ಒಂದು ಸಂಸ್ಕೃತ ಶಬ್ದವಾದ ಹೋಮ (ಹವನ ಎಂದೂ ಪರಿಚಿತವಾಗಿದೆ) ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆಯಾದ ಯಾವುದೇ ಧಾರ್ಮಿಕ ಕ್ರಿಯಾವಿಧಿಯನ್ನು ಸೂಚಿಸುತ್ತದೆ. ಪ್ರಾಚೀನ ಕಾಲದಲ್ಲಿ ಋಷಿಗಳಿಂದ ಅದರ ಆಚರಣೆಯು ವೈದಿಕ ಯುಗಕ್ಕೆ ನಿಕಟವಾಗಿತ್ತು. ಈಗ, ಹೋಮ-ಹವನ ಶಬ್ದಗಳನ್ನು ಯಜ್ಞ ಮತ್ತು ಅಗ್ನಿಹೋತ್ರ ಶಬ್ದಗಳಿಂದ ಅದಲುಬದಲು ಮಾಡಬಹುದು. ನೆಲದಲ್ಲಿ ಕುಣಿ ಮಾಡಿ ಹೋಮಕುಂಡವನ್ನು ತಯಾರಿಸಲಾಗುತ್ತದೆ. ಹೋಮಕುಂಡವನ್ನು ಕಟ್ಟಲು ಸಾಮಾನ್ಯವಾಗಿ ಇಟ್ಟಿಗೆ, ಕಲ್ಲು ಅಥವಾ ತಾಮ್ರವನ್ನು ಬಳಸಲಾಗುತ್ತದೆ.

"https://kn.wikipedia.org/w/index.php?title=ಹೋಮ&oldid=889020" ಇಂದ ಪಡೆಯಲ್ಪಟ್ಟಿದೆ