ಇರಾನಿಗಳು ದಕ್ಷಿಣ ಏಷ್ಯಾದಲ್ಲಿನ ಒಂದು ಜನಾಂಗೀಯ ಧಾರ್ಮಿಕ ಸಮುದಾಯ; ಅವರು ಇರಾನ್‍ನಿಂದ ದಕ್ಷಿಣ ಏಷ್ಯಾಕ್ಕೆ ೧೬ರಿಂದ ೧೮ನೇ ಶತಮಾನದಲ್ಲಿ ವಲಸೆ ಹೋದ ಜರತುಷ್ಟ್ರ ಧರ್ಮೀಯರಿಗೆ ಸೇರಿದ್ದಾರೆ. ಅವರು, ಜರತುಷ್ಟ್ರ ಧರ್ಮೀಯರಾದರೂ ಉಪಖಂಡದಲ್ಲಿ ೧೨೦೦ ವರ್ಷಗಳಷ್ಟು ಹಿಂದೆಯೇ ಪರ್ಷಿಯಾದ ಪಾರ್ಸ್ ಪ್ರಾಂತ್ಯದಿಂದ ಆಗಮಿಸಿದ ಪಾರ್ಸಿಗಳಿಗಿಂತ ಸಾಂಸ್ಕೃತಿಕವಾಗಿ, ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ಭಿನ್ನವಾಗಿದ್ದಾರೆ. ಪಾರ್ಸಿಗಳು ಮತ್ತು ಇರಾನಿಗಳನ್ನು ಕಾನೂನುಬದ್ಧವಾಗಿ ಭಿನ್ನವೆಂದೂ ಪರಿಗಣಿಸಬಹುದು.

"https://kn.wikipedia.org/w/index.php?title=ಇರಾನಿ&oldid=609474" ಇಂದ ಪಡೆಯಲ್ಪಟ್ಟಿದೆ