ಹಿಂದೂ ಕಾನೂನು
ಅದರ ಪ್ರಸಕ್ತ ಬಳಕೆಯಲ್ಲಿ, ಹಿಂದೂ ಕಾನೂನು ಹಿಂದೂಗಳಿಗೆ ಅನ್ವಯಿಸಲಾದ, ವಿಶೇಷವಾಗಿ ಭಾರತದಲ್ಲಿನ ವೈಯಕ್ತಿಕ ಕಾನೂನುಗಳ ವ್ಯವಸ್ಥೆಯನ್ನು (ಅಂದರೆ ಮದುವೆ, ದತ್ತು, ಪಿತ್ರಾರ್ಜಿತ) ಸೂಚಿಸುತ್ತದೆ. ಹೀಗಾಗಿ, ಆಧುನಿಕ ಹಿಂದೂ ಕಾನೂನು ಭಾರತದ ಸಂವಿಧಾನದಿಂದ (೧೯೫೦) ಸ್ಥಾಪಿತವಾದ ಭಾರತದ ಕಾನೂನಿನ ಭಾಗವಾಗಿದೆ. ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯಕ್ಕೆ ಮುಂಚೆ, ಹಿಂದೂ ಕಾನೂನು ಬ್ರಿಟಿಷ್ ವಸಾಹತುಶಾಹಿ ಕಾನೂನು ವ್ಯವಸ್ಥೆಯ ಭಾಗವಾಗಿತ್ತು ಮತ್ತು ವಿಧ್ಯುಕ್ತವಾಗಿ ೧೭೭೨ರಲ್ಲಿ ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸ್ರಿಂದ ಪ್ರತಿಷ್ಠಾಪಿಸಲಾಗಿತ್ತು ಮತ್ತು ಅವರು ತಮ್ಮ ನ್ಯಾಯ ನಿರ್ವಹಣೆಗಾಗಿ ಯೋಜನೆಯಲ್ಲಿ "ಪಿತ್ರಾರ್ಜಿತ, ಮದುವೆ, ಜಾತಿ ಮತ್ತು ಇತರ ಧಾರ್ಮಿಕ ಬಳಕೆಗಳು ಅಥವಾ ಸಂಸ್ಥೆಗಳಿಗೆ ಸಂಬಂಧಿತ ಎಲ್ಲ ಮೊಕದ್ದಮೆಗಳಲ್ಲಿ ಮುಸ್ಲಿಮರಿಗೆ ಸಂಬಂಧಿಸಿದಂತೆ ಕುರಾನಿನ ಕಾನೂನುಗಳು ಮತ್ತು ಹಿಂದೂಗಳಿಗೆ ಸಂಬಂಧಿಸಿದಂತೆ ಶಾಸ್ತ್ರಗಳ ಕಾನೂನುಗಳಿಗೆ ಏಕರೂಪವಾಗಿ ಬದ್ಧವಾಗಿರತಕ್ಕದ್ದು" ಎಂದು ಘೋಷಿಸಿದರು.