ಮುಖ್ಯ ಮೆನು ತೆರೆ

ಮಾ ವೈಷ್ಣೋದೇವಿ ಮಂದಿರ್

(ವೈಷ್ಣೋದೇವಿ ಇಂದ ಪುನರ್ನಿರ್ದೇಶಿತ)
ವೈಷ್ಣೋದೇವಿ ಮಂದಿರ್
Vaishno Devi Entrance.jpg
ದೇವಾಲಯದ ಪ್ರಮುಖ ದ್ವಾರ
ಹೆಸರು: ವೈಷ್ಣೋದೇವಿ ಮಂದಿರ್
ನಿರ್ಮಾತೃ: ಶ್ರೀ ಮಾತಾ ವೈಷ್ಣೋದೇವಿ ದೇವಸ್ಥಾನ ಸಮಿತಿ
ಪ್ರಮುಖ ದೇವತೆ: ಶ್ರೀ ಮಾತಾ ವೈಷ್ಣೋದೇವಿ ;(ಶಕ್ತಿ)
ವಾಸ್ತುಶಿಲ್ಪ: ಭಾರತೀಯ ವಾಸ್ತು ಶಿಲ್ಪ
ಸ್ಥಳ: ಕಾತ್ರಾ, ಜಮ್ಮು ಹಾಗೂ ಕಾಶ್ಮೀರ.

ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ

ಹಿಂದೂ ಧರ್ಮOm symbol.svg

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ

HinduSwastika.svg

ಸ್ಥಳ ಮಹಾತ್ಮೆಸಂಪಾದಿಸಿ

ತ್ರೇತಾಯುಗದಲ್ಲಿಸಂಪಾದಿಸಿ

 • ವಾಸ್ತವವಾಗಿ ವೈಷ್ಣೋದೇವಿ ಜನಿಸಿದ್ದು ದಕ್ಷಿಣ ಭಾರತದ ರತ್ನಾಕರ ಸಾಗರನೆಂಬ ಬ್ರಾಹ್ಮಣನ ಮನೆಯಲ್ಲಿ. ಮಗುವಿಗೆ ತ್ರಿಕೂಟ್ ವೆಂದು ನಾಮಕರಣ ಮಾಡಿದರು. [೧]'ವಿಷ್ಣು ವಂಶೋಧ್ಬವೆ’ಯಾದ್ದರಿಂದ ಎಂಬ ಹೆಸರು ಬಂತು. ೯ ವರ್ಷದ ಪ್ರಾಯದಲ್ಲಿ ತನ್ನ ತಂದೆಯ ಅನುಮತಿ ಪಡೆದು ದಕ್ಷಿಣ ಸಾಗರದ ತಟದಲ್ಲಿ ಮಹಾ ವಿಷ್ಣುವನ್ನು ಕುರಿತು ತಪಸ್ಸು ಮಾಡಿದಳು.
 • ಸೀತೆಯನ್ನು ಹುಡುಕುತ್ತಾ ಶ್ರೀರಾಮರು ಅಲ್ಲಿಗೆ ಬಂದರು. ತ್ರಿಕೂಟ ಶ್ರೀರಾಮರಲ್ಲಿ ತನ್ನನ್ನು ಪತ್ನಿಯಾಗಿ ಸ್ವೀಕರಿಸುವಂತೆ ಬೇಡಿಕೊಂಡಾಗ, ತಾವು ಈ ಯುಗದಲ್ಲಿ ಏಕಪತ್ನೀ ವ್ರತಸ್ಥನಾಗಿರುವ ಕಾರಣದಿಂದ ವರಿಸಲಾಗುವುದಿಲ್ಲ. ಮುಂದೆ ಕಲಿಯುಗದಲ್ಲಿ ಕಲ್ಕಿಯು ಅವತಾರ ಎತ್ತುವುದರಿಂದ ಆಗ ಆಕೆಯನ್ನು ವರಿಸುವುದಾಗಿ ಭರವಸೆ ನೀಡಿದರು.
 • ಆಕೆಗೆ ಉತ್ತರ ಭಾರತದ ತ್ರಿಕೂಟ ಪರ್ವತದಲ್ಲಿ ತಪಸ್ಸಾನ್ನಾಚರಿಸಲು ಆದೇಶ ನೀಡಿದರು. ಆಕೆಯ ರಕ್ಷಣೆಗಾಗಿ, ಬಿಲ್ಲು ಬಾಣಗಳನ್ನು ಕೊಟ್ಟು ಕಪಿಸೈನ್ಯ ಹಾಗೂ ಒಂದು ಸಿಂಹ ವನ್ನೂ ಜೊತೆಯಾಗಿ ಕಳುಹಿಸಿದರು. ಈ ತರಹ ತ್ರಿಕೂಟ ಪರ್ವತದಲ್ಲಿ ತಪಸ್ಸಾನಚರಿಸುತ್ತಿರುವ ದೇವಿಗೆ ವೈಷ್ಣೋದೇವಿ ಎಂಬ ಹೆಸರು ಬಂತು.

ಕಲಿಯುಗದಲ್ಲಿಸಂಪಾದಿಸಿ

 • 'ಭೈರವದೇವ'ನೆಂಬ ತಾಂತ್ರಿಕ ಗುರು ವಧೆ ಮಾಡಲು ಬೆನ್ನಟ್ಟಿ ಬಂದ. ಅವನಿಂದ ಕಣ್ಣು ತಪ್ಪಿಸಿ 'ತ್ರಿಕೂಟ ಪರ್ವತ ಶ್ರೇಣಿ'ಗಳ ನಡುವೆ ತಿರುಗಿದಳು. ಈ ಮಧ್ಯೆ ದಾಹವಾದಾ ಗ, ತಣಿಸಲು ನೆಲಕ್ಕೆ ಬಾಣ ಬಿಟ್ಟಾಗ ಝರಿ ಸೃಷ್ಟಿಯಾಗಿ ನದಿಯಾಗಿ ಪ್ರವಹಿಸಿತು. ಇದೇ ಬಾಣಗಂಗ ಎಂದು ಪ್ರಸಿದ್ಧಿಯಾಯಿತು. ನದಿಯ ಬದಿಯಲ್ಲಿರುವ ಬೃಹದ್ ಬಂಡೆ ಗಳ ಮೇಲೆ ದೇವಿಯ ಪಾದಗಳ ಗುರುತುಗಳಿವೆ. ಇವನ್ನು ಚರಣ್ ಪಾದುಕಾ ಎನ್ನುತ್ತಾರೆ.
 • ಭೈರವನಾಥನಿಂದ ಕಣ್ಣಿಗೆ ಬೀಳದೆ, ವೈಷ್ಣೋದೇವಿ ತಪಸ್ಸಿಗೆ ಆಧಕವರಿ ಬೆಟ್ಟದ ಗುಹೆಯೊಂದರಲ್ಲಿ ಕುಳಿತು ತಪಸ್ಸನ್ನಾಚರಿಸಿದಳು. ಭೈರವನಾಥನು ಅವಳನ್ನು ಅರಸುತ್ತಾ ಸುಮಾರು ೯ ತಿಂಗಳು ಅಲೆದಾಡಿ, ವಧೆ ಮಾಡಲು ಬಂದನು. ಆಗ ದೇವಿ ಕಾಳಿಯ ರೂಪ ಧರಿಸಿ ಅವನ ತಲೆಯನ್ನು ಕತ್ತರಿಸಿದಳು. ಭೈರವನಾಥನ ರುಂಡ ಹಾರಿ ೨.೫ ಕಿ.ಮೀ ದೂರದ ಭೈರವ ಘಾಟ್ ನಲ್ಲಿ ಬಿದ್ದಿತು. ಮರಣದ ಸಮಯದಲ್ಲಿ ದೇವಿಯ ಕ್ಷಮಾಪಣೆಯನ್ನು ಯಾಚಿಸಿದ್ದರಿಂದ ಮೋಕ್ಷವನ್ನು ದಯಪಾಲಿಸಿದಳು.
 • ಭಕ್ತಾದಿಗಳು ವೈಷ್ಣೋದೇವಿಯ ದರ್ಶನದ ನಂತರ ಭೈರವನಾಥ್ ಮಂದಿರಕ್ಕೆ ಭೇಟಿ ಕೊಡಬೇಕು. ಭೈರವ ವಧೆಯ ನಂತರ ವೈಷ್ಣೋದೇವಿಯು ೩ ಪಿಂಡಿಗಳ ಕಲ್ಲಿನ ರೂಪ ತಳೆದು ಅಲ್ಲಿಯೇ ಶಾಶ್ವತ ತಪಸ್ಸಿನಲ್ಲಿ ಲೀನಳಾದಳು. ಈ ಮೂರು ಪಿಂಡಿಗಳಿಗೆ,ಮಹಾಕಾಲಿ ಮಹಾಲಕ್ಷ್ಮಿ ಮತ್ತು[೨] ಮಹಾ ಸರಸ್ವತಿ ಎಂದು ಹೆಸರಿದೆ. ಸಮುದ್ರ ಮಟ್ಟದಿಂದ ಸುಮಾರು ೫,೨೦೦ ಅಡಿ ಎತ್ತರದಲ್ಲಿರುವ ಉತ್ತರಭಾರತದ ಸುಪ್ರಸಿದ್ಧ ಯಾತ್ರಾಸ್ಥಳಗಳಲ್ಲೊಂದು. ೮೦ ಲಕ್ಷಕ್ಕೂ ಹೆಚ್ಚು ಭಕ್ತರು ಬೆಟ್ಟದ ದಾರಿಗುಂಟಾ ನಡೆದು ದೇವಿಯ ದರ್ಶನ ಮಾಡುತ್ತಾರೆ.

ವೈಷ್ಣೋದೇವಿಯ ಯಾತ್ರೆಸಂಪಾದಿಸಿ

ಯಾತ್ರೆ ಆರಂಭವಾಗುವುದು ಕಾತ್ರಾ ಎಂಬ ನಗರದಿಂದ. ಜಮ್ಮು ನಗರದ ಬಸ್ ನಿಲ್ದಾಣದಿಂದ ಬೆಳಿಗ್ಗೆ ೫-೩೦ ರಿಂದ ಆರಂಭವಾಗಿ ಸಂಜೆ ೫-೩೦ ರವರೆಗೆ ಪ್ರತಿ ೧೦ ನಿಮಿಷಕ್ಕೊಮ್ಮೆ ಬಸ್ ಗಳು ಹೊರಡುತ್ತವೆ. ಜಮ್ಮು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣದಿಂದ ಕಾತ್ರಾಕ್ಕೆ ಹೋಗಲು ಅನುಕೂಲವಿದೆ. ಖಾಸಗಿ ಟ್ಯಾಕ್ಸಿಗಳೂ ಲಭ್ಯವಿವೆ.

ಯಾತ್ರಾರ್ಥಿಗಳಿಗೆ ಹಲವಾರು ಬಗೆಯ ವಸತಿ ಸೌಕರ್ಯಗಳುಸಂಪಾದಿಸಿ

 • ಜಮ್ಮು ನಗರದಲ್ಲಿ ವಸತಿ ಗೃಹಗಳು,
 • ಯಾತ್ರಿ ನಿವಾಸ,
 • ಖಾಸಗೀ ಹೋಟೆಲ್ ಗಳು ಬೇಕಾದಷ್ಟಿವೆ.
 • ಕಾತ್ರಾದಲ್ಲಿ ಮಂದಿರ ವ್ಯವಸ್ಥಾಪಕ ಬೋರ್ಡ್ ನವರು ನಡೆಸುವ ಯಾತ್ರಿ ನಿವಾಸ,
 • ಜಮ್ಮು ಕಾಶ್ಮೀರ್ ಟೂರಿಸಂ ಖಾತೆಯವರ ರೆಸ್ಟ್ ಹೌಸ್ ಮತ್ತು ಖಾಸಗೀ ಹೋಟೆಲ್ ಗಳು ಸುಲಭವಾಗಿ ದೊರೆಯುತ್ತವೆ.
 • ಕಾತ್ರಾದಿಂದ ಹೊರಡುವ ಯಾತ್ರಾರ್ಥಿಗಳು, 'ಆಧಕ್ ವರಿ' 'ಸಾಂಜೀ ಛತ್', ಮತ್ತು 'ದರ್ಬಾರ್' (ದೇವಿಮಂದಿರ್) ಗಳಲ್ಲಿ 'ಸರಾಯಿ' ಎಂಬ 'ಧರ್ಮಾರ್ಥ ನಿವಾಸ 'ಗಳಿವೆ.

ಮಂದಿರದಲ್ಲಿನ ದೇವಿಯ ದರ್ಶನಕ್ಕೆ ಹೋಗಲುಸಂಪಾದಿಸಿ

 • ಟ್ಯಾಕ್ಸಿ ಮತ್ತು ಬಸ್ ನಿಲ್ದಾಣಗಳಲ್ಲಿ ದಳ್ಳಾಳಿಗಳು ಕಾಡುತ್ತಾರೆ. ಇವರನ್ನು ನಂಬುವುದು ಕಷ್ಟ. ಕಾತ್ರ ಬಸ್ ನಿಲ್ದಾಣದ ಯಾತ್ರಾ ರಿಸೆಪ್ಶನ್ ಕೌಂಟರ್ ನಲ್ಲಿ ನಾವು ಮಾಡು ವ 'ಯಾತ್ರೆಯ ಸ್ಲಿಪ್' ಪಡೆಯುವುದು ಮೊದಲ ಆದ್ಯತೆ ಇದು ಪುಕ್ಕಟೆಯಾಗಿ ದೊರಕುತ್ತದೆ. ಬಾಣ ಗಂಗಾ ಚೆಕ್ ಪೋಸ್ಟ್ ದಾಟಲು ಇದು ಪರವಾನಗಿ ರಸೀತಿಯಿದ್ದಂತೆ. ಇದನ್ನು ಜೋಪಾನವಾಗಿ ಇಟ್ಟು ಕೊಳ್ಳಬೇಕು.
 • ಕಾತ್ರಾದಿಂದ ಬೆಟ್ಟದ ಕಾಲು ದಾರಿಯನ್ನು ಸವೆಸಿ ದೇವಿ ಮಂದಿರಕ್ಕೆ ಹೋಗಲು ಯಾತ್ರಾರ್ಥಿಗಳು ಮುಂದಿನ ೧೩ ಕಿ.ಮೀಗಳ ದೂರವನ್ನು ನಡೆದೇ ಸಾಗಬೇಕು. ಇದಕ್ಕೆ ಸಹಾಯಕವಾದ ಟೋಪಿ, ಕ್ಯಾನ್ವಾಸ್ ಶೂ, ಮತ್ತು ಊರುಗೋಲನ್ನು ಬಾಡಿಗೆ ಪಡೆಯಬಹುದು. ನಮ್ಮ ಲಗೇಜನ್ನು ಒಯ್ಯಲು ಪೀಠುಗಳ ನೆರವು ಪಡೆಯಬಹುದು. ಬೆಟ್ಟವನ್ನು ಏರಲಾರದವರು, ಕುದುರೆ ಅಥವಾ ದಂಡಿ ಬಾಡಿಗೆ ಪಡೆಯಬಹುದು. ಮಕ್ಕಳನ್ನು ಪೀಠುಗಳೂ ಹೆಗಲ ಮೇಲೆ ಕೂಡಿಸಿಕೊಂಡು ಕರೆದೊಯ್ಯುತ್ತಾರೆ.
 • ಅಧಿಕೃತವಾದ್ ಲೈಸೆನ್ಸ್ ಹೊಂದಿದ ಪೀಠುಗಳ ನೆರವನ್ನಷ್ಟೆ ಬಳಸುವುದು ಕ್ಷೇಮಕರ. ಅಧಕವರಿಯಿಂದ ಮಂದಿರಕ್ಕೆ ವಿಶೇಷ ರಸ್ತೆಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆ ಯಿದೆ. ರಸ್ತೆ ಸುಸಜ್ಜಿತವಾಗಿದೆ. ತಲೆಯ ಮೇಲೆ ಲೋಹದ ಸೂರು ಮತ್ತು ನಡೆಯಲು ಉತ್ತಮವಾದ ಹಾಸುಗಲ್ಲಿನ ರಸ್ತೆ. ಕುಡಿಯುವ ನೀರು ಮತ್ತು ಶೌಚಾಲಯದ ಅನುಕೂಲ ಕಲ್ಪಿಸಿದ್ದಾರೆ.
 • ೧ ಕಿ.ಮೀ ನಡೆದರೆ 'ಬಾಣಗಂಗಾ' ಸಿಗುತ್ತದೆ.
 • ೬ ಕಿ.ಮೀ. ನಡೆದ ನಂತರ 'ಆಧಕವರಿ' ಸಿಗುತ್ತದೆ.
 • ೯.೫ ಕಿ.ಮೀ ದೂರದನಂತರ 'ಸಾಂಜಿ ಛತ್' ಸಿಗುತ್ತದೆ.

ಭಕ್ತರ, ಶ್ರದ್ಧಾಳುಗಳ,"ಜೈ ಮಾತಾ ದಿ" ಎಂಬ ಜಯಘೋಷಸಂಪಾದಿಸಿ

 • ಇಲ್ಲಿಗೆ ಬರುವಷ್ಟರಲ್ಲಿ ಸಂಜೆಯಾಗುವುದರಿಂದ 'ವಿಶ್ರಾಂತಿ ಗೃಹ'ಗಳಿಗೆ ಹೋಗಿ ಸುಧಾರಿಸಿಕೊಂಡು ಮುಂದೆ ಹೋಗಬಹುದು. ದೇವಿಮಂದಿರ ಕೇವಲ ೩.೫ ಕಿ.ಮೀ ದೂರ ದಲ್ಲಿದೆ. ಅಲ್ಲಿಂದ ಶುರುವಾಗುತ್ತದೆ ೧೩ ಕಿಲೋಮೀಟರುಗಳ ಕಠಿಣ ಹಾದಿ. ಭಕ್ತರ "ಜೈ ಮಾತಾ ದಿ" ಎಂಬ ಜಯಘೋಷಗಳ ನಡುವೆ ಜನಜಂಗುಳಿಯಲ್ಲಿ ಒಂದಾಗಿ ನಡೆ ಯುತ್ತಿದ್ದುದು, ಮನಸ್ಸಿಗೊಂತರ ಮುದ ನೀಡುತ್ತದೆ. ಆರು ಕಿಲೋಮೀಟರುಗಳ ದೀರ್ಘ ಪ್ರಯಾಣದ ನಂತರ 'ಕುಮಾರಿ ಮಂದಿರ'ವಿದೆ.
 • ನಂತರ 'ಶ್ರೀಮಾತಾ ವೈಷ್ಣೋದೇವಿ ದೇವಾಲಯ' ಸಿಗುತ್ತದೆ. ಮೊದಲು 'ಭವನ'ದಲ್ಲಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಕೌಂಟರ್ ನಲ್ಲಿ ಮರೆಯದೆ, 'ದರ್ಶನದ ಬ್ಯಾಚ್ ನಂ ಚೀಟಿ'ಯನ್ನು ಪಡೆಯಬೇಕು. ಶೌಚ, ಸ್ನಾನ ಮುಗಿಸಿ, ಬಟ್ಟೆ ಬದಲಾಯಿಸಿ ಕೊಳ್ಳಬಹುದು. ಅಲ್ಲಿನ 'ವ್ಯವಸ್ಥಿತ ಕ್ಲೋಕ್ ರೂಮ್' ನಲ್ಲಿ ಸಾಮಾನುಗಳನ್ನು ಇರಿಸ ಬಹುದು. ಅಲ್ಲಿಯೇ 'ಪೂಜಾ ವಸ್ತುಗಳನ್ನೂ ಖರೀದಿಸಬಹುದು'.
 • ಗೄಪ್ ಸಂಖ್ಯೆಯ ಪ್ರಕಾರ, '೨ ನೆಯ ಗೇಟ್ 'ನಲ್ಲಿ ಕ್ಯೂನಲ್ಲಿ ನಿಲ್ಲಬೇಕು. ಗುಹೆಯೊಳಗೆ 'ತೆಂಗಿನಕಾಯಿ' ಒಯ್ಯಬಾರದು. ತೆಂಗಿನ ಕಾಯಿಯನ್ನು ಪ್ರವೇಶ ದ್ವಾರದಲ್ಲೇ ಕೊಟ್ಟು ರಸೀತಿ ಪಡೆಯಬೇಕು. ಕಾತ್ರ, ವೈಷ್ಣೋದೇವಿ ಮಂದಿರದ ಬೆಟ್ಟದ ತಪ್ಪಲು ಪ್ರದೇಶ. ಇದು ವೈಷ್ಣೋದೇವಿ ಬೆಟ್ಟದ ಪ್ರಾರಂಭ ಹಂತ. ಅಲ್ಲಿ ಕೇಂದ್ರೀಯ ಮೀಸಲು ಪಡೆಯ ಯೋಧರು ದಾರಿಯಲ್ಲಿ ಮೂರು ಬಾರಿ ಕೂಲಂಕುಷವಾಗಿ ಪರೀಕ್ಷಿಸಿ ಒಳಗೆ ಬಿಡುತ್ತಾರೆ.

ದರ್ಶನದ ಬಳಿಕ ಪರ್ಚಿಯನ್ನು ತೋರಿಸಿ ಪ್ರಸಾದ ಪಡೆಯಬೇಕುಸಂಪಾದಿಸಿ

 • ದರ್ಶನಾ ನಂತರ ವಾಪಸ್ ಹೋಗುವಾಗ 'ಒಡೆದ ತೆಂಗಿನ ಹೋಳಿನ ಪ್ರಸಾದ' ವನ್ನು ಪಡೆಯಬಹುದು. (ಚೀಟಿ ತೋರಿಸಬೇಕು)ಮುಖ್ಯ ಮಂದಿರದ ೩೦ ಮೀ ಉದ್ದ ೧.೫ ಮೀ ಎತ್ತರವಿದೆ. ಗುಹೆಯ ಕೊನೆಯಲ್ಲಿ 'ಮಹಾಕಾಲಿ', 'ಮಹಾಲಕ್ಷ್ಮಿ' ಹಾಗೂ 'ಮಹಾ ಸರಸ್ವತಿ'ಯರ ವಿಗ್ರಹಗಳಿವೆ.
 • ಮುಂಚೆ 'ಪ್ರಾಕೃತಿಕ ಗುಹೆ'ಯೊಂದರಲ್ಲಿ ತೆವಳಿಕೊಂಡು ಹೋಗಿ ದರ್ಶನ ಪಡೆಯಬೇಕಿತ್ತು. ಆದರೆ ಭಕ್ತ ಪ್ರವಾಹವನ್ನು ನಿಯಂತ್ರಿಸಲಾಗದೆ, ವೈಷ್ಣೋದೇವಿಯಮ್ಮನ ಭಕ್ತರ ಮಂಡಳಿ ಅದನ್ನು ಮಾನವ ನಿರ್ಮಿತ ಗುಹೆಯನ್ನಾಗಿ ಬದಲಿಸಿತು. ಪ್ರತಿದಿನ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಸುಮಾರು ೨೦,೦೦೦ ದಿಂದ ೩೦,೦೦೦. 'ತಿರುಪತಿ' ಬಳಿಕ ದೇಶದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ಎರಡನೇ ದೇವಾಲಯವಾಗಿದ್ದು, ಪ್ರತಿ ವರ್ಷ ಸುಮಾರು ೮೦ ಲಕ್ಷ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.
 • 'ಜಮ್ಮು ಮತ್ತು ಕಾಶ್ಮೀರ'ದ ಟ್ರಿಕುಟದಲ್ಲಿರುವ ಗುಹಾ ಮಂದಿರ ವೈಷ್ಣೋದೇವಿ. ಇದು 'ತ್ರಿಕೂಟಾ ಗಿರಿ ಶಿಖರ'ಗಳಲ್ಲಿದೆ. ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ವೈಷ್ಣೋದೇವಿಗೆ ಪ್ರತಿ ವರ್ಷವೂ ಸಾವಿರಾರು ದೈವ ಶ್ರದ್ಧಾಳುಗಳು, 'ಶ್ರೀಮಾತಾ ವೈಷ್ಣೋದೇವಿ ದೇವಾಲಯ'ಕ್ಕೆ ಭೇಟಿ ನೀಡುತ್ತಾರೆ.

ಚಿತ್ರ ಗ್ಯಾಲರಿಸಂಪಾದಿಸಿ

ಉಲ್ಲೇಖಗಳುಸಂಪಾದಿಸಿ