ಅಂಜನಾ

ಭಾರತೀಯ ಕನ್ನಡ ನಟಿ

ಅಂಜನಾ ಕನ್ನಡದ ಜನಪ್ರಿಯ ಚಲನಚಿತ್ರ ನಟಿ. ೧೯೯೦ರ ದಶಕದಲ್ಲಿ ಸಕ್ರಿಯರಾಗಿದ್ದ ಅಂಜನಾ ಅಜಗಜಾಂತರ(೧೯೯೧), ಒಂದು ಸಿನಿಮಾ ಕಥೆ(೧೯೯೨), ಲೂಟಿ ಗ್ಯಾಂಗ್(೧೯೯೪) ಮತ್ತು ಬಂಗಾರದ ಕಳಶ(೧೯೯೫) ಚಿತ್ರಗಳಲ್ಲಿನ ಸ್ಮರಣೀಯ ಅಭಿನಯದಿಂದ ಗುರುತಿಸಿಕೊಂಡಿದ್ದಾರೆ.[]

ಅಂಜನಾ
ಜನನ
Anaya Ali
ವೃತ್ತಿಚಲನಚಿತ್ರ ನಟಿ
ಸಕ್ರಿಯ ವರ್ಷಗಳು೧೯೯೦-೧೯೯೭
ಸಂಗಾತಿSiddhanta Mahapatra (1994) (6 sons)

ವೃತ್ತಿಜೀವನ

ಬದಲಾಯಿಸಿ

ಶಬರಿಮಲೆ ಸ್ವಾಮಿ ಅಯ್ಯಪ್ಪ(೧೯೯೦) ಚಿತ್ರದಲ್ಲಿನ ಶ್ರೀಹರಿ ಮಾಯೆಯ ಅವತಾರ ಎಂಬ ಹಾಡಿನಲ್ಲಿ ನೃತ್ಯ ಮಾಡುವ ಮೂಲಕ ಕನ್ನಡ-ಬೆಳ್ಳಿತೆರೆಗೆ ಅಡಿ ಇಟ್ಟ ಅಂಜನಾ ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಪೋಲಿಸ್‍ನ ಹೆಂಡ್ತಿ(೧೯೯೦) ಚಿತ್ರದಲ್ಲಿ ಪೋಲಿಸ್ ಅಧಿಕಾರಿಯ ದುರಹಂಕಾರಿ ಹೆಂಡತಿಯಾಗಿ ಗಮನಾರ್ಹ ಅಭಿನಯ ನೀಡಿದರು.
ಪ್ರಸಿದ್ಧ ನಟ ನಿರ್ದೇಶಕ ಕಾಶಿನಾಥ್ ನಿರ್ದೇಶನದ ಅಜಗಜಾಂತರ(೧೯೯೧) ಚಿತ್ರದಲ್ಲಿ ಹಣದ ದುರಾಸೆಯುಳ್ಳ ಮಧ್ಯಮ ವರ್ಗದ ಗೃಹಿಣಿಯಾಗಿ ಅಂಜನಾ ಅವರ ಅಭಿನಯ ಗಮನ ಸೆಳೆದಿತ್ತು. ಮಾದಕ ದೃಶ್ಯಗಳು ಮತ್ತು ಹಾಸ್ಯಮಯ ಸಂಭಾಷಣೆಗಳ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಭಾರೀ ಯಶಸ್ಸು ಗಳಿಸಿದ ಈ ಚಿತ್ರ ತೆಲುಗು, ಹಿಂದಿ ಭಾಷೆಗಳಲ್ಲಿ ಪುನರ್ನಿರ್ಮಾಣಗೊಂಡು ಅಲ್ಲಿಯೂ ಭಾರಿ ಯಶಸ್ಸು ಪಡೆಯಿತು. ಈ ಚಿತ್ರದ ಹಿಂದಿ ಅವತರಣಿಕೆಯಾದ ಜುದಾಯಿ(೧೯೯೭)ಯಲ್ಲಿ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ ಶ್ರೀದೇವಿ ನಿರ್ವಹಿಸಿದ್ದರು.[]

ಅನಂತ್ ನಾಗ್ ಅಭಿನಯದ ಒಂದು ಸಿನಿಮಾ ಕಥೆ(೧೯೯೨) ಚಿತ್ರದಲ್ಲಿ ಚಿತ್ರಸಾಹಿತಿಯ ಪತ್ನಿಯಾಗಿ ಸಮರ್ಥ ಅಭಿನಯ ನೀಡಿದ ಅಂಜನಾ ಟೈಗರ್ ಪ್ರಭಾಕರ್ ಅವರೊಂದಿಗೆ ಕಿಲಾಡಿ ತಾತ(೧೯೯೦) ಮತ್ತು ಸೆಂಟ್ರಲ್ ರೌಡಿ(೧೯೯೧) ಚಿತ್ರಗಳಲ್ಲಿ ಮೋಹಕ ಪಾತ್ರಗಳಲ್ಲಿ ಮಿಂಚಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ಅವರ ನಿರ್ದೇಶನದ ನಿಷ್ಕರ್ಷ ಚಿತ್ರದಲ್ಲಿ ಖಳನಟಿಯಾಗಿ ಅಭಿನಯಿಸಿ ಸೈ ಅನ್ನಿಸಿಕೊಂಡಿದ್ದಾರೆ. ದೇವರಾಜ್‌ ಅಭಿನಯದ ರೋಷಗಾರ(೧೯೯೨) ಚಿತ್ರದಲ್ಲಿ ಪತ್ರಕರ್ತೆಯಾಗಿ, ಲೂಟಿ ಗ್ಯಾಂಗ್(೧೯೯೪) ಚಿತ್ರದಲ್ಲಿ ವಕೀಲೆಯಾಗಿ ಶಕ್ತ ಅಭಿನಯ ನೀಡಿರುವ ಅಂಜನಾ ಅಂಬರೀಶ್ ಅವರೊಂದಿಗೆ ಮೇಘ ಮಂದಾರ(೧೯೯೨) ಮತ್ತು ಮೈಸೂರು ಜಾಣ(೧೯೯೨) ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಹದವರಿತ ಅಭಿನಯ ನೀಡಿದ್ದಾರೆ. ವಿಷ್ಣುವರ್ಧನ್ ಮತ್ತು ಸಿತಾರ ಅಭಿನಯದ ಬಂಗಾರದ ಕಳಶ(೧೯೯೫) ಚಿತ್ರದಲ್ಲಿ ತ್ಯಾಗಮಯಿಯಾಗಿ ಸ್ಮರಣೀಯ ಅಭಿನಯ ನೀಡಿದ್ದಾರೆ.

ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಟೈಗರ್ ಪ್ರಭಾಕರ್, ಕಾಶಿನಾಥ್ ಮತ್ತು ದೇವರಾಜ್‌ರಂತಹ ಜನಪ್ರಿಯ ನಟರೊಂದಿಗೆ ಅಭಿನಯಿಸಿರುವ ಅಂಜನಾ ಭಾರ್ಗವ, ಕೆ.ವಿ.ಜಯರಾಂ, ಓಂ ಸಾಯಿಪ್ರಕಾಶ್, ಎ.ಟಿ.ರಘು ಮತ್ತು ಫಣಿ ರಾಮಚಂದ್ರ ಮುಂತಾದ ಸೃಜನಶೀಲ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ.

ಅಂಜನಾ ಅಭಿನಯದ ಚಿತ್ರಗಳು

ಬದಲಾಯಿಸಿ
ವರ್ಷ ಚಿತ್ರ ಭಾಷೆ ಪಾತ್ರ ನಿರ್ದೇಶನ ಭೂಮಿಕೆ
೧೯೯೦ ಕಿಲಾಡಿ ತಾತ ಕನ್ನಡ ಸುಂದರನಾಥ್ ಸುವರ್ಣ ಟೈಗರ್ ಪ್ರಭಾಕರ್
೧೯೯೦ ಪೋಲಿಸ್‍ನ ಹೆಂಡ್ತಿ ಕನ್ನಡ ಓಂ ಸಾಯಿಪ್ರಕಾಶ್ ಶಶಿಕುಮಾರ್, ಮಾಲಾಶ್ರಿ, ದೇವರಾಜ್‌, ವಿನಯಾ ಪ್ರಸಾದ್
೧೯೯೦ ಶಬರಿಮಲೆ ಸ್ವಾಮಿ ಅಯ್ಯಪ್ಪ ಕನ್ನಡ ರೇಣುಕಾ ಶರ್ಮ ಸಂಜಯ್, ಶ್ರೀನಿವಾಸಮೂರ್ತಿ, ಗೀತಾ, ಶ್ರೀಧರ್, ಸುಧಾರಾಣಿ
೧೯೯೧ ಅಜಗಜಾಂತರ ಕನ್ನಡ ಕಾಶಿನಾಥ್ ಕಾಶಿನಾಥ್, ಶ್ರೀರೇಖಾ
೧೯೯೧ ವೀರ ಧೀರ ಕನ್ನಡ ಜಿ.ಕೆ.ಮುದ್ದುರಾಜ್ ದೇವರಾಜ್‌
೧೯೯೧ ಸೆಂಟ್ರಲ್ ರೌಡಿ ಕನ್ನಡ ಬಿ.ರಾಮಮೂರ್ತಿ ಟೈಗರ್ ಪ್ರಭಾಕರ್
೧೯೯೨ ಒಂದು ಸಿನಿಮಾ ಕಥೆ ಕನ್ನಡ ಫಣಿ ರಾಮಚಂದ್ರ ಅನಂತ್ ನಾಗ್, ಅಭಿಲಾಷ
೧೯೯೨ ನನ್ನ ತಂಗಿ ಕನ್ನಡ ಪೆರಾಲ ದೇವರಾಜ್‌, ಸೌಂದರ್ಯ
೧೯೯೨ ಮೇಘ ಮಂದಾರ ಕನ್ನಡ ಸ್ನೇಹಾ ಕೆ.ವಿ.ಜಯರಾಂ ಅಂಬರೀಶ್, ಮಾಲಾಶ್ರೀ
೧೯೯೨ ಮೈಸೂರು ಜಾಣ ಕನ್ನಡ ಎ.ಟಿ.ರಘು ಅಂಬರೀಶ್, ವಿನಯಾ ಪ್ರಸಾದ್
೧೯೯೨ ರೋಷಗಾರ ಕನ್ನಡ ಓಂ ಸಾಯಿಪ್ರಕಾಶ್ ದೇವರಾಜ್‌
೧೯೯೨ ಹಠಮಾರಿ ಹೆಣ್ಣು ಕಿಲಾಡಿ ಗಂಡು ಕನ್ನಡ ರೇಣುಕಾ ಶರ್ಮ ಶ್ರೀಧರ್, ಮಾಲಾಶ್ರೀ
೧೯೯೩ ಆತಂಕ ಕನ್ನಡ ಓಂ ಸಾಯಿಪ್ರಕಾಶ್ ಅನಂತ್ ನಾಗ್, ವಿನಯಾ ಪ್ರಸಾದ್
೧೯೯೩ ನಿಷ್ಕರ್ಷ ಕನ್ನಡ ಸುನಿಲ್ ಕುಮಾರ್ ದೇಸಾಯಿ ವಿಷ್ಣುವರ್ಧನ್, ಅನಂತ್ ನಾಗ್
೧೯೯೩ ಮೋಜಿನ ಮದುವೆ ಕನ್ನಡ ವಿ.ನಾರಾಯಣ ಸ್ವಾಮಿ ದೇವರಾಜ್‌, ತಾರ
೧೯೯೪ ಕಿಲಾಡಿಗಳು ಕನ್ನಡ ದ್ವಾರಕೀಶ್ ವಿಷ್ಣುವರ್ಧನ್, ದ್ವಾರಕೀಶ್, ಸುವರ್ಣ ಮಾಥ್ಯೂಸ್
೧೯೯೪ ಗೋಪಿ ಕಲ್ಯಾಣ ಕನ್ನಡ ಬಿ.ರಾಮಮೂರ್ತಿ ಟೈಗರ್ ಪ್ರಭಾಕರ್
೧೯೯೪ ಜಾಣ ಕನ್ನಡ ಶಿವಮಣಿ ರವಿಚಂದ್ರನ್, ಕಸ್ತೂರಿ, ಶ್ರುತಿ
೧೯೯೪ ಲೂಟಿ ಗ್ಯಾಂಗ್ ಕನ್ನಡ ಬಿ.ರಾಮಮೂರ್ತಿ ದೇವರಾಜ್‌
೧೯೯೫ ಗಣೇಶನ ಗಲಾಟೆ ಕನ್ನಡ ಫಣಿ ರಾಮಚಂದ್ರ ಶಶಿಕುಮಾರ್, ಸಿತಾರ
೧೯೯೫ ಬಂಗಾರದ ಕಳಶ ಕನ್ನಡ ಭಾರ್ಗವ ವಿಷ್ಣುವರ್ಧನ್, ಸಿತಾರ
೧೯೯೬ ತಾಳಿ ಪೂಜೆ ಕನ್ನಡ ಚಂದ್ರಹಾಸ ಆಳ್ವ ಅನಂತ್ ನಾಗ್, ವಿನಯಾ ಪ್ರಸಾದ್
೧೯೯೬ ವೀರಭದ್ರ ಕನ್ನಡ ನಂಜುಂಡೇ ಗೌಡ ದೇವರಾಜ್‌
೧೯೯೭ ಏನೂಂದ್ರೆ ಕನ್ನಡ ರೇಲಂಗಿ ನರಸಿಂಹ ರಾವ್ ಭವ್ಯ, ಅನಿಲ್

[]

ಉಲ್ಲೇಖಗಳು

ಬದಲಾಯಿಸಿ

Biography for ಅಂಜನಾ ಐ ಎಮ್ ಡಿ ಬಿನಲ್ಲಿ

  1. "ಈ ಜನ ಅಂಜನಾ". ಉದಯವಾಣಿ. Archived from the original on 2016-04-18. Retrieved 2016-06-24.
  2. "ಕಸ್ತೂರಿ ವಾಹಿನಿಯಲ್ಲಿ ಕಾಶಿನಾಥ್ ಕಾಮಿಡಿ ದರ್ಬಾರ್". ಕನ್ನಡ ಫಿಲ್ಮಿ ಬಿಟ್.
  3. "ಅಂಜನಾ, ಚಿಲೋಕ.ಕಾಮ್". Archived from the original on 2016-05-18. Retrieved 2016-01-16.
"https://kn.wikipedia.org/w/index.php?title=ಅಂಜನಾ&oldid=1201292" ಇಂದ ಪಡೆಯಲ್ಪಟ್ಟಿದೆ