ಜಮ್ಮು ಮತ್ತು ಕಾಶ್ಮೀರ

ಭಾರತದ ರಾಜ್ಯ

ಭೂಮಿಯ ಮೇಲಿರುವ ಸ್ವರ್ಗ ಎಂದರೆ ಅದು ಜಮ್ಮು ಕಾಶ್ಮೀರ. ಅದರಲ್ಲೂ ಲಡಾಖ್ ಇಂಡಸ್ ನದಿ ದಂಡೆಯ ಮೇಲಿರುವ ಅತ್ಯಂತ ಸುಂದರ ತಾಣಗಲ್ಲೊಂದು. ಲಡಾಖ್‌ನಲ್ಲಿ ಒಂದಲ್ಲ ಒಂದು ಬಾಲಿವುಡ್ ಚಿತ್ರಗಳು ಚಿತ್ರೀಕರಣವಾಗುವುದರಿಂದ ಲಡಾಖ್‌ನ ಸುಂದರ ತಾಣಗಳು ಪದೇ ಪದೇ ಪ್ರವಾಸಿಗರ ಮನಸ್ಸಿನ ಪಟದೊಳಗೆ ಇಳಿಯುವ ಚಾನ್ಸೇ ಜಾಸ್ತಿ. ಲಡಾಖ್‌ಗೆ ‘ಕೊನೆಯ ಸಂಗ್ರೀಲಾ’, ‘ಕಿರು ಟಿಬೆಟ್’, ‘ಚಂದ್ರನ ಭೂಮಿ’ ಹಾಗೂ ‘ಚಂದ್ರನ ತುಂಡು’ ಎಂಬ ಹೆಸರುಗಳು ಈ ಪ್ರವಾಸಿ ತಾಣದ ಖ್ಯಾತಿಯನ್ನು ದುಪ್ಪಟ್ಟು ಮಾಡುತ್ತದೆ. ರಾಜಧಾನಿ ಲೇಹ್ ಹೊರತುಪಡಿಸಿದರೆ ಲಡಾಖ್‌ನಲ್ಲಿ ಅತೀ ಹೆಚ್ಚು ನೋಡಬಲ್ಲ ಪ್ರವಾಸಿ ತಾಣಗಳಿವೆ. ಅಲಚಿ, ನೂಬ್ರಾ ಕಣಿವೆ, ಹೇಮಿಸ್, ಲಮ್ಯಾರು, ಜನ್ಸ್‌ಕರ್ ಕಣಿವೆ, ಕರಂಗಲಿ, ಪಂಗೊಂಗ್ ಸೊ, ಸೋ ಕಾರ್ ಹಾಗೂ ಸೊ ಮೋರಿರಿ ಮುಖ್ಯವಾಗಿದೆ. ಆಕರ್ಷಕ ಕೆರೆಗಳು, ಕಣ್ಮನ ಸೆಳೆಯುವ ಪರ್ವತ, ಆಕರ್ಷಕ ಭೂಪ್ರದೇಶ ಹಾಗೂ ಬೆಟ್ಟದ ಆಕರ್ಷಕ ತಪ್ಪಲುಗಳು ಇಲ್ಲಿನ ಜೀವಂತಿಕೆಯನ್ನು ಮತ್ತೆ ಮತ್ತೆ ಎತ್ತಿ ಹಿಡಿದಿವೆ. ಲಡಾಖಿ, ಪುರೀಗ್, ಟಿಬೇಟಿಯನ್, ಹಿಂದಿ ಹಾಗೂ ಇಂಗ್ಲಿಷ್ ಇಲ್ಲಿನ ಪ್ರಮುಖ ಭಾಷೆಗಳಾಗಿ ಪ್ರವಾಸಿಗರಿಗೆ ಎದುರುಗೊಳ್ಳುತ್ತಿದೆ. ಸಮುದ್ರ ಮಟ್ಟದಿಂದ ಲಡಾಖ್ ಇರುವುದು ೩೫೦೦ ಮೀಟರ್ ಎತ್ತರದಲ್ಲಿ. ಹಿಮಾಲಯ ಹಾಗೂ ಕಾರಾಕೋರಂ ಎಂಬೆರಡು ಪರ್ವತ ಶ್ರೇಣಿಗಳ ನಡುವೆ ಇದಿದೆ.

ಜಮ್ಮು ಮತ್ತು ಕಾಶ್ಮೀರ
Seal
Jammu and Kashmir
ಭಾರತದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ
ಗಡಿ ವಿವಾದ ತೋರಿಸುವ ನಕ್ಷೆ.
ಗಡಿ ವಿವಾದ ತೋರಿಸುವ ನಕ್ಷೆ.
ದೇಶ ಭಾರತ
Regionಉತ್ತರ ಭಾರತ
ಕೇಂದ್ರಾಡಳಿತ ಪ್ರದೇಶ26 October 1947
Capital
Largest citySrinagar
Districts22
Government
 • Lieutenant Govenrermanoj sinha
 • Chief MinisterVacant
 • Deputy Chief Ministervacant
 • Legislature87 seats)
 • Parliamentary constituencyRajya Sabha 4
Lok Sabha 6
Area
 • Total೨,೨೨,೨೩೬ km (೮೫,೮೦೬ sq mi)
 • Rank14th
Population
 (2011)
 • Total೧,೨೫,೪೧,೩೦೨
 • Rank19th
 • Density೫೬/km (೧೫೦/sq mi)
Time zoneUTC+05:30 (IST)
ISO 3166 codeIN-JK
HDIIncrease 0.601 (medium)
HDI rank17th (2005)
Literacy66.7% (21st)
Official language(s)Urdu[]
Websitejk.gov.in/jammukashmir/

ಅಲ್ಲದೇ ಹೆಚ್ಚುವರಿ ಆಕರ್ಷಣೆಯಾಗಿ ಜನ್ಸಕರ್ ಹಾಗೂ ಲಡಾಖ್ ಕಣಿವೆಗಳು ಇದನ್ನು ಸುತ್ತಿವರಿದಿದ್ದು ಇದನ್ನು ಇನ್ನಷ್ಟು ಆಕರ್ಷಕವಾಗಿಸಿದೆ. ನಂಬಿಕೆಗಳ ಪ್ರಕಾರ, ಲಡಾಖ್ ದೊಡ್ಡ ಕೆರೆಯೊಂದರ ಮುಳುಗಿದ ಭಾಗ. ಇದರಿಂದ ಇದು ವರ್ಷದ ಎಲ್ಲಾ ದಿನ ಭೌಗೋಳಿಕ ಬದಲಾವಣೆಯನ್ನು ತೋರಿಸುತ್ತದೆ. ಇದರಿಂದಾಗಿ ಇದು ಲಡಾಖ್ ಒಂದು ಕಣಿವೆ ಪ್ರದೇಶ. ಈ ಭಾಗದಲ್ಲಿ ಬೌದ್ಧ ಧರ್ಮ ಅತ್ಯಂತ ಪ್ರಭಾವಿಯಾಗಿದ್ದು, ತನ್ನ ಪ್ರಭುತ್ವ ಸಾಧಿಸಿದೆ. ಆಶ್ರಮ ಅಥವಾ ಗೋಂಪ್‌ಗಳು ಇಲ್ಲಿ ಹೆಚ್ಚು ಜನರನ್ನು ಆಕರ್ಷಿಸುವ ತಾಣ. ಹೇಮಿಸ್ ಆಶ್ರಮ, ಸಂಕರ ಗೋಂಪಾ, ಮಾಥೂ ಆಶ್ರಮ, ಶೇ ಗೋಂಪಾ, ಸ್ಪಿತುಕ್ ಆಶ್ರಮ ಹಾಗೂ ಸತಂಕ ಆಶ್ರಮಗಳು ಇಲ್ಲಿನ ಅತ್ಯಂತ ಪ್ರಸಿದ್ಧ ಹಾಗೂ ಗುರುತಾದ ಧಾರ್ಮಿಕ ಕೇಂದ್ರಗಳು. ಇವಲ್ಲದೇ ತಿಕ್ಸೆ ಆಶ್ರಮ ಹಾಗೂ ತೆಸ್ಮೋ ಆಶ್ರಮಗಳು ಕೂಡ ಭೇಟಿಗೆ ಯೋಗ್ಯವಾದ ತಾಣಗಳು.

ಉತ್ಸವಗಳಿಗೆ ಸೇರುವ ಪ್ರವಾಸಿಗರು

ಬದಲಾಯಿಸಿ

ಉತ್ಸವಗಳಲ್ಲಿ ಪ್ರಮುಖವಾಗಿ ಗಾಲ್ಡನ್ ನಮ್ಚೋಟ್, ಬುದ್ಧ ಪೂರ್ಣಿಮೆ, ದೋಸ್‌ಮೋಚೇ ಹಾಗೂ ಲೋಸಾರ್‌ಗಳು ಲಡಾಖ್‌ನಾದ್ಯಂತ ನಡೆಯುವ ಅದ್ದೂರಿ ಆಚರಣೆಗಳು. ಈ ಸಮಯದಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರೂ ಇಲ್ಲಿ ಬಂದು ಸೇರುತ್ತಾರೆ. ದೋಸ್‌ಮೋಚೇ ಉತ್ಸವದಲ್ಲಿ ನೃತ್ಯ, ಪ್ರಾರ್ಥನೆ ಹಾಗೂ ಪ್ರದರ್ಶನ ನಡೆಯುತ್ತದೆ. ಈ ಉತ್ಸವ ಇಲ್ಲಿನ ನಾಗರಿಕರಲ್ಲಿ ಹೊಸ ಉತ್ಸಾಹವನ್ನು ಚಿಮ್ಮಿಸುತ್ತದೆ. ಎರಡು ದಿನಗಳ ಕಾಲ ಈ ಆಚರಣೆ ನಡೆಯುತ್ತದೆ. ಟಿಬೇಟಿಯನ್ ಬೌದ್ಧ ಧರ್ಮೀಯರ ಪಾಲಿಗೆ ಇದೊಂದು ವಿಶೇಷ ಸಮಾರಂಭ. ಸಖಾ ದವಾ ಆಚರಣೆಯು ಗೌತಮ ಬುದ್ಧ ಹುಟ್ಟಿದ ದಿನದ ಸಂಭ್ರಮಕ್ಕೆ ಕೈಗೊಳ್ಳುವ ಉತ್ಸವ. ಅಲ್ಲದೇ ಬುದ್ಧನ ಸಾವಿನ ದಿನವೂ ಇದೇ ಆಗಿದೆ. ಟಿಬೇಟಿಯನ್ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳ ಹಬ್ಬ ಇದಾಗಿದ್ದು, ಮೇ ಅಥವಾ ಜೂನ್ ತಿಂಗಳಲ್ಲಿ ನಡೆಯುತ್ತದೆ. ಇಡೀ ತಿಂಗಳು ಈ ಆಚರಣೆ ಅಲ್ಲಲ್ಲಿ ನಡೆಯುತ್ತಲೇ ಇರುತ್ತದೆ. ಪ್ರವಾಸಿಗರು ಇಲ್ಲಿ ಓಡಾಡಲು ಬಾಡಿಗೆ ಕಾರು ಅಥವಾ ಬೈಕ್ ಪಡೆಯಬಹುದು. ಸಾಮಾನ್ಯವಾಗಿ ಪ್ರವಾಸಿಗರು ಇಲ್ಲಿಗೆ ಸ್ವಂತ ವಾಹನದಲ್ಲಿ ಆಗಮಿಸುತ್ತಾರೆ. ಇದು ಸಂಚಾರಕ್ಕೂ ಸರಳ. ಪ್ರದೇಶದಲ್ಲಿ ಸಂಚಾರ ಸಾಕಷ್ಟು ದುಸ್ತರವಾಗಿರುವುದರಿಂದ ವಾಹನದೊಂದಿಗೆ ಬರುವವರು ಜತೆಗೆ ಅಗತ್ಯ ಬಿಡಿಭಾಗವನ್ನೂ ತಂದುಕೊಳ್ಳುವುದು ಒಳಿತು ಎನ್ನುವ ಸಲಹೆ ನೀಡಲಾಗುತ್ತದೆ. ತುರ್ತು ಸಂದರ್ಭದಲ್ಲಿ ಇದು ಸಹಾಯಕ್ಕೆ ಆಗುತ್ತದೆ. ಇಲ್ಲಿರುವ ಸಾಕಷ್ಟು ಹೋಟೆಲ್‌ಗಳು, ರೆಸ್ಟೊರೆಂಟ್‌ಗಳು ತುಪ್ಕಾಸ್ ಅಥವಾ ಸೂಪ್ ನೂಡಲ್ಸ್ ಹಾಗೂ ಮೋಮೊಸ್ ಅಥವಾ ಡುಪ್ಲಿಂಗ್‌ಗಳನ್ನು ಆಹಾರ ರೂಪದಲ್ಲಿ ನೀಡುತ್ತವೆ. ಇದು ಈ ಭಾಗದ ಜನಪ್ರಿಯ ತಿಂಡಿ ಕೂಡ. ಪ್ರವಾಸಿಗರು ಲಡಾಖ್‌ಗೆ ವರ್ಷದ ಯಾವುದೇ ಸಮಯದಲ್ಲಿಯೂ ಬರಬಹುದು. ಆದರೆ ಉತ್ತಮ ಸಮಯ, ಮೇ ನಿಂದ ಸೆಪ್ಟೆಂಬರ್ ನಡುವಿನ ಅವಧಿ. ಈ ಸಂದರ್ಭದಲ್ಲಿ ಇಲ್ಲಿನ ವಾತಾವರಣವು ಆಹ್ಲಾದಮಯವಾಗಿರುತ್ತದೆ. ತಾಪಮಾನ ಕೂಡ ೩೩ ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚಿರುವುದಿಲ್ಲ ಅದು ಪ್ರವಾಸಿಗರಿಗೆ ಪ್ಲಸ್ ಪಾಯಿಂಟ್.

ನೋಡಲೇಬೇಕಾದ ಸ್ಥಳಗಳು

ಬದಲಾಯಿಸಿ

ಅಲ್ಚಿ ಬೌದ್ಧ ಮಠ

ಬದಲಾಯಿಸಿ

ಅಲ್ಚಿ ಗ್ರಾಮದಲ್ಲಿ ನೆಲೆಗೊಂಡಿರುವ ಅಲ್ಚಿ ಬೌದ್ಧ ಮಠ ಲಡಾಖ್ ನಲ್ಲಿರುವ ಹಲವು ಪುರಾತನ ಮಠಗಳಲ್ಲಿ ಒಂದು. ಸಿಂಧೂ ನದಿಯ ತಟದ ಮೇಲಿರುವ ಈ ಮಠವನ್ನು ಅಲ್ಚಿ ಚೊಸ್ಖೋರ್ ಹಾಗು ಅಲ್ಚಿ ಗೊಂಪಾ ಎಂಬ ನಾಮಗಳಿಂದಲೂ ಸಂಭೋದಿಸಲಾಗುತ್ತದೆ. ಈ ಮಠವನ್ನು ಸಂಸ್ಕೃತದಲ್ಲಿರುವ ಬೌದ್ಧ ವ್ಯಾಖ್ಯಾನಗಳನ್ನು ಟಿಬೇಟಿಯನ್ ಭಾಷೆಗೆ ಭಾಷಾಂತರಿಸಿದ ಭಾಷಾಂತರಗಾರ ರಿಂಚೆನ್ ಝಾಂಗ್ಪೊ ಎಂಬಾತನು ೯೫೮ ಮಾತು೧೦೫೫ ಮಧ್ಯದ ಅವಧಿಯಲ್ಲಿ ನಿರ್ಮಿಸಿದ ಎಂದು ನಂಬಲಾಗಿದೆ. ಈ ಮಠದ ಒಂದು ಮಹತ್ವವಾದ ಗುಣಲಕ್ಷಣವೆಂದರೆ, ಇದು ಸಮತಟ್ಟಾದ ಭೂಮಿಯಲ್ಲಿ ನಿರ್ಮಿತವಾದುದು. ಈ ಮಠ ಸಂಕೀರ್ಣದಲ್ಲಿ ಮೂರು ದೇವಾಲಯಗಳನ್ನು ನೋಡಬಹುದಾಗಿದ್ದು, ಅವುಗಳೆಂದರೆ ಡು-ಖಾಂಗ್, ಸುಮ್-ಸೆಕ್ ಮತ್ತು ಮಂಜುಶ್ರೀ ದೇವಾಲಯಗಳು. ಕಾರ್ಟೆನ್ಸ್ ಅಥವಾ ಸ್ತೂಪಗಳು ಈ ದೇವಾಲಯದ ಅಂಗಳದಲ್ಲಿರುವ ಮುಖ್ಯವಾದ ರಚನೆಗಳು. ಪ್ರಸ್ತುತ ಲಿಕಿರ್ ಬೌದ್ಧ ಮಠದ ಸನ್ಯಾಸಿಗಳು ಈ ಅಲ್ಚಿ ಮಠದ ನಿರ್ವಹಣೆ ಮಾಡುತ್ತಿದ್ದಾರೆ. ಈ ಮಠದಲ್ಲಿ ಛಾಯಾಚಿತ್ರಣವನ್ನು ನಿಷೇಧಿಸಲಾಗಿದ್ದು, ವಿದ್ಯುತ್ ಸಂಪರ್ಕ ಇನ್ನೂ ಇಲ್ಲದಿರುವ ಕಾರಣ ಪ್ರವಾಸಿಗರು ಟಾರ್ಚ್ ಗಳನ್ನು ಹಿಡಿದು ಪ್ರವೇಶ ಪಡೆಯಬಹುದು.

ಹೆಮಿಸ್ ಆಶ್ರಮ

ಬದಲಾಯಿಸಿ

ಹೆಮಿಸ್ ಆಶ್ರಮ ಲೇಹ ನಿಂದ ೪೦ ಕಿಮೀ ದೂರದಲ್ಲಿದೆ. ಸತ್ಸಂಗ ರಸ್ಪ ನವಂಗ್ ಗ್ಯಾತ್ಸೋ ಮೊದಲ ಬಾರಿ ದೇಹಧಾರಣೆ ಮಾಡಿದಾಗ ೧೬೩೦ ರಲ್ಲಿ ಈ ಆಶ್ರಮವನ್ನು ಕಟ್ಟಲಾಯಿತು. ೧೬೭೨ ರಲ್ಲಿ ಮಹಾಯೋಗ ತಂತ್ರ ಶಾಲೆಯನ್ನು ತೆರೆಯುವದಕ್ಕೆ ಧಾರ್ಮಿಕ ಶಿಕ್ಷಣ ನೀಡುವುದಕ್ಕೆ ದೊರೆ ಸೆಂಗೆ ನಂಪರ್ ಗ್ಯಾಲ್ವಾ ಅವರಿಂದ ಮರು ಸ್ಥಾಪಿಸಲ್ಪಟ್ಟಿತು. ಹೆಮಿಸ್ ಆಶ್ರಮ ಅಥವಾ ಹೆಮಿಸ್ ಗೊಂಪವನ್ನು ಟಿಬೇಟಿಯನ್ ವಾಸ್ತು ಶೈಲಿಯಲ್ಲಿ ಬೌದ್ದ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಬಿಂಬಿಸುವಂತೆ ಕಟ್ಟಲಾಗಿದೆ. ಬೌದ್ದ ಧರ್ಮ ಸ್ಥಾಪಕ ಬುದ್ದನ ತಾಮ್ರದ ಮೂರ್ತಿಯು ಈ ಆಶ್ರಮದ ಮುಖ್ಯ ಆಕರ್ಷಣೆ. ಕಾಲಚಕ್ರ ಮತ್ತು ದಿಕ್ಪಾಲಕರ ಚಿತ್ರಕಲೆಗಳು ಗೋಡೆಗಳ ಮೇಲಿವೆ. ದುಃಖಂಗ್ ಮತ್ತು ಶೊಂಗ್ ಖಂಗ್. ಪ್ರಸ್ತುತ್ ಬೌದ್ದ ಧರ್ಮದ ಒಳಪಂಗಡವಾದ ದ್ರುಕ್ಪಾಗೆ ಹೆಮಿಸ್ ಆಶ್ರಮದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಲಾಗಿದೆ. ಜೂನ್ ಅಥವಾ ಜುಲೈ ತಿಂಗಳಲ್ಲಿ ಹೆಮಿಸ್ ನ ವಾರ್ಷಿಕ ಉತ್ಸವ ಜರುಗುತ್ತದೆ. ಈ ಸಂದರ್ಭದಲ್ಲಿ ಟಿಬೇಟಿಯನ್ ಬೌದ್ದ ಇತಿಹಾಸದಲ್ಲಿನ ಪ್ರಮುಖ ಆಕಾರ ಗುರು ಪದ್ಮಸಂಭವನಿಗೆ ಗೌರವ ಸಲ್ಲಿಸಲು ಲಕ್ಷಾಂತರ ಭಕ್ತರು ಸೇರುತ್ತಾರೆ.

ಡು-ಖಾಂಗ್

ಬದಲಾಯಿಸಿ

ಅಲ್ಚಿ ಬೌದ್ಧ ಮಠ ಸಂಕೀರ್ಣದ ಮಧ್ಯಭಾಗದಲ್ಲಿ ಕಂಡುಬರುವ ದೇವಾಲಯ ಡು-ಖಾಂಗ್. ಈ ಮಠ ಸಂಕೀರ್ಣದಲ್ಲೆ ಇದೊಂದು ಪುರಾತನ ಹಾಗು ದೊಡ್ಡದಾದ ದೇವಾಲಯವಾಗಿದ್ದು, ಇದರಲ್ಲೆ ಬೌದ್ಧ ಸನ್ಯಾಸಿಗಳು ಹಲವು ಆಚರಣೆಗಳನ್ನು ಕೈಗೊಳ್ಳುತ್ತಾರೆ. ೧೨ ಹಾಗು ೧೩ ನೇ ಶತಮಾನದಲ್ಲಿ ಈ ದೇವಾಲಯವನ್ನು ಇತರೆ ರಚನೆಗಳೊಂದಿಗೆ ವಿಸ್ತರಿಸಲಾಯಿತು.

ಏನಿಲ್ಲವೆಂದರೂ ಬುದ್ಧನ ಸುಮಾರು ೧೦೦೦ ಹಸಿಚಿತ್ರಗಳನ್ನು ಈ ದೇವಾಲಯದ ಇಕ್ಕೆಲಗಳಲ್ಲಿ ರಚಿಸಲಾಗಿದೆ. ಈ ದೇವಾಲಯದ ಹೊರದ್ವಾರದಲ್ಲಿ, ಹಿಂದು ಧರ್ಮದ ವಿನಾಶನದ ಪ್ರತೀಕವಾದ ಮಹಾಕಾಲ್, ಶಿವ ಮತ್ತು ಭಾವಚಕ್ರ ಅಥವಾ ಜೀವನಚಕ್ರ ಆಕೃತಿಗಳನ್ನು ಕಾಣಬಹುದು. ದೇವಾಲಯದ ಗೋಡೆಗಳು ಪಂಚ ತತ್ಘಟಗಳನ್ನು ಪ್ರತಿಫಲಿಸುತ್ತದೆ.

ವಜ್ರ ಭೈರವ ದೇಗುಲ

ಬದಲಾಯಿಸಿ

ವಜ್ರ ಭೈರವ ದೇಗುಲ ಲೇಹ್‌ನಿಂದ ೧೦ ಕಿ.ಮೀ. ದೂರದಲ್ಲಿದೆ. ಇದನ್ನು ಗೆಲುಗ್ಪಾ ಅಥವಾ ‘ಯಲ್ಲೋವ್ ಹ್ಯಾಟ್’ ಪಂಗಡದ ರಕ್ಷಕ ‘ತಾಂತ್ರಿಕ್’ ದೇವತೆಯ ಗೌರವಾರ್ಥವಾಗಿ ನಿರ್ಮಿಸಲಾಗಿದೆ. ಸಾಮಾನ್ಯ ನಾಗರಿಕರು, ಭಕ್ತರ ಪ್ರವೇಶಕ್ಕೆ ಇಲ್ಲಿ ವರ್ಷಕ್ಕೆ ಒಮ್ಮೆ ಮಾತ್ರ ಅವಕಾಶ ಲಭಿಸುತ್ತದೆ. ಕಾರಣ ಇಲ್ಲಿರುವ ವಿಗ್ರಹವು ಅತೀಂದ್ರೀಯ ಶಕ್ತಿಯನ್ನು ಹೊಂದಿರುವುದಾಗಿದೆ. ಮಿಕ್ಕಂತೆ ಉಳಿದ ಸಮಯದಲ್ಲಿ ಈ ವಿಗ್ರಹವನ್ನು ಆಶ್ರಮದಲ್ಲಿರುವ ಒಂದು ಚೇಂಬರ್ ನಲ್ಲಿ ಇರಿಸಲಾಗಿರುತ್ತದೆ. ಇದರಿಂದ ವರ್ಷಕ್ಕೊಮ್ಮೆ ಮಾತ್ರ ದರ್ಶನ ಎಂದು ಅಭಿಪ್ರಾಯ ವ್ಯಕ್ತವಾಗುತ್ತದೆ. ಈ ದೇಗುಲವು ಅತ್ಯಂತ ಪುರಾತನ ಕಟ್ಟಡ ಎಂಬ ಖ್ಯಾತಿಯನ್ನೂ ಹೊಂದಿದೆ. ಇಲ್ಲಿ ೬೦೦ ವರ್ಷ ಹಳೆಯದಾದ ಚಿತ್ರಕಲೆಗಳು, ಇಲ್ಲಿನ ಕಟ್ಟಡದ ಗೋಡೆಗೆ ಅಲಂಕೃತವಾಗಿವೆ. ಪ್ರವಾಸಿಗರು ಇಲ್ಲಿಗೆ ಟ್ಯಾಕ್ಸಿ ಅಥವಾ ಜೀಪ್ ಪಡೆದು ಆರಾಮವಾಗಿ ತಲುಪಬಹುದು. ಹೆಚ್ಚುವರಿಯಾಗಿ ಹೇಳುವುದಾದರೆ ಇಲ್ಲಿ ಬರುವ ಪ್ರವಾಸಿಗರು ಮಹಾಕಾಲ ದೇವಾಲಯ, ಸ್ಪಿಚ್ಯುವಲ್ ಗೆಸ್ಚರ್, ಸ್ಪಿಚ್ಯುವಲ್ ಆಶ್ರಮವನ್ನೂ ನೋಡಬಹುದು. ಇವು ಈ ಪ್ರದೇಶದ ಆಸುಪಾಸಲ್ಲಿಯೇ ಕಂಡುಬರುತ್ತವೆ.

ಸ್ಟಾಕ್ ಪ್ಯಾಲೇಸ್

ಬದಲಾಯಿಸಿ

ಸ್ಟಾಕ್ ಪ್ಯಾಲೇಸ್ ಅನ್ನು ರಾಜಾ ತೇಸ್ಪಾಲ್ ತೊಂದುಪ್ ನಮಂಗ್ಯಾಲಾ ಅವರು ೧೮೨೫ ರಲ್ಲಿ ನಿರ್ಮಿಸಿದರು. ಇಂಡಸ್ ನದಿ ದಂಡೆಯ ಮೇಲಿರುವ ಈ ಪ್ಯಾಲೇಸ್ ನಗರದಿಂದ ೧೫ ಕಿ.ಮೀ. ದೂರದಲ್ಲಿದೆ. ಈ ಪ್ಯಾಲೇಸ್ ೧೦೮ ಕಂಗ್ಯಾರು ಸಂಪುಟವನ್ನು ಒಳಗೊಂಡಿದೆ. ಟಿಬೇಟಿಯನ್ ಬುದ್ಧಿಸಂ ಶಾಲೆಗಳಲ್ಲಿ ಪಠ್ಯರೂಪದ ಆಕರಗಳು ಇಲ್ಲಿವೆ. ಇವನ್ನು ಇಲ್ಲಿನ ಗ್ರಂಥಾಲಯದಲ್ಲಿ ಜೋಪಾನವಾಗಿ ಇರಿಸಲಾಗಿದೆ. ಶ್ರೀಮಂತ ಕುಟುಂಬದ ವಾಸಕ್ಕೆ ಮತ್ತು ರಾಜ ಸೆಂಗ್ಯೆ ನಂಗ್ಯಾಲರ ವಾಸಕ್ಕೆ ಇದು ಮೊದಲು ಬಳಕೆ ಆಗುತ್ತಿತ್ತು. ಇದು ಸಾಂಪ್ರದಾಯಿಕ ಶೈಲಿ ಹಾಗೂ ಆಕರ್ಷಕ ವಾಸ್ತುಶಿಲ್ಪ ಮಾದರಿಯನ್ನು ಒಳಗೊಂಡು ನಿರ್ಮಾಣವಾಗಿದೆ. ಸೂರ್ಯಾಸ್ತ ಹಾಗೂ ಸೂರ್ಯೋದಯ ವೀಕ್ಷಣೆಗೆ ಇದು ಉತ್ತಮ ತಾಣವಾಗಿದೆ. ಇದು ಇಲ್ಲಿನ ಹೆಚ್ಚುವರಿ ವಿಶೇಷತೆಯೂ ಕೂಡ ಹೌದು.

ವರ್ಷದಲ್ಲಿ ಒಂದು ನೃತ್ಯ ಉತ್ಸವ

ಬದಲಾಯಿಸಿ

ಇಲ್ಲಿನ ಇನ್ನೊಂದು ವೈಶಿಷ್ಟ್ಯಅಂದರೆ ವರ್ಷಕ್ಕೊಮ್ಮೆ ನಡೆಯುವ ನೃತ್ಯ ಉತ್ಸವ. ಇದಕ್ಕೆ ಸಾಕ್ಷಿಯಾಗಲು ಅಪಾರ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ, ಪ್ರವಾಸಿಗರು ಇಲ್ಲಿರುವ ಅಪರೂಪದ ನಾಣ್ಯಗಳ ಸಂಗ್ರಹ, ರಾಯಲ್ ವಸ್ತುಗಳು ಹಾಗೂ ಇನ್ನಿತರೆ ಪ್ರಮುಖ ಸಾಮಗ್ರಿಗಳನ್ನು ನೋಡಬಹುದು. ಇಲ್ಲಿ ತಲುಪಿದರೆ ಸುತ್ತಿ ಬರಲು ಕನಿಷ್ಠ ೪ ರಿಂದ ೫ ಘಂಟೆಗಳು ಬೇಕು. ಪ್ಯಾಲೇಸ್ ಸುತ್ತಿ ಎಲ್ಲವನ್ನೂ ನೋಡಿ ಬರಲು ಇಷ್ಟು ಕಾಲ ಅತ್ಯಗತ್ಯ. ಪ್ಯಾಲೇಸ್ ಒಳಗಿರುವ ಸ್ಪಿಟ್ಯುಕ್ ಆಶ್ರಮ ಪ್ರಮುಖ ಆಕರ್ಷಣೆ. ಪ್ಯಾಲೇಸ್ ತಲುಪಲು ಇಚ್ಛಿಸುವ ಪ್ರವಾಸಿಗರು ಸುಲಭವಾಗಿ ಕಾರು, ಜೀಪ್ ಬಾಡಿಗೆ ಪಡೆದು ಬಂದು ತಲುಪಬಹುದಾಗಿದೆ. ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್ ಲೇಹ್‌ನಲ್ಲಿ ಅತ್ಯಂತ ಜನಪ್ರಿಯವಾದ ಇನ್ನೊಂದು ಸಾಹಸ ಕ್ರೀಡೆ ಪ್ಯಾರಾಗ್ಲೈಡಿಂಗ್. ಇಂಡಸ್ ನದಿಯ ದಡದ ಮೇಲೆ ಈ ಕ್ರೀಡೆಯನ್ನು ಆಸ್ವಾದಿಸಬಹುದಾಗಿದೆ. ಇದು ಸಾಹಸ ಕ್ರೀಡೆಗೆ ಉತ್ತೇಜನ ನೀಡುವ ತಾಣ. ಇದು ೧೧ ಸಾವಿರ ಅಡಿ ಎತ್ತರದಲ್ಲಿದೆ. ಹೀಗಾಗಿ ಇದು ಪ್ಯಾರಾಗ್ಲೈಡಿಂಗ್‌ಗೆ ಹೇಳಿಮಾಡಿಸಿದಂತಿದೆ. ಅಕ್ಟೋಬರ್‌ನಿಂದ ಜೂನ್ ನಡುವಿನ ಅವಧಿ ಪ್ಯಾರಾಗ್ಲೈಡಿಂಗ್‌ಗೆ ಸಕಾಲ.

ಟ್ರೆಕ್ಕಿಂಗ್ ಮಜಾ ನೋಡಬಹುದು

ಬದಲಾಯಿಸಿ

ಪ್ರವಾಸಿಗರಿಗೆ ಇಲ್ಲಿನ ಪ್ರಮುಖ ಆಕರ್ಷಣೆ ಟ್ರೆಕ್ಕಿಂಗ್. ಜೂನ್ ತಿಂಗಳಿಂದ ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಇಲ್ಲಿನ ವೀಕ್ಷಣಾ ತಾಣಗಳು ಅತ್ಯಂತ ಮನೋಹರವಾಗಿ ಗೋಚರಿಸುತ್ತವೆ. ಪ್ರವಾಸಿಗರು ಈ ಸಂದರ್ಭದಲ್ಲಿ ಟ್ರೆಕ್ಕಿಂಗ್‌ನ ತರಹೇವಾರಿ ಅನುಭವ ಪಡೆದುಕೊಳ್ಳಬಹುದು. ಹಿಮಾವೃತ್ತವಾದ ಹಿಮಾಲಯ ಪರ್ವತದ ಮೇಲೆ ಟ್ರೆಕ್ಕಿಂಗ್ ತೆರಳುವ ಸುವರ್ಣಾವಕಾಶ ಇಲ್ಲಿ ಸಿಗುತ್ತದೆ. ಅನುಭವಿ ಹಾಗೂ ನುರಿತ ಟ್ರೆಕ್ಕಿಂಗ್ ಪಟುಗಳು ಇಲ್ಲಿ ತೆರಳಲು ತರಬೇತಿ ನೀಡುತ್ತಾರೆ. ಇವರು ಲೇಹ್‌ನ ಸುತ್ತಮುತ್ತ ಸಾಕಷ್ಟು ಸಂಖ್ಯೆಯಲ್ಲಿ ಸಿಗುತ್ತಾರೆ. ಪ್ರವಾಸಿಗರಿಗೆ ಟ್ರೆಕ್ಕಿಂಗ್ ತೆರಳಲು ಮಾರ್ಗದರ್ಶನ ನೀಡುವ ಸಾಕಷ್ಟು ಶಿಕ್ಷಣ ಕೇಂದ್ರಗಳು ಇಲ್ಲಿವೆ. ಜೂನ್ ಹಾಗೂ ಸೆಪ್ಟೆಂಬರ್ ತಿಂಗಳು ಇಲ್ಲಿ ಟ್ರೆಕ್ಕಿಂಗ್ ತೆರಳಲು ಸಕಾಲ. ಮರ್ಖಾ ಕಣಿವೆ ಪ್ರದೇಶ ಮಾರ್ಗ, ಸ್ಪಿತಿಯಿಂದ ಲಡಾಖ್ ನಡುವಿನ ಮಾರ್ಗ, ಲಡಾಖ್ ಜನ್ಸಕರ್ ಮಾರ್ಗ ಹಾಗೂ ನುಬ್ರಾ ಕಣಿವೆ ಮಾರ್ಗ ಮುಂತಾದವು ಕೆಲ ಜನಪ್ರಿಯ ಟ್ರೆಕ್ಕಿಂಗ್ ಮಾರ್ಗಗಳಾಗಿವೆ. ಇದರ ಹೊರತಾಗಿ ಇಂಡಸ್ ನದಿ ಪಾತ್ರದಲ್ಲಿ ನಿರ್ಮಾಣವಾಗಿರುವ ಕಣಿವೆ ಮಾರ್ಗದಲ್ಲಿ ಸಫಾರಿಗೂ ಯೋಜನೆ ಹಾಕಿಕೊಳ್ಳಬಹುದು. (ತಜ್ಞರ ಕೆಲಸ:ಉಲ್ಲೇಖಗಳನ್ನು ಹಾಕದೆ - ವಿಷಯ ತುಂಬಲಾಗಿದೆ)

ರಾಜಕೀಯ ಮತ್ತು ಸರ್ಕಾರ

ಬದಲಾಯಿಸಿ
ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆ ೨೦೧೪
  • ಜಮ್ಮು-ಕಾಶ್ಮೀರ ಮತ್ತು ಜಾರ್ಖಂಡ್‌ನಲ್ಲಿ ನವೆಂಬರ್ ೨೫, ೨೦೧೪ ಮಂಗಳವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಉತ್ತಮ ಮತದಾನವಾಗಿದೆ.
  • ಜಮ್ಮು-ಕಾಶ್ಮೀರದ ೧೫, ವಿಧಾನಸಭೆ ಕ್ಷೇತ್ರಗಳಿಗೆನಡೆದ ಚುನಾವಣೆಯಲ್ಲಿ ಶೇ.೭೦ ಮತದಾನವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ೨೦೦೮ರ ವಿಧಾನಸಭೆ ಚುನಾವಣೆಯಲ್ಲಿ ಶೇ.೫೨.೬೩ ಮತದಾನವಾಗಿತ್ತು.
  • ೭ ಸಚಿವರು ಸೇರಿ ೧೨ ಶಾಸಕರನ್ನು ಒಳಗೊಂಡು ಒಟ್ಟು ೧೨೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 5,49,698 ಪುರುಷರು, 5,00539 ಮಹಿಳೆಯರು , ೧೩ ಮಂಗಳಮುಖಿಯರು ಸೇರಿದಂತೆ ೧೫ ಕ್ಷೇತ್ರಗಳಲ್ಲಿ 10,502,50 ಮತದಾರರಿದ್ದಾರೆ.
ಜಮ್ಮು ಮತ್ತು ಕಾಶ್ಮೀರ 23-12-2014 ಫಲಿತಾಂಶ
  • ಜಮ್ಮು ಮತ್ತು ಕಾಶ್ಮೀರದ ಒಟ್ಟು ಸ್ಥಾನಗಳು ೮೭; ಅದರಲ್ಲಿ ಜಮ್ಮು ಭಾಗದಲ್ಲಿ ೩೭, ಲಡಾಖ್ ಭಾಗದಲ್ಲಿ ೪, ಮುಸ್ಲಿಮ್ ಬಹುಸಂಖ್ಯಾತ ಭಾಗದಲ್ಲಿ ೪೬ ಸ್ಥಾನಗಳಿವೆ. ಬಿಜೆಪಿಗೆ ಜಮ್ಮು ಭಾಗದಲ್ಲಿಯೇ ೨೫ ಸ್ಥಾನಗಳು ಬಂದಿವೆ. ಉಳಿದ ಕಡೆ ಅದರ ಗಳಿಕೆ ಶೂನ್ಯ.ಆಗನ ಜನಪ್ರತಿನಿಧಿ ಶೇಕ್ ಅಬ್ದುಲ್ಲಾ ಅವರು ಮುಂದಾಲೋಚನೆ ಮಾಡಿ ಕಾಶ್ಮೀರ ಭಾಗಕ್ಕೆ ಯಾವಾಗಲೂ ಬಹುಮತ ಬರುವಂತೆ ವಿಧಾನಸಭೆ ಸ್ಥಾನಗಳನ್ನು ನಿಗದಿಗೋಳಿಸಿದ್ದಾರೆ. ಇನ್ನೂ 11(?)ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದೆ.
ಪಕ್ಷ ಗೆಲವು ಶೇ.ವೋಟು ವೋಟು ಗಳಿಕೆ ವ್ಯತ್ಯಾಸ
ಭಾರತೀಯ ಜನತಾ ಪಕ್ಷ 25 23.0%, 1107194 +14
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) (BSP ?) 1 1.4%, 67786
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 12 18.0%, 867883 -5
ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ 15 20.8%, 1000693 -12
ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷ 28 22.7%, 1092203 +7
ಜಮ್ಮು ಮತ್ತು ಕಾಶ್ಮೀರ ಜನರ People ಕಾನ್ಫರೆನ್ಸ್ 2 1.9%, 93182
ಜಮ್ಮು ಮತ್ತು ಕಾಶ್ಮೀರ ಜನರು ಪ್ರಜಾಸತ್ತಾತ್ಮಕ ರಂಗ (ಸೆಕ್ಯುಲರ್) 1 0.7%, 34886
ಸ್ವತಂತ್ರ 3 6.8%, 329881
ಇತರೆ- JKDPN+ JKNPP . 2.50%, 95941+26221 -4
ಒಟ್ಟು 87 . .
ಚಿತ್ರ:Mufti Mohammad Sayeed hugs Prime Narendra Modi.jpg
ಮುಫ್ತಿಮಹಮದ್ ಸಯಿದ್ ಮತ್ತು ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಮೈತ್ರಿಯ ಅಪ್ಪುಗೆ.
  • ಜಮ್ಮು ಕಾಶ್ಮೀರದಲ್ಲಿ 2015ಜನವರಿ 08 ರಿಂದ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದೆ. (ಸರ್ಕಾರದ ಮೂಲಗಳು TOI-Bharti Jain,TNN|Jan 9, 2015.)
  • ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿ 01/03/2015ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 49 ದಿನಗಳ ರಾಜ್ಯಪಾಲರ ಆಡಳಿತ ತೆರೆ ಕಂಡಿತು.
ಸಯೀದ್ ಅವರ ಬಳಿಕ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಪಿಡಿಪಿಯ 12 ಹಾಗೂ ಬಿಜೆಪಿ 11 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.(prajavani.[[೧]]

ಹೊಸ ಮಂತ್ರಿಮಂಡಲ ರಚನೆ

ಬದಲಾಯಿಸಿ
 
ಮೆಹಬೂಬಾ ಮುಫ್ತಿ -ಮುಖ್ಯಮಂತ್ರಿ
೪-೪-೨೦೧೬
  • ಮೂರು ತಿಂಗಳ ಚೌಕಾಸಿ ರಾಜಕೀಯದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಥಮ ಮಹಿಳಾ ಮುಖ್ಯಮಂತ್ರಿಯಾಗಿ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ 04-04-2016 ರಂದು ಪ್ರಮಾಣ ವಚನ ಸ್ವೀಕರಿಸಿದರು. ಮೆಹಬೂಬಾ ಜತೆ 22 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿ ಸಂಪುಟದಲ್ಲಿ ಬಿಜೆಪಿಯ ಬಲ ಹೆಚ್ಚಿದೆ. ಕಪ್ಪು ದಿರಿಸಿನಲ್ಲಿ ಇದ್ದ 56 ವರ್ಷದ ಮೆಹಬೂಬಾ ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ. ಅವರ ಜತೆ ಬಿಜೆಪಿಯ ನಿರ್ಮಲ್ ಸಿಂಗ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮುಫ್ತಿ ಮೊಹಮದ್ ಸಯೀದ್ ನಿಧನದ (ಜನ 7, 2016) ನಂತರ ಅವರ ಮಗಳು ಮೆಹಬೂಬಾ ಅವರು ಸರ್ಕಾರ ರಚಿಸಲು ಮೀನಮೇಷ ಎಣಿಸಿದ್ದರಿಂದ ರಾಷ್ಟ್ರಪತಿ ಆಡಳಿತ ಜಾರಿ ಮಾಡಲಾಗಿತ್ತು. ಸಯೀದ್ ಸರ್ಕಾರದಲ್ಲಿ ಆರು ಸಂಪುಟ ಸಚಿವ ಸ್ಥಾನ ಹೊಂದಿದ್ದ ಬಿಜೆಪಿ ಈ ಬಾರಿ ಎಂಟು ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ. ಜತೆಗೆ ಮೂವರು ರಾಜ್ಯ ಸಚಿವರಿದ್ದಾರೆ.
  • ಹಿಂದಿನ ಸರ್ಕಾರದಲ್ಲಿ 11 ಸಂಪುಟ ಸಚಿವ ಸ್ಥಾನ ಹೊಂದಿದ್ದ ಪಿಡಿಪಿ ಈ ಬಾರಿ 9 ಸ್ಥಾನ ಪಡೆದಿದೆ. ಇದರ ಜತೆಗೆ ಮೂವರು ರಾಜ್ಯ ಸಚಿವರಿದ್ದಾರೆ. ಪ್ರತ್ಯೇಕವಾದಿ ಮುಖಂಡರಾಗಿದ್ದ ಅಬ್ದುಲ್ ಗನಿ ಲೋನ್‌ ಅವರ ಪುತ್ರ ಸಜ್ಜದ್ ಗನಿ ಲೋನ್ ಈ ಬಾರಿಯೂ ಬಿಜೆಪಿ ಕೋಟಾದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ.
  • ಜಮ್ಮು ಮತ್ತು ಕಾಶ್ಮೀರದ 13ನೇ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಮೆಹಬೂಬಾ ರಾಜ್ಯದ ಪ್ರಥಮ ಮಹಿಳಾ ಮುಖ್ಯಮಂತ್ರಿ ಹಾಗೂ ದೇಶದ ಎರಡನೇ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ. 1980ರಲ್ಲಿ ಸೈದಾ ಅನ್ವರಾ ತೈಮೂರ್ ಅವರು ದೇಶದ ಪ್ರಥಮ ಮುಸ್ಲಿಂ ಮಹಿಳಾ ಮುಖ್ಯಮಂತ್ರಿ ಆಗಿ ಅಸ್ಸಾಂನಲ್ಲಿ ಅಧಿಕಾರ ಸ್ವೀಕರಿಸಿದ್ದರು.ಇಬ್ಬರು ಹೆಣ್ಣು ಮಕ್ಕಳ ತಾಯಿಯಾಗಿರುವ ಮೆಹಬೂಬಾ ಕಾಶ್ಮೀರ ವಿವಿಯಿಂದ ಕಾನೂನು ಪದವಿ ಪಡೆದಿದ್ದಾರೆ. 1996 ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿದ್ದರು. 2002ರಲ್ಲಿ ಮತ್ತೆ ಶಾಸಕಿಯಾಗಿ ಆಯ್ಕೆಯಾದರಲ್ಲದೆ, 2004 ರಲ್ಲಿ ಅನಂತ್‌ನಾಗ್‌ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. 2014 ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದರು. ಇವರು ದೇಶದ ಮೊದಲು ಕೇಂದ್ರ ಆಡಳಿತದ ಪ್ರದೇಶದ ಮುಖ್ಯ ಮಂತ್ರಿ ಯಾಗಿದ್ದರೆ.

ಜಮ್ಮು ಮತ್ತು ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ಪುನಾರಚನೆ

ಬದಲಾಯಿಸಿ
  • ವಿಸರ್ಜನೆ:ಆಗಸ್ಟ್ 2019 ರಲ್ಲಿ, ಭಾರತದ ಸಂಸತ್ತಿನ ಉಭಯ ಸದನಗಳು 370 ನೇ ವಿಧಿಯನ್ನು ರದ್ದುಮಾಡಿ ತಿದ್ದುಪಡಿ ಮಾಡಲು ಮತ್ತು ಭಾರತದ ಸಂವಿಧಾನವನ್ನು ಸಂಪೂರ್ಣವಾಗಿ ರಾಜ್ಯಕ್ಕೆ ವಿಸ್ತರಿಸುವ ನಿರ್ಣಯಗಳನ್ನು ಅಂಗೀಕರಿಸಿದವು, ಇದನ್ನು ಭಾರತದ ರಾಷ್ಟ್ರಪತಿಗಳು ಸಾಂವಿಧಾನಿಕ ಆದೇಶದಂತೆ ಜಾರಿಗೆ ತಂದರು. ಅದೇ ಸಮಯದಲ್ಲಿ, ಸಂಸತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ, 2019 ಅನ್ನು ಅಂಗೀಕರಿಸಿತು, ಇದರಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಹೊಸ ಕೇಂದ್ರಾಡಳಿತ ಪ್ರದೇಶಗಳನ್ನು ಸ್ಥಾಪಿಸಲಾಯಿತು: ಜಮ್ಮು ಮತ್ತು ಕಾಶ್ಮೀರದ ನಾಮಸೂಚಕ ಕೇಂದ್ರ ಪ್ರದೇಶ ಮತ್ತು ಲಡಾಖ್.
  • ಮರುಸಂಘಟನೆ ಕಾಯ್ದೆಯನ್ನು ಭಾರತದ ರಾಷ್ಟ್ರಪತಿಗಳು ಒಪ್ಪಿಕೊಂಡರು ಮತ್ತು ಇದು 31 ಅಕ್ಟೋಬರ್ 2019 ರಿಂದ ಜಾರಿಗೆ ಬಂದಿತು. ಈ ಕ್ರಮಗಳಿಗೆ ಮುಂಚಿತವಾಗಿ, ಕೇಂದ್ರ ಸರ್ಕಾರವು ಕಾಶ್ಮೀರ ಕಣಿವೆಯನ್ನು ಲಾಕ್ ಮಾಡಿತು, ಭದ್ರತಾ ಪಡೆಗಳನ್ನು ಹೆಚ್ಚಿಸಿತು, ಅಸೆಂಬ್ಲಿಯನ್ನು ತಡೆಯುವ ಸೆಕ್ಷನ್ 144 ಅನ್ನು ವಿಧಿಸಿತು ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿಯಂತಹ ರಾಜಕೀಯ ನಾಯಕರನ್ನು ಗೃಹಬಂಧನದಲ್ಲಿರಿಸಿತು. ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಸಹ ನಿರ್ಬಂಧಿಸಲಾಯಿತು.
  • ಕಣಿವೆ ರಾಜ್ಯ 'ಜಮ್ಮು ಮತ್ತು ಕಾಶ್ಮೀರ'ವನ್ನು ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ವಿಭಾಗಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‍ಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. ಮೊದಲಿನಂತೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಈ ನಿಯಮ ರದ್ದಾದ ನಂತರ ಕಾಶ್ಮೀರದ ಪ್ರಜೆಗಳೂ ಭಾರತದ ಇತರ ರಾಜ್ಯಗಳ ಪ್ರಜೆಗಳಂತೆಯೇ ಹಕ್ಕು ಪಡೆಯುತ್ತಾರೆ. ವಿಶೇಷ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಇತರ ರಾಜ್ಯಗಳ ಜನರಿಗೂ ಅಲ್ಲಿ ಎಲ್ಲಾ ಬಗೆಯ ಹಕ್ಕು ಇರುವುದು.
  • ಪೂರ್ವಾನ್ವಯವಾಗಿ ದಿ. 1919 ಅಕ್ಟೋಬರ್‌ 31ರಿಂದ ಜಾರಿಯಾಗುವಂತೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರುವಂತೆ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 9-8-2019 ಶುಕ್ರವಾರ ಸಹಿ ಮಾಡಿದ್ದಾರೆ.
  • ಈ ಆಜ್ಞೆಯಂತೆ ಜಮ್ಮು ಮತ್ತು ಕಾಶ್ಮೀರವು ಶಾಸನ ಸಭೆ ಸಹಿತವಾಗಿರುವ ಕೇಂದ್ರಾಡಳಿತ ಪ್ರದೇಶ. 'ಲಡಾಖ್‌' ಪ್ರದೇಶ ಚಂಡಿಗಡದಂತೆ ಶಾಸನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶ. ಈನಂತರ ಜಮ್ಮು ಕಾಶ್ಮೀರದ ಶಾಸನಸಭೆಯು ಗರಿಷ್ಠ 107 ಸದಸ್ಯರನ್ನು ಹೊಂದಿರುತ್ತದೆ. ಕ್ಷೇತ್ರ ಮರು ವಿಂಗಡಣೆಯ ಬಳಿಕ ಆ ಸಂಖ್ಯೆಯನ್ನು 114ಕ್ಕೆ ಹೆಚ್ಚಿಸಲು ಯೋಜಿಸಿದೆ. ಇಲ್ಲಿನ 24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಬರುವುದರಿಂದ ಅವು ಖಾಲಿ ಉಳಿಯುತ್ತವೆ. ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳನ್ನು ಲಡಾಖ್‌ ಪ್ರದೇಶ ಒಳಗೊಂಡಿರುತ್ತದೆ. ಇನ್ನು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಐವರು ಸದಸ್ಯರು ಹಾಗೂ ಲಡಾಖ್‌ನ ಒಬ್ಬ ಪ್ರತಿನಿಧಿ ಇರುತ್ತಾರೆ[] [] [] []

ಜಮ್ಮು ಮತ್ತು ಕಾಶ್ಮಿರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶ ಮತ್ತು ಇತರ ಪ್ರದೇಶಗಳು

ಬದಲಾಯಿಸಿ
 
ಪೂರ್ಣ ಕಾಶ್ಮೀರದ ನಕ್ಷೆ (24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ - ತಿಳಿ ಹಸಿರು ಬಣ್ಣ)

ಉಲ್ಲೇಖಗಳು

ಬದಲಾಯಿಸಿ
  1. "Report of the Commissioner for linguistic minorities: 50th report (July 2012 to June 2013)" (PDF). Commissioner for Linguistic Minorities, Ministry of Minority Affairs, Government of India. p. 49. Archived from the original (PDF) on 8 ಜುಲೈ 2016. Retrieved 14 January 2015.
  2. https://www.prajavani.net/stories/national/jk-be-largest-ut-656140.html ಕಾಶ್ಮೀರ ಇನ್ನುಮುಂದೆ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ;ಪಿಟಿಐ; d: 06 ಆಗಸ್ಟ್ 2019,
  3. https://www.prajavani.net/stories/national/jammu-and-kashmir-divided-two-656084.html ಜಮ್ಮು ಕಾಶ್ಮೀರ ಎರಡು ಭಾಗವಾಯಿತು: ಏನು ಇದರ ಅರ್ಥ?;ಪ್ರಜಾವಾಣಿ ;d: 05 ಆಗಸ್ಟ್ 2019,
  4. https://www.prajavani.net/stories/national/jammu-and-kashmir-special-655958.html ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?ಪ್ರಜಾವಾಣಿ ; d: 05 ಆಗಸ್ಟ್ 2019;
  5. https://www.prajavani.net/stories/national/president-approves-kashmir-657060.html ಕಾಶ್ಮೀರ ವಿಭಜನೆಗೆ ರಾಷ್ಟ್ರಪತಿ ಅನುಮೋದನೆ;ಪಿಟಿಐ;d: 10 ಆಗಸ್ಟ್ 2019,