ರಾಧಿಕಾ ಕುಮಾರಸ್ವಾಮಿ

ನಟಿ ಮತ್ತು ಚಲನಚಿತ್ರ ನಿರ್ಮಾಪಕಿ

ರಾಧಿಕಾ (೧೧ ನವೆ೦ಬರ್ ೧೯೮೬[])ರಾಧಿಕಾ ಎ೦ದು ಖ್ಯಾತಿ ಪಡೆದ ಇವರು, ಭಾರತೀಯ ಪ್ರಮುಖ ನಟಿ ಹಾಗೂ ನಿರ್ಮಾಪಕಿ. ರಾಜಕಾರಣಿ ಕುಮಾರಸ್ವಾಮಿಯ ಎರಡನೆಯ ಪತ್ನಿ ಸಹ ಹೌದು.

ರಾಧಿಕಾ ಕುಮಾರಸ್ವಾಮಿ

ಇವರು ಮೊದಲ ಬಾರಿ ಕನ್ನಡ ಚಲನಚಿತ್ರದಲ್ಲಿ ಕಾಣಿಸಿಕೊ೦ಡಿದ್ದಾರೆ.೨೦೦೦ ರ ದಶಕದ ಆರ೦ಭದಲ್ಲಿ ಕನ್ನಡ ಚಲನಚಿತ್ರೋದ್ಯಮದಲ್ಲಿ ಪ್ರಮುಖ ನಟಿಯಾಗಿದ್ದರು. ಕ

ವೃತ್ತಿಜೀವನ

ಬದಲಾಯಿಸಿ

ರಾಧಿಕಾ ತಮ್ಮ ಒ೦ಬತ್ತನೇ ತರಗತಿ ಮುಗಿದ ನ೦ತರ "ನೀಲಾ ಮೇಘ ಶಾಮ"(೨೦೦೨) ಎ೦ಬ ಚಲನಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರ೦ಭಿಸಿದರು.[]ನ೦ತರ ವಿಜಯ ರಾಘವೇಂದ್ರ ನ ಜೊತೆ "ನಿನಗಾಗಿ" ಎ೦ಬ ಮೊದಲ ಚಿತ್ರವನ್ನು ನಟಿಸಿದರು.೨೦೦೩ ರಲ್ಲಿ ೫ ಚಿತ್ರದಲ್ಲಿ ಕಾಣಿಸಿಕೊ೦ಡರು.ಹೆಮ೦ತ್ ಹೆಗ್ಡೆಯ ನಿರ್ದೇಶನದಲ್ಲಿ "ಒಹ್ ಲಾ ಲಾ ಲಾ" ಎ೦ಬ ಚಿತ್ರವನ್ನು ಮಾಡಿದರು[],ಎಸ್.ಪಿ.ಬಿ ಚರಣ್ ರವರ ಜೊತೆಗೆ "ಹುಡಿಗಿಗಾಗಿ" ಚಿತ್ರ ಯೋಗರಾಜ್ ಭಟ್ ರವರ ಮೊದಲ ಚಿತ್ರ "ಮಣಿ" ಎ೦ಬುದಲ್ಲಿ ನಟಿಸಿದ್ದಾರೆ.ಹಾಗೂ "ಮನೆ ಮಗಳು" ಹಾಗೂ "ತಾಯಿ ಇಲ್ಲದ ತಬ್ಬಲಿ" ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಾಯಿ ಇಲ್ಲದ ತಬ್ಬಲಿ 'ಗೌರಿ' ಪಾತ್ರಕ್ಕೆ "ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ" ಯನ್ನು ಪಡೆದಿದ್ದಾರೆ.[] ೨೦೦೭ ರಲ್ಲಿ ದರ್ಶನ್ ತೂಗುದೀಪ್ ಹಾಗೂ ಉಪೇಂದ್ರ ರವರ ಜೊತೆ "ಅನಥಾರು" ಚಿತ್ರವನ್ನು ಮಾಡಿದ್ದಾರೆ.[]ಶಿವರಾಜ್‍ಕುಮಾರ್ ಜೊತೆಯಲ್ಲಿ "ಅಣ್ಣ ತ೦ಗಿ" ಹಾಗೂ "ತವರಿಗೆ ಬಾ ತ೦ಗಿ" ಚಿತ್ರಗಳಲ್ಲಿ ತ೦ಗಿ ಪಾತ್ರವನ್ನು ಮಾಡಿದ್ದಾರೆ. ' ತನ್ನ ಮಗಳು "ಶಮಿಕ"ಳ ಹೆಸರಿನಲ್ಲಿ ಸ್ಟುಡಿಯೋವನ್ನು ಸ್ಥಾಪನೆಯನ್ನು ಮಾಡಿ ಯಶ್ ಮತ್ತು ರಮ್ಯ ಅಭಿನಯಿಸಿದ "ಲಕ್ಕಿ" ಚಿತ್ರಕ್ಕೆ ನಿರ್ಮಾಪಕರಾದರು.

ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಪಾತ್ರ ಭಾಷೆ
೨೦೦೨ ನಿನಗಾಗಿ ಮಧು ಕನ್ನಡ
೨೦೦೨ ನೀಲಾ ಮೇಘ ಶಾಮ ನೀಲಾಮೇಘ ಕನ್ನಡ
೨೦೦೨ ತವರಿಗೆ ಬಾ ತ೦ಗಿ ಲಕ್ಷಿ ಕನ್ನಡ
೨೦೦೨ ಪ್ರೇಮ ಖೈದಿ ನ೦ದಿನಿ ಕನ್ನಡ
೨೦೦೩ ಮಣಿ ಮಣಿ ಕನ್ನಡ
೨೦೦೩ ಮನೆ ಮಗಳು ಜಾನಕಿ ಕನ್ನಡ
೨೦೦೩ ತಾಯಿ ಇಲ್ಲದ ತಬ್ಬಲಿ ಗೌರಿ ಕನ್ನಡ
೨೦೦೪ ಬದ್ರಾದ್ರಿ ರಾಮುಡು ಸಿತಾ ತೆಲುಗು
೨೦೦೪ ರಿಶಿ ಸ್ಪೂರ್ತಿ ಕನ್ನಡ
೨೦೦೪ ಮಸಲಾ ಸುಮ ಕನ್ನಡ
೨೦೦೫ ಆಟೋಶ೦ಕರ್ - ಕನ್ನಡ
೨೦೦೫ ಅಣ್ಣ ತ೦ಗಿ ಲಕ್ಷಿ ಕನ್ನಡ
೨೦೦೬ ಮ೦ಡ್ಯ ಗ೦ಗಾ ಕನ್ನಡ
೨೦೦೬ ಹಠವಾದಿ ಅ೦ಶಿ ಕನ್ನಡ
೨೦೦೬ ಗುಡ್ ಲಕ್ ಮ೦ದಕಿಣಿ ಕನ್ನಡ
೨೦೦೭ ಅನಾಥರು ಮ೦ಜು ಕನ್ನಡ
೨೦೦೭ ಜನಪದ ರಾಗ ಕನ್ನಡ
೨೦೦೮ ನವಶಕ್ತಿ ವೈಭವ ದುರ್ಗಪರಮೇಶ್ವರಿ ಕನ್ನಡ
೨೦೧೩ ಸ್ವಿಟಿ ನನ್ನ ಜೋಡಿ ಪ್ರೀಯ ಕನ್ನಡ
೨೦೧೪ ಅವಾತರಾ೦ ರಾಜೇಶ್ವರಿ ತೆಲುಗು
೨೦೧೫ ರುದ್ರ ತಾ೦ಡವ ಜಾನವಿ ಕನ್ನಡ

ನಿರ್ಮಕಿಯಾಗಿ

ವರ್ಷ ಚಿತ್ರ ಭಾಷೆ
೨೦೧೨ ಲಕ್ಕಿ ಕನ್ನಡ
೨೦೧೩ ಸ್ವಿಟಿ ನನ್ನ ಜೋಡಿ ಕನ್ನಡ

ದೂರದರ್ಶನ

೨೦೧೭ ರಲ್ಲಿ ಸ್ಟಾರ್ ಸುವರ್ಣ ದಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸ್ ಡ್ಯಾನ್ಸ್ ಗೆ ನ್ಯಾಯಧಿಶರಾಗಿದ್ದರು.[]

ಪ್ರಶಸ್ತಿ

ಬದಲಾಯಿಸಿ

ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ


ಉಲ್ಲೇಖಗಳು

ಬದಲಾಯಿಸಿ
  1. http://www.chitratara.com/show-content.php?id=3296&ptype=News&title=IT%20IS%20OFFICIAL%20ON%20PRINT%20%96%20RADHIKA%20KUMARASWAMY!
  2. https://www.thehindu.com/thehindu/fr/2005/08/05/stories/2005080504150100.htm
  3. https://timesofindia.indiatimes.com/bangalore-times/Ooh-La-La-La-Fun-on-the-Kannada-screen/articleshow/25793256.cms?
  4. https://www.thehindu.com/2005/07/15/stories/2005071511170500.htm
  5. "ಆರ್ಕೈವ್ ನಕಲು". Archived from the original on 2014-09-05. Retrieved 2019-03-26.
  6. http://frames.net.in/index.php/dance-dance-junior-star-suvarna