ಶ್ರೀಲಲಿತ ಕನ್ನಡದ ಚಲನಚಿತ್ರ ನಟಿ. ೧೯೭೦ರಲ್ಲಿ ತೆರೆಗೆ ಬಂದ ಸೀತಾ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಶ್ರೀಲಲಿತ ಆನಂತರದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.

ಶ್ರೀಲಲಿತ
Born
ಭದ್ರಾವತಿ, ಮೈಸೂರು ರಾಜ್ಯ, ಭಾರತ
Occupationಚಲನಚಿತ್ರ ಮತ್ತು ಕಿರುತೆರೆ ನಟಿ
Years active೧೯೭೦-ಪ್ರಸ್ತುತ


ಪುಟ್ಟಣ್ಣ ಕಣಗಾಲ್ ನಿರ್ದೇಶನದ ಪಡುವಾರಳ್ಳಿ ಪಾಂಡವರು(೧೯೭೮) ಚಿತ್ರದಲ್ಲಿ ಸ್ಮರಣೀಯ ಅಭಿನಯ ನೀಡದ ಶ್ರೀಲಲಿತ ಅವರ ಕೆಲವು ಮಹತ್ವದ ಚಿತ್ರಗಳೆಂದರೆ ನಾಡಿನ ಭಾಗ್ಯ(೧೯೭೧) ಅಪರಿಚಿತ(೧೯೭೮), ಸುಬ್ಬಿ ಸುಬ್ಬಕ್ಕ ಸುವ್ವಲಾಲಿ(೧೯೮೦), ಮಾಯೆಯ ಮುಸುಕು(೧೯೮೦), ಬಾಳು ಬಂಗಾರ(೧೯೮೧) ಮತ್ತು ಹೆಂಡ್ತೀರೆ ಹುಷಾರ್. ಪ್ರಸಿದ್ಧ ನಿರ್ದೇಶಕ ಬಸವರಾಜ್ ಕೆಸ್ತೂರ್ ಅವರ ವಿಭಿನ್ನ ಚಿತ್ರಗಳಾದ ನಂಜುಂಡ ನಕ್ಕಾಗ(೧೯೭೫), ಸಂಘರ್ಷ(೧೯೭೭) ಮತ್ತು ಸ್ವಾಮೀಜಿ(೧೯೮೦) ಚಿತ್ರಗಳಲ್ಲಿ ನಾಯಕಿಯಾಗಿ ವಿಶಿಷ್ಠ ಅಭಿನಯ ನೀಡಿದ್ದಾರೆ.

ಜನಪ್ರಿಯ ನಟರಾದ ಮಾನು ಅವರೊಂದಿಗೆ ಶ್ರೀ ರಾಘವೇಂದ್ರ ಕರುಣೆ(೧೯೮೦) ಮತ್ತು ಮೈಲಾರ ಲಿಂಗ(೧೯೮೯) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಜನಪ್ರಿಯ ನಟರಾದ ರಾಜೇಶ್, ಸುದರ್ಶನ್, ಶ್ರೀನಾಥ್, ಗಂಗಾಧರ್, ಅಂಬರೀಶ್, ಶ್ರೀನಿವಾಸಮೂರ್ತಿ, ಮಾನು, ರಾಮ್ ಗೋಪಾಲ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ.[]

ಶ್ರೀಲಲಿತ ಅಭಿನಯದ ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ನಿರ್ದೇಶನ ಭೂಮಿಕೆ
೧೯೭೦ ನಾಡಿನ ಭಾಗ್ಯ ಆರ್.ನಾಗೇಂದ್ರ ರಾವ್ ರಾಜ್ ಕುಮಾರ್, ಆರ್.ಎನ್.ಸುದರ್ಶನ್, ಸುರೇಖಾ
೧೯೭೦ ಸೀತಾ ವಾದಿರಾಜ್ ಕಲ್ಪನಾ, ಗಂಗಾಧರ್, ಶ್ರೀನಾಥ್
೧೯೭೨ ಮರೆಯದ ದೀಪಾವಳಿ ಆರ್.ಸಂಪತ್ ರಾಜೇಶ್, ಕಲ್ಪನಾ
೧೯೭೪ ಬಾಳುವೆ ನಿನಗಾಗಿ ಎಲ್.ಸತ್ಯ ವಿಜಯ್ ರಾಜ್, ಉಮಾ ರಾಣಿ
೧೯೭೫ ನಂಜುಂಡ ನಕ್ಕಾಗ ಬಸವರಾಜ್ ಕೆಸ್ತೂರ್ ರಾಮ್ ಗೋಪಾಲ್
೧೯೭೭ ಪುನರ್ಮಿಲನ ಎಂ.ಆರ್.ವಿಠಲ್ ಬಿ.ವಿ.ರಾಧ, ರಾಮ್ ಗೋಪಾಲ್
೧೯೭೭ ಬಯಸದೇ ಬಂದ ಭಾಗ್ಯ ಆರ್.ರಾಮಮೂರ್ತಿ ವಿಷ್ಣುವರ್ಧನ್, ಮಂಜುಳಾ, ರಾಮ್ ಗೋಪಾಲ್
೧೯೭೭ ವೇದಾಂತ ಕೆ.ಸಿ.ಪಾಂಡು ಟಿ.ಎನ್.ಸೀತಾರಾಮ್, ರಮೇಶ್ ಭಟ್
೧೯೭೭ ಸಂಘರ್ಷ ಬಸವರಾಜ್ ಕೆಸ್ತೂರ್ ಶ್ರೀನಾಥ್, ಲಕ್ಷ್ಮಿ
೧೯೭೮ ಅಪರಿಚಿತ ಕಾಶಿನಾಥ್ ಸುರೇಶ್ ಹೆಬ್ಳೀಕರ್, ಶೋಭಾ
೧೯೭೮ ಪಡುವಾರಹಳ್ಳಿ ಪಾಂಡವರು ಪುಟ್ಟಣ್ಣ ಕಣಗಾಲ್ ಅಂಬರೀಶ್, ರಾಮಕೃಷ್ಣ, ಜೈಜಗದೀಶ್
೧೯೭೯ ಅತ್ತೆಗೆ ತಕ್ಕ ಸೊಸೆ ವೈ.ಆರ್.ಸ್ವಾಮಿ ಮಾನು, ರೇಖಾ ರಾವ್, ಗಂಗಾಧರ್, ಲೀಲಾವತಿ
೧೯೭೯ ಮಂಗಳ ಎನ್.ಟಿ.ಜಯರಾಮ ರೆಡ್ಡಿ ಲೀಲಾವತಿ, ರಾಮ್ ಗೋಪಾಲ್, ವಾಣಿಚಂದ್ರ
೧೯೮೦ ಗುರು ಸಾರ್ವಭೌಮ ಶ್ರೀರಾಘವೇಂದ್ರ ಕರುಣೆ ಹುಣಸೂರು ಕೃಷ್ಣಮೂರ್ತಿ ಜಮುನಾ, ರಾಜೇಶ್, ಬಿ.ಸರೋಜಾದೇವಿ, ಗಂಗಾಧರ್, ಮಾನು
೧೯೮೦ ದೊಡ್ಡಮನೆ ಎಸ್ಟೇಟ್ ಸಿ.ಚಂದ್ರಶೇಖರ್ ಮಾನು, ಪ್ರಮೀಳಾ ಜೋಷಾಯ್
೧೯೮೦ ಮಾಯೆಯ ಮುಸುಕು ಬಿ.ವೈ.ರಾಮದಾಸ್ ರಾಜೇಶ್
೧೯೮೦ ರಾಮ ಲಕ್ಷ್ಮಣ ಕೆ.ಎಸ್.ಎಲ್.ಸ್ವಾಮಿ, ಎಂ.ಪಿ.ಶಂಕರ್ ಅಶೋಕ್, ಮಂಜುಳಾ
೧೯೮೦ ಸುಬ್ಬಿ ಸುಬ್ಬಕ್ಕ ಸುವ್ವಲಾಲಿ ಎನ್.ಎಸ್.ಧನಂಜಯ ಅಂಬರೀಶ್, ರಾಮಕೃಷ್ಣ, ಅಮರೀಶ್ ಪುರಿ
೧೯೮೦ ಸ್ವಾಮೀಜಿ ಬಸವರಾಜ ಕೆಸ್ತೂರ್ ಸುಂದರ್ ಕೃಷ್ಣ ಅರಸ್
೧೯೮೧ ನಮ್ಮಮ್ಮ ತಾಯಿ ಅಣ್ಣಮ್ಮ ಸಿ.ಚಂದ್ರಶೇಖರ್ ಬಿ.ಸರೋಜಾದೇವಿ, ಸುಂದರ್ ಕೃಷ್ಣ ಅರಸ್
೧೯೮೧ ಬಾಳು ಬಂಗಾರ ಗೀತಪ್ರಿಯ ಅಶೋಕ್, ಶ್ರೀನಿವಾಸಮೂರ್ತಿ, ಮಾನು, ಕಲಾವತಿ
೧೯೮೨ ಜೋಡಿ ಜೇವ ಗೀತಪ್ರಿಯ ಶ್ರೀನಿವಾಸಮೂರ್ತಿ, ಇಂದಿರಾ
೧೯೮೯ ಮೈಲಾರ ಲಿಂಗ ಗುರುರಾಜ ಕಟ್ಟೆ ಮಾನು


[]

ಉಲ್ಲೇಖಗಳು

ಬದಲಾಯಿಸಿ
  1. "ಶ್ರೀಲಲಿತ". ಚಿಲೋಕ.ಕಾಮ್.
  2. "ಶ್ರೀಲಲಿತ ಅಭಿನಯದ ಚಿತ್ರಗಳ ಪಟ್ಟಿ". ಚಿಲೋಕ.ಕಾಮ್.