ಸಾಹಸ
ಉತ್ತೇಜಕ ಅಥವಾ ಅಸಾಮಾನ್ಯ ಅನುಭವ
ಸಾಹಸ ಒಂದು ರೋಮಾಂಚಕ ಅಥವಾ ಅಸಾಮಾನ್ಯ ಅನುಭವ. ಅದು ಅನಿಶ್ಚಿತ ಫಲಿತಾಂಶದ ಒಂದು ದಿಟ್ಟ, ಸಾಮಾನ್ಯವಾಗಿ ಅಪಾಯದ ಕೆಲಸವೂ ಆಗಿರಬಹುದು. ಸಾಹಸಗಳು ಪ್ರಯಾಣ, ಅನ್ವೇಷಣೆ, ಬಾನಜಿಗಿತ, ಪರ್ವತಾರೋಹಣ, ಸ್ಕೂಬಾ ಡೈವಿಂಗ್, ನದಿ ರಾಫ್ಟಿಂಗ್ ಅಥವಾ ತೀವ್ರ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಂತಹ ಸ್ವಲ್ಪ ಶಾರೀರಿಕ ಅಪಾಯದ ಸಾಧ್ಯತೆಯಿರುವ ಚಟುವಟಿಕೆಗಳಾಗಿರಬಹುದು. ಈ ಪದ ಸ್ಥೂಲವಾಗಿ ವ್ಯಾಪಾರ ಸಾಹಸೋದ್ಯಮ, ಅಥವಾ ಇತರ ಪ್ರಮುಖ ಜೀವನೋದ್ಯಮಗಳಂತಹ ಶಾರೀರಿಕ, ಆರ್ಥಿಕ ಅಥವಾ ಮಾನಸಿಕ ಅಪಾಯ ತುಂಬಿರುವ ಸಾಧ್ಯತೆಯಿರುವ ಯಾವುದೇ ಉದ್ಯಮವನ್ನೂ ಸೂಚಿಸುತ್ತದೆ.
ಸಾಹಸಮಯ ಅನುಭವಗಳು ಮಾನಸಿಕ ಪ್ರಚೋದನೆಯನ್ನು[೧] ಸೃಷ್ಟಿಸುತ್ತವೆ, ಮತ್ತು ಇದನ್ನು ನಕಾರಾತ್ಮಕ (ಉದಾ. ಭಯ) ಅಥವಾ ಸಕಾರಾತ್ಮಕ (ಉದಾ. ಹರಿವು) ಎಂದು ಅರ್ಥೈಸಬಹುದು. ಕೆಲವರಿಗೆ, ಸಾಹಸ ತನ್ನಲ್ಲಿ ತಾನೇ ಮತ್ತು ತನ್ನಷ್ಟಕ್ಕೆ ತಾನೇ ಒಂದು ಪ್ರಮುಖ ಅನ್ವೇಷಣೆ ಆಗಿಬಿಡುತ್ತದೆ. "ಜೀವನ ಒಂದು ಎದೆಗಾರಿಕೆಯ ಸಾಹಸ ಅಥವಾ ಏನೂ ಇಲ್ಲ" ಎಂದು ಹೆಲೆನ್ ಕೆಲರ್ ಹೇಳಿದರು.[೨]
ಉಲ್ಲೇಖಗಳು
ಬದಲಾಯಿಸಿ- ↑ M Gomà-i-Freixanet (2004), "Sensation Seeking and Participation in Physical Risk Sports", On the psychobiology of personality, Elsevier, p. 187, ISBN 978-0-08-044209-9
- ↑ Keller, Helen (1957). The Open Door.