ಖರ
ಖರನು ರಾವಣನ ಬಲತಾಯಿ ಮಗ. ವಿಶ್ರವಸು ಎಂಬ ಋಷಿಯಿಂದ ರಾಕಾ ಎಂಬ ರಾಕ್ಷಸಿಯಲ್ಲಿ ಜನಿಸಿದವ. ಶೂರ್ಪನಖಿ ಮತ್ತು ದೂಷಣರು ಈತನ ಒಡಹುಟ್ಟಿದವರು. ದಿಗ್ವಿಜಯ ಸಮಯದಲ್ಲಿ ತನಗೆ ಎದುರಾದ ಶೂರ್ಪಣಖಿಯ ಗಂಡ ವಿದ್ಯುಜ್ಜಿಹ್ವನನ್ನು ರಾವಣ ಕೊಂದಾಗ ದುಃಖಿತಳಾದ ಶೂರ್ಪಣಖಿ ರಾವಣನನ್ನು ನಿಂದಿಸಿದಳು. ಆಗ ರಾವಣ ಆಕೆಗೆ ಅಭಯ ನೀಡಿ ಆಕೆಯನ್ನು ಖರದೂಷಣರ ವಶದಲ್ಲಿರಿಸಿ ಖರನಿಗೆ ದಂಡಕಾರಣ್ಯ ರಾಜ್ಯ ಮತ್ತು 14,000 ಮಂದಿ ರಾಕ್ಷಸರನ್ನು ಕೊಟ್ಟ. ರಾಮ ಪಂಚವಟಿಯಲ್ಲಿ ಸೀತಾಲಕ್ಷ್ಮಣರೊಂದಿಗಿದ್ದಾಗ ಶೂರ್ಪಣಖಿ ರಾಮನನ್ನು ಮೋಹಿಸಿ ಲಕ್ಷ್ಮಣನಿಂದ ಕಿವಿ ಮೂಗುಗಳನ್ನು ಕುಯಿಸಿಕೊಂಡು[೧] ಹಿಂದಿರುಗಿ ಖರನನ್ನು ಮೊರೆಹೊಕ್ಕಳು. ಖರ ತನ್ನ 14,000 ಸೇನೆಯೊಂದಿಗೆ ರಾಮನನ್ನು ಇದಿರಿಸಿ ಸೇನಾಸಮೇತ ಹತನಾದ. ಈ ವೃತ್ತಾಂತ ರಾಮಾಯಣ, ಭಾರತಗಳಲ್ಲಿದೆ.
ಉಲ್ಲೇಖಗಳು
ಬದಲಾಯಿಸಿ
ಗ್ರಂಥಸೂಚಿ
ಬದಲಾಯಿಸಿ- Richman, Paula (1991-08-29). "The Mutilation of Surpanakha". Many Ramayanas: The Diversity of a Narrative Tradition in South Asia (in ಇಂಗ್ಲಿಷ್). University of California Press. ISBN 978-0-520-07589-4.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: