ಜಯಂತ ಭಟ್ಟ (ಸುಮಾರು ಕ್ರಿ.ಶ. ೯ನೇ ಶತಮಾನ) ಒಬ್ಬ ಕಾಶ್ಮೀರಿ ಕವಿ ಮತ್ತು ಭಾರತೀಯ ತತ್ವಶಾಸ್ತ್ರನ್ಯಾಯ ಪರಂಪರೆಯ ತತ್ವಶಾಸ್ತ್ರಜ್ಞನಾಗಿದ್ದನು. ತನ್ನ ತತ್ವಶಾಸ್ತ್ರೀಯ ಗ್ರಂಥ ನ್ಯಾಯಮಂಜರಿ ಮತ್ತು ಆಗಮಾಡಂಬರ ನಾಟಕದಲ್ಲಿ, ರಾಜ ಶಂಕರವರ್ಮನ್‍ನನ್ನು (ಕ್ರಿ.ಶ. ೮೮೩-೯೦೨) ಜಯಂತನು ತನ್ನ ಸಮಕಾಲೀನನೆಂದು ಪ್ರಸ್ತಾಪಿಸುತ್ತಾನೆ. ಅವನ ಮಗ ಅಭಿನಂದನು ತನ್ನ ಕಾದಂಬರಿ-ಕಥಾಸಾರದಲ್ಲಿ, ಜಯಂತನ ಮುತ್ತಜ್ಜನು ಕ್ರಿ.ಶ. ೮ನೇ ಶತಮಾನದ ರಾಜ ಲಲಿತಾದಿತ್ಯನ ಮಂತ್ರಿಯಾಗಿದ್ದನು ಎಂದೂ ಪ್ರಸ್ತಾಪಿಸಿದ್ದಾನೆ.

ಜಯಂತ ಭಟ್ಟ
ಜನನest. 9th Century CE
ಮರಣunknown
ತತ್ವಶಾಸ್ತ್ರಭಾರತೀಯ ತತ್ವಶಾಸ್ತ್ರನ್ಯಾಯ ಚಿಂತನೆ