ವಂಶವೃಕ್ಷ

ಕನ್ನಡದ ಒಂದು ಚಲನಚಿತ್ರ


ವಂಶವೃಕ್ಷ - ಎಸ್.ಎಲ್. ಭೈರಪ್ಪನವರ ಕಾದಂಬರಿ ಆಧಾರಿತ ಕನ್ನಡ ಚಲನಚಿತ್ರ. ಇದರ ನಿರ್ದೇಶಕರು ಬಿ.ವಿ. ಕಾರಂತ್ ಹಾಗು ಗಿರೀಶ್ ಕಾರ್ನಾಡ್. ನಿರ್ಮಾಪಕರು ಜಿ ವಿ ಅಯ್ಯರ್. ಈ ಚಿತ್ರದಲ್ಲಿ ಬಿ.ವಿ.ಕಾರಂತ, ಗಿರೀಶ ಕಾರ್ನಾಡ್, ಎಲ್.ವಿ.ಶಾರದಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಅತ್ಯುತ್ತಮ ನಿರ್ದೇಶನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದು 1972 ರಲ್ಲಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಸಹ ಗೆದ್ದಿದೆ.

ವಂಶವೃಕ್ಷ
ವಂಶವೃಕ್ಷ Vamshavruksha.jpg
ನಿರ್ದೇಶನಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್
ನಿರ್ಮಾಪಕಜಿ.ವಿ.ಅಯ್ಯರ್
ಚಿತ್ರಕಥೆಗಿರೀಶ್ ಕಾರ್ನಾಡ್
ಕಥೆಎಸ್.ಎಲ್.ಭೈರಪ್ಪ
ಸಂಭಾಷಣೆಬಿ ವಿ ಕಾರಂತ
ಪಾತ್ರವರ್ಗಗಿರೀಶ್ ಕಾರ್ನಾಡ್ ಎಲ್.ವಿ.ಶಾರದ ವಿಷ್ಣುವರ್ಧನ್, ಬಿ.ವಿ.ಕಾರಂತ್
ಸಂಗೀತಭಾಸ್ಕರ್ ಚಂದಾವರ್ಕರ್
ಛಾಯಾಗ್ರಹಣವೈ.ಎಂ.ಎನ್.ಶರೀಫ್
ಬಿಡುಗಡೆಯಾಗಿದ್ದು೧೯೭೨
ಚಿತ್ರ ನಿರ್ಮಾಣ ಸಂಸ್ಥೆಅನಂತಲಕ್ಷ್ಮೀ ಫಿಲಂಸ್
ಇತರೆ ಮಾಹಿತಿಡಾ.ಎಸ್.ಎಲ್.ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧಾರಿತ ಚಿತ್ರ

ನಟ ವಿಷ್ಣುವರ್ಧನ್ ಮತ್ತು ನಟಿ ಉಮಾ ಶಿವಕುಮಾರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರು.

ಈ ಚಿತ್ರವನ್ನು 1980 ರಲ್ಲಿ ತೆಲುಗಿಗೆ "ವಂಶ ವೃಕ್ಷಂ"ಆಗಿ ರೀಮೇಕ್ ಮಾಡಲಾಯಿತು ಮತ್ತು ಅನಿಲ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಪಾತ್ರವರ್ಗಸಂಪಾದಿಸಿ

ಶ್ರೀನಿವಾಸ ಶ್ರೋತ್ರಿ ಪಾತ್ರದಲ್ಲಿ ವೆಂಕಟರಾವ್ ತಲಗೇರಿ

ಕಾತ್ಯಾಯಿನಿ ಪಾತ್ರದಲ್ಲಿ ಎಲ್. ವಿ. ಶಾರದಾ

ಪ್ರೊ.ಸದಾಶಿವ ರಾವ್ ಆಗಿ ಬಿ.ವಿ.ಕಾರಂತ್

ರಾಜಾ ರಾವ್ ಪಾತ್ರದಲ್ಲಿ ಗಿರೀಶ್ ಕಾರ್ನಾಡ್

ವಿಶಾಲಂ

ಗೋದಾ ರಾಮ್‌ಕುಮಾರ್

ಲಕ್ಷ್ಮಿಯಾಗಿ ಉಮಾ ಶಿವಕುಮಾರ್

ಶಾಂತ

ಚೀನಿಯಾಗಿ ಚಂದ್ರಶೇಖರ್

ವಿಷ್ಣುವರ್ಧನ್ ("ಸಂಪತ್ ಕುಮಾರ್" ಎಂದು )

ಸಂಗೀತಸಂಪಾದಿಸಿ

ಚಿತ್ರದಲ್ಲಿ ಕೇವಲ ಒಂದು ಹಾಡಿದ್ದು, ಬಿ. ವಿ. ಕಾರಂತ್ ರಚಿಸಿರುವ "ಮುಗಿಲಾ ತುಂಬಾ ಬೇರಾ ಬೀಳಲಾ" ಹಾಡಿಗೆ ಭಾಸ್ಕರ್ ಚಂದಾವರ್ಕರ್ ಸಂಗೀತ ಸಂಯೋಜಿಸಿದ್ದಾರೆ.

ಪ್ರಶಸ್ತಿಗಳುಸಂಪಾದಿಸಿ

19 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು

- ಅತ್ಯುತ್ತಮ ಕನ್ನಡ ಚಿತ್ರ

- ಅತ್ಯುತ್ತಮ ನಿರ್ದೇಶನ - ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್

1971–72 ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ

ಅತ್ಯುತ್ತಮ ನಟ - ವೆಂಕಟರಾವ್ ತಲಿಗೇರಿ

ಅತ್ಯುತ್ತಮ ನಟಿ - ಎಲ್. ವಿ. ಶಾರದಾ

ಅತ್ಯುತ್ತಮ ಕಥೆಗಾರ - ಎಸ್. ಎಲ್. ಭೈರಪ್ಪ

ಅತ್ಯುತ್ತಮ ಸಂಭಾಷಣೆ ಬರಹಗಾರ - ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್

ಅತ್ಯುತ್ತಮ ಸಂಪಾದನೆ - ಅರುಣಾ ದೇಸಾಯಿ

20 ನೇ ದಕ್ಷಿಣ ಫಿಲ್ಮ್‌ಫೇರ್ ಪ್ರಶಸ್ತಿಗಳು

ಅತ್ಯುತ್ತಮ ಚಿತ್ರ - ಕನ್ನಡ

ಅತ್ಯುತ್ತಮ ನಿರ್ದೇಶಕ - ಕನ್ನಡ - ಗಿರೀಶ್ ಕಾರ್ನಾಡ್, ಬಿ.ವಿ.ಕಾರಂತ್

ಅತ್ಯುತ್ತಮ ನಟ - ಕನ್ನಡ - ವೆಂಕಟರಾವ್ ತಲಗೇರಿ

ಉಲ್ಲೇಖಗಳುಸಂಪಾದಿಸಿ