ಪ್ರೇಮ್ ಕುಮಾರ್ (ನಟ)

ಪ್ರೇಮ್ ಕುಮಾರ್ (ಜನನ ೧೮ ಏಪ್ರಿಲ್ ೧೯೭೬) ಇವರು ಕನ್ನಡ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ನಟ ಮತ್ತು ನಿರ್ಮಾಪಕ. ಪ್ರಾಣ(೨೦೦೪) ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.[] ನೆನಪಿರಲಿ (೨೦೦೫) ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಅಂದಿನಿಂದ, ಪ್ರೇಮ್‌ಗೆ ರೊಮ್ಯಾಂಟಿಕ್ ಥೀಮ್‌ನ ಚಿತ್ರಗಳನ್ನು ಹೆಚ್ಚಾಗಿ ನೀಡಲಾಯಿತು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಲವ್ಲಿ ಸ್ಟಾರ್ ಎಂಬ ಬಿರುದನ್ನು ಗಳಿಸಿದರು.[]

ಪ್ರೇಮ್ ಕುಮಾರ್
ಜನನ೧೮ ಏಪ್ರಿಲ್ ೧೯೭೬
ಇತರೆ ಹೆಸರುಲವ್ಲಿ ಸ್ಟಾರ್
ನಾಗರಿಕತೆಭಾರತೀಯ
ವೃತ್ತಿನಟ
ಸಂಗಾತಿಜ್ಯೋತಿ
ಮಕ್ಕಳು

ಪ್ರೇಮ್ ಪ್ರಮುಖ ಚಲನಚಿತ್ರದಲ್ಲಿ ನಟಿಸಿದಾರೆ. ಜೊತೆ ಜೊತೆಯಲಿ (೨೦೦೬), ಪಲ್ಲಕ್ಕಿ (೨೦೦೭), ಗುಣವಂತ (೨೦೦೭), ಸವಿ ಸವಿ ನೆನಪು (೨೦೧೦) , ಚಾರ್ಮಿನಾರ್ (೨೦೧೩) ಇದು ಪ್ರೇಮ್ ಅವರ ಗಮನಾರ್ಹ ಚಿತ್ರಗಳು. ಚೌಕ (೨೦೧೭) ಮತ್ತು ಪ್ರೇಮಂ ಪೂಜ್ಯಂ (೨೦೨೧) ಇದು ನಟನಾಗಿ ಅವರ ೨೫ನೇ ಚಿತ್ರವಾಗಿದೆ.[]

ವೃತ್ತಿ

ಬದಲಾಯಿಸಿ

ಪ್ರೇಮ್ ೨೦೦೪ರಲ್ಲಿ ಪ್ರಾಣ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು[] ೨೦೦೫ರಲ್ಲಿ ನೆನಪಿರಲಿ ಚಿತ್ರದ ಮೂಲಕ ಅವರು ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.[] ೨೦೦೬ರಲ್ಲಿ, ಪ್ರೇಮ್ ನಟಿ ರಮ್ಯಾ ಜೊತೆ ಜೊತೆ ಜೊತೆಯಲಿ ಚಿತ್ರದಲ್ಲಿ ನಡಿಸಿದರು.[] ಅವರ ಪಲ್ಲಕ್ಕಿ ಚಲನಚಿತ್ರವು ೧೦೦ ದಿನಗಳ ಕಾಲ ಉತ್ತಮ ಪ್ರದರ್ಶನ ನೀಡಿತು.[] ೨೦೦೮ ರಲ್ಲಿ, ಹೊಂಗನಸು ಚಿತ್ರಕ್ಕಾಗಿ ಪ್ರೇಮ್ ಮತ್ತೊಮ್ಮೆ ರತ್ನಜನ ಜೊತೆ ಸೇರಿಕೊಂಡರು.[]

ತಮಿಳಿನ ಆಹಾ ಚಿತ್ರದ ರಿಮೇಕ್ ಆಗಿರುವ ಘೌತ್ತಂ ಚಿತ್ರದಲ್ಲಿ ಪ್ರೇಮ್ ೨೦೦೯ರಂದು ನಟಿಸಿದ್ದರು.[] ೨೦೧೦ರಲ್ಲಿ, ಅವರು ಜೊತೆಗಾರ ಚಿತ್ರಕ್ಕಾಗಿ ನಾಯಕಿ ರಮ್ಯಾ ಜೊತೆ ಸೇರಿಕೊಂಡರು.[೧೦] ಇವರು ಶಿವರಾಜಕುಮಾರ್ ಅವರ ಪ್ರವಾಸದ ಸಂಭ್ರಮದ ಚೆಲುವೆಯೇ ನಿನ್ನ ನೋಡಲು ಮತ್ತು ಅನಂತ್ ನಾಗ್ ಮತ್ತು ಸುಹಾಸಿನಿ ಅವರು ನಟಿಸಿರುವ ಎರಡನೆ ಮದುವೆ ಚಲನಚಿತ್ರದಲ್ಲಿ ಅತಿಥಿ ಪಾತ್ರವನ್ನು ವಹಿಸಿದರು.[೧೧]

೨೦೧೩ರಲ್ಲಿ, ಇವರು ನಿರ್ದೇಶಕಿ ರೂಪ ಅಯ್ಯರ್ ಅವರ ಚಂದ್ರ ಚಿತ್ರದಲ್ಲಿ ನಟಿಸಿದರು.[೧೨] ಚಾರ್ಮಿನಾರ್ ಚಿತ್ರದ ಮೂಲಕ ಇವರು ಎರಡನೇ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.[೧೩][೧೪] ಶತ್ರು ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡರು.[೧೫] ೨೦೧೭ರಲ್ಲಿ, ದ್ವಾರಕೀಶ್ ಅವರ ೫೦ನೇ ನಿರ್ಮಾಣದ ಚೌಕಾ ಚಲನಚಿತ್ರದಲ್ಲಿ ಪ್ರೇಮ್ ಜೈಲು ಕೈದಿಗಳಲ್ಲಿ ಒಬ್ಬರಾಗಿ ನಟಿಸಿದರು.[೧೬]

ದೂರದರ್ಶನ

ಬದಲಾಯಿಸಿ

ಚಲನಚಿತ್ರಗಳು

ಬದಲಾಯಿಸಿ

ಪ್ರೇಮ್ ಕುಮಾರ್‌ರವರ ನಟಿಸಿರುವ ಚಲನಚಿತ್ರಗಳು

ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
೨೦೦೪ ಪ್ರಾಣ ಜೀವ
೨೦೦೫ ನೆನಪಿರಲಿ ಕಿಶೋರ್ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
೨೦೦೬ ಜೊತೆ ಜೊತೆಯಲಿ ಪ್ರೇಮ್
೨೦೦೭ ಪಲ್ಲಕ್ಕಿ ಲಕ್ಷ್ಮೀಕಾಂತ್ ನಿರ್ಮಾಪಕ
ಗುಣವಂತ ಗುಣಶೇಖರ್
೨೦೦೮ ಹೊಂಗನಸು ಸಾಗರ್
೨೦೦೮ ಘೌತ್ತಮ ಗೌತಮ್
೨೦೧೦ ಸವಿ ಸವಿ ನೆನಪು ಪ್ರೇಮ್, ರಾಜ್ ದ್ವಿಪಾತ್ರ
ಜೊತೆಗಾರ ವಿಶ್ವಾಸ
ಚೆಲುವೆಯೇ ನಿನ್ನ ನೋಡಲು ಪ್ರೇಮ್ ಅತಿಥಿ ಪಾತ್ರ
೨೦೧೧ ಎರಡನೆ ಮದುವೆ ವಿವೇಕ ಅತಿಥಿ ಪಾತ್ರ
ಐ ಆಮ್ ಸಾರಿ ಮಾತೆ ಬನ್ನಿ ಪ್ರೀತ್ಸೋನಾ ಶ್ಯಾಮ್
ಧನ್ ಧನಾ ಧನ್ ಪ್ರೇಮ್
೨೦೧೩ ಚಾರ್ಮಿನಾರ್ ಮೋಹನ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ
ಚಂದ್ರ ಚಂದ್ರಹಾಸ ದ್ವಿಭಾಷಾ ಚಲನಚಿತ್ರ (ಕನ್ನಡ, ತಮಿಳು)
ಶತ್ರು ವಿಜಯ್ ಸೂರ್ಯ
೨೦೧೩ ಅತಿ ಅಪರೂಪ ಭಾರತ
ಅಧ್ಯಕ್ಷ ಅವನೇ ಒಂದು ಹಾಡಿನಲ್ಲಿ ಅತಿಥಿ ಪಾತ್ರ
ಫೇರ್ & ಲವ್ಲಿ ಮನೋಜ್ ("ಮನು")
೨೦೧೩ ಪುರುಷ ವರುಣ
ರಿಂಗ್ ರೋಡ್ ಅವನೇ ಒಂದು ಹಾಡಿನಲ್ಲಿ ಅತಿಥಿ ಪಾತ್ರ
೨೦೧೬ ಮಸ್ತ್ ಮೊಹಬ್ಬತ್ ಶ್ರೀ
೨೦೧೭ ಚೌಕಾ ಹಕ್ಕಿ ಗೋಪಾಲ
೨೦೧೮ ದಳಪತಿ ರಾಮ್
ಲೈಫ್ ಜೊತೆ ಒಂದ್ ಸೆಲ್ಫಿ ನಕುಲ್
೨೦೧೯ ಯಜಮಾನ ಸ್ವತಃ "ಶಿವ ನಂದಿ" ಹಾಡಿನಲ್ಲಿ ವಿಶೇಷ ಪಾತ್ರ
೨೦೨೧ ಪ್ರೇಮಂ ಪೂಜ್ಯಂ ಶ್ರೀಹರಿ
೨೦೨೪ ಅಪ್ಪಾ ಐ ಲವ್ ಯು ರಾಹುಲ್

ರಿಯಾಲಿಟಿ ಶೋ

ಬದಲಾಯಿಸಿ
ವರ್ಷ ಹೆಸರು ಪಾತ್ರ ವಾಹಿನಿ
೨೦೨೨ ಜೋಡಿ ನಂ. (ಸೀಸನ್ ೧) ತೀರ್ಪುಗಾರ ಝೀ ಕನ್ನಡ
೨೦೨೩ ವೀಕೆಂಡ್ ವಿಥ್ ರಮೇಶ್ (ಸೀಸನ್ ೫) ಅತಿಥಿ ಝೀ ಕನ್ನಡ
೨೦೨೩ ಜೋಡಿ ನಂ.೧ (ಸೀಸನ್ ೨) ತೀರ್ಪುಗಾರ ಝೀ ಕನ್ನಡ

ಉಲ್ಲೇಖಗಳು

ಬದಲಾಯಿಸಿ
  1. "Many lessons learned". Bangalore Mirror.com. 6 September 2010.
  2. Suresh, Sunayana. "20 years, 25 films and so much to be grateful for, says Lovely Star Prem". The Times of India.
  3. "Prem's 25th film culminates in a journey called Premam Poojyam". Times of India. 9 November 2021.
  4. https://web.archive.org/web/20041225145537/http://sify.com/movies/kannada/review.php?id=13568850&ctid=5&cid=2427
  5. "Nenapirali: Fresh stuff". Rediff.com. 2 December 2005. Retrieved 30 September 2014.
  6. "Jothe Jotheyali is just silly". rediff.com. 2006-09-25. Retrieved 2012-11-20.
  7. "Movie review". Archived from the original on 2016-03-04. Retrieved 2024-05-18.
  8. "Review: Honganasu". www.rediff.com.
  9. "Gautham". Sify.com. 5 April 2009. Archived from the original on 29 ಆಗಸ್ಟ್ 2022. Retrieved 18 ಮೇ 2024.
  10. "Jothegaara". The New Indian Express. 22 September 2010.
  11. "Prem Kumar - GGpedia". Archived from the original on 13 December 2013. Retrieved 1 January 2013.
  12. "Roopa and Prem at loggerheads?". The Times of India. 27 June 2013. Archived from the original on 27 June 2013.
  13. "'Charminar' Review: This Kannada film has a huge emotional appeal- Kannada Reviews- South Cinema-IBNLive". IBN Live. 17 February 2013. Archived from the original on 17 February 2013.
  14. "Mahesh Babu Bags Best Actor At Filmfare Awards Southern Edition". NDTV.com.
  15. "Movie Review : Shatru". Sify. 3 September 2013. Archived from the original on 3 September 2013.
  16. "Chowka movie review: Packaged 'diluted' drama". deccanchronicle.com. Archived from the original on 2 February 2022. Retrieved 2 February 2022.