ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭವು ಭಾರತದ ಅತ್ಯಂತ ಗಣ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ, ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳ ಜೊತೆಗೆ ದೇಶದ ಅತ್ಯಂತ ಹಳೆಯ ಪ್ರಶಸ್ತಿ ಪ್ರದಾನ ಸಮಾರಂಭವಾಗಿದೆ. ೧೯೫೪ರಲ್ಲಿ ಪ್ರಾರಂಭವಾದ ಈ ಸಮಾರಂಭವನ್ನು ೧೯೭೩ರಿಂದೀಚೆಗೆ ಭಾರತ ಸರ್ಕಾರದ ಚಲನಚಿತ್ರೋತ್ಸವಗಳ ನಿರ್ದೇಶನಾಲಯವು ನಡೆಸುತ್ತ ಬಂದಿದೆ.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು | |
---|---|
![]() | |
ಕೊಡಲ್ಪಡುವ ವಿಷಯ | ಭಾರತೀಯ ಸಿನೆಮಾದ ವಿವಿಧ ವಿಷಯಗಳಲ್ಲಿ ಉತ್ಕೃಷ್ಟತೆಗೆ |
ಸ್ಥಳ | ವಿಜ್ಞಾನ ಭವನ,ನವ ದೆಹಲಿ |
ದೇಶ | ಭಾರತ |
ಕೊಡಿಸಲ್ಪಡು | ಡೈರೆಕ್ಟೊರೇಟ್ ಆಫ್ ಫಿಲಂ ಫೆಸ್ಟಿವಲ್ಸ್ |
ಪ್ರಧಮವಾಗಿ ಕೊಡಲ್ಪಟ್ಟದ್ದು | 10 ಅಕ್ಟೋಬರ್ 1954 |
ಕೊನೆಯದಾಗಿ ಕೊಡಲ್ಪಟ್ಟದ್ದು | 3 ಮೇ 2013 |
ಅಧಿಕೃತ ಜಾಲತಾಣ | dff.nic.in |
೭ ಪ್ರಾದೇಶಿಕ ಭಾಷೆಯಸಂಪಾದಿಸಿ
ಪ್ರಾದೇಶಿಕ ಚಿತ್ರಗಳಿಗೆ ೨ನೆಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ ೨೧ ಡಿಸೆಂಬರ್ ೧೯೫೫ ರಿಂದ ಈ ಪ್ರಶಸ್ತಿಗಳು ಪ್ರದಾನ ಮಾಡಲು ಪ್ರಾರಂಭಿಸಿದರು.
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಸಂಪಾದಿಸಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯು ಭಾರತೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಪ್ರಮುಖವಾದುದು. ಇದು ೧೯೫೪ರಲ್ಲಿ ಅಸ್ತಿತ್ವಕ್ಕೆ ಬಂತು. ಪ್ರತೀ ವರ್ಷ ಭಾರತ ಸರ್ಕಾರದಿಂದ ನೇಮಿಸಲ್ಪಟ್ಟ ರಾಷ್ಟ್ರೀಯ ಸಮಿತಿಯೊಂದು ವಿಜೇತರನ್ನು ಆಯ್ಕೆ ಮಾಡುತ್ತದೆ. ನವದೆಹಲಿಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿಯನ್ನು ವಿತರಿಸುತ್ತಾರೆ. ಇದರ ಬೆನ್ನಲ್ಲೇ 'ರಾಷ್ಟ್ರೀಯ ಚಲನಚಿತ್ರ ಉತ್ಸವ' ತೆರೆಗೆ ಬರುತ್ತದೆ. ಇದರಲ್ಲಿ ಪ್ರಶಸ್ತಿ-ವಿಜೇತ ಚಲನಚಿತ್ರಗಳ ಪ್ರದರ್ಶನ ನಡೆಯುತ್ತದೆ. ಅತ್ಯುತ್ತಮ ಚಲನಚಿತ್ರ, ಪ್ರ್ರಾದೇಶಿಕ ಮತ್ತು ಭಾರತೀಯ ಭಾಷೆಯ ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಭಾರತದಲ್ಲಿ ಈ ಪ್ರಶಸ್ತಿಯು ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿರುವುದರಿಂದ 'ಅಮೇರಿಕಾ ಅಕಾದೆಮಿ ಪ್ರಶಸ್ತಿ'ಗೆ ಸಮೀಕರಿಸಲಾಗುತ್ತದೆ.
ಇತಿಹಾಸಸಂಪಾದಿಸಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಥಮ ಬಾರಿಗೆ ೧೯೫೪ರಲ್ಲಿ ಕೊಡಲಾಯಿತು. ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದಕ್ಕಾಗಿ ದೇಶದಾದ್ಯಂತ ತಯಾರಾದ ಚಲನಚಿತ್ರಗಳನ್ನು ಗುರುತಿಸಿ ಭಾರತ ಸರ್ಕಾರ ಗೌರವಿಸುತ್ತದೆ. ೧೯೭೩ರಿಂದ ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು ಈ ಪ್ರಶಸ್ತಿ ಸಮಾರಂಭವನ್ನು ಆಯೋಜಿಸುತ್ತಿದೆ.
ಆಯ್ಕೆ ಸಮಿತಿ ಮತ್ತು ನೀತಿಗಳುಸಂಪಾದಿಸಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪ್ರಮುಖವಾಗಿ ಎರಡು ಮುಖ್ಯ ವಿಭಾಗಗಳಲ್ಲಿ ನೀಡಲಾಗುತ್ತದೆ. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳು. ಭಾರತೀಯ ಚಲನಚಿತ್ರ ಪ್ರಶಸ್ತಿ ನಿರ್ದೇಶನಾಲಯವು 'ಆಯ್ಕೆ ಸಮಿತಿ'ಯನ್ನು ನೇಮಕ ಮಾಡುತ್ತದೆ. ನಿರ್ದೇಶನಾಲಯವಾಗಲಿ ಅಥವಾ ಭಾರತ ಸರ್ಕಾರವಾಗಲಿ ಯಾವುದೇ ಚಲನಚಿತ್ರದ ಆಯ್ಕೆಗಾಗಿ, ಅಥವಾ ಪ್ರಶಸ್ತಿಗಾಗಿ ಪ್ರಭಾವ ಬೀರುವಂತಿಲ್ಲ. ಆಯ್ಕೆ ಸಮಿತಿಯು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುತ್ತದೆ. ಪ್ರತೀ ವರ್ಷ ನೂರಕ್ಕಿಂತಲೂ ಹೆಚ್ಚಿನ ಚಲನಚಿತ್ರಗಳು ಎರಡೂ ವಿಭಾಗಗಳಲ್ಲಿ ಆಯ್ಕೆಯಾಗುತ್ತವೆ. ಪ್ರತೀ ವರ್ಷ ಬದಲಾಗುತ್ತಿರುವ ನೀತಿಗಳನ್ನು ಒಳಗೊಂಡ ದಾಖಲೆಯನ್ನು, 'ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನಿಯಮಗಳು' ಎಂದು ಕರೆಯುತ್ತಾರೆ. ಒಂದು ಚಲನಚಿತ್ರ ಅರ್ಹತೆ ಪಡೆಯಲು ಹಲವಾರು ನಿಬಂಧನೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ, ಚಲನಚಿತ್ರ ನಿರ್ಮಾಪಕರು ನೇರವಾಗಿ ಭಾಗಿಯಾಗಿದ್ದು, ನಿರ್ದೇಶಕ ಭಾರತೀಯನಾಗಿರಬೇಕು. ಸ್ಪರ್ಧೆಯಲ್ಲಿ ಆಯ್ಕೆಯಾಗುವ ಚಲನಚಿತ್ರ ಭಾರತದಲ್ಲಿಯೇ ನಿರ್ಮಾಣ ಮಾಡಿರಬೇಕು ಮತ್ತು ಒಂದು ವೇಳೆ ವಿದೇಶಿ ಸಹ-ನಿರ್ಮಾಣದಿಂದ ಕೂಡಿದ್ದಲ್ಲಿ ಆರು ಷರತ್ತುಗಳನ್ನು ಪೂರೈಸಿದ್ದಲ್ಲಿ ಆಯ್ಕೆಗೆ ಅರ್ಹವಾಗುತ್ತದೆ. ನಿಯಮಗಳ ಪ್ರಕಾರ, ಆಯ್ಕೆ ಸಮಿತಿಗೆ ಬರುವ ಚಲನಚಿತ್ರ 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್'ನಿಂದ ಜನವರಿ ೧ರಿಂದ ಡಿಸೆಂಬರ್ ೩೧ರ ಒಳಗೆ ಧ್ರಡೀಕರಣಗೊಂಡಿರಬೇಕು. ಪೂರ್ಣ ಪ್ರಮಾಣದ ಚಲನಚಿತ್ರಗಳು ಮತ್ತು ಕಿರುಚಿತ್ರಗಳ ವಿಭಾಗಕ್ಕೆ ಆಯ್ಕೆ ಮತ್ತು ಆಯ್ಕೆಯಾಗದ ಚಲನಚಿತ್ರಗಳ ಪಟ್ಟಿಯನ್ನು ಆಯ್ಕೆ ಸಮಿತಿಯೇ ನಿರ್ಧರಿಸುತ್ತದೆ.
ಪ್ರಶಸ್ತಿಗಳುಸಂಪಾದಿಸಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ; ಪೂರ್ಣ ಪ್ರಮಾಣದ ಚಲನಚಿತ್ರ, ಕಿರುಚಿತ್ರ ಮತ್ತು ಉತ್ತಮ ಚಲನಚಿತ್ರ ಬರವಣಿಗೆ. ಎಲ್ಲಾ ಪ್ರಶಸ್ತಿಗಳು ಅದರದ್ದೇ ಆದ ಉದ್ದೇಶವನ್ನು ಹೊಂದಿದ್ದು, ಸಮಾಜಿಕ ಕಳಕಳಿ, ದೇಶದಲ್ಲಿನ ವಿವಿಧ ಪ್ರದೇಶದ ಕಲೆ ಮತ್ತು ಸಂಸ್ಕೃತಿ, ತಂತ್ರಜ್ಞಾನದ ಬಳಕೆಯನ್ನು ಹೊಂದಿದ್ದು ಭಾರತದ ಏಕತೆ ಮತ್ತು ಸಾಮರಸ್ಯವನ್ನು ಉತ್ತೇಜಿಸುವಂತಿರಬೇಕು.
ಜೀವಮಾನ ಸಾಧನೆಯ ಪ್ರಶಸ್ತಿಸಂಪಾದಿಸಿ
ಚಲನಚಿತ್ರದ ಪ್ರಶಸ್ತಿಗಳುಸಂಪಾದಿಸಿ
ಸ್ವರ್ಣ ಕಮಲಸಂಪಾದಿಸಿ
ರಜತ ಕಮಲಸಂಪಾದಿಸಿ
- ಶ್ರೇಷ್ಠ ನಟ
- ಶ್ರೇಷ್ಠ ನಟಿ
- ಶ್ರೇಷ್ಠ ಪೋಷಕ ನಟ
- ಶ್ರೇಷ್ಠ ಪೋಷಕ ನಟಿ
- ಶ್ರೇಷ್ಠ ಬಾಲ ಕಲಾವಿದರು
- ಶ್ರೇಷ್ಠ ಸಂಗೀತ ನಿರ್ದೇಶನ
- ಶ್ರೇಷ್ಠ ಹಿನ್ನೆಲೆ ಗಾಯಕ
- ಶ್ರೇಷ್ಠ ಹಿನ್ನೆಲೆ ಗಾಯಕಿ
- ಶ್ರೇಷ್ಠ ಸಾಹಿತ್ಯ (ಗೀತರಚನೆ)
- ಶ್ರೇಷ್ಠ ಕಲಾ ನಿರ್ದೇಶನ
- ಶ್ರೇಷ್ಠ ಶಬ್ದಗ್ರಹಣ
- ಶ್ರೇಷ್ಠ ನೃತ್ಯ ನಿರ್ದೇಶನ
- ಶ್ರೇಷ್ಠ ಛಾಯಾಗ್ರಹಣ
- ಶ್ರೇಷ್ಠ ವಸ್ತ್ರವಿನ್ಯಾಸ
- ಶ್ರೇಷ್ಠ ಸಂಕಲನ
- ಶ್ರೇಷ್ಠ ಪ್ರಸಾಧನ
- ಶ್ರೇಷ್ಠ ಚಿತ್ರಕಥೆ
- ಶ್ರೇಷ್ಠ ಸ್ಪೆಶಲ್ ಎಫೆಕ್ಟ್ಸ್
- ವಿಶೇಷ ಜ್ಯೂರಿ ಪ್ರಶಸ್ತಿ
- ಜ್ಯೂರಿಯ ವಿಶೇಷ ಉಲ್ಲೇಖ
Best Feature Film in each of the languages specified in the Eighth Schedule of the Constitution of India:
- Best Feature Film in Assamese
- Best Feature Film in Bengali
- Best Feature Film in Bodo
- Best Feature Film in Dogri
- Best Feature Film in Hindi
- Best Feature Film in Gujarati
- Best Feature Film in Kannada
- Best Feature Film in Kashmiri
- Best Feature Film in Konkani
- Best Feature Film in Malayalam
- Best Feature Film in Manipuri
- Best Feature Film in Marathi
- Best Feature Film in Odia
- Best Feature Film in Punjabi
- Best Feature Film in Tamil
- Best Feature Film in Telugu
- Best Feature Film in Urdu
Best Feature Film in each of the languages other than those specified in Eighth schedule of the Constitution of India:
Discontinued Awardsಸಂಪಾದಿಸಿ
ಬಾಹ್ಯ ಸಂಪರ್ಕಗಳುಸಂಪಾದಿಸಿ
- Directorate of Film Festivals Archived 2018-01-21 ವೇಬ್ಯಾಕ್ ಮೆಷಿನ್ ನಲ್ಲಿ.
- National Film Awards Archived 2009-05-08 ವೇಬ್ಯಾಕ್ ಮೆಷಿನ್ ನಲ್ಲಿ. at IMDB