ವಿಷ್ಣುವರ್ಧನ್ (ನಟ)

ಭಾರತೀಯ ಚಲನಚಿತ್ರ ನಟ

ಡಾ. ವಿಷ್ಣುವರ್ಧನ್ (ಜನನ: ಸೆಪ್ಟೆಂಬರ್ ೧೮ ೧೯೫೦ | ಮರಣ :ಡಿಸೆಂಬರ್ ೩೦ ೨೦೦೯) ಕನ್ನಡ ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರು.ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ. ವಿಷ್ಣುವರ್ಧನ್ ಅವರು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳ, ಹಿಂದಿ ಭಾಷೆಗಳಲ್ಲಿ ಸುಮಾರು ೨೨೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.[] ಇವರಿಗೆ ಇದ್ದ ಬಿರುದುಗಳು ಸಾಹಸ ಸಿಂಹ, ಅಭಿನಯ ಭಾರ್ಗವ, ಮೈಸೂರು ರತ್ನ

ವಿಷ್ಣುವರ್ಧನ್
2013ರಲ್ಲಿ ಭಾರತ ಸರ್ಕಾರ ಹೊರತಂದ ವಿಷ್ಣುವರ್ಧನ್ ಅವರ ಅಂಚೆ ಚೀಟಿ
Born
ಸಂಪತ್ ಕುಮಾರ್

(೧೯೫೦-೦೯-೧೮)೧೮ ಸೆಪ್ಟೆಂಬರ್ ೧೯೫೦
Died30 December 2009(2009-12-30) (aged 59)
Nationalityಭಾರತೀಯ
Occupation(s)ನಟ, ಗಾಯಕ, ನಿರ್ಮಾಪಕ, ಕಥೆಗಾರ
Years active1972–2009
Spouseಭಾರತಿ ವಿಷ್ಣುವರ್ಧನ್ (1975)
Relativesಅನಿರುಧ್ (ಅಳಿಯ)[]

ಹುಟ್ಟು, ವಿದ್ಯಾಭ್ಯಾಸ, ಬಾಲ್ಯ

ಬದಲಾಯಿಸಿ

ಡಾ. ವಿಷ್ಣುವರ್ಧನ್ ಅವರು ಹೆಚ್.ಎಲ್. ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.ಇವರ ಪೂರ್ವಜರು ಮಂಡ್ಯ ಜಿಲ್ಲೆಯವರು. ೬ ಸಹೋದರ/ಸಹೋದರಿಯರು. ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದರು.

ನಟನೆ/ಕಲಾಜೀವನ

ಬದಲಾಯಿಸಿ
 
ವಿಷ್ಣು ಅಭಿನಯದ "ಸಾಮ್ರಾಟ್" ಚಿತ್ರದ ಭಿತ್ತಿ ಪತ್ರ
  • ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ 1955ರಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ ಕೋಕಿಲವಾಣಿ ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರ ವಹಿಸಿದ್ದರು.
  • ನಾಯಕನ ಪಾತ್ರದಲ್ಲಿ ಇವರ ಮೊದಲ ಚಿತ್ರ ೧೯೭೨ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾದ ಚಿತ್ರ, ಆಗಿನ ಕಾಲಕ್ಕೇ 7 ಲಕ್ಶ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು. ರಾಷ್ಟ್ರಪ್ರಶಸ್ತಿ ಗೆದ್ದುಕೊಂಡಿತು. ವಿಷ್ಣು ನಟಿಸಿದ್ದ ‘ಸಾಹಸಸಿಂಹ’ ಸಿನೆಮಾ 25 ವಾರಗಳನ್ನು ಪೂರೈಸಿತು. ಇಲ್ಲಿಂದ ಮುಂದೆ ವಿಷ್ಣು ಸಾಹಸಸಿಂಹ ಎಂದು ಹೆಸರುವಾಸಿಯಾದರು.ಆದರೆ ಈ ಚಿತ್ರಕ್ಕೂ ಮೊದಲೆ ಅಂದರೆ 1979ರಲ್ಲೆ ಇವರಿಗೆ 'ಸಾಹಸಸಿಂಹ' ಎಂಬ ಬಿರುದು ಬಂದಿತ್ತು.
  • ನಟನೆಯಲ್ಲದೇ, ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ
  • ೧೯೮೦ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು.[]

ಒಂದಿಷ್ಟು ಹೆಚ್ಚಿನ ಮಾಹಿತಿಗಳು

ಬದಲಾಯಿಸಿ

ಸಿನಿಮಾರಂಗಕ್ಕೆ ನಡೆದು ಬಂದ ಹಾದಿ: ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು . ನಟನೆಯಲ್ಲದೇ ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

  • ಕನ್ನಡ ಚಿತ್ರರಂಗದಲ್ಲೆ ಅತಿ ಹೆಚ್ಚು ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. (ಸುಮಾರು ೧೪ ಚಿತ್ರಗಳು)
  • ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಹೆಚ್ಚಿನ ಚಿತ್ರದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ.
  • ಬನ್ನಂಜೆ ಗೋವಿಂದಾಚಾರ್ಯರು ಇವರ ಆದ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯಶಾಸ್ತ್ರವನ್ನು ನಂಬುತ್ತಿದ್ದ ಇವರು ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ "೩೨೧" ಬಳಸುತ್ತಿದ್ದರು.
  • ಬೆಂಗಳೂರು ವಿಶ್ವವಿದ್ಯಾಲಯವು ೨೦೦೫ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ.
  • ಇವರ ಸ್ಮರಣಾರ್ಥ ಭಾರತ ಸರ್ಕಾರ 2013ರಲ್ಲಿ ಅಂಚೆ ಚೀಟಿ ಹೊರತಂದಿದೆ.

ಡಾ. ವಿಷ್ಣುವರ್ಧನ್ ಅಭಿನಯದ ಚಿತ್ರಗಳು

ಬದಲಾಯಿಸಿ
  • ಕನ್ನಡ
ವರ್ಷ ಸಂಖ್ಯೆ ಚಿತ್ರದ ಹೆಸರು ಪಾತ್ರದ ಹೆಸರು ನಾಯಕಿ(ಯರು) ಸೆನ್ಸಾರ್ ಪ್ರಮಾಣಪತ್ರ
೧೯೭೨ ವಂಶವೃಕ್ಷ ಬಾಲ ನಟ
ನಾಗರಹಾವು ರಾಮಾಚಾರಿ ಆರತಿ, ಶುಭಾ
೧೯೭೩ ಸೀತೆಯಲ್ಲ ಸಾವಿತ್ರಿ ಜಯಲಕ್ಷ್ಮಿ
ಮನೆ ಬೆಳಗಿದ ಸೊಸೆ ಭಾರತಿ
ಗಂಧದ ಗುಡಿ ಆನಂದ್
೧೯೭೪ ಬೂತಯ್ಯನ ಮಗ ಅಯ್ಯು ಗುಳ್ಳ ಭವಾನಿ
ಪ್ರೊಫೆಸರ್ ಹುಚ್ಚುರಾಯ ಮಂಜುಳಾ
ಅಣ್ಣ ಅತ್ತಿಗೆ ಭಾರತಿ
೧೯೭೫ ದೇವರಗುಡಿ ಭಾರತಿ
೧೦ ಕೂಡಿ ಬಾಳೋಣ ಭವಾನಿ
೧೧ ಕಳ್ಳ ಕುಳ್ಳ ಮಹೇಶ ಭವಾನಿ
೧೨ ಭಾಗ್ಯಜ್ಯೋತಿ ಭಾರತಿ, ಶುಭಾ
೧೩ ನಾಗಕನ್ಯೆ ಭವಾನಿ
೧೪ ಒಂದೇ ರೂಪ ಎರಡು ಗುಣ ಭವಾನಿ
೧೯೭೬ ೧೫ ದೇವರು ಕೊಟ್ಟ ವರ ಜಯಂತಿ
೧೬ ಹೊಸಿಲು ಮೆಟ್ಟಿದ ಹೆಣ್ಣು ಆರತಿ
೧೭ ಮಕ್ಕಳ ಭಾಗ್ಯ ಭಾರತಿ
೧೮ ಬಂಗಾರದ ಗುಡಿ ಮಂಜುಳಾ
೧೯೭೭ ೧೯ ಬಯಸದೇ ಬಂದ ಭಾಗ್ಯ ಮಂಜುಳಾ
೨೦ ಸೊಸೆ ತಂದ ಸೌಭಾಗ್ಯ ಮಂಜುಳಾ
೨೧ ನಾಗರಹೊಳೆ (ಚಲನಚಿತ್ರ) ಭಾರತಿ
೨೨ ಚಿನ್ನಾ ನಿನ್ನ ಮುದ್ದಾಡುವೆ ಜಯಂತಿ
೨೩ ಸಹೋದರರ ಸವಾಲ್ ಕವಿತಾ
೨೪ ಶ್ರೀಮಂತನ ಮಗಳು ಜಯಂತಿ
೨೫ ಶನಿ ಪ್ರಭಾವ ಭವಾನಿ
೨೬ ಕಿಟ್ಟು ಪುಟ್ಟು ಕಿಟ್ಟು ಮಂಜುಳಾ
೨೭ ಗಲಾಟೆ ಸಂಸಾರ ಸುಬ್ರಮಣ್ಯ(ಸುಬ್ಬು) ಮಂಜುಳಾ
೧೯೭೮ ೨೮ ಹೊಂಬಿಸಿಲು ಡಾ.ನಟರಾಜ್ ಆರತಿ
೨೯ ಸಂದರ್ಭ ಭಾರತಿ
೩೦ ಕಿಲಾಡಿ ಕಿಟ್ಟು ಕಿಟ್ಟು ಕವಿತಾ
೩೧ ವಂಶಜ್ಯೋತಿ ಕಲ್ಪನಾ, ಜಯಂತಿ
೩೨ ಮುಯ್ಯಿಗೆ ಮುಯ್ಯಿ ಆರತಿ
೩೩ ಸಿರಿತನಕ್ಕೆ ಸವಾಲ್ ಮಂಜುಳಾ ವಿಜಯಕುಮಾರ್
೩೪ ಪ್ರತಿಮಾ (ಚಲನಚಿತ್ರ) ಭಾರತಿ
೩೫ ನನ್ನ ಪ್ರಾಯಶ್ಚಿತ್ತ ರೆಹನಾ ಸುಲ್ತಾನ್
೩೬ ಸ್ನೇಹ ಸೇಡು ಮಂಜುಳಾ
೩೭ ಕಿಲಾಡಿ ಜೋಡಿ ಲಕ್ಷ್ಮಿ
೩೮ ವಸಂತ ಲಕ್ಷ್ಮಿ ಮಂಜುಳಾ
೩೯ ಅಮರನಾಥ್ (ಚಲನಚಿತ್ರ)
೪೦ ಭಲೇ ಹುಡುಗ ಮಂಜುಳಾ
೪೧ ಮಧುರ ಸಂಗಮ ಕುಮಾರ ರಾಮ ಭಾರತಿ
೪೨ ಸಿಂಗಾಪುರದಲ್ಲಿ ರಾಜಾಕುಳ್ಳ ರಾಜಾ ಮಂಜುಳಾ
೧೯೭೯ ೪೩ ಅಸಾಧ್ಯ ಅಳಿಯ ಪದ್ಮಪ್ರಿಯ
೪೪ ವಿಜಯ್ ವಿಕ್ರಮ್ ವಿಜಯ್,ವಿಕ್ರಮ್ ಜಯಂತಿ, ದೀಪಾ
೪೫ ನಾನಿರುವುದೆ ನಿನಗಾಗಿ (ಚಲನಚಿತ್ರ) ಆರತಿ
೪೬ ಮಾನಿನಿ ಆರತಿ
೪೭ ನೆಂಟರೋ ಗಂಟು ಕಳ್ಳರೋ ಆರತಿ
೧೯೮೦ ೪೮ ನನ್ನ ರೋಷ ನೂರು ವರುಷ ಪದ್ಮಪ್ರಿಯ
೪೯ ರಾಮ ಪರಶುರಾಮ ರಾಮ ಮಂಜುಳಾ
೫೦ ಕಾಳಿಂಗ (ಚಲನಚಿತ್ರ) ಪ್ರಭಾಕರ, ಕಾಳಿಂಗ ರತಿ ಅಗ್ನಿಹೋತ್ರಿ, ಗೀತಾ
೫೧ ಡ್ರೈವರ್ ಹನುಮಂತು ಸಂಗೀತದ ಗುರುಗಳು
೫೨ ಹಂತಕನ ಸಂಚು ಆರತಿ, ಜಯಮಾಲ
೫೩ ಮಕ್ಕಳ ಸೈನ್ಯ ಸುಮಿತ್ರಾ
೫೪ ಬಿಳಿಗಿರಿಯ ಬನದಲ್ಲಿ ಪಾರ್ವತಿ
೫೫ ಸಿಂಹಜೋಡಿ ಮಂಜುಳಾ
೫೬ ರಹಸ್ಯರಾತ್ರಿ ಭಾರತಿ
೫೭ ಬಂಗಾರದ ಜಿಂಕೆ ಚಾರು ಭಾರತಿ, ಆರತಿ
೧೯೮೧ ೫೮ ಮದುವೆ ಮಾಡು ತಮಾಷೆ ನೋಡು ಗಣೇಶ ಆರತಿ
೫೯ ಮನೆ ಮನೆ ಕಥೆ ಸುಬ್ಬು ಜಯಚಿತ್ರಾ
೬೦ ನಾಗ ಕಾಳ ಭೈರವ ಜಯಂತಿ, ಜಯಮಾಲ
೬೨ ಗುರು ಶಿಷ್ಯರು ರಾಜ ನಂದಿವರ್ಧನ ಮಂಜುಳಾ
೬೩ ಸ್ನೇಹಿತರ ಸವಾಲ್ ಮಂಜುಳಾ
೬೪ ಅವಳ ಹೆಜ್ಜೆ ಲಕ್ಷ್ಮಿ
೬೫ ಪ್ರೀತಿಸಿ ನೋಡು ಆರತಿ
೧೯೮೨ ೬೬ ಪೆದ್ದ ಗೆದ್ದ ಲಾಯರ್ ಭಾರತಿ
೬೭ ಸಾಹಸ ಸಿಂಹ ಕಾಜಲ್ ಕಿರಣ್
೬೮ ಕಾರ್ಮಿಕ ಕಳ್ಳನಲ್ಲ ಆರತಿ
೬೯ ಊರಿಗೆ ಉಪಕಾರಿ ಶ್ರೀಕಾಂತ್ ಪದ್ಮಪ್ರಿಯ
೭೦ ಜಿಮ್ಮಿಗಲ್ಲು ಕೆರೆಏರಿ/ಜಿಮ್ಮಿ ಶ್ರೀಪ್ರಿಯಾ
೭೧ ಸುವರ್ಣ ಸೇತುವೆ ಆರತಿ
೭೨ ಒಂದೇ ಗುರಿ ಮಾಧವಿ
೭೩ ಕಲ್ಲು ವೀಣೆ ನುಡಿಯಿತು ಜಯಂತಿ, ಆರತಿ, ಪದ್ಮಪ್ರಿಯ
೧೯೮೩ ೭೪ ಮುತ್ತೈದೆ ಭಾಗ್ಯ
೭೫ ಗಂಧರ್ವ ಗಿರಿ ಆರತಿ
೭೬ ಸಿಡಿದೆದ್ದ ಸಹೋದರ ಆರತಿ, ಜಯಮಾಲ
೭೭ ಗಂಡುಗಲಿ ರಾಮ ರಾಮ, ಗಂಡುಗಲಿ, ಕುಮಾರ್ ಮಾಧವಿ
೭೮ ಚಿನ್ನದಂತ ಮಗ ಮಾಧವಿ
೭೯ ಸಿಂಹ ಘರ್ಜನೆ ವಿಜಯಶಾಂತಿ
೧೯೮೪ ೮೦ ಇಂದಿನ ರಾಮಾಯಣ ಗಾಯತ್ರಿ
೮೧ ಪ್ರಚಂಡ ಕುಳ್ಳ ಶಿವ ಗೀತಾ
೮೨ ರುದ್ರನಾಗ ಮಾಧವಿ
೮೩ ಖೈದಿ ಆರತಿ, ಮಾಧವಿ
೮೪ ಬೆಂಕಿ ಬಿರುಗಾಳಿ ಜಯಮಾಲ
೮೫ ಬಂಧನ ಡಾ.ಹರೀಶ್ ಸುಹಾಸಿನಿ
೮೬ ಹುಲಿ ಹೆಜ್ಜೆ ವಿಜಯಲಕ್ಷ್ಮಿ ಸಿಂಗ್
೮೭ ಚಾಣಕ್ಯ ಮಾಧವಿ
೧೯೮೫ ೮೮ ಆರಾಧನೆ ಗೀತಾ
೮೯ ಕರ್ತವ್ಯ ಪವಿತ್ರಾ
೯೦ ಮಹಾಪುರುಷ ಗಾಯತ್ರಿ
೯೧ ವೀರಾಧಿವೀರ ಗೀತಾ
೯೨ ನೀ ಬರೆದ ಕಾದಂಬರಿ ಭವ್ಯ
೯೩ ಮರೆಯದ ಮಾಣಿಕ್ಯ ಗೀತಾ
೯೪ ನನ್ನ ಪ್ರತಿಜ್ಞೆ ಚಂದನಾ
೯೫ ಜೀವನ ಚಕ್ರ ರಾಧಿಕಾ
೯೬ ನೀ ತಂದ ಕಾಣಿಕೆ ರವಿ ಜಯಸುಧಾ
೧೯೮೬ ೯೭ ಕರ್ಣ (ಚಲನಚಿತ್ರ) ಕರ್ಣ ಸುಮಲತಾ
೯೮ ಕಥಾನಾಯಕ ರಂಗ ಸುಮಲತಾ
೯೯ ಈ ಜೀವ ನಿನಗಾಗಿ ಚಂದ್ರು ಊರ್ವಶಿ
೧೦೦ ಸತ್ಯಜ್ಯೋತಿ ಸುಮಲತಾ, ಊರ್ವಶಿ
೧೦೧ ಕೃಷ್ಣ ನೀ ಬೇಗನೆ ಬಾರೋ ಕೃಷ್ಣ ಭವ್ಯ, ಕಿಮ್ ಶರ್ಮ
೧೦೨ ಮಲಯ ಮಾರುತ ವಿಶ್ವನಾಥ ಮಾಧವಿ, ಸರಿತಾ
೧೯೮೭ ೧೦೩ ಪ್ರೇಮಲೋಕ ಕಾಲೇಜ್ ಲೆಕ್ಚರರ್
೧೦೪ ಸೌಭಾಗ್ಯ ಲಕ್ಷ್ಮಿ ಲಕ್ಷ್ಮಿ, ರಾಧಾ
೧೦೫ ಕರುಣಾಮಯಿ ಭವ್ಯ
೧೦೬ ಜಯಸಿಂಹ ಜಯಸಿಂಹ ಮಹಾಲಕ್ಷ್ಮಿ
೧೦೭ ಆಸೆಯ ಬಲೆ ನಳಿನಿ
೧೦೮ ಜೀವನ ಜ್ಯೋತಿ ಅಂಬಿಕಾ, ನಳಿನಿ
೧೦೯ ಶುಭ ಮಿಲನ ಅಂಬಿಕಾ
೧೧೦ ಸತ್ಯಂ ಶಿವಂ ಸುಂದರಂ (ಚಲನಚಿತ್ರ) ಸುಮಿತ್ರಾ, ರಾಧಿಕಾ
೧೯೮೮ ೧೧೧ ಡಿಸೆಂಬರ್ ೩೧ (ಚಲನಚಿತ್ರ) ಊರ್ವಶಿ
೧೧೨ ಒಲವಿನ ಆಸರೆ ರೂಪಿಣಿ
೧೧೩ ನಮ್ಮೂರ ರಾಜ ಮಂಜುಳಾ ಶರ್ಮ
೧೧೪ ಜನನಾಯಕ ಭವ್ಯ
೧೧೫ ಸುಪ್ರಭಾತ (ಚಲನಚಿತ್ರ) ವಿಜಯ್ ಸುಹಾಸಿನಿ
೧೧೬ ಕೃಷ್ಣ ರುಕ್ಮಿಣಿ ಕೃಷ್ಣ ರಮ್ಯಾ ಕೃಷ್ಣ
೧೧೭ ಮಿಥಿಲೆಯ ಸೀತೆಯರು ಗೀತಾ
೧೧೮ ದಾದಾ ದಾದಾ ಗೀತಾ, ಸುಪರ್ಣ
೧೧೯ ಒಂದಾಗಿ ಬಾಳು ಮಂಜುಳಾ ಶರ್ಮ
೧೨೦ ಹೃದಯಗೀತೆ ಅಶೋಕ್ ಭವ್ಯ, ಖುಷ್ಬೂ
೧೨೧ ರುದ್ರ ರುದ್ರ ಖುಷ್ಬೂ
೧೨೨ ದೇವ ದೇವ ರೂಪಿಣಿ
೧೨೩ ಡಾಕ್ಟರ್ ಕೃಷ್ಣ ಡಾ.ಕೃಷ್ಣ ತಾರಾ, ಸುಮನ್ ರಂಗನಾಥ್
೧೯೯೦ ೧೨೪ ಶಿವಶಂಕರ್ ಶಿವು,ಶಂಕರ್ ಶೋಭನಾ
೧೨೫ ಮುತ್ತಿನ ಹಾರ ಅಚ್ಚಪ್ಪ ಸುಹಾಸಿನಿ
೧೨೬ ಮತ್ತೆ ಹಾಡಿತು ಕೋಗಿಲೆ ಭವ್ಯ, ರೂಪಿಣಿ
೧೯೯೧ ೧೨೭ ಲಯನ್ ಜಗಪತಿರಾವ್ ಲಯನ್ ಜಗಪತಿರಾವ್, ಕುಮಾರ್ ಲಕ್ಷ್ಮಿ, ಭವ್ಯ
೧೨೮ ನೀನು ನಕ್ಕರೆ ಹಾಲು ಸಕ್ಕರೆ ಸುಬ್ಬು ರೂಪಿಣಿ, ರಜನಿ, ವಿನಯಾ ಪ್ರಸಾದ್, ಚಂದ್ರಿಕಾ, ಅಂಜಲಿ
೧೨೯ ಜಗದೇಕ ವೀರ ತ್ರಿವೇಣಿ
೧೩೦ ಪೋಲಿಸ್ ಮತ್ತು ದಾದಾ ರೂಪಾ ಗಂಗೂಲಿ, ಸಂಗೀತಾ ಬಿಜಲಾನಿ
೧೯೯೨ ೧೩೧ ರಾಜಾಧಿರಾಜ ರೂಪಿಣಿ
೧೩೨ ರವಿವರ್ಮ ರವಿವರ್ಮ ಭವ್ಯಾ, ರೂಪಿಣಿ
೧೩೩ ಹರಕೆಯ ಕುರಿ ಗೀತಾ
೧೩೪ ನನ್ನ ಶತ್ರು ರೇಖಾ
೧೯೯೩ ೧೩೫ ಸಂಘರ್ಷ (ಚಲನಚಿತ್ರ) ಮಹೇಶ್ ಗೀತಾ, ಶಿವರಂಜನಿ
೧೩೬ ವೈಶಾಖದ ದಿನಗಳು ವಿಷ್ಣು ಮೂನ್ ಮೂನ್ ಸೇನ್, ವನಿತಾ ವಾಸು
೧೩೭ ನಾನೆಂದೂ ನಿಮ್ಮವನೆ ಶ್ರೀಶಾಂತಿ
೧೩೮ ರಾಯರು ಬಂದರು ಮಾವನ ಮನೆಗೆ ವಿಷ್ಣು ಡಾಲಿ ಮಿನ್ಹಾಸ್, ಫರ್ಹೀನ್
೧೩೯ ವಿಷ್ಣು ವಿಜಯ ವಿಷ್ಣು ಅಶ್ವಿನಿ ಭಾವೆ
೧೪೦ ಮಣಿಕಂಠನ ಮಹಿಮೆ ಅಯ್ಯಪ್ಪ ತಾರಾ
೧೪೧ ನಿಷ್ಕರ್ಷ ಅಜಯ್ ಅಂಜನಾ, ಸುಮನ್ ನಗರ್ ಕರ್
೧೯೯೪ ೧೪೨ ಟೈಂಬಾಂಬ್ ಶ್ರುತಿ
೧೪೩ ಕುಂತಿಪುತ್ರ ಸೋನಾಕ್ಷಿ
೧೪೪ ಸಾಮ್ರಾಟ್ ಸೌಮ್ಯ ಕುಲಕರ್ಣಿ
೧೪೫ ಮಹಾ ಕ್ಷತ್ರಿಯ ಸುಧಾರಾಣಿ, ಸೋನು ವಾಲಿಯಾ
೧೪೬ ಹಾಲುಂಡ ತವರು ಸಿದ್ದಾರ್ಥ ಸಿತಾರ
೧೪೭ ಕಿಲಾಡಿಗಳು ಸುವರ್ಣ ಮಾಥ್ಯೂಸ್
೧೯೯೫ ೧೪೮ ಕೋಣ ಈದೈತೆ ಅಡ್ವೋಕೇಟ್ ವಿಷ್ಣು ವಿನಯಾ ಪ್ರಸಾದ್
೧೪೯ ಯಮ ಕಿಂಕರ ಕಿಂಕರ ಸೋನಾಕ್ಷಿ
೧೫೦ ಮೋಜುಗಾರ ಸೊಗಸುಗಾರ ವಿಜಯ್ ಮತ್ತು ವಿನೋದ್ ಶ್ರುತಿ, ಸೋನಾಕ್ಷಿ
೧೫೧ ದೀರ್ಘ ಸುಮಂಗಲಿ ಆದಿತ್ಯ ಸಿತಾರ
೧೫೨ ಬಂಗಾರದ ಕಳಶ ಸಿತಾರ, ಅಂಜನಾ
೧೫೩ ತುಂಬಿದ ಮನೆ ರಾಮ ವಿನಯಾ ಪ್ರಸಾದ್
೧೫೪ ಕರುಳಿನ ಕುಡಿ ಸಿತಾರ
೧೫೫ ಹಿಮಪಾತ ಅರವಿಂದ್/ಗೌತಮ್ ಸುಹಾಸಿನಿ, ಜಯಪ್ರದಾ
೧೯೯೬ ೧೫೬ ಅಪ್ಪಾಜಿ ಆಮನಿ
೧೫೭ ಹಲೋ ಡ್ಯಾಡಿ ಸೋನಾಕ್ಷಿ, ಸುರಭಿ U
೧೫೮ ಕರ್ನಾಟಕ ಸುಪುತ್ರ ಸೌಮ್ಯ ಕುಲಕರ್ಣಿ U
೧೫೯ ಧಣಿ ಗೋಪಿನಾಥ್ ವಿನೀತಾ U
೧೬೦ ಜೀವನದಿ ಸಾಗರ್ ಖುಷ್ಬೂ U
೧೬೧ ಬಾಳಿನ ಜ್ಯೋತಿ U
೧೯೯೭ ೧೬೨ ಮಂಗಳ ಸೂತ್ರ (೧೯೯೭) ವಿನಯಾ ಪ್ರಸಾದ್, ಪ್ರಿಯಾ ರಾಮನ್ U
೧೬೩ ಎಲ್ಲರಂಥಲ್ಲ ನನ್ನ ಗಂಡ ಸೂರ್ಯ ಪ್ರೇಮಾ U
೧೬೪ ಶೃತಿ ಹಾಕಿದ ಹೆಜ್ಜೆ ಡಾ.ಕುಮಾರ್ ಶ್ರುತಿ U
೧೬೫ ಜನನಿ ಜನ್ಮಭೂಮಿ ಡಾ.ಯಶವಂತ್ ಭಾರತಿ U
೧೬೬ ಲಾಲಿ ಕೃಷ್ಣಕುಮಾರ್ ಮೋಹಿನಿ, ಶಾಂತಿಕೃಷ್ಣ U
೧೯೯೮ ೧೬೭ ನಿಶ್ಯಬ್ಧ ರೇವತಿ, ಮೋಹಿನಿ U
೧೬೮ ಯಾರೇ ನೀನು ಚೆಲುವೆ ಆಟೋ ಡ್ರೈವರ್ ವಿಷ್ಣು ಸಂಗೀತಾ U
೧೬೯ ಸಿಂಹದ ಗುರಿ ಚಾರುಲತಾ U
೧೭೦ ಹೆಂಡ್ತಿಗೇಳ್ತೀನಿ ಜಯರಾಮ್ ಸುಹಾಸಿನಿ U
೧೯೯೯ ೧೭೧ ವೀರಪ್ಪನಾಯ್ಕ ವೀರಪ್ಪನಾಯ್ಕ ಶ್ರುತಿ U
೧೭೨ ಹಬ್ಬ ವಿಷ್ಣು ಜಯಪ್ರದಾ U
೧೭೩ ಸೂರ್ಯವಂಶ ಸತ್ಯಮೂರ್ತಿ & ಕನಕ ಮೂರ್ತಿ ಇಷಾ ಕೊಪ್ಪಿಕರ್, ವಿಜಯಲಕ್ಷ್ಮಿ U
೧೭೪ ಪ್ರೇಮೋತ್ಸವ ಭರತ್ ರೋಜಾ, ದೇವಯಾನಿ U
೨೦೦೦ ೧೭೫ ದೀಪಾವಳಿ ರವೀಂದ್ರನಾಥ್ ಚಾಂದಿನಿ U
೧೭೬ ನನ್ ಹೆಂಡ್ತಿ ಚೆನಾಗಿದಾಳೆ ಎ.ಸಿ.ಪಿ. ರಾಜೀವ್ ವಿಜಯ್ ರಾಘವ್ U
೧೭೭ ಸೂರಪ್ಪ ಸೂರಪ್ಪ ಶ್ರುತಿ U
೧೭೮ ಯಜಮಾನ ಶಂಕರ,ಗಣೇಶ ಪ್ರೇಮಾ, ಅರ್ಚನಾ U
೨೦೦೧ ೧೭೯ ದಿಗ್ಗಜರು ದೊಡ್ಡ,ಚಿಕ್ಕಯ್ಯ ಸಾಂಘವಿ U
೧೮೦ ಕೋಟಿಗೊಬ್ಬ ನಂಜುಂಡ ಪ್ರಿಯಾಂಕ U
೨೦೦೨ ೧೮೧ ಪರ್ವ (ಚಲನಚಿತ್ರ) ಸಾಗರ್ ಪ್ರೇಮಾ, ರೋಜಾ U
೧೮೨ ಜಮೀನ್ದಾರ್ರು ಬೆಟ್ಟಪ್ಪ,ಬಿಳಿಗಿರಿ ಪ್ರೇಮಾ, ರಾಶಿ U
೧೮೩ ಸಿಂಹಾದ್ರಿಯ ಸಿಂಹ ಮೀನಾ, ಭಾನುಪ್ರಿಯಾ U
೨೦೦೩ ೧೮೪ ರಾಜ ನರಸಿಂಹ ರಾಜ ನರಸಿಂಹ ರಮ್ಯ ಕೃಷ್ಣ. ರಾಶಿ U
೧೮೫ ಹೃದಯವಂತ ಶಿವಪ್ಪ ನಗ್ಮಾ U
೨೦೦೪ ೧೮೬ ಕದಂಬ (ಚಲನಚಿತ್ರ) ಮಧುಕೇಶ್ವರ ಕದಂಬ ಭಾನುಪ್ರಿಯಾ U
೧೮೭ ಆಪ್ತಮಿತ್ರ ಡಾ.ವಿಜಯ್ ಸೌಂದರ್ಯ, ಪ್ರೇಮ U/A
೧೮೮ ಸಾಹುಕಾರ ಸಾವ್ಕಾರ್ರು-ರಾಜಾ ರವಿವರ್ಮ U
೧೮೯ ಜ್ಯೇಷ್ಠ ಅಶಿಮಾ ಬಲ್ಲಾ U
೨೦೦೫ ೧೯೦ ವರ್ಷ(ಚಲನಚಿತ್ರ) ವರ್ಷ ಮಾನ್ಯಾ U
೧೯೧ ವಿಷ್ಣುಸೇನಾ ಪ್ರೊ.ಜಯಸಿಂಹ ಲಕ್ಷ್ಮಿ ಗೋಪಾಲಸ್ವಾಮಿ U
೨೦೦೬ ೧೯೨ ನೀನೆಲ್ಲೋ ನಾನಲ್ಲೆ ವೀರು ರಕ್ಷಿತಾ U
೧೯೩ ಸಿರಿವಂತ ನಾರಾಯಣಮೂರ್ತಿ ಶ್ರುತಿ U
೨೦೦೭ ೧೯೪ ಏಕದಂತ ವಿಜಯ್ (ಬಸ್ ಕಂಡಕ್ಟರ್) ಪ್ರೇಮಾ U
೧೯೫ ಕ್ಷಣ ಕ್ಷಣ ಡಿ.ಸಿ.ಪಿ. ವಿಷ್ಣು ಕಿರಣ್ ರಾಥೋಡ್ U
೧೯೬ ಮಾತಾಡ್ ಮಾತಾಡು ಮಲ್ಲಿಗೆ ಹೂವಯ್ಯ ಸುಹಾಸಿನಿ U
೧೯೭ ಈ ಬಂಧನ ಹರೀಶ್ ರಾಜ್ ಜಯಪ್ರದಾ U
೨೦೦೯ ೧೯೮ ನಮ್ಮೆಜಮಾನ್ರು ಶಶಾಂಕ್ ಲಕ್ಷ್ಮಿ ಗೋಪಾಲಸ್ವಾಮಿ U
೧೯೯ ಬಳ್ಳಾರಿ ನಾಗ ನಾಗ ಮಾಣಿಕ್ಯ ಮಾನಸಿ U/A
೨೦೧೦ ೨೦೦ ಸ್ಕೂಲ್ ಮಾಸ್ಟರ್ ಜಗನ್ನಾಥ್ ಸುಹಾಸಿನಿ U/A
೨೦೧ ಆಪ್ತ ರಕ್ಷಕ ಡಾ.ವಿಜಯ್ - ವಿಜಯ ರಾಜೇಂದ್ರ ಬಹದ್ದೂರ್ ವಿಮಲಾ ರಾಮನ್ U/A
ಸಂಖ್ಯೆ ಚಿತ್ರದ ಹೆಸರು
ಏಕ್ ನಯಾ ಇತಿಹಾಸ್
ಇನ್ಸ್ ಪೆಕ್ಟರ್ ಧನುಷ್
ಖಾಖಿ ವರ್ಧಿ
ಜಾಲೀಮ್
ಸಂಖ್ಯೆ ಚಿತ್ರದ ಹೆಸರು
ಮಳಲೈ ಪಟ್ಟಾಳಂ
ವಿಡುದಲೈ
ಅಲೈಗಳ್
ಗುರು ರಾಘವೇಂದ್ರರ್
ಮರುದ ನಾಯಗನ್
ಈಟಿ

ತೆಲುಗು

ಬದಲಾಯಿಸಿ
ಸಂಖ್ಯೆ ಚಿತ್ರದ ಹೆಸರು
ಸರ್ದಾರ್ ಧರ್ಮನ್ನ
ಲಕ್ಷ್ಮಿ ನಿರ್ದೋಷಿ

ಒಕ್ಕಡು ಚಾಲು

ಕಂಕಣಂ

ಮಲಯಾಳಂ

ಬದಲಾಯಿಸಿ
ಸಂಖ್ಯೆ ಚಿತ್ರದ ಹೆಸರು
ಅಡಿಮೈ ಚಂಗಲ
ಕೌರವರ್
ಈಟಿ

ಹೊರಗಿನ ಕೊಂಡಿಗಳು

ಬದಲಾಯಿಸಿ

ಉಲ್ಲೇಖಗಳು

ಬದಲಾಯಿಸಿ
  1. "Vishnuvardhan's son-in-law recreating 'Shasa Simha' in 'Raja Simha'". lehren.com. Archived from the original on 24 ಮೇ 2018. Retrieved 18 ಜುಲೈ 2018.
  2. Dr Vishnuvardhan to be cremated with state honours
  3. ವಿಷ್ಣುವರ್ಧನ್