ಹೆಚ್.ಡಿ.ಕುಮಾರಸ್ವಾಮಿ
ಕರ್ನಾಟಕದ ರಾಜಕಾರಣಿ
ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿ [೩](ಜನನ: ೧೯ ಡಿಸೆಂಬರ್,೧೯೫೯)ಕರ್ನಾಟಕದ ಒಬ್ಬ ಪ್ರಭಾವಿ ರಾಜಕಾರಣಿ. ಇವರು ಕರ್ನಾಟಕದ ೧೮ನೆ ಮುಖ್ಯ ಮಂತ್ರಿಯಾಗಿದ್ದರು. ಕುಮಾರಸ್ವಾಮಿ,[೪] ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ತೃತೀಯ ಪುತ್ರ ಹಾಗು ಕರ್ನಾಟಕ ರಾಜ್ಯ ಜನತಾ ದಳ (ಜಾತ್ಯಾತೀತ) ಪಕ್ಷದ ಶಾಸಕಾಂಗ ನಾಯಕ. ಕುಮಾರಸ್ವಾಮಿ ಚಲನಚಿತ್ರ ನಿರ್ಮಾಪಕರೂ ಕೂಡ ಆಗಿದ್ದಾರೆ.
ಹೆಚ್. ಡಿ. ಕುಮಾರಸ್ವಾಮಿ H. D. Kumaraswamy | |
---|---|
ಅಧಿಕಾರ ಅವಧಿ ೨೩-ಮೇ-೨೦೧೮ – 26 July 2019 | |
ಪೂರ್ವಾಧಿಕಾರಿ | ಬಿ.ಎಸ್. ಯಡಿಯೂರಪ್ಪ |
ಉತ್ತರಾಧಿಕಾರಿ | ಬಿ.ಎಸ್. ಯಡಿಯೂರಪ್ಪ |
ವೈಯಕ್ತಿಕ ಮಾಹಿತಿ | |
ಜನನ | ಹರದನಹಳ್ಳಿ, ಹೊಳೆನರಸೀಪುರ, ಹಾಸನ, ಕರ್ನಾಟಕ | ೧೬ ಡಿಸೆಂಬರ್ ೧೯೫೯
ರಾಜಕೀಯ ಪಕ್ಷ | JD(S) |
ಸಂಗಾತಿ(ಗಳು) | ಅನಿತಾ ಕುಮಾರಸ್ವಾಮಿ[೧] ರಾಧಿಕಾ ಕುಮಾರಸ್ವಾಮಿ[೨] |
ಮಕ್ಕಳು | ನಿಖಿಲ್ ಶಮಿಕಾ |
ತಂದೆ/ತಾಯಿ | ಹೆಚ್.ಡಿ.ದೇವೇಗೌಡ ಚೆನ್ನಮ್ಮ |
ವಾಸಸ್ಥಾನ | ಬೆಂಗಳೂರು, ಭಾರತ |
ಅಭ್ಯಸಿಸಿದ ವಿದ್ಯಾಪೀಠ | ವಿಜಯಾ ಕಾಲೇಜು, ಬೆಂಗಳೂರು (ಪಿಯುಸಿ) ನ್ಯಾಶನಲ್ ಕಾಲೇಜು ,ಬೆಂಗಳೂರು (ಬಿಎಸ್ಸಿ) |
ಜೀವನ
- ಹರದನಹಳ್ಳಿ ದೇವೇಗೌಡ ಕುಮಾರಸ್ವಾಮಿಯವರ ಜನನ ಡಿಸೆಂಬರ್ ೧೯, ೧೯೫೯ರಲ್ಲಾಯಿತು. ರಾಜಕೀಯ ಅನುಭವವಿಲ್ಲದಿದ್ದರೂ ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು.
- ೧೯೯೮ರಲ್ಲಿ ಕನಕಪುರ ಲೋಕಸಭೆ ಕ್ಷೇತ್ರದಿಂದ ಮತ್ತು ೧೯೯೯ರಲ್ಲಿ ಸಾತನೂರು ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡ ಕುಮಾರಸ್ವಾಮಿ, ೨೦೦೪ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆಯಾದರು.
- ಕಾಂಗ್ರೆಸ್ ಮತ್ತು ಜನತಾದಳ(ಎಸ್) ಮೈತ್ರಿಕೂಟದ ಸರ್ಕಾರ ಸ್ಥಾಪನೆಯ ಕಾಲದಲ್ಲಿ ಕುಮಾರಸ್ವಾಮಿ ಜನತಾದಳದ ಕಾರ್ಯಾಧ್ಯಕ್ಷರಾರಾದರು.೨೦೦೫ ಡಿಸೆಂಬರ್ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಜಯದೊಂದಿಗೆ ಬದಲಾದ ರಾಜಕೀಯ ಪರಿಸ್ಥಿತಿ ಹಾಗು ಕಾಂಗ್ರೆಸ್ ಮತ್ತು ಜನತಾದಳದಿಂದ ನಿರ್ಗಮಿಸಿದ್ದರು.
- ಸಿದ್ದರಾಮಯ್ಯನವರ ನಡುವಿನ ಮೈತ್ರಿಯ ಮಾತುಕತೆಯಿಂದ ಅಸಂತುಷ್ಟರಾದ ಕುಮಾರಸ್ವಾಮಿ ೧೮ ಜನವರಿ, ೨೦೦೬ರೊಂದು, ತಮ್ಮ ತಂದೆ ಎಚ್.ಡಿ.ದೇವೇ ಗೌಡರ ಇಚ್ಚೆಯ ವಿರುದ್ದ, ತಮ್ಮ ಪಕ್ಷದ ೪೬ ಶಾಸಕರೊಡನೆ ರಾಜ್ಯಪಾಲರೊಡನೆ ಕಾಂಗ್ರೆಸ್‌ನ ಧರಂ ಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟ ಬೆಂಬಲ ಹಿಂದೆಗೆದುಕೊಂಡರು.
- ಕುಮಾರಸ್ವಾಮಿ ಫೆಬ್ರುವರಿ ೩, ೨೦೦೬ರೊಂದು ಭಾರತೀಯ ಜನತಾ ಪಕ್ಷದ ಸಹಕಾರದೊಂದಿಗೆ ಸ್ಥಾಪಿಸಲಾದ ನೂತನ ಸರ್ಕಾರದ ನೇತೃತ್ವ ವಹಿಸಿ ಕರ್ನಾಟಕದ ೧೮ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ೨೦೦೭ ನವೆಂಬರ್ ೨ ರಂದು ಬಹುಮತ ಕಳೆದುಕೊಂಡರು.
ರಾಜಕೀಯ ಬೆಳವಣಿಗೆ
- ೧೯೯೬ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆ
- ೨೦೦೪ ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಆಯ್ಕೆ
- ೧೮ನೇ ಮುಖ್ಯಮಂತ್ರಿಯಾಗಿ ಫೆಬ್ರುವರಿ ೩ ರಂದು ಪ್ರಮಾಣ ವಚನ ಸ್ವೀಕರಿಸಿದರು
- ೦೩-ಫೆಬ್ರುವರಿ-೨೦೦೬ರಿಂದ ೦೯-ಅಕ್ಟೋಬರ-೨೦೦೭ರ ತನಕ ಮುಖ್ಯಮಂತ್ರಿಯಾಗಿ ಅಧಿಕಾರ.
- ೨೫ನೇ ಮುಖ್ಯಮಂತ್ರಿ[೫][೬]ಯಾಗಿ ಮೇ ೨೩ರಂದು ೪.೩೨ ನಿಮಿಷದ ಸುಮಾರಿಗೆ ದೇವರು ಹಾಗೂ ಕನ್ನಡ ನಾಡಿನ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು[೭]
ಉಲ್ಲೇಖಗಳು
- ↑ http://affidavitarchive.nic.in/CANDIDATEAFFIDAVIT.aspx?YEARID=May-2018+(+GEN+)&AC_No=185&st_code=S10&constType=AC. Retrieved 2 ಏಪ್ರಿಲ್ 2019.
{{cite web}}
: Missing or empty|title=
(help) - ↑ India TV Buzz Desk (Updated: May 24, 2018 10:39 IST). "HD Kumaraswamy's wife Radhika trends on social media. All you need to know about the lady (In Pics)". INDIA TV. Retrieved 2 ಏಪ್ರಿಲ್ 2019.
{{cite news}}
: Check date values in:|date=
(help) - ↑ http://kannada.eenaduindia.com/State/Mysore/MysoreState/MysoreCity/2018/04/14135053/If-JDS-gets-100-Congress-will-be-satisfied-with-40.vpf[ಶಾಶ್ವತವಾಗಿ ಮಡಿದ ಕೊಂಡಿ]
- ↑ http://kannadanewsnow.com/kannada/top-6/kumarswami-4/[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2018-05-26. Retrieved 2018-05-24.
- ↑ https://www.youtube.com/watch?v=4RsnwziWrIU
- ↑ https://kannada.oneindia.com/news/karnataka/hd-kumaraswamy-takes-oath-as-25th-chief-minister-parameshwar-as-dcm-141747.html