ಜೋಡಿ ನಂ.1 (ಕನ್ನಡ ರಿಯಾಲಿಟೀ ಶೋ)

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೋಡಿ ನಂ.1' ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮವು ಜನಪ್ರಿಯ ಹಿಂದಿ ರಿಯಾಲಿಟಿ ಶೋ "ಸ್ಮಾರ್ಟ್ ಜೋಡಿ" ಯಿಂದ ಪ್ರೇರಣೆ ಪಡೆದಿದೆ. ಈ ಪ್ರದರ್ಶನವು ಹನ್ನೆರಡು ನಿಜ ಜೀವನದ ತಾರಾದಂಪತಿಗಳನ್ನು ಒಳಗೊಂಡಿದೆ. ಅವರು ಜೋಡಿ ನಂ.1 ಪ್ರಶಸ್ತಿಯನ್ನು ಗೆಲ್ಲಲು ಸ್ಪರ್ಧಿಸುವ ಜೊತೆಗೆ, ಮೋಜಿನ ಮತ್ತು ಸವಾಲಿನ ಆಟಗಳು ಇರುತ್ತವೆ. ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳೊಂದಿಗೆ ತಮ್ಮ ಕೆಮಿಸ್ಟ್ರಿಯನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಾರೆ. [೧]

ಜೋಡಿ ನಂ.1 (ಕನ್ನಡ ರಿಯಾಲಿಟೀ ಶೋ)
ಶೈಲಿಮನೋರಂಜನೆ
ನ್ಯಾಯಾಧೀಶರುನೆನಪಿರಲಿ ಪ್ರೇಮ್, ಮಾಳವಿಕಾ
ನಿರೂಪಿಸಿದರುಶ್ವೇತಾ ಚೆಂಗಪ್ಪ & ಕುರಿ ಪ್ರತಾಪ್
ಭಾಷೆ(ಗಳು)ಕನ್ನಡ
ಒಟ್ಟು ಸರಣಿಗಳು2
ಒಟ್ಟು ಸಂಚಿಕೆಗಳು79
ನಿರ್ಮಾಣ
ಸ್ಥಳ(ಗಳು)ಬೆಂಗಳೂರು
ಪ್ರಸಾರಣೆ
ಮೂಲ ವಾಹಿನಿಝೀ ಕನ್ನಡ
ಮೂಲ ಪ್ರಸಾರಣಾ ಸಮಯ11 ಜೂನ್ 2022 – 4 ಫೆಬ್ರವೆರಿ 2024


ಕಾರ್ಯಕ್ರಮ ಒಳನೋಟ ಬದಲಾಯಿಸಿ

ಸೆಲೆಬ್ರಿಟಿಗಳು ತಮ್ಮ ಸಂಗಾತಿಯವರೊಂದಿಗೆ ತಮ್ಮ ಕೆಮಿಸ್ಟ್ರಿಯನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಾರೆ.

ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಮತ್ತು ನಟಿ ಮಾಳವಿಕಾ ಅವಿನಾಶ್ ತೀರ್ಪುಗಾರಾಗಿದ್ದಾರೆ. ಶ್ವೇತಾ ಚೆಂಗಪ್ಪ[೨] ಮತ್ತು ಕುರಿ ಪ್ರತಾಪ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಈ ಕಾರ್ಯಕ್ರಮವು ವಾರಾಂತ್ಯದಲ್ಲಿ ಪ್ರಸಾರವಾಗುತ್ತಿತ್ತು.

ಸೀಸನ್ ಬದಲಾಯಿಸಿ

ಸೀಸನ್ ಪ್ರಥಮ ಪ್ರಸಾರ ನಿರೂಪಕರು ತೀರ್ಪುಗಾರರು ವೀಜೇತರು ರನ್ನರ್ಸ್ ಅಪ್ ಕೊನೆಯ ಪ್ರಸಾರ ಇತರೆ ಟಿಪ್ಪಣಿ
1 11 ಜೂನ್ 2022 ಶ್ವೇತಾ ಚೆಂಗಪ್ಪ ನೆನಪಿರಲಿ ಪ್ರೇಮ್, ಮಾಳವಿಕಾ ಅವಿನಾಶ್ ಅಭಿಜಿತ್ ಮತ್ತು ರೋಹಿಣಿ ಕಿರಿಕ್ ಕೀರ್ತಿ ಮತ್ತು ಅರ್ಪಿತಾ 9 ಅಕ್ಟೋಬರ್ 2022
2 9 ಸೆಪ್ಟಂಬರ್ 2023 ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್ ನೆನಪಿರಲಿ ಪ್ರೇಮ್, ಮಾಳವಿಕಾ ಅವಿನಾಶ್ ಶಶಿ ಹೆಗ್ಡೆ ಮತ್ತು ಲಾವಣ್ಯ ಸುನೇತ್ರ ಪಂಡಿತ್ ಮತ್ತು ರಮೇಶ್ ಪಂಡಿತ್ 4 ಫೆಬ್ರವೆರಿ 2024 [೩]

ಸೀಸನ್ 1 ಬದಲಾಯಿಸಿ

ಸೀಸನ್ 1 ಝೀ ಕನ್ನಡದಲ್ಲಿ ಜೂನ್ 11, 2022 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಪ್ರಸಾರವಾಗಿದ್ದು [೪] , ಈ ಸೀಸನನಲ್ಲಿ ಹತ್ತು ತಾರಾ ಜೋಡಿಗಳು ಭಾಗವಹಿಸಿದ್ದಾರೆ [೫] . ಜೋಡಿ ನಂ.1 ಸೀಸನ್ 1' ರಲ್ಲಿ ಸೆಲೆಬ್ರಿಟಿ ದಂಪತಿಗಳಾದ ನಟ ಅಭಿಜಿತ್ ಮತ್ತು ರೋಹಿಣಿ ದಂಪತಿಗಳು ವಿಜೇತರಾಗಿದ್ದರು. ದಂಪತಿಗಳು ಐದು ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ. ಮೊದಲ ರನ್ನರ್ ಆಪ್ ಕೀರ್ತಿ ಮತ್ತು ಅರ್ಪಿತಾ ದಂಪತಿಗಳಿಗೆ ಮೂರು ಲಕ್ಷ ನಗದು ಬಹುಮಾನ ಮತ್ತು ಎರಡನೇ ರನ್ನರ್ ಆಪ್ ಸಂತೋಷ್ ಮತ್ತು ಮಾನಸ ದಂಪತಿಗಳಿಗೆ ಒಂದು ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ.

ತಾರಾದಂಪತಿಗಳು ಬದಲಾಯಿಸಿ

ಕ್ರಮ ಸಂಖ್ಯೆ ಕಲಾವಿದರು ಫಲಿತಾಂಶ ಇತರೆ ಟಿಪ್ಪಣಿಗಳು
1 ರಂಗಯ್ಯ ಮತ್ತು ಲೀಲಾವತಿ ಸರಿಗಮಪ ಕಾರ್ಯಕ್ರಮದ ಗಾಯಕ ಕಂಬದ
2 ಅಭಿಜಿತ್ ಮತ್ತು ರೋಹಿಣಿ ವಿಜೇತರು ಚಂದನವನದ ಹಿರಿಯ ನಟ
3 ಮಿತ್ರ ಮತ್ತು ಗೀತಾ ಹಾಸ್ಯ ನಟ
4 ಕಿರಿಕ್ ಕೀರ್ತಿ ಮತ್ತು ಅರ್ಪಿತಾ ಮೊದಲ ರನ್ನರ್ ಆಪ್ ಪತ್ರಕರ್ತ
5 ಸಂತೋ‍ಷ ಮತ್ತು ಮಾನಸ ಎರಡನೇ ರನ್ನರ್ ಆಪ್ ಕಾಮಿಡಿ ಕಿಲಾಡಿಗಳು ಖ್ಯಾತಿ
6 ಪ್ರೊಫೆಸರ್ ಕೃಷ್ಣೇಗೌಡರು ಮತ್ತು ಕಲ್ಪನಾ ಹೆಸರಾಂತ ಹಾಸ್ಯ ಭಾಷಣಗಾರ
7 ಗೋವಿಂದೇಗೌಡ ಮತ್ತು ದಿವ್ಯಶ್ರೀ ಕಾಮಿಡಿ ಕಿಲಾಡಿಗಳು ಖ್ಯಾತಿ
8 ನೇಹಾ ಮತ್ತು ಪ್ರಣಮ್ ಹಿಟ್ಲರ್ ಕಲ್ಯಾಣ ಖ್ಯಾತಿಯ ನಟಿ
9 ನಿನಾದ್ ಮತ್ತು ರಮ್ಯಾ ನಾಗಿಣಿ ೨ ಖ್ಯಾತಿಯ ನಟ
10 ಭವಾನಿ ಸಿಂಗ್ ಮತ್ತು ಪಂಕಜ ಕಿರುತೆರೆ ನಟ ಮತ್ತು ನಟಿ
     ವಿಜೇತರು      ಪ್ರಥಮ ರನ್ನರ್ ಆಪ್      ಎರಡನೇ ರನ್ನರ್ ಆಪ್

ಸೀಸನ್ 2 ಬದಲಾಯಿಸಿ

ಜೋಡಿ ನಂ.1 ಸೀಸನ್ 2ರ ಮೊದಲ ಪ್ರಸಾರ ಸೆಪ್ಟಂಬರ್ 9, 2023 ರಂದು ನಡೆಯಿತು [೬] . ಈ ಸೀಸನ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 6 ಗಂಟೆಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಸೀಸನ್ 1 ರಂತೆ ಈ ಬಾರಿಯೂ ನಟ ನೆನಪಿರಲಿ ಪ್ರೇಮ್ ಮತ್ತು ಹಿರಿಯ ನಟಿ ಮಾಳವಿಕಾ ಅವಿನಾಶ್ ತೀರ್ಪುಗಾರಾಗಿದ್ದಾರೆ. ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಸೀಸನ್ 2 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ೧೦ ಮಂದಿ ತಾರಾದಂಪತಿಗಳು ಸ್ಪರ್ಧಿಸಲಿದ್ದಾರೆ [೭] .

ತಾರಾದಂಪತಿಗಳು ಬದಲಾಯಿಸಿ

ಕ್ರಮ ಸಂಖ್ಯೆ ಕಲಾವಿದರು ಫಲಿತಾಂಶ ಇತರೆ ಟಿಪ್ಪಣಿಗಳು
1 ಸುನೇತ್ರ ಪಂಡಿತ್ ಮತ್ತು ರಮೇಶ್ ಪಂಡಿತ್[೮] ಮೊದಲ ರನ್ನರ್ ಆಪ್ ಕಿರುತೆರೆ ಕಲಾವಿದರು
2 ಲಾವಣ್ಯ ಮತ್ತು ಶಶಿ ಹೆಗ್ಡೆ[೯] ವಿಜೇತರು ಕಿರುತೆರೆ ಕಲಾವಿದರು
3 ಮಂಜುನಾಥ್ ಮತ್ತುಅನುಷಾ[೧೦] ಡಿಕೆಡಿ ಡ್ಯಾನ್ಸ್ ಮಾಸ್ಟರ್
4 ಸದಾನಂದ ಮತ್ತು ನೇತ್ರಾವತಿ

[೧೧]

ಕಾಮಿಡಿ ಕಿಲಾಡಿಗಳು ಖ್ಯಾತಿ
5 ಸಂಜು ಬಸಯ್ಯ ಮತ್ತು ಪಲ್ಲವಿ

[೧೨] [೧೩] [೧೪]

ಕಾಮಿಡಿ ಕಿಲಾಡಿಗಳು ಖ್ಯಾತಿ
6 ಆನಂದ್ ಮತ್ತು ಚೈತ್ರ[೧೫] ಸಿಲ್ಲಿಲಲ್ಲಿ ಮತ್ತು ಅಮೃತಧಾರೆ ಧಾರಾವಾಹಿ ಖ್ಯಾತಿಯ ನಟ
7 ಚಿದನಾಂದ ಮತ್ತು ಕವಿತಾ[೧೬] ಪಾಪಾ ಪಾಂಡು ಧಾರಾವಾಹಿ ಖ್ಯಾತಿಯ ನಟ
8 ಮಾಲತಿ ಸರ್ ದೇಶಪಾಂಡೆ ಮತ್ತು ಯಶವಂತ್ ದೇಶಪಾಂಡೆ[೧೭] ಕಿರುತೆರೆ ನಟಿ ಮತ್ತು ಸಿನಿಮಾ ನಟ
9 ಗಣೇಶ್ ಕಾರಂತ್ ಮತ್ತು ಶ್ರೀವಿದ್ಯಾ[೧೮] ಎರಡನೇ ರನ್ನರ್ ಆಪ್ ಗಾಯಕ ಮತ್ತು ಕಂಟೆಟ್ ಕ್ರಿಯೆಟರ್

ಉಲ್ಲೇಖಗಳು ಬದಲಾಯಿಸಿ

  1. "ಜೋಡಿ ನಂ.1". Nettv4u. 2022-06-11.
  2. "ಮತ್ತೆ ನಿರೂಪಣೆಯತ್ತ ಮುಖಮಾಡಿದ ಶ್ವೇತಾ ಚೆಂಗಪ್ಪ". News 18 Kannada. 2022-06-11.
  3. "ಜೋಡಿ ನಂ.೧ ಸೀಸನ್ ೨ರ ವಿಜೇತ ಜೋಡಿ ಲಾವಣ್ಯ ಮತ್ತು ಶಶಿ ಹೆಗ್ಡೆ". The Times of India. 2024-02-04.
  4. "ಜೋಡಿ ಜೀವಗಳ ದಾಂಪತ್ಯ ಉತ್ಸವ ಜೋಡಿನಂ.೧". ಸುವರ್ಣನ್ಯೂಸ್. 2022-06-11.[ಶಾಶ್ವತವಾಗಿ ಮಡಿದ ಕೊಂಡಿ]
  5. "ಜೋಡಿನಂ.೧ ಸೀಸನ್ ೧ ತಾರಾಜೋಡಿಗಳು ಇವರೇ". ಸುವರ್ಣನ್ಯೂಸ್. 2022-06-10.
  6. "ಜೋಡಿ ನಂ.೧ ಸೀಸನ್ ೨ ಶೀಘ್ರದಲ್ಲಿ". ಫಿಲ್ಮಿಬೀಟ್ ಕನ್ನಡ. Retrieved 6 ಸೆಪ್ಟಂಬರ್ 2023.
  7. "ಜೋಡಿ ನಂ.೧ ಸೀಸನ್ ೨ ರ ತಾರಾಜೋಡಿಗಳು ಇವರೇ". ಸುವರ್ಣ ನ್ಯೂಸ್. Retrieved 9 ಸೆಪ್ಟಂಬರ್ 2023.
  8. "ಸುನೇತ್ರಾ ದಂಪತಿಗಳ ಲವ್ ಸ್ಟೋರಿ". ವಿಜಯ ಕರ್ನಾಟಕ. Retrieved 12 Sep 2023.
  9. "ಕೊರೊನಾ ಸಮಯದಲ್ಲಿ ಸಾತ್ ನೀಡಿದ್ದ ಭಾವಿ ಪತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟಿ ಲಾವಣ್ಯ". Retrieved 10 ಸೆಪ್ಟಂಬರ್ 2023.
  10. "ಮದುವೆಯಾದ ಆರು ತಿಂಗಳಲ್ಲಿ ಗಂಡ ಮರಣ". ವಿಜಯ ಕರ್ನಾಟಕ. Retrieved 12 Sep 2023.
  11. "ಚಿಕ್ಕವಯಸ್ಸಿನಲ್ಲಿ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ವಿ". ವಿಜಯ ಕರ್ನಾಟಕ. Retrieved 13 Sep 2023.
  12. "ಸಂಜು ಬಸಯ್ಯ ಲವ್ ಸ್ಟೋರಿ". ಫಿಲ್ಮಿಬೀಟ್ ಕನ್ನಡ. Retrieved 10 ಸೆಪ್ಟಂಬರ್ 2023.
  13. "ನಮ್ಮಿಬ್ಬರ ಪ್ರೀತಿ ನಾಟಕ ಅಂದ್ರು". ವಿಜಯ ಕರ್ನಾಟಕ. Retrieved 9 ಸೆಪ್ಟಂಬರ್ 2023.
  14. "ಚಟಕ್ಕೆ ಪ್ರೀತಿ ಮಾಡಬೇಡಿ; ಎಂದು ಜೋಡಿ ನಂ.೧ ವೇದಿಕೆಯಲ್ಲಿ ಕಣ್ಣೀರಿಟ್ಟ ಸಂಜು". Retrieved 11 Sep 2023.
  15. "ನನ್ನ ಹೆಂಡತಿ ಬದುಕಿ ಇರೋದು ಮಿರಾಕಲ್; ಅಮೃತಧಾರೆ ಧಾರಾವಾಹಿ ನಟ". ವಿಜಯ ಕರ್ನಾಟಕ. Retrieved 10 ಸೆಪ್ಟಂಬರ್ 2023.
  16. "ಸ್ವಂತ ಮನೆ ಮಾರಿಬಿಟ್ಟೆ, ಪಾಪಪಾಂಡು ನಟ". ವಿಜಯ ಕರ್ನಾಟಕ. Retrieved 13 Sep 2023.
  17. "ಒಂದೇ ಗ್ರೀಟಿಂಗ್ ಕಾರ್ಡ್‌ನಿಂದ ಮದುವೆಯಾದೆ ಸತ್ಯ ಧಾರವಾಹಿ ನಟಿ". ವಿಜಯ ಕರ್ನಾಟಕ. Retrieved 13 Sep 2023.
  18. "ನಮ್ದು ಲವ್ ಅಲ್ಲ, ಆರೆಂಜ್ ಮ್ಯಾರೇಜ್; ಗಣೇಶ್ ಕಾರಂತ್ ಪತ್ನಿ". ವಿಜಯ ಕರ್ನಾಟಕ. Retrieved 11 Sep 2023.

ಬಾಹ್ಯ ಉಲ್ಲೇಖಗಳು ಬದಲಾಯಿಸಿ