ಫೇರ್ & ಲವ್ಲಿ (ಚಲನಚಿತ್ರ)
ಫೇರ್ & ಲವ್ಲಿ - 2014 ರ ಕನ್ನಡ ಚಲನಚಿತ್ರವಾಗಿದ್ದು, ಇದನ್ನು ಡಿಪಿ ರಘುರಾಮ್ ಬರೆದು ನಿರ್ದೇಶಿಸಿದ್ದಾರೆ. ಜೇಡ್ ಪ್ಲಾಂಟ್ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ ಶಿಲ್ಪಾ ರಮೇಶ್ ನಿರ್ಮಿಸಿರುವ ಈ ಚಿತ್ರದಲ್ಲಿ ಮನೋಜ್ ಆಗಿ ಪ್ರೇಮ್ ಕುಮಾರ್ ಮತ್ತು ಭೂಮಿಕಾ ಎಂಬ ಲೈಂಗಿಕ ಕಾರ್ಯಕರ್ತೆಯಾಗಿ ಶ್ವೇತಾ ಶ್ರೀವಾತ್ಸವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. [೧] ವಿಜಯ್ ರಾಘವೇಂದ್ರ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸಿದ್ದಾರೆ, ಅವರು ಚಿತ್ರಕ್ಕೆ ಒಂದು ಹಾಡು ಬರೆಯುವ ಮೂಲಕ ಗೀತರಚನೆಕಾರರಾಗಿ ಪಾದಾರ್ಪಣೆ ಮಾಡಿದ್ದಾರೆ.
ಚಲನಚಿತ್ರವು 24 ಅಕ್ಟೋಬರ್ 2014 ರಂದು ಬಿಡುಗಡೆಯಾಯಿತು, ಸಾಮಾನ್ಯವಾಗಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದರು, ಅವರು ಚಿತ್ರದ ಚಿತ್ರಕಥೆ, ನಿರೂಪಣೆ, ಸಂಭಾಷಣೆ, ಛಾಯಾಗ್ರಹಣ ಮತ್ತು ಪ್ರಮುಖ ಜೋಡಿಯಾದ ಕುಮಾರ್ ಮತ್ತು ಶ್ವೇತಾ ಶ್ರೀವಾತ್ಸವ್ ಅವರ ಅಭಿನಯವನ್ನು ಮೆಚ್ಚಿದರು. ನಂತರದ ಅಭಿನಯವು 62 ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. [೨]
ಪಾತ್ರವರ್ಗ
ಬದಲಾಯಿಸಿ- ಮನೋಜ್ "ಮನು" ಪಾತ್ರದಲ್ಲಿ ಪ್ರೇಮ್ ಕುಮಾರ್
- ಭೂಮಿಕಾ ಪಾತ್ರದಲ್ಲಿ ಶ್ವೇತಾ ಶ್ರೀವಾತ್ಸವ್
- ಓಂ ಪ್ರಕಾಶ್ ರಾವ್
- ಅಭಿಮನ್ಯು ಪಾತ್ರದಲ್ಲಿ ವಿಜಯ್ ರಾಘವೇಂದ್ರ
- ಅನು ಪ್ರಭಾಕರ್
- ವಿಶಾಲ್ ಹೆಗ್ಡೆ
- ನೀತೂ
- ನಕ್ಷತ್ರ
- ಗಿರಿ
ನಿರ್ಮಾಣ
ಬದಲಾಯಿಸಿತಮ್ಮ ನಿರ್ದೇಶನದ ಚೊಚ್ಚಲ ನಿರ್ದೇಶನದ ಚೆಲುವೆಯೇ ನಿನ್ನೆ ನೋಡು ಚಿತ್ರದ ಸೋಲಿನ ನಂತರ, ನಿರ್ದೇಶಕ ರಘುರಾಮ್ ಅವರು ಪತ್ರಕರ್ತ ಯತಿರಾಜ್ ನಿರೂಪಿಸಿದ ಕಥೆಗೆ ಚಿತ್ರಕಥೆಯನ್ನು ರೂಪಿಸಿದರು. ಕನ್ನಡ ಭಾಷೆಯ ಚಲನಚಿತ್ರಕ್ಕೆ ಇಂಗ್ಲಿಷ್ ಭಾಷೆಯ ಶೀರ್ಷಿಕೆಯ ಔಚಿತ್ಯವನ್ನು ಪ್ರಶ್ನಿಸಿದಾಗ, ನಿರ್ದೇಶಕರು ಶೀರ್ಷಿಕೆಯಲ್ಲಿ "ಫೇರ್" ಪದವು ಶ್ವೇತಾ ಅವರನ್ನು ಸೂಚಿಸುತ್ತದೆ ಮತ್ತು "ಲವ್ಲಿ" ಪದವು "ಲವ್ಲಿ ಸ್ಟಾರ್" ಪ್ರೇಮ್ ಅವರನ್ನು ಸೂಚಿಸುಯ್ಯದೆ [೩] ಆರಂಭದಲ್ಲಿ ಅಪರಂಜಿ ಎಂದು ಹೆಸರಿಡಲು ಯೋಜಿಸಿದ್ದ ಅವರು, ರವಿಚಂದ್ರನ್ ಅವರಂತಹ ಹಿರಿಯ ನಟನಿಗೆ ಇದು ಹೆಚ್ಚು ಸರಿಹೊಂದುತ್ತದೆ ಎಂದು ಭಾವಿಸಿ ಅದನ್ನು ಕೈಬಿಟ್ಟರು. ಚಿತ್ರದ ವಿಷಯದ ಬಗ್ಗೆ ಮಾತನಾಡುತ್ತಾ, "ಇದು ದುಡ್ಡು , ಸಂತೆ (ವ್ಯವಹಾರಿಕತೆ), ಬಿಳಿ ಬಣ್ಣ (ಹೊರಸೌಂದರ್ಯ) ಮತ್ತು ನ್ಯಾಯಗಳ ಕುರಿತಾಗಿದೆ" ಎಂದು ಹೇಳಿದರು. [೪]
ಚಿತ್ರಸಂಗೀತ
ಬದಲಾಯಿಸಿಚಿತ್ರದ ಆಡಿಯೋದ ಬಿಡುಗಡೆ 9 ಜುಲೈ 2014 ರಂದು ಬೆಂಗಳೂರಿನಲ್ಲಿ ನಡೆಯಿತು . ಈ ದಿನ ನಿರ್ದೇಶಕ ರಘುರಾಮ್ ಅವರ ಹುಟ್ಟುಹಬ್ಬದ ದಿನವೂ ಆಗಿತ್ತು. ಆಲ್ಬಂ 6 ಹಾಡುಗಳನ್ನು ಒಳಗೊಂಡಿದೆ. [೫] ಧ್ವನಿಮುದ್ರಿಕೆಗಳಿಗೆ ಸಾಹಿತ್ಯವನ್ನು ನಿರ್ದೇಶಕ ಎ. ಪಿ. ಅರ್ಜುನ್, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರ ಪುತ್ರ ಆನಂದ್ ಪ್ರಿಯಾ ಬರೆದಿದ್ದಾರೆ.
ಸಂ. | ಹಾಡು | ಸಾಹಿತ್ಯ | ಹಾಡುಗಳ ಪಟ್ಟಿ | ಸಮಯ |
---|---|---|---|---|
1. | "ರಿಂಗಾಗಿದೆ" | ಎ. ಪಿ. ಅರ್ಜುನ್ | ಸೋನು ನಿಗಮ್ | 4:35 |
2. | "ಮಾಯಾ" | ಕವಿರಾಜ್ | ಸಂತೋಷ್ ವೆಂಕಿ | 4:31 |
3. | "ಅನಿರೀಕ್ಷಿತ" | ರೇಖಾ ಮೋಹನ್ | ರಂಜಿತ್ | 3:46 |
4. | "ಹಾಗೆ ಒಂದು" | ವಿ.ಹರಿಕೃಷ್ಣ | ಸೋನು ನಿಗಮ್ | 3:55 |
5. | "ಈ ಕಾಣದ" | ಆನಂದ್ ಪ್ರಿಯಾ | ವಿ.ಹರಿಕೃಷ್ಣ | 4:09 |
6. | "ಹಾಗೆ ಒಂದು" | ವಿಜಯ ರಾಘವೇಂದ್ರ, ವಿಜಯಾ ಶಂಕರ್ | 3:55 | |
ಒಟ್ಟು ಸಮಯ: | 24:51 |
ಆಲ್ಬಮ್ ಅನ್ನು ವಿಮರ್ಶಿಸುತ್ತಾ, ದಿ ಟೈಮ್ಸ್ ಆಫ್ ಇಂಡಿಯಾದ ಕಾವ್ಯಾ ಕ್ರಿಸ್ಟೋಫರ್ ಹೀಗೆ ಬರೆದಿದ್ದಾರೆ, "[ಹಾಡುಗಳು] ಒಂದು ರೀತಿಯ ಪರಿಚಿತ ಮಾದರಿಯನ್ನು ಅನುಸರಿಸುತ್ತವೆ, ಒಬ್ಬರು ಅದನ್ನು ಮೊದಲ ಬಾರಿಗೆ ಕೇಳಿದಾಗಲೂ ಸಹ ಗುನುಗಬಹುದು." "ಅನಿರೀಕ್ಷಿತಾ" ಹಾಡು ಅದರ "ಫಂಕಿ ಟ್ಯೂನ್‌ಗಳು ಮತ್ತು ಸಾಕಷ್ಟು ಸಾಹಿತ್ಯ" ದೊಂದಿಗೆ ಎದ್ದು ಕಾಣುತ್ತದೆ ಎಂದು ಅವರು ಹೇಳಿದರು. [೬]
ಬಿಡುಗಡೆ ಮತ್ತು ವಿಮರ್ಶೆಗಳು
ಬದಲಾಯಿಸಿಚಿತ್ರಕ್ಕೆ ಸೆನ್ಸಾರ್ ಮಂಡಳಿಯು "U/A" (ಪೋಷಕರ ಮಾರ್ಗದರ್ಶನ ಅಗತ್ಯ) ಪ್ರಮಾಣಪತ್ರವನ್ನು ನೀಡಿದೆ. [೭] ಇದು 24 ಅಕ್ಟೋಬರ್ 2014 ರಂದು ಕರ್ನಾಟಕದಾದ್ಯಂತ 100 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತನ್ನ ಥಿಯೇಟರ್ ಬಿಡುಗಡೆ ಮಾಡಿತು. [೮] ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಚೆನ್ನಾಗಿ ಓಡಿದ ನಂತರ, ಆಸ್ಟ್ರೇಲಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಯಲ್ಲಿ ಇತರ ದೇಶಗಳಲ್ಲಿ ಚಲನಚಿತ್ರವನ್ನು ಪ್ರದರ್ಶಿಸಲು ನಿರ್ಧರಿಸಲಾಯಿತು. [೯]
ಬಿಡುಗಡೆಯ ನಂತರ ವಿಮರ್ಶಕರಿಂದ ಸಾಮಾನ್ಯವಾಗಿ ಒಳ್ಳೆಯ ವಿಮರ್ಶೆಗಳನ್ನು ಪಡೆಯಿತು. ಚಿತ್ರವು ಅದರ ಚಿತ್ರಕಥೆ ಮತ್ತು ಪ್ರದರ್ಶನಕ್ಕಾಗಿ ಪ್ರಶಂಸೆಗೆ ಒಳಗಾಯಿತು ಆದರೆ ಅದರ ಸಂಗೀತಕ್ಕಾಗಿ ಟೀಕೆಗೆ ಗುರಿಯಾಯಿತು. ಡೆಕ್ಕನ್ ಹೆರಾಲ್ಡ್‌ನ ಬಿಎಸ್ ಶ್ರೀವಾಣಿ ಅವರು ಚಿತ್ರಕ್ಕೆ ಐದಕ್ಕೆ ನಾಲ್ಕು ರೇಟಿಂಗ್ ನೀಡಿದರು ಮತ್ತು ಈ ಚಿತ್ರದ ಬಗ್ಗೆ "ಅತ್ಯಂತ ಕಡಿಮೆ ದೂರುಗಳನ್ನು ಹೇಳಬಹುದು. ಈ ಚಿತ್ರವು ಸಾಕಷ್ಟು ಚಪ್ಪಾಳೆಗಳಿಗೆ ಅರ್ಹ" ಎಂದರು, ಚಿತ್ರದ ಚಿತ್ರಕಥೆಯ ಬಗ್ಗೆ ಅವರು ಬರೆದಿದ್ದಾರೆ- "ನಿರ್ದೇಶಕರು, ಮತ್ತು ಸಂಭಾಷಣೆ ಬರಹಗಾರ ಆನಂದಪ್ರಿಯಾ ಅವರೊಂದಿಗೆ ಉತ್ತಮ ಚಿತ್ರಕಥೆಯನ್ನು ನಿರ್ಮಿಸಿದ ಕೀರ್ತಿ ನಟ ಯತಿರಾಜ್ ಅವರಿಗೆ ಸೇರಿದೆ." ಅವರು ನಟನೆ ಮತ್ತು ಕ್ಯಾಮೆರಾ ವಿಭಾಗಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು. [೧೦] ಬೆಂಗಳೂರು ಮಿರರ್‌ನ ಶ್ಯಾಮ್ ಪ್ರಸಾದ್ ಎಸ್. ಚಿತ್ರಕ್ಕೆ 3.5/5 ರೇಟಿಂಗ್ ನೀಡಿದ್ದಾರೆ, ಅದರ ಕಥೆಯು "ಸರಳವಾಗಿದೆ" ಮತ್ತು ಅದು 2012 ರ ಶ್ವೇತಾ ಶ್ರೀವಾತ್ಸವ್ ನಟಿಸಿದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಯನ್ನು ಹೋಲುತ್ತದೆ ಎಂದು ಬರೆದಿದ್ದಾರೆ. ಅವರು ಪ್ರಮುಖ ಜೋಡಿಯ ಅಭಿನಯ, ಸಂಭಾಷಣೆ ಮತ್ತು ನಿರೂಪಣೆ ಮತ್ತು ಛಾಯಾಗ್ರಹಣಗಳನ್ನು ಪ್ರಶಂಶಿಸಿದ್ದಾರೆ. ಅವರು ಇದನ್ನು "ಸಂಪೂರ್ಣ ಚಿತ್ರ" ಎಂದು ಕರೆದರು. [೧೧] ಇಂಟರ್‌ನ್ಯಾಶನಲ್ ಬ್ಯುಸಿನೆಸ್ ಟೈಮ್ಸ್‌ನ ಪ್ರಕಾಶ್ ಉಪಾಧ್ಯಾಯ ಅವರು ಚಿತ್ರಕ್ಕೆ 3/5 ರೇಟಿಂಗ್ ನೀಡುವ ಮೂಲಕ ವಿಮರ್ಶಿಸಿದರು ಮತ್ತು ಅದನ್ನು "ಶುದ್ಧ ಮನರಂಜನೆ" ಎಂದು ಕರೆದರು. ಚಿತ್ರಕಥೆಯು "ಪೂರ್ಣ ಅಂಕಗಳನ್ನು" ಪಡೆಯುತ್ತದೆ ಎಂದು ಅವರು ಹೇಳಿ, "ಪ್ರೇಮ್ ಕುಮಾರ್" ಅವರು ನಟನಾಗಿ ಬೆಳೆಯುತ್ತಿರುವುದನ್ನು ಗುರುತಿಸಿದ್ದಾರೆ. "ಶ್ವೇತಾ ಅವರು ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನು ಚೊಕ್ಕಟವಾಗಿ ಮಾಡಿ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ , ಸಂಗೀತ ಭಾರೀ ನಿರಾಸೆಯುಂಟು ಮಾಡುತ್ತದೆ" ಎಂದಿದ್ದಾರೆ. [೧೨]
ದಿ ಹಿಂದೂ ಪತ್ರಿಕೆಗೆ ಬರೆಯುತ್ತಾ ಮುರಳೀಧರ ಖಜಾನೆ ಬರೆದಿದ್ದಾರೆ, "... [ನಿರ್ದೇಶಕರು] ವೇಶ್ಯೆಯ ಜೀವನದಲ್ಲಿ ಇಣುಕಿ ನೋಡುವ 'ವಿನಮ್ರ' ಪ್ರಯತ್ನವನ್ನು ಮಾಡಿದ್ದಾರೆ". ಅಭಿನಯದದ ಕುರಿತು ಅವರು ಹೀಗೆ ಬರೆದಿದ್ದಾರೆ, " ವೈದ್ಯಕೀಯ ವಿದ್ಯಾರ್ಥಿನಿ ಭೂಮಿಕಾಳು, ವೇಶ್ಯಾವಾಟಿಕೆಯನ್ನು ಆರಿಸಿಕೊಳ್ಳುವುದು ಮನವರಿಕೆಯಾಗುವುದಿಲ್ಲ. . . ಪುರುಷ ಪ್ರಧಾನ, ಕೋಮುವಾದಿ ಸಮಾಜದ ಮೇಲೆ ದಾಳಿ ಮಾಡಿದಾಗ ಮತ್ತು ಸಮಾಜದ ಬೂಟಾಟಿಕೆಯನ್ನು ಬಯಲು ಮಾಡುವ ಸಂಭಾಷಣೆಗಳನ್ನು ಹೇಳುವಾಗ ಮಾತ್ರ ಶ್ವೇತಾ ಮನಮುಟ್ಟುವಂತಿದ್ದಾರೆ." ಮತ್ತು "ರಘುರಾಮ ಅವರು ನಾಯಕ ಮನು (ಪ್ರೇಮ್ ಕುಮಾರ್) ಅನ್ನು ಎಲ್ಲಾ ಸದ್ಗುಣಗಳ ಸಾಕಾರ ರೂಪ ಎಂಬಂತೆ ಚಿತ್ರಿಸಿ ಅವನ ಪಾತ್ರವನ್ನು ದೋಷರಹಿತವಾಗಿಸುತ್ತಾರೆ. ವಾಸ್ತವವಾಗಿ, ಇದು ಅಭಿಮನ್ಯು ಆಗಿ ವಿಜಯ ರಾಘವೇಂದ್ರ ಅವರ ಪಾತ್ರವು ಮನುವಿಗಿಂತ ಹೆಚ್ಚು ನೈಜವಾಗಿ ಕಾಣುತ್ತದೆ. ಅನು ಪ್ರಭಾಕರ್ ಮತ್ತು ನಕ್ಷತ್ರ ಇವರುಗಳು ಹೆಚ್ಚಿನದೇನನ್ನೂ ಕೊಟ್ಟಿಲ್ಲ" ಎಂದಿದ್ದಾರೆ. [೧೩] ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಎ. ಶಾರದಾ ಅವರು ಚಲನಚಿತ್ರವನ್ನು ವಿಮರ್ಶಿಸಿ ಹೀಗೆ ಬರೆದಿದ್ದಾರೆ, "ಚಿತ್ರವು ಲೈಂಗಿಕ ಕಾರ್ಯಕರ್ತೆಯ ಜೀವನದ ಕಠೋರ ಚಿತ್ರಣವನ್ನು ನೀಡುತ್ತದೆ. ಆರ್ಥಿಕ ಲಾಭಕ್ಕಾಗಿ ತನ್ನ ದೇಹವನ್ನು ಬಳಸಿಕೊಳ್ಳುವ ಮಹಿಳೆಯ ಜೀವನದಲ್ಲಿ ಅಡಗಿರುವ ತಣ್ಣನೆಯ ಕಠಿಣ ಸತ್ಯಗಳನ್ನು ಚಿತ್ರ ಬಹಿರಂಗಪಡಿಸುತ್ತದೆ. ಪ್ರಮುಖ ಜೋಡಿಯ ಅಭಿನಯದ ಬಗ್ಗೆ ಅವರು ಬರೆದಿದ್ದಾರೆ, "ಪ್ರೇಮ್ ಯಾವಾಗಲೂ ತೆರೆಯ ಮೇಲೆ ನೋಡಲು ಆಹ್ಲಾದಕರವಾಗಿದ್ದಾರೆ ಮತ್ತು ನಿರ್ದೇಶಕರ ಸೂಚನೆಗಳನ್ನು ನಿಷ್ಠೆಯಿಂದ ಅನುಸರಿಸಿದ್ದಾರೆ. ಶ್ವೇತಾ ತನ್ನ ನಟನೆ ಯನ್ನಾಗಲೀ ಅವಳ ರೂಪವನ್ನಾಗಲೀ ಅತಿಯಾಗಿ ಮಾಡದೆ ವಾಸ್ತವತೆಯನ್ನು ಬಿಂಬಿಸಲು ಪ್ರಯತ್ನಿಸಿದ್ದಾರೆ. ಅವರು "ವಿ ಹರಿಕೃಷ್ಣ ಸಂಯೋಜಿಸಿದ ಸಂಗೀತ" ದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಚಲನಚಿತ್ರದ "ನಿಧಾನ" ಗತಿಯ ಬಗ್ಗೆ ಟೀಕಿಸಿದರು ಮತ್ತು "ಸಂಭಾಷಣೆಗಳು ಚಿತ್ರದ ಹೆಚ್ಚಿನ ಭಾಗವನ್ನು ತಿಂದು ಹಾಕಿವೆ." ಎಂದಿದ್ದಾರೆ [೧೪]
ಪುರಸ್ಕಾರಗಳು
ಬದಲಾಯಿಸಿ62ನೇ ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್
- ಅತ್ಯುತ್ತಮ ನಟಿ - ಶ್ವೇತಾ ಶ್ರೀವಾತ್ಸವ್
4 ನೇ ದಕ್ಷಿಣ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
- ಅತ್ಯುತ್ತಮ ನಿರ್ದೇಶಕ - ಡಿಪಿ ರಘುರಾಮ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.
ಉಲ್ಲೇಖಗಳು
ಬದಲಾಯಿಸಿ- ↑ "It's festival time for the Kannada film industry". rediff.com. 22 October 2014. Retrieved 26 October 2014.
- ↑ "Yash, Shwetha Srivatsav are Filmfare best actors". The Times of India. 27 June 2015. Retrieved 10 August 2015.
- ↑ "Interview with Director Raghuram". Namcinema. 31 March 2014. Archived from the original on 24 ನವೆಂಬರ್ 2021. Retrieved 24 ನವೆಂಬರ್ 2021.
- ↑ "Fair and Lovely to hit the screens in Feb". sify.com. 20 November 2013. Archived from the original on 7 November 2014. Retrieved 26 October 2014.
- ↑ "Fair & Lovely (Original Motion Picture Soundtrack) - EP". iTunes.com. Archived from the original on 7 September 2014. Retrieved 21 August 2014.
- ↑ "Review of Fair and Lovely's music". The Times of India. 17 October 2014. Retrieved 23 October 2014.
- ↑ "Fair And Lovely Censored U/A". chitraloka.com. 3 October 2014. Archived from the original on 7 ಅಕ್ಟೋಬರ್ 2014. Retrieved 31 October 2014.
- ↑ "'Fair and Lovely' Today". indiaglitz.com. 24 October 2014. Retrieved 31 October 2014.
- ↑ "'Fair and Lovely' Going Good". indiaglitz.com. 31 October 2014. Retrieved 31 October 2014.
- ↑ "Transforming lives with respect". Deccan Herald. 25 October 2014. Retrieved 26 October 2014.
- ↑ "Film Review: Fair and Lovely". Bangalore Mirror. 24 October 2014. Retrieved 26 October 2014.
- ↑ "'Fair and Lovely' Review: A Pure Entertainer". ibtimes.co.in. 25 October 2014. Retrieved 26 October 2014.
- ↑ "Entertainment overshadows the issue of prostitution". The Hindu. 26 October 2014. Retrieved 26 October 2014.
- ↑ "The Dark Side of Fair and Lovely". The New Indian Express. 25 October 2014. Archived from the original on 1 ಡಿಸೆಂಬರ್ 2014. Retrieved 26 October 2014.
ಬಾಹ್ಯ ಕೊಂಡಿಗಳು
ಬದಲಾಯಿಸಿ- ಫೇರ್ & ಲವ್ಲಿ @ ಐ ಎಮ್ ಡಿ ಬಿ
- ಫೇಸ್ಬುಕ್ ಅಧಿಕೃತ ಪುಟ
- ಒನ್ ಇಂಡಿಯಾದಲ್ಲಿ ಚಲನಚಿತ್ರ ಮಾಹಿತಿ Archived 2014-07-09 ವೇಬ್ಯಾಕ್ ಮೆಷಿನ್ ನಲ್ಲಿ.