ಮಧ್ಯ ಏಷ್ಯಾದಿಂದ(ಮಂಗೋಲಿಯ ಸಾಮ್ರಾಜ್ಯದ ಉಜಬೇಕಿಸ್ತಾನದಿಂದ) ಬಂದ ಮುಸ್ಲಿಂಜಯಶಾಲಿ, ಜಹೀರ್ ಉದ್ -ದಿನ್ ಮಹಮ್ಮದ್ ಬಾಬರ್ (February 23 [O.S. February 14] 1483 — January 5 [O.S. December 26, 1530] 1531) ಹಲವಾರು ಸತತ ಸೋಲಿನಿಂದ ,ಎದೆಗುಂದದೆ ಅಂತಿಮವಾಗಿ ಭಾರತದಲ್ಲಿ ಮುಘಲ್ ಸಾಮ್ರಾಜ್ಯ ಸ್ಥಾಪಿಸಿದನು .https://www.britannica.com/biography/Babur ತನ್ನ ತಂದೆಯ ಮೂಲಕ ತೈಮೂರುವಂಶದ ನೇರಸ್ಥಾನಾಗಿ , ಗೆನ್ಗೀಸ್ ಖಾನ್ ನ ವಂಶಸ್ಥನಾದದ್ದು , ತಾಯಿಯ ಮೂಲಕ .[೧] ಬಾಬರ್ ತನ್ನ ವಂಶ ಪರಂಪರೆಯನ್ನು ಟಿಮುರಿಡ್ ಮತ್ತು ಚಾಘತಯ್ -ಟರ್ಕಿಕ್ ಎಂದು ಗುರುತಿಸಿಕೊಂಡಿದ್ದು,ತನ್ನ ಹುಟ್ಟು ,ವಾತಾವರಣ, ತರಭೇತಿ ಮತ್ತು ಸಂಸ್ಕೃತಿಗಳು ಪೆರ್ಸಿಯನ್ ಸಂಸ್ಕೃತಿ ಯಿಂದ ಬಂದವುಗಳೆಂದು,ಆದುದರಿಂದ ತನ್ನ ವಂಶದವರಿಂದ ಬಂದ ಇವುಗಳನ್ನು ತನ್ನ ಜವಾಬ್ದಾರಿಯಿಂದ ಪೋಷಿಸಬೇಕೆಂದು, ಪೆರ್ಸಿಯನ್ ಸಂಸ್ಕೃತಿಯ ಪ್ರಭಾವ ವನ್ನು ಭಾರತದ ಉಪಖಂಡ ದಲ್ಲಿ ವಿಸ್ತರಿಸಿ , ಬುದ್ಧಿವಂತಿಕೆಯ ಸಾಹಿತ್ಯ , ಕಲೆ , ಮತ್ತು ಚಾರಿತ್ರಿಕ ಫಲಿತಾಂಶದ ಮೂಲಕ ಪರಿಚಯಿಸಲು ಉದ್ಯುಕ್ತನಾದನು.[೨][೩]

ಬಾಬರ್
Mughal Emperor of Asia
al-ṣultānu 'l-ʿazam wa 'l-ḫāqān al-mukkarram
pādshāh-e ghāzī
ಬಾಬರ್‌ನ ಚಿತ್ರ
ರಾಜ್ಯಭಾರ30 April 1526 (OS) — 26 December 1530 (OS)
ಪಟ್ಟಧಾರಣೆNot formally crowned
Chagatay/Persianبابر
ಬಿರುದುಗಳುKing of Farghana (1495-1497), King of Samarkand (1497), King of Kabul (1501-1530)
ಹುಟ್ಟುFebruary 23 [O.S. February 14] 1483
ಹುಟ್ಟುಸ್ಥಳAndijan, Farghana
ಸಾವುJanuary 5 [O.S. December 26, 1530] 1531 (age ೪೭)
ಸಾವಿನ ಸ್ಥಳAgra
ಸಮಾಧಿ ಸ್ಥಳBāgh-e Bābar, Afghanistan
ಉತ್ತರಾಧಿಕಾರಿಹುಮಾಯುನ್
ಪತ್ನಿಯರುʿĀʾisha Ṣultān Begum
Bībī Mubārika Yuṣufzay
Dildār Begum
Gulnār Āghācha
Gulrukh Begum
Maham Begum.
Ma'suma Begum
Nargul Āghācha
Sayyida Afaq
ಸಂತತಿHumāyūn, son
Kāmrān Mirzā, son
Askarī Mirzā, son
Hindal Mirzā, son
Gulbadan Begum, daughter
Fakhru 'n-Nīsā, daughter
Altun Bishik, alleged son
ಸಂತತಿRoyal House of Timur
ವಂಶTimurid
ತಂದೆʿUmar Sheykh Mirzā, ʿAmīr of Farghana
ತಾಯಿQutlaq Nigār Khānum
ಧರ್ಮSunni Islam

ಸ್ಥೂಲ ಅವಲೋಕನ

ಬದಲಾಯಿಸಿ

ಬಾಬರನ ಹೆಸರು

ಬದಲಾಯಿಸಿ

ಜಹೀರ್ ಉದ್ -ದಿನ ಮಹಮ್ಮದ್ ( ಬಿರುದಾಂಕಿತ ಅಲ್ -ಸುಲ್ತಾನು 'ಐ -ʿಅಜಮ್ ವ 'ಐ -ಹಕನ್ ಅಲ್ -ಮುಕ್ಕರ್ರಾಮ್ ಬಾದಶಃ -ಈ ಘಜಿ ),ಆದರೂ ಹೆಚ್ಚಾಗಿ ಬಾಬರ್ ಎಂಬ ಹೆಸರಿನಲ್ಲಿಯೇ ಕರೆಯಲ್ಪಡಲಾಯಿತು. ಸ್ಟೀಫನ್ ಫ್ರೆಡೆರಿಕ್ ಡೇಲ್ ಪ್ರಕಾರ , ಬಾಬರ್ ಎನ್ನುವ ಹೆಸರು ಪೆರ್ಸಿಯನ್ ಶಬ್ದ ಬಾಬ್ರ , ಅಂದರೆ "ಹುಲಿ " ಎಂಬುದಾಗಿದ್ದು,ಈ ಶಬ್ದ ಆಗಾಗ್ಗೆ ಫಿರ್ದವಸಿಸ್ ಶಹನಾಮ [೪][೫] ದಲ್ಲಿ ಕಾಣಿಸಿಕೊಂಡಿದ್ದು, ಸೆಂಟ್ರಲ್ ಏಷಿಯಾದ ಟರ್ಕಿ ಭಾಷೆಯಿಂದ ಪಡೆಯಲಾಗಿದೆ .[೬][೭] ಈ ವಾದವನ್ನು 'ರಾಯಲ್ ಏಷ್ಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟೈನ್ ಮತ್ತು ಐರ್ಲ್ಯಾಂಡ್' ಸಂಸ್ಥೆಯು ಬೆಂಬಲಿಸಿದ್ದು, ಟರ್ಕೋ -ಮೊಂಗೊಲ್ ನ ಹೆಸರು ತೈಮೂರ್ ಸಹ ಈ ರೀತಿಯ ಬದಲಾವಣೆಗೆ ಒಳಗೊಂಡು , ಸಂಸ್ಕೃತ ಶಬ್ದ ಸಿಮರ ("ಕಬ್ಬಿಣ ") ದ ಬದಲಾದ ರೀತಿ *ಸಿಮ್ರ್ ಅಂತಿಮವಾಗಿ ಟರ್ಕಿಯ ಭಾಷೆಯಲ್ಲಿ ತೈಮೂರ್ , -ಯು ಅರ್ ಬದಲಾಗಿ -ಅರ್ ಆಗಿದ್ದ್ದು, ಟರ್ಕಿಷ್ ಸ್ವರದ ಹೊಂದಿಕೆ ಕಾರಣವಾಗಿದೆ. (ಆದುದರಿಂದ ಬಾಬ್ರ ಬಾಬರ್ ).[೮]

" ಆ ಕಾಲದಲ್ಲಿ ಚಘತಾಯ್ ( ಗೆಂಗೀಸ್ ಖಾನ್ ವಂಶಸ್ಥರು )ಬಹಳ ಒರಟರು ಹಾಗು ಸಂಸ್ಕೃತಿ ಹೀನರು (ಬಜರಿ ), ಬದಲಾಗದವರು (ಬಜಾರ್ಗ್ ) ಈಗಿರುವಂತೆ ;ಆದುದರಿಂದ ಅವರಿಗೆ ಜಹೀರ್ -ಉದ್ -ದೀನ್ ಮಹಮ್ಮದ್ ಹೆಸರಿನ ಉಚ್ಚಾರ ಕಷ್ಟವಾಗಿ ,ಈ ಕಾರಣದಿಂದಾಗಿ ಬಾಬರ್ ಹೆಸರನ್ನು ನೀಡಲಾಯಿತು . ಸಾರ್ವಜನಿಕ ಪ್ರಾರ್ಥನೆಗಳಲ್ಲಿ (ಖುತ್ಬ )ಹಾಗು ರಾಜ ಮರ್ಯಾದೆಯ ಕಾರಣದಿಂದ 'ಜಹೀರ್ -ಉದ್ -ದೀನ್ ಬಾಬರ್ ಮಹಮ್ಮದ್ ,' ಎಂದಾಗಿದ್ದು,ತುಂಬಾ ಚೆನ್ನಾಗಿ ಬಾಬರ್ ಪದಿ ಶಾಹ" ಎಂದು ಕರೆಯಲ್ಪಟ್ಟು
—ಬಾಬರನ ಚಿಕ್ಕಪ್ಪ , ಮಿರ್ಜಾ ಮಹಮ್ಮದ್ ಹೈದರ್ . [೯]

ಸತ್ಯವಾದ ವಿಚಾರಗಳ ,ಈ ವಾದದ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ ಡಬ್ಲ್ಯು .ಎಂ . ಥ್ಯಾಕ್ ಸ್ಟನ್ ವಾದದಲ್ಲಿ ಬಾಬ್ರ ಎಂಬ ಹೆಸರಿನಿಂದ ಬಂದುದಲ್ಲವೆಂದು ,ಬದಲಾಗಿ ಇಂಡೋ -ಯುರೋಪಿಯನ್ ಶಬ್ದ ಬೀವರ್ ಎಂಬುದರಿಂದ ಬಂದಿರಬಹುದೆಂದು, ಬಾಹ್ -ಬೋರ್ [೧೦] ಶಬ್ದ ರಚನೆ ಪೆರ್ಸಿಯನ್ ಮತ್ತು ಟರ್ಕಿಗಳೆರಡರಲ್ಲೂ ಇದ್ದು , ರಷ್ಯನ್ ಭಾಷೆಯ ಬೀವರ್ ನಲ್ಲಿಯೂ ಪದಪ್ರಯೋಗವಾಗಿದೆ. (бобр - ಬಾಬ್ರ ).

ಜೀವನ ಚರಿತ್ರೆಯ ಆಧಾರಗಳು/ಮೂಲಗಳು

ಬದಲಾಯಿಸಿ

ಬಾಬರ್ ನ ಜೀವನ ಚರಿತ್ರೆಯ ಮೂಲ ಅವನ ಜೀವನಾಧಾರಿತವಾಗಿದ್ದು, ಬಾಬರ್ ನಿಂದಲೇ ರಚಿಸಲ್ಪಟ್ಟಿದೆ . ಅವನ ನೆನೆಪುಗಳು ಬಾಬರ್ ನಾಮ ಎಂದು ಕರೆಯಲ್ಪಟ್ಟಿದೆ. ಮತ್ತು ಇದು ಇಸ್ಲಾಮಿಕ್ ಸಾಹಿತ್ಯದಲ್ಲಿ ಮೊದಲನೇ ಸತ್ಯವಾದ ಆತ್ಮ ಚರಿತ್ರೆ ಎಂದು ಗುರುತಿಸಲ್ಪಟ್ಟಿದೆ.

ತನ್ನ ಮಾತೃ ಭಾಷೆ ಚಘತಾಯ್ ಟರ್ಕಿಭಾಷೆಯಲ್ಲಿ ಬಾಬರ್ ನಾಮ ಬರೆಯಲ್ಪಟ್ಟಿದೆ. ಪಟ್ಯವು ಪೂರ್ಣ ಪರ್ಷಿಯನ್ ಮಯವಾಗಿದ್ದು, ಅದರ ರಚನೆ, ವ್ಯಾಕರಣ,ಸಾಹಿತ್ಯ ಪರ್ಷಿಯನ್ ಶೈಲಿಯಲ್ಲಿದೆ.[೪] ಬಾಬರ್ ನ ಸುತ್ತಮುತ್ತಲ ವಾತಾವರಣದ ಅತ್ಯಮೂಲ್ಯ ನಿದರ್ಶನ ಇದಾಗಿದೆ.[೧೦]

" ಕೇವಲ ದೂರುವುದಕ್ಕಾಗಿ ನಾನು ಇದನ್ನು ಬರೆದಿಲ್ಲ: ಕೇವಲ ಸತ್ಯವನ್ನಷ್ಟೇ ಬರೆದಿದ್ದೇನೆ: ನನ್ನನ್ನು ನಾನು ಸಮರ್ಥಿಸಿಕೊಳ್ಳಲು ಬರೆದಿಲ್ಲ; ನಿಜವಾಗಿ ಏನಾಗಿದೆ ಅಷ್ಟನ್ನು ಮಾತ್ರ ಬರೆದಿದ್ದೇನೆ. ಈ ಚರಿತ್ರೆಯಲ್ಲಿ ಸತ್ಯವನ್ನು ಮಾತ್ರ ಬರೆದಿದ್ದು,ಪ್ರತಿಯೊಂದೂ ಘಟನೆಯ ವಾಸ್ತವ ಚಿತ್ರಣವನ್ನು ಮಾತ್ರ ಮಾಡಿದ್ದೇನೆ. ಇದರ ಪರಿಣಾಮವಾಗಿ ,ನಾನು ನನ್ನ ತಂದೆಯ ಮತ್ತು ಸಹೋದರನ ಒಳ್ಳೆಯ ಮತ್ತು ಕೆಟ್ಟ ಚಿತ್ರಣಗಳನ್ನು ಯಥಾವತ್ತಾಗಿ ,ಪ್ರತೀ ತಪ್ಪು ಮತ್ತು ಸತ್ಯವನ್ನು ಸಂಬಂಧಿಕರ ಮತ್ತು ಅಪರಿಚಿತರ ಬಗ್ಗೆ ಬರೆದಿದೆ. ' ಓದುಗ' ನನ್ನನ್ನು ಕ್ಷಮಿಸಬೇಕು;'ಕೇಳುಗ' ನನ್ನನ್ನು ಕಷ್ಟಕ್ಕೆ ಸಿಲುಕಿಸಬಾರದು."
ಬಾಬರ್ ನಾಮ [೧೧]

ಮೂಲಗ್ರಂಥದ ಚರಿತ್ರೆ ಮತ್ತು ಭಾಷಾಂತರಗಳು

ಬದಲಾಯಿಸಿ

ಈ ವೃತ್ತಾಂತವು ಮೂಲಕ್ಕಿಂತಲೂ, ಈಗಿನದಕ್ಕಿಂತಲೂ ಹೆಚ್ಚು ವ್ಯಾಪಕವಾಗಿತ್ತು. ವೃತ್ತಾಂತದಲ್ಲಿನ ಬಿಡುವು, ಅದರಲ್ಲಿಯೂ ೧೫೦೮ ರಿಂದ ೧೫೧೯ ರ ನಡುವೆ ಮತ್ತು ೧೫೨೦ ರಿಂದ ೧೫೨೫ ರ ನಡುವೆ, ಬಿರುಗಾಳಿ /ಪ್ರವಾಹದಲ್ಲಿನ ಮಧ್ಯದ ಫಲಿತಾಂಶದಂತೆ ಇತ್ತು. ಬಾಬರನು ತಾನು ಸಾಯುವ ಒಂದು ವರ್ಷದ ಮುಂಚೆ ತನ್ನ ಆತ್ಮ ಚರಿತ್ರೆಯ ಕೆಲಸವನ್ನು ಮತ್ತೊಮ್ಮೆ ತಿದ್ದಲು ೧೫೨೮-೨೯ ರಲ್ಲಿ ಪ್ರಯತ್ನಿಸಿದನು. ಬಾಬರನ ಮಗ ಮತ್ತು ಅವನ ನಂತರದ ರಾಜ ಹುಮಾಯೂನ್ ನಿಗೆ , ಚಘತಯ್ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗೂ ತಂದೆಯ ಆತ್ಮ ಚರಿತ್ರೆಯನ್ನು ಓದಿ ತಿಳಿದಿದ್ದನು. ಬಾಬರನು ತಾಳೆ ಹಾಕಿ ನೋಡಿ ,ಭಾಷೆ,ಹಾಗು ಜೀವನಶೈಲಿಯಲ್ಲಿ ತಿದ್ದುಪಡಿ ಹಾಗು ಬದಲಾವಣೆಗಳನ್ನು ಮಾಡಿದನು. ಹಾಗು ಹುಮಾಯೂನನು ೧೫೫೬ ರಲ್ಲಿ ನಿಧನ ಹೊಂದಿದಾಗ, ಬಾಬರನ ಮೊಮ್ಮಗ ಅಕ್ಬರ್‌ತನ್ನ ೧೪ ನೇ ವಯಸ್ಸಿನಲ್ಲಿ ರಾಜಾಧಿಕಾರಕ್ಕೆ(ಸಿಂಹಾಸನವೇರಿದನು) ಬಂದನು. ,ಈ ಯುವ ರಾಜನನ್ನು,ರಾಜ ಪ್ರತಿನಿಧಿ ; ಬೈರಾಮ್ ಖಾನ ನು ಜಾಗೃತಿ ಗೊಳಿಸಿದನು. ಬೈರಾಮ್ ಖಾನನು ಇರಾನ್‌ದೇಶದ ರಾಜನೀತಿ ನಿಪುಣ,ಅವರ ತಂದೆ ಹಾಗೂ ತಾತ ಬಾಬರ್ ನ ಜೊತೆಗೆ ಸೇವೆಯಲ್ಲಿದ್ದರು. ಬೈರಾಮ್ ಖಾನ್ ,ತಾನೇ ಪರ್ಷಿಯನ್ ಭಾಷೆಯಲ್ಲಿ ಹಾಗು ಚಘತಯ್ ಅಲ್ಲಿ ಕವನಗಳನ್ನು ಬರೆದನು. ಅವನ ಮಗ , ಅಬ್ದುಲ್ -ರಹೀಂ ನು , ಚಘತಯ್ , ಉರ್ದು , ಮತ್ತು ಪರ್ಷಿಯನ್ ಭಾಷೆಗಳಲ್ಲಿ ನಿರರ್ಗಳವಾಗಿ ರಚಿಸುವವನಾಗಿದ್ದನು. ಬಾಬರ್ ನ ಆತ್ಮ ಕಥೆಯನ್ನು , ಪರ್ಷಿಯನ್ ಭಾಷೆಗೆ ಬಾಬರ್ ನಾಮ ಎಂದು ತರ್ಜುಮೆ ಮಾಡಿದನು. ೧೬೨೮ ಮತ್ತು ೧೬೩೮ ರ ಕಾಲದಲ್ಲಿ ಶಾ ಜಹಂಗೀರ್ ನ ಅವಧಿಯಲ್ಲಿ,ಚಘತಯ್ ಮೂಲವನ್ನು ,ಕಡೇಯದಾಗಿ ಇಂಪೀರಿಯಲ್ ಗ್ರಂಥಾಲಯದಲ್ಲಿ ನೋಡಲಾಯಿತು.

ಜೀವನ ಚರಿತ್ರೆ

ಬದಲಾಯಿಸಿ

ಹಿನ್ನೆಲೆ

ಬದಲಾಯಿಸಿ
 
ಬಾಬರನ ವಂಶವೃಕ್ಷ

ಇಂದಿನ ಉಜ್ಬೇಕಿಸ್ತಾನದ ಫೆರ್ಗನ ಕಣಿವೆಯ ,ಅಂದಿಜಾನ್‌ನಗರದಲ್ಲಿ ಕಾಡುಗೊಲ್ಲರ ವಂಶದಲ್ಲಿ ಬಾಬರನು ಜನಿಸಿದನು.February 23 [O.S. February 14] 1483[೧೨] ಫೆರ್ಗನ ಕಣಿವೆಯ ರಾಜ ʿಓಮರ್ ಶೇಖ್ ಮಿರ್ಜಾ ,[೧೩] ನ ಹಿರಿಯ ಮಗ ಬಾಬರನಾಗಿದ್ದು, ಹೆಂಡತಿ ,ಕುತ್ಲುಕ್ ನೇಗರ್ ಖಾನುಂ , ಮೊಘುಲಿಸ್ಥಾನದ ರಾಜ, ಯೋನುಸ್ ಖಾನ್‌ನ ಮಗಳಾಗಿದ್ದಾಳೆ.

ಬಾಬರ್ ನು ಬರ್ಲಾಸ್‌ಬುಡಕಟ್ಟು ಜನಾಂಗದ ಮೊಂಗೊಲ್ ನವನಾದರೂ,ಇವನ ಬುಡಕಟ್ಟು ಟರ್ಕಿಕ್ [೧೪] ಮತ್ತು ಪರ್ಷಿಯನ್ ಸಂಸ್ಕೃತಿ ಅಪ್ಪಿಕೊಂಡಿದ್ದು,[೨][೧೫][೧೬] , ಇಸ್ಲಾಂಗೆ ಮತಾಂತರಗೊಂಡು, ತುರ್ಕಿಸ್ತಾನ್ ಮತ್ತು ಕ್ಹೋರಸನ್‌ನಲ್ಲಿ ನೆಲೆಸಿದನು. ಚಘತೈ ಭಾಷೆಯು ಇವನ ಮಾತೃ ಭಾಷೆಯಾಗಿತ್ತು. ( ಬಾಬರ್ ಗೆ ತುರ್ಕಿ , "ತುರ್ಕಿಕ್ " ಎಂದು ಗೊತ್ತಿತ್ತು.) ಜೊತೆಗೆ ಪರ್ಷಿಯನ್ ಮನೆಯಲ್ಲಿಯೂ ಇದ್ದನು. ತೈಮುರಿದ್ ಎಲೈಟ್ [೧೭]ಭಾಷಾ ನೀತಿಯಂತೆ .

ಆದುದರಿಂದ ಬಾಬರನು , ಮೊಂಗೊಲ್ ನವನಾದರೂ, (ಅಥವಾ ಮೊಘಲ್ ಪರ್ಷಿಯನ್ ದಲ್ಲಿ ),ಹೆಚ್ಚಿನ ಬೆಂಬಲವನ್ನು ತುರ್ಕಿಕ್ ಮತ್ತು ಇರಾನಿಯನ್ , ಸೆಂಟ್ರಲ್ ಏಷಿಯಾದಿಂದ ಪಡೆದಿದ್ದು,ಅವನ ಸೇನೆಯು ವಿವಿಧ ಬಗೆಯ ಸಾಂಪ್ರದಾಯಿಕ ಶ್ರೇಷ್ಟತೆಯನ್ನು ಹೊಂದಿದ್ದು,ಅವರಲ್ಲಿ ಪರ್ಷಿಯನ್ನರು (ತಜಿಕ್ ಗಳು ಅಥವಾ ಸರ್ಟ್ಸ್ ಗಳು , ಬಾಬರ್ ನಿಂದ ಕರೆಯಲ್ಪಟ್ಟ ಹಾಗೆ ),[೧೦] ಪಷ್ಟುನ್ಸ್ ,ಮತ್ತು ಅರಬ್ಬರು ಜೊತೆಗೆ ಬರ್ಲಾಸ್ ಮತ್ತು ಸೆಂಟ್ರಲ್ ಏಷಿಯಾ [೧೮] ದಿಂದ ಚಘತಾಯಿಡ್ ತುರ್ಕೋ -ಮೊಂಗೋಲರು ಇದ್ದರು. ಬಾಬರ್ ನ ಸೇನೆಯಲ್ಲಿ ಕಿಜಿಲಬಾಶ್ ಹೋರಾಟಗಾರರು ಸೇರಿದ್ದು,ಧಾರ್ಮಿಕ ಸೇನಾನಿ ಶಿಯಾಸ್ ಸುಫಿಸ್ ,ಸಫಾವಿದ್ ಪರ್ಶಿಯದಿಂದ ಬಂದವನಾಗಿದ್ದು,ತದನಂತರದ ದಿನಗಳಲ್ಲಿ, ಮುಘಲ್ ಆಸ್ಥಾನದಲ್ಲಿ ಹೆಚ್ಚು ಹೆಸರುವಾಸಿಯಾದನು.

ಬಾಬರ್ ಹೆಚ್ಚು ಬಲಶಾಲಿಯಾಗಿದ್ದು,ಭೌತಿಕವಾಗಿ ಧೃಡವಾಗಿದ್ದನು. ತನ್ನ ದೈಹಿಕ ಅಭ್ಯಾಸದ ಸಮಯದಲ್ಲಿ, ವ್ಯಾಯಾಮಕ್ಕಾಗಿ ಎರಡೂ ತೋಳುಗಳ ಮೇಲೆ ಇಬ್ಬರನ್ನು ಕೂರಿಸಿಕೊಂಡು ಓಡುತ್ತಾ ಬೆಟ್ಟವನ್ನು ಹತ್ತುವವನಾಗಿದ್ದನು. ಕಥೆಗಳು ಹೇಳುವ ಹಾಗೆ , ಬಾಬರ್ ಮುಖ್ಯನದಿ ಗಳನ್ನು ಈಜಬಲ್ಲವನಾಗಿದ್ದು, ಉತ್ತರ ಭಾರತದ [೧೯] ಗಂಗಾನದಿಯನ್ನು ಎರಡು ಬಾರಿ ಈಜಿದ್ದನು.

ಅವನ ಭಾವ ತೀವ್ರತೆಯೂ ತೀಕ್ಷ್ಣವಾಗಿತ್ತು. ತನ್ನ ಮೊದಲನೇ ಮದುವೆಯಾಗಿದ್ದ ಆಯಿಶ -ಸುಲ್ತಾನ್ - ಬೇಗಂ ಜೊತೆ ,"ತುಂಬಾ ನಾಚಿಕೆ" ಸ್ವಭಾವದವನಾಗಿದ್ದ.ನಂತರದ ದಿನಗಳಲ್ಲಿ ,ಅವಳ ಮೇಲಿನ ತನ್ನ ಪ್ರೀತಿಯನ್ನು ಕಳೆದುಕೊಂಡ.[೨೦]

ಬಾಬರ್ ಕಟ್ಟಾ ಸುನ್ನಿಸಂಪ್ರದಾಯದ ಮುಸ್ಲಿಂ ಆಗಿದ್ದು,ನೈಮಿತ್ತಿಕವಾಗಿ ಶಿಯಾ ಮುಸ್ಲಿಮರ ವಿಷಯಾಂತರ ಹೇಸಿಗೆಯಿಂದಾಗಿ ಧ್ವನಿಯೆತ್ತುತ್ತಿದ್ದ . ಅವನ ಜೀವನದಲ್ಲಿ ಧರ್ಮವು ಕೇಂದ್ರ ಬಿಂದುವಾಗಿದ್ದು,ಬಾಬರ್ ಮತ್ತು ಅವನ ನಂತರದ ರಾಜರು ಇಸ್ಲಾಂ ಅನ್ನು ಗಂಭೀರವಾಗಿ ಪರಿಗಣಿಸಿರಲ್ಲಿಲ್ಲ. ಅವನ ಸಮಕಾಲೀನರ ಒಂದು ಕವನದ ಬಗ್ಗೆ ಒಂದು ಸಾಲನ್ನು ತೆಗೆದುಕೊಂಡು, " "ನಾನು ಕುಡುಕ ಅಧಿಕಾರಿ, ನಾನು ಶಾಂತಚಿತ್ತನಾಗಿದ್ದಾಗ ನನ್ನನ್ನು ಶಿಕ್ಷಿಸಿ." ಎಂದು ಹೇಳುತ್ತಾನೆ. ಬಾಬರ್ ನ ಸಂಬಂಧಿ ,ಅವನ ಚಿಕ್ಕಪ್ಪರಲ್ಲೊಬ್ಬ "ದುರ್ಗುಣ ಮತ್ತು ವ್ಯಭಿಚಾರಿ ಗುಣಗಳಿಗೆ , ಬಹಳವಾಗಿ ದಾಸನಾಗಿದ್ದ. ಅವನ ಸಾಮ್ರಾಜ್ಯದಲ್ಲಿ , ಎಲ್ಲೆಲ್ಲಿ ಗಡ್ದವಿಲ್ಲದವರು, ಶಾಂತ ಯುವಕರನ್ನು ,ತನ್ನ ಕಡೆಗೆ ಸೆಳೆಯಲು ಏನು ಬೇಕಾದರೂ ಮಾಡಬಲ್ಲವನಾಗಿದ್ದನು. ಇವನ ಕಾಲಾವಧಿಯಲ್ಲಿನ ಈ ಮಾರ್ಗ /ನೀತಿ ಎಲ್ಲಾ ಕಡೆಗೆ ಹರಡಿತು.ಇದನ್ನು ಒಂದು ಪವಿತ್ರ ಕೆಲಸ ಎಂಬಂತೆ ಮಾಡಿದನು."

 
ಬಾಬರ್ ನಾಮದ ಒಂದು ದೃಶ್ಯ .

ತಾನು ಸಾಯುವ ಎರಡು ವರ್ಷ ಮುಂಚೆ ಕುಡಿಯುವುದನ್ನು ಬಿಟ್ಟನು.ಹಾಗೆಯೇ ಅದನ್ನು ತನ್ನ ಆಸ್ಥಾನದಲ್ಲಿನ ಎಲ್ಲರೂ ಪಾಲಿಸುವಂತೆ ಆದೇಶಿಸಿದನು. .ಆದರೆ ಮಾದಕ ದ್ರವ್ಯಗಳ ಸೇವನೆಯನ್ನು ಮಾತ್ರ ಬಿಟ್ಟಿರಲ್ಲಿಲ್ಲ, ಮತ್ತು ತನ್ನ ಹಾಸ್ಯದ ಪ್ರವೃತ್ತಿಯನ್ನೂ ಬಿಡಲ್ಲಿಲ್ಲ. ಎಂದು ಅವನು ಬರೆದ :[೨೧]

Everyone regrets drinking and swears an oath [of abstinence]; I swore the oath and regret that.

ಸೈನಿಕ ಜೀವನ /ಸೈನಿಕ ಆಡಳಿತ

ಬದಲಾಯಿಸಿ

೧೪೯೫ ರಲ್ಲಿ ,೧೨ ವರ್ಷದವನಾಗಿದ್ದಾಗ, ಬಾಬರ್ ತನ್ನ ಮೊದಲ ಅಧಿಕಾರವನ್ನು ಹೊಂದಿದನು.ತನ್ನ ತಂದೆಯ ನಂತರ ಫಾರ್ಘನ ದೇಶದ ರಾಜನಾದನು.ಅದು ಈಗಿನ ಉಜ್ಬೇಕಿಸ್ತಾನ್ .[೨೨] ಬಾಬರನ ಚಿಕ್ಕಪ್ಪಂದಿರು ಯಾವುದೇ ಮುಲಾಜಿಲ್ಲದೆ,ಬಾಬರನ ಅಧಿಕಾರವನ್ನು ಕಿತ್ತೊಗೆಯಲು ಪ್ರಯತ್ನಿಸುತ್ತಲೇ ಇದ್ದರು.ಹಾಗೂ ಹಲವಾರು ಪ್ರಾಂತ್ಯಗಳನ್ನು ಕಸಿದುಕೊಳ್ಳಲು ಪ್ರಯತ್ನ ನಡದೇ ಇತ್ತು.[೨೩] ಈ ಕಾರಣದಿಂದ , ಬಾಬರ್ ತನ್ನ ಜೀವನದ ಬಹುಕಾಲವನ್ನು ,ಆಶ್ರಯವಿಲ್ಲದೆ ದೇಶಭ್ರಷ್ಟ ನಾಗಿ, ಕಾಲ ಕಳೆಯಬೇಕಾಯಿತು.ಆ ಸಮಯದಲ್ಲಿ ಅವನ ಸ್ನೇಹಿತರು ಮತ್ತು ರೈತರುಆಶ್ರಯದಾತರಾದರು. ೧೪೯೭ ರಲ್ಲಿ , ಬಾಬರ್ ಸಮರ್ಕಂಡ್ ನ ಉಜ್ಬೆಕ್ ನಗರವನ್ನು ಆಕ್ರಮಿಸಿದನು.೭ ತಿಂಗಳ ಹೋರಾಟದ ನಂತರ ನಗರವನ್ನು ಆಕ್ರಮಿಸಿ ಗೆದ್ದನು.[೨೪] ಆ ಸಮಯದಲ್ಲಿ ,ಕೆಲವು ಶ್ರೀಮಂತ ಬಂಡಾಯಗಾರರು,ವಾಪಸ್ಸು ಬರುವ ಸಂದರ್ಭದಲ್ಲಿ ಸುಮಾರು ೩೫೦ ಕಿಲೋಮೀಟರುಗಳ (೨೦೦ ಮೈಲಿಗಳು )ದೂರದಲ್ಲಿ ಫಾರ್ಘನ [೨೪] ದಲ್ಲಿ ದರೋಡೆಯಾಗಿ, ಅದನ್ನು ಪುನರ್ಪಡೆಯುವ ನಿಟ್ಟಿನಲ್ಲಿ ಹೋಗುತ್ತಿದ್ದಾಗ , ಬಾಬರ್ ನ ಸೇನೆ ಸಮರ್ಕಂಡ್ ನಲ್ಲಿ ಅನಾಥವಾಗಿ, ಸಮರ್ಕಂಡ್ ನಲ್ಲಿಯೂ ಇಲ್ಲದೆ, ಫೆರ್ಗನದಲ್ಲಿಯೂ ಇರದಂತೆ ಆಯಿತು.

 
1501 ರಲ್ಲಿ , ಸಮರ್ಕಂಡ್ ನಲ್ಲಿ ,ಬಾಬರನನ್ನು ಸೋಲಿಸಿದ ಮುಹಮ್ಮದ್ ಶಾಯ್ಬನಿಯ ಭಾವಚಿತ್ರ

೧೫೦೧ ರ ಹೊತ್ತಿಗೆ,ಮತ್ತೊಮ್ಮೆ ಸಮರ್ಕಂಡ್ ಮೇಲೆ ಹಿಡಿತ ಸಾಧಿಸಲು ಯತ್ನಿಸಿ,ತದನಂತರದಲ್ಲೇ ತನ್ನ ಶತ್ರು,ಮಹಮ್ಮದ್ ಶಯಬಾನಿ ಉಜ್ಬೇಕ್ಸ್‌ನ ,ಖಾನ್ ನ ಕೈಯಲ್ಲಿ ಪರಾಜಿತಗೊಂಡನು.[೨೪][೨೫] ಅವನ ಜೀವನದಲ್ಲಿ ಮನಸ್ಸಿಗೆ ಇಷ್ಟವಿಲ್ಲದೆ, ಸಮರ್ಕಂಡ್ ಅನ್ನು ಮತ್ತೆ ಕಳೆದುಕೊಂಡನು. ಫೆರ್ಗನದಿಂದ ತನ್ನ ಕೆಲವೇ ಕೆಲವು ಹಿಂಬಾಲಕರೊಡನೆ ತಪ್ಪಿಸಿಕೊಂಡು ,೩ ವರ್ಷಗಳ ಕಾಲ ಬಾಬರನು ತನ್ನ ಬಲಿಷ್ಠ ಸೈನ್ಯವನ್ನು ಕಟ್ಟಲು ನಿರತನಾದನು.ಸೈನ್ಯದಲ್ಲಿ ಬದಕ್ಷಾನ್ ನ ಟಜಿಕ್ಸ್ ಗೆ ಹೆಚ್ಚು ಆದ್ಯತೆ ನೀಡಿ ಸೇರಿಸಿಕೊಂಡನು. ೧೫೦೪ ರಲ್ಲಿ , ಹಿಂದೂ ಕುಶ್‌ಹಿಮದ ಬೆಟ್ಟವನ್ನು ದಾಟಿ ಆರ್ ಗುಂಡೀಸ್‌ನ ಕಾಬುಲ್ [೨೪] ಅನ್ನು ಆಕ್ರಮಿಸಿಕೊಂಡನು. ಕಂದಹಾರ್‌ಗೆ ಹಿಮ್ಮೆಟ್ಟುವಂತೆ ಮಾಡಿದನು. ಈ ಒಂದು ನಡೆಯಿಂದ ,ಸಂಪದ್ಭರಿತ ರಾಜ್ಯವನ್ನು ಪಡೆದಂತಾಗಿ,ತನ್ನ ಅದೃಷ್ಟವನ್ನು ಮತ್ತೆ ಕಟ್ಟಿಕೊಂಡು,ಬಾದ್ ಶಾ ಎನ್ನುವ ಬಿರುದನ್ನೂ ಪಡೆದನು. ಮುಂದಿನ ದಿನಗಳಲ್ಲಿ , ಬಾಬರ್ ದೂರದ ಸಂಬಂಧಿ ಟೈಮುರಿಡ್ಪ್ರಾಚೀನ ನಗರಗಳ ಹುಸೇನ್ ಬೈಖಾರ ಜೊತೆ, ಹೊಂದಾಣಿಕೆ ಮಾಡಿಕೊಂಡು , ಉಸುರ್ಪೆರ್ ಮಹಮ್ಮದ್ ಶಾಯ್ಬಾನಿಯ [೨೬] ವಿರುದ್ಧ ನಿಂತನು. ಆದರೆ, ಹುಸೇನ್ ಬೈಖಾರನ ಸಾವಿನಿಂದಾಗಿ ೧೫೦೬ ರಲ್ಲಿ ಈ ಪ್ರಯತ್ನ ತಡವಾಯಿತು.. ಬದಲಾಗಿ ಬಾಬರನು ಹೆರಾತ್ ನಗರವನ್ನು ಆಕ್ರಮಿಸಿ,ಎರಡು ತಿಂಗಳು ಅಲ್ಲಿ ಕಾಲ ಕಳೆದು ,ಮೂಲಭೂತ ಅವಶ್ಯಕತೆಗಳ ಕುಂದುಕೊರತೆಗಳನ್ನು ಎದುರಿಸಲಾರದೆ ಬಲವಂತವಾಗಿ ಸ್ಥಳ ಬಿಡಬೇಕಾಯಿತು.[೨೬] ಆದಾಗ್ಯೂ ,ಹೆರಾತ್ ನ ಬುದ್ಧಿವಂತರ ಸಮೃದ್ಧಿ ,ಈ ಬಗ್ಗೆ ಹೇಳುತ್ತಾ, "ಕಲಿತವರು ಮತ್ತು ಅರಿತ ಮಂದಿ/ಜನಗಳಿಂದ ತುಂಬಿದೆ."[೨೭] ಎಂದು ಆಶ್ಚರ್ಯಭರಿತನಾಗುತ್ತಾನೆ.ಉಜ್ಬೆಕ್ ಕವಿ ಮೀರ್ ಅಲಿ ಶಿರ್ ನವಾಯಿ ಜೊತೆಗೆ ಸೇರಿ, ಚಗತೈ ಭಾಷೆಯನ್ನು ಸಾಹಿತ್ಯ ಭಾಷೆಯನ್ನಾಗಿ ಅಭಿವೃದ್ಧಿ ಪಡಿಸುವ ಅವನ ಕೆಲಸಗಳನ್ನು ಪ್ರೋತ್ಸಾಹಿಸುವುದರಲ್ಲಿ ನಿರತನಾಗುತ್ತಾನೆ. ನವಾಯಿಸ್ ನ ಭಾಷಾ ಪ್ರೌಢಿಮೆಯಿಂದಾಗಿ,ಅದರ ಉಪಯೋಗವನ್ನು ಕೊಂಡುಕೊಳ್ಳಲು ,[೨೮] ಬಾಬರ್, ಬಾಬರ್ ನಾಮ ದ ತನ್ನ ಜೀವನ ಚರಿತ್ರೆಯಲ್ಲಿ ಬಳಸಿಕೊಳ್ಳಲು ಇಚ್ಚಿಸಿರಬಹುದು.

ಅವನ ಮನದಲ್ಲಿದ್ದ ಕ್ರಾಂತಿಕಾರಿ ಗುಣಗಳ ಪ್ರೇರೇಪಣೆಯಿಂದಾಗಿ, ಹೆರಾತ್‌ನಿಂದ ಕಾಬುಲ್ ಗೆ ಹಿಂತಿರುಗುವಂತೆ ಮಾಡಿತು. ಆ ಸಂದರ್ಭವನ್ನು ಬಿಟ್ಟು ಇನ್ನುಳಿದಂತೆ,ಎರಡು ವರ್ಷಗಳ ನಂತರ ,ಅವನ ಸೈನ್ಯದ ಕೆಲವು ಮುಖ್ಯಸ್ಥರ ಕ್ರಾಂತಿಯಿಂದ, ಕಾಬುಲಿನಿಂದ ಹೊರಗೆ ದಬ್ಬಲಾಯಿತು. ಕೇವಲ ಕೆಲವರಿಂದ ಮತ್ತೆ ತಪ್ಪಿಸಿಕೊಂಡು , ಬಾಬರ್ ಮತ್ತೊಮ್ಮೆ ನಗರಕ್ಕೆ ವಾಪಸ್ಸಾಗಿ , ಕಾಬುಲನ್ನು ಮತ್ತೆ ಆಕ್ರಮಿಸಿಕೊಂಡು ,ಮತ್ತೊಮ್ಮೆ ತನ್ನ ಶತ್ರುಗಳ ಸ್ವಾಮಿಭಕ್ತಿಯನ್ನು ಪಡೆದನು. ಮಹಮ್ಮದ್ ಶಾಯ್ಬನಿಯನ್ನು ಇಸ್ಮಾಯಿಲ್ - Iಸೋಲಿಸಿ ಸಾಯಿಸಿದನು. ಸಫಾವಿದ್ ಪರ್ಷಿಯಾದರಾಜ ೧೫೧೦,[೨೯] ರಲ್ಲಿ ಬಾಬರ್ ನೊಂದಿಗೆ ಸೇರಿ, ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ವಂಶಜರ ಟೈಮುರಿಡ್ ಪ್ರಾಂತ್ಯಗಳನ್ನು ಪುನರ್ವಶಪಡಿಸಿಕೊಳ್ಳಲು ಪ್ರಯತ್ನಿಸಿದನು. ಮುಂದಿನ ಕೆಲವು ವರ್ಷಗಳಲ್ಲಿ , ಬಾಬರ್ ಮತ್ತು ಶಾ -ಇಸ್ಮಾಯಿಲ್ - I ಜೊತೆಗೂಡಿ ಕೇಂದ್ರ ಏಷಿಯಾದ ಕೆಲವು ಭಾಗಗಳನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದರು. ಇಸ್ಮಾಯಿಲ್ ನ ಸಹಾಯಕ್ಕೆ ಪ್ರತಿಯಾಗಿ , ಬಾಬರ್ ಸಫಾವಿದ್ಸ್ ಗೆ ತನ್ನ ಮತ್ತು ತನ್ನ (ಅನುಯಾಯಿಗಳ) ತನ್ನವರ /ಸುಜೆರೈನ್ ರಾಜನಾಗಿ ಅಧಿಕಾರ ಮಾಡಲು ಬಿಟ್ಟುಕೊಟ್ಟನು.[೩೦] ಇದಕ್ಕೆ ಪ್ರತಿಯಾಗಿ ,' ಶಾ - ಇಸ್ಮಾಯಿಲ್ ' ಬಾಬರ್ ಜೊತೆ ಮತ್ತೆ ಒಂದಾಗಿ ,ಇತ್ತೀಚೆಗೆ ನಿಧನರಾದ ಶಾಯ್ಬನಿಯ [೩೧] ಬಲವಂತದ ಮದುವೆಗೆ ಪ್ರಯತ್ನಿಸಿದ್ದವರನ್ನು ತಪ್ಪಿಸಿ, ಬಾಬರನಿಗೆ ತನ್ನ ತಂಗಿ 'ಖಾನ್ ಜಡಾ'ಳನ್ನು ಕೊಟ್ಟು ಮದುವೆ ಮಾಡಿದ. ಇಸ್ಮಾಯಿಲ್ ನು , ಬಾಬರ್ ನಿಗೆ ಹೆಚ್ಚಿನ ಆಸ್ತಿಯನ್ನು ,ಅದ್ದೂರಿ ವಸ್ತುಗಳನ್ನು ,ಮತ್ತು ಸೈನಿಕರನ್ನು ನೀಡಿದನು. ಇದಕ್ಕೆ ಬಾಬರ್ ಪ್ರತಿಕ್ರಿಯಿಸಿ, ಶಿಯಾ ಮುಸ್ಲಿಂಮರ [ಸೂಕ್ತ ಉಲ್ಲೇಖನ ಬೇಕು] ದಿರಿಸು ಮತ್ತು ಸಂಪ್ರದಾಯಗಳನ್ನು ಅನುಸರಿಸಿದನು. ಶಿಯಾ ಇಸ್ಲಾಂ ನ ಪಾಲಕನಾಗಿ ಪರ್ಷಿಯಾದ ಶಾ , ಇಮಾಂ ಮುಸ ಅಲ್ -ಕಜಿಂ ನ ವಂಶದವನಾದನು. ಇವನು ಏಳನೆಯ ಶಿಯಾ ಇಮಾಂ . ನಾಣ್ಯಗಳನ್ನು ಇಸ್ಮಾಯಿಲ್ ಹೆಸರಿನಲ್ಲಿ ಮುದ್ರಿಸಬೇಕಾಗಿತ್ತು.ಮಸೀದಿಯ ಖುತ್ಬವನ್ನು ಸಹ ಅವನ ಹೆಸರಿನಲ್ಲಿ ಓದಬೇಕಾಗಿತ್ತು. ಇದರ ಪರಿಣಾಮವಾಗಿ , ಬಾಬರ್ ಸಮರ್ಕಂಡ್ ಅನ್ನು ತನ್ನ ಸಾಮಂತ ಪ್ರಾಂತ್ಯವನ್ನಾಗಿ 'ಪರ್ಷಿಯನ್ ಶಾ' ಗೆ , ಕಾಬುಲ್ ನಲ್ಲಿದ್ದರೂ,ನಾಣ್ಯಗಳು ಮತ್ತು ಖುತ್ಬ ಬಾಬರ್ ನ ಹೆಸರಿನಲ್ಲೇ ಉಳಿಯಿತು.

ಉಜ್ಬೇಗ್ಸ್ಗಿಂತ ವಿಭಿನ್ನವಾಗಿ, ಬಾಬರ್ ಟೈಮುರಿಡ್ನಾಗಿ ಹೆಚ್ಚು ನ್ಯಾಯತೆ ಹೊಂದಿದ್ದರಿಂದ ಮತ್ತು ಇದರ ಸಹಾಯದಿಂದ ,ಬಾಬರನು ಬುಖರದತ್ತ ಪ್ರಯಾಣಿಸಿದ್ದು,ಆತನ ಸೈನ್ಯವನ್ನು ವಿಮೋಚಕರಾಗಿ ಸಹಜವಾಗಿ ಕಂಡರು. ನಗರ ಮತ್ತು ಹಳ್ಳಿಗಳು ಖಾಲಿಯಾಗಿ ಅವನಿಗೆ ಅಭಿನಂದನೆಯನ್ನು ಸಲ್ಲಿಸಲು ಹಾಗು ಸೈನಿಕರಿಗೆ ಆಹಾರವನ್ನು ಒದಗಿಸಲು ನೇರವಾಗಿ ನಿಂತರು. ಇನ್ನು ಮುಂದೆ ಅಗತ್ಯವಿಲ್ಲವೆಂದು ಪರಿಗಣಿಸಿ , ಬಾಬರ್ ಪರ್ಷಿಯನ್ ಸಹಾಯವನ್ನು ನಿರಾಕರಿಸಿದನು. ೧೦ ವರ್ಷಗಳ ಗೈರು ಹಾಜರಿಯ ನಂತರ, ಅಕ್ಟೋಬರ್ ೧೫೧೧ ರಲ್ಲಿ ಬಾಬರ್ ಸಮರ್ಕಂಡ್ ಗೆ ಗೆಲುವಿನ ಪುನರ್ಪ್ರವೇಶವನ್ನು ಮಾಡಿದನು. ಬಜಾರುಗಳಲ್ಲಿ ಚಿನ್ನದ ನಾಣ್ಯ ತುಂಬಿ ತುಳುಕಾಡುತ್ತಿತ್ತು, ವಿಮೋಚಕನನ್ನು ಸ್ವಾಗತಿಸಲು ಮತ್ತೆ ಹಳ್ಳಿ ಮತ್ತು ನಗರಗಳು ಖಾಲಿಯಾದವು. ಶಿಯಾದಂತೆ ಬಟ್ಟೆ ತೊಟ್ಟ ಬಾಬರ್,ಸುನ್ನಿಸ್ ಗಳ ಸಮೂಹದಲ್ಲಿ ಧೃಡವಾಗಿ ನಿಂತಿದ್ದು, ಅವನ ಗೆಲುವನ್ನು ಅಭಿನಂಧಿಸಲು ಸೇರಿದ್ದರು.[ಸೂಕ್ತ ಉಲ್ಲೇಖನ ಬೇಕು] ಮೂಲ ನಂಬಿಕೆಯೆಂದರೆ , ಪರ್ಷಿಯನ್ ಉಗ್ರಾಣದಿಂದ ಬರುತ್ತಿದ್ದ ಕೆಲಸವನ್ನು ತಡೆದು,'ಶಿ' ಇಸಂ ಆನ್ನು ಪ್ರದರ್ಶಿಸುವುದೇ ಆಗಿತ್ತು. ನಿಜವಾಗಿಯೂ ಇದು ಒಂದು ಆಟವೇ ಆಗಿತ್ತು, ಈ ಸಮಸ್ಯೆಯನ್ನು ಬಿಡಿಸುವುದು ಬುದ್ಧಿವಂತಿಕೆಯೆಂದು ಬಾಬರ್ ತಿಳಿದಿರಲ್ಲಿಲ್ಲ. ಅವನ ಚಿಕ್ಕಪ್ಪ ಹೈದರ್ ಬರೆದ ಹಾಗೆ , ಉಜ್ಬೇಕ್ಕ್ರಿಗೆ ಬಾಬರ್ ಇನ್ನೂ ಹೆದರಿಕೊಂಡಿದ್ದು, ಪರ್ಷಿಯನ್ ಸಹಾಯವನ್ನು ನಿರಾಕರಿಸಿದನು. ಶಿಯಾದ ಪರ್ಷಿಯನ್ ಶಾ ಜೊತೆಗೆ ,ಬಾಬರ್ ಸಹಕಾರವನ್ನು ನೀಡುವುದನ್ನು ಬಿಡಲ್ಲಿಲ್ಲ. ಇದಕ್ಕೆ ಫಲವಾಗಿ ಜನಪ್ರಿಯತೆಯ ಒಪ್ಪಿಗೆಯಿಲ್ಲದೆ, ನಗರವನ್ನು ೮ ತಿಂಗಳ ನಂತರ ಉಜ್ಬೇಗ್ಸ್ ರು ಪುನರಾಕ್ರಮಿಸಿದರು.

ಉತ್ತರ ಭಾರತದ ಆಕ್ರಮಣ

ಬದಲಾಯಿಸಿ

ಸಿಂಹಾವಲೋಕನ ಮಾಡಿ ಬರೆದಾಗ , ಬಾಬರ್ ಪ್ರಸ್ತಾಪಿಸಿದಂತೆ ಸಮರ್ಕಂಡ್ ಅನ್ನು ಪಡೆಯುವಲ್ಲಿ ಆದ ಸೋಲು,'ಅಲ್ಲಾ'ನು ಅವನ ಮೇಲೆ ತೋರಿದ ಮಹಾನ್ ಕಾಣಿಕೆಯಂತೆ. ಫೆರ್ಗನವನ್ನು ಮತ್ತೆ ಪಡೆಯುವ ತನ್ನ ಎಲ್ಲಾ ಆಶಯಗಳನ್ನು ಬಾಬರ್ ಬಿಟ್ಟುಕೊಟ್ಟನು , ಆದಾಗ್ಯೂ ಬಾಬರನಿಗೆ ಪಶ್ಚಿಮದಿಂದ ಉಜ್ಬೇಕ್ಸ್ ಧಾಳಿ ನಡೆಸಬಹುದೆಂಬ ಭೀತಿ ಇತ್ತು.ಬಾಬರನ ಗಮನ ಹೆಚ್ಚಾಗಿ ಭಾರತ ಮತ್ತು ಇತರೆ ಪೂರ್ವ ರಾಜ್ಯಗಳತ್ತ ಹರಿಯಿತು , ಅದರಲ್ಲಿಯೂ ದೆಹಲಿ ಸುಲ್ತಾನರಶ್ರೀಮಂತ ರಾಷ್ಟ್ರಗಳ ಮೇಲೆ ಅವನ ಗಮನ ಹೋಯಿತು.

ಲೋದಿ ಸಾಮ್ರಾಜ್ಯದ ನಿಜವಾದ ರಾಜ ಮತ್ತು ಯುಕ್ತವಾದ ರಾಜ ಬಾಬರನೇ ಎಂದು ಸಾಧಿಸುವಂತಾಯಿತು. ತೈಮೂರ್ ಸಾಮ್ರಾಜ್ಯದ ನಿಜವಾದ ,ಯುಕ್ತವಾದ 'ಉತ್ತರಾಧಿಕಾರಿ' ತಾನೇ ಎಂದು ಬಾಬರನು ತಿಳಿದಿದ್ದನು. ಪಂಜಾಬಿನ ಸಾಮಂತರ ಪ್ರಚಾರದಲ್ಲಿ ಖಿಜ್ರ್ ಖಾನ್ ನನ್ನು, ತೈಮೂರ್ ಕುಳ್ಳಿರಿಸಿದ್ದು, ನಂತರ ಅವನು ನಾಯಕನಾಗಿ ಅಥವಾ ಸುಲ್ತಾನನಾಗಿ, ದೆಹಲಿ ಸುಲ್ತಾನ ನಾಗಿ, ಲೋದಿ ಸಾಮ್ರಾಜ್ಯವನ್ನು ಸ್ಥಾಪಿಸಿದನು. ಆದರೂ ಲೋದಿ ಸಾಮ್ರಾಜ್ಯವನ್ನು , ಇಬ್ರಾಹಿಂ ಲೋದಿ , ಉಚ್ಚಾಟಿಸಿದ್ದು, ಘಿಲ್ ಜೈ ಆಫ್ಘನ್ ಆಗಿದ್ದು, ಬಾಬರ್ ಅದನ್ನು ಟೈಮುರಿದ್ಸ್ ಗೆ ವಾಪಸ್ಸು ಮಾಡುವುದೇ ಆಗಿತ್ತು. ನಿಶ್ಚಯವಾಗಿಯೂ , ತನ್ನ ಸೈನಿಕರ ಸಂಖ್ಯೆಯನ್ನು ಹೆಚ್ಚಿಸಿ , ಬಲಗೊಳಿಸಿ, ಪಂಜಾಬ್ ನ ಮೇಲೆ ಧಾಳಿ ಮಾಡಲು ಒಂದು ಬೇಡಿಕೆಯನ್ನು ಇಬ್ರಾಹಿಂ ಗೆ ಕಳುಹಿಸಿದನು ; "ನಾನು ಅವನಿಗೆ ಒಂದು ಗೊಶವ್ಕ್ ಅನ್ನು ಕಳುಹಿಸಿದ್ದೇನೆ. ಮತ್ತು ಮೊದಲಿನಿಂದಲೂ ಯಾವ ದೇಶಗಳು ಟರ್ಕಿಯ ಮೇಲೆ ಅವಲಂಬಿತವಾಗಿವೆ ಎಂದು ಕೇಳಿದನು." ಇಲ್ಲಿ 'ದೇಶಗಳು' ಎಂದರೆ 'ದೆಹಲಿ ಸುಲ್ತಾನರ' 'ಭೂಮಿ'ಯಾಗಿದೆ.

ಬಾಬರನ ಈ ಅಪೇಕ್ಷೆಯನ್ನು ಇಬ್ರಾಹಿಂ ಆಶ್ಚರ್ಯಕರವಾಗಿ ಉಪೇಕ್ಷಿಸಿದ್ದನ್ನು ನಿರೀಕ್ಷಿಸಿ , ಇನ್ನೊಂದು ಆಕ್ರಮಣಕ್ಕೆ ಯಾವುದೇ ಆತುರ ತೋರದೆ ,ಬಾಬರನು ಹಲವಾರು ಪ್ರಾಥಮಿಕ ಬದಲಾವಣೆಗಳನ್ನು ಮಾಡಿ ಕಂದಾಹಾರನ್ನು ಸ್ವಾಧೀನ ಪಡಿಸಿ - ವ್ಯೂಹ ರಚನೆಯನ್ನು ಮಾಡಿ ಕಾಬುಲ್ ಮೇಲೆ ಪಶ್ಚಿಮದಿಂದ ಧಾಳಿಯನ್ನು ಮಾಡಿ ,ಆ ಸಮಯದಲ್ಲಿ ಆರ್ ಗುಂಡೀಸರಿಂದ ಭಾರತವನ್ನು ಆಕ್ರಮಿಸಿದರು. ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಕಾಲ ಕಂದಾಹಾರದ ಸ್ವಾಧೀನವಾಗಿ ,೩ ವರ್ಷಗಳ ನಂತರ ಕಂದಾಹಾರ ಮತ್ತು ಅದರ ಕೋಟೆಗಳನ್ನು ( ಬಹಳ ಪ್ರಾಕೃತಿಕ ಗುಣಗಳ ಬೆಂಬಲದ ನೆರವಿನಿಂದ )ವಶಪಡಿಸಿಕೊಂಡು,ಹಾಗು ಸಣ್ಣಪುಟ್ಟ ಹಲ್ಲೆಗಳು ಭಾರತದಲ್ಲಿ ಪ್ರಾರಂಭವಾಗಿದ್ದು, ಈ ರೀತಿಯ ಸರಣಿ ಅನಿಯಮಿತ ಕದನ ಮತ್ತು ಯುದ್ಧಗಳು ಒಂದು ಅವಕಾಶವಾಗಿ ,ದಂಡಯಾತ್ರೆಯು ವಿಸ್ತರಿಸಲ್ಪಟ್ಟಂತೆ ಆಯಿತು.

ಪಂಜಾಬ್ ನ ಪ್ರಾಂತ್ಯವನ್ನು ಪ್ರವೇಶಿಸಿದಮೇಲೆ , ಬಾಬರ್ ನ ಪ್ರಧಾನ ಮುಖ್ಯಸ್ಥ , ಲಂಗರ್ ಖಾನ್ ನಯಾಜಿ ನೀಡಿದ ಸಲಹೆಯ ಮೇರೆಗೆ ,ತನ್ನ ಯುಧ್ಧದಲ್ಲಿ ಬಲಶಾಲಿಗಳಾಗಿದ್ದ ಜನ್ಜುಅ ರಜಪೂತರಸಹಾಯ ಪಡೆದುಕೊಳ್ಳಲು ತಿಳಿಸಿದ.ಈ ಬುಡಕಟ್ಟು ಜನಾಂಗದ ವಿರೋಧಿ ನಿಲುವು ದೆಹಲಿಯ ಸಾಮ್ರಾಜ್ಯದ ವಿರುದ್ಧ ಎಂಬುದು ತಿಳಿದ ವಿಷಯವೇ ಆಗಿದೆ. ಅದರ ಮುಖ್ಯಸ್ಥರಾದ , ಮಲಿಕ್ ಹಸತ್ (ಅಸದ್ ) ಮತ್ತು ರಾಜ ಸಂಘರ್ ಖಾನ್ ರನ್ನು ಭೇಟಿ ಮಾಡಿ 'ಜನ್ಜುಅ' ದ ಜನಪ್ರಿಯತೆಯನ್ನು, ಆ ರಾಜ್ಯದ ಸಾಂಪ್ರದಾಯಿಕ ಆಡಳಿತಗಾರರೆಂದು ತಿಳಿಸಿ , ಅವರ ಹಿಂದಿನ ತಲೆಮಾರಿನ ಸಹಾಯವೂ ದೇಶಭಕ್ತ ಅಮೀರ್ ತೈಮೂರ್ ಕಡೆಗೆ 'ಹಿಂದ್' ವಶಪಡಿಸುವಿಕೆಯ ಕಾಲದಲ್ಲಿ ಇತ್ತೆಂದು ಬಾಬರ್ ತಿಳಿಸಿದನು. ಬಾಬರ್ ಅವರ ಶತ್ರುಗಳನ್ನು ಸೋಲಿಸಿ ,ಅವರಿಗೆ ಸಹಾಯ ಮಾಡಿ ೧೫೨೧ ರಲ್ಲಿ ಗಖರ್ಸ್ ಸೋಲಿಸಿದನು ,ಇದರಿಂದಾಗಿ ಇವರ ಸ್ನೇಹ ಮತ್ತಷ್ಟು ಗಟ್ಟಿಯಾಯಿತು. ಬಾಬರ್ ದೆಹಲಿ ಯ ಆಕ್ರಮಣದ ಸಂದರ್ಭದಲ್ಲಿ ಅವರನ್ನು' ಜನರಲ್ಸ್ 'ಆಗಿ ನೇಮಿಸಿದನು. ರಾಣ ಸಂಗ ನ ಮತ್ತು ಭಾರತದ ಆಕ್ರಮಣಕ್ಕೆ ಇದರಿಂದ ನೆರವಾಯಿತು.

ಬಾಬರ್ ನ ಆತ್ಮ ಕಥೆಯಲ್ಲಿ ಕೆಲವು ಭಾಗದ ,ಅಂದರೆ ೧೫೦೮ ಮತ್ತು ೧೫೧೯ ರ ನಡುವಿನ ಅವಧಿಯ ಭಾಗಗಳು ಕಳೆದುಹೋಗಿವೆ. ಈ ಅವಧಿಯಲ್ಲಿ ಶಾ ಇಸ್ಮಾಯಿಲ್ - Iನ ಅಶ್ವ ಪದಾತಿ ದಳವು ಚಲ್ಡಿರನ್ ಹೋರಾಟ /ರಣರಂಗದಲ್ಲಿ , ಒಟ್ಟೋಮನ್ ಸಾಮ್ರಾಜ್ಯ ಹೊಸ ಯುದ್ಧಾಸ್ತ್ರ ಮದ್ದುಗುಂಡಿನಕೋವಿ ಪಡೆಯ ಮುಂದೆ ಭಾರಿ ಸೋಲನ್ನೊಪ್ಪಿತು. ಶಾ ಇಸ್ಮಾಯಿಲ್ ಮತ್ತು ಬಾಬರ್ ಇಬ್ಬರೂ ಸಹ ಈ ಹೊಸ ಯುದ್ಧ ತಂತ್ರಜ್ಞಾನವನ್ನು ತಮಗೇ ಪಡೆಯುವಲ್ಲಿ, ಬೇಗನೆ ಕಾರ್ಯ ಪ್ರವೃತ್ತರಾದರು. ಈ ಕಾಲಪಟ್ಟಿಯ ಯಾವುದೋ ಒಂದು ಅವಧಿಯಲ್ಲಿ ಬಾಬರ್ ಮದ್ದುಗುಂಡು ತುಂಬಿದ ಕೋವಿಯಯ ಪಡೆಯನ್ನು ತನ್ನ ಸೈನ್ಯದಲ್ಲಿ ಸೇರಿಸಿದ್ದಿರಬಹುದು , ಮತ್ತು ಒಟ್ಟೋಮನ್ , ಉಸ್ತಾದ್ ಅಲಿಯವರನ್ನು, ಅವನ ಪಡೆಯ ತರಭೇತಿಗಾಗಿ ನೇಮಿಸಿರಬಹುದು ,ನಂತರ ಅವರನ್ನು ಅವರ ಉಪಯೋಗಕ್ಕಾಗಿ ಮ್ಯಾಚ್ ಲಾಕ್ ಮೆನ್ , ಎಂದು ಕರೆಯಲಾಗಿದೆ.. ಬಾಬರ್ ನ ಆತ್ಮ ಕಥೆಯಲ್ಲಿ ,ಅವನ ವಿರುದ್ಧದ ಪಡೆಯಿಂದ ಆದ ಸೋಲಿನ ಗೇಲಿಯ ಅನಾಹುತದಿಂದ ಆದ ಲ್ಕಾಚಾರವನ್ನು ಸಹ ದಾಖಲಿಸಿದ್ದು ,ಈವರೆವಿಗೂ ಕೋವಿಯನ್ನು ನೋಡದೆ ಇದ್ದದ್ದು , ಕೋವಿಯಿಂದ ಹೊರಬರುವ ಶಬ್ದ, ಬಾಣಗಳ ಆರ್ಭಟ ಮುಂತಾದವು ಬೆಂಕಿ ಉಗುಳಿದಾಗ ಬರುವ ಶಬ್ದ ಇವೆಲ್ಲವೂ ದಾಖಲಾದವು.

ಸಣ್ಣ ಸೇನಾಪಡೆ ಇದ್ದರೂ,ಕೋವಿಯ ಪ್ರವೇಶದಿಂದ ಶತ್ರುಗಳ ಪ್ರಾಂತ್ಯದಲ್ಲಿ ಹೆಚ್ಚಿನ ಲಾಭವೇ ಆಯಿತು. ಸಣ್ಣ ಗುಂಪಿನ ಅನಿಯಮಿತ ಕದನ ಪಡೆಯನ್ನು ಕೇವಲ ಪರೀಕ್ಷೆಗೆಂದು ಶತ್ರುಗಳ ಪಾಳೆಯಕ್ಕೆ ಉಪಾಯವಾಗಿ ಕಳುಹಿಸಲಾಗಿ ,ಅದು ಭಾರತದೊಳಕ್ಕೆ ನುಸುಳಲು ದಾರಿಯಾಯಿತು. ಆದರೂ,ಬಾಬರನು ಎರಡು ವಿರೋಧಗಳನ್ನು ಹತ್ತಿಕ್ಕಬೇಕಾಯಿತು;ಒಂದು ಕಂದಾಹಾರ ಮತ್ತೊಂದು ಕಾಬುಲ್. ಗೆಲುವಿನ ನಂತರ ,ಸ್ಥಳೀಯ ಜನರನ್ನು ಗಣನೆಗೆ ತೆಗೆದುಕೊಂಡು, ಸ್ಥಳೀಯ ಸಂಪ್ರದಾಯಗಳಿಗೆ ಬೆಂಬಲ ನೀಡಿ, ವಿಧವೆಯರಿಗೆ,ಅನಾಥರಿಗೆ ನೆರಾವಾಗಿ ನಿಂತು ಸಮಾಧಾನಗೊಳಿಸುವಲ್ಲಿ ಯಶಸ್ವಿಯಾಗಿದ್ದನು.

ಇಬ್ರಾಹಿಂ ಲೋದಿಯೊಂದಿಗೆ ಸಮರ

ಬದಲಾಯಿಸಿ

ಆದರೂ , ಟೈಮುರಿದ್ಸ್ ಒಂದಾದರೂ,ಲೋದಿಯ ಸೈನ್ಯ ಒಂದಾಗಲೇ ಇಲ್ಲ. ಇಬ್ರಾಹಿಂಬಳಿ ಇದ್ದ ಕುಲೀನರು ,ಅದರಲ್ಲಿಯೂ ಅವನ ಆಫ್ಘನ್ ಕುಲೀನರು ಬಾಬರ್ ನ ಆಗಮನವನ್ನು ಸ್ವಾಗತಿಸಲು ಇಷ್ಟಪಟ್ಟಿದ್ದು ಇಬ್ರಾಹಿಂಗೆ ಬಹಳ ಜಿಗುಪ್ಸೆಯ ವಿಷಯವಾಯಿತು.. ಬಾಬರನು ೧೨,೦೦೦-ಸೈನ್ಯ ಪದಾತಿ ದಳದೊಂದಿಗೆ , ಭಾರತದೊಳಗೆ ಕಾಲಿಟ್ಟನು. ಮುಂದೆ ಮುಂದೆ ಹೋದಂತೆ ಈ ಸೈನ್ಯ ಪಡೆ ಜಾಸ್ತಿಯಾಗುತ್ತಾ ಹೋಗಿ ,ಸ್ಥಳೀಯ ಜನಸಂಖ್ಯೆಯ ಜನರನ್ನು ಬಾಬರ್ ಸೈನ್ಯಕ್ಕೆ ಸೇರಿಸಲಾರಂಭಿಸಿದನು. ಇಬ್ಬರ ನಡುವಿನ ಮೊದಲ ಮಹಾ ಕದನ ನಡೆದಿದ್ದು ಫೆಬ್ರವರಿ ೧೫೨೬ ರಲ್ಲಿ. ಬಾಬರ್ ನ ಮಗ , ಹುಮಾಯುನ್ (ಆಗ ೧೭ ವರ್ಷ ), ಟೈಮುರಿಡ್ ನ ಸೇನಾ ಪಡೆಯನ್ನು ಮೊದಲನೇ ಇಬ್ರಾಹಿಂ ನ ಸೈನ್ಯದ ಮುಂದೆ ತಂದನು. ಹುಮಾಯುನ್ ನ ಗೆಲುವು ಕಷ್ಟದಾಯಕವಾಗಿದ್ದು ,ಹಿಂದಿನ ಸಣ್ಣ ಪುಟ್ಟ ಕದನಕ್ಕಿಂತ ಕಷ್ಟದಾಯಕವಾದುದಾಗಿತ್ತು.ಆದರೂ ಗೆಲುವು ನಿಶ್ಚಿತವಾಗಿತ್ತು. ಒಂದು ನೂರು ಯುದ್ಧ ಖೈದಿಗಳನ್ನು /ಸೈನಿಕರನ್ನು ಎಂಟು ಯುದ್ಧದ ಆನೆಗಳೊಂದಿಗೆ ಸೆರೆಹಿಡಿಯಲಾಯಿತು. ಆದರೂ ಈ ಹಿಂದೆ ನಡೆದ ಯುದ್ಧದಂತೆ ಈ ಬಂಧಿತರನ್ನು ಬಿಡುಗಡೆ ಮಾಡದೆ; ಹುಮಾಯುನ್ ನ ಆದೇಶದಂತೆ ಅವರನ್ನು ಗುಂಡಿಟ್ಟು ಕೊಲ್ಲಲಾಯಿತು. ಬಾಬರ್ ತನ್ನ ಆತ್ಮ ಕಥೆಯಲ್ಲಿ ಹೇಳಿಕೊಂಡಂತೆ, "ಉಸ್ತಾದ್ ಅಲಿ -ಕ್ಯುಲಿ ಮತ್ತು ಕೋವಿ ಹಿಡಿದ ಮಂದಿಗೆ ,ಎಲ್ಲಾ ಬಂಧಿಗಳನ್ನು ಕೊಲ್ಲಲ್ಲು ಆದೇಶಿಸಲಾಯಿತು.ಇದು ಹುಮಾಯುನ್ ನ ಮೊದಲ ನಡೆ ; ಯುದ್ಧದಲ್ಲಿ ಮೊದಲ ಅನುಭವ ,ಇದೊಂದು "ಅದ್ಭುತ ಅಪಶಕುನ"! ಗುಂಡಿಟ್ಟು ಕೊಲ್ಲುವ ನಿಟ್ಟಿನಲ್ಲಿಬಹುಶಃ ಇದು ಮೊದಲನೇ ಉದಾಹರಣೆ .https://www.quora.com/How-did-Babur-defeat-Sultan-Ibrahim-Lodhi

೧೦೦,೦೦೦ ಸೈನಿಕರು ಮತ್ತು ೧೦೦ ಆನೆ ಪಡೆಗಳೊಡನೆ;ಇಬ್ರಾಹಿಂ ಲೋದಿ ಸೈನ್ಯ ಪಡೆ ಮುಂದುವರಿಯಿತು. ಬಾಬರ್ ನ ಸೈನ್ಯ ಬೆಳೆದಿದ್ದರೂ ,ಅವನ ವಿರೋಧಿಯ ಸೈನ್ಯ ಪಡೆಯ ಅರ್ಧಕ್ಕಿಂತ ಕಡಿಮೆ ೨೫,೦೦೦ ಸೈನ್ಯ ಪಡೆ ಮಾತ್ರ ಇತ್ತು. ಇದುವೇ ಮೊದಲನೇ ಸಂಘರ್ಷವಾಗಿತ್ತು , ಮೊದಲನೇ ಪಾಣಿಪಟ್ ಕದನ ನಡೆದಿದ್ದು ೨೧ ಏಪ್ರಿಲ್ ೧೫೨೬. ಇಬ್ರಾಹಿಂ ಲೋದಿಯನ್ನು ಕೊಲ್ಲಲಾಯಿತು;ಅವನ ಸೈನ್ಯವನ್ನು ಬುಡಮೇಲು ಮಾಡಲಾಯಿತು;ಬಾಬರನು ಕೂಡಲೇ ದೆಹಲಿ ಮತ್ತು ಆಗ್ರಾಗಳನ್ನೂ ತನ್ನ ವಶಕ್ಕೆ ತೆಗೆದುಕೊಂಡನು. ಅದೇ ದಿನ ಬಾಬರ್ ಹುಮಾಯುನ್ ಗೆ ಆದೇಶ ನೀಡಿ , ಆಗ್ರಾವನ್ನು ವಶ ಪಡಿಸಿಕೊಂಡು , (ಇಬ್ರಾಹಿಂ ನ ಹಿಂದಿನ ರಾಜಧಾನಿ )ಅಲ್ಲಿಯ ರಾಷ್ಟ್ರೀಯ ಆಸ್ತಿ ಮತ್ತು ಸಂಪತ್ತನ್ನು ಲೂಟಿಯಾಗುವುದನ್ನು ತಡೆಯಲು ಹೇಳಿದನು. ಅಲ್ಲಿ ಗ್ವಾಲಿಯರ್ ರಾಜನ ಕುಟುಂಬವನ್ನು ಹುಮಾಯುನ್ ಕಂಡನು. — ಗ್ವಾಲಿಯರ್ ರಾಜನು ಪಾಣಿಪಟ್ ಯುದ್ಧದಲ್ಲಿ ಈಗಾಗಲೇ ಮಡಿದಿದ್ದನು. — ಧಾಳಿಕಾರರಿಂದ ರಕ್ಷಣೆಯನ್ನು ಪಡೆಯಲು ,ಧಾಳಿಕಾರರು ಬರುವ ಮುಂಚೆಯೇ 'ಮೊಂಗೊಲರ' ಭಯಂಕರ ಹಾಗು ಹೆದರಿಕೆಯನ್ನು ಹುಟ್ಟಿಸುವ ಪ್ರವೃತ್ತಿಯನ್ನು ಅರಿತು ಆಶ್ರಯ ಪಡೆದಿದ್ದರು. ಅವರಿಗೆ ರಕ್ಷಣೆ ದೊರೆಯುವ ಆಶ್ವಾಸನೆಯ ಮೇಲೆ , ಹುಮಾಯುನ್ ನಿಗೆ ,ತನ್ನ ಕುಟುಂಬದ ಅತ್ಯಮೂಲ್ಯ ಒಡವೆ , ಬಹಳ ದೊಡ್ಡ ವಜ್ರ,ಕೆಲವರು ನಂಬುವ ಹಾಗೆ ಕೊಹ್ -ಇ -ನೂರ್ ಅಥವಾ "ಬೆಟ್ಟದ ಬೆಳಕು 'ನ್ನು ನೀಡಿದರು. ತಮ್ಮ ರಾಜ್ಯಭಾರವನ್ನು ಉಳಿಸಿಕೊಳ್ಳಲು ಈ ಕಾರ್ಯ ಮಾಡಿದರು ಎಂದು ನಂಬಲಾಗಿದೆ. ಈ ಕಾಣಿಕೆಯ ಕಾರಣದಿಂದಲೋ ಅಥವಾ ಅಲ್ಲವೋ, ಅವರ ಕುಟುಂಬ ಗ್ವಾಲಿಯರ್ ನಲ್ಲಿ ,ತಮ್ಮ ಆಳ್ವಿಕೆಯನ್ನು ಹೊಸ ಆಡಳಿತಾಧಿಕಾರಿ ತೈಮುರಿದ್ಸ್ ಆಶ್ರಯದಲ್ಲಿ ಮುಂದುವರಿಸಿತು.

ಮೂರು ದಿನಗಳ ಯುದ್ಧದ ನಂತರ ಬಾಬರ್ , ದೆಹಲಿಯನ್ನು ತಲುಪಿದನು. ಜಮುನಾ ನದಿ ಯ ದಡದ ಮೇಲೆ ತನ್ನ ಆಗಮನದ ವಿಜಯೋತ್ಸವದ ಹಬ್ಬವನ್ನು ಆಚರಿಸಿದನು.ಹಾಗೂ ಶುಕ್ರವಾರದ (ಜಾಮ್ಅಹ ) ವರೆವಿಗೂ ಅಲ್ಲೇ ಉಳಿದನು, ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ನಡೆದು,(ಧರ್ಮೋಪದೇಶ ) ಖುತ್ಬ ನೀಡಿ (ಸೇರ್ಮೊನ್ ),ತನ್ನ ಹೆಸರಿನಲ್ಲಿ ಜುಮ್ಮಾ ಮಸೀದಿ ಯಲ್ಲಿ ಪ್ರಾರ್ಥಿಸಿ ,ಸಾರ್ವಭೌಮತ್ವವನ್ನು ಸ್ಥಾಪಿಸಿದ ಹೆಗ್ಗುರುತಾಗಿದೆ. ನಂತರ ಹುಮಾಯುನ್ ನನ್ನು ಸೇರಲು ಆಗ್ರಾಕ್ಕೆ ಹೊರಟನು. ಬಾಬರ್ ನ ಆಗಮನವಾಗುತ್ತಿದ್ದಂತೆ,ಬೆಲೆ ಬಾಳುವ ವಜ್ರಗಳನ್ನು ಕಾಣಿಕೆಯಾಗಿ ನೀಡಲಾಯಿತು,ನಂತರ ಬಾಬರನು ಹೇಳಿದಂತೆ,"ನಾನು ಅದನ್ನು ವಾಪಸ್ಸು ಅವನಿಗೆ ಕೊಟ್ಟುಬಿಟ್ಟೆ." ತಿಳಿದವರು ಹೇಳಿದಂತೆ ಆ ವಜ್ರದ ಬೆಲೆಯೇ " ಇಡೀ ಪ್ರಪಂಚದ ಎಲ್ಲಾ ಜನರಿಗೆ ಎರಡೂವರೆ ದಿನ ಊಟಕ್ಕೆ ಹಾಕಬಹುದಾದಷ್ಟು ಬೆಲೆಯುಳ್ಳದ್ದಾಗಿದೆ "ಎಂಬುದು.

ರಾಜಪೂತರೊಡನೆ ಸಮರ

ಬದಲಾಯಿಸಿ
 
ಬಾಬರ್ ಚಕ್ರಾಧಿಪತಿಯಾಗಿ ,ರಾಜಪರಿವಾರದವನಾಗಿ ಸ್ವೀಕರಿಸುವಿಕೆ.

ದೆಹಲಿ ಮತ್ತು ಆಗ್ರಾವನ್ನು ವಶಪಡಿಸಿಕೊಂದರೂ , ಬಾಬರ್ ತನ್ನ ಆತ್ಮ ಕಥೆಯಲ್ಲಿ ಹೇಳಿಕೊಂಡಂತೆ ನಿದ್ರೆಯಿಲ್ಲದ ರಾತ್ರಿಗಳನ್ನು ಕಳೆಯಬೇಕಾಯಿತು.ಇದಕ್ಕೆ ಕಾರಣನಾದವನು ಮೇವಾರ್ರಜಪೂತ ರಾಜ ರಣ ಸಂಗ . ಬಾಬರ್ ನ ಆಗಮನಕ್ಕೆ ಮೊದಲು; ರಜಪೂತ ದೊರೆಗಳು ,ಸುಲ್ತಾನರ ಕೆಲವು ಪ್ರಾಂತ್ಯಗಳನ್ನು ಯಶಸ್ವಿಯಾಗಿ ಗೆದ್ದಿದ್ದರು. ದಕ್ಷಿಣ -ಪಶ್ಚಿಮ ಪ್ರಾಂತ್ಯದ ಬಾಬರ್ ನ ಹೊಸ ಪ್ರದೇಶಗಳನ್ನು ನೇರವಾಗಿ ಆಳಿದ್ದರು.ಸಾಮಾನ್ಯವಾಗಿ ಹೇಳುವಂತೆ , ರಾಜಪುತಾನಭದ್ರಪಡಿಸಿದ ಚಕ್ರಾಧಿಪತ್ಯದ ಉತ್ತರ ಭಾರತದ ಕೆಲವು ಭಾಗಗಳು . ಇದು ಒಂದುಗೂಡಿದ ರಾಜ್ಯಭಾರವಾಗಿರಲಿಲ್ಲ , ಆದರೆ ರಣಸಂಗನ ಹಿರಿಯ ರಾಜದೂತ ವಂಶದ ಕೂಟಗಳಲ್ಲಿ ಅವನ ಆದರ್ಶಾನುಸಾರ ,ಅನೌಪಚಾರಿಕವಾದ ಚಕ್ರಾಧಿಪತ್ಯದ ಅಧೀನದಲ್ಲಿದ್ದವು.

ಬಾಬರ್ ಲೋದಿಯೊಂದಿಗೆ ನಡೆಸಿದ ಯುದ್ಧದಲ್ಲಿ ಆದ ನಷ್ಟ, ಸಾವು-ನೋವುಗಳು ಗೊತ್ತಾಗಿ,ಬಹುಶಃ ದೆಹಲಿಯನ್ನು ಆಕ್ರಮಿಸಬಹುದು ಹಾಗು ಪ್ರಾಯಶಃ ಹಿಂದುಸ್ತಾನ್ ದ ಮೇಲೆ, ಎರಗಬಹುದೆಂದು ರಜಪೂತರು ತಿಳಿದಿದ್ದರು. ೧೧೯೨ ರಲ್ಲಿ ಸುಲ್ತಾನ್ ಷಾ -ಅಲ್ ದಿನ ಮಹಮ್ಮದ್ ಘೋರ್ ದೇಶದವನು , ರಜಪೂತ್ ಚೌಹಾನ್ ರಾಜ ಪ್ರಿಥ್ವಿರಾಜ್ III ರನ್ನು ಯುದ್ಧದಲ್ಲಿ ಸೋಲಿಸಿದ ೩೫೦ ವರ್ಷಗಳ ನಂತರ ,ಮತ್ತೊಮ್ಮೆ ಎಲ್ಲವನ್ನು ಹಿಂದೂ ರಜಪೂತರ ಕೈಗಳಿಗೆ ಸೇರಿಸುವ ಮೊದಲ ಪ್ರಯತ್ನದಲ್ಲಿದ್ದರು.

ಹಾಗೆಯೇ ,ಬಾಬರ್ ನ ಸೈನ್ಯದ ಪಡೆಯ ವಿಭಾಗಗಳಲ್ಲಿ ಭೇದಗಳು ಇದ್ದ ಹಾಗೆ ರಜ್ಪುತರಿಗೆ ಮೊದಲೇ ತಿಳಿದಿತ್ತು. ಭಾರತದಲ್ಲಿ ಬೇಸಿಗೆಯ ಬಿರು ಬಿಸಿಲು ಕಾಲಿಟ್ಟಿತ್ತು. ಹಲವು ಪದಾತಿಗಳ ಸೈನ್ಯ ಸೆಂಟ್ರಲ್ ಏಷಿಯಾ ದ ತಣ್ಣನೆಯ ವಾತಾವರಣಕ್ಕೆ ಹಿತಿರುಗಳು ಪ್ರಯತ್ನಿಸಿದ್ದವು. ರಜಪೂತರ ಶೌರ್ಯ ಸಾಹಸ ದ ಹೆಸರಿಗೆ ಹೆದರಿ ಸೈನ್ಯ ಹಿಂದೆ ಬಿದ್ದಿತ್ತು.ಅಷ್ಟೇ ಅಲ್ಲದೆ ರಜಪೂತ ಸೈನಿಕರ ಹೆಚ್ಚಿನ ಸಂಖ್ಯೆ, ಬಾಬರನ ಸೈನ್ಯವನ್ನು ಹಿಮ್ಮೆಟ್ಟಿಸಿತ್ತು. ಬಾಬರ್ ನ ಸ್ವಂತ ಲೆಕ್ಕಾಚಾರದ ಪ್ರಕಾರ ರಜಪೂತರ ಶಕ್ತಿಶಾಲಿ ಸೈನ್ಯ ಪಡೆ ,ಪಾಣಿಪಟ್ ನಲ್ಲಿ ಸೋಲಿಸಿದ ಲೋದಿ ಪಡೆಗಿಂತ ಜಾಸ್ತಿಯೇ ಇತ್ತು. . ಬಾಬರನು ಮನಸ್ಸು ಮಾಡಿ ಇಲ್ಲಿ ಯುದ್ಧವನ್ನು ವಿಸ್ತರಿಸಲು ನಿರ್ಧರಿಸಿ,ಭಾರತದೊಳಕ್ಕೆ ನುಗ್ಗಲು ತೀರ್ಮಾನಿಸಿ ,ಈವರೆವಿಗೂ ತೈಮೂರರು ಮಾಡದ ಸಾಧನೆಯನ್ನು ಮಾಡಲಿಚ್ಚಿಸಿದನು. ಅವನಿಗೆ ತನ್ನ ಸೈನ್ಯ ಪಡೆ ರಜಪೂತರನ್ನು ಸೋಲಿಸುವುದು ಬೇಕಾಗಿತ್ತು.

ಮುಂದೆ ನಡೆಯುವ ಯುದ್ಧದಲ್ಲಿ ಭಾಗಿಯಾಗಲು ,ಸೈನಿಕರಿಗೆ ಇಷ್ಟವಿಲ್ಲದಿದ್ದರೂ, ಬಾಬರ್ ತಾನು ರಜಪೂತರನ್ನು ಗೆದ್ದು,ಹಿಂದುಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವುದಾಗಿ ನಂಬಿದನು. ಮೊಟ್ಟ ಮೊದಲ ಬಾರಿಗೆ ಮುಸ್ಲಿಮರಲ್ಲದವರೊಡನೆ ಯುದ್ಧವನ್ನು ಮಾಡುತ್ತಿರುವುದಾಗಿ,ಹೆಚ್ಚಿನ ಸುದ್ದಿಯನ್ನು ಹರಡಿದನು. ಕಾಫಿರ್ ಜೊತೆಯಲ್ಲಿ ಯುದ್ಧ ಮಾಡುತ್ತಿದ್ದು,ಭಾಷೆಯನ್ನು ತೆಗೆದುಕೊಂಡಂತೆ ,ತಾನು ಇನ್ನು ಮುಂದೆ 'ಕುಡಿಯುವುದಿಲ್ಲವೆಂದು'(ಅವನ ಕಡೆಯವರಿಂದ ಕೆಲವರಿಂದ ಪ್ರಮಾಣ ಮಾಡಿಸಿ)ಜೀವನ ಪರ್ಯಂತ ಕುಡಿಯದೆ ದೈವ ಶಕ್ತಿಯನ್ನು ಪಡೆಯುವುದಾಗಿ ಹೇಳಿ ,ರಣ ಸಂಗ ನ ಮೇಲೆ ಯುದ್ಧ ಸಾರಿದನು.

ಎರಡೂ ಕಡೆಯ ಸೈನ್ಯ ಪಡೆಗಳು ಪಶ್ಚಿಮ ಆಗ್ರಾದ 'ಖನ್ವ'ಬಳಿ ೪೦ ನೇ ಮೈಲಿಯಲ್ಲಿ ಯುದ್ಧ ನಡೆಸಿದರು. ಒಂದು ಸುಳ್ಳು ಕಥೆಯ ಪ್ರಕಾರ ಕಪ್ಪೆಯ ಪೂರ್ವ ವೃತ್ತಾಂತ ಸಮಾಜದ ವರದಿ ಹಾಗು ರಾಜಸ್ಥಾನ್ ನ ಪೂರ್ವ ವೃತ್ತಾಂತ ದಂತೆ , ಬಾಬರ್ ೧,೫೦೦ ಆಯ್ಕೆ ಮಾಡಲ್ಪಟ್ಟ ಅಶ್ವದಳವನ್ನು ಮುಂಚಿತವಾಗಿಯೇ ರಣಸಂಗನ [ಸೂಕ್ತ ಉಲ್ಲೇಖನ ಬೇಕು] ಮೇಲೆ ಎರಗಲು ಕಳುಹಿಸಿದ್ದು, 'ಸಂಗ'ನ ರಜಪೂತರು ಅವರನ್ನು ಭಾರಿಯಾಗಿ ಸೋಲಿಸಿದ್ದು, ಬಾಬರ್ ತದನಂತರ ಶಾಂತಿಯ ಮಾತುಕತೆ ನಡೆಸಲು ಮುಂದಾದನು. [ಸೂಕ್ತ ಉಲ್ಲೇಖನ ಬೇಕು] 'ಸಂಗ'ನು ತನ್ನ ಪ್ರಧಾನಿ ಸಿಲ್ಹಡಿ (ಶಿಲಾದಿತ್ಯ )ಯನ್ನು ಸಂಧಾನಕ್ಕೆ ಕಳುಹಿಸಿದನು. ಬಾಬರನು ಅವನೊಂದಿಗೆ ಮಾತನಾಡಿ ಶಿಲ್ಹಡಿಯ ಮನಸ್ಸನ್ನು ಗೆದ್ದು,ತಾನು ಅವನಿಗೆ ಒಂದು ಪ್ರಾಂತ್ಯದ ರಾಜನನ್ನಾಗಿ ಮಾಡುವ ಭರವಸೆ ನೀಡಿದನು, ಶಿಲ್ಹಡಿ ವಾಪಸ್ಸು ಬಂದು, ಬಾಬರನಿಗೆ ಶಾಂತಿ ಬೇಡವೆಂದು ,ಯುದ್ಧವನ್ನು ಮುಂದುವರೆಸುವುದಾಗಿ ತಿಳಿಸಿದನೆಂದು ಹೇಳಿದೆ. [ಸೂಕ್ತ ಉಲ್ಲೇಖನ ಬೇಕು]

ಏಕೀಕರಣ/ಬಲಗೊಳಿಸುವಿಕೆ

ಬದಲಾಯಿಸಿ

ರಾಜಪುತಾನ ಒಂದನ್ನು ಬಿಟ್ಟು ಬಾಬರನ ಮೊಮ್ಮಗ ಅಕ್ಬರ್ ನ ಕಾಲದಲ್ಲಿ ಇವನನ್ನು ಶಾಂತಗೊಳಿಸಲು ಮಾತ್ರ ಸಾಧ್ಯವಾಗಿದ್ದು, ಬಾಬರ್ ಈಗ ಮಾತ್ರ ಯಾರದೇ ಪ್ರತಿಭಟನೆ ಇಲ್ಲದ ಹಿಂದುಸ್ತಾನದ ರಾಜನಾದನು. (ಅಂದರೆ ಆಗಿನ ಕಾಲದ ವಾಯುವ್ಯ ಭಾರತ (ಉತ್ತರ-ಪಶ್ಚಿಮ ದಿಕ್ಕಿನ ಭಾಗ) ಮತ್ತು ಗಂಗಾನದಿಯ ಬಯಲು ಪ್ರದೇಶ );ಮತ್ತೊಮ್ಮೆ ತನ್ನ ರಾಜ್ಯವನ್ನು ವಿಸ್ತರಿಸಲು ಉದ್ಯುಕ್ತನಾದನು. ಅವನ ಸೈನ್ಯದಲ್ಲಿನ ಮುಖ್ಯಸ್ಥರಿಗೆ ಅಥವಾ ಉಮರಹ್ ನೇಮಕ ಮಾಡಿ ,ಅವರದೇ ಒಂದು ಸೈನ್ಯ ಪಡೆಯ ರಚನೆಗೆ ಅವಕಾಶ ಮಾಡಿಕೊಟ್ಟನು. ಬಾಬರ್ ನ ರಾಜ್ಯ ವಿಸ್ತರಿಸುವ ಆಕಾಂಕ್ಷೆಯನ್ನು ಅರಿತು,ಹಲವರಿಗೆ ಭೂಮಿಯ ಜಹಗೀರಿ ಯನ್ನು ನೀಡಲಾಗಿ , ಬಾಬರ್ ನ ಹಲವಾರು ಸೈನ್ಯದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರೆತಂತಾಗಿದೇ. ಈ ಮಧ್ಯೆ ,ಅವನ ಇಬ್ಬರು ಸ್ವಂತ ಮಕ್ಕಳಿಗೆ ತನ್ನ ಕೇಂದ್ರದಿಂದ ದೂಒರದಲ್ಲಿ ಹೊಸ ಕೇಂದ್ರಗಳನ್ನು ಆಡಳಿತ ನಡೆಸಲು ಅವಕಾಶ ನೀಡಿ; ಕಮ್ರಾನ್ ಗೆ ಕಂದಾಹಾರದ ಆಡಳಿತವನ್ನು , ಅಸ್ಕರಿಗೆ ಬೆಂಗಾಲವನ್ನು ಮತ್ತು ಹುಮಾಯುನ್ ಗೆ ಬದಖ್ ಶಾನ್ ಅನ್ನು ನೀಡಿದ್ದು,ಬಾಬರನಿಗೆ ಬಾಬರನ ರಾಜ್ಯ ವಿಸ್ತರಣೆಯ ಆಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಪ್ರತ್ಯೇಕ ಪ್ರಾಂತ್ಯಗಳ ವ್ಯವಸ್ಥೆಯಾಯಿತು.

ಉಸ್ತಾದ್ ಅಲಿ ಯ ಸಹಾಯದಿಂದ ಬಾಬರ್ ಹೊಸ ಹೊಸ ತಂತ್ರಜ್ಞಾನಗಳನ್ನುಬೆಳೆಸುತ್ತಾ,ತನ್ನ ಸೈನ್ಯದಲ್ಲಿ ಅಳವಡಿಸಿಕೊಳ್ಳುತ್ತಾ ಹೋದನು. ಕೋವಿಗಳ ಜೊತೆಗೆ , ಬಾಬರ್ ಮತ್ತು ಅಲಿಯು ಹೊಸ ರೀತಿಯ ಕೋವಿ ಶಸ್ತ್ರಾಸ್ತ್ರಗಳನ್ನು , ಅಂದರೆ ಫಿರಂಗಿಗಳನ್ನು , ಬಾಬರ್ ನೆನೆಸಿಕೊಂಡಂತೆ ,ಒಂದು ಮೈಲಿ ದೂರದಲ್ಲಿರುವ ಬಂಡೆಗಳನ್ನು ಒಡೆದುಹಾಕುವ ರೀತಿಯ ಫಿರಂಗಿಗಳ ನಿರ್ಮಾಣ ,(ದಾಖಲೆಯಲ್ಲಿ ತಿಳಿಸಿದಂತೆ ,ಪ್ರಥಮ ಪರೀಕ್ಷೆಯ ಸಂದರ್ಭದಲ್ಲಿ ೮ ಜನ ಮುಗ್ಧ ಸೈನಿಕರು ಜೀವ ತೆರಬೇಕಾಯಿತು). ಜೊತೆ ಜೊತೆಗೆ ,ಶೆಲ್ ಗಳನ್ನುತಯಾರಿಸಲಾಗಿ ಒತ್ತಡಕ್ಕೆ ಸ್ಪೋಟಗೊಳ್ಳುವಂತೆ ತಯಾರಿ ಮಾಡಿದರು.

ದುಂದುಗಾರಿಕೆಯ ಜೀವನ ಶೈಲಿ ಹಾಗು ಅಂತಿಮ ಮಹಾಯುದ್ಧ.

ಬದಲಾಯಿಸಿ

೧೫೨೮ ರ ಕೊನೆಯಲ್ಲಿ ಬಾಬರ್ ಮಹಾ ಹಬ್ಬವನ್ನು ಅಥವಾ ತಮಾಶ ವನ್ನು ಆಚರಿಸಿದನು. ಎಲ್ಲಾ ಶ್ರೀಮಂತರು ಬೇರೆ ಬೇರೆ ಕಡೆಗಳಿಂದ ಅಲ್ಲಿಗೆ ಬಂದರು.ಅವರ ಜೊತೆಗೆ ತೈಮೂರ್‌ಅಥವಾ ಗೆನ್ಗೀಸ್ ಖಾನ್ ಕಡೆಯ ಶ್ರೀಮಂತರು ಎನಿಸಿಕೊಂಡವರೂ ಸಹ ಬಂದಿಳಿದರು. ಅವನ ಕಡೆಯ ತೈಮೂರ್ ಮತ್ತು ಗೆನ್ಗೀಸ್ ಖಾನರ , ಕ್ಹನಲ್ ಮತ್ತು ಚಿಂಗಿಸ್ಸಿದ್ ಕಡೆಯವರಿಗಾಗಿ ಈ ಸಂಭ್ರಮ ನಡೆಯಿತು.ಇವರೆಲ್ಲರೂ ಬಾಬರ್ ನಿಂದ ದೂರದಲ್ಲಿ ಅರೆ ವೃತ್ತಾಕಾರದಲ್ಲಿ ಕುಳಿತು, (ಸ್ವಾಭಾವಿಕವಾಗಿಯೇ ಬಾಬರನು ಮಧ್ಯದಲ್ಲಿದ್ದನು.) ೧೦೦ ಮೀಟರ್ ದೂರದಲ್ಲಿದ್ದನು. ಈ ದೊಡ್ಡ ಔತಣ ಕೂಟದಲ್ಲಿ ಕಾಣಿಕೆಗಳನ್ನು ಕೊಡುವ ತೆಗೆದುಕೊಳ್ಳುವ ಪ್ರಾಣಿಗಳ ಯುದ್ಧ,ಕುಸ್ತಿ,ನೃತ್ಯ ಮತ್ತು ದೊಂಬರಾಟಗಳಿದ್ದವು. ಬಂದಂತಹ ಅತಿಥಿಗಳು, ಬಾಬರ್ ನಿಗೆ ಚಿನ್ನ ಮತ್ತು ಬೆಳ್ಳಿಯ ಕಾಣಿಕೆಗಳನ್ನು ನೀಡಿದರು, [ಸೂಕ್ತ ಉಲ್ಲೇಖನ ಬೇಕು]ಅದಕ್ಕೆ ಪ್ರತಿಯಾಗಿ ಅವರಿಗೆ ಕಟ್ಟಿ-ಬೆಲ್ಟು ಮತ್ತು ಗೌರವಯುತವಾಗಿ ಮೇಲಂಗಿಯನ್ನು ಉಡುಗೊರೆಯಾಗಿ ನೀಡಲಾಯಿತು.(ಖಲತ್ಸ್ ). ಬಂದಂತಹ ಅತಿಥಿಗಳಲ್ಲಿ ಉಜ್ಬೇಗ್ಸ್ ( ಕೆಂದರ್ ಏಶಿಯಾದಿಂದ ತೈಮುರಿದ್ಸ್ ರನ್ನು ಶಾಯ್ಬನಿ ಖಾನ್ ನ ನೆರವಿನಿಂದ ಹೊರಗಟ್ಟಿ ,ಈಗ ಸಮರ್ಕಂಡ್‌ಅನ್ನು ಆಕ್ರಮಿಸಿರುವ) ಮತ್ತು ಟ್ರನ್ಸೊಕ್ಷಿಯಾನದಿಂದ ಬಂದ ರೈತರ ಗುಂಪುಗಳನ್ನು ಗುರುತಿಸಿ,ಬಹುಮಾನ ನೀಡಲಾಗಿದ್ದು, ಬಾಬರ್ ರಾಜನಾಗುವ ಮೊದಲಿನಿಂದಲೂ, ಬಾಬರನಿಗೆ ಇವರು ಸಹಾಯ ಮಾಡುತ್ತಾ ಬಂದವರಾಗಿದ್ದರು.

ಹಬ್ಬದ ಸಂಭ್ರಮದ ನಂತರ ,ಬಂದ ಹಲವಾರು ಕೊಡುಗೆಗಳನ್ನು ಬಾಬರ್ ಕಾಬೂಲಿಗೆ ಕಳುಹಿಸಿದನು. "ಅವನ ಕುಟುಂಬದವರ ತೃಪ್ತಿಗಾಗಿ " , ಬಾಬರ್ ತನ್ನ ಸಂಪತ್ತಿನ ಮೇಲೆ ಬಹಳ ಉದಾರಿಯಾಗಿದ್ದನು.ಅವನು ಸಾಯುವ ಸಂದರ್ಭದಲ್ಲಿ ಅವನಿಗೆ ಶತ್ರುಗಳೆಂಬುವರು ಯಾರೂ ಯಾರಲಿಲ್ಲ,ಸೇನಾಧಿಪತಿಗಳಿಗೆ ಅವರ ಮೂರನೇ ಒಂದು ಭಾಗದ ಆದಾಯವನ್ನು ಖಾಜಾನೆಗೆ ಸಲ್ಲಿಸಲು ಆದೇಶಿಸಿದನು. ಕಫದಲ್ಲಿ ರಕ್ತ ಬರುವುದು, ಮುಖದ ಮೇಲೆಲ್ಲಾ ಬೊಬ್ಬೆಯ ರೀತಿಯ ಗುಳ್ಳೆಗಳು , ಶಿಯಾಟಿಕಖಾಯಿಲೆಯ ನರಳಾಟ ,ಕಿವಿಯ ಸೋಂಕಿನಿಂದ ರಕ್ತ ಸೋರುವಿಕೆ, ಎಲ್ಲವೂ ಅವನಿಗೆ ಗೊತ್ತಿತ್ತು. ಅವನು ಮಹಾನ್ ಕುಡುಕನಾಗಿದ.[ಸೂಕ್ತ ಉಲ್ಲೇಖನ ಬೇಕು] ಮತ್ತು ಹಶಿಶ್‌ಮಾದಕ ದ್ರವ್ಯ ತೆಗೆದುಕೊಳ್ಳುತ್ತಿದ್ದ [ಸೂಕ್ತ ಉಲ್ಲೇಖನ ಬೇಕು],ಬಹುಶಃ ಹಲವಾರು ಖಾಯಿಲೆಗಳಿಂದ ಹೊರಬರಲು ಹೀಗೆ ಮಾಡಿದ್ದಿರಬಹುದು. ಈ ಮಾದಕ ವಸ್ತುಗಳನ್ನು ಇಸ್ಲಾಮಿನ ಮೂಲಭೂತವಾದಿಗಳು ಕಡಾಖಂಡಿತವಾಗಿ ವಿರೋಧಿಸುವವರಾಗಿದ್ದರು. ಬಾಬರ್ ನಾಮ ದಲ್ಲಿ ಬಾಬರ್ ಹೇಳಿಕೊಂಡಂತೆ, ಫೆರ್ಘನದಲ್ಲಿ ಸಂಬಂಧಿಕರು ಹೇಳಿಕೊಂಡಂತೆ ಗಟ್ಟಿಯಾದ ಕುಡಿತದಲ್ಲಿ ನಿರತನಾಗಿದ್ದನು.(೧/) ಆದಾಗ್ಯೂ ಬಾಬರ್ , ಇಸ್ಲಾಂ ಗಾಗಿ ಹೋರಾಡಿದ ವೀರ ಯೋಧನಾಗಿದ್ದು , ಈಗ ಈ ರೀತಿಯಾಗಿ ವ್ಯಸನಕಾರಿಗೆ ಬಲಿಯಾಗಿದ್ದನು. (ಹರಾಮ್ ). 'ಹನ್ವುಅ/ಕನ್ವುಅ' ಯುದ್ಧ ರಂಗದ ಸಂಜೆ ಸಮಯದಲ್ಲಿ ,ತಾನು ಕುಡಿಯುತ್ತಿದ್ದ ಬಟ್ಟಲುಗಳನ್ನು ಒಡೆದುಹಾಕಿ ಮತ್ತೆಂದೂ ಕುಡಿಯುವುದಿಲ್ಲವೆಂದು ಶಪಥ ಮಾಡಿ ಅದರಂತೆ ನಡೆದುಕೊಂಡನು.

೧೫೨೯ ರ ಮೇ ೬ ರಂದು ಬಾಬರ್, ಇಬ್ರಾಹಿಂ ನ ಸಹೋದರ ಮಹಮೂದ್ ಲೋದಿ ( ಬಾಬರನ ಆಡಳಿತದಿಂದ ದೂರವಾಗಿದ್ದ) ಯನ್ನು ಘಘ್ರ ಯುದ್ಧದಲ್ಲಿ ಸೋಲಿಸಿದನು. ಇದು ಉತ್ತರ ಭಾರತ ದಲ್ಲಿನ ಲೋದಿ ಸಾಮ್ರಾಜ್ಯದ ಕೊನೆಯ ತಲೆಮಾರಿನ ಕಾಡು ಗೊಲ್ಲ ವಂಶಿಕರಾಗಿದ್ದರು .

ಕಡೆಯ ದಿನಗಳು

ಬದಲಾಯಿಸಿ
 
ದಿ ಬಗ್ಹ್ -ಎ ಬಾಬರ್ ಇನ್ ಕಾಬುಲ್ ,ಬಾಬರನ ಸಮಾಧಿ ಸ್ಥಳ.

ಬಾಬರ್ ಗಂಭೀರವಾಗಿ ಅನಾರೋಗ್ಯ ಪೀಡಿತನಾದ ಸಂದರ್ಭದಲ್ಲಿ,ಬಾಬರನ ಆಸ್ಥಾನದಲ್ಲಿದ್ದ ಕೆಲವು ಹಿರಿಯ ನಾಯಕರು /ಶ್ರೀಮಂತರು , ವ್ಯೂಹವೊಂದನ್ನು ರಚಿಸಿ,ಬಾಬರನ ತಂಗಿಯ ಮಗ ಮಹದಿ ಖ್ವಾಜಾ ನನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಿರುವ ವಿಷಯ ತಿಳಿದ ಹುಮಾಯುನ್, ಆಗ್ರಾಗೆ ದೌಡಾಯಿಸಿ ಬಂದು,ಅವರ ತಂದೆಯು ಮತ್ತೆ ಅಧಿಕಾರದಲ್ಲಿ ಉಳಿಯುವಂತೆ ಮಾಡಿದನು.ಇದರಿಂದಾಗಿ 'ಮಹದಿ ಖ್ವಾಜಾ' ತಾನು ನಾಯಕನಾಗುವ ಎಲ್ಲಾ ಆಶಯಗಳನ್ನು ಕಳೆದುಕೊಂಡಂತೆ ಆಗಿದ್ದು , ಹುಮಾಯುನನು ಆಗ್ರಾಕ್ಕೆ ಬಂದ ಸಂದರ್ಭದಲ್ಲಿ ಅವನಿಗೆ ಅನಾರೋಗ್ಯ ಉಂಟಾಗಿ ಸಾವಿಗೆ ಹತ್ತಿರವಾಗುವಷ್ಟು ಗಂಭೀರನಾದನು.

ಬಾಬರನು ಇದರಿಂದ ನೊಂದು ,ತನ್ನ ಮಗನ ಹಾಸಿಗೆಯನ್ನು ಸುತ್ತುತ್ತಾ,ತನ್ನ ಮಗನನ್ನು ಉಳಿಸಬೇಕೆಂದು ,ತನ್ನ ಮಗನ ಬದಲು ತನ್ನ ಪ್ರಾಣವನ್ನು ಪಡೆಯಬೇಕೆಂದು ದೇವರಲ್ಲಿ ಮೊರೆಯಿಟ್ಟನು. ನಂಬಿಕೆಯ ಒಂದು ಕಥೆಯಾಗಿ ಕೇಳಿ ಬಂದಂತೆ , ಬಾಬರನು ಮತ್ತೆ ಜ್ವರದಿಂದ ಅನಾರೋಗ್ಯಕ್ಕೆ ತುತ್ತಾಗಿ, ಹುಮಾಯುನ್ ಆರೋಗ್ಯವನ್ತನಾಗಿ ಉಳಿದನು.ಬಾಬರನು ಹುಮಾಯುನನಿಗೆಹೇಳಿದ ಕೊನೆಯ ಮಾತು ' "ನಿನ್ನ ಸಹೋದರರ ವಿರುದ್ಧವಾಗಿ ಏನೂ ಮಾಡಬೇಡ (ತೊಂದರೆ ಕೊಡಬೇಡ), ಅವರು ಇದಕ್ಕೆ ಅರ್ಹರಾಗಿದ್ದರೂ ಸರಿಯೇ" ಎಂಬುದಾಗಿತ್ತು.

ಬಾಬರನು ತನ್ನ ೪೭ ನೇ ವಯಸ್ಸಿನಲ್ಲಿ January 5 [O.S. 26 December 1530] 1531 ನಿಧನನಾದ ನಂತರ ,ಹಿರಿಯ ಮಗ ಹುಮಾಯುನನುಅಧಿಕಾರಕ್ಕೆ ಬಂದನು. ಬಾಬರನ ಸಮಾಧಿಯನ್ನು,ಅವನು ಯಾವಾಗಲೂ ಇಷ್ಟಪಡುತ್ತಿದ್ದ ಕಾಬುಲಿನ ಒಂದು ತೋಟದಲ್ಲಿ ಮಾಡಬೇಕೆಂಬ ಆಸೆಯಿದ್ದರೂ ,ಅವನ ಸಮಾಧಿಯನ್ನು ಆಗ್ರಾದ ರಾಜಧಾನಿ ನಗರದ ದೊಡ್ಡ ಸಮಾಧಿ ಸ್ಥಳ ದಲ್ಲಿ ಮೊದಲು ಮಾಡಲಾಯಿತು. ಇದಾದ ಒಂಭತ್ತು ವರ್ಷಗಳ ನಂತರ ಅವನ ಆಸೆಯನ್ನು ಈಡೇರಿಸುವ ತೆರೆದಿ ಶೇರ್ ಶಾಹ್ ಸೂರಿ [ಸೂಕ್ತ ಉಲ್ಲೇಖನ ಬೇಕು] ಎಂಬುವವನು, ಬಾಬರ್ ನ ಸಮಾಧಿಯನ್ನು, ಕಾಬುಲಿನ ಸುಂದರವಾದ ತೋಟ ಬಾಗ್ಹ್ -ಎ ಬಾಬರ್ ನಲ್ಲಿ ನಿರ್ಮಿಸಿದನು.ಅದು ಈಗ ಅಫ್ಘಾನಿಸ್ತಾನ್ ದಲ್ಲಿದೆ. ಆ ಸಮಾಧಿಯ ಮೇಲೆ ಬರೆದಿರುವ ಬರಹ ಈ ರೀತಿ ಇದೆ. ( ಪರ್ಷಿಯನ್ ಭಾಷೆಯಲ್ಲಿ ):

 
ಕಾಬುಲಿನ ಮಸೀದಿ.

If there is a paradise on earth, it is this, it is this, it is this![೩೨]

ಪರಂಪರೆ/ಮೃತ್ಯು ಲೇಖದಾನ

ಬದಲಾಯಿಸಿ

ಬಾಬರನ ಪರಂಪರೆ ಹಲವು ಮಿಶ್ರಣದಿಂದ ಕೂಡಿದೆ. ಉಜ್ಬೇಕಿಸ್ತಾನ್ ಮತ್ತು ಕಿರ್ಗಿಜ್ ಸ್ತಾನ್ ನಲ್ಲಿ [೩೩] ಬಾಬರನು ರಾಷ್ಟ್ರೀಯ ನಾಯಕ ಎಂದು ತಿಳಿಯಲಾಗಿದೆ. ಟರ್ಕಿ ಮತ್ತು ಅಫ್ಘಾನಿಸ್ತಾನ್ ನಲ್ಲಿ ಸಮಾಧಿ ಮಾಡಿರುವ ಸ್ಥಳದಲ್ಲಿ ಉನ್ನತ ಮರ್ಯಾದೆಯ ಸ್ಥಾನವಿದೆ.

ವಾಸ್ತುಶಿಲ್ಪದ ಮೇಲಿನ ಪ್ರಭಾವ

ಬದಲಾಯಿಸಿ
ಚಿತ್ರ:Babri rearview.jpg
ಬಾಬ್ರಿ ಮಸೀದಿಯ ಒಂದು ನೋಟ, ಮೊದಲು ಇದು ಅಯೋಧ್ಯ ಆಗಿದ್ದು, ಹಿಂದೂ ರಾಷ್ಟ್ರೀಯವಾದಿಗಳ ವಿವಾದಕ್ಕೊಳಗಾಗಿತ್ತು. ಬಾಬರನಿಂದ ಮಸೀದಿಯ ನಿರ್ಮಾಣದ ನಂಬಿಕೆ, ಬಾಬರನ ಅಧಿಕಾರ ನಿಯೋಗದಿಂದ.

ಬಾಬರನು ಹಲವಾರು ದೇಶಗಳನ್ನು ಸುತ್ತಿದನು.ಹಲವಾರು ಭೂಮಿಯ ಮೇಲ್ಮೈಯನ್ನು ,ದೃಶ್ಯಗಳನ್ನು ಗಮನಿಸಿದ್ದನು.ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಕಟ್ಟಡಗಳನ್ನು ಕಟ್ಟಲಾರಂಭಿಸಿದನು. ಅದರಲ್ಲಿ ಹಿಂದೂಗಳ ಕಟ್ಟಡಗಳ ಶೈಲಿ ಮತ್ತು ಸಂಪ್ರದಾಯಬದ್ಧವಾಗಿ ಬಂದ ಮುಸ್ಲಿಂ ರೀತಿಯ, ಪರ್ಷಿಯನ್ ಮತ್ತು ಟರ್ಕಿ ಶೈಲಿಯ ಕಟ್ಟಡಗಳು ತಲೆಯೆತ್ತಿದವು. ಭಯಭೀತಿಯಿಂದ ಚಂದೇರಿ ಕಟ್ಟಡದ ಬಗ್ಗೆ ಹೇಳುತ್ತಾನೆ;ಹಳ್ಳಿಯು ಕಲ್ಲಿನ ಶೃಂಗಾರದಿಂದ ಕೆತ್ತಲ್ಪಟ್ಟಿತು ,ಗ್ವಾಲಿಯರ್‌ನ ರಾಜ , ರಾಜ ಮಾನ್ ಸಿಂಗ್ ನ ಅರಮನೆ ಅದ್ಭುತ ಕಲ್ಲಿನ ಶೃಂಗಾರವಾಗಿತ್ತು. ಆದರೂ ಜೈನರ "ಪ್ರತಿಮೆಗಳನ್ನು " ಗ್ವಾಲಿಯರ್ ನಲ್ಲಿ , ಕಲ್ಲಿನಲ್ಲಿ ಕೆತ್ತಿರುವುದು ಅವನಿಗೆ ಇಷ್ಟವಾಗಲಿಲ್ಲ. ಅದೃಷ್ಟವಶಾತ್,ಆ ಕೆತ್ತನೆಯನ್ನು ಹಾಳುಗೆಡವಲಿಲ್ಲ, ಆದರೆ ಕೆಲವರ ಮುಖಭಾವಗಳನ್ನು,ಮನನೋಯಿಸುವ ಸನ್ನಿವೇಶಗಳನ್ನು ಮಾತ್ರ ತೆಗೆದುಹಾಕಲಾಯಿತು. (ಆಧುನಿಕ ವಾಸ್ತುಶಿಲ್ಪಿಗಳು ಆ ಮುಖಗಳನ್ನು ಮತ್ತೆ ಜೋಡಿಸಿರುತ್ತಾರೆ.)

ತನ್ನ ಜ್ಞಾಪಕಾರ್ಥವಾಗಿ ಅವನು ಬಿಟ್ಟುಹೋದ ಭೂಮಿಯ ಗುರುತಿಗಾಗಿ, ಬಾಬರನು ಅಲ್ಲೆಲ್ಲಾ ತನ್ನ ಇಷ್ಟದ ಹಾಗೆ ಅತ್ಯುತ್ತಮ ರೀತಿಯ ಉದ್ಯಾನವನವನ್ನು ಸೃಷ್ಟಿಸಿದನು.ಎಲ್ಲಾ ಪ್ರಾಂತ್ಯಗಳಲ್ಲಿಯೂ ಉದ್ಯಾನವನಗಳನ್ನು ಬೆಳೆಯಿಸಿದನು.ಭಾರತದ ಉದಯಿಸುವ ಸೂರ್ಯನ ನೆರಳಲ್ಲಿ ಭಯದಿಂದ ಕುಳಿತನು. ಕಾಬುಲಿನಲ್ಲಿನ ತೋಟದಲ್ಲಿ , ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪ್ರಯತ್ನಿಸಿದ್ದನು.ಅವನ ನಂಬಿಕೆಯಂತೆ ಕಾಬೂಲಿನಲ್ಲಿನ ಉದ್ಯಾನವನ ಇಡೀ ವಿಶ್ವದಲ್ಲಿಯೇ ಹೆಚ್ಚು ಸೌಂದರ್ಯವುಳ್ಳದ್ದಾಗಿದೆ ಎಂದು ನಂಬಿದವನು.ಅಂತಹ ಒಂದು ಉದ್ಯಾನವನದಲ್ಲಿ ತನ್ನ ಸಮಾಧಿಯಾಗಬೇಕೆಂದು ಬಯಸಿದ್ದನು. ಬಾಬರನು ತನ್ನ ಆತ್ಮಕಥೆಯಲ್ಲಿ ಹಿಂದುಸ್ತಾನದ, ಗಿಡ ಮರಗಳು , ಪ್ರಾಣಿಗಳ ಸಂಕುಲದ ಬಗ್ಗೆ ೩೦ ಪುಟಗಳಷ್ಟು ವರ್ಣನೆಯನ್ನು ನೀಡಿದ್ದಾನೆ.

ಬಾಬ್ರಿ ಮಸ್ಜಿದ್

ಬದಲಾಯಿಸಿ

ಅಯೋಧ್ಯಯಲ್ಲಿ ಬಾಬರನು ಬಾಬ್ರಿ ಮಸ್ಜಿದ್‌ಅನ್ನು ನಿರ್ಮಿಸುವ ನಂಬಿಕೆ ಹೊಂದಿದ್ದನು. ಆ ಸ್ಥಳದಲ್ಲಿಯೇ ದೇವಸ್ಥಾನ ಇದ್ದಿದ್ದು ಹಿಂದೂ ಮತ್ತು ಮುಸ್ಲಿಮರ ಮನಸ್ತಾಪಕ್ಕೆ ಕಾರಣವಾಗಿದೆ. ವರದಿಗಳು ಹೇಳುವಂತೆ , ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದರು. [ಸೂಕ್ತ ಉಲ್ಲೇಖನ ಬೇಕು]ಮಸೀದಯನ್ನು ೧೮೫೦ ರ ಮಧ್ಯದ ಸುಮಾರಿಗೆ ಮುಚ್ಚಲಾಗಿದೆ.(ಹಿಂದೂಗಳ ಪ್ರಾರ್ಥನೆ ಈ ದಿನದವರೆಗೂ ಮುಂದುವರಿದಿದೆ.)ಕೋಮು ಗಲಭೆಗೆ ಹಾಗು ಅಲ್ಲಹಾಬಾದ್ ಹೈಕೋರ್ಟ್ ನ ತೀರ್ಮಾನ ತಡೆಯಾಗಿ ಉಳಿದಿರುವುದರಿಂದ, ಮಸೀದಿಯನ್ನು ಅಯೋಧ್ಯೆಯಲ್ಲಿ ೬ ನೇ ಡಿಸೆಂಬರ್ ೧೯೯೨ ರಂದು ಕರ ಸೇವಕರು ಭಾರತದ ಎಲ್ಲಾ ಕಡೆಯಿಂದ ಬಂದು ಅವ್ಯವಸ್ಥೆಗೊಳಿಸಿ ನಾಶ ಮಾಡಿರುತ್ತಾರೆ.https://www.thehindu.com/news/national/the-hindu-explains-the-babri-masjid-case/article21248813.ece

ಆಕರಗಳು

ಬದಲಾಯಿಸಿ
 1. ಮುಘಲ್ ಸಾಮ್ರಾಜ್ಯ Archived 2007-12-31 ವೇಬ್ಯಾಕ್ ಮೆಷಿನ್ ನಲ್ಲಿ. ಎನ್ಸೈಕ್ಲೋ ಪೀಡಿಯಾ ಬ್ರಿಟನ್ನಿಕ
 2. ೨.೦ ೨.೧ Lehmann, F. "Memoirs of Zehīr-ed-Dīn Muhammed Bābur". Encyclopaedia Iranica. Archived from the original on 2008-12-04. Retrieved 2008-04-02. His origin, milieu, training, and culture were steeped in Persian culture and so Babor was largely responsible for the fostering of this culture by his descendants, the Mughals of India, and for the expansion of Persian cultural influence in the Indian subcontinent, with brilliant literary, artistic, and historiographical results.
 3. ರಾಬರ್ಟ್ ಎಲ್ . ಕ್ಯಾನ್ ಫೀಲ್ಡ್ , ರಾಬರ್ಟ್ ಎಲ್ . (೧೯೯೧). ಟರ್ಕೋ -ಪರ್ಶಿಯ ಇನ್ ಹಿಸ್ಟಾರಿಕಲ್ ಪರ್ಸ್ಪೆಕ್ಟಿವ್ , ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ , ಪುಟ .೨೦. " ಮುಘಲ್ -ಪರ್ಷಿಯನ್ ತುರ್ಕರು ಸೆಂಟ್ರಲ್ ಏಷಿಯಾವನ್ನು ಆಕ್ರಮಿಸಿ ಮತ್ತು ತೈಮೂರ್ ಮತ್ತು ಗೆನ್ಗೀಸ್ ಅನ್ನು ಗಂಭೀರವಾಗಿ ಪರಿಗಣಿಸಿ - ಮುಸ್ಲಿಂ ಭಾರತದ ಪರ್ಷಿಯನ್ ಸಂಸ್ಕೃತಿಯನ್ನು ಬಲಗೊಳಿಸಲಾಯಿತು . "
 4. ೪.೦ ೪.೧ Dale, Stephen Frederic (2004). The garden of the eight paradises: Bābur and the culture of Empire in Central Asia, Afghanistan and India (1483-1530). Brill. pp. 15, 150. ISBN 9004137076.
 5. ಭಾಗಗಳ ಉದಾಹರಣೆಗಾಗಿ , ಸಯಾಮಕ್ ನ ಮಗ ಹೌಶಂಗ್ ವಿವರಿಸಿದಂತೆ  : ترا بود باید همی پیشرو که من رفتنی‌ام تو سالار نو پری و پلنگ انجمن کرد و شیر ز درندگان گرگ و ببر دلیر ಶಾಹ್ ನಮೆಹ್ , ಮಾಸ್ಕೋ ಆವೃತ್ತಿ .
 6. ಚಿಶೋಲ್ಮ್ , ಹುಗ್ಹ್ (೧೯೧೦), ದಿ ಎನ್ಸ್ಯಕ್ಲೋಪೀಡಿಯಾ ಬ್ರಿಟನ್ನಿಕ
 7. ತುಮ್ಬ್ , ಆಲ್ಬರ್ಟ್ , ಹಂದ್ಬುಚ್ ದೇಸ್ ಸಂಸ್ಕ್ರಿತ್ , ಮಿತ್ ಟೆಕ್ಷ್ತೆನ್ ಉಂಡ್ ಗ್ಲೋಸ್ಸರ್ , ಜೆರ್ಮನ್ ಒರಿಜಿನಲ್ , ಎಡ್ . ಸಿ . ವಿಂಟರ್ , ೧೯೫೩, ಸ್ನಿಪ್ಪೆತ್ , ಪುಟ .318
 8. ಜರ್ನಲ್ ಆಫ್ ದಿ ರಾಯಲ್ ಅಸಯಾಟಿಕ್ ಸೊಸೈಟಿ ಆಫ್ ಗ್ರೇಟ್ ಬ್ರಿಟೈನ್ ಅಂಡ್ ಐರ್ಲ್ಯಾಂಡ್ , ಕೇಂಬ್ರಿಡ್ಜ್ ಯುನಿವರ್ಸಿಟಿ ಪ್ರೆಸ್ , ೧೯೭೨. ಸ್ನಿಪ್ಪೆತ್ , ಪುಟ .104.
 9. Tarikh-i-Rashidi: A History of the Moghuls of Central Asia. Elias and Denison Ross (ed. and trans.). 1898, reprinted 1972. ISBN 0700700218. {{cite book}}: Check date values in: |year= (help)CS1 maint: others (link) Full text at Google Books."
 10. ೧೦.೦ ೧೦.೧ ೧೦.೨ Babur, Emperor of Hindustan (2002). The Baburnama: Memoirs of Babur, Prince and Emperor. translated, edited and annotated by W.M. Thackston. Modern Library. ISBN 0-375-76137-3.
 11. ವ್ಹೀಲರ್ ಎಂ . ಥಕ್ಕ್ಸ್ತೋನ್ , ದಿ ಬಾಬರ್ ನಾಮ : ಬಾಬರನ ಆತ್ಮ ಚರಿತ್ರೆ , ರಾಜ ಮತ್ತು ಚಕ್ರಾಧಿಪತಿ , 2002,xxvii-xxix, ದಿ ಮಾಡರ್ನ್ ಲೈಬ್ರರಿ
 12. "Babar". Manas. University of California Los Angeles. Retrieved 2008-04-02.
 13. "Mirza Muhammad Haidar". Silk Road Seattle. Walter Chapin Center for the Humanities at the University of Washington. Retrieved 2006-11-07. On the occasion of the birth of Babar Padishah (the son of Omar Shaikh)
 14. ಬಾಬರ್ ಅಟ್ ಎನ್ಸ್ಯಕ್ಲೋಪೀಡಿಯಾ ಬ್ರಿಟನ್ನಿಕ
 15. "Timurids". The Columbia Encyclopedia (6th Ed. ed.). New York: Columbia University. Archived from the original on 2006-12-05. Retrieved 2006-11-08. {{cite encyclopedia}}: |edition= has extra text (help)
 16. ಸೆಂಟ್ರಲ್ ಏಷಿಯಾ ಮತ್ತು ಇರಾನ್ ನ , ಮಧ್ಯಕಾಲೀನ ಟರ್ಕೋ -ಪರ್ಷಿಯನ್ ಸಮಾಜದ ಬಗೆಗಿನ ಹೆಚ್ಚಿನ ಮಾಹಿತಿಗೆ ನೋಡಿ, ಟರ್ಕೋ -ಪರ್ಷಿಯನ್ ಸಂಪ್ರದಾಯಗಳು ಮತ್ತು ಪರ್ಶಿಯನ್ನರ ಸಮಾಜ .
 17. ಇರಾನ್ : ದಿ ತೈಮುರಿದ್ಸ್ ಅಂಡ್ ಟರ್ಕ್ ಮೆನ್ ಅಟ್ ಎನ್ಸ್ಯಕ್ಲೋಪೀಡಿಯಾ ಬ್ರಿಟನ್ನಿಕ .
 18. Manz, Beatrice Forbes (1994). "The Symbiosis of Turk and Tajik". Central Asia in Historical Perspective. Boulder, Colorado & Oxford. p. 58. ISBN 0-8133-3638-4. {{cite book}}: |access-date= requires |url= (help)
 19. Elliot, Henry Miers (1867–1877). "The Muhammadan Period". The History of India, as Told by Its Own Historians. John Dowson (ed.). London: Trubner. ...and on the same journey, he swam twice across the Ganges, as he said he had done with every other river he had met with. {{cite book}}: |access-date= requires |url= (help); |archive-url= requires |url= (help); Unknown parameter |chapterurl= ignored (help)
 20. "The Memoirs of Babur, Volume 1, chpt. 71". Memoirs of Zehīr-ed-Dīn Muhammed Bābur Emperor of Hindustan, Written by himself, in the Chaghatāi Tūrki. Translated by John Leyden and William Erskine, Annotated and Revised by Lucas King. Oxford University Press. 1921. Archived from the original on 2008-12-05. Retrieved 2010-06-04. Āisha Sultan Begum, the daughter of Sultan Ahmed Mirza, to whom I had been betrothed in the lifetime of my father and uncle, having arrived in Khojand, I now married her, in the month of Shābān. In the first period of my being a married man, though I had no small affection for her, yet, from modesty and bashfulness, I went to her only once in ten, fifteen, or twenty days. My affection afterwards declined, and my shyness increased; in so much, that my mother the Khanum, used to fall upon me and scold me with great fury, sending me off like a criminal to visit her once in a month or forty days. {{cite book}}: Unknown parameter |chapterurl= ignored (help)CS1 maint: others (link)
 21. ಪೋಪ್ , ಹಗ್ಹ್ (೨೦೦೫). ಸನ್ಸ್ ಆಫ್ ದಿ ಕಾಂಕ್ವೆರರ್ಸ್ , ಓವರ್ ಲುಕ್ ಡಕ್ವರ್ತ್ , ಪುಟದಿಂದ ಪುಟಕ್ಕೆ .೨೩೪-೨೩೫.
 22. Khair, Tabish (2006-01-06). Other Routes: 1500 Years of African and Asian Travel Writing. Signal Books. p. 162. ISBN ISBN 1-904955-11-8. {{cite book}}: |access-date= requires |url= (help); Check |isbn= value: invalid character (help)CS1 maint: date and year (link)
 23. Lal, Ruby (2005-09-25). Domesticity and Power in the Early Mughal World. p. 69. ISBN 0-521-85022-3. It was over these possessions, provinces controlled by uncles, or cousins of varying degrees, that Babur fought with close and distant relatives for much of his life. {{cite book}}: |access-date= requires |url= (help)CS1 maint: date and year (link)
 24. ೨೪.೦ ೨೪.೧ ೨೪.೨ ೨೪.೩ Ewans, Martin (2002). Afghanistan: A Short History of Its People and Politics. HarperCollins. pp. 26–7. ISBN 0-06-050508-7. {{cite book}}: Unknown parameter |month= ignored (help)
 25. "The Memoirs of Babur". Silk Road Seattle. Walter Chapin Center for the Humanities at the University of Washington. Retrieved 2006-11-08. After being driven out of Samarkand in 1501 by the Uzbek Shaibanids...
 26. ೨೬.೦ ೨೬.೧ Brend, Barbara (2002-12-20). Perspectives on Persian Painting: Illustrations to Amir Khusrau's Khamsah. Routledge (UK). p. 188. ISBN 0-7007-1467-7. {{cite book}}: |access-date= requires |url= (help)CS1 maint: date and year (link)
 27. Lamb, Christina (2004). The Sewing Circles of Herat: A Personal Voyage Through Afghanistan. HarperCollins. p. 153. ISBN 0-06-050527-3. {{cite book}}: |access-date= requires |url= (help); Unknown parameter |month= ignored (help)
 28. Hickmann, William C. (1992-10-19). Mehmed the Conqueror and His Time. p. 473. ISBN 0-691-01078-1. Eastern Turk Mir Ali Shir Neva'i (1441-1501), founder of the Chagatai literary language{{cite book}}: CS1 maint: date and year (link)
 29. Doniger, Wendy (1999). Merriam-Webster's Encyclopedia of World Religions. Merriam-Webster. p. 539. ISBN 0-87779-044-2. {{cite book}}: |access-date= requires |url= (help); Unknown parameter |month= ignored (help)
 30. Sicker, Martin (2000). The Islamic World in Ascendancy: From the Arab Conquests to the Siege in Vienna. p. 189. ISBN 0-275-96892-8. Ismail was quite prepared to lend his support to the displaced Timurid prince, Zahir ad-Din Babur, who offered to accept Safavid suzerainty in return for help in regaining control of Transoxiana. {{cite book}}: |access-date= requires |url= (help); Unknown parameter |month= ignored (help)
 31. Briggs, John (1829). History of the Rise of the Mahomedan Power in India Till the Year A. D. 1612. Shah Ismael at this time sent Khanzada Begum (Babur's sister) to him. This princess had been made prisoner at the capture of Samarkand by Sheebany Khan, who afterwards married her. {{cite book}}: |access-date= requires |url= (help)
 32. Agrawal, Ashvini (1983-12-01). Studies in Mughal History. Motilal Banarsidass Publisher. ISBN 81-208-2326-5. {{cite book}}: |access-date= requires |url= (help)CS1 maint: date and year (link)
 33. ಡಸ್ಟ್ ಇನ್ ದಿ ವಿಂಡ್ : ರಿಟ್ರಸಿಂಗ್ ಧರ್ಮ ಮಾಸ್ಟರ್ ಕ್ಸುಂಜನ್ಗ್ಸ್ ವೆಸ್ಟೆರ್ನ್ ಪಿಲ್ಗ್ರಿಮೇಜ್ ಬೈ 經典雜誌編著, ಜ್ಹಿಹೊಂಗ್ ವಂಗ್ , ಪುಟ . ೧೨೧

ಸಹಾಯಕ ಆಕರಗಳು

ಬದಲಾಯಿಸಿ

ವಿಮರ್ಷಣೆ - ವ್ಹೀಲರ್ ಎಂ . ಥಾಕ್ಸ್ಟನ್ (ನ್ಯೂಯಾರ್ಕ್ ) ೨೦೦೨

ಹೊರಗಿನ ಕೊಂಡಿಗಳು

ಬದಲಾಯಿಸಿ
ಬಾಬರ್
Born: 14 February 1483 Died: 26 December 1530
Regnal titles
ಪೂರ್ವಾಧಿಕಾರಿ
None
Mughal Emperor
1526-1530
ಉತ್ತರಾಧಿಕಾರಿ
Humayun
"https://kn.wikipedia.org/w/index.php?title=ಬಾಬರ್&oldid=1214453" ಇಂದ ಪಡೆಯಲ್ಪಟ್ಟಿದೆ