ವಿಶ್ವಮಿತ್ರ ಅಂದರೆ ವಿಶ್ವಕ್ಕೆ ಗೆಳೆಯ ಎಂದರ್ಥ. ಕ್ಷತ್ರಿಯ ಸೂರ್ಯವಂಶಸ್ಥರಾದ ಇವರನ್ನು ಕೌಶಿಕಯೆಂದು ಕರೆಯಲಾಗುತ್ತದೆ. ದೇವರ ವರದಿಂದ ಇವರ ಹುಟ್ಟು ಕ್ಷತ್ರಿಯ ಕುಲ ರಾಜ ಮನೆತನದಲ್ಲಾದರು, ಬ್ರಹ್ಮರ್ಶಿಗಳಾದರು. ಬ್ರಹ್ಮ ಜಾನೀತಿ ಬ್ರಾಹ್ಮನಃ

ವಿಶ್ವಾಮಿತ್ರ ಮೇನಕ ರಾಜಾ ರವಿವರ್ಮನ ತೈಲಚಿತ್ರ.


ವಿಶ್ವಾಮಿತ್ರ - ವಿಶ್ವಾಮಿತ್ರ ಒಬ್ಬ ಋಷಿ. ಕೋಪಕ್ಕೆ ಹೆಸರುವಾಸಿಯಾದವನು. ಅರಣ್ಯದಲ್ಲಿ ತನ್ನ ಹೋಮ,ಹವನಾದಿಗಳಿಗೆ ತೊಂದರೆ ಕೊಡುತ್ತಿದ್ದ ರಾಕ್ಷಸರನ್ನು ಸಂಹರಿಸಲು ರಾಮ,ಲಕ್ಷ್ಮಣರನ್ನು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಾನೆ. ಮಾರ್ಗ ಮಧ್ಯದಲ್ಲಿ ವಿಶ್ವಾಮಿತ್ರ ರಾಮನನ್ನು ಮಿಥಿಲಾನಗರಕ್ಕೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಜನಕರಾಜನು ಸೀತಾ ಸ್ವಯಂವರ ಏರ್ಪಡಿಸಿರುತ್ತಾನೆ. ಅಲ್ಲಿ ರಾಮ ಶಿವ ಧನುಸ್ಸನ್ನು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ.

ಕೌಶಿಕ ಅಥವಾ ವಿಶ್ವಾಮಿತ್ರ ಒಂದು ಕಾಲದಲ್ಲಿ ಅಯೋಧ್ಯೆಯನ್ನ ಪಾಲಿಸುತ್ತಿದ್ದ. ಬೇಟೆಗೆಂದು ಬಂದ ರಾಜ, ವಶಿಷ್ಠ ಮಹಾಮುನಿಯ ಆಶ್ರಮದಲ್ಲಿ, ಕಾಮಧೇನುವನ್ನು ನೋಡುತ್ತಾನೆ. ಅದರ ಮೇಲೆ ಮೋಹ ಗೊಂಡ ಅರಸ, ಅದನ್ನ ತನಗೆ ನೀಡುವಂತೆ ಮಹಾಮುನಿಗಳಲ್ಲಿ ಬೇಡಿಕೆ ಇಡುತ್ತಾನೆ... ಆದ್ರೆ, ಇಂದ್ರನಿಂದಾ, ತನಗೆ ಬಹೂಕರಿಸಲ್ಪಟ್ಟ ಆ ಧೇನುವನ್ನು ನೀಡಲು ಸಾಧ್ಯವಿಲ್ಲಾ ಅಂತಾರೆ ವಶಿಷ್ಠರು. ಅದನ್ನು ಬೇರೆಯವರಿಗೆ ನೀಡುವ ಅಧಿಕಾರ ನನ್ನದಲ್ಲಾ. ಕೇವಲ ಧೇನುವಿನ ಪೋಷಣೆ ಮತ್ತು ಅದರ ಹಾಲಿನ ಬಳಕೆಯಷ್ಟೇ ತಾನು ಮಾಡಬಹುದಾಗಿದೆ ಅನ್ನೋ ವಶಿಷ್ಠರ ಸೌಜನ್ಯಯುತ ತಿರಸ್ಕಾರ ವಿಶ್ವಾಮಿತ್ರ ಕೆರಳೋ ತರಾ ಮಾಡತ್ತೆ.. ಅಲ್ಲಿಂದಾ ಅರಮನೆಗೆ ಬಂದ ವಿಶ್ವಾಮಿತ್ರ, ತಾನೂ ಅಂಥದ್ದೊಂದು ಧೇನುವನ್ನು ಪಡೆಯುವ ಸಲುವಾಗಿ ರಾಜ್ಯ ತ್ಯಜಿಸಿ, ತಪಸ್ಸಿಗೆ ತೊಡಗುತ್ತಾನೆ. ಹಾಗೆ ತಪೋ ನಿರತ ನಾಗಿದ್ದಾಗಲೇ, ದೇವತೆಗಳು ತಪೋ ಭಂಗಕ್ಕಾಗಿ, ಮೇನಕೆಯನ್ನು ಕಳುಹಿಸಿಕೊಡುತ್ತಾರೆ. ಮೇನಕೆ ಮತ್ತು ವಿಶ್ವಾಮಿತ್ರರಿಗೆ ಜನಿಸುವ ಕೂಸೇ ಶಕುಂತಲೆ. ಮುಂದೆ ಭರತ ಅನ್ನೋ ಮಗುವಿಗೆ ಜನ್ಮ ನೀಡುವ ಈ ಶಕುಂತಲೆ, ಭರತ ವಂಶದ ಉದಯಕ್ಕೆ ಕಾರಣಳಾಗ್ತಾಳೆವಾಲ್ಮೀಕಿ ವಿರಚಿತ ರಾಮಾಯಣ
ಪಾತ್ರಗಳು
ವಾಲ್ಮೀಕಿ | ದಶರಥ | ಕೌಸಲ್ಯ | ಸುಮಿತ್ರ | ಕೈಕೇಯಿ | ಜನಕ | ಮಂಥರ | ರಾಮ | ಭರತ | ಲಕ್ಷ್ಮಣ | ಶತ್ರುಘ್ನ | ಸೀತಾ | ಊರ್ಮಿಳಾ | ಮಾಂಡವಿ | ಶ್ರುತಕೀರ್ತಿ | ವಿಶ್ವಾಮಿತ್ರ | ಅಹಲ್ಯ | ಜಟಾಯು | ಸಂಪಾತಿ | ಹನುಮಂತ | ಸುಗ್ರೀವ | ವಾಲಿ | ಅಂಗದ | ಜಾಂಬವಂತ | ವಿಭೀಷಣ | ತಾಟಕ | ಶೂರ್ಪನಖಿ | ಮಾರೀಚ | ಸುಬಾಹು | ಖರ | ರಾವಣ | ಕುಂಭಕರ್ಣ | ಮಂಡೋದರಿ | ಮಯಾಸುರ | ಇಂದ್ರಜಿತ್ | ಪ್ರಹಸ್ತ | ಅಕ್ಷಯಕುಮಾರ | ಅತಿಕಾಯ | ಲವ | ಕುಶ |ಕಬಂಧ
ಇತರೆ
ಅಯೋಧ್ಯೆ | ಮಿಥಿಲಾ | ಲಂಕಾ | ಸರಯು | ಸುಗ್ರೀವಾಜ್ಞೆ | ತ್ರೇತಾಯುಗ | ರಘುವಂಶ | ಲಕ್ಷ್ಮಣ ರೇಖೆ | ಆದಿತ್ಯ ಹೃದಯಂ | ಸಂಜೀವಿನಿ ಪರ್ವತ | ಸುಂದರಕಾಂಡ | ಪುಷ್ಪಕ ವಿಮಾನ | ವೇದಾವತಿ | ವಾನರ |ಜಟಾಯು |