ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, ೨೦೧೮
ಕರ್ನಾಟಕ ವಿಧಾನಸಭೆಯು 224 ಸದಸ್ಯರ ಸದಸ್ಯ ಬಲವನ್ನು ಹೊಂದಿದೆ. 224 ಸದಸ್ಯ ಬಲವುಳ್ಳ 15 ನೇ ಕರ್ನಾಟಕ ವಿಧಾನಸಭೆಯ 222ವಿಧಾನಸಭಾ ಕ್ಷೇತ್ರಗಳಿಗೆ 12 ಮೇ 2018 ಶನಿವಾರ ಚುನಾವಣೆ ನೆಡೆಯಿತು. ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ 2-5-2018 ರಂದು ನಿಧನರಾದ್ದರಿಂದ ಮತ್ತು ರಾಜರಾಜೇಶ್ವರಿ ನಗರದಲ್ಲಿ ಮತದಾರರ ವಂಚನೆ ಹಗರಣದ ನಂತರ, ಈ ಎರಡು ಕ್ಷೇತ್ರಗಳ ಚುನಾವಣೆ ಮುಂದೂಡಲ್ಪಟ್ಟಿತು.
| |||||||||||||||||||||||||||||||||||||||||||
| |||||||||||||||||||||||||||||||||||||||||||
Constituencies of the Karnataka Legislative Assembly | |||||||||||||||||||||||||||||||||||||||||||
|
ಮೈಸೂರು ಜಿಲ್ಲ್ರ್
ಹಿಂದಿನ ವಿಧಾನಸಭೆ ಅವಧಿ
ಬದಲಾಯಿಸಿ(14ನೇಯ) ಕರ್ನಾಟಕ ವಿಧಾನಸಭೆಯ ಅಧಿಕಾರಾವಧಿಯು 28ನೇ ಮೇ,2018 ವರೆಗೆ ಇರುವುದಾಗಿತ್ತು.[೧]
ವೇಳಾಪಟ್ಟಿ
ಬದಲಾಯಿಸಿಚುನಾವಣೆಯು ಮೇ 12 ರಂದು ಜರುಗಿದೆ ಮತ್ತು ಚುನಾವಣೆಯ ಮತ ಎಣಿಕೆ ಹಾಗು ಫಲಿತಾಂಶ ಮೇ 15 ಕ್ಕೆ ಹೊರಬಿದ್ದಿದೆ.
- ವಿವರ:
ನೆಡಾವಳಿ | ದಿನಾಂಕ | ವಾರ |
ನಾಮನಿರ್ದೇಶನಗಳಿಗಾಗಿ ದಿನಾಂಕ | 17 ಏಪ್ರಿಲ್ 2018 | ಮಂಗಳವಾರ |
ನಾಮನಿರ್ದೇಶನಗಳನ್ನು ಸಲ್ಲಿಸಲು ಕೊನೆಯ ದಿನಾಂಕ | 24 ಏಪ್ರಿಲ್ 2018 | ಮಂಗಳವಾರ |
ನಾಮನಿರ್ದೇಶನಗಳ ಪರಿಶೀಲನೆಗೆ ದಿನಾಂಕ | 25 ಏಪ್ರಿಲ್ 2018 | ಬುಧವಾರ |
ಅಭ್ಯರ್ಥಿಗಳ ವಾಪಸಾತಿಗೆ ಕೊನೆಯ ದಿನಾಂಕ | 27 ಏಪ್ರಿಲ್ 2018 | ಶುಕ್ರವಾರ |
ಮತದಾನ ದಿನಾಂಕ | 12 ಮೇ 2018 | ಶನಿವಾರ |
ಎಣಿಕೆಯ ದಿನಾಂಕ | 15 ಮೇ 2018 | ಮಂಗಳವಾರ |
ಚುನಾವಣೆ ಮುಗಿದ ದಿನಾಂಕ ಮುಂಚಿತವಾಗಿ | 18 ಮೇ 2018 | ಶುಕ್ರವಾರ |
ಕರ್ನಾಟಕದಲ್ಲಿ ಮತದಾರರ ಮತ್ತು ಚುನಾವಣೆ ವಿವರ
ಬದಲಾಯಿಸಿ- ಕರ್ನಾಟಕದಲ್ಲಿ ಮತದಾರರ ಸಂಖ್ಯೆ:
- ಭಾರತದಲ್ಲಿ ಮತದಾನದ ಕನಿಷ್ಟ ವಯಸ್ಸು 18 ವರ್ಷಗಳು. 2018 ಕರ್ನಾಟಕದಲ್ಲಿ ರಾಜ್ಯ ಚುನಾವಣೆಗಾಗಿ, 18 ರಿಂದ 29 ವರ್ಷ ವಯಸ್ಸಿನ 824,000 ಹೊಸ ಮತದಾರರನ್ನು ನೋಂದಾಯಿಸಲಾಗಿದೆ. ಕಳೆದ 5 ವರ್ಷಗಳಲ್ಲಿ ಮತದಾರರ, ಅನುಪಾತವು ಒಂದೇ ಆಗಿಯೇ ಇದ್ದರೂ, 'ಯುವ ಮತದಾರರ' ಅನುಪಾತವು 2013 ರಲ್ಲಿ 1.16% ರಿಂದ 2.2% ಕ್ಕೆ ಏರಿಕೆಯಾಗಿದೆ.
- ಈ ಮತದಾರರ ಲಿಂಗ ಅನುಪಾತವು ಇದೇ ಅವಧಿಯಲ್ಲಿ 958 ರಿಂದ 972 ಕ್ಕೆ ಏರಿದೆ.
ವರ್ಗ | 2013 | 2018 |
ಸ್ತ್ರೀ ಮತದಾರರು | 21,367,912 | 24,471,979 |
ಟ್ರಾನ್ಸ್ಜೆಂಡರ್ ಮತದಾರರು | 2,100 | 4,552 |
ಪುರುಷ ಮತದಾರರು | 22,315,727 | 25,205,820 |
ಯುವ ಮತದಾರರ ಸಂಖ್ಯೆ | 718,000 | 1,542,000 |
ಮತದಾರರ ಒಟ್ಟು ಸಂಖ್ಯೆ | 44,403,739 | 51,224,351 |
- ಹೊಸ ಮತದಾನ ಕೇಂದ್ರಗಳ ಸಂಖ್ಯೆ - 4,662
- ಒಟ್ಟು ಮತದಾನ ಕೇಂದ್ರಗಳ ಸಂಖ್ಯೆ 2018 - 56,696
- ಚುನಾವಣೆಗೆ ಅಗತ್ಯವಾಗಿ ಬೇಕಾದ ಅಧಿಕಾರಿಗಳು (ಅಂದಾಜು) -356,552[೨]
ಅಂತಿಮವಾಗಿ ಚುನಾವಣೆಯಲ್ಲಿ ಉಳಿದ ಅಭ್ಯರ್ಥಿಗಳು
ಬದಲಾಯಿಸಿ- ಮೇ 12 ರಂದು ನೆಡೆಯುವ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳು ಒಟ್ಟು - 2,655 (ರಾಜ್ಯ ಮುಖ್ಯ ಚುನಾವಣಾ ಆಯುಕ್ತರ ಪ್ರಕಟಣೆ)
- ದಿ.27-4-2018 ಶುಕ್ರವಾರ ದಂದು ಕೊನೆಯ ದಿನಾಂಕದಂದು 3,509 ಮಂದಿ ನಾಮಪತ್ರ ಸಲ್ಲಿಸಿದ್ದರು. ಶುಕ್ರವಾರದಂದು 583 ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡರು. ಮತ್ತು 271 ಮಂದಿಯ ನಾಮಪತ್ರ ಬುಧವಾರ ಪರಿಶೀಲನೆ ನಡೆಸಿದ ಬಳಿಕ ತಿರಸ್ಕಾರವಾಯಿತು.
- ಸಮೀಕ್ಷೆಯ ಸಮಿತಿಯಿಂದ ಬಿಡುಗಡೆಯಾದ ಅಂತಿಮ ಪಟ್ಟಿಯ ಪ್ರಕಾರ ಒಟ್ಟು 219 ಮಹಿಳೆಯರು ಸೇರಿದಂತೆ 222 ಮಂದಿ ಆಡಳಿತ ಕಾಂಗ್ರೆಸ್ ((120); 224 ವಿರೋಧ ಬಿಜೆಪಿ(43); 201 ಜನತಾದಳ ಸೆಕ್ಯುಲರ್ (ಜೆಡಿಎಸ್)-(29), 1,155 ಸ್ವತಂತ್ರರು ಮತ್ತು 800 ಇತರ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಚಿಕ್ಕ ಪಕ್ಷಗಳು, ಸ್ಪರ್ಧೆಯಲ್ಲಿವೆ. (ಆವರಣದಲ್ಲಿ ಹಾಲಿ ಸದಸ್ಯರ ಸಂಖ್ಯೆ)[೩] [೪]
ರಾಜರಾಜೇಶ್ವರಿ ಮತ್ತು ಜಯನಗರ ನಗರ ಕ್ಷೇತ್ರದ ಚುನಾವಣೆ ಮುಂದೂಡಿಕೆ
ಬದಲಾಯಿಸಿ- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಗುರುತಿನ ಚೀಟಿ ಹಾಗೂ ಟ್ರಕ್‌ನಲ್ಲಿ 95 ಲಕ್ಷ ರೂಪಾಯಿ ಹಣ ಪತ್ತೆಯಾದ ಹಿನ್ನೆಯಲ್ಲಿ ಚುನಾವಣೆಯನ್ನು 2018 ಮೇ ತಿಂಗಳ 28ಕ್ಕೆ ಮುಂದೂಡಲಾಗಿದೆ. ಮೇ 31ರಂದು ಫಲಿತಾಂಶ ಪ್ರಕಟವಾಗಲಿದೆ, ಎಂದು ಚುನಾವಣಾ ಆಯುಕ್ತರು ತಿಳಿಸಿದ್ದಾರೆ.[೫]
ರಾಜರಾಜೇಶ್ವರಿ ನಗರ ಚುನಾವಣೆ
ಬದಲಾಯಿಸಿ- 28-5-2018 ರಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ನಿಗದಿಯಾಗಿದ್ದ ಚುನಾವಣೆಯಲ್ಲಿ ಶೇ 54.20 ರಷ್ಟು ಮತದಾನ ನಡೆದಿತ್ತು. ದಿ.31-5-2018 ಎಣಿಕೆ ನಂತರ ಫಲಿತಾಂಶ ಈ ರೀತಿ ಇತ್ತು:[೬]
- ಕಾಂಗ್ರೆಸ್- ಮುನಿರತ್ನ- 1,08,064
- ಬಿಜೆಪಿ- ತುಳಸಿ ಮುನಿರಾಜುಗೌಡ – 82,572
- ಜೆಡಿಎಸ್-ಜಿ.ಎಚ್. ರಾಮಚಂದ್ರ- 60,360
- ಪಕ್ಷೇತರ– ಹುಚ್ಚ ವೆಂಕಟ್- 604
- ನೋಟಾ- 2,061
ಜಯನಗರ ನಗರ ಕ್ಷೇತ್ರದ ಚುನಾವಣೆ
ಬದಲಾಯಿಸಿ- ಜಯನಗರ ಬಿಜೆಪಿ ಶಾಸಕ ವಿಜಯ್ ಕುಮಾರ್ (60) ಮೇ 2, 2018.ಗುರುವಾರ ರಾತ್ರಿ ನಿಧನರಾದರು. ಹಲವು ದಿನಗಳಿಂದ ಅವರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. 2008 ಮತ್ತು 2013ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು, ಈ ಬಾರಿಯೂ ಕಣದಲ್ಲಿದ್ದರು. ಕ್ಷೇತ್ರದಲ್ಲಿ 2-5-2018 ಗುರುವಾರ ಚುನಾವಣಾ ಪ್ರಚಾರ ಮಾಡುವಾಗ ಕುಸಿದು ಬಿದ್ದರು. ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿ, ಚುನಾವಣಾ ಪ್ರಕ್ರಿಯೆಯನ್ನು ಹೊಸದಾಗಿ ನಡೆಸಬೇಕಾಗುತ್ತದೆ. [೭]
- 11-6-2018 ರಂದು ಜಯನಗರ ನಗರ ಕ್ಷೇತ್ರದ ಚುನಾವಣೆ ನಿಗದಿಯಾಗಿದ್ದು,13-06-2018 ಮತ ಎಣಿಕೆ ನಡೆದ ನಂತರದ ಫಲಿತಾಂಶ ಈ ರೀತಿ ಇತ್ತು: [೮]
- ಕಾಂಗ್ರೆಸ್- ಸೌಮ್ಯಾ ರೆಡ್ಡಿ- 54458
- ಬಿಜೆಪಿ- ಪ್ರಹ್ಲಾದ್ – 51571
- ಜೆಡಿಎಸ್- ಕಾಲೆಗೌಡ- 817
- ಪಕ್ಷೇತರ– ರವಿ ಕೃಷ್ಣ ರೆಡ್ಡಿ- 1861
- ನೋಟಾ- 848
ಚುನಾವಣೆಯ ಮತದಾನೋತ್ತರ ಫಲಿತಾಂಶ ಸಮೀಕ್ಷೆ
ಬದಲಾಯಿಸಿ- ರಾಜ್ಯದಲ್ಲಿ ಶೇ. 70 ಮತದಾನ ಆಗಿದೆ. [೯]
- ಮತದಾನದ ನಂತರದ ಸಮೀಕ್ಷಯಲ್ಲಿರಾಜ್ಯದಲ್ಲಿ ಅತಂತ್ರ ವಿಧಾನಸಭೆಯ ಸೂಚನೆ ಕಂಡುಬಂದಿದೆ :
- ಆವರಣದಲ್ಲಿ ಅಂತಿಮ ಸಮೀಕ್ಷೆ:[೧೦]
ಸಮೀಕ್ಷಕರು | ಕಾಂಗ್ರೆಸ್ | ಬಿಜೆಪಿ: | Iಜೆಡಿಎಸ್ | :,ಇತರೆ |
---|---|---|---|---|
ವಿಜಯವಾಣಿ, ದಿಗ್ವಿಜಯ ನ್ಯೂಸ್ 24/7 | 76–80 | 103–107 | 31–35 | 04–08 |
ಎನ್‌ಡಿಟಿವಿ: | 72–78 (86) | 102–110 (100) | 30–35 (33) | 02–05 |
ನ್ಯೂಸ್ ಎಕ್ಸ್–ಸಿಎನ್‌ಎಕ್ಸ್ | 72–78 | 102–110 | 35–39 | 03–04 |
ಟೈಮ್ಸ್‌ನೌ/ ಚಾಣುಕ್ಯ | 90–103(73) | 80–93 (120) | 31–39 (26) | : 02 |
ಇಂಡಿಯಾ ಟುಡೇ ಆಕ್ಸಿಸ್ | 106–118 (111) | 79–92 (85) | - 22–30 (26) | 01–04 |
ಎಬಿಪಿ / ಸಿ ವೋಟರ್ ಸಮೀಕ್ಷೆ | 87-99 (93) | 97-109 (103) | 21-30 (25) | 01–08 (1) |
ಜನಕೀ ಬಾತ್ ಸಮೀಕ್ಷೆ | 73-82 | 95-114 | 31–39 | - 2-4 |
ಜಿಲ್ಲಾವಾರು ಮತದಾನ: ಶೇಕಡಾ
ಬದಲಾಯಿಸಿಜಿಲ್ಲೆ | 2018.ಶೇ | 2013.ಶೇ | * | ಜಿಲ್ಲೆ | 2018.ಶೇ | 2013.ಶೇ | * | ಜಿಲ್ಲೆ | 2018.ಶೇ | 2013.ಶೇ | * | ಜಿಲ್ಲೆ | 2018.ಶೇ | 2013.ಶೇ |
---|---|---|---|---|---|---|---|---|---|---|---|---|---|---|
ಬೆಂಗಳೂರು ನಗರ | 55 | 57.33 | ತುಮಕೂರು | 73 | 79.32 | ಬೀದರ್ | 59 | 66.43 | ರಾಯಚೂರು | 61 | 64.83 | |||
ಕೊಪ್ಪಳ - | 70 | 73.48 | ದಕ್ಷಿಣ ಕನ್ನಡ | 73 | 74.48 | ಬೆಳಗಾವಿ | 71 | 74.67 | ಹಾವೇರಿ | 76 | 79.91 | |||
ಗದಗ | 68 | 72.90 | ದಾವಣಗೆರೆ | 70 | 75.98 | ಬೆಂಗಳೂರು ಗ್ರಾಮ | 76 | 57.33 | ಹಾಸನ | 77 | 78.77 | |||
ಚಾಮರಾಜ ನಗರ | 78 | 78.65 | ಧಾರವಾಡ | 66 | 67.16 | ಮೈಸೂರು | 68 | 65.83 | ಶಿವಮೊಗ್ಗ | 73 | 74.76 | |||
ಚಿಕ್ಕಮಗಳೂರು | 70 | 75.47 | ಬಳ್ಳಾರಿ | 66 | 73.16 | ಮಂಡ್ಯ | 78 | 77.98 | ಉಡುಪಿ | 75 | 76.15 | |||
ಚಿಕ್ಕಬಳ್ಳಾಪುರ | 79 | 83.50 | ಬಾಗಲಕೋಟೆ | 68 | 72.94 | ಯಾದಗಿರಿ | 60 | 65.92 | ಉತ್ತರ ಕನ್ನಡ | 71 | 73.66 | |||
ಚಿತ್ರದುರ್ಗ | 76 | 76.66 | ವಿಜಯಪುರ | 63 | 66.43 | ರಾಮನಗರ | 84 | 92.94 | ಕೊಡಗು | 69 | 73.22 |
ಫಲಿತಾಂಶ
ಬದಲಾಯಿಸಿ- ಕರ್ನಾಟಕ ವಿಧಾನಸಭಾ ಚುನಾವಣೆ 2018
- ಒಟ್ಟು ಸ್ಥಾನಗಳು 224; ಚನಾವಣೆ ನೆಡೆದ ಸ್ಥಾನಗಳು : 222
- ಜೆಡಿಎಸ್,ನ,ಎಚ್.ಡಿ.ಕುಮಾರಸ್ವಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿರುವುದರಿಂದ ಒಂದು ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದಾಗ ಜೆಡಿಎಸ್ ಸದಸ್ಯರ ಸಂಖ್ಯೆ 35 ಆಗುತ್ತದೆ.$
- 28 ಮೇ, 2018 ರಂದು ಕಾರು ಅಪಘಾತದಲ್ಲಿ ಜಮಖಂಡಿಯ ಕಾಂಗ್ರೆಸ್ ,ಶಾಸಕ ಸಿದ್ದು ನ್ಯಾಮಗೌಡ ಮೃತಪಟ್ಟರು.ಶಾಸಕ ಸಿದ್ದು ನ್ಯಾಮಗೌಡ ಸಾವು[೧೩]
- ಕುಮಾರಸ್ವಾಮಿ ಖಾಲ ಮಾಡಿದ ರಾಮನಗರ, ಜಮಖಂಡಿ ಖಾಲಿ ಇವೆ; ಒಟ್ಟು ಫಲಿತಾಂಶ: 224 - 2 =222 ಕ್ಷೇತ್ರಗಳು
- ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆ 11 – 6 -2018 ರಂದು ನೆಡೆದು, ಕಾಂಗ್ರೆಸ್‌ನ ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯಾರೆಡ್ಡಿ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅವರು 54,457 ಮತಗಳನ್ನು ಗಳಿಸಿ, ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‌ಬಾಬು 51,568 ವಿರುದ್ಧ ಜಯ ಗಳಿಸಿದ್ದಾರೆ.[೧೪]
ಚುನಾವಣೆ 2018
ಬದಲಾಯಿಸಿಪಕ್ಷ | 2018 | 2013 ರ ಫಲಿತಾಂಶ | ಬದಲಾವಣೆ |
---|---|---|---|
ಪಕ್ಷ | 2018 | 2013 | Change |
ಭಾರತೀಯ ಜನತಾ ಪಕ್ಷ | 104 | 40 | +64 |
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ | 80 | 122 | -42 |
ಜನತಾ ದಳ (ಸೆಕ್ಯುಲರ್) (36+ 1BSP=37)(**36-1X*35+1)$ | 37 | 40 | -3 |
ಬಿಎಸ್ಪಿ (BSP) (ಜನತಾ ದಳ (ಸೆಕ್ಯುಲರ್)ಕ್ಕೆ ಮೈತ್ರಿ ಪಕ್ಷ) | 1 | 0 | |
ಕರ್ನಾಟಕ ಜನತಾ ಪಾರ್ಟಿ (KJP) | 0 | 4 | |
ಕೆ ಪಿ ಜೆಪಿ (KPJP) | 1 | 0 | |
ಪಕ್ಷೇತರರು | 1 | 9 | |
ಬಡವರ ಶ್ರಮಿಕರರೈತರಕಾಂಗ್ರೆಸ್ (ಶ್ರೀರಾಮುಲು) (ಬಿ.ಎಸ್.ಆರ್.ಸಿ.ಪಿ | 4 | ||
ಕೆ.ಎಂ.ಪಿ ( KMP) | 1 | ||
ಎಸ್ ಪಿ ( SP) | 1 | ||
ಎಸ್ಕೆಪಿ (SKP) | 1 | ||
ಎಎಪಿ (AAP) | |||
ಎನ್ಸಿಪಿ | 0 | 0 | |
ಇತರೆ | 0 | (20) | -20 |
ಒಟ್ಟು | 224 | 224 |
ಪಕ್ಷಗಳ ಶೇಕಡಾವಾರು ಮತಗಳಿಕೆ
ಬದಲಾಯಿಸಿ- ಸೋತರೂ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್:
ಪಕ್ಷ | ಶೇಕಡಾಗಳಿಕೆ | ಗಳಿಸಿದ ಓಟುಗಳು (ಸಮೀಪಸಂಖ್ಯೆ) | |
---|---|---|---|
1 | ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಕಾಂಗ್ರೆಸ್) | 38% | 1,37,63,500 |
2 | ಭಾರತೀಯ ಜನತಾಪಕ್ಷ (ಬಿಜೆಪಿ) | 36.2% | 1,31,20,300 |
3 | ಜನತಾದಳ (ಸೆಕ್ಯುಲರ್)(ಜೆಡಿಎಸ್) | 18.4% | 66,48700 |
4 | ಸ್ವತಂತ್ರ | 4.00% | 14,34,951 |
5 | ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) | 0.3% | 1,08592 |
6 | ಎ ಐ ಎಮ್ ಇಪಿ | 0.33% | 97,572 |
7 | ಬಿ ಪಿ ಜೆ ಪಿ | 0.2% | 83,071 |
8 | ಸಿ ಪಿ ಎಂ | 0.2% | 81,181 |
9 | ಸ್ವರಾಜ್ | 0.2% | 94,000 |
10 | ಕೆ ಪಿ ಜಿ ಪಿ | 0.2% | 74,229 |
11 | ನೋಟಾ | 0.9% | 3,09573 |
12 | ಇತರರು | 1.07 |
ವಿಧಾನಸಭೆ ಚುನಾವಣೆಯಲ್ಲಿ ಸ್ಥಾನಗಳು
ಬದಲಾಯಿಸಿ ಭಾರತೀಯ ಜನತಾ ಪಾರ್ಟೀ
ಕಾಂಗ್ರೆಸ್
ಜೆ.ಡಿ.ಎಸ್
ರಾಜ್ಯದ ಪ್ರದೇಶವಾರು ಫಲಿತಾಂಶ
ಬದಲಾಯಿಸಿಪ್ರದೇಶ | ಒಟ್ಟು | ಕಾಂಗ್ರೆಸ್ | ಜೆಡಿ(ಎಸ್) | ಇತರರು |
---|---|---|---|---|
ಮುಂಬೈ ಕರ್ನಾಟಕ | 50 | 17 | 2 | 1 |
ಹೈದರಾಬಾದ್ ಕರ್ನಾಟಕ | 40 | 21 | 4 | 0 |
ಬೆಂಗಳೂರು ನಗರ | 26 | 13 | 2 | 0 |
ಮಧ್ಯ ಕರ್ನಾಟಕ | 32 | 7 | 4 | 0 |
ಕರಾವಳಿ19/ | 19 | 3 | 0 | 0 |
ಹಳೇ ಮೈಸೂರು | 55 (- 1) | 17 | 25 (- 1) | 2 |
ಒಟ್ಟು | 221 | 78 | 37 | 3 |
ಉಪ ಚುನಾವಣೆ ನವೆಂಬರ್ 2018
ಬದಲಾಯಿಸಿ- ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 3,2018 ರಂದು ನಡೆಸುವುದಾಗಿ 06 ಅಕ್ಟೋಬರ್ 2018ರಂದು ಚುನಾವಣಾ ಆಯೋಗ ತಿಳಿಸಿತು. ಸೂಚನೆಯ ಘೋಷಣೆ- 9-10-2018; ನಾಮನಿರ್ದೇಶನಕ್ಕೆ ಕೊನೆಯ ದಿನ 16-10-2018; ವಾಪಸಾತಿಗೆ ಕೊನೆಯ ದಿನ 20-10-2018;ಎಣಿಕೆ,6-11-2018ರಂದು.
- ಲೋಕಸಭೆ ಕ್ಷೇತ್ರಗಳು:
- ಶಿವಮೊಗ್ಗ :(ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ),
- ಬಳ್ಳಾರಿ (ಶ್ರೀರಾಮುಲು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
- ಮಂಡ್ಯ (ಜಾತ್ಯತೀತ ಜನತಾದಳದ ಸಿ.ಎಸ್.ಪುಟ್ಟರಾಜು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ)
- ವಿಧಾನ ಸಭೆ ಕ್ಷೇತ್ರ:
- ರಾಮನಗರ (ಎಚ್.ಡಿ. ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ತೆರವು.)
- ಜಮಖಂಡಿ (ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ಅವರು ರಸ್ತೆ ಅಪಘಾತದಲ್ಲಿ ಸಾವು)
- ಉಪಚುನಾವಣೆ: ನವೆಂಬರ್ 3,2018.
- ಫಲಿತಾಂಶ:ನವೆಂಬರ್ 6 2018.[೨೨]
ಸರ್ಕಾರ ರಚನೆ
ಬದಲಾಯಿಸಿ- ರಾಜ್ಯದಲ್ಲಿ ವಿಶಿಷ್ಟ ಬೆಳವಣಿಗೆ:
- ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಅವರು 23ನೇ ಮುಖ್ಯಮಂತ್ರಿಯಾಗಿ ಹಾಗೂ ಮೂರನೇ ಬಾರಿಗೆ ಸಿಎಂ ಆಗಿ ದಿ.17-5-2018 ರಂದು ಬೆಳಿಗ್ಗೆ 9.00ಕ್ಕೆ ಪ್ರಮಾಣವಚನ ಸ್ವೀಕರಿದರು. ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.[೨೩][೨೪] ವಿಧಾನಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದಿದ್ದರಿಂದ, ಹದಿನೈದು ದಿನಗಳ ಒಳಗೆ ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಸದನದಲ್ಲಿ ಬಹುಮತವಿಲ್ಲದ ಕರಣ ಯಡಿಯೂರಪ್ಪ ಒಬ್ಬರೇ ಪ್ರಮಾಣ ವಚನ ಸ್ವೀಕರಿಸಿದರು. ಬಹುಮತ ಸಾಬೀತು ಪಡಿಸಿದ ಬಳಿಕ ಸಚಿವ ಸಂಪುಟ ವಿಸ್ತರಣೆ ನೆಡೆಯುವುದು ಎಂದಿದ್ದಾರೆ.[೨೫]
- ಜೆಡಿಎಸ್ ಹಾಗೂ ಕಾಂಗ್ರೆಸ್ ಒಟ್ಟಾಗಿ ಮೈತ್ರಿ ಮಾಡಿಕೊಂಡು, ಕಾಂಗ್ರೆಸ್–ಜೆಡಿಎಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯದಂತೆ ಸರ್ಕಾರ ರಚನೆಗೆ ಎರಡು ಪಕ್ಷದ 117 ಶಾಸಕರ ಸಹಿಯನ್ನು ಒಳಗೊಂಡ ಪಟ್ಟಿಯನ್ನು ರಾಜ್ಯಪಾಲರಿಗೆ ಎಚ್.ಡಿ. ಕುಮಾರಸ್ವಾಮಿ ದಿ. 16.5-2018 ರಂದು ನೀಡಿದ್ದರು.[೨೬]
- ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನಕ್ಕೆ ಅವರಿಗೆ ಬಹುಮತವಿಲ್ಲದ ಕಾರಣ ಮತ್ತು ತಮಗೆ 117ಸದಸ್ಯರ ಬೆಂಬಲ ವಿದೆಯೆಂದು ದಿ.16-5-2018 ರಂದು ತಡೆ ಕೋರಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಬುಧವಾರ ಮಧ್ಯರಾತ್ರಿ ವಿಚಾರಣೆ ನಡೆಸಿದ್ದು ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದೆ. [೨೭]
- ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಬಗೆಗೆ ಕಾಂಗ್ರೆಸ್ ಮತ್ತು ಜೆಡಿಎಸ್, ತಮ್ಮ ಕೂಟಕ್ಕೆ ಬಹುಮತ ಇರುವುದನ್ನು ನಿರ್ಲಕ್ಷಿಸಿದ ಕಾರಣ ವಿಧಾನ ಸೌಧದ ಗಾಂಧಿಪ್ರತಿಮೆಯ ಬಳಿ ಪ್ರತಭಟನೆ ನೆಡೆಸಿದವು.[೨೮][೨೯]
ಸುಪ್ರೀಮ್ ಕೋರ್ಟ್ ಆದೇಶ
ಬದಲಾಯಿಸಿ- ದಿ.17-5-2018 ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್. ಯಡಿಯೂರಪ್ಪ ಅವರು ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಸಾಬೀತುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಸರ್ಕಾರ ರಚಿಸುವಂತೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರ ನಿರ್ಧಾರ ಪ್ರಶ್ನಿಸಿ ಬುಧವಾರ ರಾತ್ರಿ ಕಾಂಗ್ರೆಸ್– ಜೆಡಿಎಸ್ ಸಲ್ಲಿಸಿದ್ದ ಅರ್ಜಿಯ ಮುಂದುವರಿದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠ, ‘ವಿಶ್ವಾಸಮತ ಸಾಬೀತುಪಡಿಸುವ ತನಕ ಯಡಿಯೂರಪ್ಪ ಅವರು ಯಾವುದೇ ಆಡಳಿತಾತ್ಮಕ ತೀರ್ಮಾನ ತೆಗೆದು ಕೊಳ್ಳುವಂತಿಲ್ಲ’ ಎಂದು ತಿಳಿಸಿತು.[೩೦]
- ವಿಧಾನಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಎಲ್ಲ ಶಾಸಕರು ಶನಿವಾರ ಪ್ರಮಾಣ ವಚನ ಸ್ವೀಕರಿಸಬೇಕು. ಶಾಸಕರ ರಕ್ಷಣೆಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ. ವಿಶ್ವಾಸಮತ ಯಾಚನೆಯ ಪ್ರಕ್ರಿಯೆಯನ್ನು ಹಂಗಾಮಿ ವಿಧಾನಸಭಾಧ್ಯಕ್ಷರು ನಡೆಸಿಕೊಡಬೇಕು ಎಂದೂ ಸೂಚಿಸಿದೆ.[೩೧] ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ಹೇಗೆ ನಡೆಯಬೇಕು ಎಂಬುದನ್ನು ಹಂಗಾಮಿ ಸ್ಪೀಕರ್ ನಿರ್ಣಯಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಹಿನ್ನಲೆಯಲ್ಲಿ ರಾಜ್ಯಪಾಲರು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಲಾಗಿದೆ. ಬೋಪಯ್ಯ ಅವರನ್ನು ಸ್ಪೀಕರ್ ಆಗಿ ನೇಮಕ ಮಾಡಿರುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಆಯ್ಕೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.[೩೨]
- ಹಂಗಾಮಿ ಸ್ಪೀಕರ್ ಕರ್ತವ್ಯ:ನೂತನವಾಗಿ ಆಯ್ಕೆಯಾದ ಶಾಸಕರಿಗೆ ಪ್ರತಿಜ್ಞಾ ವಿಧಿ ಬೋಧಿಸುವುದು ಮೊದಲ ಕರ್ತವ್ಯ. ಅದಾದ ಬಳಿಕ ಕಾಯಂ ಸಭಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಮಾಡಲಾಗುತ್ತದೆ. ಆದರೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ, ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸುವುದು ಹಾಗೂ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಿರ್ವಹಣೆ ಈ ಬಾರಿಯ ಹಂಗಾಮಿ ಸ್ಪೀಕರ್ ಅವರ ಜವಾಬ್ದಾರಿಯಾಗಿದೆ.[[೩೩]
- ಯಡಿಯೂರಪ್ಪ ರಾಜಿನಾಮೆ: ಬಹುಮತ ಇಲ್ಲದೆಯೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಯಾಚನೆ ಭಾಷಣ ಆರಂಭಿಸಿದರು. ಆದರೆ ಬಳಿಕ ಅದನ್ನು ಹಿಂಪಡೆದು ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದರು.[೩೪]
ಸಮ್ಮಿಶ್ರ ಸರ್ಕಾರ ರಚನೆಯ ಕ್ರಿಯೆ
ಬದಲಾಯಿಸಿ- ಜೆಡಿಎಸ್ ಸರ್ಕಾರ ರಚನೆಗೆ ಕಾಂಗ್ರೆಸ್ ಪೂರ್ಣ ಬೆಂಬಲ ಸೂಚಿಸಿ, ಮೇ 15ರಂದೇ ಸಮ್ಮಿಶ್ರ ಸರ್ಕಾರ ರಚನೆ ಸಂಬಂಧ ರಾಜ್ಯಪಾಲರಿಗೆ ಉಭಯ ಪಕ್ಷದ ಮುಖಂಡರು ಮನವಿ ಸಲ್ಲಿಸಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ದಿ.19-5-2018 ಶನಿವಾರ ಸಂಜೆ 4ಕ್ಕೆ ವಿಶ್ವಾಸಮತ ಪಡೆಯಲಾರದೆ ರಾಜೀನಾಮೆ ಸಲ್ಲಿಸಿದ ನಂತರ, ಎಚ್.ಡಿ. ಕುಮಾರಸ್ವಾಮಿಯವರಿಗೆ ಹದಿನೈದು ದಿನಗಳಲ್ಲಿ ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ಆದೇಶಿಸಿದ್ದು, ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಅವಕಾಶ ನೀಡಿದರು. ಕುಮಾರಸ್ವಾಮಿಯವರು ದಿ. 23-5-2018 ಬುಧವಾರ ಪ್ರಮಾಣ ವಚನ ಸ್ವಕರಿಸಲು ನಿರ್ಧರಿಸಿದರು. [೩೫][೩೬]
ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯ
ಬದಲಾಯಿಸಿ- ಕರ್ನಾಟಕದಲ್ಲಿ ಜಾತಿ ಪ್ರಾತಿನಿಧ್ಯ ಇರುವ ರೀತಿಯಲ್ಲಿ ಮಂತ್ರಿಮಂಡಲ ರಚನೆಯಾಗುವುದು ಸಾಮಾನ್ಯವಾಗಿದೆ. ಕೆಳಗಡೆ ಚುನಾಯಿತ ಸದಸ್ಯರ ಜಾತಿವಾರು ಪ್ರಾತಿನಿಧ್ಯದ ಪಟ್ಟಿ ಕೊಟ್ಟಿದೆ.
- ಕುಮಾರಸ್ವಾಮಿಯವರು ಎರಡುಕಡೆ ಸ್ಪರ್ಧಿಸಿ ಗೆದ್ದಿದ್ದು ರಾಮನಗರ ಕ್ಷೇತ್ರಕ್ಕೆ ರಾಜಿನಾಮೆ ನೀಡಿರುವುದರಿಂದ ಒಕ್ಕಲಿಗ ಪ್ರಾತಿನಿಧ್ಯ ಒಂದು ಸ್ಥಾನ ಕಡಿಮೆ ಆಗುತ್ತದೆ.(42 - 1=41)
ಜಾತಿ | ಕಾಂಗ್ರೆಸ್ | ಬಿಜೆಪಿ | ಜಡಿಎಸ್ | ಇತರರು | ಒಟ್ಟು |
---|---|---|---|---|---|
ವೀರಶೈವ ಲಿಂಗಾvಯತ | 16 | 38 | 4 | 00 | 58 |
ಒಕ್ಕಲಿಗ | 11 | 8 | 23 | 00 | 42 |
ಪರಿಶಿಷ್ಟ (ಎಸ್.ಸಿ ) | 12 | 16 | 06 | 02 | 36 |
ಇತರರು | 5 | 16 | 00 | 00 | 21 |
ಪರಿಶಿಷ್ಟ ಪಂಗಡ | 09 | 09 | 01 | 00 | 19 |
ಬ್ರಾಹ್ಮಣರು | 04 | 10 | 00 | 00 | 14 |
ಕುರುಬ | 09 | 01 | 02 | 01 | 13 |
ರೆಡ್ಡಿ | 04 | 04 | 01 | 00 | 09 |
ಮುಸ್ಲಿಮರು | 07 | 00 | 00 | 00 | 07 |
ಕೊಡವ | 00 | 02 | 00 | 00 | 02 |
ಕ್ರಿಶ್ಚಿಯನ್ | 01 | 00 | 00 | 00 | 01 |
ಒಟ್ಟು | 78 | 104 | 37 | 03 | 222 |
ಕುಮಾರಸ್ವಾಮಿಯವರ ಮಂತ್ರಿಮಂಡಲ ರಚನೆ
ಬದಲಾಯಿಸಿ- ಬಿ.ಎಸ್ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಲು ವಿಫಲರಾದ ನಂತರ ರಾಜ್ಯ ಪಾಲರ ಆಹ್ವಾನದಂತೆ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ದಿ.23 ಮೇ, 2018 ರಂದು ಬುಧವಾರ ಸಂಜೆ 4.30ಕ್ಕೆ, ದೇವರು ಮತ್ತು ಕನ್ನಡ ನಾಡಿನ ಜನರ ಹೆಸರಿನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು ಮತ್ತು ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಹಿರಿಯ ನಾಯಕಿ ಸೋನಿಯಾ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್‌ಪಿ ನಾಯಕಿ ಮಾಯಾವತಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಶರದ್ ಯಾದವ್, ಗುಲಾಬ್ ನಬೀ ಅಜಾದ್, ಚಂದ್ರಬಾಬು ನಾಯ್ಡು, ಸೀತಾರಾಂ ಯೆಚೂರಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ದೇಶದ ಹೊಸ ಒಕ್ಕೂಟದ ಆರಂಭಕ್ಕೆ ಸಾಕ್ಷಿಯಾಯಿತು.[೩೮] ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಅದ ನಂತರ ಮಂತ್ರಿಮಂಡಳದ ವಿಸ್ತರಣೆಮಾಡುವ ಸೋಚನೆ ನೀಡಿದರು. ಬಹುಮತ ಸಾಬೀತುಪಡಿಸಲು ಮೇ, 25 ರಂದು (ಶುಕ್ರವಾರ) ವಿಧಾನಸಭಾ ಅಧಿವೇಶನ ಕರೆಯಲಾಗಿದೆ. [೩೯]
- ವಿಧಾನಸಭೆ ಸಭಾಧ್ಯಕ್ಷರ ಆಯ್ಕೆ;
- ದಿ.25 ಮೇ, 2018 ರಂದು ಬಿಜೆಪಿಯ ಸುರೇಶ್ ಕುಮಾರ್ ನಾಮಪತ್ರವನ್ನು ವಾಪಸ್ಸು ಪಡೆದಿದ್ದರಿಂದ ಶ್ರೀನಿವಾಸಪುರ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ರಾಜ್ಯ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆ ಆದರು. ಸಿದ್ದರಾಮಯ್ಯರ ಸೂಚನೆ ಮತ್ತು ಜಿ.ಪರಮೇಶ್ವರ್ ಅವರ ಅನುಮೋದನೆಯಂತೆ ಸಭಾಧ್ಯಕ್ಷರಾಗಿ ರಮೇಶ್ ಕುಮಾರ್ ಅವರ ಆಯ್ಕೆ ಪ್ರಸ್ತಾಪವನ್ನು ಹಂಗಾಮಿ ಸಭಾಧ್ಯಕ್ಷರಾಗಿದ್ದ ಬೋಪಯ್ಯ ಅವರು ಧ್ವನಿಮತದ ಮೂಲಕ ರಮೇಶ್ ಕುಮಾರ್ ಆಯ್ಕೆ ಆಗಿರುವುದನ್ನು ಘೋಷಿಸಿದರು.[೪೦]
- ಕುಮಾರಸ್ವಾಮಿಯವರಿಂದ ಬಹುಮತ ಸಾಬಿತು
- ಕೆ.ಆರ್.ರಮೇಶ್ ಕುಮಾರ್ ಸಭಾಧ್ಯಕ್ಷರಾಗಿ ಆಯ್ಕೆ ಆದ ಕೂಡಲೆ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಪ್ರಸ್ತಾಪವನ್ನು ಸಭೆಯಲ್ಲಿ ಮಂಡಿಸಿದರು. ಬಿ.ಎಸ್. ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ಸನದನದಿಂದ ಹೊರ ನಡೆದರು. ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಧ್ವನಿ ಮತದ ಒಪ್ಪಿಗೆ ಮೂಲಕ ಸಭಾಧ್ಯಕ್ಷ ಕೆ.ಆರ್. ರಮೇಶ್‌ಕುಮಾರ್ ಅವರು ವಿಶ್ವಾಸಮತವನ್ನು ಅನುಮೋದಿಸಿದರು [೪೧]
ಮಂತ್ರಿಮಂಡಲ ರಚನೆ
ಬದಲಾಯಿಸಿ- ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಸರ್ಕಾರದ ಸಚಿವರ ಪ್ರಮಾಣವಚನ ಸಮಾರಂಭ ರಾಜಭವನದ ಗಾಜಿನಮನೆಯಲ್ಲಿ ದಿ.6-6-2018 ಬುಧವಾರ ಸರಳವಾಗಿ ನೆರವೇರಿತು. ಕಾಂಗ್ರೆಸ್ ಪಕ್ಷದ 15 ಶಾಸಕರು ಮತ್ತು ಜೆಡಿಎಸ್ ಪಕ್ಷದ 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. (25 + ಹಿಂದೆ ಇಬ್ಬರ ಪ್ರಮಾಣವಚನ; ಒಟ್ಟು 27 ಜನರ ಮಂತ್ರಿಮಂಡಳ ರಚನೆಯಾಗಿದೆ. (ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ)[೪೨]
ಕ್ರ.ಸಂ. | ವಿಧಾನಸಭಾ ಕ್ಷೇತ್ರ | ಆಯ್ಕೆಯಾದ ಸದಸ್ಯರು | ಪಕ್ಷ | ಮತಗಳು | ಹತ್ತಿರದ ಸ್ಪರ್ಧಿ | ಪಕ್ಷ | ಮತಗಳು |
---|---|---|---|---|---|---|---|
1 | ನಿಪ್ಪಾಣಿ | ಶಶಿಕಲಾ ಜೊಲ್ಲೆ | ಬಿಜೆಪಿ | 87006 | ಕಾಕಾಸೊ ಪಾಟೀಲ | ಕಾಂಗ್ರೆಸ್ | 78500 |
2 | ಚಿಕ್ಕೋಡಿ-ಸದಲಗಾ | ಗಣೇಶ ಹುಕ್ಕೇರಿ | ಕಾಂಗ್ರೆಸ್ | 91467 | ಅಣ್ಣಾಸಾಹೇಬ್ ಜೊಲ್ಲೆ | ಬಿಜೆಪಿ | 80898 |
3 | ಅಥಣಿ | ಮಹೇಶ ಕುಮಟಳ್ಳಿ | ಕಾಂಗ್ರೆಸ್ | 82094 | ಲಕ್ಷ್ಮಣ ಸವದಿ | ಬಿಜೆಪಿ | 79763 |
4 | ಕಾಗವಾಡ | ಶ್ರೀಮಂತ ಪಾಟೀಲ | ಕಾಂಗ್ರೆಸ್ | 83060 | ಭರಮಗೌಡ ಕಾಗೆ | ಬಿಜೆಪಿ | 50118 |
5 | ಕುಡಚಿ | ಪಿ.ರಾಜೀವ | ಬಿಜೆಪಿ | 67781 | ಅಮಿತ್ ಘಾಟಗೆ | ಕಾಂಗ್ರೆಸ್ | 52773 |
6 | ರಾಯಭಾಗ | ದುರ್ಯೋಧನ ಐಹೊಳೆ | ಬಿಜೆಪಿ | 67502 | ಪ್ರದೀಪಕುಮಾರ ಮಾಳಗೆ | ಕಾಂಗ್ರೆಸ್ | 50954 |
7 | ಹುಕ್ಕೇರಿ | ಉಮೇಶ ಕತ್ತಿ | ಬಿಜೆಪಿ | 83588 | ಎ.ಬಿ.ಪಾಟೀಲ | ಕಾಂಗ್ರೆಸ್ | 68203 |
8 | ಅರಭಾವಿ | ಬಾಲಚಂದ್ರ ಜಾರಕಿಹೊಳಿ | ಬಿಜೆಪಿ | 96144 | ಭೀಮಪ್ಪ ಗಡಾದ | ಕಾಂಗ್ರೆಸ್ | 48816 |
9 | ಗೋಕಾಕ | ರಮೇಶ ಜಾರಕಿಹೊಳಿ | ಕಾಂಗ್ರೆಸ್ | 90249 | ಅಶೋಕ ಪೂಜಾರಿ | ಬಿಜೆಪಿ | 75969 |
10 | ಯಮಕನಮರಡಿ | ಸತೀಶ ಜಾರಕಿಹೊಳಿ | ಕಾಂಗ್ರೆಸ್ | 73512 | ಮಾರುತಿ ಅಷ್ಟಗಿ | ಬಿಜೆಪಿ | 70662 |
11 | ಬೆಳಗಾವಿ ಉತ್ತರ | ಅನಿಲ ಬೆನಕೆ | ಬಿಜೆಪಿ | 79060 | ಫಿರೋಜ್ ಸೇಠ್ | ಕಾಂಗ್ರೆಸ್ | 61793 |
12 | ಬೆಳಗಾವಿ ದಕ್ಷಿಣ | ಅಭಯ ಪಾಟೀಲ | ಬಿಜೆಪಿ | 84498 | ಎಮ್.ಡಿ.ಲಕ್ಷ್ಮಿನಾರಾಯಣ | ಕಾಂಗ್ರೆಸ್ | 25806 |
13 | ಬೆಳಗಾವಿ ಗ್ರಾಮೀಣ | ಲಕ್ಷ್ಮಿ ಹೆಬ್ಬಾಳಕರ | ಕಾಂಗ್ರೆಸ್ | 102040 | ಸಂಜಯ ಪಾಟೀಲ | ಬಿಜೆಪಿ | 50316 |
14 | ಖಾನಾಪುರ | ಡಾ.ಅಂಜಲಿ ನಿಂಬಾಳ್ಕರ | ಕಾಂಗ್ರೆಸ್ | 36649 | ವಿಠ್ಠಲ ಹಲಗೇಕರ | ಬಿಜೆಪಿ | 31516 |
15 | ಕಿತ್ತೂರು | ಮಹಾಂತೇಶ ದೊಡ್ಡಗೌಡರ | ಬಿಜೆಪಿ | 73155 | ಡಿ.ಬಿ.ಇನಾಂದಾರ | ಕಾಂಗ್ರೆಸ್ | 40293 |
16 | ಬೈಲಹೊಂಗಲ | ಮಹಾಂತೇಶ ಕೌಜಲಗಿ | ಕಾಂಗ್ರೆಸ್ | 47040 | ಜಗದೀಶ ಮೆಟಗುಡ್ಡ | ಪಕ್ಷೇತರ | 41918 |
17 | ಸವದತ್ತಿ ಯಲ್ಲಮ್ಮ | ವಿಶ್ವನಾಥ ಮಾಮನಿ | ಬಿಜೆಪಿ | 62480 | ಆನಂದ ಛೋಪ್ರಾ | ಪಕ್ಷೇತರ | 56189 |
18 | ರಾಮದುರ್ಗ | ಮಹಾದೇವಪ್ಪ ಯಾದವಾಡ | ಬಿಜೆಪಿ | 68349 | ಅಶೋಕ ಪಟ್ಟಣ | ಕಾಂಗ್ರೆಸ್ | 65474 |
19 | ಮುಧೋಳ | ಗೋವಿಂದ ಕಾರಜೋಳ | ಬಿಜೆಪಿ | 76431 | ಸತೀಶ ಬಂಡಿವಡ್ಡರ | ಕಾಂಗ್ರೆಸ್ | 60949 |
20 | ತೇರದಾಳ | ಸಿದ್ದು ಸವದಿ | ಬಿಜೆಪಿ | 87213 | ಉಮಾಶ್ರೀ | ಕಾಂಗ್ರೆಸ್ | 66324 |
21 | ಜಮಖಂಡಿ | ಆನಂದ ನ್ಯಾಮಗೌಡ | ಕಾಂಗ್ರೆಸ್ | 97017 | ಶ್ರೀಕಾಂತ ಕುಲಕರ್ಣಿ | ಬಿಜೆಪಿ | 57537 |
22 | ಬೀಳಗಿ | ಮುರುಗೇಶ ನಿರಾಣಿ | ಬಿಜೆಪಿ | 85135 | ಜೆ.ಟಿ.ಪಾಟೀಲ | ಕಾಂಗ್ರೆಸ್ | 80324 |
23 | ಬದಾಮಿ | ಸಿದ್ದರಾಮಯ್ಯ | ಕಾಂಗ್ರೆಸ್ | 67599 | ಶ್ರೀರಾಮಲು | ಬಿಜೆಪಿ | 65903 |
24 | ಬಾಗಲಕೋಟೆ | ವೀರಣ್ಣ ಚರಂತಿಮಠ | ಬಿಜೆಪಿ | 85653 | ಹೆಚ್.ವಾಯ್.ಮೇಟಿ | ಕಾಂಗ್ರೆಸ್ | 69719 |
25 | ಹುನಗುಂದ | ದೊಡ್ಡನಗೌಡ ಪಾಟೀಲ | ಬಿಜೆಪಿ | 65012 | ವಿಜಯಾನಂದ ಕಾಶಪ್ಪನವರ | ಕಾಂಗ್ರೆಸ್ | 59785 |
26 | ಮುದ್ದೇಬಿಹಾಳ | ಎ.ಎಸ್.ಪಾಟೀಲ(ನಡಹಳ್ಳಿ) | ಬಿಜೆಪಿ | 63512 | ಸಿ.ಎಸ್.ನಾಡಗೌಡ | ಕಾಂಗ್ರೆಸ್ | 54879 |
27 | ದೇವರ ಹಿಪ್ಪರಗಿ | ಸೋಮನಗೌಡ ಪಾಟೀಲ | ಬಿಜೆಪಿ | 48245 | ರಾಜುಗೌಡ ಪಾಟೀಲ | ಜೆಡಿಎಸ್ | 44892 |
28 | ಬಸವನ ಬಾಗೇವಾಡಿ | ಶಿವಾನಂದ ಪಾಟೀಲ | ಕಾಂಗ್ರೆಸ್ | 58647 | ಸೋಮನಗೌಡ ಪಾಟೀಲ | ಜೆಡಿಎಸ್ | 55461 |
29 | ಬಬಲೇಶ್ವರ | ಎಂ.ಬಿ.ಪಾಟೀಲ | ಕಾಂಗ್ರೆಸ್ | 98339 | ವಿಜಯಗೌಡ ಪಾಟೀಲ | ಬಿಜೆಪಿ | 68624 |
30 | ವಿಜಾಪುರ ನಗರ | ಬಸನಗೌಡ ಪಾಟೀಲ(ಯತ್ನಾಳ) | ಬಿಜೆಪಿ | 76308 | ಅಬ್ದುಲ್ ಹಮೀದ್ ಮುಶ್ರೇಫ್ | ಕಾಂಗ್ರೆಸ್ | 69895 |
31 | ನಾಗಠಾಣ | ದೇವಾನಂದ ಚವ್ಹಾಣ | ಜೆಡಿಎಸ್ | 59709 | ವಿಠ್ಠಲ ಕಟಕದೊಂಡ | ಕಾಂಗ್ರೆಸ್ | 54108 |
32 | ಇಂಡಿ | ಯಶವಂತರಾಯಗೌಡ ಪಾಟೀಲ | ಕಾಂಗ್ರೆಸ್ | 50401 | ಬಿ.ಡಿ.ಪಾಟೀಲ(ಹಂಜಗಿ) | ಜೆಡಿಎಸ್ | 40463 |
33 | ಸಿಂದಗಿ | ಎಮ್.ಸಿ.ಮನಗೂಳಿ | ಜೆಡಿಎಸ್ | 70865 | ರಮೇಶ ಭೂಸನೂರ | ಬಿಜೆಪಿ | 61560 |
34 | ಅಫಜಲಪುರ | ಎಮ್.ವೈ.ಪಾಟೀಲ | ಕಾಂಗ್ರೆಸ್ | 71735 | ಮಾಲಿಕಯ್ಯ ಗುತ್ತೆದಾರ | ಬಿಜೆಪಿ | 61141 |
35 | ಜೇವರ್ಗಿ | ಅಜಯ ಧರ್ಮಸಿಂಗ್ | ಕಾಂಗ್ರೆಸ್ | 68508 | ದೊಡ್ಡಪ್ಪಗೌಡ ಪಾಟೀಲ | ಬಿಜೆಪಿ | 52452 |
36 | ಸುರಪುರ | ನರಸಿಂಹ(ರಾಜುಗೌಡ) ನಾಯಕ | ಬಿಜೆಪಿ | 104426 | ರಾಜಾ ವೆಂಕಟಪ್ಪ ನಾಯಕ | ಕಾಂಗ್ರೆಸ್ | 81858 |
37 | ಶಹಾಪುರ | ಶರಣಬಸಪ್ಪಗೌಡ ದರ್ಶನಾಪುರ | ಕಾಂಗ್ರೆಸ್ | 78642 | ಗುರು ಪಾಟೀಲ ಶಿರವಾಳ | ಬಿಜೆಪಿ | 47668 |
38 | ಯಾದಗಿರಿ | ವೆಂಕಟ್ ರೆಡ್ಡಿ ಮುದ್ನಾಳ | ಬಿಜೆಪಿ | 62227 | ಡಾ.ಎ.ಬಿ.ಮಲಕಾರೆಡ್ಡಿ | ಕಾಂಗ್ರೆಸ್ | 49346 |
39 | ಗುರುಮಠಕಲ್ | ನಾಗನಗೌಡ | ಜೆಡಿಎಸ್ | 79627 | ಬಾಬುರಾವ್ ಚಿಂಚಣಸೂರ | ಕಾಂಗ್ರೆಸ್ | 55147 |
40 | ಚಿತ್ತಾಪುರ | ಪ್ರಿಯಾಂಕ್ ಖರ್ಗೆ | ಕಾಂಗ್ರೆಸ್ | 69700 | ವಾಲ್ಮೀಕಿ ನಾಯಕ | ಬಿಜೆಪಿ | 65307 |
41 | ಸೇಡಂ | ರಾಜಕುಮಾರ ಪಾಟೀಲ(ತೆಲ್ಕೂರ) | ಬಿಜೆಪಿ | 80668 | ಡಾ.ಶರಣಪ್ರಕಾಶ ಪಾಟೀಲ | ಕಾಂಗ್ರೆಸ್ | 73468 |
42 | ಚಿಂಚೋಳಿ | ಡಾ.ಅವಿನಾಶ ಜಾಧವ | ಬಿಜೆಪಿ | 69109 | ಸುಭಾಸ ರಾಠೋಡ | ಕಾಂಗ್ರೆಸ್ | 61079 |
43 | ಕಲಬುರಗಿ ಗ್ರಾಮೀಣ | ಬಸವರಾಜ್ ಮಟ್ಟಿಮೊಡ | ಬಿಜೆಪಿ | 61750 | ವಿಜಯಕುಮಾರ ಜಿ.ರಾಮಕೃಷ್ಣ | ಕಾಂಗ್ರೆಸ್ | 49364 |
44 | ಕಲಬುರಗಿ ದಕ್ಷಿಣ | ದತ್ತಾತ್ರೇಯ ಪಾಟೀಲ(ರೇವೂರ) | ಬಿಜೆಪಿ | 64788 | ಅಲ್ಲಮಪ್ರಭು ಪಾಟೀಲ | ಕಾಂಗ್ರೆಸ್ | 59357 |
45 | ಕಲಬುರಗಿ ಉತ್ತರ | ಕನೀಜ್ ಫಾತಿಮಾ | ಕಾಂಗ್ರೆಸ್ | 64311 | ಚಂದ್ರಕಾಂತ ಪಾಟೀಲ | ಬಿಜೆಪಿ | 58371 |
46 | ಆಳಂದ | ಸುಭಾಷ್ ಗುತ್ತೆದಾರ | ಬಿಜೆಪಿ | 76815 | ಬಿ.ಆರ್.ಪಾಟೀಲ | ಕಾಂಗ್ರೆಸ್ | 76118 |
47 | ಬಸವಕಲ್ಯಾಣ | ಬಿ.ನಾರಾಯಣ ರಾವ್ | ಕಾಂಗ್ರೆಸ್ | 61425 | ಮಲ್ಲಿಕಾರ್ಜುನ ಕೂಬಾ | ಬಿಜೆಪಿ | 44153 |
48 | ಹುಮ್ನಾಬಾದ್ | ರಾಜಶೇಖರ ಪಾಟೀಲ | ಕಾಂಗ್ರೆಸ್ | 74945 | ಸುಭಾಸ ಕಲ್ಲೂರ | ಬಿಜೆಪಿ | 43131 |
49 | ಬೀದರ ದಕ್ಷಿಣ | ಬಂಡೆಪ್ಪ ಕಾಶಂಪುರ | ಜೆಡಿಎಸ್ | 53347 | ಡಾ.ಶೈಲೇಂದ್ರ ಬಾಲ್ದಳೆ | ಬಿಜೆಪಿ | 41239 |
50 | ಬೀದರ | ರಹೀಮ್ ಖಾನ್ | ಕಾಂಗ್ರೆಸ್ | 73270 | ಸೂರ್ಯಕಾಂತ ನಾಗಮಾರಪಳ್ಳಿ | ಬಿಜೆಪಿ | 63025 |
51 | ಭಾಲ್ಕಿ | ಈಶ್ವರ ಖಂಡ್ರೆ | ಕಾಂಗ್ರೆಸ್ | 84673 | ಡಿ.ಕೆ.ಸಿದ್ರಾಮ | ಬಿಜೆಪಿ | 63235 |
52 | ಔರಾದ್ | ಪ್ರಭು ಚೌಹಾಣ | ಬಿಜೆಪಿ | 75061 | ವಿಜಯಕುಮಾರ | ಕಾಂಗ್ರೆಸ್ | 64469 |
53 | ರಾಯಚೂರು ಗ್ರಾಮೀಣ | ಬಸನಗೌಡ ದದ್ದಲ | ಕಾಂಗ್ರೆಸ್ | 66656 | ತಿಪ್ಪರಾಜು ಹವಾಲದಾರ | ಬಿಜೆಪಿ | 56692 |
54 | ರಾಯಚೂರು | ಡಾ.ಶಿವರಾಜ ಪಾಟೀಲ | ಬಿಜೆಪಿ | 56511 | ಸೈಯದ್ ಯಾಸೀನ್ | ಕಾಂಗ್ರೆಸ್ | 45520 |
55 | ಮಾನ್ವಿ | ರಾಜಾ ವೆಂಕಟಪ್ಪ ನಾಯಕ | ಜೆಡಿಎಸ್ | 53548 | ಡಾ.ತನುಶ್ರೀ | ಪಕ್ಷೇತರ | 37733 |
56 | ದೇವದುರ್ಗ | ಶಿವನಗೌಡ ನಾಯಕ | ಬಿಜೆಪಿ | 67003 | ಎ.ರಾಜಶೇಖರ ನಾಯಕ | ಕಾಂಗ್ರೆಸ್ | 45958 |
57 | ಲಿಂಗಸೂಗೂರು | ಡಿ.ಎಸ್.ಹೂಲಗೇರಿ | ಕಾಂಗ್ರೆಸ್ | 54230 | ಸಿದ್ದು ಬಂಡಿ | ಜೆಡಿಎಸ್ | 49284 |
58 | ಸಿಂಧನೂರು | ವೆಂಕಟರಾವ ನಾಡಗೌಡ | ಜೆಡಿಎಸ್ | 71514 | ಹಂಪನಗೌಡ ಬಾದರ್ಲಿ | ಕಾಂಗ್ರೆಸ್ | 69917 |
59 | ಮಸ್ಕಿ | ಪ್ರತಾಪಗೌಡ ಪಾಟೀಲ | ಕಾಂಗ್ರೆಸ್ | 60387 | ಬಸನಗೌಡ ತುರವಿಹಾಳ | ಬಿಜೆಪಿ | 60174 |
60 | ಕುಷ್ಟಗಿ | ಅಮರೇಗೌಡ ಬಯ್ಯಾಪುರ | ಕಾಂಗ್ರೆಸ್ | 87567 | ದೊಡ್ಡನಗೌಡ ಪಾಟೀಲ | ಬಿಜೆಪಿ | 69536 |
61 | ಕನಕಗಿರಿ | ಬಸವರಾಜ ದಡೇಸೂಗೂರ | ಬಿಜೆಪಿ | 87735 | ಶಿವರಾಜ ತಂಗಡಗಿ | ಕಾಂಗ್ರೆಸ್ | 73510 |
62 | ಗಂಗಾವತಿ | ಪರಣ್ಣ ಮುನವಳ್ಳಿ | ಬಿಜೆಪಿ | 67617 | ಇಕ್ಬಾಲ್ ಅನ್ಸಾರಿ | ಕಾಂಗ್ರೆಸ್ | 59644 |
63 | ಯಲಬುರ್ಗಾ | ಆಚಾರ ಹಾಲಪ್ಪ | ಬಿಜೆಪಿ | 79072 | ಬಸವರಾಜ ರಾಯರೆಡ್ಡಿ | ಕಾಂಗ್ರೆಸ್ | 65754 |
64 | ಕೊಪ್ಪಳ | ಕೆ.ರಾಘವೇಂದ್ರ ಹಿಟ್ನಾಳ | ಕಾಂಗ್ರೆಸ್ | 98783 | ಅಮರೇಶ ಕರಡಿ | ಬಿಜೆಪಿ | 72432 |
65 | ಶಿರಹಟ್ಟಿ | ರಾಮಪ್ಪ ಲಮಾಣಿ | ಬಿಜೆಪಿ | 91967 | ರಾಮಕೃಷ್ಣ ದೊಡ್ಡಮನಿ | ಕಾಂಗ್ರೆಸ್ | 61974 |
66 | ಗದಗ | ಹೆಚ್ ಕೆ ಪಾಟೀಲ | ಕಾಂಗ್ರೆಸ್ | 77699 | ಅನಿಲ ಮೆಣಸಿನಕಾಯಿ | ಬಿಜೆಪಿ | 75831 |
67 | ರೋಣ | ಕಳಕಪ್ಪ ಬಂಡಿ | ಬಿಜೆಪಿ | 83735 | ಗುರುಪಾದಗೌಡ ಪಾಟೀಲ | ಕಾಂಗ್ರೆಸ್ | 76401 |
68 | ನರಗುಂದ | ಸಿ.ಸಿ.ಪಾಟೀಲ | ಬಿಜೆಪಿ | 73045 | ಬಿ.ಆರ್.ಯಾವಗಲ್ | ಕಾಂಗ್ರೆಸ್ | 65066 |
69 | ನವಲಗುಂದ | ಶಂಕರ ಪಾಟೀಲ ಮುನೇನಕೊಪ್ಪ | ಬಿಜೆಪಿ | 65718 | ಎನ್.ಹೆಚ್.ಕೋನರೆಡ್ಡಿ | ಜೆಡಿಎಸ್ | 45197 |
70 | ಕುಂದಗೋಳ | ಕುಸುಮಾವತಿ ಶಿವಳ್ಳಿ | ಕಾಂಗ್ರೆಸ್ | 77640 | ಎಸ್.ಐ.ಚಿಕ್ಕನಗೌಡರ | ಬಿಜೆಪಿ | 76039 |
71 | ಧಾರವಾಡ | ಅಮೃತ ದೇಸಾಯಿ | ಬಿಜೆಪಿ | 85123 | ವಿನಯ ಕುಲಕರ್ಣಿ | ಕಾಂಗ್ರೆಸ್ | 64783 |
72 | ಹುಬ್ಬಳ್ಳಿ-ಧಾರವಾಡ(E) | ಅಬ್ಬಯ್ಯ ಪ್ರಸಾದ | ಕಾಂಗ್ರೆಸ್ | 77080 | ಚಂದ್ರಶೇಖರ ಗೋಕಾಕ | ಬಿಜೆಪಿ | 55613 |
73 | ಹುಬ್ಬಳ್ಳಿ-ಧಾರವಾಡ(C) | ಜಗದೀಶ ಶೆಟ್ಟರ್ | ಬಿಜೆಪಿ | 75794 | ಡಾ.ಮಹೇಶ ನಲವಾಡ | ಕಾಂಗ್ರೆಸ್ | 54488 |
74 | ಹುಬ್ಬಳ್ಳಿ ಧಾರವಾಡ(W) | ಅರವಿಂದ ಬೆಲ್ಲದ | ಬಿಜೆಪಿ | 96462 | ಮಹಮ್ಮದ್ ತಮಟಗಾರ | ಕಾಂಗ್ರೆಸ್ | 55975 |
75 | ಕಲಘಟಗಿ | ಸಿ.ಎಮ್.ನಿಂಬಣ್ಣನವರ | ಬಿಜೆಪಿ | 83267 | ಸಂತೋಷ ಲಾಡ್ | ಕಾಂಗ್ರೆಸ್ | 57270 |
76 | ಹಳಿಯಾಳ | ಆರ್.ವಿ.ದೇಶಪಾಂಡೆ | ಕಾಂಗ್ರೆಸ್ | 61577 | ಸುನಿಲ ಹೆಗಡೆ | ಬಿಜೆಪಿ | 56437 |
77 | ಕಾರವಾರ | ರೂಪಾಲಿ ನಾಯ್ಕ | ಬಿಜೆಪಿ | 60339 | ಆನಂದ ಅಸ್ನೋಟಿಕರ | ಜೆಡಿಎಸ್ | 46275 |
78 | ಕುಮಟಾ | ದಿನಕರ ಶೆಟ್ಟಿ | ಬಿಜೆಪಿ | 59392 | ಶಾರದ ಶೆಟ್ಟಿ | ಕಾಂಗ್ರೆಸ್ | 26642 |
79 | ಭಟ್ಕಳ | ಸುನಿಲ ನಾಯ್ಕ | ಬಿಜೆಪಿ | 83172 | ಮಂಕಾಳ ವೈದ್ಯ | ಕಾಂಗ್ರೆಸ್ | 77242 |
80 | ಸಿರ್ಸಿ | ವಿಶ್ವೇಶ್ವರ ಹೆಗಡೆ ಕಾಗೇರಿ | ಬಿಜೆಪಿ | 70595 | ಭೀಮಣ್ಣ ನಾಯಕ | ಕಾಂಗ್ರೆಸ್ | 53134 |
81 | ಯಲ್ಲಾಪುರ | ಅರೆಬೈಲ್ ಶಿವರಾಮ ಹೆಬ್ಬಾರ | ಕಾಂಗ್ರೆಸ್ | 66290 | ವಿ.ಎಸ್.ಪಾಟೀಲ | ಬಿಜೆಪಿ | 64807 |
82 | ಹಾನಗಲ್ | ಸಿ.ಎಮ್.ಉದಾಸಿ | ಬಿಜೆಪಿ | 80529 | ಶ್ರೀನಿವಾಸ ಮಾನೆ | ಕಾಂಗ್ರೆಸ್ | 74015 |
83 | ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ | ಬಿಜೆಪಿ | 83868 | ಸೈಯದ್ ಖಾದ್ರಿ | ಕಾಂಗ್ರೆಸ್ | 74603 |
84 | ಹಾವೇರಿ | ನೆಹರು ಓಲೇಕಾರ | ಬಿಜೆಪಿ | 86565 | ರುದ್ರಪ್ಪ ಲಮಾಣಿ | ಕಾಂಗ್ರೆಸ್ | 75261 |
85 | ಬ್ಯಾಡಗಿ | ವಿರೂಪಕ್ಷಪ್ಪ ಬಳ್ಳಾರಿ | ಬಿಜೆಪಿ | 91721 | ಎಸ್.ಆರ್.ಪಾಟೀಲ | ಕಾಂಗ್ರೆಸ್ | 70450 |
86 | ಹಿರೇಕೇರೂರು | ಬಿ.ಸಿ.ಪಾಟೀಲ | ಕಾಂಗ್ರೆಸ್ | 72461 | ಯು.ಬಿ.ಬಣಕಾರ | ಬಿಜೆಪಿ | 71906 |
87 | ರಾಣಿಬೆನ್ನೂರು | ಆರ್.ಶಂಕರ | ಕೆಪಿಜೆಪಿ | 63910 | ಕೆ.ಬಿ.ಕೋಳಿವಾಡ | ಕಾಂಗ್ರೆಸ್ | 59572 |
88 | ಹಡಗಲಿ | ಪಿ.ಟಿ.ಪರಮೇಶ್ವರ ನಾಯ್ಕ | ಕಾಂಗ್ರೆಸ್ | 54097 | ಓದೋ ಗಂಗಪ್ಪ | ಸ್ವತಂತ್ರ | 44919 |
89 | ಹಗರಿಬೊಮ್ಮನಹಳ್ಳಿ | ಎಲ್.ಬಿ.ಪಿ.ಭೀಮನಾಯ್ಕ | ಕಾಂಗ್ರೆಸ್ | 78337 | ನೇಮಿರಾಜ ನಾಯ್ಕ | ಬಿಜೆಪಿ | 71105 |
90 | ವಿಜಯನಗರ | ಆನಂದ ಸಿಂಗ್ | ಕಾಂಗ್ರೆಸ್ | 83214 | ಎಚ್.ಆರ್.ಗವಿಯಪ್ಪ | ಬಿಜೆಪಿ | 74986 |
91 | ಕಂಪ್ಲಿ | ಜೆ.ಎನ್.ಗಣೇಶ | ಕಾಂಗ್ರೆಸ್ | 80592 | ಟಿ.ಹೆಚ್.ಸುರೇಶ ಬಾಬು | ಬಿಜೆಪಿ | 75037 |
92 | ಸಿರಗುಪ್ಪ | ಎಮ್.ಎಸ್.ಸೋಮಲಿಂಗಪ್ಪ | ಬಿಜೆಪಿ | 82546 | ಬಿ.ಮುರಳಿಕೃಷ್ಣ | ಕಾಂಗ್ರೆಸ್ | 61275 |
93 | ಬಳ್ಳಾರಿ | ಬಿ.ನಾಗೇಂದ್ರ | ಕಾಂಗ್ರೆಸ್ | 79186 | ಸಣ್ಣ ಫಕೀರಪ್ಪ | ಬಿಜೆಪಿ | 76507 |
94 | ಬಳ್ಳಾರಿ ನಗರ | ಜಿ.ಸೋಮಶೇಖರ ರೆಡ್ಡಿ | ಬಿಜೆಪಿ | 76589 | ಅನಿಲ ಲಾಡ್ | ಕಾಂಗ್ರೆಸ್ | 60434 |
95 | ಸಂಡೂರು | ಇ.ತುಕಾರಾಮ್ | ಕಾಂಗ್ರೆಸ್ | 78106 | ಡಿ.ರಾಘವೇಂದ್ರ | ಬಿಜೆಪಿ | 64096 |
96 | ಕೂಡ್ಲಿಗಿ | ಎನ್.ವಾಯ್.ಗೋಪಾಲಕೃಷ್ಣ | ಬಿಜೆಪಿ | 50085 | ಎನ್.ಟಿ.ಬೊಮ್ಮಣ್ಣ | ಜೆಡಿಎಸ್ | 39272 |
97 | ಮೊಳಕಾಲ್ಮೂರು | ಶ್ರೀರಾಮಲು | ಬಿಜೆಪಿ | 84018 | ಡಾ.ಬಿ.ಯೋಗೇಶ ಬಾಬು | ಸ್ವತಂತ್ರ | 41973 |
98 | ಚಳ್ಳಕೆರೆ | ಟಿ.ರಘುಮೂರ್ತಿ | ಕಾಂಗ್ರೆಸ್ | 72874 | ರವೀಶಕುಮಾರ | ಜೆಡಿಎಸ್ | 59335 |
99 | ಚಿತ್ರದುರ್ಗ | ಜಿ.ಹೆಚ್.ತಿಪ್ಪಾರೆಡ್ಡಿ | ಬಿಜೆಪಿ | 82896 | ಕೆ.ಸಿ.ವಿರೇಂದ್ರ | ಜೆಡಿಎಸ್ | 49911 |
100 | ಹಿರಿಯೂರು | ಕೆ.ಪೂರ್ಣಿಮಾ ಶ್ರೀನಿವಾಸ | ಬಿಜೆಪಿ | 77733 | ಡಿ.ಸುಧಾಕರ | ಕಾಂಗ್ರೆಸ್ | 64858 |
101 | ಹೊಸದುರ್ಗ | ಗೂಳಿಹಟ್ಟಿ ಶೇಖರ | ಬಿಜೆಪಿ | 90562 | ಬಿ.ಜಿ.ಗೋವಿಂದಪ್ಪ | ಕಾಂಗ್ರೆಸ್ | 64570 |
102 | ಹೊಳಲ್ಕೆರೆ | ಎಂ.ಚಂದ್ರಪ್ಪ | ಬಿಜೆಪಿ | 107976 | ಹೆಚ್.ಆಂಜನೇಯ | ಕಾಂಗ್ರೆಸ್ | 69036 |
103 | ಜಗಳೂರು | ಎಸ್.ವಿ.ರಾಮಚಂದ್ರ | ಬಿಜೆಪಿ | 78948 | ಹೆಚ್.ಪಿ. ರಾಜೇಶ್ | ಕಾಂಗ್ರೆಸ್ | 49727 |
104 | ಹರಪನಹಳ್ಳಿ | ಜಿ.ಕರುಣಾಕರ ರೆಡ್ಡಿ | ಬಿಜೆಪಿ | 67603 | ಎಂ.ಪಿ.ರವೀಂದ್ರ | ಕಾಂಗ್ರೆಸ್ | 57956 |
105 | ಹರಿಹರ | ಎಸ್.ರಾಮಪ್ಪ | ಕಾಂಗ್ರೆಸ್ | 64801 | ಪಿ.ಬಿ.ಹರೀಶ | ಬಿಜೆಪಿ | 57541 |
106 | ದಾವಣಗೆರೆ ಉತ್ತರ | ಎಸ್.ಎ.ರವೀಂದ್ರನಾಥ | ಬಿಜೆಪಿ | 76540 | ಎಸ್.ಎಸ್.ಮಲ್ಲಿಕಾರ್ಜುನ | ಕಾಂಗ್ರೆಸ್ | 72469 |
107 | ದಾವಣಗೆರೆ ದಕ್ಷಿಣ | ಶಾಮನೂರು ಶಿವಶಂಕರಪ್ಪ | ಕಾಂಗ್ರೆಸ್ | 71369 | ಯಶವಂತರಾವ್ ಜಾಧವ | ಬಿಜೆಪಿ | 55485 |
108 | ಮಾಯಕೊಂಡ | ಎನ್.ಲಿಂಗಣ್ಣ | ಬಿಜೆಪಿ | 50556 | ಕೆ.ಎಸ್.ಬಸವರಾಜ | ಕಾಂಗ್ರೆಸ್ | 44098 |
109 | ಚನ್ನಗಿರಿ | ಮಾಡಾಳು ವಿರೂಪಾಕ್ಷಪ್ಪ | ಬಿಜೆಪಿ | 73794 | ವಡ್ನಾಳ ರಾಜಣ್ಣ | ಕಾಂಗ್ರೆಸ್ | 48014 |
110 | ಹೊನ್ನಾಳಿ | ಎಮ್.ಪಿ.ರೇಣುಕಾಚಾರ್ಯ | ಬಿಜೆಪಿ | 80624 | ಡಿ.ಜಿ.ಶಾಂತನಗೌಡ | ಕಾಂಗ್ರೆಸ್ | 76391 |
111 | ಶಿವಮೊಗ್ಗ ಗ್ರಾಮೀಣ | ಕೆ.ಬಿ.ಅಶೋಕಕುಮಾರ | ಬಿಜೆಪಿ | 69326 | ಶಾರದ ಪೂರ್ಯನಾಯಕ | ಜೆಡಿಎಸ್ | 65549 |
112 | ಭದ್ರಾವತಿ | ಬಿ.ಕೆ.ಸಂಗಮೇಶ | ಕಾಂಗ್ರೆಸ್ | 75722 | ಎಂ.ಜೆ.ಅಪ್ಪಾಜಿ | ಜೆಡಿಎಸ್ | 64155 |
113 | ಶಿವಮೊಗ್ಗ | ಕೆ.ಎಸ್.ಈಶ್ವರಪ್ಪ | ಬಿಜೆಪಿ | 104027 | ಕೆ.ಬಿ.ಪ್ರಸನ್ನಕುಮಾರ | ಕಾಂಗ್ರೆಸ್ | 57920 |
114 | ತೀರ್ಥಹಳ್ಳಿ | ಅಗರ ಜ್ಯಾನೇಂದ್ರ | ಬಿಜೆಪಿ | 67527 | ಕಿಮ್ಮನೆ ರತ್ನಾಕರ | ಕಾಂಗ್ರೆಸ್ | 45572 |
115 | ಶಿಕಾರಿಪುರ | ಬಿ.ಎಸ್.ಯಡ್ಯೂರಪ್ಪ | ಬಿಜೆಪಿ | 86983 | ಗೋಣಿ ಮಾಲತೇಶ | ಕಾಂಗ್ರೆಸ್ | 51586 |
116 | ಸೊರಬ | ಎಸ್.ಕುಮಾರ ಬಂಗಾರಪ್ಪ | ಬಿಜೆಪಿ | 72091 | ಎಸ್. ಮಧು ಬಂಗಾರಪ್ಪ | ಜೆಡಿಎಸ್ | 58805 |
117 | ಸಾಗರ | ಹರತಾಳು ಹಾಲಪ್ಪ | ಬಿಜೆಪಿ | 78475 | ಕಾಗೋಡು ತಿಮ್ಮಪ್ಪ | ಕಾಂಗ್ರೆಸ್ | 70436 |
118 | ಬೈಂದೂರು | ಬಿ.ಎಮ್.ಸುಕುಮಾರ ಶೆಟ್ಟಿ | ಬಿಜೆಪಿ | 96029 | ಕೆ.ಗೋಪಾಲ ಪೂಜಾರಿ | ಕಾಂಗ್ರೆಸ್ | 71636 |
119 | ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ | ಬಿಜೆಪಿ | 103434 | ರಾಕೇಶ ಮಳ್ಳಿ | ಕಾಂಗ್ರೆಸ್ | 47029 |
120 | ಉಡುಪಿ | ಕೆ.ರಘುಪತಿ ಭಟ | ಬಿಜೆಪಿ | 84946 | ಪ್ರಮೋದ ಮಾದ್ವರಾಜ | ಕಾಂಗ್ರೆಸ್ | 72902 |
121 | ಕಾಪು | ಲಾಲಜಿ ಮೆಂಡನ್ | ಬಿಜೆಪಿ | 75893 | ವಿನಯ ಕುಮಾರ್ ಸೊರಕೆ | ಕಾಂಗ್ರೆಸ್ | 63976 |
122 | ಕಾರ್ಕಳ | ವಿ.ಸುನೀಲಕುಮಾರ | ಬಿಜೆಪಿ | 91245 | ಗೋಪಾಲ ಭಂಡಾರಿ | ಕಾಂಗ್ರೆಸ್ | 48679 |
123 | ಶೃಂಗೇರಿ | ಟಿ.ಡಿ.ರಾಜೇಗೌಡ | ಕಾಂಗ್ರೆಸ್ | 62780 | ಡಿ.ಎನ್.ಜೀವರಾಜ | ಬಿಜೆಪಿ | 60791 |
124 | ಮೂಡಿಗೆರೆ | ಎಮ್.ಪಿ.ಕುಮಾರಸ್ವಾಮಿ | ಬಿಜೆಪಿ | 58783 | ಮೊಟಮ್ಮ | ಕಾಂಗ್ರೆಸ್ | 46271 |
125 | ಚಿಕ್ಕಮಗಳೂರು | ಸಿ.ಟಿ.ರವಿ | ಬಿಜೆಪಿ | 70863 | ಬಿ.ಎಲ್.ಶಂಕರ | ಕಾಂಗ್ರೆಸ್ | 44549 |
126 | ತರೀಕೆರೆ | ಡಿ.ಎಸ್.ಸುರೇಶ | ಬಿಜೆಪಿ | 44940 | ಜಿ.ಹೆಚ್.ಶ್ರೀನಿವಾಸ | ಪಕ್ಷೇತರ | 33253 |
127 | ಕಡೂರು | ಕೆ.ಎಸ್.ಪ್ರಕಾಶ | ಬಿಜೆಪಿ | 62232 | ವೈ.ಎಸ್.ವಿ.ದತ್ತ | ಜೆಡಿಎಸ್ | 46860 |
128 | ಚಿಕ್ಕನಾಯಕನಹಳ್ಳಿ | ಜೆ.ಸಿ.ಮಧುಸ್ವಾಮಿ | ಬಿಜೆಪಿ | 69612 | ಸಿ.ಬಿ.ಸುರೇಶ ಬಾಬು | ಜೆಡಿಎಸ್ | 59335 |
129 | ತಿಪಟೂರು | ಬಿ.ಸಿ.ನಾಗೇಶ | ಬಿಜೆಪಿ | 61383 | ಕೆ.ಷಡಕ್ಷರಿ | ಕಾಂಗ್ರೆಸ್ | 35820 |
130 | ತುರುವೇಕೆರೆ | ಎ.ಎಸ್.ಜಯರಾಮ | ಬಿಜೆಪಿ | 60710 | ಎಂ.ಟಿ.ಕೃಷ್ಣಪ್ಪ | ಜೆಡಿಎಸ್ | 58661 |
131 | ಕುಣಿಗಲ್ | ಎಚ್.ಡಿ.ರಂಗನಾಥ | ಕಾಂಗ್ರೆಸ್ | 58697 | ಡಿ.ಕೃಷ್ಣಕುಮಾರ | ಬಿಜೆಪಿ | 53097 |
132 | ತುಮಕೂರು ನಗರ | ಜಿ.ಬಿ.ಜ್ಯೋತಿಗಣೇಶ | ಬಿಜೆಪಿ | 60421 | ಎನ್.ಗೋವಿಂದ ರಾಜು | ಕಾಂಗ್ರೆಸ್ | 55128 |
133 | ತುಮಕೂರು ಗ್ರಾಮೀಣ | ಡಿ.ಸಿ.ಗೌರಿಶಂಕರ | ಜೆಡಿಎಸ್ | 82740 | ಬಿ.ಸುರೇಶ ಗೌಡ | ಬಿಜೆಪಿ | 77100 |
134 | ಕೊರಟಗೆರೆ | ಡಾ.ಜಿ.ಪರಮೇಶ್ವರ | ಕಾಂಗ್ರೆಸ್ | 81598 | ಪಿ.ಆರ್.ಸುಧಾಕರ ಲಾಲ್ | ಜೆಡಿಎಸ್ | 73979 |
135 | ಗುಬ್ಬಿ | ಎಸ್.ಆರ್.ಶ್ರೀನಿವಾಸ | ಜೆಡಿಎಸ್ | 55572 | ಜಿ.ಎನ್.ಬೆಟ್ಟಸ್ವಾಮಿ | ಬಿಜೆಪಿ | 46491 |
136 | ಶಿರಾ | ಬಿ.ಸತ್ಯನಾರಾಯಣ | ಜೆಡಿಎಸ್ | 74338 | ಟಿ.ಬಿ.ಜಯಚಂದ್ರ | ಕಾಂಗ್ರೆಸ್ | 63973 |
137 | ಪಾವಗಡ | ವೆಂಕಟರಾಮಪ್ಪ | ಕಾಂಗ್ರೆಸ್ | 72974 | ಕೆ.ಎಂ.ತಿಮ್ಮರಾಯಪ್ಪ | ಜೆಡಿಎಸ್ | 72565 |
138 | ಮಧುಗಿರಿ | ಎಮ್.ವಿ.ವೀರಭದ್ರ | ಜೆಡಿಎಸ್ | 88521 | ಕ್ಯಾತಸಂದ್ರ ಎನ್.ರಾಜಣ್ಣ | ಕಾಂಗ್ರೆಸ್ | 69947 |
139 | ಗೌರಿಬಿದನೂರು | ಎನ್.ಹೆಚ್.ಶಿವಶಂಕರರೆಡ್ಡಿ | ಕಾಂಗ್ರೆಸ್ | 69000 | ಸಿ.ಆರ್.ನರಸಿಂಹಮೂರ್ತಿ | ಜೆಡಿಎಸ್ | 59832 |
140 | ಬಾಗೇಪಲ್ಲಿ | ಎಸ್.ಎನ್.ಸುಬ್ಬಾರೆಡ್ಡಿ | ಕಾಂಗ್ರೆಸ್ | 65710 | ಜಿ.ವಿ.ಶ್ರೀರಮರೆಡ್ಡಿ | ಸಿಪಿಎಂ | 51697 |
141 | ಚಿಕ್ಕಬಳ್ಳಾಪುರ | ಡಾ.ಕೆ.ಸುಧಾಕರ | ಕಾಂಗ್ರೆಸ್ | 82006 | ಕೆ.ಪಿ.ಬಚ್ಚೇಗೌಡ | ಜೆಡಿಎಸ್ | 51575 |
142 | ಶಿಡ್ಲಘಟ್ಟ | ಎಂ.ಮುನಿಯಪ್ಪ | ಕಾಂಗ್ರೆಸ್ | 76240 | ಬಿ.ಎನ್.ರವಿಕುಮಾರ | ಜೆಡಿಎಸ್ | 66531 |
143 | ಚಿಂತಾಮಣಿ | ಜೆ.ಕೆ.ಕೃಷ್ಣಾರೆಡ್ಡಿ | ಜೆಡಿಎಸ್ | 87753 | ಡಾ.ಎಮ್.ಸಿ.ಸುಧಾಕರ | ಬಿಪಿಜೆಪಿ | 82080 |
144 | ಶ್ರೀನಿವಾಸಪುರ | ಕೆ.ಆರ್.ರಮೇಶಕುಮಾರ | ಕಾಂಗ್ರೆಸ್ | 93571 | ಜಿ.ಕೆ.ವೆಂಕಟಶಿವಾರೆಡ್ಡಿ | ಜೆಡಿಎಸ್ | 83019 |
145 | ಮುಳಬಾಗಿಲು | ಹೆಚ್.ನಾಗೇಶ | ಪಕ್ಷೇತರ | 74213 | ಸಮೃದ್ಧಿ ಮಂಜುನಾಥ | ಜೆಡಿಎಸ್ | 67498 |
146 | ಕೆಜಿಎಫ್ | ರೂಪಕಲಾ.ಎಮ್. | ಕಾಂಗ್ರೆಸ್ | 71151 | ಅಶ್ವಿನಿ ಸಂಪಂಗಿ | ಬಿಜೆಪಿ | 30324 |
147 | ಬಂಗಾರಪೇಟೆ | ಎಸ್.ಎನ್.ನಾರಯಣಸ್ವಾಮಿ | ಕಾಂಗ್ರೆಸ್ | 70871 | ಎಮ್.ಮಲ್ಲೇಶ ಬಾಬು | ಜೆಡಿಎಸ್ | 49300 |
148 | ಕೋಲಾರ | ಕೆ.ಶ್ರೀನಿವಾಸಗೌಡ | ಜೆಡಿಎಸ್ | 82788 | ಸೈಯದ್ ಜಮೀರ್ ಪಾಷಾ | ಕಾಂಗ್ರೆಸ್ | 38537 |
149 | ಮಾಲೂರು | ಕೆ.ವಾಯ್.ನಂಜೇಗೌಡ | ಕಾಂಗ್ರೆಸ್ | 75677 | ಕೆ.ಎಸ್. ಮಂಜುನಾಥಗೌಡ | ಜೆಡಿಎಸ್ | 57762 |
150 | ಯಲಹಂಕ | ಎಸ್.ಆರ್.ವಿಶ್ವನಾಥ | ಬಿಜೆಪಿ | 120110 | ಎ.ಎಮ್.ಹಣುಮಂತೇಗೌಡ | ಜೆಡಿಎಸ್ | 77607 |
151 | ಕೆ.ಆರ್.ಪುರಂ | ಬಿ.ಎ.ಬಸವರಾಜ | ಕಾಂಗ್ರೆಸ್ | 135404 | ಎನ್.ಎಸ್.ನಂದೀಶರೆಡ್ಡಿ | ಬಿಜೆಪಿ | 102675 |
152 | ಬ್ಯಾಟರಾಯನಪುರ | ಕೃಷ್ಣ ಬೈರೇಗೌಡ | ಕಾಂಗ್ರೆಸ್ | 114964 | ಎ.ರವಿ | ಬಿಜೆಪಿ | 109293 |
153 | ಯಶವಂತಪುರ | ಎಸ್.ಟಿ.ಸೋಮಶೇಖರ | ಕಾಂಗ್ರೆಸ್ | 115273 | ಟಿ.ಎನ್.ಜವರಾಯಿಗೌಡ | ಜೆಡಿಎಸ್ | 104562 |
154 | ರಾಜರಾಜೇಶ್ವರಿನಗರ | ಮುನಿರತ್ನ | ಕಾಂಗ್ರೆಸ್ | 108064 | ಪಿ.ಎಮ್.ಮುನಿರಾಜುಗೌಡ | ಬಿಜೆಪಿ | 82572 |
155 | ದಾಸರಹಳ್ಳಿ | ಆರ್.ಮಂಜುನಾಥ | ಜೆಡಿಎಸ್ | 94044 | ಎಸ್.ಮುನಿರಾಜು | ಬಿಜೆಪಿ | 83369 |
156 | ಮಹಾಲಕ್ಷ್ಮಿ ಲೇಔಟ್ | ಕೆ.ಗೋಪಾಲಯ್ಯ | ಜೆಡಿಎಸ್ | 88218 | ಎನ್.ಎಲ್.ನರೇಂದ್ರಬಾಬು | ಬಿಜೆಪಿ | 47118 |
157 | ಮಲ್ಲೇಶ್ವರಂ | ಡಾ.ಸಿ.ಎನ್.ಅಶ್ವಥ ನಾರಾಯಣ | ಬಿಜೆಪಿ | 83130 | ಕೆಂಗಲ ಶೀಪಾದರೇಣು | ಕಾಂಗ್ರೆಸ್ | 29130 |
158 | ಹೆಬ್ಬಾಳ | ಬಿ.ಎಸ್.ಸುರೇಶ | ಕಾಂಗ್ರೆಸ್ | 74453 | ವಾಯ್.ಎ.ನಾರಾಯಣಸ್ವಾಮಿ | ಬಿಜೆಪಿ | 53313 |
159 | ಪುಲಕೇಶಿನಗರ | ಅಖಂಡ ಶ್ರೀನಿವಾಸಮೂರ್ತಿ | ಕಾಂಗ್ರೆಸ್ | 97574 | ಬಿ.ಪ್ರಸನ್ನಕುಮಾರ | ಜೆಡಿಎಸ್ | 15948 |
160 | ಸರ್ವಜ್ಞನಗರ | ಕೇಳಚಂದ್ರ ಜೋಶಫ್ ಜಾರ್ಜ್ | ಕಾಂಗ್ರೆಸ್ | 109955 | ಎಮ್.ಎನ್.ರೆಡ್ಡಿ | ಬಿಜೆಪಿ | 56651 |
161 | ಸಿ.ವಿ.ರಾಮನ್ ನಗರ | ಎಸ್.ರಘು | ಬಿಜೆಪಿ | 58887 | ಎಸ್.ಸಂಪತರಾಜ್ | ಕಾಂಗ್ರೆಸ್ | 46660 |
162 | ಶಿವಾಜಿನಗರ | ಆರ್.ರೋಷನ್ ಬೇಗ್ | ಕಾಂಗ್ರೆಸ್ | 59742 | ಕಟ್ಟಾ ಸುಭ್ರಮಣ್ಯ ನಾಯ್ಡು | ಬಿಜೆಪಿ | 44702 |
163 | ಶಾಂತಿನಗರ | ಎನ್.ಎ.ಹ್ಯಾರೀಸ್ | ಕಾಂಗ್ರೆಸ್ | 60009 | ಕೆ.ವಾಸುದೇವಮೂರ್ತಿ | ಬಿಜೆಪಿ | 41804 |
164 | ಗಾಂಧಿನಗರ | ದಿನೇಶ ಗುಂಡೂರಾವ್ | ಕಾಂಗ್ರೆಸ್ | 47354 | ಎ.ಆರ್.ಸಪ್ತಗಿರಿಗೌಡ | ಬಿಜೆಪಿ | 37284 |
165 | ರಾಜಾಜಿನಗರ | ಎಸ್.ಸುರೇಶಕುಮಾರ್ | ಬಿಜೆಪಿ | 56271 | ಜಿ.ಪದ್ಮಾವತಿ | ಕಾಂಗ್ರೆಸ್ | 46818 |
166 | ಗೋವಿಂದರಾಜ ನಗರ | ವಿ.ಸೋಮಣ್ಣ | ಬಿಜೆಪಿ | 79135 | ಪ್ರಿಯಕೃಷ್ಣ | ಕಾಂಗ್ರೆಸ್ | 67760 |
167 | ವಿಜಯನಗರ | ಎಂ.ಕೃಷ್ಣಪ್ಪ | ಕಾಂಗ್ರೆಸ್ | 73353 | ಎಚ್.ರವೀಂದ್ರ | ಬಿಜೆಪಿ | 70578 |
168 | ಚಾಮರಾಜಪೇಟ | ಬಿ.ಜೆಡ್.ಜಮೀರ್ ಅಹ್ಮದ್‌ಖಾನ್ | ಕಾಂಗ್ರೆಸ್ | 65339 | ಎಮ್.ಲಕ್ಷ್ಮಿನಾರಾಯಣ | ಬಿಜೆಪಿ | 32202 |
169 | ಚಿಕ್ಕಪೇಟೆ | ಉದಯ ಗರುಡಾಚಾರ | ಬಿಜೆಪಿ | 57312 | ಆರ್.ವಿ.ದೇವರಾಜ | ಕಾಂಗ್ರೆಸ್ | 49378 |
170 | ಬಸವನಗುಡಿ | ಎಲ್.ಎ.ರವಿಸುಬ್ರಮಣ್ಯ | ಬಿಜೆಪಿ | 76018 | ಕೆ.ಬಾಗೇಗೌಡ | ಜೆಡಿಎಸ್ | 38009 |
171 | ಪದ್ಮನಾಭನಗರ | ಆರ್.ಅಶೋಕ | ಬಿಜೆಪಿ | 77868 | ವಿ.ಕೆ.ಗೋಪಾಲ | ಜೆಡಿಎಸ್ | 45702 |
172 | ಬಿ.ಟಿ.ಎಂ.ಲೇಔಟ್ | ರಾಮಲಿಂಗಾರೆಡ್ಡಿ | ಕಾಂಗ್ರೆಸ್ | 67085 | ಲಲ್ಲೇಶ ರೆಡ್ಡಿ | ಬಿಜೆಪಿ | 46607 |
173 | ಜಯನಗರ | ಸೌಮ್ಯ ರೆಡ್ಡಿ | ಕಾಂಗ್ರೆಸ್ | 53411 | ಬಿ.ಎನ್.ಪ್ರಲ್ಹಾದ ಬಾಬು | ಬಿಜೆಪಿ | 49526 |
174 | ಮಹಾದೇವಪುರ | ಅರವಿಂದ ಲಿಂಬಾವಳಿ | ಬಿಜೆಪಿ | 141682 | ಎ.ಸಿ.ಶ್ರೀನಿವಾಸ | ಕಾಂಗ್ರೆಸ್ | 123898 |
175 | ಬೊಮ್ಮನಹಳ್ಳಿ | ಎಂ.ಸತೀಶ ರೆಡ್ಡಿ | ಬಿಜೆಪಿ | 111863 | ಸುಶ್ಮಾ ರಾಜಗೋಪಾಲ ರೆಡ್ಡಿ | ಕಾಂಗ್ರೆಸ್ | 64701 |
176 | ಬೆಂಗಳೂರು ದಕ್ಷಿಣ | ಎಂ.ಕೃಷ್ಣಪ್ಪ | ಬಿಜೆಪಿ | 152469 | ಆರ್.ಕೆ.ರಮೇಶ | ಕಾಂಗ್ರೆಸ್ | 122052 |
177 | ಆನೇಕಲ್ | ಬಿ.ಶಿವಣ್ಣ | ಕಾಂಗ್ರೆಸ್ | 113894 | ಎ.ನಾರಾಯಣಸ್ವಾಮಿ | ಬಿಜೆಪಿ | 105267 |
178 | ಹೊಸಕೋಟೆ | ಎಂ.ಟಿ.ಬಿ.ನಾಗರಾಜ | ಕಾಂಗ್ರೆಸ್ | 98824 | ಶರತ ಬಚ್ಚೇಗೌಡ | ಬಿಜೆಪಿ | 91227 |
179 | ದೇವನಹಳ್ಳಿ | ಎಲ್.ಎನ್.ನಾರಾಯಣಸ್ವಾಮಿ | ಜೆಡಿಎಸ್ | 86966 | ವೆಂಕಟಸ್ವಾಮಿ | ಕಾಂಗ್ರೆಸ್ | 69956 |
180 | ದೊಡ್ಡಬಳ್ಳಾಪುರ | ಟಿ.ವೆಂಕಟರಮಣಯ್ಯ | ಕಾಂಗ್ರೆಸ್ | 73225 | ಬಿ.ಮುನೇಗೌಡ | ಜೆಡಿಎಸ್ | 63280 |
181 | ನೆಲಮಂಗಲ | ಡಾ.ಕೆ.ಶ್ರೀನಿವಾಸಮೂರ್ತಿ | ಜೆಡಿಎಸ್ | 69277 | ಆರ್.ನಾರಾಯಣಸ್ವಾಮಿ | ಕಾಂಗ್ರೆಸ್ | 44956 |
182 | ಮಾಗಡಿ | ಎ.ಮಂಜುನಾಥ | ಜೆಡಿಎಸ್ | 119492 | ಹೆಚ್.ಸಿ.ಬಾಲಕೃಷ್ಣ | ಕಾಂಗ್ರೆಸ್ | 68067 |
183 | ರಾಮನಗರ | ಅನಿತಾ ಕುಮಾರಸ್ವಾಮಿ | ಜೆಡಿಎಸ್ | 125043 | ಎಲ್.ಚಂದ್ರಶೇಖರ | ಬಿಜೆಪಿ | 15906 |
184 | ಕನಕಪುರ | ಡಿ.ಕೆ.ಶಿವಕುಮಾರ | ಕಾಂಗ್ರೆಸ್ | 127552 | ನಾರಾಯಣಗೌಡ | ಜೆಡಿಎಸ್ | 47643 |
185 | ಚನ್ನಪಟ್ಟಣ | ಎಚ್.ಡಿ.ಕುಮಾರಸ್ವಾಮಿ | ಜೆಡಿಎಸ್ | 87995 | ಸಿ.ಪಿ.ಯೋಗೇಶ್ವರ | ಬಿಜೆಪಿ | 66465 |
186 | ಮಳವಳ್ಳಿ | ಡಾ.ಕೆ.ಅನ್ನದಾನಿ | ಜೆಡಿಎಸ್ | 103038 | ಪಿ.ಎಂ.ನರೇಂದ್ರಸ್ವಾಮಿ | ಕಾಂಗ್ರೆಸ್ | 76278 |
187 | ಮದ್ದೂರು | ಡಿ.ಸಿ.ತಮ್ಮಣ್ಣ | ಜೆಡಿಎಸ್ | 109239 | ಮಧು ಜಿ.ಮಾದೇಗೌಡ | ಕಾಂಗ್ರೆಸ್ | 55209 |
188 | ಮೇಲುಕೋಟೆ | ಸಿ.ಎಸ್.ಪುಟ್ಟರಾಜು | ಜೆಡಿಎಸ್ | 96003 | ದರ್ಶನ ಪುಟ್ಟಣ್ಣಯ್ಯ | ಸ್ವರಾಜ | 73779 |
189 | ಮಂಡ್ಯ | ಎಮ್.ಶ್ರೀನಿವಾಸ | ಜೆಡಿಎಸ್ | 69421 | ಪಿ.ರವಿಕುಮಾರ | ಕಾಂಗ್ರೆಸ್ | 47813 |
190 | ಶ್ರೀರಂಗಪಟ್ಟಣ | ರವೀಂದ್ರ ಶ್ರೀಕಂಠಯ್ಯ | ಜೆಡಿಎಸ್ | 101307 | ಎ.ಬಿ.ರಮೇಶ ಬಂಡಿಸಿದ್ದೇಗೌಡ | ಕಾಂಗ್ರೆಸ್ | 57619 |
191 | ನಾಗಮಂಗಲ | ಸುರೇಶಗೌಡ | ಜೆಡಿಎಸ್ | 112396 | ಎನ್. ಚೆಲುವರಾಯಸ್ವಾಮಿ | ಕಾಂಗ್ರೆಸ್ | 64729 |
192 | ಕೃಷ್ಣರಾಜಪೇಟೆ | ನಾರಾಯಣಗೌಡ | ಜೆಡಿಎಸ್ | 88016 | ಕೆ.ಬಿ.ಚಂದ್ರಶೇಖರ | ಕಾಂಗ್ರೆಸ್ | 70897 |
193 | ಶ್ರವಣಬೆಳಗೊಳ | ಸಿ.ಎನ್.ಬಾಲಕೃಷ್ಣ | ಜೆಡಿಎಸ್ | 105516 | ಸಿ.ಎಸ್.ಪುಟ್ಟೇಗೌಡ | ಕಾಂಗ್ರೆಸ್ | 52504 |
194 | ಅರಸೀಕೆರೆ | ಕೆ.ಎಂ.ಶಿವಲಿಂಗೇಗೌಡ | ಜೆಡಿಎಸ್ | 93986 | ಜಿ.ಬಿ.ಗಂಗಾಧರ | ಕಾಂಗ್ರೆಸ್ | 50297 |
195 | ಬೇಲೂರು | ಕೆ.ಎಸ್.ಲಿಂಗೇಶ | ಜೆಡಿಎಸ್ | 64268 | ಎಚ್.ಕೆ.ಸುರೇಶ | ಬಿಜೆಪಿ | 44578 |
196 | ಹಾಸನ | ಪ್ರೀತಂಗೌಡ | ಬಿಜೆಪಿ | 63348 | ಹೆಚ್.ಎಸ್.ಪ್ರಕಾಶ | ಜೆಡಿಎಸ್ | 50342 |
197 | ಹೊಳೆನರಸೀಪುರ | ಹೆಚ್.ಡಿ.ರೇವಣ್ಣ | ಜೆಡಿಎಸ್ | 108541 | ಬಿ.ಪಿ.ಮಂಜೇಗೌಡ | ಕಾಂಗ್ರೆಸ್ | 64709 |
198 | ಅರಕಲಗೂಡು | ಎ.ಟಿ.ರಾಮಸ್ವಾಮಿ | ಜೆಡಿಎಸ್ | 85064 | ಎ.ಮಂಜು | ಕಾಂಗ್ರೆಸ್ | 74411 |
199 | ಸಕಲೇಶಪುರ | ಹೆಚ್.ಕೆ.ಕುಮಾರಸ್ವಾಮಿ | ಜೆಡಿಎಸ್ | 62262 | ಸೋಮಶೇಖರ ಜಯರಾಜ | ಬಿಜೆಪಿ | 57320 |
200 | ಬೆಳ್ತಂಗಡಿ | ಹರೀಶ ಪೂಂಜಾ | ಬಿಜೆಪಿ | 98417 | ಕೆ.ವಸಂತ ಬಂಗೇರ | ಕಾಂಗ್ರೆಸ್ | 75443 |
201 | ಮೂಡುಬಿದಿರೆ | ಉಮಾಕಂತ ಕೋತಿನ | ಬಿಜೆಪಿ | 87444 | ಕೆ.ಅಭಯಚಂದ್ರ | ಕಾಂಗ್ರೆಸ್ | 57645 |
202 | ಮಂಗಳೂರು ನಗರ ಉತ್ತರ | ಡಾ.ಭರತ ಶೆಟ್ಟಿ | ಬಿಜೆಪಿ | 98648 | ಬಿ.ಎ.ಮೊಯಿನುದ್ದೀನ್ ಬಾವ | ಕಾಂಗ್ರೆಸ್ | 72000 |
203 | ಮಂಗಳೂರು ನಗರ ದಕ್ಷಿಣ | ಡಿ.ವೇದವ್ಯಾಸ ಕಾಮತ | ಬಿಜೆಪಿ | 86545 | ಜೆ.ಆರ್.ಲೋಬೊ | ಕಾಂಗ್ರೆಸ್ | 70470 |
204 | ಮಂಗಳೂರು | ಯು.ಟಿ.ಖಾದರ್ | ಕಾಂಗ್ರೆಸ್ | 80813 | ಸಂತೋಷಕುಮಾರ ರೈ ಬೊಲಿಯಾರು | ಬಿಜೆಪಿ | 61074 |
205 | ಬಂಟವಾಳ | ಯು.ರಾಜೇಶ ನಾಯ್ಕ | ಬಿಜೆಪಿ | 97802 | ಬಿ.ರಾಮನಾಥ ರೈ | ಕಾಂಗ್ರೆಸ್ | 81831 |
206 | ಪುತ್ತೂರು | ಸಂಜೀವ ಮಠಂದೂರ | ಬಿಜೆಪಿ | 90073 | ಶಕುಂತಲಾ ಶೆಟ್ಟಿ | ಕಾಂಗ್ರೆಸ್ | 70596 |
207 | ಸುಳ್ಯ | ಎಸ್.ಅಂಗಾರ | ಬಿಜೆಪಿ | 95205 | ಡಾ.ಬಿ.ರಘು | ಕಾಂಗ್ರೆಸ್ | 69137 |
208 | ಮಡಿಕೇರಿ | ಎಂ.ಪಿ.ಅಪ್ಪಚ್ಚು(ರಂಜನ್) | ಬಿಜೆಪಿ | 70631 | ಬಿ.ಎ.ಜಿವಿಜಯ | ಕಾಂಗ್ರೆಸ್ | 54616 |
209 | ವಿರಾಜಪೇಟೆ | ಕೆ.ಜಿ.ಬೋಪಯ್ಯ | ಬಿಜೆಪಿ | 77944 | ಸಿ.ಎಸ್.ಅರುಣ ಮಾಚಯ್ಯ | ಕಾಂಗ್ರೆಸ್ | 64591 |
210 | ಪಿರಿಯಾಪಟ್ಟಣ | ಕೆ.ಮಹಾದೇವ | ಜೆಡಿಎಸ್ | 77770 | ಕೆ.ವೆಂಕಟೇಶ | ಕಾಂಗ್ರೆಸ್ | 70277 |
211 | ಕೃಷ್ಣರಾಜನಗರ | ಸಾ.ರಾ.ಮಹೇಶ | ಜೆಡಿಎಸ್ | 85011 | ಡಿ.ರವಿಶಂಕರ | ಕಾಂಗ್ರೆಸ್ | 83232 |
212 | ಹುಣಸೂರು | ಹೆಚ್.ವಿಶ್ವನಾಥ | ಜೆಡಿಎಸ್ | 91667 | ಹೆಚ್.ಪಿ.ಮಂಜುನಾಥ | ಕಾಂಗ್ರೆಸ್ | 83092 |
213 | ಹೆಗ್ಗಡದೇವನಕೋಟೆ | ಸಿ.ಅನಿಲ | ಕಾಂಗ್ರೆಸ್ | 76652 | ಚಿಕ್ಕಣ್ಣ | ಜೆಡಿಎಸ್ | 54559 |
214 | ನಂಜನಗೂಡು | ಬಿ.ಹರ್ಷವರ್ಧನ | ಬಿಜೆಪಿ | 78030 | ಕಳಲೆ ಎನ್.ಕೇಶವಮೂರ್ತಿ | ಕಾಂಗ್ರೆಸ್ | 65551 |
215 | ಚಾಮುಂಡೇಶ್ವರಿ | ಜಿ.ಟಿ.ದೇವೇಗೌಡ | ಜೆಡಿಎಸ್ | 121325 | ಸಿದ್ದರಾಮಯ್ಯ | ಕಾಂಗ್ರೆಸ್ | 85283 |
216 | ಕೃಷ್ಣರಾಜ | ಎಸ್.ಎ.ರಾಮದಾಸ | ಬಿಜೆಪಿ | 78573 | ಎಂ.ಕೆ.ಸೋಮಶೇಖರ | ಕಾಂಗ್ರೆಸ್ | 52226 |
217 | ಚಾಮರಾಜ | ಎಲ್.ನಾಗೇಂದ್ರ | ಬಿಜೆಪಿ | 51683 | ವಾಸು | ಕಾಂಗ್ರೆಸ್ | 36747 |
218 | ನರಸಿಂಹರಾಜ | ತನ್ವೀರ್ ಸೇಠ್ | ಕಾಂಗ್ರೆಸ್ | 62268 | ಎಸ್.ಸತೀಶ | ಬಿಜೆಪಿ | 44141 |
219 | ವರುಣಾ | ಯತೀಂದ್ರ ಸಿದ್ದರಾಮಯ್ಯ | ಕಾಂಗ್ರೆಸ್ | 96435 | ಟಿ.ಬಸವರಾಜು | ಬಿಜೆಪಿ | 37819 |
220 | ಟಿ.ನರಸೀಪುರ | ಎಮ್.ಅಶ್ವಿನಕುಮಾರ | ಜೆಡಿಎಸ್ | 83929 | ಡಾ.ಹೆಚ್.ಸಿ.ಮಹದೇವಪ್ಪ | ಕಾಂಗ್ರೆಸ್ | 55451 |
221 | ಹನೂರು | ಆರ್.ನರೇಂದ್ರ | ಕಾಂಗ್ರೆಸ್ | 60444 | ಡಾ.ಪ್ರೀತಂ ನಾಗಪ್ಪ | ಬಿಜೆಪಿ | 56931 |
222 | ಕೊಳ್ಳೇಗಾಲ | ಎನ್.ಮಹೇಶ | ಬಿ.ಎಸ್.ಪಿ | 71792 | ಎ.ಆರ್.ಕೃಷ್ಣಮೂರ್ತಿ | ಕಾಂಗ್ರೆಸ್ | 52338 |
223 | ಚಾಮರಾಜನಗರ | ಸಿ.ಪುಟ್ಟರಂಗಶೆಟ್ಟಿ | ಕಾಂಗ್ರೆಸ್ | 75963 | ಕೆ.ಆರ್.ಮಲ್ಲಿಕಾರ್ಜುನಪ್ಪ | ಬಿಜೆಪಿ | 71050 |
224 | ಗುಂಡ್ಲುಪೇಟೆ | ಸಿ.ಎಸ್.ನಿರಂಜನಕುಮಾರ | ಬಿಜೆಪಿ | 94151 | ಡಾ.ಎಂ.ಸಿ.ಮೋಹನಕುಮಾರಿ(ಗೀತಾ) | ಕಾಂಗ್ರೆಸ್ | 77467 |
2019ರ ಉಪಚುನಾವಣೆಯಲ್ಲಿ ಆಯ್ಕೆಯಾದವರು
ಬದಲಾಯಿಸಿಕ್ರ.ಸಂ. | ವಿಧಾನಸಭಾ ಕ್ಷೇತ್ರ | ಆಯ್ಕೆಯಾದ ಸದಸ್ಯರು | ಪಕ್ಷ | ಮತಗಳು | ಹತ್ತಿರದ ಸ್ಪರ್ಧಿ | ಪಕ್ಷ | ಮತಗಳು |
---|---|---|---|---|---|---|---|
1 | ಅಥಣಿ | ಮಹೇಶ ಕುಮಟಳ್ಳಿ | ಬಿಜೆಪಿ | 99203 | ಗಜಾನನ ಮಂಗಸೂಳಿ | ಕಾಂಗ್ರೆಸ್ | 59214 |
2 | ಕಾಗವಾಡ | ಶ್ರೀಮಂತ ಪಾಟೀಲ | ಬಿಜೆಪಿ | 76952 | ಭರಮಗೌಡ ಕಾಗೆ | ಕಾಂಗ್ರೆಸ್ | 58368 |
3 | ಗೋಕಾಕ | ರಮೇಶ ಜಾರಕಿಹೊಳಿ | ಬಿಜೆಪಿ | 87450 | ಲಕನ ಜಾರಕಿಹೊಳಿ | ಕಾಂಗ್ರೆಸ್ | 58444 |
4 | ಯಲ್ಲಾಪುರ | ಅರೆಬೈಲ್ ಶಿವರಾಮ ಹೆಬ್ಬಾರ | ಬಿಜೆಪಿ | 80442 | ಭೀಮಣ್ಣ ನಾಯಕ | ಬಿಜೆಪಿ | 49034 |
ನೋಡಿ
ಬದಲಾಯಿಸಿಹೆಚ್ಚಿನ ಓದಿಗೆ
ಬದಲಾಯಿಸಿ- ಕರ್ನಾಟಕದ ಜಾತಿ ರಾಜನೀಯ;;ಮನುಷ್ಯ ಜಾತಿಗೆ ಜಾತಿಯೇ ಮಹಾಬಲಂ!;ರವೀಂದ್ರ ಭಟ್ಟ;3 Jun, 2018 Archived 2018-06-08 ವೇಬ್ಯಾಕ್ ಮೆಷಿನ್ ನಲ್ಲಿ.
- elections in India
- ಕರ್ನಾಟಕ ವಿಧಾನಸಭೆ ಚುನಾವಣೆ, 2018, ವಿಜೇತರು Archived 2018-05-20 ವೇಬ್ಯಾಕ್ ಮೆಷಿನ್ ನಲ್ಲಿ.
- ಭರವಸೆಗಳನ್ನು ಈಡೇರಿಸಲು ಬೆಟ್ಟದಂತಹ ಸವಾಲುಗಳನ್ನು ಎದುರಿಸಬೇಕಾಗಿದೆ.;ವೈ.ಗ. ಜಗದೀಶ್;22 May, 2018 Archived 2018-05-24 ವೇಬ್ಯಾಕ್ ಮೆಷಿನ್ ನಲ್ಲಿ.
- ರಾಜ್ಯದಲ್ಲಿನ ಮೀಸಲು ಕ್ಷೇತ್ರ ಮತ್ತು ದಲಿತ ರಾಜಕಾರಣ; ವಾದಿರಾಜ್; 4 Jun, 2018 Archived 2018-06-08 ವೇಬ್ಯಾಕ್ ಮೆಷಿನ್ ನಲ್ಲಿ.
- ಬಿಜೆಪಿ ಸರ್ಕಾರದ ರಚನೆ ೨೦೧೯ ಆಗಸ್ಟ್:‘ಆಪರೇಷನ್’ ಪ್ರಶ್ನೆಗಳೆಲ್ಲ ಇಷ್ಟುಬೇಗ ಮರೆತವೇ?;ನಾರಾಯಣ ಎ.
ಉಲ್ಲೇಖಗಳು
ಬದಲಾಯಿಸಿ- ↑ "Upcoming Elections in India". Archived from the original on 2015-11-14. Retrieved 2017-03-13.
- ↑ https://www.karnataka.com/govt/assembly-elections-2018-number-of-voters-in-karnataka/ Assembly Elections 2018 – Number of Voters in Karnataka; MARCH 30, 2018 BY MADUR
- ↑ http://zeenews.india.com/karnataka/karnataka-assembly-elections-2018-2655-candidates-in-the-fray-2103632.html Karnataka assembly elections 2018: 2,655 candidates in the fray
- ↑ "Karnataka Assembly Elections: JD(S) and BSP to launch joint campaign". Karnataka Elections 2018. Retrieved 2018-04-19.
- ↑ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮೇ 28ಕ್ಕೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ; 11 May, 2018
- ↑ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗರ ಸಂಭ್ರಮ1 Jun, 2018
- ↑ ಜಯನಗರ ಕ್ಷೇತ್ರದಲ್ಲಿ ಚುನಾವಣೆ ಮುಂದೂಡಿಕೆ; ಪ್ರಜಾವಾಣಿ ವಾರ್ತೆ ;4 May, 2018
- ↑ [೧][ಶಾಶ್ವತವಾಗಿ ಮಡಿದ ಕೊಂಡಿ]
- ↑ ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ;13 May, 2018
- ↑ ಮತಗಟ್ಟೆ ಸಮೀಕ್ಷೆ: ಬಿಜೆಪಿ ಮುನ್ನಡೆ?-13 May, 2018
- ↑ ಮತದಾನೋತ್ತರ ಸಮೀಕ್ಷೆ: ರಾಜ್ಯದಲ್ಲಿ ಅತಂತ್ರ ವಿಧಾನಸಭೆ?--12 May, 2018
- ↑ ಜನತಂತ್ರ: ಶೇ 70ಕ್ಕೂ ಹೆಚ್ಚು ಜನರ ಸಂಭ್ರಮ[ಶಾಶ್ವತವಾಗಿ ಮಡಿದ ಕೊಂಡಿ]
- ↑ ಶಾಸಕ ಸಿದ್ದು ನ್ಯಾಮಗೌಡ ಸಾವು; 28 May, 2018
- ↑ "ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ |ಸೌಮ್ಯಾರೆಡ್ಡಿ;;13 Jun, 2018". Archived from the original on 2018-06-13. Retrieved 2018-06-14.
- ↑ 3 ಲೋಕಸಭೆ ಹಾಗೂ 2 ವಿಧಾನಸಭಾ ಉಪಚುನಾವಣೆ ಫಲಿತಾಂಶ Archived 2018-11-10 ವೇಬ್ಯಾಕ್ ಮೆಷಿನ್ ನಲ್ಲಿ.
- ↑ https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
- ↑ ೧೭.೦ ೧೭.೧ ೧೭.೨ https://elections.prajavani.net/ Archived 2019-09-13 ವೇಬ್ಯಾಕ್ ಮೆಷಿನ್ ನಲ್ಲಿ. ಕರ್ನಾಟಕ ವಿಧಾನಸಭಾ ಚುನಾವಣೆ 2018
- ↑ https://kannada.oneindia.com/karnataka-assembly-elections/ ಕರ್ನಾಟಕ ವಿಧಾನಸಭೆ ಚುನಾವಣೆ 2018
- ↑ ಬಿಜೆಪಿಗಿಂತ ಹೆಚ್ಚು ಮತ ಪಡೆದ ಕಾಂಗ್ರೆಸ್![ಶಾಶ್ವತವಾಗಿ ಮಡಿದ ಕೊಂಡಿ]
- ↑ http://www.prajavani.net/news/article/2018/05/16/573246.html ತೀರ್ಪು ಅತಂತ್ರ: ಸರ್ಕಾರ ರಚನೆಗೆ ತಂತ್ರ; 16 May, 2018
- ↑ ೨೧.೦ ೨೧.೧ [SK%20Daily%20Samyukta%20Karnataka%20Bengaluru%20,%20Wed,%2016%20May%2018.html#page/1/1 ಜನಾದೇಶ ಜಯಶಿಲರು]
- ↑ ನ.3ಕ್ಕೆ ರಾಜ್ಯದ 3 ಲೋಕಸಭೆ, 2 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ;06 ಅಕ್ಟೋಬರ್ 2018,
- ↑ "ಯಡಿಯೂರಪ್ಪ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ 17 May, 2018". Archived from the original on 2018-05-17. Retrieved 2018-05-17.
- ↑ ದೇವರು, ರೈತರ ಹೆಸರಿನಲ್ಲಿ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ;17 May, 2018
- ↑ ಯಡಿಯೂರಪ್ಪ ಪ್ರಮಾಣ ವಚನ ಇಂದು;17 May, 2018
- ↑ ರಾಜ್ಯಪಾಲರಿಗೆ ಕಾಂಗ್ರೆಸ್–ಜೆಡಿಎಸ್ ಶಾಸಕರ ಮನವಿ; 117 ಶಾಸಕರ ಸಹಿ ಒಳಗೊಂಡ ಪಟ್ಟಿ; 16 May, 2018
- ↑ "ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ: ಹಸ್ತಕ್ಷೇಪ ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್;17 May, 2018". Archived from the original on 2018-05-17. Retrieved 2018-05-17.
- ↑ ವಿಧಾನಸೌಧದ ಗಾಂಧಿಪ್ರತಿಮೆ ಮುಂದೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ;17 May, 2018
- ↑ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆಗೆ ಅವಕಾಶ ನೀಡುವುದಿಲ್ಲ 16 May, 2018
- ↑ "ಇಂದೇ ವಿಶ್ವಾಸಮತ: 'ಸುಪ್ರೀಂ' ಆದೇಶ= 19 May, 2018". Archived from the original on 2018-05-20. Retrieved 2018-05-19.
- ↑ ವಿಶ್ವಾಸಮತ ಯಾಚನೆ ನಿಯಮಾನುಸಾರ ನಡೆಯಲಿ. 19 May, 2018 Archived 2018-05-20 ವೇಬ್ಯಾಕ್ ಮೆಷಿನ್ ನಲ್ಲಿ..
- ↑ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ.ಬೊಪಯ್ಯ ಪ್ರಮಾಣವಚನ18 May, 2018
- ↑ http://www.prajavani.net/news/article/2018/05/19/573845.html Archived 2018-05-22 ವೇಬ್ಯಾಕ್ ಮೆಷಿನ್ ನಲ್ಲಿ. ಹಂಗಾಮಿ ಸ್ಪೀಕರ್ ಕೆಲಸವೇನು? 19 May, 2018]
- ↑ ವಿಶ್ವಾಸಮತ ಯಾಚಿಸದೆ ರಾಜೀನಾಮೆ ನೀಡಿದ ಯಡಿಯೂರಪ್ಪ; 19 May, 2018
- ↑ ಮುಖ್ಯಮಂತ್ರಿಯಾಗಿ ಸೋಮವಾರ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ; 19 May, 2018
- ↑ ವಿಧಾನಸೌಧ ಮುಂಭಾಗವೇ ಕುಮಾರಸ್ವಾಮಿ ಪ್ರಮಾಣ ವಚನ; 20 May, 2018
- ↑ "ಲಿಂಗಾಯತರಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲು ಆಗ್ರಹ; 21 May, 2018". Archived from the original on 2018-05-22. Retrieved 2018-05-21.
- ↑ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿಯಾಗಿ ಪರಮೇಶ್ವರ್ ಪ್ರಮಾಣವಚನ; 23 May, 2018
- ↑ ಮಹಾಮೈತ್ರಿಗೆ ನಾಂದಿ; 24 May, 2018
- ↑ ವಿಧಾನಸಭೆ ಸಭಾಧ್ಯಕ್ಷರಾಗಿ ಕೆ.ಆರ್.ರಮೇಶ್ ಕುಮಾರ್ ಆಯ್ಕೆ25 May, 2018
- ↑ ವಿಶ್ವಾಸಮತ ಸಾಬೀತುಪಡಿಸಿದ ‘ಮೈತ್ರಿ’ ಸರ್ಕಾರ; 25 May, 2018
- ↑ "ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರ ಕಿರುಪರಿಚಯ;7 Jun, 2018". Archived from the original on 2018-06-11. Retrieved 2018-06-09.
ಹೊರ ಕೊಂಡಿಗಳು
ಬದಲಾಯಿಸಿ- Election Commission of India Archived 2017-12-05 ವೇಬ್ಯಾಕ್ ಮೆಷಿನ್ ನಲ್ಲಿ.
- Karnataka Assembly Factbook: Assembly Level Socio-Economic Data Archived 2017-09-26 ವೇಬ್ಯಾಕ್ ಮೆಷಿನ್ ನಲ್ಲಿ.