ಸರಯು
ಸರಯೂ ಭಾರತದ ಒಂದು ಪುರಾತನ ನದಿ. ಇದು ಇಂದಿನ ಉತ್ತರ ಪ್ರದೇಶದ ಗೋಗ್ರ (Gogra) ನದಿಯೇ ಎಂದು ಊಹಿಸಲಾಗಿದೆ. ಅಯೋಧ್ಯೆ ಇದರ ದಡದಲ್ಲಿದೆ. ರಾಮಾಯಣದ ಶ್ರೀರಾಮ ರಾಜ್ಯವಾಳಿದ್ದು ಇದೇ ಸರಯೂತೀರದ ಅಯೋಧ್ಯೆಯಲ್ಲಿ. ಇದು ಹಿಮಾಲಯ ಪರ್ವತದ ಒಂದು ಸರೋವರದಲ್ಲಿ ಹುಟ್ಟಿ, ಪ್ರವಹಿಸುವುದರಿಂದ ಇದಕ್ಕೆ ಸರಯೂ ಎಂಬ ಹೆಸರು ಬಂದಿದೆ. ಶ್ರೀರಾಮ ತನ್ನ ಅವತಾರವನ್ನು ಸಮಾಪ್ತಿಗೊಳಿಸುವಾಗ, ತನ್ನ ಪರಿವಾರದೊಂದಿಗೆ ಸರಯೂ ನದಿಯಲ್ಲಿ ಮುಳುಗಿದನೆಂಬ ವಿವರಣೆ ಉತ್ತರ ರಾಮಾಯಣದಲ್ಲಿ ಬರುತ್ತದೆ.