ಮಹಾರಾಜ ದಶರಥ, ಅವನಾಳಿದ ರಾಜ್ಯದ ಹೆಸರು ಅಯೋಧ್ಯೆ, ಇದು ಸರಯೂ ನದಿತೀರದಲ್ಲಿದೆ. ಮಾನವೇಂದ್ರನಾದ ಮನುವಿನಿಂದ ನಿರ್ಮಿತವಾದ ರಾಜ್ಯ.

ರಾಮನನ್ನು ವನವಾಸಕ್ಕೆ ಕಳುಹಿಸುವಂತೆ ಒತ್ತಾಯಿಸುತ್ತಿರುವ ಕೈಕೇಯಿ

ಮನುನಾ "ಮಾನವೇಂದ್ರೇಣ ಯಾ ಪುರೀ ನಿರ್ಮಿತಾ" ಸ್ವಯಂ (ವಾಲ್ಮೀಕಿ ರಾಮಾಯಣ, ಬಾಲಕಾಂಡ, ೫ನೆ ಸರ್ಗ)

ಸಮೃದ್ಧವಾದ ರಾಜ್ಯ, ಸಮರ್ಥ ಮಂತ್ರಿಗಳು, ವಸಿಷ್ಠ ವಾಮದೇವರು ತಪಸ್ವಿಗಳಾದ ಗುರುಗಳು, ಪುರೋಹಿತರು, ಮನಮೆಚ್ಚಿದ ಮೂವರು ಮಡದಿಯರು, ಕೌಸಲ್ಯಾ, ಸುಮಿತ್ರಾ, ಕೈಕೇಯಿ.

ಇಷ್ಟೆಲ್ಲ ಇದ್ದರೂ ರಾಜನಿಗೆ ಮಕ್ಕಳಿಲ್ಲ ಎಂಬ ಚಿಂತೆ ಸದಾ ಕಾಡುತ್ತಿತ್ತು. ಅದರ ಪರಿಹಾರಕ್ಕಾಗಿ ಗುರುಗಳನ್ನು ಪ್ರಾರ್ಥಿಸಿದ. ಗುರುಗಳು ಸೂಚಿಸಿದ ಉಪಾಯದಂತೆ ಯಾಗ ಮಾಡಿದ. ಅದರ ಫಲದಿಂದ ಮಕ್ಕಳಾದರು. ರಾಮ, ಲಕ್ಷಣ, ಭರತ,ಶತ್ರುಘ್ನ. ರಾಜ ರಾಣಿಯರು ಪರಮಾನಂದ ಭರಿತರಾದರು. ಮಕ್ಕಳು ದೊಡ್ಡವರಾದರು. ಅವರ ವಿವಾಹವಾಯಿತು. ಎಲ್ಲರೂ ಸಂತೋಷದಿಂದ ಇದ್ದರು.

ಈ ಪ್ರಸಂಗದಲ್ಲಿ ರಾಮನಿಗೆ ಯುವರಾಜನ ಪಟ್ಟಕಟ್ಟಲು ಸಂಕಲ್ಪಿಸಿದ. ಆದರೆ ಹಿಂದೆ ತಾನೇ ತನ್ನ ಹೆಂಡತಿ ಕೈಕೇಯಿಗೆ ಕೊಟ್ಟ ವಚನವನ್ನು ನಡೆಸಿಕೊಡಲು ಅವಳು ಕೇಳಿದಳು. ನಡೆಸಿದರೆ ರಾಜ್ಯದವಿರೋಧ, ನಡೆಸದಿರೆ ಕೊಟ್ಟ ಮಾತು ಅಸತ್ಯವಾಗುತ್ತದೆ. ಆದರೆ ಅವನ ರಾಜ್ಯದಲ್ಲಿ ಇರುವ ಯಾರೂ ಕೂಡ ಅಸತ್ಯವನ್ನು ಮಾತನಾಡುತ್ತಿರಲಿಲ್ಲ . ಕ್ರೋಧಾತ್‌ ಕಾಮಾರ್ಥಹೇತೋರ್ವಾ ನ ಬ್ರೂಯಿರನೃತಂ ವಚಃ ಹೀಗಿರುವಾಗ ರಾಜನಾದ ತಾನು ಕೊಟ್ಟ ಮಾತಿಗೆ ತಪ್ಪುವುದು ಹೇಗೆ ಸಾಧ್ಯ?

ಹೀಗೆ ಅನೇಕ ಕಾರಣಗಳಿಂದ ರಾಮನಿಗೆ ರಾಜ್ಯವನ್ನು ಕೊಡುವುದು ಸಾಧ್ಯವಾಗಲಿಲ್ಲ.

ರಾಮ ಕಾಡಿಗೆ ಹೋದ. ಅದೇ ದುಃಖದಲ್ಲಿ ದಶರಥರಾಜ ಮೃತನಾದ.

ಮಹಾಬ್ರಾಹ್ಮಣ ಕುಮಾರನಾದ ಶ್ರವಣಕುಮಾರನ ಶಾಪವೇ ಇದಕ್ಕೆಲ್ಲ ಕಾರಣ. ದಶರಥರಾಜನ ಜೀವನದಲ್ಲಿ ನಡೆದ ಕೆಲವೊಂದು ಅದೃಷ್ಟ, ದುರದೃಷ್ಟದ ಕೆಲವು ಪ್ರಸಂಗಗಳು:

ಹತ್ತೂ ದಿಕ್ಕುಗಳಿಗೆ ರಥವನ್ನು ಓಡಿಸುವ ಸಾಮರ್ಥ್ಯ ಪಡೆದದ್ದು ಅದೃಷ್ಟವೋ? ದುರದೃಷ್ಟವೋ?

(ಹತ್ತೂ ದಿಕ್ಕುಗಳಿಗೆ ರಥವನ್ನು ಓಡಿಸುವ ಸಾಮರ್ಥ್ಯ ಇರುವುದರಿಂದಲೇ ದಾನವರೊಡನೆ ಯುದ್ಧವಾಡಲು ಹೋಗಿ, ಕೈಕೇಯಿಯ ಸಹಾಯ ಪಡೆದು, ಅಲ್ಲಿಯೇ ಅವಳಿಗೆ ವಚನವನ್ನು ಕೊಟ್ಟದ್ದು)

ಸಕಲಚರಾಚರ ಸೃಷ್ಟಿಕರ್ತೃವಾದ ಜಗದೊಡೆಯನನ್ನು ಮಗನಾಗಿ ಪಡೆದದ್ದು ಅದೃಷ್ಟವಲ್ಲವೇ?
ಜಗನ್ನಾಥನನ್ನು ಹಿರಿಯ ಮಗನನ್ನಾಗಿ ಪಡೆದ ಮೇಲೇ ಯಾವ ರಾಜ್ಯವನ್ನು ಕೊಡಲೂ ಆಗಲಿಲ್ಲ. ಇದು ದುರದೃಷ್ಟವಲ್ಲವೇ?
ಅತ್ಯಂತ ವೈಭವೋಪೇತವಾದ, ಸಮೃದ್ಧವಾದ, ಸಮುದ್ರಯಪರ್ಯಂತವಾದ, ಇಕ್ಷ್ವಾಕುವಿನಿಂದ ಬಂದ ಮಹಾರಾಜ್ಯ ಹೊರೆತದ್ದು ಅದೃಷ್ಟವಲ್ಲವೇ?

ಸಾತ್ವಿಕಗುಣದ, ಮೆತ್ತನೆಯ ಸ್ವಭಾವದ, ಕೊನೆಯವರೆಗೂ ಗಂಡನ ಸೇವೆ ಮಾಡಿ ಮಹಾಪತಿವೃತೆ ಎನಿಸಿಕೊಂಡ ಕೌಸಲ್ಯೆ ಸುಮಿತ್ರೆಯಂತಹ ಮುದ್ದು ಮಡದಿಯರು ದೊರೆತದ್ದು ಅದೃಷ್ಟವೇ ಸರಿ.

ಮೊದಲೆಲ್ಲ ಪ್ರೀತಿಮಾಡಿ, ರಾಜನ ಮನವೊಲಿಸಿ, ಅವನ ಪ್ರೀತಿಪಾತ್ರಳಾಗಿ, ಅವನಿಂದ ರಾಜ್ಯದ ಸಕಲ ಸುಖಗಳನ್ನು ಸೂರೆಗೈದು, ಮುಂದೊಂದು ದಿನ ಗಂಡ ಯುದ್ಧಕ್ಕೆ ಹೋದಾಗ ಅವನ ಜೊತೆಗೆ ಹೋಗಿ ಪಟ್ಟದರಸಿಯಾಗದಿದ್ದರೂ ದಿಟ್ಟ ವೀರಳಾಗಿ ಹೋರಾಡಿ ಗೆಲುವು ತಂದಿತ್ತು, ಪ್ರಿಯೆ ನಿನ್ನ ಎರಡು ಆಸೆಗಳನ್ನು ನಾನು ಪೂರೈಸುತ್ತೇನೆ ಎಂಬುದಾಗಿ ವಚನ ಪಡೆದು, ಕೊನೆಗೊಂದು ದಿನ ಕ್ಷುದ್ರದಾಸಿಯ ಪ್ರೇರಣೆಯಂತೆ 'ಹೇ ರಾಜ ನೀನು ನನಗೆ ಕೊಟ್ಟ ವಚನವನ್ನು ಸತ್ಯ ಮಾಡು' ಎಂಬುದಾಗಿ ಆಗ್ರಹಿಸಿ, ಕೇಳಬಾರದ್ದನ್ನು ಕೇಳಿ, ವಿಶ್ವವೆಲ್ಲ ಖಂಡಿಸುವ, ಇಂಥದೊಂದು ನಡೆಯಬಹುದೆಂದು ಯಾರೂ ನಿರೀಕ್ಷಿಸಿರಲಾರದ ಘಟನೆಗೆ ಪ್ರಧಾನ ಕಾರಣಳಾಗಿ, ಅಯೋಧ್ಯೆಯ ಸಂತೋಷವನ್ನೆಲ್ಲ ಮುಂದೆ ಶ್ರೀರಾಮನು ರಾಜನಾಗುವವರೆಗೆ ಯಾರಿಗೂ ಸಿಗದಂತೆ ಅಪಹಾರ ಮಾಡಿದಳೂ, ದಶರಥನೆಂಬ ಅಯೋಧ್ಯೆಯ ಮುಕುಟಮಣಿಯನ್ನು, ಅದಕ್ಕಿಂತ ಮುಖ್ಯವಾಗಿ ತನ್ನ ಸೌಭಾಗ್ಯದ ಪ್ರತೀಕವಾದ ಮಾಂಗಲ್ಯವನ್ನು ತನ್ನ ಕೈಯಾರೆ ತಾನೇ ಕಳೆದುಕೊಂಡ, ದಾಸಿಯ ಮಾತು ಕೇಳಿ ಬಾಳನ್ನು ಹಾಳು ಮಾಡಿಕೊಂಡ ಕೈಕೇಯಿಯಂತಹ ಮಡದಿಯನ್ನು ಪಡೆದದ್ದು ದುರದೃಷ್ಟವಲ್ಲವೇ? 

ಇಷ್ಟೆಲ್ಲ ಇದ್ದರೂ ಶ್ರೀರಾಮದೇವರ ಅನುಗ್ರಹದಿಂದ ಅವನು ಸದ್ಗತಿಯನ್ನು ಹೊಂದಿದ.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
ವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯೆ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕಿ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |
"https://kn.wikipedia.org/w/index.php?title=ದಶರಥ&oldid=1222191" ಇಂದ ಪಡೆಯಲ್ಪಟ್ಟಿದೆ