ವಾಲ್ಮೀಕಿ

ವಾಲ್ಮೀಕಿ ಮಹಾನ್ ಸಂತ ಮತ್ತು ಪುರಾಣಗಳ ಋಷಿ

ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ; ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ.

ವಾಲ್ಮೀಕಿ
ರಾಮಾಯಣವನ್ನು ರಚಿಸುತ್ತಿರುವ ವಾಲ್ಮೀಕಿ.
ಜನನಕ್ರಿ.ಪೂ. 500
ಜನ್ಮ ನಾಮರತ್ನಾಕರ
ಗೌರವಗಳುDeepanshu Kulshreshtha
ತತ್ವಶಾಸ್ತ್ರDharmic movement called Valmikism is based on Valmiki's teachings.
Composed Rāmāyaṇa and Yoga Vasiṣṭha
ಚಿತ್ರ:Ravivarmapressama family.jpg
Rama with Sita on the throne, their children Lava and Kusha on their laps. Behind the throne, Lakshmana, Bharata and Shatrughna stand. Hanuman bows to Rama before the throne. Valmiki to the left.


ಹಿನ್ನೆಲೆ ಬದಲಾಯಿಸಿ

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ಒಬ್ಬ ಬೇಡ ನಾಗಿದ್ದ ಮುಂದೆ ರತ್ನಾಕರ . ನಾರದನ ಉಪದೇಶದಿಂದ ರತ್ನಾಕರನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ.ವಾಲ್ಮೀಕಿ ಯವರು ಪರಮಾತ್ಮನನ್ನು (ಶ್ರೀ ರಾಮನನ್ನು) ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು. ಹುತ್ತ(ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು.

ರಾಮಾಯಣ ರಚನೆಗೆ ಪ್ರೇರಣೆ ಬದಲಾಯಿಸಿ

 
ಮಹರ್ಷಿ ವಾಲ್ಮೀಕಿ ಆಶ್ರಮಕ್ಕೆ ನಾರದ ಮುನಿಯ ಭೇಟಿ

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಅವುಗಳಲ್ಲಿ ಗಂಡು ಹಕ್ಕಿಯನ್ನು ಕೊಂದು ಬಿಡುತ್ತಾನೆ. ಅದರ ಸಂಗಾತಿ ಹೆಣ್ಣು ಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ. ಈ ಹೃದಯ ವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಕೆಳಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.

ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |

ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಬಾಯಿಂದ ಹೊರಹೊಮ್ಮಿದ ಮಾತುಗಳು.

ಈ ಶ್ಲೋಕದ ಅರ್ಥ ಹೀಗಿದೆ :

ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |

ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ. ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು.

ಉತ್ತರ ರಾಮಾಯಣದೊಳಗೊಂದು ಪಾತ್ರವಾಗಿ ಬದಲಾಯಿಸಿ

 
ವಾಲ್ಮೀಕಿ ಆಶ್ರಮದಲ್ಲಿ ಸೀತೆ

ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತಿಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ. ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ. ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ. ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ..

ವಾಲ್ಮೀಕಿಗೆ ನಮನ ಬದಲಾಯಿಸಿ

ಕೂಜಂತಂ ರಾಮ ರಾಮೇತಿ |
ಮಧುರ ಮಧುರಾಕ್ಷರಮ್ ||
ಆರುಹ್ಯ ಕವಿತಾಶಾಖಾಂ |
ವಂದೇ ವಾಲ್ಮೀಕಿ ಕೋಕಿಲಮ್ ||
ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ .
'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.
ಚೆನ್ನೈ ಸಮೀಪದ ತಿರುವಣ್ಣಿಯೂರಿನಲ್ಲಿ 1300 ವರ್ಷಗಳ ಹಿಂದೆ ನಿರ್ಮಿಸಿದ ವಾಲ್ಮೀಕಿಯ ದೇವಾಲಯ ಇದೆ.

ವಾಲ್ಮೀಕಿ ಜಯಂತಿ ಬದಲಾಯಿಸಿ

ಆಶ್ವಯುಜ ಶುದ್ಧ ಹುಣ್ಣಿಮೆಯ ದಿನವನ್ನ ಮಹರ್ಷಿ ವಾಲ್ಮೀಕಿ ಜಯಂತಿ ಎಂದು ಆಚರಿಸಲಾಗುತ್ತದೆ.

ಹೆಚ್ಚಿನ ಓದು ಬದಲಾಯಿಸಿ

  1. ಆದಿಕವಿ ವಾಲ್ಮೀಕಿ -ಮಾಸ್ತಿ ವೆಂಕಟೇಶ ಅಯ್ಯಂಗಾರ್
  2. ವಾಲ್ಮೀಕಿ -ತ.ಸು. ಶಾಮರಾಯ (ಭಾರತ-ಭಾರತಿ ಪುಸ್ತಕ ಸಂಪದ)
  3. ಮಹರ್ಷಿ ವಾಲ್ಮೀಕಿ -ಕೆ.ವಿ. ಚಂದ್ರಜ್ಯೋತಿ (ಪ್ರ: ಸ್ಟೂಡೆಂಟ್ ಬುಕ್ ಕಂಪನಿ, ತುಮಕೂರು)
  4. ಎಳೆಯರ ರಾಮಾಯಣ -ಮೈ.ನ. ನಾಗರಾಜ
  5. ವಾಲ್ಮೀಕಿಯ ಭಾಗ್ಯ -ಕುವೆಂಪು
  6. ಜನಪ್ರಿಯ ವಾಲ್ಮೀಕಿ ರಾಮಾಯಣ -ಕುವೆಂಪು
  7. ಶೂದ್ರ ತಪಸ್ವಿ -ಕುವೆಂಪು
  8. ಶ್ರೀ ರಾಮಾಯಣ ದರ್ಶನಂ -ಕುವೆಂಪು
  9. ಶ್ರೀ ರಾಮಾಯಣ ಮಹಾನ್ವೇಷಣಂ -ವೀರಪ್ಪ ಮೊಯಿಲಿ
  10. ರಾಮಾಯಣ ವಿಷವೃಕ್ಷ -ಬಂಜಗೆರೆ ಜಯಪ್ರಕಾಶ್

ದೃಶ್ಯ ಮಾಧ್ಯಮದಲ್ಲಿ ಬದಲಾಯಿಸಿ

ಕನ್ನಡದಲ್ಲಿ ಡಾ|| ರಾಜ್‍ಕುಮಾರ್ ಅಭಿನಯದ 'ವಾಲ್ಮೀಕಿ' ಚಲನಚಿತ್ರ ತಯಾರಾಗಿದೆ. ಘಂಟಸಾಲ ಅವರ ಸಂಗೀತವಿದೆ. ಪಿ. ಸುಶೀಲಾ ಹಾಡಿರುವ 'ಜಲಲ ಜಲಲ ಜಲಧಾರೆ' ಹಾಡು ಜನಪ್ರಿಯವಾಗಿದೆ.

ನೋಡಿ ಬದಲಾಯಿಸಿ

ಹೊರಗಿನ ಸಂಪರ್ಕಗಳು ಬದಲಾಯಿಸಿ

ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |