ಜಗ್ಗೇಶ್

ಕನ್ನಡ ಚಿತ್ರನಟ, ರಾಜಕಾರಣಿ


ಜಗ್ಗೇಶ್' (ಮಾರ್ಚ್ ೧೭, ೧೯೬೩) ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾದವರು. ಇವರ ಸ್ವಂತ ಸ್ಥಳ, ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಎಂಬ ಊರು.

ಜಗ್ಗೇಶ್
Jaggesh.jpg
ಜಗ್ಗೇಶ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
(1963-03-17) ಮಾರ್ಚ್ ೧೭, ೧೯೬೩ (age ೫೭)
ಬೇರೆ ಹೆಸರುಗಳು ನವರಸ ನಾಯಕ ಮಾತಿನ ಮಲ್ಲ
ವೃತ್ತಿ ನಟ

ಚಲನಚಿತ್ರ ಜೀವನಸಂಪಾದಿಸಿ

ಜೀವನದಲ್ಲಿ ಕಷ್ಟ ಪಟ್ಟು ಮೇಲೆ ಬಂದ ಜಗ್ಗೇಶ್ ಮೊದ ಮೊದಲಿಗೆ ಸಣ್ಣ ಪುಟ್ಟ ಹಾಸ್ಯ, ಖಳ ಪಾತ್ರಧಾರಿಯಾಗಿ ನಟಿಸಿ ಮುಂದೆ ಪ್ರಸಿದ್ಧ ನಟರಾಗಿ ಬೆಳೆದಿದ್ದಾರೆ.

ಇವರ ಮೊದಲನೆಯ ಚಿತ್ರ - ಇಬ್ಬನಿ ಕರಗಿತು. ನೂರನೆಯ ಚಿತ್ರ ಮಠ. ಮೇಕಪ್ ಎಂಬ ಚಿತ್ರ ನಿರ್ಮಿಸಿ,ನಿರ್ಮಾಪಕರೂ ಆಗಿದ್ದಾರೆ. ತಮ್ಮ ಕೆಲವು ಚಿತ್ರಗಳಲ್ಲಿ ತಾವೇ ಹಾಡಿದ್ದಾರೆ.

ನಾಯಕ ನಟನಾಗಿ ಅಭಿನಯಿಸಿದ ಮೊದಲ ಚಿತ್ರ ತರ್ಲೆ ನನ್ ಮಗ. ಈ ಚಿತ್ರವನ್ನು ಉಪೇಂದ್ರ ನಿರ್ದೇಶಿಸಿದ್ದಾರೆ.

ಹಾಸ್ಯ ಪ್ರಧಾನ ಪಾತ್ರಗಳಿಗೆ ಹೆಸರಾಗಿರುವ ಜಗ್ಗೇಶ್ ಅವರು,ತಮ್ಮ ವಿಶಿಷ್ಟ ಹಾವಭಾವದಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಚಿತ್ರರಂಗದಲ್ಲಿ ಇವರು ನವರಸ ನಾಯಕ ನೆಂದು ಪ್ರಸಿದ್ಧಿ ಪಡೆದಿದ್ದಾರೆ.

ರಾಜಕೀಯ ರಂಗದಲ್ಲಿಸಂಪಾದಿಸಿ

ಜಗ್ಗೇಶ್ ತುರುವೇಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು. ಫೆ.೩, ೨೦೧೦ರಂದು ಕರ್ನಾಟಕ ವಿಧಾನ ಪರಿಷತ್ತಿಗೆ ಜಗ್ಗೇಶ್ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.[೧] He served as Member of Legislative Council[೨][೩]

ಜಗ್ಗೇಶ್ ಅಭಿನಯದ ಚಿತ್ರಗಳುಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ

  1. "Jaggesh quits Congress for BJP". The Hindu. 11 July 2008. Retrieved 8 December 2010.
  2. "Prof. PV Krishna Bhat and Jaggesh nominated as MLC | BJP Karnataka". bjpkarnataka.org.
  3. "Deccan Herald - JAGGESH IS KSRTC VICE-CHAIRMAN". archive.deccanherald.com.
  4. "Jaggesh Actor , Director , Writer". www.imdb.com ,6 July 2017.
"https://kn.wikipedia.org/w/index.php?title=ಜಗ್ಗೇಶ್&oldid=999717" ಇಂದ ಪಡೆಯಲ್ಪಟ್ಟಿದೆ