ದಕ್ಷಿಣ ಏಷ್ಯಾ

ದಕ್ಷಿಣ ಏಷ್ಯಾದ ಭೂಪಟ.
ರಾಷ್ಟ್ರಗಳು 7 ರಿಂದ 10(ಪುಟ ನೋಡಿ )
ಭೂಪ್ರದೇಶದ ವ್ಯಾಪ್ತಿ 0, 1, or 2 (ಪುಟ ನೋಡಿ )
GDP (ಜಿಡಿಪಿ) (ಸಾಮಾನ್ಯ)

{ಒಟ್ಟು ರಾಷ್ಟ್ರೀಯ ಉತ್ಪನ್ನ (ಸಾಮಾನ್ಯ)}

$1.56 ಲಕ್ಷಕೋಟಿ
GDP (ಜಿಡಿಪಿ) ಪರ್ ಕ್ಯಾಪಿಟಾ (ಸಾಮಾನ್ಯ)

{ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (ಸಾಮಾನ್ಯ)}

$1,079
ಭಾಷೆಗಳು ಅಸ್ಸಾಮೀಸ್/ಅಸೊಮಿಯ, ಬೆಂಗಾಳಿ, ಬೊಡೊ, ಬರ್ಮಿಸ್, ದಾರಿ[], ಧಿವೆಹಿ, ಡೋಗ್ರಿ, ಜೋಂಖ, ಇಂಗ್ಲೀಷ್, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮೈಥಿಲಿ, ಮಲಯಾಲಂ, ಮರಾಠಿ, ಮಣಿಪುರಿ, ನೇಪಾಳಿ, ಒರಿಯಾ, ಪಶ್ತೂ, ಪರ್ಷಿಯನ್, ಪಂಜಾಬಿ, ಸಂಸ್ಕೃತ, ಸಂಥಾಳಿ, ಸಿಂಧಿ, ಸಿಂಹಳ, ಸಿರೈಕಿ, ತಮಿಳು, ತೆಲಗು, ಟಿಬೆಟಿಯನ್, ಉರ್ದು, ಹಾಗು ಇತರೆ
ಕಾಲವಲಯ (ಟೈಮ್ ಜೋನ್ಸ್) UTC +8:00 (ಟಿಬೆಟ್) ರಿಂದ UTC +3:30 (ಇರಾನ್)
ಅತಿ ದೊಡ್ಡ ನಗರಗಳು ಅಹಮದಾಬಾದ್, ಅಮೃತಸರ, ಬೆಂಗಳೂರು, ಕೊಲ್ಕತಾ, ಚೆನ್ನೈ, ಕೊಚಿನ್, ಕೊಲಂಬೋ, ಢಾಕಾ, ದೆಹಲಿ, ಡಿಯೆಗೊ ಗಾರ್ಸಿಯಾ, ಹೈದರಾಬಾದ್, ಇಸ್ಲಾಮಾಬಾದ್ , ಲಾಹೋರ್, ಕಾಬುಲ್, ಕರಾಚಿ, ಕಟ್ಮಂಡು, ಲ್ಹಾಸ, ಮಾಲೆ, ಮುಂಬೈ, ಪೇಶಾವರ್, ಪುಣೆ, ಸೂರತ್, ತೆಹರಾನ್, ಥಿಂಪು, ಹಾಗು ಯಾಂಗೊನ್

ದಕ್ಷಿಣ ಏಷ್ಯಾವನ್ನು , ದಕ್ಷಿಣಾರ್ಧ ಏಷ್ಯಾ , ಎಂದು ಕೂಡ ಕರೆಯುತ್ತಾರೆ ಇದು ಏಷ್ಯಾ ಖಂಡದದಕ್ಷಿಣ ಪ್ರಾಂತ್ಯಗಳಾದ ಹಿಮಾಲಯದ ದಕ್ಷಿಣದಲ್ಲಿರುವ ದೇಶಗಳು ಹಾಗು ಕೆಲವು ಸ್ವತಂತ್ರ ಪ್ರಭುತ್ವ (ಮುಂದೆ ಓದಿ ) , ಇದರೊಂದಿಗೆ ಅಕ್ಕಪಕ್ಕದ ಪಶ್ಚಿಮ ಹಾಗು ಪೂರ್ವದಲ್ಲಿರುವ ಕೆಲವು ನೆರೆಯ ರಾಷ್ಟ್ರಗಳನ್ನು ಒಳಗೊಂಡಿದೆ. ಈ ಪ್ರದೇಶದ ಸ್ವರೂಪಕ್ಕೆ ಸಂಬಂಧಿಸಿದಂತೆ, ಹಿಮಾಲಯ ಹಾಗು ಹಿಂದುಕುಶ್ ಪರ್ವತದ ದಕ್ಷಿಣಕ್ಕೆ ಸಮುದ್ರದ ಮೇಲ್ಮಟ್ಟದಲ್ಲಿ ಎದ್ದಿರುವ ಭಾರತೀಯ ಉಪಖಂಡದ ರೂಪದಲ್ಲಿ ಚಾಚಿ ಕೊಂಡಿರುವ, ಭಾರತೀಯ ಮೇಲ್ಮೈ ಪ್ರದೇಶ (ಇಂಡಿಯನ್ ಪ್ಲೇಟ್) ಪ್ರಧಾನವಾಗಿದೆ. ದಕ್ಷಿಣ ಏಷ್ಯಾವು (ಪ್ರದಕ್ಷಿಣಕಾರವಾಗಿ, ಪಶ್ಚಿಮದಿಂದ ಪೂರ್ವಕ್ಕೆ) ಪಶ್ಚಿಮ ಏಷ್ಯಾ, ಮಧ್ಯ ಏಷ್ಯಾ, ಪೂರ್ವ ಏಷ್ಯಾ, ದಕ್ಷಿಣ-ಪೂರ್ವ ಏಷ್ಯಾ ಹಾಗು ಹಿಂದು ಮಹಾಸಾಗರದಿಂದ ಆವರಿಸಲ್ಪಟ್ಟಿದೆ. ದಕ್ಷಿಣ ಏಷ್ಯಾದ ಪ್ರಾತಿನಿಧಿಕ ವ್ಯಾಖ್ಯಾನ ವೈಶಿಷ್ಟ್ಯಪೂರ್ಣವಾಗಿ ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, [[ಪಾಕಿಸ್ತಾನ ]] ಹಾಗು ಶ್ರೀಲಂಕಾ ದೇಶಗಳನ್ನು ಒಳಗೊಂಡಿದೆ. ಕೆಲವೊಂದು ನಿರೂಪಣೆಗಳು ಈ ದೇಶಗಳೊಂದಿಗೆ ಅಫ್ಘಾನಿಸ್ತಾನ , ಬರ್ಮಾ, ಟಿಬೆಟ್ , ಹಾಗು ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತದ ಪ್ರದೇಶ ಗಳನ್ನು ಕೂಡ ಒಳಗೊಂಡಿದೆ.[] ಇದಲ್ಲದೆ UN ಸಬ್ ರೀಜನ್ (ವಿಶ್ವಸಂಸ್ಥೆಯ ಉಪವಿಭಾಗ) ಕೂಡ ದಕ್ಷಿಣ ಏಷ್ಯಾಗೆ ಇರಾನ್ ಅನ್ನು ಸೇರಿಸಿದೆ, ಆದರೆ ಬೇರೆ ಹಲವಾರು ಮೂಲಗಳು ಇರಾನ್ ಪಶ್ಚಿಮ ಏಷ್ಯಾ ಎನುತ್ತವೆ.[][][][][][][] ಹಲವು ವಿಶ್ವವಿದ್ಯಾಲಯಗಳ ದಕ್ಷಿಣ ಏಷ್ಯಾದ ವಿಷಯಕ್ಕೆ ಸಂಬಂಧ ಪಟ್ಟ ವಿಭಾಗಗಳು ಕೂಡ ಸಾಮಾನ್ಯವಾಗಿ ಇರಾನ್ ದಕ್ಷಿಣ ಏಷ್ಯಾದ ಭಾಗವೆಂಬ ಅಭಿಪ್ರಾಯವನ್ನು ಒಪ್ಪಿಕೊಳ್ಳುವುದಿಲ್ಲ. (ಮುಂದೆ ಓದಿ) ವಿಶ್ವದ ಜನಸಂಖ್ಯೆಯ ಸುಮಾರು ಐದನೇ ಒಂದು ಭಾಗದಷ್ಟು ಜನರು ದಕ್ಷಿಣ ಏಷ್ಯಾದಲ್ಲಿದ್ದಾರೆ, ಹೀಗಾಗಿ ಇದು ವಿಶ್ವದಲ್ಲಿಯೇ ಜನಸಂಖ್ಯೆಯು ಅತ್ಯಂತ ಹೆಚ್ಚಾಗಿರುವ ಹಾಗು ಜನನಿಬಿಡ ಭೌಗೋಳಿಕ ಪ್ರದೇಶವಾಗಿದೆ.[] ಈ ಪ್ರದೇಶದ ಎರಡು ಅಣ್ವಸ್ತ್ರ-ಹೊಂದಿರುವ ದೇಶಗಳಾದ ಪಾಕಿಸ್ತಾನ ಹಾಗು ಭಾರತ ನಡುವಿನ ಯುದ್ಧವು, ಒಳಗೊಂಡಂತೆ ಈ ಪ್ರದೇಶವು ಹಲವಾರು ಬಾರಿ ಅನೇಕ ಘರ್ಷಣೆ ಹಾಗು ರಾಜಕೀಯ ಅಸ್ಥಿರತೆಯನ್ನು ಕಂಡಿದೆ. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘವು ಈ ಪ್ರದೇಶದಲ್ಲಿ ಆರ್ಥಿಕ ಸಹಕಾರಕ್ಕೆಂದು ಇರುವ ಸಂಸ್ಥೆ.

ವ್ಯಾಖ್ಯಾನಗಳು

ಬದಲಾಯಿಸಿ
 
ದಕ್ಷಿಣ ಏಷ್ಯಾದ ವಿವಿಧ ವ್ಯಾಖ್ಯಾನಗಳು.

ಒಂದು ಕಾಲದಲ್ಲಿ ಆಗಿನ ಬ್ರಿಟಿಷ್ ಇಂಡಿಯಾ ಸಾಮ್ರಾಜ್ಯದ,[೧೦] ಭಾಗವಾಗಿದ್ದ ಭಾರತ, ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳು ದಕ್ಷಿಣ ಏಷ್ಯಾದ ಪ್ರಮುಖವಾದ ರಾಷ್ಟ್ರಗಳಾಗಿದ್ದವು. ಇದೂ ಅಲ್ಲದೆ ಸಿಲೋನ್ (ಈಗ ಶ್ರೀಲಂಕಾ), ಬರ್ಮಾ (ಅಧಿಕೃತ ಹೆಸರು: ಮಯನ್ಮಾರ್) ದೇಶಗಳನ್ನು ಒಳಗೊಂಡಿದೆ.[೧೧] ಆದರೆ ಅಡೆನ್ ಕಾಲೋನಿ,ಬ್ರಿಟಿಷ್ ಸೋಮಾಲಿಲ್ಯಾಂಡ್ ಹಾಗು ಸಿಂಗಪುರ, ಪ್ರಾಂತ್ಯಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಭಾಗವಾಗಿದ್ದರೂ ಕೂಡ ಅವುಗಳನ್ನು ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸಿಲ್ಲ.[೧೨] ಬ್ರಿಟಿಷ್ ಸಾಮ್ರಾಜ್ಯವು ನೇರವಾಗಿ ಆಡಳಿತ ನಡೆಸದೆ ಇದ್ದ 562 ಸ್ವತಂತ್ರ ರಾಜ್ಯಗಳನ್ನು ,[೧೩] ಕೂಡ ಒಳಗೊಂಡಿತ್ತು. ಇವುಗಳಲ್ಲಿ ಕೆಲವು (ಹೈದರಾಬಾದ್ ರಾಜ್ಯ , ಮೈಸೂರು ಸಂಸ್ಥಾನ , ಬರೋಡ, ಗ್ವಾಲಿಯರ್ ಹಾಗು ಜಮ್ಮು ಕಾಶ್ಮೀರ್ ರಾಜ್ಯದ ಒಂದು ಭಾಗ) ಭಾರತಕ್ಕೆ ಸೇರ್ಪಡೆಯಾದರೆ, ಮತ್ತೆ ಕೆಲವು (ಭಾವಲ್ಪುರ, ಕಲಾಟ್, ಕೈರ್ಪುರ್, ಸ್ವಾಟ್ ಇದ್ದಲ್ಲದೆ ಜಮ್ಮು ಕಾಶ್ಮೀರದ ರಾಜ್ಯದ ಕೆಲವು ಭಾಗ)ಪಾಕಿಸ್ತಾನಕ್ಕೆ ಸೇರ್ಪಡೆಗೊಂಡವು.[೧೪][೧೫] ಸಿಕ್ಕಿಂ 1975ರಲ್ಲಿ ಭಾರತವನ್ನು ಸೇರಿತು.[೧೬] ಜಮ್ಮು ಕಾಶ್ಮೀರದ ಒಂದು ಭಾಗ ಚೀನಾದೊಂದಿಗೆ ಸೇರಿತು. ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘವು (SAARC)(ಸಾರ್ಕ್), 1985ರಲ್ಲಿ ಸ್ಥಾಪಿತವಾದಾಗ ಇದು ಅಕ್ಕ-ಪಕ್ಕ ಇದ್ದ ಏಳು ದೇಶ — ಬಾಂಗ್ಲಾದೇಶ, ಭೂತಾನ, ಭಾರತ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ, ಮತ್ತು ಶ್ರೀಲಂಕಾ — ಒಳಗೊಂಡಿತು, ಇದಲ್ಲದೆ 2006ರಲ್ಲಿ ಈ ಸಮೂಹದ ಎಂಟನೇ ಸದಸ್ಯನಾಗಿ ಅಫ್ಘಾನಿಸ್ತಾನವನ್ನು ಸೇರಿಸಿಕೊಳ್ಳಲಾಯಿತು.[೧೭] ವಿಶ್ವ ಬ್ಯಾಂಕ್ ಮಾತ್ರ ಈಗಲೂ ಮೂಲದ ಏಳು ರಾಷ್ಟ್ರಗಳು ಮಾತ್ರವೇ ಸಾರ್ಕ್ ಸದಸ್ಯ ರಾಷ್ಟ್ರಗಳೆಂದು ಪರಿಗಣಿಸಿ ಅಫ್ಘಾನಿಸ್ತಾನವನ್ನು ಈ ಸಮೂಹಕ್ಕೆ ಸೇರಿಸಿಲ್ಲ.[೧೮] ಈ ಸಮೂಹದಲ್ಲಿ ಬ್ರಿಟಿಷ್ ಸಾಮ್ರಾಜ್ಯಕ್ಕೆ ಸೇರದೆ ಇದ್ದ ಮೂರು ಸ್ವತಂತ್ರ ರಾಷ್ಟ್ರಗಳಾದ - ನೇಪಾಳ, ಭೂತಾನ ಹಾಗು ಅಫ್ಘಾನಿಸ್ತಾನ ಕೂಡ ಇದೆ. ಮಾಲ್ಡೀವ್ಸ್ ದೇಶಕ್ಕೆ ವಿಶೇಷ ಅವಕಾಶ ಕಲ್ಪಿಸುವ ಸಲುವಾಗಿ ಮಾಡಿದ್ದ ದಕ್ಷಿಣ ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದವನ್ನು ಸಾರ್ಕ್ ನ ಮೂಲ ಏಳು ರಾಷ್ಟ್ರಗಳು ಅನುಮೋದಿಸಿ ಸಹಿ ಮಾಡಿದವು.[೧೯] ವಿಶ್ವ ಸಂಸ್ಥೆಯ ಜನಸಂಖ್ಯೆ ಮಾಹಿತಿ ಜಾಲವು {ಪಾಪುಲೇಷನ್ ಇನ್ಫರ್ಮೇಷನ್ ನೆಟವರ್ಕ್(POPIN)} ಅಫ್ಘಾನಿಸ್ತಾನ, ಬಾಂಗ್ಲಾದೇಶ , ಬರ್ಮಾ , ಭಾರತ , ಇರಾನ್, ನೇಪಾಳ, ಪಾಕಿಸ್ತಾನ ಹಾಗು ಶ್ರೀಲಂಕಾವನ್ನು ದಕ್ಷಿಣ ಏಷ್ಯಾದ ಭಾಗವೆಂದು, ಇದಲ್ಲದೆ ಮಾಲ್ಡೀವ್ಸ್ ದೇಶವನ್ನು ಅದರ ಪ್ರಾದೇಶಿಕ ಪರಿಸರ, ಗುಣ ಪರಿಗಣಿಸಿ ಅದನ್ನು ಪಸಿಫಕ್ POPIN ಸಬ್ ರೀಜಿನಲ್ ನೆಟವರ್ಕ್ (ಶಾಂತಮಹಾಸಾಗರದ ಉಪಭಾಗದ ಜನಸಂಖ್ಯ ಮಾಹಿತಿ ಜಾಲದ) ಸದಸ್ಯ ಎಂದು ಗುರುತಿಸಿದೆ.[೨೦] ರಾಜಕೀಯವಾಗಿಲ್ಲದಿದ್ದರೂ, ಸಾಂಸ್ಕೃತಿಕವಾಗಿ ಟಿಬೆಟ್ ದಕ್ಷಿಣ ಏಷ್ಯಾದ ಭಾಗವೆಂದು ಗುರುತಿಸಿದ್ದಾರೆ,[೨೧] ಇದಲ್ಲದೆ ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತ ಪ್ರದೇಶವನ್ನು ಈ ಭಾಗದ ಸುರಕ್ಷತೆಯ ದೃಷ್ಟಿಯಿಂದ ಸೇರಿಸಿಕೊಳ್ಳಲಾಗಿದೆ.[೨೨] ವಿಶ್ವ ಸಂಸ್ಥೆಯ ಉಪವಿಭಾಗ ವಿವರಣೆಯು ಇರಾನ್ ಒಳಗೊಂಡಂತೆ SAARC(ಸಾರ್ಕ್)ನ ಎಲ್ಲ ಎಂಟು ರಾಷ್ಟ್ರ ದಕ್ಷಿಣ ಏಷ್ಯಾದ ಭಾಗವೆಂದು ಪರಿಗಣಿಸುತ್ತವೆ,[೨೩] ಆದರೆ ವಿಶ್ವ ಸಂಸ್ಥೆಯ ಏಷ್ಯಾ ಹಾಗು ಶಾಂತ ಮಹಾಸಾಗರದ ಆರ್ಥಿಕ ಹಾಗು ಸಾಮಾಜಿಕ ಆಯೋಗದ ಹಿರ್ಚ್ಮನ್-ಹರ್ಫಿನ್ದಾಲ್ ರ ಸೂಚಕವು SAARC(ಸಾರ್ಕ್)ನ ಮೂಲ ಏಳು ರಾಷ್ಟ್ರಗಳನ್ನು ಮಾತ್ರ ಗುರುತಿಸಿದೆ.[೨೪] ಅಫ್ಘಾನಿಸ್ತಾನವನ್ನು ಮಧ್ಯ ಏಷ್ಯಾ ಅಥವಾ ಮಧ್ಯ ಪೂರ್ವ , ಬರ್ಮಾವನ್ನು ದಕ್ಷಿಣಪೂರ್ವ ಏಷ್ಯಾ , ಮತ್ತು ಟಿಬೆಟ್ ಅನ್ನು ಮಧ್ಯ ಏಷ್ಯಾ ಅಥವಾ ಪೂರ್ವ ಏಷ್ಯಾ ದ ಭಾಗವೆಂದು ಪರಿಗಣಿಸಲಾಗುತ್ತದೆ.[೨೫] ದಕ್ಷಿಣ ಏಷ್ಯಾಗೆ ಒಂದು ಸ್ಪಷ್ಟವಾದ ವ್ಯಾಖ್ಯಾನವಿಲ್ಲದ ಕಾರಣ ದಕ್ಷಿಣ ಏಷ್ಯಾ ಬಗೆಗಿನ ವಿಶೇಷ ಅಧ್ಯಯನಗಳು ಕಡಿಮೆಯಾಗಿವೆ. ಅಲ್ಲದೇ ಈ ವಿಷಯದ ಬಗೆಗಿನ ಅಧ್ಯಯನಕ್ಕೆ ಒಲವು ಕೂಡ ಕಡಿಮೆಯಾಗಲು ಕಾರಣವಾಗಿದೆ.[೨೬] ಎರಡು ವರ್ಷಗಳ ಕಾಲ ಬಾಂಗ್ಲಾದೇಶ, ಭಾರತ, ನೇಪಾಳ, ಪಾಕಿಸ್ತಾನ, ಹಾಗು ಶ್ರೀಲಂಕಾಗಳಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ಸಮೀಕ್ಷೆಯಲ್ಲಿ ಉತ್ತರಿಸಿದ ಬಹುತೇಕ ಮಂದಿಗೆ ಅವರು ದಕ್ಷಿಣ ಏಷ್ಯಾದವರು ಎಂಬ ತಿಳಿವಳಿಕೆ ಇರಲಿಲ್ಲ.[೨೭]

ಭಾರತೀಯ ಉಪಖಂಡ

ಬದಲಾಯಿಸಿ
 
ದಕ್ಷಿಣ ಏಷ್ಯಾದ ಬಹುಭಾಗ ಆವರಿಸಿರುವ ದೊಡ್ಡದಾದ, ಸ್ವತಂತ್ರ ಭೂಭಾಗಕ್ಕೆ ಭೌಗೋಳಿಕ ಹೆಸರು - "ಭಾರತ ಉಪಖಂಡ".

ಭೌಗೋಳಿಕವಾಗಿ ಏಷ್ಯಾ ಖಂಡದಿಂದ ಬೇರೆಯಾಗಿರುವ ಸರ್ವಾನುಕೂಲಸಹಿತವಾದ ದೊಡ್ಡದಾದ ಭೂಪ್ರದೇಶಕ್ಕೆ ಭಾರತೀಯ ಉಪಖಂಡವೆಂದು ಕರೆಯುತ್ತಾರೆ.[೨೮] ಕೆಲವೊಂದು ಸಾಮ್ಯತೆಗಳಿರುವ ಕಾರಣಕ್ಕಾಗಿ ಹಲವಾರು ಅಧ್ಯಯನಗಳಲ್ಲಿ "ದಕ್ಷಿಣ ಏಷ್ಯಾ" ಹಾಗು "ಭಾರತೀಯ ಉಪಖಂಡ" ಗಳನ್ನು ಅದಲುಬದಲಾಗಿ ಬಳಸುತ್ತಾರೆ.[೨೮][೨೯][೩೦] ಆದರೆ ಕೆಲವು ರಾಜಕೀಯ ಸೂಕ್ಷ್ಮತೆಗಳಿಂದ ಕೆಲವರು, "ದಕ್ಷಿಣ ಏಷ್ಯಾ ಉಪಖಂಡ",[೩೧] ಇನ್ನೂ ಕೆಲವರು "ಭಾರತ-ಪಾಕ್ ಉಪಖಂಡ ",[೩೨] ಅಥವಾ ಕೇವಲ "ದಕ್ಷಿಣ ಏಷ್ಯಾ "[೩೩] ಯಾ "ಭಾರತೀಯ ಉಪಖಂಡದ" ದ ಬದಲು ಬರಿ "ಉಪಖಂಡ" ಎಂಬ ಪದವನ್ನು ಉಪಯೋಗಿಸುತ್ತಾರೆ. ಕೆಲವರ ಜಿಜ್ಞಾಸೆಗಳ ಪ್ರಕಾರ ಯುರೋಪ್ ಹಾಗು ಉತ್ತರ ಅಮೇರಿಕಾದಲ್ಲಿ, "ಉಪಖಂಡ" ಅಥವಾ "ಭಾರತೀಯ ಉಪಖಂಡ" ಎಂಬ ಪ್ರಯೋಗಗಳಿಗಿಂತ "ದಕ್ಷಿಣ ಏಷ್ಯಾ" ಪ್ರಯೋಗವು ಹೆಚ್ಚು ಬಳಕೆಯಲ್ಲಿದೆ.[೩೪][೩೫] ಭಾರತಜ್ಞ ರೋನಾಲ್ಡ್ ಬಿ. ಇನ್ಡೆನ್ ಈ ಪ್ರದೇಶವನ್ನು ಪೂರ್ವ ಏಷ್ಯಾದಿಂದ ಸ್ಪಷ್ಟವಾಗಿ ಭೇದ ಮಾಡುಬಹುದಾದ ಕಾರಣದಿಂದ "ದಕ್ಷಿಣ ಏಷ್ಯಾ" ಎಂಬ ಪದಪ್ರಯೋಗವು ಹೆಚ್ಚಾಗುತ್ತಿದೆ, ಎಂದು ವಾದಿಸುತ್ತಾನೆ.[೩೬] ಆದರೆ, ಈ ಅಭಿಪ್ರಾಯವನ್ನು ಎಲ್ಲರೂ ಒಪ್ಪುವುದಿಲ್ಲ.[೩೭] ನಿಘಂಟಿನ ಪ್ರಕಾರ, ಉಪಖಂಡ ಎಂಬ ಪದಕ್ಕೆ "ಭೌಗೋಳಿಕವಾಗಿ ಯಾ ರಾಜಕೀಯವಾಗಿ ಸ್ವತಂತ್ರವಾಗಿರುವ" ಖಂಡವೊಂದರ ಪ್ರದೇಶ;[೩೮] ಅಥವಾ "ಖಂಡದ ಅಂಶವಾದ ಆದರೆ ಖಂಡದಷ್ಟು ವಿಶಾಲವಾಗಿರದ ಪ್ರದೇಶ."[೩೯] ಭೂಭೌತಿಕವಾಗಿ ಗಮನಿಸಬಹುದಾದ ವಿಷಯವೆಂದರೆ ಟಿಬೆಟ್ ನಲ್ಲಿರುವ ಸಾಂಗ್ ಪೋ ನದಿಯು ಉಪಖಂಡದ ರಚನೆಯ ಗಡಿಯ ಹೊರಗಡೆ ಇದ್ದರೆ, ತಜಕಿಸ್ತಾನದ ಪಾಮೀರ್ ಪರ್ವತಗಳು ಉಪಖಂಡದ ಗಡಿಯ ಒಳಗಡೆ ಇದೆ.[೪೦] ಒಂದು ವ್ಯಾಖ್ಯಾನದ ಪ್ರಕಾರ ಅದು ದಕ್ಷಿಣ ಏಷ್ಯಾದ ಬಹುಪಾಲು ಭಾಗಗಳುನ್ನು ಒಳಗೊಂಡಿದೆ, ಅಂದರೆ ಭೂಖಂಡದ ಹೊರಪದರದ (ಕಾಂಟಿನೆಂಟಲ್ ಕ್ರಸ್ಟ್) ಪ್ರದೇಶ (ಬಾಂಗ್ಲಾದೇಶ , ಭೂತಾನ , ಭಾರತ , ನೇಪಾಳ , ಹಾಗು ಪಾಕಿಸ್ತಾನ ), ದ ಜೊತೆಗೆ ಭೂಖಂಡದ ಚಾಚುವಿನಲ್ಲಿರುವ (ಕಾಂಟಿನೆಂನಟಲ್ ಶೆಲ್ಫ್) ದ್ವೀಪ ರಾಷ್ಟ್ರ (ಶ್ರೀಲಂಕಾ ), ಹಾಗು ಓಷಿಯಾನಿಕ್ ಕ್ರಸ್ಟ್ ನ ಮೇಲ್ಭಾಗದಲ್ಲಿರುವ ದ್ವೀಪ ರಾಷ್ಟ್ರ (ಮಾಲ್ಡೀವ್ಸ್)ಅನ್ನು ಒಳಗೊಂಡಿದೆ.[೪೧] ಇನ್ನೊಂದು ವಿಂಗಡಣೆಯ ಪ್ರಕಾರ ಉಪಖಂಡ ಬ್ರಿಟಿಷ್ ಸಾಮ್ರಾಜ್ಯದ, ಪ್ರಮುಖ ದೇಶಗಳಾದ ಬಾಂಗ್ಲಾದೇಶ, ಭಾರತ ಹಾಗು ಪಾಕಿಸ್ತಾನವನ್ನು ಮಾತ್ರ ಒಳಗೊಂಡಿದೆ.[೪೨] ಈ ವ್ಯಾಖ್ಯಾನದ ಅನುಸಾರ, ಒಂದು ಕಾಲದಲ್ಲಿ ಬ್ರಿಟಿಷ್ ಇಂಡಿಯಾ ದ ಜಮ್ಮು ಮತ್ತು ಕಾಶ್ಮೀರ ದ ಭಾಗವಾಗಿದ್ದ ಇಂದು ಚೀನಾದ ಸಿನ್ ಜಿಯಾಂಗ್ ಸ್ವಾಯತ್ತ ಪ್ರದೇಶಕ್ಕೆ ಸೇರಿರುವ, ವಿವಾದಿತ ಪ್ರದೇಶ ಆಕ್ಸಾಯಿ ಚಿನ್, ಕೂಡ ಸೇರಿದೆ. ಈ ಹಿಂದೆ 1959ರಲ್ಲಿ ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಸ್ಟೇಟ್ (ಅಮೇರಿಕ ಸಂಸ್ಥಾನದ ಗೃಹ ಇಲಾಖೆ) ಪ್ರಕಟಿಸಿರುವ ಕಿರುಹೊತ್ತಿಗೆಯಲ್ಲಿ "ದಕ್ಷಿಣ ಏಷ್ಯಾದ ಉಪಖಂಡ"ವು ಅಫ್ಘಾನಿಸ್ತಾನ, ಸಿಲೋನ್ (ಶ್ರೀಲಂಕಾ), ಭಾರತ, ನೇಪಾಳ, ಹಾಗು ಪಾಕಿಸ್ತಾನವನ್ನು ಒಳಗೊಂಡಿದೆ. .[೪೩] ದಕ್ಷಿಣ ಏಷ್ಯಾವನ್ನು ಸೂಚಿಸಲು ಭಾರತೀಯ ಉಪಖಂಡ ಎಂಬ ಪದಪ್ರಯೋಗ ಬಳಸಿದಾಗ, ದ್ವೀಪ ರಾಷ್ಟ್ರಗಳಾದ ಶ್ರೀಲಂಕಾ ಹಾಗು ಮಾಲ್ಡೀವ್ಸ್ ಗಳನ್ನು ಒಳಗೊಂಡಿರುವುದಿಲ್ಲ,[೪೪] ಆದರೆ ಸಂದರ್ಭಕ್ಕೆ ತಕ್ಕಹಾಗೆ ಟಿಬೆಟ್ ಹಾಗು ನೇಪಾಳವನ್ನು ಸೇರಿಸಿಕೊಳ್ಳಲಾಗುತ್ತೆ,[೪೫] ಅಥವಾ ಬಿಡಲಾಗುತ್ತದೆ[೪೬].

ದಕ್ಷಿಣ ಏಷ್ಯಾ ಬಗ್ಗೆ ವಿಶೇಷ ಅಧ್ಯಯನಗಳಿಗೆ ಮೀಸಲಾಗಿರುವ ವಿಭಾಗಗಳ ಪ್ರಕಾರ ದಕ್ಷಿಣ ಏಷ್ಯಾದ ವ್ಯಾಖ್ಯಾನಗಳು

ಬದಲಾಯಿಸಿ

ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಡಿಯಲ್ಲಿ 1964ರಲ್ಲಿ ಸ್ಥಾಪಿತವಾದ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರವು ಪ್ರಮುಖವಾಗಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಹಿಮಾಲಯದ ಅರಸೊತ್ತಿಗೆ ನಾಡುಗಳಾದ (ನೇಪಾಳ , ಭೂತಾನ , ಹಾಗು ಸಿಕ್ಕಿಂ [೪೭]), ಮತ್ತು ಬರ್ಮಾ (ಈಗ ಅಧಿಕೃತವಾಗಿ ಮಯನ್ಮಾರ್) ದೇಶಗಳ ಅಧ್ಯಯನಕ್ಕೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಪ್ರೋತ್ಸಾಹಿಸುವ ಕೆಲಸ ಮಾಡುತಿತ್ತು. ಆದರೆ, ಕಾಲಕ್ರಮೇಣ ಇದರ ಚಟುವಟಿಕೆಗಳು ವಿಸ್ತರಿಸಿ ಥೈಲ್ಯಾಂಡ್ , ಮಲೇಷಿಯಾ, ಸಿಂಗಪುರ, ವಿಯೆಟ್ನಾಂ , ಕಾಂಬೋಡಿಯ, ಲಾವೋಸ್, ಇಂಡೋನೇಷಿಯ, ಫಿಲ್ಲಿಫೈನ್ಸ್ ಹಾಗು ಹಾಂಗ್ ಕಾಂಗ್ ದೇಶಗಳ ಅಧ್ಯಯನವನ್ನು ಕೂಡ ಒಳಗೊಂಡಿದೆ.[೪೮] ಮಿಷಿಗನ್ ವಿಶ್ವವಿದ್ಯಾಲಯ ಹಾಗು ವರ್ಜಿನಿಯ ವಿಶ್ವವಿದ್ಯಾಲಯ ಗಳ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರಗಳು SAARC(ಸಾರ್ಕ್)ನ ಏಳು ರಾಷ್ಟ್ರಗಳ ಜೊತೆಗೆ ಟಿಬೆಟ್ ಕೂಡ ದಕ್ಷಿಣ ಏಷ್ಯಾದ ದೇಶವೆಂದು ಸೇರಿಸಿ ಮಾಲ್ಡೀವ್ಸ್ ಅನ್ನು ಬಿಟ್ಟಿವೆ.[೪೯][೫೦] ರುತ್ಗರ್ಸ್ ವಿಶ್ವವಿದ್ಯಾನಿಲಯದ ದಕ್ಷಿಣ ಅಧ್ಯಯನದ ಕಾರ್ಯಕ್ರಮ, ಹಾಗು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ, ಬರ್ಕ್ಲಿಯ ದಕ್ಷಿಣ ಏಷ್ಯಾ ಅಧ್ಯಯನ ಕೇಂದ್ರವು ಕೂಡ ಇದನ್ನೇ ಮಾಡಿವೆಯಾದರೂ ಮಾಲ್ಡೀವ್ಸ್ ಅನ್ನು ಬಿಟ್ಟಿಲ್ಲ.[೫೧][೫೨] ಇದರ ಹೊರತು ಬ್ರಾಂಡಿಸ್ ವಿಶ್ವವಿದ್ಯಾಲಯ ಪ್ರಕಾರ ದಕ್ಷಿಣ ಏಷ್ಯಾವು "ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ಭೂತಾನ ಹಾಗು ಕೆಲವೊಂದು ಸಂದರ್ಭಗಳಲ್ಲಿ ಅಫ್ಘಾನಿಸ್ತಾನ, ಬರ್ಮಾ, ಮಾಲ್ಡೀವ್ಸ್ ಹಾಗು ಟಿಬೆಟ್ " ದೇಶಗಳನ್ನು ಒಳಗೊಂಡಿದೆ ಎಂದು ವ್ಯಾಖ್ಯಾನ ಕೊಟ್ಟಿದೆ.[೫೩] ಕೊಲಂಬಿಯಾ ವಿಶ್ವವಿದ್ಯಾನಿಲಯದ ಇದೆ ರೀತಿಯ ಕಾರ್ಯಕ್ರಮವು ಟಿಬೆಟ್ ಅನ್ನು ಒಳಗೊಂಡು ಅಫ್ಘಾನಿಸ್ತಾನ ಹಾಗು ಮಾಲ್ಡೀವ್ಸ್ ಎರಡನ್ನು ಬಿಟ್ಟಿದೆ.[೫೪]

 
ಯುನೈಟೆಡ್ ನೇಷನ್ಸ್ ಜಿಯೊಸ್ಕಿಮ್ ಫಾರ್ ಏಷ್ಯಾ:[66][67][68][69][70][71]

ದಕ್ಷಿಣ ಏಷ್ಯಾ ಯಾವತ್ತು ಭೂರಾಜ್ಯಶಾಸ್ತ್ರದ ದೃಷ್ಟಿಯಲ್ಲಿ ಪರಸ್ಪರ ಹೊಂದಾಣಿಕೆಯಿರದ ಪ್ರದೇಶವಾಗಿದ್ದರೂ ಸಹ, ಇದು ಸ್ಪಷ್ಟ ಭೌಗೋಳಿಕ ಸ್ವರೂಪ ಹೊಂದಿದೆ.[೫೫] ದಕ್ಷಿಣ ಏಷ್ಯಾದ ಸ್ವರೂಪ ವಿವರಿಸುವ ವ್ಯಾಖ್ಯಾನಕ್ಕೆ ಅನುಸಾರವಾಗಿ ದಕ್ಷಿಣ ಏಷ್ಯಾದ ಗಡಿಯು ಬದಲಾಗುತ್ತ ಹೋಗುತ್ತದೆ. ದಕ್ಷಿಣ ಏಷ್ಯಾದ ಉತ್ತರ, ಪೂರ್ವ ಹಾಗು ಪಶ್ಚಿಮದ ಗಡಿಯು ವ್ಯಖ್ಯಾನಗಳೊಂದಿಗೆ ಬದಲಾಗುತ್ತ ಹೋಗುತ್ತದೆ. ಹಿಂದು ಮಹಾಸಾಗರವು ದಕ್ಷಿಣ ಏಷ್ಯಾದ ದಕ್ಷಿಣದ ಗಡಿ. UN ಸಬ್ ರೀಜನ್ (ವಿಶ್ವ ಸಂಸ್ಥೆಯ ಉಪವಿಭಾಗ) ವ್ಯಾಖ್ಯಾನದ ಪ್ರಕಾರ ದಕ್ಷಿಣ ಏಷ್ಯಾದ ಉತ್ತರದ ಗಡಿ ಹಿಮಾಲಯವು , ಅದರ ಪಶ್ಚಿಮದ ಗಡಿ ಇರಾನ್-ಇರಾಕ್ ಗಡಿ, ಟರ್ಕಿ-ಇರಾನ್ ಗಡಿ, ಅರ್ಮೇನಿಯ-ಇರಾನ್ ಗಡಿ ಹಾಗು ಅಜರ್ಬೈಜಾನ್-ಇರಾನ್ ಗಡಿಗಳಾಗಿದೆ. ಮೇಲಾಗಿ, ಇದರ ಪೂರ್ವದ ಗಡಿಯು ಭಾರತ-ಬರ್ಮಾದ ಗಡಿ ಹಾಗು ಬಾಂಗ್ಲಾದೇಶ-ಬರ್ಮಾದ ಗಡಿಯಾಗಿರುತ್ತದೆ. ಈ ಭಾಗದ ಬಹುತೇಕ ಪ್ರದೇಶವು ಯುರೇಶಿಯಾದದಿಂದ ಬೇರ್ಪಟ್ಟಿರುವ, ಭಾರತೀಯ ಮೇಲ್ಮೈಯ (ಇಂಡೋ-ಆಸ್ಟ್ರೇಲಿಯನ್ ಮೇಲ್ಮೈದ ಉತ್ತರದ ಭಾಗ) ಮೇಲೆ ಸ್ಥಿತವಾಗಿರುವ,ಉಪಖಂಡವೆನಿಸಿ ದೆ. ಸುಮಾರು 50-55 ದಶಲಕ್ಷ ವರ್ಷಗಳ ಹಿಂದೆ, ಈ ಭಾಗವು ಒಂದು ಪುಟ್ಟ ಖಂಡವಾಗಿತ್ತು, ಇದು ಯುರೇಷಿಯನ್ ಮೇಲ್ಮೈಯೊಂದಿಗೆ ಸಂಲಯಿಸಿದಾಗ ಹಿಮಾಲಯ ಪರ್ವತ ಶ್ರೇಣಿ ಹಾಗು ಟಿಬೆಟ್ ಪ್ರಸ್ಥ ಭೂಮಿಯ ಉಗಮವಾಯಿತು. ಹಿಮಾಲಯ ಹಾಗು ಕ್ಯುನ್ ಲುನ್ ಪರ್ವತ ಶ್ರೇಣಿಗಳ ದಕ್ಷಿಣಕ್ಕೆ, ಇಂಡಸ್ ನದಿ ಹಾಗು ಇರಾನಿನ ಪ್ರಸ್ಥಭೂಮಿಯ ಪೂರ್ವಕ್ಕೆ ಇರುವ ಈ ಪರ್ಯಾಯ ದ್ವೀಪವು ದಕ್ಷಿಣದಲ್ಲಿ ಹಿಂದು ಮಹಾಸಾಗರದ ನೈಋತ್ಯದಲ್ಲಿ ಅರಬ್ಬಿ ಸಮುದ್ರ ಹಾಗು ಆಗ್ನೇಯದಲ್ಲಿ ಬಂಗಾಳ ಕೊಲ್ಲಿಯ ಮಧ್ಯೆ ಚಾಚಿಕೊಂಡಿದೆ.

 
ಗ್ರೋಲಿಯರ್ ಭೂಪಟದ ಮೇಲೆ ಸ್ಥೂಲವಾಗಿ ಅಧರಿಸಿರುವ ದಕ್ಷಿಣ ಏಷ್ಯಾದ ನೈಸರ್ಗಿಕ ವೃಕ್ಷಸಮ್ಮೂಹದ ವಿವಿಧ ವಲಯಗಳು[೫೬]

ಈ ಪ್ರದೇಶವು, ದೊಡ್ಡ ಖಂಡಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಿಮನದಿಗಳು, ಕಾಡುಗಳು, ಕಣಿವೆಗಳು, ಮರುಭೂಮಿ ಹಾಗು ಹುಲ್ಲುಹಾಸಿಗೆಗಳು ಹೀಗೆ, ದಂಗುಬಡಿಸುವಂತಹ ಅನೇಕ ಭೌಗೋಳಿಕ ವೈವಿಧ್ಯತೆ ಹೊಂದಿದೆ. ಈ ಭಾಗವು ಮೂರು ಸಮುದ್ರಗಳಾದ ಬಂಗಾಳ ಕೊಲ್ಲಿ, ಹಿಂದು ಮಹಾಸಾಗರ ಹಾಗು ಅರೇಬ್ಬಿ ಸಮುದ್ರ ದಿಂದ ಅವೃತ್ತಗೊಂಡಿದೆ. ಈ ವಿಶಾಲವಾದ ಭಾಗದ ಹವಾಮಾನವು ದಕ್ಷಿಣದಲ್ಲಿ ಉಷ್ಣವಲಯ ಮತ್ತು ಮುಂಗಾರಿನಿಂದ ಹಿಡಿದು ಉತ್ತರದ ಸಮಶೀತೋಷ್ಣ ವಲಯ ಇದೆ. ಹೀಗೆ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬಹಳ ವೈವಿಧ್ಯತೆಯಿಂದ ಕೂಡಿದೆ. ಈ ವೈವಿಧ್ಯತೆಗೆ -ಎತ್ತರ, ಸಮುದ್ರ ತೀರದಿಂದ ಅಂತರ,ಕಾಲಕಾಲಕ್ಕೆ ಆಗುವ ಮುಂಗಾರಿನ (ಹಿಂದು ಮಹಾಸಾಗರದಲ್ಲಿ ಬೇಸಿಗೆಯಲ್ಲಿ ನೈಋತ್ಯದಿಂದ ಬೀಸುವ ಒಂದು ಕ್ಲುಪ್ತವಾದ ಗಾಳಿ) ಪರಿಣಾಮ, ಎಲ್ಲವೂ ಕಾರಣವಾಗಿದೆ. ಈ ಪ್ರದೇಶದ ದಕ್ಷಿಣದಲ್ಲಿರುವ ಭಾಗಗಳು ಬೇಸಿಗೆಯಲ್ಲಿ ಸಾಮಾನ್ಯವಾಗಿ ಸುಡುವ ಬಿಸಿಲಿದ್ದು, ಮುಂಗಾರಿನಲ್ಲಿ ಮಳೆಯಾಗುತ್ತದೆ. ಹಿಂದು-ಗಂಗಾ ಬಯಲು ಪ್ರದೇಶದ ಉತ್ತರ ವಲಯವು ಬೇಸಿಗೆಯಲ್ಲಿ ಸುಡುಬಿಸಿಲಿದ್ದರೂ ಕೂಡ ಚಳಿಗಾಲದಲ್ಲಿ ತಂಪಾಗಿರುತ್ತದೆ. ಉತ್ತರದ ಭಾಗವು ಪರ್ವತಗಳಿಂದ ಕೂಡಿದ್ದು ಶೀತವಲಯವಾಗಿದೆ, ಹಿಮಾಲಯದ ಶ್ರೇಣಿಯ ಎತ್ತರದ ಭಾಗದಲ್ಲಿ ಹಿಮಪಾತವಾಗುತ್ತಿರುತ್ತದೆ. ಉತ್ತರ-ಏಷ್ಯಾದ ಕಟು ಚಳಿಗಾಳಿಯನ್ನು ಹಿಮಾಲಯವು ತಡೆಯುವುದರಿಂದ, ಹಿಮಾಲಯದ ಕೆಳಗಿನ ಬಯಲು ಪ್ರದೇಶದ ತಾಪಮಾನವು ಸಾಕಷ್ಟು ಸೌಮ್ಯವಾಗಿರುತ್ತದೆ. ಸಾಮಾನ್ಯವಾಗಿ ಈ ಭಾಗದ ಹವಾಮಾನವು - ಮುಂಗಾರು ಋತುವಿನ ಹವಾಮಾನವಾಗಿರುತ್ತದೆ; ಅಂದರೆ ಬೇಸಿಗೆಯಲ್ಲಿ ತೇವಾಂಶ, ಹಾಗು ಚಳಿಗಾಲದಲ್ಲಿ ಒಣಹವೆಯಿರುತ್ತದೆ - ಇದು ಇಲ್ಲಿ ಸೆಣಬು , ಟೀ, ಭತ್ತ, ಹಾಗು ವಿವಿಧ ತರಕಾರಿಗಳನ್ನು ಬೆಳೆಯಲು ಸಹಾಯಕಾರಿಯಾಗಿದೆ.

ಇತಿಹಾಸ

ಬದಲಾಯಿಸಿ

ಸಾಮಾನ್ಯವಾಗಿ ದಕ್ಷಿಣ ಏಷ್ಯಾದ ಪೂರ್ವದ ಇತಿಹಾಸಪೂರ್ವ ಚರಿತ್ರೆಯು ಸಿಂಧೂತಟದ ನಾಗರೀಕತೆಯು ಸಾಮಾಪ್ತಿಯಾಗುವುದರೊಂದಿಗೆ ಪ್ರಾರಂಭವಾಗುತ್ತದೆ, ನಂತರದ ವೇದಗಳ ಕಾಲದ ಪ್ರಾಚೀನ ಕತೆಗಳು, ಮಹಾಜನಪದರ ಆಳ್ವಿಕೆಯ (ಪ್ರಾದೇಶಿಕ ಪ್ರಭುತ್ವಗಳು ಹಾಗು ನಂತರದ ಪ್ರಾಚೀನ ಸಾಮ್ರಾಜ್ಯಗಳಿಗು ಹಿಂದಿನ) ಬಗೆಗಿನ ಅಲ್ಪಸ್ವಲ್ಪ ವಿವರಗಳನ್ನು ಒಳಗೊಂಡಿದೆ. ಮಧ್ಯಕಾಲೀನ ಸಾಮ್ರಾಜ್ಯಗಳ ಐತಿಹಾಸಿಕ ವಿವರಣೆಗಳೊಂದಿಗೆ ಹಾಗು ಯುರೋಪಿನ ವ್ಯಾಪಾರಿಗಳ ಅಗಮನದೊಂದಿಗೆ ಅಂತ್ಯವಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ದಕ್ಷಿಣ ಏಷ್ಯಾದ ರಾಷ್ಟ್ರಗಳು ಒಂದಲ್ಲ ಒಂದು ಕಾಲದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಯುರೋಪಿನ ವಸಾಹತುವಿನ ದಾಸ್ಯದ ಪ್ರದೇಶಗಳಾಗಿದ್ದವು. ಗ್ರೇಟ್ ಬ್ರಿಟನ್ ಇಂದಿನ ಭಾರತದ ಬಹುಭಾಗ, ಪಾಕಿಸ್ತಾನ, ಬಂಗ್ಲಾದೇಶ ಮತ್ತು ಮಯನ್ಮಾರ್ ಎಲ್ಲವನ್ನು ಕ್ರಮೇಣವಾಗಿ ವಶಪಡಿಸಿಕೊಂಡು ಆಳ್ವಿಕೆ ನಡೆಸಿತು. ಸುಮಾರು 1757 ರಿಂದ ಪ್ರಾರಂಭವಾದ ಈ ಆಳ್ವಿಕೆಯು 1857ರಲ್ಲಿ ತನ್ನ ತುತ್ತ ತುದಿಯನ್ನು ಮುಟ್ಟಿ 1947ರ ತನಕ ಮುಂದುವರೆಯಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ನೇಪಾಳ ಹಾಗು ಭೂತಾನ ಎರಡೂ ಒಂದು ರೀತಿಯಲ್ಲಿ ಗ್ರೇಟ್ ಬ್ರಿಟನ್ ನ ಆಶ್ರಿತ ಪ್ರದೇಶಗಳಾಗಿದ್ದವು. ದಕ್ಷಿಣ ಏಷ್ಯಾದ ಶತಮಾನಗಳ ದೀರ್ಘ ಇತಿಹಾಸದಲ್ಲಿ ಯುರೋಪಿನ ಸ್ವಾಧೀನದ ಈ ಅವಧಿಯು ತೀರಾ ಚಿಕ್ಕದಾದರೂ, ಇದು ತೀರಾ ಇತ್ತೀಚೆಗೆ ನಡೆದದ್ದು, ಹಾಗು ಈ ಭಾಗದ ಮೇಲಿನ ಗಾಢ ಪ್ರಭಾವದಿಂದಾಗಿ, ಗಮನಸೆಳೆಯುತ್ತದೆ. ಸಾರಿಗೆ ಸೌಕರ್ಯ,ದೂರ ಸಂಪರ್ಕ ಜಾಲದ ವ್ಯವಸ್ಥೆ, ಬ್ಯಾಂಕುಗಳ ವ್ಯವಸ್ಥೆ, ಇವುಗಳಿಗೆ ಬೇಕಾದ ಉದ್ಯೋಗಿಗಳ ತರಬೇತಿ ವ್ಯವಸ್ಥೆ, ಹಾಗು ಪ್ರಸ್ತುತ ಇರುವ ರೈಲು, ಅಂಚೆ, ತಂತಿಅಂಚೆ, ಶಿಕ್ಷಣ ಸೌಲಭ್ಯಗಳು ಎಲ್ಲವು ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿಅಸ್ತಿತ್ವಕ್ಕೆ ಬಂದವು. ಇದನ್ನು ಸಾಮಾನ್ಯವಾಗಿ ಬ್ರಿಟಿಷ್ ರಾಜ್ ಎಂದು ಕರೆಯುತ್ತೇವೆ, ಅಲ್ಲದೇ ಇವು ಸ್ಥಾಪಿತದೊಂದಿಗೆ ಅಭಿವೃದ್ಧಿಯಾಗಿವೆ. ಎರಡನೇ ಮಹಾಯುದ್ಧದ ಅಂತ್ಯದಲ್ಲಿ ಅಂದರೆ ಸುಮಾರು 1940 ನೆ ದಶಕದ ಕಡೆಯ ಭಾಗದಲ್ಲಿ ಈ ಭಾಗದ ಬಹುತೇಕ ಭಾಗಗಳು ಯುರೋಪಿನಿಂದ ಸ್ವಾತಂತ್ರ ಪಡೆದವು. ಟಿಬೆಟ್ ಪ್ರಾಂತ್ಯವು ಕೆಲವೊಮ್ಮೆ ಸ್ವತಂತ್ರವಾಗಿ ಆಡಳಿತ ನಡೆಸಿದರೆ, ಕೆಲವೊಮ್ಮೆ ಚೀನಾದ ಆಡಳಿತಕ್ಕೆ ಒಳಪಟ್ಟಿತು.[೫೭][೫೮], ಚೀನಾದ ವಶಕ್ಕೆ ಅದು 18ನೆ ಶತಮಾನದ ವೇಳೆಗೆ ಬಂದಿತು.[೫೮][೫೯][೬೦][೬೧] ಈ ಪ್ರದೇಶವು 20 ನೇ ಶತಮಾನದ ಶುರುವಿನಲ್ಲಿ ಬ್ರಿಟಿಷ್ ರ ವಶಪಡಿಸಿಕೊಳ್ಳುವ ಪ್ರಯತ್ನದ ನಡುವೆಯೂ ಚೀನಾದವರ ಆಶ್ರಿತ ಪ್ರದೇಶವಾಗಿತ್ತು.[೬೨] ಚೀನಾ-ಟಿಬೆಟ್ ಸಂಬಂಧದ ಬಗ್ಗೆ ಟಿಬೆಟಿನವರ ಹಾಗು ಚೀನಿಯವರ ಅಭಿಪ್ರಾಯಗಳು ಗಮನಾರ್ಹವಾಗಿ ಬೇರೆಬೇರೆಯಾಗಿದೆ. ದಲೈ ಲಾಮರ ಮಂಚು ಚಕ್ರವರ್ತಿಯ ಜೊತೆಗಿನ ಸಂಬಂಧವನ್ನು ಟಿಬೆಟ್ ರು ಧಾರ್ಮಿಕವಾಗಿ ಕಂಡರೆ ಹೊರತು ರಾಜಕೀಯವಾಗಿ ಕಾಣಲಿಲ್ಲ.[೬೦] 1947 ರ ಆನಂತರದಲ್ಲಿ, ಬಹುಪಾಲು ದಕ್ಷಿಣ ಏಷ್ಯಾದ ರಾಷ್ಟ್ರಗಳು ಎಲ್ಲಾ ಕ್ಷೇತ್ರದಲ್ಲಿಯೂ ಮಹತ್ತರ ಅಭಿವೃದ್ದಿ ಸಾಧಿಸಿವೆ.[ಸೂಕ್ತ ಉಲ್ಲೇಖನ ಬೇಕು] ಶಿಕ್ಷಣ, ಉದ್ಯಮ, ವೈದ್ಯಕೀಯ ಸೇವೆ, ಮಾಹಿತಿ ತಂತ್ರಜ್ಞಾನ ಹಾಗು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು, ಆತ್ಯಂತ ಮುಂದುವರೆದ ವಿಜ್ಞಾನದ ಕ್ಷೇತ್ರದಲ್ಲಿನ ಸಂಶೋಧನೆಗಳು, ಸೈನಿಕ ಸಂಪನ್ಮೂಲಗಳಿಗೆ ಸಂಬಂಧ ಪಟ್ಟ ಸ್ವಾವಲಂಬಿ ಯೋಜನೆಗಳು, ಅಂತರ್-ರಾಷ್ಟ್ರೀಯ ಮತ್ತು ಜಾಗತಿಕ ವ್ಯಾಪಾರ, ವ್ಯಾಪಾರ ವಹಿವಾಟು, ಹಾಗು ಮಾನವ ಸಂಪನ್ಮೂಲಗಳ ಹೊರಗುತ್ತಿಗೆ; ಹೀಗೆ ಹಲವಾರು ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ಹೀಗಾದರೂ, ಧಾರ್ಮಿಕತೆಯ ಅತಿ ಪ್ರತಿಪಾದನೆ, ಭ್ರಷ್ಷಾಚಾರ, ಗಡಿಯ ಬಗ್ಗೆ ವಿವಾದಗಳು, ಹಾಗು ಸಂಪತ್ತಿನ ನ್ಯಾಯಸಮ್ಮತ್ತವಲ್ಲದ ಹಂಚಿಕೆ ಹೀಗೆ ಹಲವಾರು ಸಮಸ್ಯೆಗಳಿವೆ.

ಪ್ರದೇಶ ಹಾಗು ಪ್ರಾದೇಶಿಕ ಮಾಹಿತಿಗಳು

ಬದಲಾಯಿಸಿ

ಸೂಚಿಸಿದಾಗ ಹೊರತುಪಡಿಸಿ 2009ರ ಜನಸಂಖ್ಯೆಯ ಅಂಕಿಅಂಶ ಪರಿಗಣಿಸಲಾಗಿದೆ.

ಪ್ರಮುಖ ದೇಶಗಳು

ಬದಲಾಯಿಸಿ

ದಕ್ಷಿಣ ಏಷ್ಯಾದ ಪ್ರಮುಖ ದೇಶಗಳು ಸುಮಾರು 4,480,000 ಚದರ ಕಿ.ಮೀ. (1,729,738 ಚದರ ಮೈಲಿಗಳು)ವ್ಯಾಪಿಸಿರುವ ಇದು ಏಷ್ಯಾದ ಸುಮಾರು ಶೇಕಡಾ 10ರಷ್ಟು ಭಾಗವಿದೆ. ಈ ಪ್ರದೇಶದ ಜನಸಂಖ್ಯೆಯು ಏಷ್ಯಾದ ಜನಸಂಖ್ಯೆಯ ಶೇಕಡಾ 40ರಷ್ಟಿದೆ.

ದೇಶ ಪ್ರದೇಶ
(ಚದರ ಕಿ.ಮೀ ಗಳಲ್ಲಿ)
ಜನಸಂಖ್ಯೆ(2009) ಸಾಂದ್ರತೆ
(ಪ್ರತಿ ಚದರ ಕಿ.ಮೀ. ಗೆ)
[[GDP (ಸಮಾನ್ಯವಾದ)

{ ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (ಸಮಾನ್ಯವಾದ)}]]
(2009)

ತಲಾವಾರು
(2009)
ಬಂಡವಾಳ ನಗದು ಸರಕಾರ ಅಧಿಕೃತ ಭಾಷೆಗಳು ಚಿಹ್ನೆಗಳು
  ಬಾಂಗ್ಲಾದೇಶ 147,570 162,221,000[೬೩] 1,099 $92.1 ಶತಕೋಟಿ $600 ಢಾಕಾ ಟಾಕಾ ಸಂಸದೀಯ ಗಣತಂತ್ರ ಬಂಗಾ‍ಳಿ  
  ಭೂತಾನ್ 38,394 697,000[೬೩] 18 $1.5 ಶತಕೋಟಿ $2,200 ಥಿಂಪೂ ಗುಲ್ಟರ್ಮ್, ಭಾರತೀಯ ರೂಪಾಯಿ ಸಂವಿಧಾನಾತ್ಮಕ ಏಕಾಧಿಪತ್ಯ ಜೋಂಖ  
  India 3,287,240 1,198,003,000[೬೩] 365 $1,243 ಶತಕೋಟಿ $1,000 ನವ ದೆಹಲಿ ಭಾರತೀಯ ರೂಪಾಯಿ ಸಂಯುಕ್ತ ಗಣತಂತ್ರ, ಪ್ರಜಾಪ್ರಭುತ್ವ 22 ಅಧಿಕೃತ ಭಾಷೆಗಳು  
  ಮಾಲ್ಡೀವ್ಸ್ 298 396,334[೬೩] 1,330 $807.5 ದಶಲಕ್ಷ $2,000 ಮಾಲೆ ರುಫಿಯಾ ಗಣರಾಜ್ಯ ಧಿವೇಹಿ  
  ನೇಪಾಳ 147,181 29,331,000[೬೩] 200 $12.4 ಶತಕೋಟಿ $400 ಕಟ್ಮಂಡು ನೇಪಾಳದ ರೂಪಾಯಿ ಪ್ರಜಾಪ್ರಭುತ್ವೀಯ ಗಣರಾಜ್ಯ ನೇಪಾಳಿ  
  ಪಾಕಿಸ್ತಾನ 803,940 180,808,000[೬೩] 225 $166.5 ಶತಕೋಟಿ $900 ಇಸ್ಲಾಮಾಬಾದ್ ಪಾಕಿಸ್ತಾನಿ ರೂಪಾಯಿ ಇಸ್ಲಾಮಿಕ್ ಗಣರಾಜ್ಯ ಉರ್ದು , ಇಂಗ್ಲಿಷ್, ಬಲೂಚಿ, ಪಶ್ತೂ , ಪಂಜಾಬಿ , ಸಿರೈಕಿ , ಸಿಂಧಿ [೬೪]  
  ಶ್ರೀಲಂಕಾ 65,610 20,238,000[೬೩] 309 $41.3 ಶತಕೋಟಿ $2,000 ಶ್ರೀ ಜಯವರ್ಧನಾಪುರ-ಕೊಟ್ಟೆ ಶ್ರೀಲಂಕಾದ ರೂಪಾಯಿ ಪ್ರಜಾಪ್ರಭುತ್ವೀಯಸಮಾಜವಾದಿ ಗಣರಾಜ್ಯ ಸಿಂಹಳ , ತಮಿಳು , ಇಂಗ್ಲಿಷ್  

ಕೆಲವೊಂದು ವ್ಯಾಖ್ಯಾನಗಳ ಪ್ರಕಾರದ ಹೆಚ್ಚುವರಿ ದೇಶಗಳು ಹಾಗು ಪ್ರದೇಶಗಳು

ಬದಲಾಯಿಸಿ

ಈ ಪಟ್ಟಿಯಲ್ಲಿರುವ ದೇಶಗಳ ಪೈಕಿ ಅಫ್ಘಾನಿಸ್ತಾನವನ್ನು ಹೆಚ್ಚು ಜನ ದಕ್ಷಿಣ ಏಷ್ಯಾದ ದೇಶವೆಂದು ವ್ಯಾಖ್ಯಾನಿಸುತ್ತಾರೆ.

ದೇಶ ಅಥವಾ ಪ್ರದೇಶ ಪ್ರದೇಶ
(ಚದರ ಕಿ.ಮೀ. ನಲ್ಲಿ)
ಜನಸಂಖ್ಯೆ ಸಾಂದ್ರತೆ
(ಪ್ರತಿ ಚದರ ಕಿ.ಮೀ.ಗೆ)
[[GDP (ಸಮಾನ್ಯವಾದ)

{ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (ಸಮಾನ್ಯವಾದ)}]]
(2009)

ತಲಾವಾರು
(2009)
ಬಂಡವಾಳ ನಗದು ಸರ್ಕಾರ ಅಧಿಕೃತ ಭಾಷೆಗಳು ಚಿಹ್ನೆಗಳು
  ಅಫ್ಘಾನಿಸ್ತಾನ 647,500 33,609,937[೬೩] 52 $13.3 ಶತಕೋಟಿ $400 ಕಾಬುಲ್ ಅಫಗಾನ್ ಅಫಗಾನಿ ಇಸ್ಲಾಮಿಕ್ ಗಣರಾಜ್ಯ ದರಿ(ಪರ್ಷಿಯನ್), ಪಶ್ತು []
  British Indian Ocean Territory 60 3,500 59 ಲಭ್ಯವಿಲ್ಲ ಲಭ್ಯವಿಲ್ಲ ಡಿಯಾಗೋ ಗಾರ್ಸಿಯಾ ಪೌಂಡ್‌ ಸ್ಟರ್ಲಿಂಗ್‌ ಸಾಗರೋತ್ತರ ಬ್ರಿಟಿಷ್‌‌ ಪ್ರದೇಶಗಳು ಇಂಗ್ಲೀಷ್  
  ಬರ್ಮಾ 676,578 48,137,141[೬೩][೬೫] 71 $26.5 ಶತಕೋಟಿ $500 ಯಾನ್ಗಾನ್ ಮಯಾನ್ಮ ಕ್ಯಾಟ್ ಮಿಲಿಟರಿ ರಾಜ್ಯ ಬರ್ಮಿಸ್; ಜಿಂಗಫೊ, ಷಾನ್, ಕರೆನ್, ಮೊನ್, (ಬರ್ಮಗೆ ಸೇರಿದ ಕೆಲವು ಸ್ವಾಯತ್ತ ಪ್ರದೇಶಗಳು)  
  ಇರಾನ್ 1,648,195 70,495,782 (2006ರ ಜನಗಣತಿ )[೬೬][೬೭] 40 $331.8 ಶತಕೋಟಿ $4,500 ತೆಹ್ರಾನ್ ಇರಾನಿನ ರಿಯಾಲ್ ಇಸ್ಲಾಮಿಕ್ ಗಣರಾಜ್ಯ ಪರ್ಷಿಯನ್,ಪ್ರಾದೇಶಿಕ ಭಾಷೆಗಳಿಗೆ ಸಂವಿಧಾನತ್ಮಕ ಸ್ಥಾನವಿದೆ.[೬೮]  
  ಚೀನಾ - ಟಿಬೆಟ್ ಸ್ವಾಯತ್ತ ಪ್ರದೇಶ 1,228,400 2,740,000 2 $6.4 ಶತಕೋಟಿ $2,300 ಲ್ಹಾಸಾ ಚೈನಿಸ್ ಯಾನ್ ಚೀನಾಗೆ ಸೇರಿದ ಸ್ವಾಯತ್ತ ಪ್ರದೇಶ ಮಂಡಾರಿಯನ್ ಚೈನಿಸ್, ಟಿಬೆಟಿಯನ್

ಪ್ರಾದೇಶಿಕ ಗುಂಪುಗಳಿಗೆ ಸೇರಿದ ದೇಶಗಳು

ಬದಲಾಯಿಸಿ
ದೇಶ/ಪ್ರದೇಶ, ದ ಹೆಸರು ಬಾವುಟ ದೊಂದಿಗೆ ಪ್ರದೇಶ
(ಚದರ ಕಿ.ಮೀ.)
ಜನಸಂಖ್ಯೆ ಜನ ಸಾಂದ್ರತೆ
(ಪ್ರತಿ ಚದರ ಕಿ.ಮೀ. ಗೆ)
ರಾಜಧಾನಿ ಅಥವಾ ಸರಕಾರದ ಆಡಳಿತ ಕಛೇರಿ ನಗದು ಒಳಪಟ್ಟಿರುವ ದೇಶಗಳು ಅಧಿಕೃತ ಭಾಷೆಗಳು ಚಿಹ್ನೆಗಳು
UN ಸಬ್ ರೀಜನ್ (ದಕ್ಷಿಣ ಏಷ್ಯಾದ ವಿಶ್ವಸಂಸ್ಥೆಯ ಉಪವಿಭಾಗ) 6,285,724 1,653,457,908 263.04 ಲಭ್ಯವಿಲ್ಲ ಲಭ್ಯವಿಲ್ಲ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ, ಭಾರತ, ಇರಾನ್, ಮಾಲ್ಡೀವ್ಸ್,ನೇಪಾಳ,ಪಾಕಿಸ್ತಾನ, ಶ್ರೀಲಂಕಾ ಲಭ್ಯವಿಲ್ಲ ಲಭ್ಯವಿಲ್ಲ
SAARC (ಸಾರ್ಕ್) 3,989,969 1,549,348,689 388.31 ಕಟ್ಮಂಡು ಲಭ್ಯವಿಲ್ಲ ಅಫ್ಘಾನಿಸ್ತಾನ , ಬಾಂಗ್ಲಾದೇಶ , ಭೂತಾನ , ಭಾರತ,

ಮಾಲ್ಡೀವ್ಸ್ , ನೇಪಾಳ, ಪಾಕಿಸ್ತಾನ , ಶ್ರೀಲಂಕಾ

ಯಾರೂ ಇಲ್ಲ

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

ಜನಾಂಗೀಯ ಗುಂಪುಗಳು

ಬದಲಾಯಿಸಿ
 
ಪ್ರಾದೇಶಿಕ ಭಾಷೆಗಳಲ್ಲಿ ದಕ್ಷಿಣ ಏಷ್ಯಾದ ಭೂಪಟ.

ಬಾಂಗ್ಲಾದೇಶ ,ಭೂತಾನ,ಭಾರತ ,ಮಾಲ್ಡೀವ್ಸ್ ,ನೇಪಾಳ ,ಪಾಕಿಸ್ತಾನ ಹಾಗು ಶ್ರೀಲಂಕಾ ಗಳನ್ನು ಒಳಗೊಂಡ ದಕ್ಷಿಣ ಏಷ್ಯಾದಲ್ಲಿ ಚಿಕ್ಕ ಸಂಖ್ಯಾಬಲದ ಬುಡಕಟ್ಟಿನ ಗುಂಪಿನಿಂದ ಹಿಡಿದು ದೊಡ್ದ ದಶಲಕ್ಷ ಸಂಖ್ಯೆಯು ಸಮುದಾಯಗಳಿವೆ. ಹೀಗೆ ಒಟ್ಟು ಸುಮಾರು 2000ಕ್ಕೂ ಹೆಚ್ಚು ಜನಾಂಗೀಯ ಪ್ರಬೇಧಗಳಿದ್ದು ಜನಾಂಗೀಯವಾಗಿ ಬಹಳ ವೈವಿಧ್ಯಮಯವಾಗಿದೆ. ಹಲವಾರು ದ್ರಾವಿಡರ, ಇಂಡೋ-ಆರ್ಯನ್ ಹಾಗು ಇರಾನಿಯರ ಗುಂಪುಗಳಿವೆ. ಇದೂ ಅಲ್ಲದೆ ಇನ್ನೂ ಹಲವಾರು ಪಂಗಡಗಳು ಅನೇಕ ಶತಮಾನಗಳಿಂದ ದಕ್ಷಿಣ ಏಷ್ಯಾವನ್ನು ಹಲವಾರು ಬಾರಿ ಆಕ್ರಮಣ ಮಾಡಿ, ಅಲ್ಲಿಯ ನೆಲೆಸಿವೆ ಕೂಡ. ಮೇಲಾಗಿ ದ್ರಾವಿಡರ, ಇಂಡೋ-ಆರ್ಯನ್ ಹಾಗು ಸ್ಥಳೀಯ ಸಮಾಜದ ಜೊತೆಗಿನ ಪರಸ್ಪರ ಸಾಂಗತ್ಯವು ಹಲವಾರು ಪರಸ್ಪರ ಹೋಲುವ ನಂಬಿಕೆಗಳು, ಸಂಪ್ರದಾಯಗಳು ಹಾಗು ಆಚಾರ-ವಿಚಾರಗಳ ಒಂದು ಸಂಯುಕ್ತ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿದೆ. ಹೀಗಿದ್ದರೂ, ದಕ್ಷಿಣ ಏಷ್ಯಾದ ಹಲವಾರು ಪಂಗಡಗಳ ಸಂಪ್ರದಾಯಗಳು ಹಿಂದಿನ ಸಂಪ್ರದಾಯಗಳಿಗಿಂತ ಆಧುನಿಕವಾಗಿ ಮಾರ್ಪಟ್ಟು ಬೇರೆಯಾಗಿದೆ, ಹೀಗಾದಾಗ ಕೆಲವೊಮ್ಮೆ ಇದು ಗಟ್ಟಿಯಾಗಿ ಬೇರೂರಿರುವ ಪ್ರಾದೇಶಿಕ ಸಂಪ್ರದಾಯಗಳಿಗೆ, ಉದಾಹರಣೆಗೆ ದಕ್ಷಿಣ ಭಾರತ ದಂತಹರಲ್ಲಿ ವಿಶಿಷ್ಟ ಸಂಸ್ಕೃತಿಯ ಉಗಮಕ್ಕೆ ಕಾರಣವಾಗಿದೆ. ನಂತರ ಮುಖ್ಯವಾಗಿ ಮಧ್ಯೆ ಏಷ್ಯಾ ಹಾಗು ಇರಾನನಿಂದ ಒಬ್ಬರ ಹಿಂದೆ ಒಬ್ಬರ ಹಾಗೆ ಬಂದಂತಹ ಶಕರು, ಕುಶಾನರು, ಹನ್ಸರು ಮೊದಲಾದ ಜನಾಂಗೀಯ ಪಂಗಂಡದವರು ದಕ್ಷಿಣ ಏಷ್ಯಾದಲ್ಲಿದ ಮುಂಚೆಯೆ ಇದ್ದ ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದವು. ಇವರಲ್ಲಿ ಕೊನೆಯದಾಗಿ ಬಂದವರೆಂದರೆ ಅರಬ್ಬರು, ಇವರ ಹಿಂದೆ ತುರ್ಕರು ಪಶ್ತೂನರು,(ಗುಡ್ಡಗಾಡು ಜನಾಂಗ) ಹಾಗು ಮೊಘಲರು ಬಂದರು. ಆದರೆ, ಸಂಸ್ಕೃತಿಯ ಮೇಲೆ ಅರಬ್ಬ್ ರ ಪ್ರಭಾವಕ್ಕೆ ಹೋಲಿಸಿದರೆ ತುರ್ಕರ,ಪಶ್ತೂನರ, ಮೊಘಲರಿಗೆ ಹೋಲಿಸಿದರೆ ಅಲ್ಪವಾಗಿದೆ. ಇವರುಗಳ ಸಾಂಸ್ಕೃತಿಕ ಪ್ರಭಾವದಿಂದಾಗಿ, ಇಂದೂ ಪ್ರಚಲಿತದಲ್ಲಿರುವ ಉರ್ದು ಎಂಬ (ಭಾರತ-ಪರಶೀಯನ್ ಪರಂಪರೆಯ) ಸಮನ್ವಯದ ಭಾಷೆಯ ಜನ್ಮಕ್ಕೆ ಕಾರಣವಾಯಿತು. ಇಂಗ್ಲೀಷ್ ಜನಾಂಗದವರು ಹಾಗು ಇತರ ಬ್ರಿಟನ್ ರು ಈ ಪ್ರದೇಶದ ಮೇಲೆ ತಮ್ಮ ಎರಡು ಶತಕಗಳ ದೀರ್ಘ ಕಾಲದ ಆಳ್ವಿಕೆಯ ನಂತರ ಇಂದು ಸಾಮಾನ್ಯವಾಗಿ ಇಲ್ಲವಾದರೂ ಕೂಡ ಸಮಾಜದ ಶ್ರೇಷ್ಠರ ಮೇಲೆ ಇವರು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವವನ್ನು ಅಚ್ಚೊತ್ತಿದ್ದಾರೆ.

ಭಾಷೆಗಳು

ಬದಲಾಯಿಸಿ

ಈ ಪ್ರದೇಶದ ಬಹುಸಂಖ್ಯಾತ ಜನ ಅಂದರೆ ಸುಮಾರು 422 ದಶಲಕ್ಷ ಜನ ಮಾತನಾಡುವ ಭಾಷೆಯಾಗಿ ಮೊದಲ ಸ್ಥಾನದಲ್ಲಿ ಹಿಂದಿ [೬೯] ಇದ್ದರೆ; ಬೆಂಗಾಳಿ, ಸುಮಾರು 210 ದಶಲಕ್ಷ ಜನ ಮಾತನಾಡುವ ಭಾಷೆಯಾಗಿ, ಅತೀ ಹೆಚ್ಚು ಜನ ಮಾತಾನಾಡುವ ಎರಡನೇ ಭಾಷೆಯಾಗಿದೆ.[೭೦] ಉರ್ದುವು ಕೂಡ ಉಪಖಂಡದ,ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ ಹಾಗು ಭಾರತದ , ಪ್ರಮುಖ ಭಾಷೆಯಾಗಿದೆ. ಭಾಷಾಶಾಸ್ತ್ರದ ಅಧಾರದ ಮೇಲೆ ಹೇಳುವುದಾದರೆ ಉರ್ದುವು ಹಿಂದಿಯನ್ನೇ ಬಹುತೇಕ ಹೋಲುತ್ತದೆ. ಹಿಂದಿ ಹಾಗು ಉರ್ದು ಎರಡು ಸೇರಿ ಹಿಂದೂಸ್ಥಾನಿಯಾಗುತ್ತದೆ. ಹಿಂದಿಯನ್ನು ಭಾರತದ ಬಹಳ ರಾಜ್ಯಗಳಲ್ಲಿ ಮಾತಾನಾಡುತ್ತಾರೆ, ಇದು ಭಾಷಿಕವಾಗಿ ಉರ್ದುವನ್ನು ಹೋಲುತ್ತದೆ. ಬಹುತೇಕ ಭಾರತೀಯರು ಸ್ಥಳೀಯ, ಪ್ರಾದೇಶಿಕ ಭಾಷೆ ಮಾತನಾಡುತ್ತಾರೆ. ಅಲ್ಲದೇ ಇವರಿಗೆ ಹಿಂದಿ ಚೆನ್ನಾಗಿ ಗೊತ್ತಿರುವುದಿಲ್ಲ; ಎಂಬ ವಿಷಯವೆ ಅನೇಕರಿಗೆ ತಿಳಿದಿರುವುದಿಲ್ಲ. ಈ ಭಾಗದ ಬೇರೆ ಭಾಷೆಗಳು ಕೆಲವು ಪ್ರಮುಖ ಭಾಷಾಧ್ಯಯನದ ಗುಂಪುಗಳಾದ ದ್ರಾವಿಡರ ಭಾಷಾ ಇಂಡೋ-ಆರ್ಯನ್ ಭಾಷಾ, ಹಾಗು ಇಂಡೋ-ಯುರೋಪಿಯನ್ ಭಾಷಾ ಗುಂಪಿನ ಉಪವಿಭಾಗವಾದ ಇಂಡೋ-ಇರಾನಿಯನ್ ಭಾಷಾ ವಿಭಾಗಗಳಿಗೆ ಸೇರುತ್ತವೆ. ಇಂಡೋ-ಇರಾನಿಯನ್ ಭಾಷಾ ವಿಭಾಗದ ಮತ್ತೊಂದು ಮುಖ್ಯವಾದ ಉಪವಿಭಾಗವಾದ ಇರಾನಿಯನ್ ಭಾಷೆ ಕೂಡ ಇಂದಿನ ಪಾಕಿಸ್ತಾನದ ವಾಯವ್ಯದ ಗಡಿ ಭಾಗದಲ್ಲಿರುವ ಪಶ್ತೂ ಹಾಗು ಬಲೂಚಿ ಗಳಿಂದ ವ್ಯಾಪಕವಾಗಿ ಬಳಸಲಾಗುತ್ತದೆ. ಟಿಬೆಟೊ-ಬರ್ಮನ್ ಗೆ ಸೇರಿದ ಹಲವಾರು ಜನಾಂಗಗಳು, ಅವರವರ ಸ್ಥಳೀಯ ಭಾಷೆಯನ್ನಾಡುವ, ಭಾರತದ ಈಶಾನ್ಯ ರಾಜ್ಯಗಳಲ್ಲಿ, ಟಿಬೆಟ್, ನೇಪಾಳ ಹಾಗಿ ಭೂತಾನಿನಲ್ಲಿ ಕಾಣಸಿಗುತ್ತಾರೆ. ಇದಲ್ಲದೆ ಆಸ್ಟ್ರೋ-ಏಷಿಯಾಟಿಕ್ ಭಾಷಾ ವಿಭಾಗಕ್ಕೆ ಸೇರಿದ ಭಾಷೆಗಳನಾಡುವ ಚಿಕ್ಕ ಪಂಗಡಗಳು ಕೂಡ ದಕ್ಷಿಣ ಏಷ್ಯಾದಲ್ಲಿ ಸಿಗುತ್ತವೆ. ಮೇಲಾಗಿ, ಇಂಗ್ಲೀಷ್ ಭಾಷೆ ಕೂಡ ದಕ್ಷಿಣ ಏಷ್ಯಾದಲ್ಲಿ ಪ್ರಧಾನ ಭಾಷೆಯಾಗಿದೆ. ಅದರಲ್ಲೂ ಮುಖ್ಯವಾಗಿ ಉನ್ನತ ಶಿಕ್ಷಣ ಹಾಗು ಸರ್ಕಾರಿ ಆಡಳಿತದ ಮಾಧ್ಯಮವಾಗಿದೆ.ದಕ್ಷಿಣ ಏಷ್ಯಾದ ಬಹಳ ಜನ ಬರೆಯಲು ಬ್ರಾಹ್ಮಿ ಮೂಲದ ಅಬುಗಿಡಗಳನ್ನು ಬಳಸಿದರೆ, ಇನ್ನು ಕೆಲವರು ಪೆರ್ಸೋ-ಆರೆಬಿಕ್ ಲಿಪಿಯಿಂದ ಪಡೆದಂತಹ ಉರ್ದು, ಪಶ್ತೂ, ಸಿಂಧಿ ಭಾಷೆಗಳನ್ನು ಉಪಯೋಗಿಸುತ್ತಾರೆ. ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳು ಈ ದ್ವಿಭಜನೆಯನ್ನು ಪಾಲಿಸುವುದಿಲ್ಲ. ಉದಾಹರಣೆಗೆ: ಕಾಶ್ಮೀರಿ ಯನ್ನು ಪೆರ್ಸೋ-ಆರೆಬಿಕ್ ಲಿಪಿ ಹಾಗು ದೇವನಾಗರಿ ಲಿಪಿಯನ್ನು ಎರಡರಲ್ಲಿಯು ಬರೆಯುತ್ತಾರೆ. ಹೀಗೆಯೆ, ಪಂಜಾಬಿಯನ್ನು ಕೂಡ ಶಾಹಮುಕಿ ಹಾಗು ಗುರುಮುಕಿ ಎಂಬ ಎರಡು ಲಿಪಿಯನ್ನು ಬಳಸಿ ಬರೆಯಬಹುದು. ಧಿವೆಹಿ ಯನ್ನು ಆರೇಬಿಕ್ ಅಕ್ಷರಗಳು ಹಾಗು ಒಂದು ಅಬುಗಿಡದ ಗುಣಗಳಿರುವ ಟಾನ ಎಂಬ ಲಿಪಿ ಯನ್ನು ಬಳಸಿ ಬರೆಯುತ್ತಾರೆ.

ಧರ್ಮಗಳು

ಬದಲಾಯಿಸಿ

ದಕ್ಷಿಣ ಏಷ್ಯಾದಲ್ಲಿ ಹಿಂದೂ ಧರ್ಮ ಹಾಗು ಇಸ್ಲಾಂ ಧರ್ಮ , ಇತರ ಕೆಲವು ದೇಶಗಳಲ್ಲಿ ಬೌದ್ಧ ಧರ್ಮಪ್ರಬಲ ವಾಗಿದೆ. ಇದಲ್ಲದೆ ಗಮನಾರ್ಹ ಸಂಖ್ಯೆಯ ಜನ ಕ್ರೈಸ್ಥ ಧರ್ಮ ಹಾಗು ಇತರ ಭಾರತೀಯ ಧರ್ಮಗಳನ್ನು ಅನುಸರಿಸುತ್ತಾರೆ.ಐತಿಹಾಸಿಕವಾಗಿ, ಇಂಡೋ-ಆರ್ಯನ್ , ವೈದಿಕ ಧರ್ಮದ ಜೊತೆಗೆ ಸ್ಥಳಿಯ ದಕ್ಷಿಣ ಏಷ್ಯಾದ ಶ್ರಮಣ ಸಂಪ್ರದಾಯ ಮುಂತಾದ ಇತರೆ ದ್ರಾವಿಡ ಮತ್ತು ಸ್ಥಳೀಯ ಬುಡಕಟ್ಟುಗಳ ನಂಬಿಕೆಗಳೊಂದಿಗಿದೆ. ಈ ಸಾಂಗತ್ಯವು ಮೊದಲು ಪ್ರಾಚೀನ ಧರ್ಮಗಳಾದ ಹಿಂದೂ, ಜೈನ ಹಾಗು ಬೌದ್ಧ ಧರ್ಮ ಹಾಗು ನಂತರ ಸಿಖ್ ಧರ್ಮಗಳ ಉಗಮಕ್ಕೆ ಕಾರಣವಾಯಿತು. ಸಿಖ್ ಧರ್ಮದ ಪ್ರಾರಂಭದ ದಿನಗಳಲ್ಲಿ ಹಾಗು ಅದರ ಪವಿತ್ರ ಧರ್ಮಗ್ರಂಥಗಳ ಮೇಲೆ ಇಸ್ಲಾಂನ ಸೂಫಿ ಸಂಪ್ರಾದಾಯಗಳು ಕೂಡ ಪ್ರಭಾವ ಬೀರಿದವು. ಹೀಗಾಗಿ, ಈ ನಾಲ್ಕು ಧರ್ಮಗಳಲ್ಲಿ ಒಂದೆ ರೀತಿಯ ಹಲವಾರು ಸಾಂಸ್ಕೃತಿಕ ಆಚರಣೆ, ಹಬ್ಬ ಹಾಗು ಸಂಪ್ರಾದಯಗಳಿವೆ.ಅಬ್ರಾಹಾಮಿಕ್ ಧರ್ಮವಾದ ಇಸ್ಲಾಂ ಧರ್ಮವನ್ನು ಅರಬ್ಬರು ಮೊದಲು ದಕ್ಷಿಣ ಏಷ್ಯಾದ ಇಂದಿನ ಕೇರಳ ಹಾಗು ಮಾಲ್ಡಿವ್ ದ್ವೀಪ, ಹಾಗು ನಂತರ ಸಿಂಧ್, ಬಲೂಚಿಸ್ಥಾನ ಹಾಗು ಪಂಜಾಬಿನ ಬಹುತೇಕ ಪ್ರದೇಶಗಳಲ್ಲಿ ಆಚರಣೆಗೆ ತಂದರು. ಆನಂತರದ ದಿನಗಳಲ್ಲಿ, ಮುಸ್ಲಿಂ ಟರ್ಕರು/ಪಶ್ತೂನರು/ಮೊಘಲರು ಈ ಧರ್ಮವನ್ನು ಪಂಜಾಬಿ ಕಾಶ್ಮೀರಿದ ಜನರಿಗಷ್ಟೆ ಅಲ್ಲದೆ ಹಿಂದೂ-ಗಂಗಾ ಬಯಲು ಪ್ರದೇಶದ ಸುತ್ತಲೂ, ಹಾಗು ದಕ್ಷಿಣದ ಡೆಕ್ಕನ್ ವರೆಗೆ ಹರಡಿದರು.

[[ಅಫ್ಘಾನಿಸ್ತಾನ

]][]

ಸುನ್ನಿ ಮುಸ್ಲಿಂ (80%), ಷಿಯಾ ಮುಸ್ಲಿಂ(19%), ಇತರರು (1%)
[[ಬಾಂಗ್ಲಾದೇಶ

]][೭೧]

ಮುಸ್ಲಿಂ(90%), ಹಿಂದೂ(9%), ಕ್ರೈಸ್ತ(.5%), ಬೌದ್ಧ(.5%), ಬುಡಕಟ್ಟು ನಂಬಿಕೆಯವರು(0.1%)
ಹಿಂದು ಮಹಾಸಾಗರದ ಬ್ರಿಟಿಷ್ ಆಡಳಿತದ ಪ್ರದೇಶಗಳು[೭೨] ಕ್ರೈಸ್ತ(45.55%), ಹಿಂದೂ(38.55%), ಮುಸ್ಲಿಂ(9.25%), ಯಾವುದೇ ಧರ್ಮಕ್ಕೆ ಸೇರದವರು (6.50%), ನಾಸ್ತಿಕರು(0.10%), ಇತರರು(0.05%)
ಭೂತಾನ[೭೩] ಬೌದ್ಧ(75%), ಹಿಂದೂ(25%)
ಬರ್ಮಾ[೭೪] ತೇರವಾಡಾ ಬೌದ್ಧ (89%), ಮುಸ್ಲಿಂ(4%), ಕ್ರೈಸ್ತ (4%) (ಬಾಪ್ಟಿಸ್ಟ್ 3%, ರೋಮನ್ ಕ್ಯಾಥೋಲಿಕ್ 1%), ಅನಿಮಿಸ್ಟ್ (1%), ಇತರರು (ಹಿಂದೂಗಳನ್ನು ಒಳಗೊಂಡಂತೆ) (2%)
ಭಾರತ[೭೩][೭೫] ಹಿಂದೂ(80.5%), ಮುಸ್ಲಿಂ (13.4%), ಕ್ರೈಸ್ತ(2.3%), ಸಿಖ್(1.9%), ಬೌದ್ಧ(0.8%), ಜೈನ(0.4%), ಇತರರು(0.6%)
ಇರಾನ್[೭೬] ಷಿಯಾ ಮುಸ್ಲಿಂ(89%), ಸುನ್ನಿ ಮುಸ್ಲಿಂ(9%), ಪಾರ್ಸಿ , ಯೆಹೂದಿ, ಕ್ರೈಸ್ತ, ಹಾಗು ಬಾಹಿ (2%)
[[ಮಾಲ್ಡೀವ್ಸ್

]][೭೭]

ಸುನ್ನಿ ಮುಸ್ಮಿಂ (100%) (ಮಾಲ್ಡೀವ್ಸ್ ದೇಶದ ಪ್ರಜೆಯಾಗಬೇಕಾದರೆ, ಅವನು ಸುನ್ನಿ ಮುಸ್ಲಿಂ ಆಗಿರಬೇಕು

[೭೮][೭೯])

ನೇಪಾಳ[೮೦] ಹಿಂದೂ(80.6%), ಬೌದ್ಧ(10.7%), ಮುಸ್ಲಿಂ(4.2%), ಕಿರಟ್ (3.6%)
[[ಪಾಕಿಸ್ತಾನ

]][೮೧]

ಮುಸ್ಲಿಂ(96.28%), ಹಿಂದೂ(1.85%), ಕ್ರೈಸ್ತ(1.59%), ಅಹಮದಿ (0.22%)
ಶ್ರೀಲಂಕಾ[೮೨] ತೇರವಾಡಾ ಬೌದ್ಧರು (70.42%), ಹಿಂದೂ(10.89%), ಮುಸ್ಲಿಂ(8.78%), ಕ್ಯಾಥೋಲಿಕ್(7.77%), ಕ್ರೈಸ್ತ ಧರ್ಮದ ಇತರ ಪಂಗಡಗಳು (1.96%), ಇನ್ನುಳಿದವರು (0.13%)
ಟಿಬೆಟ್ ಟಿಬೆಟಿಯನ್ ಬೌದ್ಧ, ಬೋನ್, ಇತರರು

ವಿತ್ತ/ಆರ್ಥಿಕ ವ್ಯವಸ್ತೆ

ಬದಲಾಯಿಸಿ

ತಲಾವಾರು ಒಟ್ಟು ರಾಷ್ಟ್ರೀಯ ಅದಾಯದ (GDP ಪರ್ ಕ್ಯಾಪಿಟಾ) ಸೂಚಂಕ್ಯ ಅತೀ ಕಡಮೆಯಿರುವ ದಕ್ಷಿಣ ಏಷ್ಯಾ, ಆಫ್ರಿಕಾ ಉಪ-ಸಹಾರದ ಮಾದರಿಯಲ್ಲಿಯೇ ಪ್ರಪಂಚದ ಅತ್ಯಂತ ಬಡ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಬಡತನವು ಎಲ್ಲಾ ಭಾಗಗಳಲ್ಲಿ ವ್ಯಾಪಿಸಿದೆ. ವಿಶ್ವಬ್ಯಾಂಕಿನ ಬಡತನದ ಮಾಹಿತಿಯ (ಆಧ್ಯಯನದ) ಪ್ರಕಾರ, 2005ರಲ್ಲಿ ಈ ಭಾಗದ ಶೇಕಡಾ 40ಕಿಂತಲೂ ಅಧಿಕ ಜನ ದಿನಕ್ಕೆ 1.25 ಡಾಲರ್ ಗಿಂತ ಕಡಿಮೆ ಹಣದಲ್ಲಿ ಬದುಕುತ್ತಿದ್ದಾರೆ . (ಭಾರತದಲ್ಲಿ ಸುಮಾರು ಶೇಕಡಾ 45ರಷ್ಟು ಜನ ಈ ಬಡತನದ ರೇಖೆಗಿಂತ ಕೆಳಗಿದ್ದಾರೆ) ಇದಕ್ಕೆ ಹೋಲಿಸಿದರೆ ಆಫ್ರಿಕಾ ಉಪ-ಸಹಾರ ಪ್ರದೇಶದ ಶೇಕಡಾ 50ರಷ್ಟು ಜನರು ಈ ರೇಖೆಗಿಂತ ಕೆಳಗಡೆ ಇದ್ದಾರೆ.[೮೩] ಈ ಪ್ರದೇಶದಲ್ಲಿ ಭೂತಾನವು ಅತಿಹೆಚ್ಚು ತಲಾವಾರು ಒಟ್ಟು ರಾಷ್ಟ್ರೀಯ ಆದಾಯ (GDP ಪರ್ ಕ್ಯಾಪಿಟಾ) ಹೊಂದಿದ್ದರೆ, ನೇಪಾಳ ಅತಿ ಕಡಿಮೆ ಹೊಂದಿದೆ. ಭಾರತ ಈ ಭಾಗದ ಅತ್ಯಂತ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಇದು ಜಗತ್ತಿನ 12ನೇ ದೊಡ್ಡ ಆರ್ಥಿಕ ವ್ಯವಸ್ಥೆಯೆಂದು, ಅಥವಾ ಖರೀದಿಸುವ ಶಕ್ತಿ ಹಾಗು ವಿನಿಮಯದರವನ್ನು ಸರಿಹೊಂದಿಸಿ ಹೇಳುವುದಾದರೆ ಇದು ಜಗತ್ತಿನ 4ನೇ ದೊಡ್ಡ ವ್ಯವಸ್ಥೆಯೆಂದು ಪರಿಗಣಿಸಲ್ಪಟ್ಟಿದೆ. ಪಾಕಿಸ್ತಾನ ಈ ಪ್ರದೇಶದ ಎರಡನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ಅದಲ್ಲದೇ ಇದು ಪ್ರತಿವ್ಯಕ್ತಿಯ ರಾಷ್ಟ್ರೀಯ ಆದಾಯದ ಪ್ರಕಾರ ಐದನೇ ಸ್ಥಾನ ಪಡೆದಿದೆ,[೮೪] ನಂತರದ ಸ್ಥಾನದಲ್ಲಿ ಬಂಗ್ಲಾದೇಶವಿದೆ. ಇರಾನ್ ಕೂಡ ಈ ಪ್ರದೇಶಕ್ಕೆ ಸೇರಿದ ದೇಶವೆಂದು ಪರಿಗಣಿಸಿದರೆ, ಆಗ ಇರಾನ್ ಈ ಪ್ರದೇಶದ ಆತ್ಯಂತ ಶ್ರೀಮಂತ ಹಾಗು ಎರಡನೇ ಅತಿ ದೊಡ್ಡ ಆರ್ಥಿಕ ವ್ಯವಸ್ಥೆಯಾಗುತ್ತದೆ. ವಿಶ್ವ ಬ್ಯಾಂಕಿನ 2007ರ ವರದಿಯ ಪ್ರಕಾರ ದಕ್ಷಿಣ ಏಷ್ಯಾವು ಪ್ರಪಂಚದಲ್ಲಿಯೆ ಅತ್ಯಂತ ಕಡಿಮೆ ಆರ್ಥಿಕವಾಗಿ ಸಂಘಟಿತವಾಗಿರುವ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ; ದಕ್ಷಿಣ ಏಷ್ಯಾದ ದೇಶಗಳ ನಡುವಿನ ವ್ಯಾಪಾರವು ಈ ಪ್ರದೇಶದ ಒಟ್ಟು ರಾಷ್ಟ್ರೀಯ ಆದಾಯವು ಸುಮಾರು ಶೇಕಡಾ 2ರಷ್ಟು ಮಾತ್ರ ಇದೆ. ಇದಕ್ಕೆ ಹೋಲಿಸಿದರೆ ಪೂರ್ವ ಏಷ್ಯಾದಲ್ಲಿ ಇದು ಸುಮಾರು ಶೇಕಡಾ 20ರಷ್ಟಿದೆ.[೮೫]

ರಾಜಕೀಯ

ಬದಲಾಯಿಸಿ

ಭಾರತವು ಈ ಭಾಗದ ಪ್ರಭಾವಶಾಲಿ ರಾಜಕೀಯ ಶಕ್ತಿ.[೮೬] ಈ ಉಪಖಂಡದ ಒಟ್ಟು ಭೂಪ್ರದೇಶದ ಸುಮಾರು ಮೂರನೇ-ನಾಲ್ಕರಷ್ಟು ಭಾಗವನ್ನು ವ್ಯಾಪಿಸಿರುವ ಭಾರತ ಈ ಭಾಗದ ಅತಿ ದೊಡ್ಡ ದೇಶವೆಂಬ ಅಂಶವು ಇದಕ್ಕೆ ಪೂರಕವಾಗಿದೆ.[೮೭] ಇದು ಈ ಪ್ರದೇಶದ ಆತ್ಯಂತ ಹೆಚ್ಚು ಜನಸಂಖ್ಯೆಯಿರುವ ದೇಶ-ಅಂದರೆ ಈ ಉಪಖಂಡದ ಉಳಿದ ಆರು ದೇಶಗಳ ಒಟ್ಟು ಜನಸಂಖ್ಯೆಯ ಸುಮಾರು ಮೂರರಷ್ಟು ದೊಡ್ಡದಾಗಿದೆ.[೮೮] ಭಾರತವು ಜಗತ್ತಿನ ಅತಿ ದೊಡ್ಟ ಪ್ರಜಾಪ್ರಭುತ್ವ[೮೯] ಹಾಗು ಅಣ್ವಸ್ತ್ರ ದೇಶವಾಗಿದೆ. ವಿಸ್ತೀರ್ಣವಾರು ಹಾಗು ಜನಸಂಖ್ಯೆಯ ಪ್ರಕಾರ ಈ ಉಪಖಂಡದ ಎರಡನೇ ದೊಡ್ಡ ದೇಶ - ಪಾಕಿಸ್ತಾನ, ಸಂಪ್ರದಾಯಿಕವಾಗಿ ಇದು ಅರಬ್ ರಾಷ್ಟ್ರಗಳು[೯೦] ಹಾಗು ನೆರೆಯ ಚೀನಾ[೯೧] ದೇಶದೊಂದಗಿನ ತನ್ನ ಅನುಕೂಲಕರ ಸಂಬಂಧದಿಂದಾಗಿ ಈ ಪ್ರದೇಶದ ಶಕ್ತಿಸಮತೋಲನವನ್ನು ಕಾಪಾಡಿಕೊಂಡಿದೆ. ಪಾಕಿಸ್ತಾನ ಜಗತ್ತಿನಲ್ಲಿ ಜನಸಂಖ್ಯೆಯ ಪ್ರಕಾರ ಆರನೇ ದೊಡ್ದ ದೇಶ[೯೨]. ಮೇಲಾಗಿ, ಇದು ಕೂಡ ಆಣ್ವಸ್ತ್ರ ಹೊಂದಿರುವ ರಾಷ್ಟ್ರ.

ಆರೋಗ್ಯ ಮತ್ತು ಪೌಷ್ಟಿಕತೆ

ಬದಲಾಯಿಸಿ

ವಿಶ್ವಬ್ಯಾಂಕಿನ ಪ್ರಕಾರ ದಕ್ಷಿಣ ಏಷ್ಯಾದ ಜನಸಂಖ್ಯೆಯ ಶೇಕಡ 70ರಷ್ಟು ಜನ ಹಾಗು ದಕ್ಷಿಣ ಏಷ್ಯಾದ ಸುಮಾರು ಶೇಕಡ75ರಷ್ಟು ಬಡವರು ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅದಲ್ಲದೇ ಅವರಲ್ಲಿ ಬಹಳ ಮಂದಿ ತಮ್ಮ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.[೯೩] ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರ ಜಗತ್ತಿನಲ್ಲಿ ದಕ್ಷಿಣ ಏಷ್ಯಾವು ಮಕ್ಕಳ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಒಂದಾಗಿದೆ.[೯೪] UNICEF (ಯುನಿಸೆಫ್) ಇತ್ತೀಚಿಗೆ 2008ರಲ್ಲಿ ಪ್ರಕಟಿಸಿರುವ ಹಸಿವಿನ ಕುರಿತು ನಡೆಸಿದ ಜಾಗತಿಕ ಆಧ್ಯಯನದ ವರದಿಯ ಪ್ರಕಾರ (ಅಪೌಷ್ಟಿಕತೆಯಿಂದ) ಸಾವಿಗೀಡಾಗುವ ಮಕ್ಕಳ ಸಂಖ್ಯೆ ಸುಮಾರು 2.1 ದಶಲಕ್ಷ.[೯೫] ಭಾರತವು 2008ರ ಜಾಗತಿಕ ಹಸಿವು ಸೂಚ್ಯಂಕದಲ್ಲಿ 66ನೇ ಸ್ಥಾನದಲ್ಲಿದೆ.[೯೬] ಈ ಹಿಂದೆ 2006ರ ವರದಿಯ ಪ್ರಕಾರ "ಈ ಪ್ರದೇಶದಲ್ಲಿ ಕಡಿಮೆ ತೂಕದ ಮಕ್ಕಳ ಸಂಖ್ಯೆಯು ಹೆಚ್ಚಾಗಿರುವುದಕ್ಕೆ ಪ್ರಮುಖ ಕಾರಣ- ದಕ್ಷಿಣ ಏಷ್ಯಾದಲ್ಲಿನ ಮಹಿಳೆಯರ ಹೀನಸ್ಥಿತಿಯು ಹಾಗು ಪೌಷ್ಟಿಕತೆಯ ವಿಚಾರದಲ್ಲಿ ಅವರ ಆಜ್ಞಾನ" ಎಂದು ಹೇಳಿದೆ. ಭಾರತದಲ್ಲಿ ಆಹಾರದ/ಪೌಷ್ಟಿಕತೆಯ ಸಮಸ್ಯೆಗೆ ಭ್ರಷ್ಟಚಾರ ಹಾಗು ಸರಕಾರ ಈ ದಿಸೆಯಲ್ಲಿ ಕೈಗೊಳ್ಳಬೇಕಾದ ಯೋಜನೆಗಳ ಕೊರತೆಯೆ ಪ್ರಮುಖ ಕಾರಣ. ಹಳ್ಳಿಗಳಲ್ಲಿನ ಅನಕ್ಷರತೆಯು ಪ್ರಮುಖ ಸಮಸ್ಯೆಯಾಗಿದೆ. ಅಲ್ಲದೇ ಇದರ ಬಗ್ಗೆ ಸರಕಾರ ವಿಶೇಷ ಗಮನ ಹರಿಸಬೇಕಾಗಿದೆ. ಈ ವರದಿ ಹಸಿರು ಕ್ರಾಂತಿಯಿಂದಾಗಿ ದಕ್ಷಿಣ ಏಷ್ಯಾದಲ್ಲಿ ಅಪೌಷ್ಟಿಕತೆಯ ಪ್ರಮಾಣ ಕಡಮೆಯಾಗಿದೆಯಾದರೂ, ದಕ್ಷಿಣ ಏಷ್ಯಾದಲ್ಲಿನ ಅಸಮರ್ಪಕ ಆಹಾರ ಹಾಗು ಮಕ್ಕಳ ಆರೈಕೆಯ ಪದ್ದತಿಗಳು ಕಳವಳದ ವಿಷಯಗಳಾಗಿದೆ ಎಂದು ಹೇಳಿದೆ.[೯೭].

ಇವನ್ನೂ ನೋಡಿ

ಬದಲಾಯಿಸಿ

ಟೆಂಪ್ಲೇಟು:Portal ಟೆಂಪ್ಲೇಟು:Portal

ಟಿಪ್ಪಣಿಗಳು ಮತ್ತು ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ "Afghanistan". The World Factbook. Central Intelligence Agency. December 13, 2007. Archived from the original on ಜುಲೈ 9, 2016. Retrieved ಏಪ್ರಿಲ್ 15, 2010.
  2. CIA World Fact Book Archived 2010-05-27 ವೇಬ್ಯಾಕ್ ಮೆಷಿನ್ ನಲ್ಲಿ., ದ ಪ್ರಕಾರ ದಕ್ಷಿಣ ಏಷ್ಯಾ ಅಫ್ಘಾನಿಸ್ತಾನ,ಬಾಂಗ್ಲಾದೇಶ, ಭೂತಾನ, ಬ್ರಿಟಿಷ್ ಹಿಂದು ಮಹಾಸಾಗರದ ಆಡಳಿತದ ಪ್ರದೇಶಗಳು, ಭಾರತ, ಮಾಲ್ಡೀವ್ಸ್ , ನೇಪಾಳ, ಪಾಕಿಸ್ತಾನ, ಹಾಗು ಶ್ರೀಲಂಕಾಗಳನ್ನು ಒಳಗೊಂಡಿದೆ.
  3. [೧]
  4. [೨]
  5. ೫.೦ ೫.೧ [೩]
  6. [೪]
  7. [೫]
  8. "CIA World Fact Book". Archived from the original on 2010-05-27. Retrieved 2010-04-15.
  9. "ಆರ್ಕೈವ್ ನಕಲು". Archived from the original on 2008-11-21. Retrieved 2010-04-15.
  10. ಬೆರ್ಟ್ರಾಮ್ ಹೂಜ್ಸ್ ಫಾರ್ಮರ್, ಆನ್ ಇನ್ಟ್ರೋಡಕ್ಷನ್ ಟು ಸೌತ್ ಏಷ್ಯಾ , ಪುಟ 1, ರೌಟ್‌ಲೆಡ್ಜ್, 1993, ISBN 0-415-05695-0
  11. ಆರ್ಥರ್ ಬೆರ್ರಿಡೆಲ್ ಕೀತ್, ಎ ಕಾನ್ಸಿಟಿಟ್ಯೂಷನಲ್ ಹಿಸ್ಟರಿ ಆಫ್ ಇಂಡಿಯಾ: 1600-1935 , ಪುಟ 440 ರಿಂದ 444, ಮೆಥುನ್ ಆಂಡ್ ಕೊ, 1936
  12. ಯುನೈಟೆಡ್ ನೇಷನ್ಸ್, ಯಿಯರ್ ಬುಕ್ ಆಫ್ ಯುನೈಟೆಡ್ ನೇಷನ್ಸ್ ‎, ಪುಟ 297, ಆಫೀಸ್ ಆಫ್ ಪಬ್ಲಿಕ್ ಇನ್ಪರ್ಮೇಷನ್, 1947, ಯುನೈಟೆಡ್ ನೇಷನ್ಸ್
  13. ಎನ್ಸೈಕ್ಲೊಪೀಡಿಯಾ: ಎ ನ್ಯೂ ಸರ್ವೆ ಆಫ್ ಯುನಿವೆರ್ಸಲ್ ನಾಲೆಡ್ಜ್ (ವಾಲ್ಯುಮ್ 4 ), ಪುಟ 177, Encyclopædia Britannica Inc., 1947
  14. ಇಯಾನ್ ಕೊಪ್ಲ್ಯಾಂಡ್, ದಿ ಪ್ರಿನಸಸ್ ಆಫ್ ಇಂಡಿಯಾ ಇನ್ ಎಂಡ್ಗೇಮ್ ಆಫ್ ಎಂಪೈರ್: 1917-1947 ,‎ ಪುಟ 263, ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, 2002, ISBN 0-521-89436-0
  15. http://www.worldstatesmen.org/Pakistan_princes.html
  16. "History of Sikkim". Department of Information and Public Relations, Government of Sikkim. 2005-09-29. Archived from the original on 2008-04-22. Retrieved 2006-10-12.
  17. ಇಂಟರ್ನ್ಯಾಷಿನಲ್ ರೀಲೇಷನ್ಸ್ ಅಂಡ್ ಸೆಕ್ಯುರಿಟಿ ನೆಟವರ್ಕ್, ಸ್ವಿಸ್ ಫೆಡೆರಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಜ್ಯೂರಿಚ್
  18. ಸೌತ್ ಏಷ್ಯಾ: ಡೆಟಾ, ಪ್ರಾಜೆಕ್ಟ್ಸ್ ಅಂಡ್ ರಿಸರ್ಚ್ Archived 2012-07-16 at Archive.is, ವಿಶ್ವಬ್ಯಾಂಕ್
  19. ಅಗ್ರೀಮೆಂಟ್ ಆನ್ ಸೌತ್ ಏಷ್ಯಿಯನ್ ಫ್ರಿ ಟ್ರೇಡ್ Archived 2009-03-24 ವೇಬ್ಯಾಕ್ ಮೆಷಿನ್ ನಲ್ಲಿ., ಸಾರ್ಕ್ ಆಡಳಿತ ಕಛೇರಿ, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ
  20. ಏಷ್ಯಾ-ಪೆಸಿಫಿಕ್ POPIN ಕನ್ಸಲ್ಟೇಟಿವ್ ವರ್ಕ್ ಶಾಪ್ ರಿಪೊರ್ಟ್, ಏಷ್ಯಾ-ಪೆಸಿಫಿಕ್ POPIN ಬುಲೆಟಿನ್, Vol. 7, No. 2 (1995), ಪುಟ 7 ರಿಂದ 11
  21. ಶೆಲ್ಡನ್ ಐ. ಪೊಲಾಕ್, ಲಿಟೆರರಿ ಕಲ್ಚರ್ಸ್ ಇನ್ ಹಿಸ್ಟರಿ , ಪುಟ 748 ರಿಂದ 749, ಯುನಿವೆರ್ಸಿಟಿ ಆಫ್ ಕ್ಯಾಲಿಫೊರ್ನಿಯ ಪ್ರೆಸ್, 2003, ISBN 0-520-22821-9
  22. ಟೆರಿಟರಿಸ್ (ಬ್ರಿಟಿಷ್ ಇಂಡಿಯನ್ ಒಷನ್ ಟೆರ್ರಿಟರಿ), ಜೇನ್ ರ ಮಾಹಿತಿ ತಂಡ
  23. ಜಿಯಾಗ್ರಾಫಿಕಲ್ ರೀಜನ್ ಅಂಡ್ ಕಂಪೊಸಿಷನ್ Archived 2011-07-13 ವೇಬ್ಯಾಕ್ ಮೆಷಿನ್ ನಲ್ಲಿ., ಬೃಹದಭೌಗೋಳಿಕ (ಭೂಖಂಡದ) ಪ್ರದೇಶಗಳ ರಚನೆ, ಭೌಗೋಳಿಕ ಉಪಭಾಗಗಳು ಹಾಗು ಕೆಲವು ಆಯ್ದ ಆರ್ಥಿಕ ಮತ್ತು ಇತರ ವಿಂಗಡನೆಗಳು, ವಿಶ್ವಸಂಸ್ಥೆ.
  24. ಮಾಪ್ಪಿಂಗ್ ಅಂಡ್ ಅನಾಲಿಸಿಸ್ ಅಫ್ ಅಗ್ರಿಕಲ್ಚರಲ್ ಟ್ರೇಡ್ ಲಿಬೆರಲೈಸೇಷನ್ ಇನ್ ಸೌತ್ ಏಷ್ಯಾ Archived 2009-03-19 ವೇಬ್ಯಾಕ್ ಮೆಷಿನ್ ನಲ್ಲಿ., ಟ್ರೆಡ್ ಅಂಡ್ ಇನ್ವೆಸ್ಟ್ಮೆಂಟ್ ಡಿವಿಷನ್ (TID), ವಿಶ್ವ ಸಂಸ್ಥೆಯ ಏಷ್ಯಾ ಹಾಗು ಪೆಸಿಫಿಕ್ ಪ್ರದೇಶದ ಆರ್ಥಿಕ ಹಾಗು ಸಮಾಜಿಕ ಆಯೋಗ
  25. ಅಜಿಜ್-ಉಲ್-ಹಖ್,ಸೌತ್ ಅಂಡ್ ಸೆಂಟ್ರಲ್ ಏಷ್ಯಾ: ಬಿಲ್ಡಿಂಗ್ ಎಕಾನಾಮಿಕ್ ಅಂಡ್ ಪೊಲಿಟಿಕಲ್ ಲಿಂಕೇಜ್ಸ್, ಇನ್ಸಿಟ್ಯೂಟ್ ಆಫ್ ರೀಜನಲ್ ಸ್ಟಡಿಸ್ (IRS), ಪಾಕಿಸ್ತಾನ, ISBN 978-969-8020-20-0
  26. ವೆರ್ನೊನ್ ಮರ್ಸ್ಟೊನ್ ಹೆವಿಟ್, ದಿ ಇಂಟರ್ನ್ಯಾಷಿನಲ್ ಪೊಲಿಟಿಕ್ಸ್ ಆಫ್ ಸೌತ್ ಏಷ್ಯಾ , ಪುಟ xi, ಮ್ಯಾಂಚೆಸ್ಟರ್ ಯುನಿವೆರಸಿಟಿ ಪ್ರೆಸ್ , 1992, ISBN 0-7190-3392-6
  27. ಕಿಶೋರ್ ಸಿ. ಡ್ಯಾಶ್, ರೀಜನಿಲಿಸಂ ಇನ್ ಸೌತ್ ಏಷ್ಯಾ , ಪುಟ 172 ರಿಂದ 175, ರೌಟ್‌ಲೆಡ್ಜ್ , 2008, ISBN 0-415-43117-4
  28. ೨೮.೦ ೨೮.೧ ದಿ ಹಿಸ್ಟರಿ ಆಫ್ ಇಂಡಿಯಾ - ಬೈ ಜಾನ್ ಮಾಕ್ ಲಿಯಾಡ್
  29. ಮಿಲ್ಟನ್ ವಾಲ್ಟರ್ ಮೇಯರ್ , ಸೌತ್ ಏಷ್ಯಾ : ಎ ಷಾರ್ಟ್ ಹಿಸ್ಟರಿ ಆಫ್ ದಿ ಸಬ್ ಕಾಂಟಿನೆಂಟ್ , ಪುಟ 1, ಅಡಮ್ಸ್ ಲಿಟಲ್ ಫೀಲ್ಡ್ , 1976, ISBN 0-8226-0034-X
  30. ಜಿಮ್ ನಾರ್ವೈನ್ ಅಂಡ್ ಅಲ್ಪಾನ್ಸೊ ಗೊನ್ಸಾಲೆಸ್, ದಿ ಥರ್ಡ್ ವರ್ಲ್ಡ್ ಸ್ಟೇಟ್ಸ್ ಆಫ್ ಮೈನ್ಡ್ ಅಂಡ್ ಬಿಯಿಂಗ್ ,‎ ಪುಟ 209, ಟೇಲರ್ ಅಂಡ್ ಫ್ರಾನ್ಸಿಸ್ , 1988, ISBN 0-04-910121-8
  31. ಲೂಸಿಯಾನ್ .ಡಬಲ್ ಯು. ಪೆಯ್ ಅಂಡ್ ಮೇರಿ .ಡಬಲ್ ಯು. ಪೆಯ್ , ಏಷ್ಯಿಯನ್ ಪವರ್ ಅಂಡ್ ಪವರ್ ಅಂಡ್ ಪಾಲಿಟಿಕ್ಸ್ , ಪುಟ 133, ಹಾರ್ವಡ್ ಯುನಿವರ್ಸಿಟಿ ಪ್ರೆಸ್, 1985, ISBN 0-674-04979-9
  32. ಮಾರ್ಕ್ ಜುರ್ಗೆನ್ಸ್ ಮೇಯರ್, ದಿ ಆಕ್ಸಫರ್ಡ್ ಹ್ಯಾಂಡ್ ಬುಕ್ ಆಫ್ ಗ್ಲೋಬಲ್ ರಿಲೀಜಿಯನ್ಸ್ , ಪುಟ 465, ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್ ಯುಎಸ್, 2006, ISBN 0-19-513798-1
  33. ಸುಗಾತ ಬೋಸ್ ಅಂಡ್ ಅಯೇಷಾ ಜಲಾಲ್ , ಮಾಡರ್ನ್ ಸೌತ್ ಏಷ್ಯಾ , ಪುಟ 3, ರೌಟ್‌ಲೆಡ್ಜ್ , 2004, ISBN 0-415-30787-2
  34. ಜೂಡಿತ್ ಸ್ಕಾಟ್ ಅಂಡ್ ಅಲಿಕ್ಸ್ ಹೆನ್ಲಿ, ಕಲ್ಚರ್, ರೀಲಿಜನ್, ಅಂಡ್ ಚೈಲ್ಡ್ ಬೇರಿಂಗ್ ಇನ್ ಎ ಮಲ್ಟಿರೇಷಿಯಲ್ ಸೊಸೈಟಿ , ಪುಟ 274, ಎಲ್ಸಿವಿಯರ್ ಹೆಲ್ತ್ ಸೈನ್ ಸಸ್, 1996, ISBN 0-7506-2050-1
  35. ರಾಜ್ .ಎಸ್. ಭೂಪಾಲ್, ಎಥಿನಿಸಿಟಿ, ರೇಸ್ ಅಂಡ್ ಹೆಲ್ತ್ ಇನ್ ಮಲ್ಟಿಕಲ್ಚರಲ್ ಸೋಸೈಟಿಸ್, , ಪುಟ 33, ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, 2007, ISBN 0-19-856817-7
  36. ಇಮಾಜಿನಿಂಗ್ ಇಂಡಿಯಾ - ಬೈ ರೋನಾಲ್ಡ್ ಬಿ. ಇನ್ಡೆನ್
  37. ವರ್ಲ್ಡ್ ವೈಡ್ ಡೆಸ್ಟಿನೇಷನ್ಸ್ - ಬೈ ಬ್ರಿಯಾನ್ G. ಬೋನಿಫೇಸ್, ಕ್ರಿಸ್ಟೋಫರ್ P. ಕೂಪರ್
  38. ಆಕ್ಸಫರ್ಡ್ ಇಂಗ್ಲೀಷ್ ಡಿಕ್ಷಿನರಿ ಎರಡನೇ ಆವೃತ್ತಿ, ಆಕ್ಸಫರ್ಡ್ ಯುನಿವರ್ಸಿಟಿ ಪ್ರೆಸ್, 1989
  39. ವೆಬ್‌ಸ್ಟೆರ್ಸ್ ಥರ್ಡ್ ನ್ಯೂ ಇಂಟರ್ನ್ಯಾಷಿನಲ್ , ಅನ್‌ಅಬ್ರಿಜ್ಡ್‌ , ಮೆರಿಯಮ್‌-ವೆಬ್‌ಸ್ಟೆರ್‌, 2002, ಮಾಹಿತಿಯನ್ನು ಮತ್ತೆ ಪಡೆದದ್ದು 11 March 2007
  40. ವಾಲೆಂಟಿನ್ ಸೆಮೆನೊವಿಚ್ ಬರ್ಟ್ಮಾನ್ ಅಂಡ್ ಪೀಟರ್ ಹಲೆ ಮೊಲ್ನಾರ್, ಜಿಯಾಲಾಜಿಕಲ್ ಅಂಡ್ ಜಿಯೊಫಿಸಿಕಲ್ ಎವಿಡೆನ್ಸ್ ಫಾರ್ ಡೀಪ್ ಸಬ್ ಡಕ್ಷನ್ ಆಫ್ ಕಾಂಟಿನೆಂಟಲ್ ಕ್ರಸ್ಟ್ ಬಿನಿತ್ ದಿ ಪಾಮಿರ್ , ಪುಟ 10, ಜಿಯಾಲಾಜಿಕಲ್ ಸೋಸೈಟಿ ಆಫ್ ಅಮೇರಿಕಾ, 1993, ISBN 0-8137-2281-0
  41. ಸ್ಟಿಫನ್ ಆಡಾಲ್ಪ್ ವರ್ಮ್, ಪೀಟರ್ ಮುಹಲ್ ಹೌಸ್ಲರ್ ಆಂಡ್ ಡಾರೆಲ್ ಟಿ. ಟ್ರೈಯಾನ್, ಅಟ್ಲಾಸ್ ಆಫ್ ಲ್ಯಾಂಗ್ವೇಜ್ಸ್ ಆಫ್ ಇಂಟರ್ ಕಲ್ಚರಲ್ ಕಮುನಿಕೇಷನ್ ಇನ್ ದಿ ಪೆಸಿಫಿಕ್, ಏಷ್ಯಾ, ಅಂಡ್ ದಿ ಅಮೇರಿಕಾಸ್ , ಪುಟ 787, ಇಂಟರ್ನ್ಯಾಷಿನಲ್ ಕೌನ್ಸಿಲ್ ಫಾರ್ ಫಿಲಾಸಫಿ ಆಂಡ್ ಹ್ಯುಮಾನಿಸ್ಟಿಕ್ ಸ್ಟಡಿಸ್, ವಾಲ್ಟರ್ ಡಿ ಗ್ರೈಟರ್ ಪ್ರಕಟಿಸಿರುವ, 1996, ISBN 3-11-013417-9
  42. ಆಫ್ಟರ್ ಪಾರ್ಟಿಷನ್: ಇಂಡಿಯಾ, ಪಾಕಿಸ್ತಾನ್, ಬಂಗ್ಲಾದೇಶ್, BBC, 2007-08-08
  43. ಸುಪರಿಂಡೆಂಟ್ ಆಫ್ ಡಾಕ್ಯುಮೆಂಟ್ಸ್, ಯುನೈಟೆಡ್ ಸ್ಟೇಟ್ಸ್ ಗೌರ್ನ್ಮೆಂಟ್ ಪ್ರಿಟಿಂಗ್ ಆಫೀಸ್, ದಿ ಸಬ್ ಕಾಂಟಿನೆಂಟ್ ಆಫ್ ಸೌತ್ ಏಷ್ಯಾ: ಆಫ್ಗಾನಿಸ್ಥಾನ್, ಸಿಲೋನ್, ಇಂಡಿಯಾ, ನೇಪಾಳ್, ಆಂಡ್ ಪಾಕಿಸ್ತಾನ್ , ಯುನೈಟೆಡ್ ಸ್ಟೇಟ್ಸ್ ಡಿಪಾರ್ಟಮೆಂಟ್ ಆಫ್ ಸ್ಟೇಟ್, ಪಬ್ಲಿಕ್ ಸರ್ವಿಸಸ್ ಡಿವಿಷನ್, 1959
  44. ಜಾನ್ ಮಾಕ್ ಲಿಯಾಡ್, ದಿ ಹಿಸ್ಟರಿ ಆಫ್ ಇಂಡಿಯಾ , ಪುಟ 1, ಗ್ರೀನ್ ವುಡ್ ಪಬ್ಲಿಷಿಂಗ್ ಗ್ರೂಪ್, 2002, ISBN 0-313-31459-4
  45. ಜೇಮ್ಸ್ ಸಿ. ಹಾರ್ಲೆ, ದಿ ಆರ್ಟ್ ಅಂಡ್ ಆರ್ಕಿಟೆಕ್ಚರ್ ಆಫ್ ಇಂಡಿಯನ್ ಸಬ್ ಕಾಂಟಿನೆಂಟ್ , ಪುಟ 214, ಯೇಲ್ ಯುನಿವರ್ಸಿಟಿ ಪ್ರೆಸ್, 1994, ISBN 0-300-06217-6
  46. ಜೋಸೆಫ್ ಹಾಕಿನ್ ಅಂಡ್ ಪಾಲ್ ಲೂಯಿಸ್ ಕೌಚೌಡ್, ದಿ ಮೈಥಾಲಜಿಸ್ ಆಫ್ ದಿ ಇಸ್ಟ್: ಇಂಡಿಯನ್ ಸಬ್ ಕಾಂಟಿನೆಂಟ್, ಮಿಡಲ್ ಇಸ್ಟ್, ನೇಪಾಳ್ ಅಂಡ್ ಟಿಬೆಟ್, ಇಂಡೋ-ಚೈನಾ ಅಂಡ್ ಜಾವಾ , ಪುಟ 1, ಆರ್ಯನ್ ಬುಕ್ಸ್ ಇಂಟರ್ನ್ಯಾಷಿನಲ್, 1996, ISBN 81-7305-018-X
  47. ಗ್ರೊಲಿಯರ್ ಇನ್ಕಾರ್ಪೋರೆಟೆಡ್, ದಿ ಎನ್ ಸೈಕ್ಲೊಪಿಡಿಯಾ ಅಮೇರಿಕಾನಾ (ವಾಲ್ಯೂಮ್ 14), ಪುಟ 201, ಗ್ರೊಲಿಯರ್, 1988, ISBN 0-7172-0119-8
  48. ಎಬೌಟ್ ಅಸ್ Archived 2009-02-26 ವೇಬ್ಯಾಕ್ ಮೆಷಿನ್ ನಲ್ಲಿ., ದಕ್ಷಿಣ ಏಷ್ಯಾ ವಿಷಯಗಳ ಅಧ್ಯಯನ ಕೇಂದ್ರ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ
  49. ಎಬೌಟ್ CSAS Archived 2010-06-05 ವೇಬ್ಯಾಕ್ ಮೆಷಿನ್ ನಲ್ಲಿ., ದಕ್ಷಿಣ ಏಷ್ಯಾ ವಿಷಯಗಳ ಅಧ್ಯಯನ ಕೇಂದ್ರ, ಮಿಷಿಗನ್ ವಿಶ್ವವಿದ್ಯಾಲಯ
  50. ಎಬೌಟ್ ಅಸ್ Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ., ದಕ್ಷಿಣ ಏಷ್ಯಾ ವಿಷಯಗಳ ಅಧ್ಯಯನ ಕೇಂದ್ರ, ವರ್ಜಿನಿಯಾ ವಿಶ್ವವಿದ್ಯಾಲಯ
  51. ಸೌತ್ ಏಷ್ಯನ್ ಸ್ಟಡ್ಸಿ ಪ್ರೋಗ್ರಾಮ್, ರುಟ್ಗರ್ಸ ವಿಶ್ವವಿದ್ಯಾಲಯ
  52. ಸೆಂಟರ್ ಫಾರ್ ಸೌತ್ ಏಷ್ಯಾ ಸ್ಟಡ್ಸಿ: ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ, ಬರ್ಕ್ಲಿ
  53. ಸೌತ್ ಏಷ್ಯಾನ್ ಸ್ಟಡ್ಸಿ, ಬ್ರಾಂಡಿಸ್ ವಿಶ್ವವಿದ್ಯಾಲಯ
  54. ಲಿಬರಲ್ ಸ್ಟಡ್ಸಿ ಎಂ.ಎ. ಪ್ರೋಗ್ರಾಮ್, ಕೊಲಂಬಿಯಾ ವಿಶ್ವವಿದ್ಯಾಲಯ
  55. ಸಾಲ್ ಬರ್ನಾರ್ಡ್ ಕೊಹೆನ್, ಜಿಯೊಪಾಲಿಟಿಕ್ಸ್ ಆಫ್ ದಿ ವರ್ಲ್ಡ್ ಸಿಸ್ಟಂ , ಪುಟ 304, ರೌಮನ್ ಅಂಡ್ ಲಿಟಲ್ ಫಿಲ್ಡ್, 2003, ISBN 0-8476-9907-2
  56. Asian Vegetation Zones, Grolier Online, Scholastic Inc.
  57. MSN ಎನ್ಕಾರ್ಟ - ಟಿಬೆಟ್ Archived 2009-10-28 ವೇಬ್ಯಾಕ್ ಮೆಷಿನ್ ನಲ್ಲಿ.
  58. ೫೮.೦ ೫೮.೧ ಎನ್ ಸೈಕ್ಲೊಪಿಡಿಯಾ ಬ್ರಿಟಾನಿಕ - "ಚೈನಾ, ಏಷ್ಯಾ", 1911, ಈ ಭಾಗದಲ್ಲಿ ಓದಿ: "ಚೈನಾ, ಎ ಕಂಟ್ರಿ ಆಫ್ ಇಸ್ಟೆರ್ನ್ ಏಷ್ಯಾ, ದಿ ಪ್ರಿನ್ಸಿಪಾಲ್ ಡಿವಿಶನ್ ಆಫ್ ದಿ ಚೈನಿಸ್ ಎಂಪೈರ್. ಇನ್ ಅಡಿಷನ್ ಟು ಚೈನಾ ಪ್ರಾಪರ್ ದಿ ಚೈನಿಸ್ ಎಂಪೈರ್ ಇನಕ್ಲೂಡ್ಸ್ ಮನಚುರಿಯಾ, ಮಂಗೊಲಿಯ, ಟಿಬೆಟ್ ಅಂಡ್ ಸಿನ್-ಕಿಯಾಂಗ್ (ಯಿಸ್ಟ್ ಟುರ್ಕಿಸ್ಥಾನ್, ಕುಲ್ಜ, ಜುಂಗಾರಿಯಾ ಅಂಡ್ c., ದಟ್ ಇಸ್ ಆಲ್ ದಿ ಚೈನಿಸ್ ಡಿಪೆಂಡೆನ್ಸಿಸ್ ಲೈಯಿಂಗ್ ಬಿಟ್ವಿನ್ ಮಂಗೊಲಿಯ ಆನ್ ದಿ ನಾರ್ಥ್ ಅಂಡ್ ಟಿಬೆಟ್ ಆನ್ ದಿ ಸೌತ್). "
  59. ಇನ್ ದಿ ಹಾರ್ಟ್ ಆಫ್ ಟಿಬೆಟ್‌ Archived 2015-11-02 ವೇಬ್ಯಾಕ್ ಮೆಷಿನ್ ನಲ್ಲಿ., ನ್ಯೂ ಯಾರ್ಕ್ ಟೈಮ್ಸ್, 1903
  60. ೬೦.೦ ೬೦.೧ ಗೊಲ್ಡ್ ಸ್ಟೀನ್, ಎಂ.ಸಿ., ಎ ಹಿಸ್ಟರಿ ಆಫ್ ಮಾಡ್ರನ್ ಟಿಬೆಟ್: ದಿ ಡಿಮೈಸ್ ಆಫ್ ದಿ ಲಾಮೈಸ್ಟ್ ಸ್ಟೇಟ್ , ಯುನಿವರ್ಸಿಟಿ ಆಫ್ ಕ್ಯಾಲಿಪೋರ್ನಿಯ ಪ್ರೆಸ್, 1989, p44: "ವೈಲ್ ದಿ ಎನ್ಷಿಯಂಟ್ ರೀಲೆಷನಷಿಪ್ಸ್ ಬಿಟ್ವಿನ್ ಟಿಬೆಟ್ ಅಂಡ್ ಚೈನಾ ಅರ್ ಕಾಂಪ್ಲೆಕ್ಸ್ ಅಂಡ್ ಬಿಯಾಂಡ್ ದಿ ಸ್ಕೋಪ್ ಆಫ್ ದಿಸ್ ಸ್ಟಡಿ, ದೇರ್ ಕಾನ್ ಬಿ ನೊ ಕೊಷ್ಚನ್ ರಿಗಾರ್ಡಿಂಗ್ ದಿ ಸಬ್ ಆರ್ಡಿನೇಷನ್ ಆಫ್ ಟಿಬೆಟ್ ಟು ಮಂಚು-ರುಲ್ದ್ ಚೈನಾ ಫಾಲೋಯಿಂಗ್ ದಿ ಚಾಯೊಟಿಕ್ ಎರ ಆಫ್ ದಿ ಸಿಕ್ಸತ್ ಅಂಡ್ ಸೆವೆಂತ್ ದಾಲಾಯಿ ಲಾಮಾಸ್ ಇನ್ ದಿ ಫರ್ಸ್ಟ್ ಡಿಕೇಡ್ಸ್ ಆಫ್ ದಿ ಏಟಿಂತ್ ಸೆಂಚುರಿ.... ಸಿನೊ-ಟಿಬೆಟನ್ ರೀಲೆಷನ್ಸ್ ಆರ್ ಫರ್ದರ್ ಕಾಂಪ್ಲಿಕೇಟೆಡ್ ಬೈ ಟಿಬೆಟನ್ ಪೊಲಿಟಿಕಲ್ ಥಿಯರಿ, ವಿಚ್ ಕಂಸೀವ್ಡ್ ಆಫ್ ದಿ ಲಿಂಕೆಜ್ ವಿತ್ ಚೈನಾ ಅಸ್ ಚೋಯೋನ್, ಎ ಟರ್ಮ್ ದಟ್ ರೆಫೆರ್ಸ್ ಟು ದಿ ಸಿಂಬಯೋಟಿಕ್ ರೀಲೆಷನ್ ಷಿಪ್ ಬಿಟ್ವಿನ್ ಎ ರೀಲಿಜಿಯಸ್ ಫಿಗರ್ ಅಂಡ್ ಎ ಲೆ ಪಾಟ್ರನ್.... ಥಸ್ ಫಾರ್ ದಿ ಟಿಬೆಟನ್ಸ್. ದಿ ದಲಾಯಿ ಲಾಮ ಅಂಡ್ ದಿ ಮಂಚು ಎಂಪರರ್ ಸ್ಟುಡ್ ರೆಸ್ಪೆಕ್ಟಿವ್ಲಿ ಅಸ್ ಸ್ಪಿರುಚಿಯಲ್ ಟಿಚರ್ ಅಂಡ್ ಎ ಲೆ ಪಾಟರ್ನ್ ರಾತರ್ ಥಾನ್ ಸಬ್ಜೆಕ್ಟ್ ಅಂಡ್ ಲಾರ್ಡ್ "
  61. ಪೀಟೆಚ್ ಎಲ್.,ಚೈನಾ ಆಂಡ್ ಟಿಬೆಟ್ ಇನ್ ದಿ ಯರ್ಲಿ XVIIIತ್ ಸೆಂಚುರಿ: ಹಿಸ್ಟರಿ ಆಫ್ ದಿ ಎಸ್ಟಾಬ್ಲಿಷ್ಮೆಂಟ್ ಆಫ್ ಚೈನಿಸ್ ಪ್ರೊಟೆಕ್ಟೊರೆಟ್ ಇನ್ ಟಿಬೆಟ್ , 1972, p260: "ಇನ್ 1751 ದಿ ಆರ್ಗನೈಸೇಷನ್ಸ್ ಆಫ್ ದಿ ಪ್ರೊಟೆಕ್ಟೊರೇಟ್ ಟುಕ್ ಇಟ್ಸ್ ಫೈನಲ್ ಶೇಪ್, ವಿಚ್ ಇಟ್ ಮೇಂಟೈನ್ಡ್, ಎಕ್ಸೆಪ್ಟ್ ಫಾರ್ ಸಮ್ ಮಾಡಿಫಿಕೇಷನ್ಸ್ ಇನ್ 1792, ಟಿಲ್ ಇಟ್ಸ್ ಎಂಡ್ ಇನ್ 1912. ದಿ ಅಂಬನ್ಸ್ ವರ್ ಗೀವನ್ ರೈಟ್ಸ್ ಆಫ್ ಕಂಟ್ರೋಲ್ ಅಂಡ್ ಸುಪರ್ ವಿಷನ್ ಅಂಡ್ ಸಿನ್ಸ್ 1792 ಆಲ್ಸೊ ಎ ಡೈರೆಕ್ಟ್ ಪಾರ್ಟಿಸಿಪೇಷನ್ ಇನ್ ದಿ ಟಿಬೆಟನ್ ಗೌವರ್ನಮೆಂಟ್. "
  62. ಗೆರನೆಟ್, ಜೆ., ಫಾಸ್ಟರ್, ಜೆ.ಅರ್. ಅಂಡ್ ಹಾರ್ಟ್ಮಾನ್ ಸಿ., ಎ ಹಿಸ್ಟರಿ ಆಫ್ ಚೈನೀಸ್ ಸಿವಿಲೈಸೆಷನ್ , ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್, 1982, p481, ಈ ಭಾಗದಲ್ಲಿ ಓದಿ: "ಫ್ರಂ 1751 ಆನ್ ವರ್ಡ್ಸ್ ಚೈನೀಸ್ ಕಂಟ್ರೋಲ್ ಒವರ್ ಟಿಬೆಟ್ ಬಿಕೆಮ್ ಪರ್ಮನೆಂಟ್ ಅಂಡ್ ರಿಮೆಂನ್ಡ್ ಸೊ ಮೊರ್ ಆರ್ ಲೆಸ್ ಎವರ್ ಆಫ್ಟರ್, ಇನ್ ಸ್ಪೈಟ್ ಆಫ್ ಬ್ರಿಟಿಷ್ ಎಫರ್ಟ್ಸ್ ಟು ಸೀಸ್ ಪೊಸೆಷನ್ ಆಫ್ ದಿಸ್ ಚೈನಿಸ್ ಪ್ರೊಟೆಕ್ಟರೆಟ್ ಅಟ್ ದಿ ಬಿಗಿನಿಂಗ್ ಆಫ್ ದಿ ಟ್ವೆಂಟಿಯತ್ ಸೆಂಚುರಿ. "
  63. ೬೩.೦ ೬೩.೧ ೬೩.೨ ೬೩.೩ ೬೩.೪ ೬೩.೫ ೬೩.೬ ೬೩.೭ ೬೩.೮ ಯು.ಎಸ್.ಬ್ಯೂರೋ: ಕಂಟ್ರೀಸ್ ರಾಂಕ್ಡ್ ಬೈ ಪಾಪುಲೇಷನ್, 2009
  64. "Population by Mother Tongue" (PDF). Population Census Organization, Government of Pakistan. Archived from the original (PDF) on 2006-02-17. Retrieved 2008-05-31.
  65. ಬರ್ಮಾದಲ್ಲಿ ಸುಮಾರು ದಶಕಗಳಿಂದ ಜನಗಣತಿಯ ಕಾರ್ಯ ನಡೆದಿಲ್ಲ, ಅಂದಾಜಿನ ಮೇಲೆ ಈ ಅಂಕಿಆಂಶ ಕೊಡಲಾಗಿದೆ.
  66. ಸ್ಟಾಟಿಸಿಕಲ್ ಸೆಂಟರ್ ಆಫ್ ಇರಾನ್
  67. ಇರಾನಿನ 2006ರ ಜನಗಣತಿಯ ಅಂಕಿಅಂಶವು ಜನಗಣತಿ ಖಾತೆಯ 2009ನೆ ಇಸವಿಯ ಅಂದಾಜಿಗಿಂತ ಹೆಚ್ಚಿದೆ, 2006ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನ 25 ವರ್ಷದೊಳಗಿದ್ದಾರೆ, ಎಂದು ತಿಳಿಸಿದೆ. ಹೀಗಾಗಿ ಇದನ್ನು ಹೆಚ್ಚು ನಿಖರವೆಂದು ಪರಿಗಣಿಸಲಾಗಿದೆ.
  68. "ICL - Iran - Constitution ಐಸಿಎಲ್ - ಇರಾನ್ - ಕಾಂನ್ಸ್ಟಿಟೂಷನ್". Archived from the original on 2007-04-01. Retrieved 2010-04-15.
  69. http://www.censusindia.gov.in/Census_Data_2001/Census_Data_Online/Language/Statement1.htm
  70. "Languages Spoken by More Than 10 Million People". MSN Encarta. Archived from the original on 2009-10-29. Retrieved 2009-06-27.
  71. "ಬಂಗ್ಲಾದೇಶ: ಅಟ್ ಎ ಗ್ಲಾನ್ಸ್". Archived from the original on 2011-07-06. Retrieved 2010-04-15.
  72. "ದಿ ಅಸೋಸಿಯೆಷನ್ ಆಫ್ ರೀಲಿಜಿಯನ್ ಡಾಟಾ ಆರ್ಕೈವ್ಸ್| ನ್ಯಾಷಿನಂಲ್ ಪ್ರೊಪೈಲ್ಸ್". Archived from the original on 2010-07-07. Retrieved 2010-04-15.
  73. ೭೩.೦ ೭೩.೧ "CIA - The World Factbook". Archived from the original on 2010-12-28. Retrieved 2010-04-15.
  74. "CIA - The World Factbook - Burma". Archived from the original on 2010-10-06. Retrieved 2010-04-15.
  75. [5] ^ ಭಾರತದ ಜನಗಣತಿ
  76. "CIA - The World Factbook". Archived from the original on 2012-02-03. Retrieved 2010-04-15.
  77. "ಮಾಲ್ಡೀವ್ಸ್ - ಮಾಲ್ಡೀವ್ಸ್ ರೀಲಿಜಿಯನ್". Archived from the original on 2007-09-28. Retrieved 2010-04-15.
  78. ಮಾಲ್ಡೀವ್ಸ್
  79. ಮಾಲ್ಡೀವ್ಸ್ - ರೀಲಿಜಿಯನ್, countrystudies.us
  80. ನೇಪಾಳ
  81. ಪಾಪುಲೇಷನ್ ಬೈ ರೀಲಿಜಿಯನ್ಸ್ Archived 2006-06-17 ವೇಬ್ಯಾಕ್ ಮೆಷಿನ್ ನಲ್ಲಿ., ಪಾಕಿಸ್ತಾನ ಸರಕಾರದ ಅಂಕಿಅಂಶಗಳ ವಿಭಾಗ
  82. [೬]
  83. http://iresearch.worldbank.org/PovcalNet/povDuplic.html world bank data
  84. "ಆರ್ಕೈವ್ ನಕಲು". Archived from the original on 2012-07-16. Retrieved 2010-04-15.
  85. ಎ ಸ್ಪೇಷಲ್ ರಿಪೊರ್ಟ್ ಆನ್ ಇಂಡಿಯಾ: ಇಂಡಿಯಾ ಎಲ್ಸ್ವೇರ್: ಆನ್ ಆಕ್ವರ್ಡ್ ನೈಬರ್ ಇನ್ ಎ ಟ್ರಬಲ್ ಸಮ್ ನೈಬರ್ಹುಡ್ Dec 11th 2008 ದಿ ಎಕಾನಾಮಿಸ್ಟ್
  86. [೭]
  87. ಎಂಅರ್ ಡೌಲಿಂಗ್.ಕಾಂ: ಸಬ್ ಕಾಂಟಿನೆಂಟ್
  88. ಇನ್ಪೋಪ್ಲೀಸ್: ಏರಿಯಾ ಆಂಡ್ ಪಾಪುಲೇಷನ್ ಆಫ್ ಕಂಟ್ರೀಸ್ (ಮಿಡ್-2006 ಎಸ್ಟಿಮೇಟ್ಸ್)
  89. ಯುನೈಟೆಡ್ ನೇಷನ್ಸ್ ಪಾಪುಲೇಷನ್ ಡಿವಿಷನ್ ಡಿಪಾರ್ಟ್ ಮೆಂಟ್ ಆಫ್ ಎಕಾನಾಮಿಕ್ ಅಂಡ್ ಸೋಷಿಯಲ್ ಅಫೇರ್ಸ್
  90. "ಆರ್ಕೈವ್ ನಕಲು". Archived from the original on 2011-07-19. Retrieved 2010-04-15.
  91. "ಆರ್ಕೈವ್ ನಕಲು". Archived from the original on 2010-03-31. Retrieved 2010-04-15.
  92. ಲಿಸ್ಟ್ ಆಫ್ ಕಂಟ್ರೀಸ್ ಬೈ ಪಾಪುಲೇಷನ್
  93. "Agriculture in South Asia". World Bank. Archived from the original on 2008-07-06. Retrieved 2010-04-15.
  94. "2008 Global Hunger Index Key Findings & Facts". 2008.
  95. "ಆರ್ಕೈವ್ ನಕಲು". Archived from the original on 2009-08-07. Retrieved 2010-04-15.
  96. http://en.wikipedia.org/wiki/Global_Hunger_Index
  97. "'Hunger critical' in South Asia". BBC. 2006-10-13. Retrieved 2010-01-04.{{cite web}}: CS1 maint: date and year (link)


ಬಾಹ್ಯ ಕೊಂಡಿಗಳು

ಬದಲಾಯಿಸಿ

ಟೆಂಪ್ಲೇಟು:Countries of South Asia