ವಾನರ ಎಂದರೆ ಪ್ರೈಮೇಟ್ ಗಣದ ಆಂತ್ರಪ್ರಾಯ್ಡಿಯ ಗುಂಪಿಗೆ ಸೇರಿದ ಬೃಹತ್ ಕಪಿ (ಏಪ್). ಇದರಲ್ಲಿ ಗಿಬ್ಬನ್, ಒರಾಂಗೂಟಾನ್, ಗೊರಿಲ್ಲ ಮತ್ತು ಚಿಂಪ್ಯಾಂಜಿ ಎಂಬ ನಾಲ್ಕು ಜಾತಿಗಳುಂಟು. ಮೊದಲೆರಡು ಮಂಗಗಳು ಏಷ್ಯಕ್ಕೂ ಉಳಿದವೆರಡು ಆಫ್ರಿಕಕ್ಕೂ ಸೀಮಿತವಾಗಿವೆ.

Hominoids or apes
Temporal range: Miocene-Holocene
Sumatran orangutan (Pongo abelli)
Scientific classification e
ಕ್ಷೇತ್ರ: ಯೂಕ್ಯಾರ್ಯೋಟಾ
ಸಾಮ್ರಾಜ್ಯ: ಅನಿಮೇಲಿಯ
ವಿಭಾಗ: ಕಾರ್ಡೇಟಾ
ವರ್ಗ: ಮ್ಯಾಮೇಲಿಯಾ
ಗಣ: ಪ್ರೈಮೇಟ್ಸ್
ಸಣ್ಣಗಣ: ಕ್ಯಾಟಾರಿನಿ
ಮೇಲ್ಕುಟುಂಬ: ಹೋಮಿನಾಯ್ಡಿಯೆ
Gray, 1825[]
Type species
Homo sapiens
Families

sister: Cercopithecoidea

ಗಿಬ್ಬನ್: ಆಗ್ನೇಯ ಏಷ್ಯವಾಸಿಯಾದ ಗಿಬ್ಬನ್ ಮಂಗನ ಕೆಲವು ಲಕ್ಷಣಗಳನ್ನುಳಿಸಿಕೊಂಡಿದ್ದರೂ ಮಾನವನಂತೆ ದ್ವಿಪಾದಿ. ಆದರೆ ಕಾಲುಗಳನ್ನು ನೆಟ್ಟಗೆ ಇಡದೆ ಮಡಚಿಕೊಂಡೇ ಇರುತ್ತದೆ. ಮರಗಳಲ್ಲಿ ಹೆಚ್ಚಾಗಿ ವಾಸಿಸುತ್ತ ಸಸ್ಯಾಹಾರಿಯಾಗಿದ್ದರೂ ಹುಳಹುಪ್ಪಟೆ, ಹಕ್ಕಿ ಮತ್ತು ಅದರ ಮೊಟ್ಟೆಗಳನ್ನು ತಿನ್ನುತ್ತದೆ.

ಒರಾಂಗೂಟಾನ್: ಸುಮಾತ್ರ-ಬೋರ್ನಿಯೊ ದ್ವೀಪ ವಾಸಿಯಾದ ಒರಾಂಗೂಟಾನ್ ಮರಗಳ ಮೇಲೆ ವಾಸಿಸುತ್ತ ಕೊಂಬೆಯಿಂದ ಕೊಂಬೆಗೆ ನೆಗೆಯುವುದರಲ್ಲಿ ನಿಷ್ಣಾತ. ಸಸ್ಯಾಹಾರಿಯಾಗಿದ್ದು ಅರಣ್ಯಫಲಗಳನ್ನು ತಿನ್ನುತ್ತದೆ.

ಗೊರಿಲ್ಲ: ಆಫ್ರಿಕದ ಮಧ್ಯಪ್ರದೇಶವಾಸಿಯಾದ ಗೊರಿಲ್ಲ ಅತ್ಯಪೂರ್ವವಾದ್ದು. ಬೃಹತ್ ಮಂಗಗಳಲ್ಲಿ ಅದೇ ಅತ್ಯಂತ ದೊಡ್ಡದು. ನೆಲದ ಮೇಲೆ ವಾಸಿಸುವ ಇದು ಚತುಷ್ಟಾದಿಯಾಗಿದ್ದರೂ ಹಿಂಗಾಲುಗಳ ಮೇಲೆ ನಿಲ್ಲಬಲ್ಲದು. ಇದು ಕೂಡ ಸಸ್ಯಹಾರಿ.

ಚಿಂಪ್ಯಾಂಜಿ: ಚಿಂಪ್ಯಾಂಜಿ ಆಫ್ರಿಕದ ಉಷ್ಣಪ್ರದೇಶವಾಸಿ. ಮರಗಳ ಮೇಲೆ ನೆಗೆಯುತ್ತ ವೇಗವಾಗಿ ಚಲಿಸಬಲ್ಲದು. ಅನೇಕ ಬಗೆಯ ಸಸ್ಯಗಳನ್ನು ತಿನ್ನುತ್ತದೆ. ಇದು ಹಲವು ವಿಧವಾದ ಶಬ್ದಗಳನ್ನು ಮಾಡಬಲ್ಲುದಾದರೂ ಮಾತನಾಡಲಾರದು.

ಉಲ್ಲೇಖಗಳು

ಬದಲಾಯಿಸಿ
  1. Gray, J. E. "An outline of an attempt at the disposition of Mammalia into tribes and families, with a list of the genera apparently appertaining to each tribe". Annals of Philosophy. New Series. 10: 337–344. Archived from the original on 27 April 2022. Retrieved 27 April 2022.

ಹೊರಗಿನ ಕೊಂಡಿಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ವಾನರ&oldid=1182274" ಇಂದ ಪಡೆಯಲ್ಪಟ್ಟಿದೆ