ಅನು ಪ್ರಭಾಕರ್ ಪ್ರಮುಖವಾಗಿ ಕನ್ನಡ ಚಲನಚಿತ್ರಗಳಲ್ಲಿ ನಟಿಸಿರುವ ನಟಿ.

ಅನು ಪ್ರಭಾಕರ್
ಜನನ
ಅನು ಪ್ರಭಾಕರ್

(1980-11-09) ೯ ನವೆಂಬರ್ ೧೯೮೦ (ವಯಸ್ಸು ೪೩)
ಬೆಂಗಳೂರು, ಕರ್ನಾಟಕ, ಭಾರತ
ವೃತ್ತಿನಟಿ
ಸಂಗಾತಿ(s)ಕೃಷ್ಣಕುಮಾರ್ (ವಿವಾಹ 2002)
ರಘು ಮುಖರ್ಜಿ (ವಿವಾಹ 2016)

ಆರಂಭಿಕ ಜೀವನ

ಬದಲಾಯಿಸಿ

ಅನು ಪ್ರಭಾಕರ್ ಅವರು ನವೆಂಬರ್ ೯,೧೯೮೦ರಂದು ಬೆಂಗಳೂರಿನಲ್ಲಿ ಜನಿಸಿದರು.ಇವರ ತಂದೆ ಎಂ.ವಿ.ಪ್ರಭಾಕರ್ ಅವರು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ನಲ್ಲಿ ಉದ್ಯೋಗಿಯಾಗಿದ್ದಾರೆ.ಇವರ ತಾಯಿ ಗಾಯತ್ರಿ ಅವರು ಡಬ್ಬಿಂಗ್ ಕಲಾವಿದೆ ಮತ್ತು ನಟಿಯಾಗಿದ್ದಾರೆ.ಇವರ ಸಹೋದರನ ಹೆಸರು ವಿಕ್ರಮ್.ಅನು ಅವರು ಬೆಂಗಳೂರಿನ ಉಪನಗರವಾದ ಮಲ್ಲೇಶ್ವರಂನಲ್ಲಿ ಬೆಳೆದರು.ಅಲ್ಲಿ ಅವರು ನಿರ್ಮಲಾ ರಾಣಿ ಹೈಸ್ಕೂಲ್ನಲ್ಲಿ ಶಿಕ್ಷಣ ಪಡೆದರು.ಆ ಸಮಯದಲ್ಲಿ ಅವರು ಕನ್ನಡ ಚಲನಚಿತ್ರಗಳಾದ ಚಪಲ ಚೆನ್ನಿಗರಾಯ(೧೯೯೦),ಶಾಂತಿ ಕ್ರಾಂತಿ(೧೯೯೧) ಮತ್ತು ಇಂಗ್ಲಿಷ್ ಚಲನಚಿತ್ರ ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್(೧೯೯೦)ಎಂಬ ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು.ನಂತರ ಇವರು ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಮುಂದುವರೆಸಿದರು.[೧]

ವೃತ್ತಿ ಜೀವನ

ಬದಲಾಯಿಸಿ

ಅನು ಅವರು ೧೯೯೯ರಲ್ಲಿ ಹೃದಯ ಹೃದಯಾ ಎಂಬ ಚಲನಚಿತ್ರದಲ್ಲಿ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದರು.ಇವರು ಸೂರಪ್ಪ,ಜಮೀನ್ದಾರ್ರು,ಹೃದಯವಂತ,ಸಾಹುಕಾರ,ವರ್ಷ ಎಂಬ ಚಲನಚಿತ್ರಗಳಲ್ಲಿ ವಿಷ್ಣುವರ್ಧನ್ ಅವರೊದಿಗೆ ಅಭಿನಯಿಸಿದರು.ಇವರು ಕೆಲವು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ನಂತರ ೧೨ನೆಯ ಶತಮಾನದ ಕನ್ನಡ ಕವಿ ಅಕ್ಕಮಹಾದೇವಿಯ ಜೀವನವನ್ನು ಆಧರಿಸಿದ ಚಲನಚಿತ್ರದಲ್ಲಿ ಅನು ಅವರು ದ್ವಿಪಾತ್ರ ಪಾತ್ರವನ್ನು ವಹಿಸುತ್ತಾರೆ.[೨]

ವೈಯಕ್ತಿಕ ಜೀವನ

ಬದಲಾಯಿಸಿ

ಅನು ಅವರು ಮಾರ್ಚ್ ೨೦೦೨ರಲ್ಲಿ ನಟಿ ಜಯಂತಿ ಅವರ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾದರು.ಇವರ ನಡುವೆ ಭಿನ್ನಾಭಿಪ್ರಾಯಗಳನ್ನು ಉದಾಹರಿಸಿ, ಅನು ಅವರು ಜನವರಿ ೨೦೧೪ರಲ್ಲಿ ವಿಚ್ಛೇದನ ಪಡೆದರು.ನಂತರ ಏಪ್ರಿಲ್ ೨೦೧೬ರಲ್ಲಿ ನಟ ರಘು ಮುಖರ್ಜಿ ಅವರನ್ನು ವಿವಾಹವಾದರು.ಅವರಿಗೆ ನಂದನ ಎಂಬ ಪುತ್ರಿ ಇದ್ದಾರೆ.[೩]

ಪ್ರಶಸ್ತಿಗಳು

ಬದಲಾಯಿಸಿ

ಅನು ಅವರ ವಿವಿಧ ಚಿತ್ರಗಳ ಅಭಿನಯಕ್ಕಾಗಿ ಬೆಂಗಳೂರಿನ ಕೊಳದ ಮಠವು 'ಅಭಿನಯ ಸರಸ್ವತಿ' ಎಂಬ ಪ್ರಶಸ್ತಿನ್ನು ನೀಡಿ ಗೌರವಿಸಲಾಯಿತು.'ಕನ್ನಡ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ೨೦೦೦-೦೧' ಮತ್ತು 'ಸಿನೆಮಾ ಎಕ್ಸ್ ಪ್ರೆಸ್ ಅತ್ಯುತ್ತಮ ನಟಿ' ಮುಂತಾದ ಪ್ರಶಸ್ತಿಗಳನ್ನು ಇವರು ಗೆದ್ದಿದ್ದಾರೆ.[೪]

ಚಲನಚಿತ್ರಗಳ ಪಟ್ಟಿ

ಬದಲಾಯಿಸಿ

ಚಲನಚಿತ್ರಗಳು

ಬದಲಾಯಿಸಿ
Year Film Role Language Notes
೧೯೯೦ ಚಪಲ ಚೆನ್ನಿಗರಾಯ ಕನ್ನಡ
೧೯೯೦ ಮಿಸ್ಟರೀಸ್ ಆಫ್ ದಿ ಡಾರ್ಕ್ ಜಂಗಲ್ ಇಂಗ್ಲೀಷ್
೧೯೯೦ ಸ್ವರ್ಣ ಸಂಸಾರ ಕನ್ನಡ
೧೯೯೧ ಶಾಂತಿ ಕ್ರಾಂತಿ ಕನ್ನಡ
೧೯೯೯ ಹೃದಯ ಹೃದಯಾ ಕನ್ನಡ
೧೯೯೯ ಸ್ನೇಹಲೋಕ ಕನ್ನಡ
೨೦೦೦ ಹ್ಞೂಂ ಅಂತೀಯಾ ಊಹ್ಞೂಂ ಅಂತೀಯಾ ಕನ್ನಡ
೨೦೦೦ ಸೂರಪ್ಪ ಕನ್ನಡ
೨೦೦೦ ಶ್ರೀರಸ್ತು ಶುಭಮಸ್ತು ಕನ್ನಡ
೨೦೦೦ ಯಾರಿಗೆ ಸಾಲುತ್ತೆ ಸಂಬಳ ಕನ್ನಡ
೨೦೦೧ ಅಂಜಲಿ ಗೀತಾಂಜಲಿ ಕನ್ನಡ
೨೦೦೧ ಶಾಪ ಕಾವೇರಿ ಕನ್ನಡ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ[೫]
೨೦೦೧ ಕನಸುಗಾರ ಕನ್ನಡ
೨೦೦೧ ಮಿಸ್ಟರ್ ಹರಿಶ್ಚಂದ್ರ ಕನ್ನಡ
೨೦೦೧ ಶಿವಪ್ಪನಾಯಕ ಕನ್ನಡ
೨೦೦೧ ವಿಶಾಲಾಕ್ಷಮ್ಮನ ಗಂಡ ಕನ್ನಡ
೨೦೦೨ ಅರ್ಪುತಮ್ ಪ್ರಿಯ ತಮಿಳು
೨೦೦೨ ಜಮೀನ್ದಾರ್ರು ಕನ್ನಡ
೨೦೦೨ ಅಣ್ಣಯ್ಯ ತಮ್ಮಯ್ಯ ಕನ್ನಡ
೨೦೦೨ ತವರಿಗೆ ಬಾ ತಂಗಿ ಗೌರಿ ಕನ್ನಡ
೨೦೦೨ ಓಳು ಸಾರ್ ಬರೀ ಓಳು ಕನ್ನಡ
೨೦೦೩ ಅನ್ನೈ ಕಲಿಗಂಬಲ್ ಈಶ್ವರಿ ತಮಿಳು
೨೦೦೩ ನನ್ ಹೆಂಡ್ತಿ ಮದುವೆ ಕನ್ನಡ
೨೦೦೩ ನೀ ಇಲ್ಲದೆ ನಾ ಇಲ್ಲ ಕಣೇ ಕನ್ನಡ
೨೦೦೩ ಪ್ರೀತಿ ಪ್ರೇಮ ಪ್ರಣಯ ಕನ್ನಡ
೨೦೦೩ ಹೃದಯವಂತ ಗೌತಮಿ ಕನ್ನಡ
೨೦೦೩ ಅರ್ಧಾಂಗಿ ಕನ್ನಡ
೨೦೦೪ ಬಿಸಿ ಬಿಸಿ ರಾಧ ರಮೇಶ್ ಕನ್ನಡ
೨೦೦೪ ಓಕೆ ಸಾರ್ ಓಕೆ ಕನ್ನಡ
೨೦೦೪ ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಚಂದ್ರಮತಿ ಕನ್ನಡ
೨೦೦೪ ಸಾಹುಕಾರ ಕನ್ನಡ
೨೦೦೫ ಕನಕಾಂಬರಿ ಕನ್ನಡ
೨೦೦೫ ವರ್ಷ ಕನ್ನಡ
೨೦೦೫ ಮಜಾ ಸೆಲ್ವಿ ತಮಿಳು
೨೦೦೫ ಉಡೀಸ್ ಸೀತಾ ಕನ್ನಡ
೨೦೦೬ ಮೋಹಿನಿ 9886788888 ಕನ್ನಡ
೨೦೦೬ ಸಾವಿರ ಮೆಟ್ಟಿಲು ಕನ್ನಡ
೨೦೦೭ #73, ಶಾಂತಿ ನಿವಾಸ ನೀತಾ ಕನ್ನಡ
೨೦೦೭ ಶ್ರೀ ದಾನಮ್ಮ ದೇವಿ ಶ್ರೀ ದಾನಮ್ಮ ದೇವಿ ಕನ್ನಡ
೨೦೦೭ ಪ್ರಾರಂಭ ಕನ್ನಡ
೨೦೦೮ ಮುಸ್ಸಂಜೆ ಮಾತು ಶ್ವೇತಾ ಕನ್ನಡ ನಾಮನಿರ್ದೇಶನ, ಅತ್ಯುತ್ತಮ ಪೋಷಕ ನಟಿಗಾಗಿ ಫಿಲ್ಮ್ಫೇರ್ (Kannada)
೨೦೦೮ ನವಶಕ್ತಿ ವೈಭವ ಕನ್ನಡ
೨೦೦೯ ಗುಬ್ಬಚ್ಚಿಗಳು ಗಾಯತ್ರಿ ಕನ್ನಡ
೨೦೦೯ ಭಾಗ್ಯದ ಬಳೆಗಾರ ಕನ್ನಡ
೨೦೧೦ ಬನಶಂಕರಿ ದೇವಿ ಮಹಾತ್ಮೆ ಕನ್ನಡ
೨೦೧೦ ಪರೀಕ್ಷೆ ಬಂಗಾರಿ ಕನ್ನಡ ಅತ್ಯುತ್ತಮ ನಟಿಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ
೨೦೧೧ ಕೋ ಕೋ ಕನ್ನಡ
೨೦೧೨ ಶ್ರೀ ಕ್ಷೇತ್ರ ಆದಿಚುಂಚನಗಿರಿ ಕನ್ನಡ
೨೦೧೨ ಸಂಸಾರದಲ್ಲಿ ಗೋಲ್ಮಾಲ್ ರಾಗಿಣಿ ಕನ್ನಡ
೨೦೧೩ ಗರ್ಭದ ಗುಡಿ ತೆರೆಸಾ ಕನ್ನಡ
೨೦೧೩ ಸಕ್ಕರೆ ಸ್ನೇಹ ಕನ್ನಡ
೨೦೧೪ ಫೇರ್ & ಲವ್ಲಿ ಕನ್ನಡ
೨೦೧೫ ಆಟಗಾರ ಸಂಧ್ಯಾ ರಮಾಗೋಪಾಲ್ ಕನ್ನಡ
೨೦೧೬ ಶಿವಯೋಗಿ ಶ್ರೀ ಪುಟ್ಟಯ್ಯಜ್ಜ ಕನ್ನಡ
೨೦೧೭ Once More ಕೌರವ ಕನ್ನಡ
೨೦೧೮ ತುಂತುರು ಕನ್ನಡ
೨೦೧೯ ಅನುಕ್ತಾ ಕನ್ನಡ
೨೦೨೦ ರತ್ನನ್ ಪ್ರಪಂಚ ತಬಸ್ಸುಂ ಕನ್ನಡ
೨೦೨೨ ಜೇಮ್ಸ್ ಕನ್ನಡ
TBA ಅಕ್ಕ ಅಕ್ಕ ಮಹಾದೇವಿ / ಜ್ಯೋತಿ ಕನ್ನಡ ಚಿತ್ರೀಕರಣ

ಕಿರುತೆರೆ ಕಾರ್ಯಕ್ರಮಗಳು

ಬದಲಾಯಿಸಿ
 • ಬಾಳೆ ಬಂಗಾರ
 • ಹೋಮ್ ಮಿನಿಸ್ಟರ್
 • ಶ್ರೀಮತಿ ಕರ್ನಾಟಕ
 • ಮಂಜು ಮುಸುಕಿದ ಹಾದಿ
 • ನೂರು ದಿನಗಳು
 • ತ್ರಿವೇಣಿ ಸಂಗಮ[೬]

ಉಲ್ಲೇಖಗಳು

ಬದಲಾಯಿಸಿ
 1. https://timesofindia.indiatimes.com/entertainment/kannada/movies/news/Anu-Prabhakar-mum-on-her-separation-from-her-husband/articleshow/39359146.cms
 2. https://in.bookmyshow.com/person/anu-prabhakar/4848
 3. https://www.thehindu.com/features/metroplus/actors-anu-prabhakar-and-raghu-mukherjee-tie-the-knot/article8519872.ece
 4. https://www.filmibeat.com/celebs/anu-prabhakar/biography.html
 5. "'Mussanje' bags best film award". The Hindu. 29 May 2001. Retrieved 25 April 2017.
 6. https://www.imdb.com/name/nm2782609/