ಜಮ್ಮು ಮತ್ತು ಕಶ್ಮೀರ ರಾಜ್ಯದ ಬೇಸಿಗೆಕಾಲದ ರಾಜಧಾನಿ ಜಮ್ಮು ಜಮ್ಮು ಮತ್ತು ಕಾಶ್ಮೀರ ರಾಜ್ಯದ ಚಳಿಗಾಲದ ರಾಜಧಾನಿ; ಜಮ್ಮು ಜಿಲ್ಲೆಯ, ಜಮ್ಮು ವಿಭಾಗದ ಮುಖ್ಯ ಪಟ್ಟಣ. ಚೀನಾಬ್ ನದಿಯ ಉಪನದಿಯಾದ ಟಾವಿಯ ದಡದ ಮೇಲೆ, ಶ್ರೀನಗರದಿಂದ 95ಮೈ. ದಕ್ಷಿಣಕ್ಕೆ, ಉ.ಅ.32ಔ 47' ಮತ್ತು ಪೂ.ರೇ. 74ಔ 50' ಮೇಲೆ ಇದೆ. ಜನಸಂಖ್ಯೆ 5,350,811

ಜಮ್ಮು
جموں
जम्मू
ಆಡಳಿತ ವಿಭಾಗ
View of the Jammu city and the Tawi River
View of the Jammu city and the Tawi River
Jammu (Magenta, 1-5) as seen in the map of Kashmir
Jammu (Magenta, 1-5) as seen in the map of Kashmir
ದೇಶಭಾರತ
ರಾಜ್ಯಜಮ್ಮು ಮತ್ತು ಕಾಶ್ಮೀರ
ಜಿಲ್ಲೆJammu, Doda, Kathua, Ramban, Reasi, Kishtwar, Poonch, Rajouri, Udhampur, Samba
ಸ್ಥಾಪನೆ14th century BC
ಸ್ಥಾಪಿಸಿದವರುರಾಜಾ ಜಂಬು ಲೋಚನ
ರಾಜಧಾನಿಜಮ್ಮು
ಸರ್ಕಾರ
 • ಮಾದರಿಕೇಂದ್ರ
 • ಪಾಲಿಕೆರಾಜ್ಯ ಸರಕಾರ
Area
 • Total೨೨೨,೨೦೦ km (೮೫,೮೦೦ sq mi)
Elevation
೩೦೫ m (೧,೦೦೧ ft)
Population
 • Total೫೩,೫೦,೮೧೧
 • ಸಾಂದ್ರತೆ೨೪/km (೬೨/sq mi)
ಭಾಷೆಗಳು
 • ಅಧಿಕೃತOrganized Alphabetically ಇಂಗ್ಲಿಷ್ , ಡೋಗ್ರಿ , ಹಿಂದಿ
ಸಮಯದ ವಲಯ
ಸಮಯ ವಲಯಯುಟಿಸಿ+5:30 (IST)
ವಾಹನ ನೋಂದಣಿJK02-
ಜಾಲತಾಣwww.jammu.nic.in

ಜಮ್ಮು ವಿಭಾಗದಲ್ಲಿ ಜಮ್ಮು, ಕಾಟುವಾ , ಉದಮ್‍ಪುರ , ದೋದಾ ಮತ್ತು ಪುಂಚ್ ಈ ಐದು ಜಿಲ್ಲೆಗಳಿವೆ. ಈ ವಿಭಾಗ ಹೆಚ್ಚಾಗಿ ಗುಡ್ಡಗಾಡು. ವಾರ್ಷಿಕ ಮಳೆ 41. ಕೆಲವೆಡೆ ಗೋದಿ ಮತ್ತು ಮೆಕ್ಕೆಜೋಳ ಬೆಳೆಯುತ್ತಾರೆ.

ಪ್ರೇಕ್ಷಣೀಯ ಸ್ಥಳಗಳು

ಬದಲಾಯಿಸಿ

ಜಮ್ಮು ನಗರದಲ್ಲಿ ಅನೇಕ ಪುರಾಣಪ್ರಸಿದ್ಧ ಅವಶೇಷಗಳನ್ನು ನೋಡಬಹುದು. ಇಲ್ಲಿಯ ರಘುನಾಥ ದೇವಾಲಯ ಪ್ರಸಿದ್ಧವಾದ್ದು. ಟಾವಿ ನದಿಯ ಎಡದಡದಲ್ಲಿ ರಾಜಮಹಲ್ ಇದೆ. ಭಾರತೀಯ ರೈಲ್ವೆ ಮಾರ್ಗದ ಅಂತಿಮ ನಿಲ್ದಾಣವಾದ ಪಠಾಣ್ ಕೋಟೆಯೊಡನೆ ಜಮ್ಮು ನಗರ ಸಂಪರ್ಕ ಹೊಂದಿದೆ. ಇಲ್ಲಿ ಅರಣ್ಯ ಇಲಾಖೆಯ ಕೇಂದ್ರವುಂಟು.

ವಾಣಿಜ್ಯ

ಬದಲಾಯಿಸಿ

ಜಮ್ಮು ನಗರದ ಹತ್ತಿರ ಇರುವ ಜಂಗಲಗಲಿ ಮತ್ತು ಕಾಲಕೋಟ್ ಪ್ರದೇಶಗಳಲ್ಲಿ ಕಲ್ಲಿದ್ದಲನ್ನು ತೆಗೆಯುತ್ತಾರೆ. ಜಿಪ್ಸಮ್ ಗಣಿಯೂ ಉಂಟು. ಜಮ್ಮು ನಗರದಲ್ಲಿ ಶಾಲಾಕಾಲೇಜುಗಳೂ ಔದ್ಯೋಗಿಕ ಶಿಕ್ಷಣ ಸಂಸ್ಥೆಯೂ ಇವೆ. ಜಮ್ಮು ನಗರದ ಬಹುಸಂಖ್ಯಾತರು ಡೋಗ್ರಾ ಮತ್ತು ಸಿಕ್ಖರು. ವ್ಯಾಪಾರ ಮತ್ತು ವ್ಯವಸಾಯ ಜನರ ಮುಖ್ಯ ಉದ್ಯೋಗ.

ಇತಿಹಾಸ

ಬದಲಾಯಿಸಿ
 
Maharaja Gulab Singh, the founder of princely state of Jammu and Kashmir

ಜಮ್ಮು ಪ್ರದೇಶ ಮೊದಲು ರಜಪೂತರ ಆಳ್ವಿಕೆಯಲ್ಲಿತ್ತು. ಅವರನ್ನು ಸಿಕ್ಖರು ಜಯಿಸಿದ ಅನಂತರ ಜಮ್ಮು ನಗರ ಸಿಖ್ ಸಾಮ್ರಾಜ್ಯದ ಒಂದು ಭಾಗವಾಯಿತು. ಜಮ್ಮು ನಗರವನ್ನು ಸ್ವಲ್ಪ ಸಮಯ ರಣಜಿತ್ ಸಿಂಗನೂ ಅವನ ಮರಣಾನಂತರ ಗುಲಾಬ್ ಸಿಂಗನೂ ಆಳಿದರು. 1846ರಲ್ಲಿ ಜಮ್ಮು ಮತ್ತು ಕಾಶ್ಮೀರ ಸೇರಿ ಒಂದು ಸಂಸ್ಥಾನವಾಯಿತು.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಮ್ಮು&oldid=1125076" ಇಂದ ಪಡೆಯಲ್ಪಟ್ಟಿದೆ