ನಡ ವಿ.ಎಲ್.ಆಚಾರ್ಯ ಸಾಯಿ ಕುಮಾರ್, , ಹೇಮಾ ಚೌಧರಿ.
1978 ತಾರೂ ಒರು ಜನ್ಮಂ ಕೂಡಿ ಮಲಯಾಳಂ ಎನ್.ಶಂಕರನ್ ನಾಯರ್ ಪ್ರೇಮ್ ನಜೀರ್, ಹೇಮಾ ಚೌಧರಿ.
1978 ಶ್ರೀದೇವಿ ಕನ್ನಡ ವಿ.ಎಲ್.ಆಚಾರ್ಯ ಜಯಂತಿ, ಹೇಮಾ ಚೌಧರಿ, ಶಿವರಾಂ.
1978 ಸುಂದರಿಮಾರುದೆ ಸ್ವಪ್ನಂಗಳ್ ಮಲಯಾಳಂ ಎನ್.ಶಂಕರನ್ ನಾಯರ್ ಪ್ರೇಮ್ ನಜೀರ್, ಶಾರದಾ, ಜಯಭಾರತಿ, ಹೇಮಾ ಚೌಧರಿ.
1978 ಕೊತ್ತ ಅಲ್ಲುಡು ತೆಲುಗು ಸಾಂಬಶಿವ ರಾವ್ ಕ್ರಿಷ್ಣ, ಜಯಪ್ರಧಾ, ಚಿರಂಜೀವಿ, ಹೇಮಾ ಚೌಧರಿ, ಮೋಹನ್ ಬಾಬು
1980 ನಿಜಂ ತೆಲುಗು ಕೆ.ದೇವದಾಸ್ ರಾಜೇಂದ್ರ ಪ್ರಸಾದ್, ಹೇಮಾ ಚೌಧರಿ.
1980 ಕೊಚು ಕೊಚು ತೊಟ್ಟುಕಳ್ ಮಲಯಾಳಂ ಮೋಹನ್ ಸುಕುಮಾರನ್, ಹೇಮಾ ಚೌಧರಿ, ಶುಭಾ.
1980 ವರದಕ್ಷಿಣೆ ಕನ್ನಡ ಎಂ.ಆರ್.ವಿಠಲ್ ಅಶೋಕ್, ಹೇಮಾ ಚೌಧರಿ, ಪ್ರಮೀಳಾ ಜೋಷಾಯ್

[] []

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "HEMA CHAUDHARY PROFILE". ಚಿತ್ರಲೋಕ.ಕಾಮ್. Archived from the original on 2016-05-26. Retrieved 2016-07-20. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. "ಹೇಮಾ ಚೌಧರಿ". ಚಿಲೋಕ.ಕಾಮ್.
  3. ೩.೦ ೩.೧ "ಈ ವಾರಾಂತ್ಯಕ್ಕೆ ಸುವರ್ಣ ಪರಿವಾರ ಅವಾರ್ಡ್ಸ್". ವಿಜಯವಾಣಿ.
  4. "[[ಹೇಮಾ ಚೌಧರಿ]] ಅಭಿನಯದ ಕನ್ನಡ ಚಲನಚಿತ್ರಗಳ ಪಟ್ಟಿ". ಚಿಲೋಕ.ಕಾಮ್. {{cite web}}: URL–wikilink conflict (help)
  5. "ಹೇಮಾ ಚೌಧರಿ ಅಭಿನಯದ ಮಲಯಾಳಂ ಚಲನಚಿತ್ರಗಳ ಪಟ್ಟಿ".