ಪೇಶಾವರ[೧] (ಹಿಂದೆ ವಾಯುವ್ಯ ಸರಹದ್ದಿನ ಪ್ರಾಂತ್ಯ ಎಂದು ಕರೆಯಲಾಗುತ್ತಿತ್ತು) ಪಾಕಿಸ್ತಾನದ ಫೆಡರಲ್ ಆಡಳಿತದ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ಆರ್ಥಿಕ ಕೇಂದ್ರವಾಗಿದೆ. ಪೇಶಾವರ ಪಾಕ್-ಅಫ್ಘಾನ್ ಗಡಿಯ ಹತ್ತಿರದ ಖೈಬರ್ ಪಾಸ್‍ನ ಪೂರ್ವ ಅಂತ್ಯದ ದೊಡ್ಡ ಕಣಿವೆಯಲ್ಲಿ ನೆಲೆಗೊಂಡಿದೆ. "ಗಡಿಯಲ್ಲಿನ ನಗರ" ಎಂದು ಕರೆಯಲ್ಪಡುವವ ಪೇಶಾವರ, ಮಧ್ಯ ಏಷ್ಯಾ ಮತ್ತು ದಕ್ಷಿಣ ಏಷ್ಯಾದ ಕಾವಲುದಾರಿಯಲ್ಲಿದ್ದು ಅತ್ಯಂತ ಸಾಂಸ್ಕೃತಿಕ ರೋಮಾಂಚಕ ಮತ್ತು ಉತ್ಸಾಹಭರಿತ ನಗರಗಳಲ್ಲೊಂದಾಗಿದೆ. ಪೇಶಾವರ ಕಾಬೂಲ್ ನದಿಯ ವಿವಿಧ ಕಾಲುವೆಗಳಿಂದ ಮತ್ತು ಅದರ ಉಪನದಿ ಬಾರಾ ನದಿಯಿಂದ ನೀರಾವರಿಯನ್ನು ಪಡಿದುಕೊಳ್ಳುತ್ತದೆ.

ಇತಿಹಾಸ

ಬದಲಾಯಿಸಿ
  • ಪೇಶಾವರ ಪಾಕಿಸ್ತಾನದ ಜನಾಂಗ ಮತ್ತು ಭಾಷೆಯನ್ನೊಳಗೊಂಡ ವಿಭಿನ್ನವಾದ ನಗರಗಳಲ್ಲೊಂದಾಗಿ ಹೊರಹೊಮ್ಮಿದೆ. ಕಳೆದ ಮೂರು ದಶಕಗಳಲ್ಲಿ, ಉದ್ಯೋಗಾವಕಾಶಗಳು, ಶಿಕ್ಷಣ, ಮತ್ತು ಸೇವೆಗಳನ್ನು ಹುಡುಕಿಕೊಂಡು ಜನರ ಆಂತರಿಕ ವಲಸೆ ಹೋಗಿ ನಗರದಲ್ಲಿ ಜನರ ಗಮನಾರ್ಹ ಏರಿಕೆ ಕಂಡುಬಂದಿದೆ, ಮತ್ತು ಸೇನಾ ಕಾರ್ಯಾಚರಣೆ ಹಾಗು ನೆರೆಯ ಪ್ರದೇಶಗಳಲ್ಲಿ ನಾಗರಿಕ ಅಶಾಂತಿಯಿಂದಾಗಿ ಆಫ್ಘನ್ನರು ಹಾಗು ಇತರ ಜನರು ಈ ಭಾಗದಲ್ಲಿ ಬಂದು ನೆಲೆಸಿದ್ದಾರೆ.
  • ಪೇಶಾವರ ನೋಮ್ ಫೆನ್ ಪ್ರಮುಖ, ಶೈಕ್ಷಣಿಕ, ರಾಜಕೀಯ, ವ್ಯಾಪಾರ ಕೇಂದ್ರ ವಾಗಿದೆ. ಪೇಶಾವರ ಕೃಸ್ತಪೂರ್ವ 539ರಿಂದಲೂ ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ನಗರವಾಗಿದೆ.

ಪ್ರಾಚೀನ ಪೇಶಾವರ

ಬದಲಾಯಿಸಿ
  • ಪೇಶಾವರ ಮಧ್ಯ, ದಕ್ಷಿಣ ಮತ್ತು ಪಶ್ಚಿಮ ಏಷ್ಯಾದ ನಡುವಿನ ಪ್ರದೇಶಗಳಲ್ಲಿ ಅತಿ ಪುರಾತನ ನಗರಗಳಲ್ಲೊಂದಾಗಿ ಶತಮಾನಗಳಿಂದ ಅಫ್ಘಾನಿಸ್ಥಾನ, ದಕ್ಷಿಣ ಏಷ್ಯಾ, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯ ನಡುವೆ ವ್ಯಾಪಾರದ ಕೇಂದ್ರವಾಗಿದೆ. ೨ ನೇ ಶತಮಾನದಲ್ಲಿ ಕಲಿಕೆಯ ಪ್ರಾಚೀನ ಕೇಂದ್ರವೂ ಆಗಿತ್ತು. ವೇದ ಪುರಾಣಗಳ ಪ್ರಕಾರ ಈ ಪ್ರದೇಶದಲ್ಲಿಪುಷ್ಕಲಾವತಿಗಳು ಎಂಬ ಪ್ರಾಚೀನ ವಸಾಹತು ಇತ್ತೆಂದು ಕಂಡುಬರುತ್ತದೆ.
  • ರಾಮಾಯಣದಲ್ಲಿ ಬರುವ ರಾಜ ಭರತನ ಮಗನ ಹೆಸರು ಪುಷ್ಕಳ, ಇವನ ಮೇಲೇ ಈ ವಸಾಹತು ಇದೆ ಎಂದು ಊಹಾತ್ಮಕವಾಗಿ ಹೇಳುತ್ತಾರೆ ವಿನಃ ಈ ವಿಚಾರದ ಮೇಲೆ ಪೂರ್ಣವಾಗಿ ಸಂಶೋಧನೆ ನಡೆಸಿಲ್ಲ. ಪೇಶಾವರವನ್ನು ಹಿಂದೆ "ಪುರುಷಪುರ" ಎಂದು ಕರೆಯಲಾಗಿತ್ತಿತ್ತು ಎಂದು ಇತಿಹಾಸದಿಂದ ತಿಳಿದುಬರುತ್ತದೆ.
  • ಈ ಪ್ರದೇಶವನ್ನು ಕಾಲಕ್ರಮೇಣ ಗ್ರೇಕೋ-ಬಾಕ್ಟ್ರಿಯನ್ ರಾಜನಾದ [[[ಯುಕ್ರಟೈಡ್ಸ್]] ಆಳತೊಡಗಿದನು. ಬೇರೆ ಬೇರೆ ಇಂಡೊ-ಗ್ರಿಕ್ ರಾಜರುಗಳೂ ಸಹ ಈ ಪ್ರದೇಶವನ್ನು ಆಳಿದ್ದಾರೆ. ಇತಿಹಾಸಕಾರ ಟರ್ಷಿಯಸ್ ಚಾಂಡ್ಲರ್‍ನ ಪ್ರಕಾರ ಆಗಿನ ಕಾಲದಲ್ಲಿ ಪೇಶಾವರದಲ್ಲಿ ೧೨೦೦೦೦ ಕ್ಕಿಂತ ಲೂ ಅಧಿಕ ಜನಸಂಖ್ಯೆ ಇತ್ತು, ಹಾಗು ಆಗಿನ ಕಾಲದಲ್ಲಿ ೭ನೆ ಅತಿಹಿಚ್ಚು ಜನಸಂಖ್ಯೆ ಇರುವ ಪ್ರದೇಶವಾಗಿತ್ತು. ಹೀಗೆ ಪೇಶಾವರವನ್ನು ಪಾರ್ಥಿಯನ್ ರಾಜರು, ಇಂಡೋ-ಪಾರ್ಥಿಯನ್ ರಾಜರು ಇರಾನಿನ ಕೆಲವು ರಾಜರು ಕೂಡ ಆಳಿದ್ದರು.

ಗಾಂಧಾರರ ಪೇಶಾವರ

ಬದಲಾಯಿಸಿ
  • ಕುಶನ್ ರಾಜವಂಶದ ರಾಜನಾದ ಕನಿಷ್ಕನು ಪೇಶಾವರವನ್ನು ಕೃ.ಶ. ೧೨೮ರ ವರಗೆ ಆಳಿದನೇಂದು ಇತಿಹಾಸದಿಂದ ತಿಳಿದು ಬರುತ್ತದೆ. ಇವನು ತನ್ನ ರಾಜ್ಯದ ರಾಜಧಾನಿಯನ್ನು ಪುಷ್ಕಲಾವತಿಯಿಂದ (ಈಗಿನ ಪೇಶಾವರದಲ್ಲಿರು ಚರ್ಸಡ್ಡ) ಪರುಷಪುರಕ್ಕೆ ಕೃ.ಶ. ೨ನೆ ಶತಮಾನದಲ್ಲಿ ಸ್ಥಳಾಂತರಿಸಿದನು. ಭೌದ್ಧ ಮಿಶನರಿಗಳಿಂದಾಗಿ ಪೇಶಾವರವು ಆಗಿನ ಕಾಲದ ಪ್ರಮುಖ ಬೌದ್ಧ ಕಲಿಕೆಯ ಸ್ಥಳವಾಗಿ ಪರಿವರ್ತನೆಗೆ ಒಳಗಾಯಿತು.
  • ಧರ್ಮಕ್ಕೆ ಆಧ್ಯತೆಯನ್ನು ಕೊಟ್ಟು ರಾಜ್ಯದ ಅಧಿಕೃತ ಧರ್ಮವನ್ನಾಗಿ ಪಾಲನೆ ಮಾಡಲಾಯಿತು. ರಾಜನಾದ ಕನಿಷ್ಕನೂ ಬೌದ್ಧಧರ್ಮ ಪಾಲಿಸುತ್ತಿದ್ದ ಕಾರಣ ಒಂದು ದೊಡ್ಡ ಸ್ತೂಪವನ್ನು ಕಟ್ಟಿಸಿದನು. ಈ ಸ್ತೂಪವು ಆ ಕಾಲದ ಅತಿದೊಡ್ಡ ಕಟ್ಟಡವಾಗಿತ್ತು. ಈ ಪ್ರಸಿದ್ಧ ಕಟ್ಟಡವನ್ನು ಪ್ರಥಮವಾಗಿ ದಾಖಲಿಸಿದವರು ಚೀನಾದ ಬೌದ್ಧಗುರುಗಳಾದ ಫಾಕ್ಷಿಯಾನ್‍ರವರು.

ಮುಸಲ್ಮಾನರ ಆಡಳಿತ

ಬದಲಾಯಿಸಿ
  • ಅಫ್ಗಾನಿಸ್ಥಾನದ ಚಕ್ರವರ್ತಿಯಾದ ಶೇರ್ ಶಾಹ್ ಸೂರಿ ೧೬ನೆ ಶತಮಾನದಲ್ಲಿ ದೆಹೆಲಿಯಿಂದ ಕಾಬುಲ್‍ಶಾಹಿಯವರೆಗೆ ರಸ್ತೆಯನ್ನು ಖೈಬರ್ ಪಾಸ್ ಹಾಗು ಪೇಶಾವರದ ಮುಖಾಂತರ ಕಟ್ಟಿಸಿದನು. ೧೬ನೆ ಶತಮಾನದಲ್ಲಿ ಇನ್ನು ಕೆಲವು ಮೊಗಲ್‍ರಾಜರು ಆಳಿದರು. ಭಾರತದ ಮೊಗಲ್ ಸಾಮ್ರಾಜ್ಯದ ಸ್ಥಾಪಕನಾದ ಬಾಬರ್, ಉಜ್ಬೇಕಿಸ್ತಾನದವನಾಗಿದ್ದು ಪೇಶಾವರಕ್ಕೆ ಬಂದಾಗ, ಬಾಗ್ರಮ್ ಎಂಬ ನಗರವನ್ನು ಕಟ್ಟಿಸಿ ಅಲ್ಲಿದ್ದ ಹಳೆಯದೊಂದು ಕೋಟೆಯನ್ನು ಕ್ರಿ.ಶ. ೧೫೩೦ರಲ್ಲಿ ಪುರ್ನನಿರ್ಮಾಣ ಮಾಡಿದನು.
  • ಅವನ ಮೊಮ್ಮಗ ಅಕ್ಬರ್‍ನು ಈ ಪ್ರದೇಶಕ್ಕೆ "ಪೇಶವಾ" ಎಂದು ಹೆಸರಿಟ್ಟು ಅಲ್ಲಿದ ಮಾರುಕಟ್ಟೆ ಹಾಗು ವಿವಿಧ ಕಟ್ಟಡಗಳನ್ನು ಸುಂದರಗೊಳಿಸಿದನು. "ಪೇಶಾವಾ" ಎಂದರೆ ಪರ್ಶಿಯನ್ ಭಾಷೆಯಲ್ಲಿ ನೀರಿನ ಹತ್ತಿರದ ಸ್ಥಳವೆಂದು ಅರ್ಥ.

ಸಿಖ್ಖರ ಆಡಳಿತ

ಬದಲಾಯಿಸಿ
  • ೧೮೧೨ರಲ್ಲಿ ಪೇಶಾವರವು ಅಫ್ಗಾನಿಸ್ತಾನದ ಆಡಳಿತದಲ್ಲಿತ್ತಾದರು ಆಗಿನ ಆಡಳಿತದಲ್ಲಿ ಮೇಲುಗೈ ಸಾಧಿಸಿದವರು ಸಿಖ್ಖರಾಗಿದ್ದರು. ೧೮೧೮ ರಲ್ಲಿ ಪೇಶಾವರವನ್ನು ಮಹಾರಾಜ ರಂಜಿತ್ ಸಿಂಗ್ ಅಫ್ಗನ್ ರಾಜರುಗಳಿಂದ ವಶಪಡಿಸಿಕೊಂಡನು. ೧೮೩೪ ಪೇಶಾವರ ಪೂರ್ಣವಾಗಿ ಸಿಖ್ಖರ ಆಡಳಿತಕ್ಕೆ ಒಳಗಾಯಿತು. ಇದಾದ ನಂತರ ಪೇಶಾವರದಲ್ಲಿ ಕಡಿದಾದ ಕುಸಿತ ಕಂಡುಬಂತು.ಪೇಶಾವರದಲ್ಲಿದ್ದ ಮುಗಲರ ಕೆಲವು ಉದ್ಯಾನವನವನ್ನು ಸಿಖ್ಖರು ಭಗ್ನಗೊಳಿಸಿದರು.
  • ಹರಿ ಸಿಂಗ್ ನಾಲ್ವಾರು ಕಟ್ಟಿಸಿದ ಗುರುಧ್ವಾರ್ ಭಾಯ್ ಜೋಗಾಸಿಂಗ್ ಹಾಗು ಗುರುಧ್ವಾರ್ ಭಾಯ್ ಬೀಬಾಸಿಂಗ್ ಎಂಬ ಎರಡು ಮಂದಿರಗಳಿಂದಾಗಿ ಈ ಪ್ರದೇಶದಲ್ಲಿ ಸಿಖ್ ಧರ್ಮದ ಪರಿಪಾಲನೆ ಶುರುವಾಯಿತು. ಭಾರತದ ವಿಭಜನೆರಿಂದಾಗಿ ಇಲ್ಲಿ ಸಿಖ್ಖರ ಸಂಖ್ಯೇ ಕ್ರಮೇಣ ಕಡಿಮೆ ಯಾಯಿತು.

ಬ್ರಿಟೀಷರ ಆಡಳಿತ

ಬದಲಾಯಿಸಿ

೧೮೪೯ನೇ ಎರಡನೇ ಆಂಗ್ಲೋ-ಸಿಖ್ ಯುದ್ಧದ ಬಳಿಕ ಪೇಶಾವರವು ಬ್ರಿಟೀಷರ ಆಡಳಿತಕ್ಕೆ ಅಳವಡಿಸಲಾಯಿತು. ೧೮೫೭ ಸಿಪಾಯಿದಂಗೆಗೆ ಇಲ್ಲಿನ ೪೦೦೦ ಜನ ಸೈನಿಕರು ಭರತದ ಪರ ಹೋರಾಡಿದ್ದರು. ಆದರೆ ಭಾರತದಲ್ಲಿ ನಡೆದಷ್ಡು ಹಿಂಸೆ ಇಲ್ಲಿ ನಡೆದಿಲ್ಲ. ಇದಾದ ನಂತರ ಪೇಶಾವರದ ಕೆಲ ದಳವಾಯಿಗಳು ಬ್ರಿಟೀಷರ ಪರ ಸೇರಿಕೊಂಡರು.

ಆಧುನಿಕ ಪೇಶಾವರ

ಬದಲಾಯಿಸಿ

೧೯೪೭ರಲ್ಲಿ .ಪೇಶಾವರ ಪಾಕಿಸ್ಥಾನದ ಪಾಲಾರಿತು, ಏಕೆಂದರೆ ಭಾರತದ ಏಕೀಕರಣಕ್ಕೆ ಅಲ್ಲಿನ ಜನರೂ ಕೂಡ ವಿರುದ್ಧವಾಗಿದ್ದರು. ಕೆಲ ಅಲ್ಪಸಂಖ್ಯಾತ ಗುಂಪುಗಳು ಆ ಪಾಕಿಸ್ಥಾನಕ್ಕು ಸೇರದೆ ಭಾರತಕ್ಕೂ ಸೇರದೆ, ಪಶ್ತುನಿಸ್ಥಾನ್ ಎಂಬ ಹೊಸ ರಾಷ್ಟ್ರವಾಗಬೇಕೆಂದು ಕರ ನೀಡಿದರು. ೧೯೮೦ರಲ್ಲಿ ಅಫ್ಘಾನಿಸ್ಥಾನದಲ್ಲಿ ಸೋವಿಯತ್ ಯುದ್ಧದ ಸಮಯದಲ್ಲಿ ಪೇಶಾವರವು ಕೆಲ ಮುಜಾಹಿದ್ದೀನ್ ಗುಂಪುಗಳಿಗೆ ಮನೆಯಾಗಿತ್ತು. ೧೯೮೮ನೇ ಚುಣಾವಣೆಯ ಸಮಯಕ್ಕೆ ಪೇಶಾವರದಲ್ಲಿ ಸುಮಾರು ೧೦೦೦೦೦೦ ಅಫ್ಗಾನರು ದಾಖಲಾತಿ ಇತ್ತು. ಆದರೆ ದಾಖಲಾತಿಯಾಗದ ಜನರು ಬಹುಸಂಖ್ಯೇಯಲ್ಲಿ ಸೇರಿದ್ದರು.

ಜನಸಂಖ್ಯಾಶಾಸ್ತ್ರ

ಬದಲಾಯಿಸಿ

ಪೇಶಾವರ ಒಂದು ಕ್ಷಿಪ್ರವಾಗಿ ಬೆಳೆಯುತ್ತಿರುವ ನಗರವಾಗಿದೆ. ಅಲ್ಲಿನ ಪ್ರಸಕ್ತ ಜನಸಂಖ್ಯೆಯೆ ಬೆಳವಣಿಗೆ ಪ್ರತಿ ವರ್ಷಕ್ಕೆ ಸುಮಾರು ೩.೨೯%ರಷ್ಟೆದೆ.


  • ನಗರ ಜನಸಂಖ್ಯೆ: 51.32% (1,536,000 ವ್ಯಕ್ತಿಗಳು)
  • ಗ್ರಾಮೀಣ ಜನಸಂಖ್ಯೆ: 48,68% (1,600,000 ವ್ಯಕ್ತಿಗಳು)

ಜನಾಂಗ ಮತ್ತು ಧರ್ಮ

ಬದಲಾಯಿಸಿ
 
ಪೇಶಾವರದ ಹಳೇ ಬಸ್ಸುಗಳು
 
ಹಳೇ ಪೇಶಾವರ
 
ಸುನೆಹೆರ ಮಸೀತ್ ದಾ ಬೊಆ

ಪೇಶಾವರದ ೯೯% ಜನರು ಇಸ್ಲಾಮ್ ಧರ್ಮವನ್ನು ಪಾಲಿಸುತ್ತಾರೆ. ಶಿಯಾಹ್ ಮುಸ್ಲಿಮರಿಗಿಂತ ಸುನ್ನಿಯವರು ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ. ಪೇಶಾವರದ ಇತಿಹಾಸವನ್ನು ನೋಡಿದರೆ ಮುಸಲ್ಮಾನರಲ್ಲದೆ ಯಹೂದಿಗಳು, ಝೋರೊಸ್ಟ್ರಿಯನ್ನರು, ಬಹಾಯಿ ಮತದವರು ಕೂಡ ಇಲ್ಲಿ ನೆಲೆಸಿದ್ದರು. ಸಣ್ಣ ಸಮುದಾಯಗಳಲ್ಲಿ ಸಿಖ್ಖರು, ಹಿಂದುಗಳು ಹಾಗು ಕ್ರಿಸ್ಚಿಯನ್ನರೂ ಕೂಡ ಇದ್ದರು.

ಭಾಷೆಗಳು

ಬದಲಾಯಿಸಿ

ಈ ನಗರದ ನಿವಾಸಿಗಳು ಕೆಳಗಂಡ ಭಾಷೆಗಳನ್ನು ಮಾತನಾಡ ಬಲ್ಲರು

  • ರಾಷ್ಟ್ರೀಯ ಭಾಷೆ ಉರ್ದು ಮತ್ತು ಸಂಪರ್ಕ ಭಾಷೆ
  • ಹಿಂದ್ಕೋ, ೧೯೮೦ರ ದಶಕದವರೆಗೆ ನಗರದ ಜನಸಂಖ್ಯೆಯಲ್ಲಿ ಬಹುಪಾಲು ಜನರು ಮಾತನಾಡುವ ಒಂದು ಪಂಜಾಬಿ ಭಾಷೆ
  • ಫಕ್ತೊ.
  • ಪಂಜಾಬಿ
  • ಸರಾಯಿಕಿ
  • ಖೊವರ್
  • ಖೊನಿಸ್ಥಾನಿ
  • ದರಿ/ಹಝರಗಿ/ಫರ್ಸಿ/ತಜಿಕ್

ಶಿಕ್ಷಣ

ಬದಲಾಯಿಸಿ

ಹಲವಾರು ಶಾಲೆಗಳು , ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಪೇಶಾವರದಲ್ಲಿವೆ. ೧೯೫೦ರಲ್ಲಿ ಪೇಶಾವರ ವಿಶ್ವವಿದ್ಯಾನಿಲಯ ಸ್ಥಾಪನೆಗೊಂಡಿತು. ಎಡ್ವರ್ದ್ಸ್ ಕಾಲೇಜು ೧೯೦೦ ರಲ್ಲಿ ಸ್ಥಾಪನೆ ಆಗಿದ್ದು ಪೇಶಾವರದ ಅತ್ಯಂತ ಹಳೇಯ ಕಾಲೇಜಾಹಿದೆ. ಕೆಳಗಿನ ಪಟ್ಟಿಯಲ್ಲಿ ಪೇಶಾವರದ ಕೆಲವು ಶಿಕ್ಷಣ ಸಂಸ್ಥೆಗಳನ್ನು ಕಾಣಬಹುದು.

  • ಇಸ್ಲಾಮಿಯಾ ಕಾಲೇಜು ವಿಶ್ವವಿದ್ಯಾಲಯ
  • ಖೈಬರ್ ವೈದ್ಯಕೀಯ ವಿಶ್ವವಿದ್ಯಾಲಯ
  • ಪೇಶಾವರ ವಿಶ್ವವಿದ್ಯಾಲಯ
  • ಪೇಷಾವರ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ವಿಶ್ವವಿದ್ಯಾಲಯ
  • ಕೃಷಿ ವಿಶ್ವವಿದ್ಯಾಲಯದ (ಪೇಷಾವರ್ )
  • ಕಂಪ್ಯೂಟರ್ ಮತ್ತು ಉದಯೋನ್ಮುಖ ವಿಜ್ಞಾನ , ಪೇಶಾವರ ಕ್ಯಾಂಪಸ್ ರಾಷ್ಟ್ರೀಯ ವಿಶ್ವವಿದ್ಯಾಲಯ (NU-FAST)
  • IMSciences ( ಮ್ಯಾನೇಜ್ಮೆಂಟ್ ಸೈನ್ಸಸ್ ಸಂಸ್ಥೆ )
  • ಗಾಂಧಾರ ವಿಶ್ವವಿದ್ಯಾಲಯ
  • ಇಕ್ರಾ ರಾಷ್ಟ್ರೀಯ ವಿಶ್ವವಿದ್ಯಾಲಯ , ಪೇಶಾವರ
  • AIMS ಉದಯೋನ್ಮುಖ ವಿಜ್ಞಾನ ವಿಶ್ವವಿದ್ಯಾಲಯ
  • ಕುರ್ತುಬ ವಿಶ್ವವಿದ್ಯಾಲಯ
  • ಸರಹದ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯ
  • CECOS ಐಟಿ ಮತ್ತು ಉದಯೋನ್ಮುಖ ವಿಜ್ಞಾನ ವಿಶ್ವವಿದ್ಯಾಲಯ
  • ಪ್ರೆಸ್ಟನ್ ವಿಶ್ವವಿದ್ಯಾಲಯ
  • ಸಿಟಿ ವಿಜ್ಙಾನ ಮತ್ತು ಮಾಹಿತಿ ತಂತ್ರಜ್ಞಾನ ವಿಶ್ವವಿದ್ಯಾಲಯ, ಪೇಶಾವರ
  • ಫ್ರಂಟೀಯರ್ ಮಹಿಳಾ ವಿಶ್ವವಿದ್ಯಾಲಯ
  • ಅಬಸಿನ್ ವಿಶ್ವವಿದ್ಯಾಲಯ


 
ಪೇಶಾವರದಲ್ಲಿ ಮಕ್ಕಳ ಮೇಲೆ ನಡೆದ ದಾಳಿಯನ್ನು ನೆನಪಿಸಿ ಅಲ್ಲಿನ ಜನರ ಕಣ್ಣೀರು.

2014 ಡಿಸೆಂಬರ್ 16 ರಂದು ತೆಹ್ರೀಕ್ -ಇ- ತಾಲಿಬಾನ್ ಪಾಕಿಸ್ತಾನದ ೯ ಮಂದಿ ಸದಸ್ಯರು ಪಾಕಿಸ್ತಾನದಲ್ಲಿನ ಪೇಷಾವರ ನಗರದ ಆರ್ಮಿ ಪಬ್ಲಿಕ್ ಸ್ಕೂಲ್ ಮೇಲೆ ಭಯೋತ್ಪಾದಕ ದಾಳಿ ನಡೆಸಿದರು. ಅವರು ಶಾಲೆಯನ್ನು ಪ್ರವೇಶಿಸಿ ಶಾಲಾ ಸಿಬ್ಬಂದಿ ಮತ್ತು ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದರು. ೧೩೨ ಮಂದಿ ಶಾಲಾ ಮಕ್ಕಳನ್ನು ಸೇರಿಸಿ ಒಟ್ಟು ೧೪೫ ಜನರನ್ನು ಬಲಿ ತೆಗೆದುಕೊಂಡರು. ರಕ್ಷಣಾ ಕಾರ್ಯಾಚರಣೆಯನ್ನು ಪಾಕಿಸ್ತಾನ ಸೈನ್ಯದ ವಿಶೇಷ ಸೇವೆ ಗುಂಪು ಆರಂಭಿಸಿ ಎಲ್ಲಾ ಏಳು ಭಯೋತ್ಪಾದಕರನ್ನು ಕೊಂದು ೯೬೦ ಮಂದಿ ಜನರನ್ನು ರಕ್ಷಿಸಿದರು. ಮಿಲಿಟರಿ ವಕ್ತಾರ ಮೇಜರ್ ಜನರಲ್ ಅಸಿಮ್ ಬಾಜ್ವಾರವರ ಹೇಳಿಕೆಯ ಪ್ರಕಾರ ಕನಿಷ್ಠ ೧೩೦ ಜನರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ಈ ಹಿಂದೆಂದೂ ಪಾಕಿಸ್ತಾನದಲ್ಲಿ ಈ ರೀತಿಯ ಮಾರಣಾಂತಿಕ ದಾಳಿ ನಡೆದಿಲ್ಲ ಎಂದು ಪರಿಗಣಿಸಲಾಗಿದೆ.

"https://kn.wikipedia.org/w/index.php?title=ಪೇಶಾವರ್&oldid=742523" ಇಂದ ಪಡೆಯಲ್ಪಟ್ಟಿದೆ