ಪೂಜೆ
ಪೂಜೆಯು ಒಂದು ಅಥವಾ ಹೆಚ್ಚು ದೇವತೆಗಳನ್ನು ಸತ್ಕರಿಸಲು, ಗೌರವಿಸಲು ಮತ್ತು ಆರಾಧಿಸಲು, ಅಥವಾ ಒಂದು ಘಟನೆಯನ್ನು ಆಧ್ಯಾತ್ಮಿಕವಾಗಿ ನೆರವೇರಿಸಲು ಹಿಂದೂಗಳಿಂದ ಆಚರಿಸಲಾಗುವ ಒಂದು ಪ್ರಾರ್ಥನಾ ಕ್ರಿಯಾವಿಧಿ. ಅದು ವಿಶೇಷ ಅತಿಥಿಯ(ಗಳ) ಹಾಜರಿ, ಅಥವಾ ಅವರ ಮರಣದ ನಂತರ ಅವರ ನೆನಪುಗಳನ್ನು ಗೌರವಿಸಬಹುದು ಅಥವಾ ಆಚರಿಸಬಹುದು. ಪೂಜೆ ಶಬ್ದ ಸಂಸ್ಕೃತದಿಂದ ಬರುತ್ತದೆ, ಮತ್ತು ಇದರರ್ಥ ಪೂಜ್ಯಭಾವ, ಗೌರವ, ಗೌರವಾರ್ಪಣೆ, ಮೆಚ್ಚುಗೆ, ಮತ್ತು ಆರಾಧನೆ.