ಸೋನು ನಿಗಮ್
ಭಾರತೀಯ ಹಿನ್ನಲೆ ಗಾಯಕ
ಸೋನು ನಿಗಮ್ (೩೦ ಜುಲೈ ೧೯೭೩) ಪಂಜಾಬಿ, ಬಂಗಾಳಿ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಾಡುವ ಭಾರತೀಯ ಹಿನ್ನೆಲೆ ಗಾಯಕ. ಹಲವಾರು ಪಾಪ್ ಆಲ್ಬಮ್ ಬಿಡುಗಡೆಮಾಡಿದ್ದಾರೆ ಮತ್ತು ಕೆಲವು ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. 'ಆಧುನಿಕ ಮೊಹಮ್ಮದ್ ರಫಿ' ಎಂಬ ಮೆಚ್ಚುಗೆ ಪಡೆದಿರುವ ಸೋನು, ೧೯೯೬ರಲ್ಲಿ ಜೀವನದಿ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶ ಮಾಡಿದರು.
ಸೋನು ನಿಗಮ್ | |
---|---|
ಹಿನ್ನೆಲೆ ಮಾಹಿತಿ | |
ಸಂಗೀತ ಶೈಲಿ | ಪಾಪ್, ಹಿನ್ನೆಲೆ ಗಾಯನ |
ವೃತ್ತಿ | ಗಾಯಕ, ನಟ, ಸಂಗೀತ ನಿರ್ದೇಶಕ, ಟೆಲಿವಿಷನ್ ಪ್ರೆಸೆಂಟರ್, ರೇಡಿಯೋ ಜಾಕಿ |
ವಾದ್ಯಗಳು | Vocals |
ಸಕ್ರಿಯ ವರ್ಷಗಳು | ೧೯೮೫ – present |
ಜನನ ಮತ್ತು ಮದುವೆಸಂಪಾದಿಸಿ
ಸೊನು ನಿಗಮ ಅವರು, ಕಾಯಸ್ಥ ಕುಟುಂಬದ ಅಗಮ್ ಕುಮಾರ್ ನಿಗಮ್ ಮತ್ತು ಶೋಭಾ ನಿಗಮ್ ಇವರಿಗೆ 30 ಜುಲೈ 1973[೧] ರಂದು ಜನಿಸಿದರು. ನಿಗಮ್ ಫೆಬ್ರವರಿ ೧೫, ೨೦೦೨ರಂದು ಒಂದು ಬಂಗಾಳಿ ಕುಟುಂಬದ ಮಧು ರೀಮಾ ಅವರನ್ನು ಮದುವೆಯಾದರು[೨].