ಮೈಸೂರು ಸಂಸ್ಥಾನ

ಕರ್ನಾಟಕದ ಇತಿಹಾಸ
 - 
GBerunda.JPG
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ
ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

ಮೈಸೂರು ಸಂಸ್ಥಾನ (೧೩೯೯ - ೧೯೪೭) ದಕ್ಷಿಣ ಭಾರತದಲ್ಲಿ ಆಳ್ವಿಕೆ ನಡೆಸಿದ ಒಂದು ಸಾಮ್ರಾಜ್ಯ. ೧೩೯೯ರಲ್ಲಿ ಯದುರಾಯರಿಂದ ಸ್ಥಾಪಿಸಲಾದ ಈ ಸಂಸ್ಥಾನ, ಒಡೆಯರ್ ರಾಜಮನೆತನದಿಂದ ಆಳಲ್ಪಟ್ಟಿತು. ೧೫೬೫ರವರೆಗೆ ವಿಜಯನಗರ ಸಾಮ್ರ್ಯಾಜ್ಯಸಾಮಂತ ರಾಜ್ಯವಾಗಿದ್ದು, ಮುಂದೆ ಸ್ವತಂತ್ರ ರಾಜ್ಯವಾಯಿತು. ೧೫೬೫ರ ನಂತರ ವಿಜಯನಗರ ಸಾಮ್ರಾಜ್ಯದ ಅಳಿವಿನ ಜೊತೆಯಲ್ಲಿ ಮೈಸೂರು ಸಂಸ್ಥಾನವು ಸ್ವತಂತ್ರ ಸಂಸ್ಥಾನವಾಯಿತು.

೧೭೮೪ ರಲ್ಲಿ ಮೈಸೂರು ಸಂಸ್ಥಾನದ ವಿಸ್ತಾರ
Madras Prov South 1909 Mysore-1909 ರಲ್ಲಿ ಮೈಸೂರು ಸಂಸ್ಥಾನ - 9 ಜಿಲ್ಲೆಗಳ ನಕ್ಷೆ-ದೊಡ್ಡ ನಕ್ಷೆಗೆ ಅದರ ಮೇಲೆ ಕ್ಲಿಕ್ ಮಾಡಿ.

ಇತಿವೃತ್ತಸಂಪಾದಿಸಿ

  • ೧೭ನೇ ಶತಮಾನದಲ್ಲಿ ಸಂಸ್ಥಾನದ ವಿಸ್ತರಣೆ ಸಕ್ರಿಯಯವಾಗಿತ್ತು. ನರಸರಾಜ ಒಡೆಯರ್ ಮತ್ತು ಚಿಕ್ಕ ದೇವರಾಜ ಒಡೆಯರ್ ಆಳ್ವಿಕೆಯಲ್ಲಿ ಹೆಚ್ಚಿನ ವಿಸ್ತರಣೆ ನಡೆದು ಮೈಸೂರು ಸಂಸ್ಥಾನವು ದಕ್ಷಿಣ ಡೆಕ್ಕನ್ ಪ್ರಸ್ತಭೂಮಿಯಲ್ಲಿ ಶಕ್ತಿಯುತ ರಾಜ್ಯಾವಾಗಿ ಬೆಳೆಯಿತು. ಮೈಸೂರು ಸಂಸ್ಥಾನವು ಈಗಿನ ದಕ್ಷಿಣ ಕರ್ನಾಟಕ ಹಾಗು ತಮಿಳುನಾಡಿನ ಕೆಲವು ಜಿಲ್ಲೆಗಳನ್ನು ಹೊಂದಿತ್ತು.
  • ಹೈದರ್ ಆಲಿ ಹಾಗು ಅವನ ಪುತ್ರ ಟಿಪ್ಪು ಸುಲ್ತಾನರು ೧೮ನೇ ಶತಮಾನದಲ್ಲಿ ಒಡೆಯರರನ್ನು ಗದ್ದುಗೆಯಿಂದ ಇಳಿಸಿ, ಮೈಸೂರು ಸಂಸ್ಥಾನವನ್ನು ತಮ್ಮ ಆಳ್ವಿಕೆಯಲ್ಲಿ ತೆಗೆದುಕೊಂಡರು. ಇವರ ಆಳ್ವಿಕೆಯಲ್ಲಿ ಸಂಸ್ಥಾನವು ತನ್ನ ಸೇನೆಯ ಬಲಾಡ್ಯತೆಯ ತುತ್ತತುದಿ ತಲುಪಿತು. ಇವರ ಆಳ್ವಿಕೆಯ ಸಮಯದಲ್ಲಿ ಸಮರಗಳು ಹೆಚ್ಚಾಗಿ ಸಾಗಿದ್ದವು -
  • ಮರಾಠರ ವಿರುದ್ಧ, ಆಂಗ್ಲರ ವಿರುದ್ಧ ಹಾಗು ಗೋಲ್ಕೊಂಡದ ನಿಝಾಮರ ವಿರುದ್ಧ. ಈ ಸಮಯದಲ್ಲಿ ನಾಲ್ಕು ಆಂಗ್ಲೊ-ಮೈಸೂರು ಸಮರಗಳು ನಡೆದವು. ಮೊದಲೆರಡು ಆಂಗ್ಲೊ-ಮೈಸೂರು ಸಮರಗಳಲ್ಲಿ ಮೈಸೂರು ಜಯಗಳಿಸಿತು ಹಾಗು ಕೊನೆಯೆರಡರಲ್ಲಿ ಸೋಲಪ್ಪಿತು. ೧೭೯೯ರಲ್ಲಿ ನಾಲ್ಕನೇ ಸಮರದಲ್ಲಿ ಟಿಪ್ಪುವಿನ ಸಾವಿನ ನಂತರ ಸಂಸ್ಥಾನದ ಸಿಂಹಪಾಲು ಆಂಗ್ಲರ ಪಾಲಾಯಿತು.
  • ತದ ನಂತರ ಆಂಗ್ಲರು ಒಡೆಯರನ್ನ ಮೈಸೂರು ಸಂಸ್ಥಾನದ ದೊರೆಗಳನ್ನಾಗಿ ಮಾಡಿದರು. ಒಡೆಯರ ಆಳ್ವಿಕೆಯು ೧೯೪೭ರಲ್ಲಿ ಭಾರತದ ಸ್ವಾತಂತ್ರ್ಯದವರೆಗೂ ಮುಂದುವರೆಯಿತು. ೧೭೯೯- ೧೯೪೭ರ ಅವಧಿಯಲ್ಲಿ ಒಡೆಯರ ಆಳ್ವೆಕಯಲ್ಲಿ ಆಂಗ್ಲರ ರಾಜ್ಯವಾಗಿದ್ದ ಮೈಸೂರು ಆಧುನೀಕರಣಕ್ಕೆ ಪ್ರಖ್ಯಾತಿ ಹೊಂದಿತ್ತು.
  • ಲಾರ್ಡ ವಿಲಿಯಂ ಬೆಂಟಿಂಗ್ ಆಡಳಿತವನ್ನು ಒಡೆಯರಿಂದ ಕಿತ್ತುಕೊಂಡು, ಅದನ್ನು ೧೮೩೧ರಿಂದ ೧೮೮೧ರ ವರೆಗೆ ಕಮಿಷನರ್ ಗಳ ಆಳ್ವಿಕೆಗೆ ಒಳಪಡಿಸಿದರು. ೫೦ ವರುಷಗಳ ಆಧುನಿಕತೆಯ ಕಾಲ ಇದಾಗಿತ್ತು. ಸಾರ್ ಮಾರ್ಕ್ ಕಬ್ಬನ್ [೧೮೩೪-೧೮೬೧]: ೧೮೩೪-ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ವರ್ಗಾವಣೆ ಮಾಡಲಾಯಿತು. ೧೮೪೩ರಲ್ಲಿ ರೆಸಿಡೆಂಟ್ ಹುದ್ದೆ ರದ್ದಾಯಿತು. ಬ್ರಿಟಿಷ್ ಇಂಡಿಯಾ ನಾಣ್ಯಗಳನ್ನು ಜಾರಿಗೆ ತಂದರು. ೩೦೯ ಸೇತುವೆಗಳು ಇರ್ಮಾಣವಾದವು. ಬೆಂಗಳೂರಿನಲ್ಲಿ ಕಬ್ಬನ್ ಪಾರ್ಕ್ ನ ಉದಯವಾಯಿತು . ೧೬೦೦ ಮೈಲಿ ಉದ್ದದ ರಸ್ತೆ, ಮತ್ತು ೩೬೫ ಮೈಲು ಉದ್ದದ ಟೆಲಿಗ್ರಾಫ್ ತಂತಿಯನ್ನು ಹಾಕಲಾಯಿತು. ೧೮೫೯ರಲ್ಲಿ ಜೋಲಾರಪೇಟೆ ಮತ್ತು ಬೆಂಗಳೂರುಗಳ ಮಧ್ಯ ರೇಲ್ವೆ ಮಾರ್ಗ ಹಾಸಿದರು. ಇದನ್ನು ಮುಂದೆ ಮದ್ರಾಸಿಗೆ ಜೋಡಿಸಲಾಯಿತು. [೧೮೨೦ರಲ್ಲಿ ಮೊತ್ತ ಮೊದಲಿಗೆ ಇಂಗ್ಲೆಂಡ್ ನಲ್ಲಿ ರೇಲ್ವೆ ಸೇವೆ ಆರಂಭವಾಗಿತ್ತು. ಇದಾದ ಮೂರೂ ದಶಕಗಳಲ್ಲಿ, ರೇಲ್ವೆ ತಂತ್ರ, ಭಾರತದ ಬೆಂಗುಳೂರಿನಲ್ಲಿ ಸ್ಥಾಪನೆ ಯಾಯಿತು.] ಕಬ್ಬನ್ನರು ರೇಷ್ಮೆ, ಉಣ್ಣೆ, ಮತ್ತು ಹತ್ತಿಯ ಮಿಲ್ಲುಗಳಿಗೆ ನೆರವು ಕೊಟ್ಟರು. ತುಮಕೂರು, ಹಾಸನ, ಮೈಸೂರು, ಮಂಗಳೂರ ಮತ್ತು ಬೆಂಗಳೂರುಗಳಲ್ಲಿ ಅನೇಕ ಶಾಲಾ ಕಾಲೇಜುಗಳು ಸ್ಥಾಪನೆಯಾದವು. ೧೮೫೮ರಲ್ಲಿ ಬೆಂಗಳೂರಿನಲ್ಲಿ ಒಂದು ಪ್ರೌಢಶಾಲೆ ಸ್ಥಾಪನೆಗೊಂಡಿತು. ಶಿಕ್ಷಣ ಇಲಾಖೆ ಸ್ಥಾಪನೆಯಾಯಿತು. ೧೮೪೦ರಲ್ಲಿ ಮುದ್ರಣಾಲಯ ಬಂತು. ಕೆಲವು ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳು ಪ್ರಕಟವಾದವು. Transformatiom and modernization started by kabban. ಕಬ್ಬನ್ ೧೮೬೧ರಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ದೇಶಕ್ಕೆ ಮರಳುವಾಗ ಮಾರ್ಗ ಮದ್ಯದಲ್ಲಿ ನಿಧನರಾದರು. ಕಬ್ಬನ್ನರ ಕಾಲವನ್ನು ಪರಿವರ್ತನೆಯ ಕಾಲ ಎನ್ನುವರು.
  • ಮೈಸೂರು ರಾಜರು ಸಂಗೀತ ಮತ್ತು ಚಿತ್ರಕಲೆಯಲ್ಲಿ ಅತಿಯಾದ ಆಸಕ್ತಿ ಹೊಂದಿದ್ದರಿಂದ ಮೈಸೂರಿನಲ್ಲಿ ಈ ದಿನಕ್ಕೊ ಪ್ರಖ್ಯಾತಿ ಹೊಂದಿರುವ ಚಿತ್ರಕಲೆಗಳು ಮತ್ತು ಸಂಗೀತ ಸಂಸ್ಕೃತಿ ಬೆಳಿಯಿತು.[೧]

ಮೈಸೂರು ಸಂಸ್ಥಾನವನ್ನು ಆಳಿದ ಅರಸರುಸಂಪಾದಿಸಿ

 
"Palace of the Maharajah of Mysore, India," from the Illustrated London News, 1881 (with modern hand coloring)
 
Mysore Palace built between 1897 and 1912
  1. ಯದುರಯರುರು (ಸುಮಾರು 1399-1423)
  2. ಬೆಟ್ಟದ ಚಾಮರಾಜ ಒಡೆಯರು (1423-1459)
  3. ತಿಮ್ಮರಾಜ ಒಡೆಯರು (1459-1478)
  4. ಹಿರಿಯ ಚಾಮರಾಜ ಒಡೆಯರು (1478-1513)
  5. ಹಿರಿಯ ಬೆಟ್ಟದ ಚಾಮರಾಜ ಒಡೆಯರು (1513-1553)
  6. ತಿಮ್ಮರಾಜ ಒಡೆಯರು
  7. ಬೋಳ ಚಾಮರಾಜ ಒಡೆಯರು
  8. ಬೆಟ್ಟದ ಚಾಮರಾಜ ಒಡೆಯರು ( ಈ ಮೂರೂ ಜನ 1553-1578)
  9. ರಾಜ ಒಡೆಯರು (1578-1618) ನಲವತ್ತು ವರ್ಷಗಳ ದೀರ್ಘ ಕಾಲದ ಆಳ್ವಿಕೆ.
  10. ಚಾಮರಾಜ ಒಡೆಯರು (1617-1637)
  11. ಎರಡನೆ ರಾಜ ಒಡೆಯರು (1637-1638)ಕೇವಲ 1 ವರ್ಷದ ಆಳ್ವಿಕೆ
  12. ರಣಧೀರ ಕಂಠೀರವ ನರಸರಾಜ ಒಡೆಯರು (1638-1659)
  13. ದೊಡ್ಡದೇವರಾಜ ಒಡೆಯರು (1659-1673)
  14. ಚಿಕ್ಕದೇವರಾಜ ಒಡೆಯರು (1673-1704)
  15. ಚಿಕ್ಕದೇವರಾಜ ಒಡೆಯರ ಮೂಕ ಮಗ (1704-1714)( ತಾಯಿ, ಮಂತ್ರಿಗಳ ಸಹಕಾರದೊಂದಿಗೆ)
  16. ದೊಡ್ಡ ಕೃಷ್ಣರಾಜ ಒಡೆಯರು (1714-1734)
  17. ಅಂಕನಹಳ್ಳಿ ಚಾಮರಾಜ ಒಡೆಯರು
  18. ಇಮ್ಮಡಿ ಕೃಷ್ಣರಾಜ ಒಡೆಯರು (ಇಬ್ಬರೂ ದತ್ತುಪುತ್ರರು, 1766ರರ ವರೆಗೆ, ಅಂದಿನ ಆಡಳಿತ ಮಂತ್ರಿಗಳ ಕುತಂತ್ರಕ್ಕೊಳಪಟ್ಟಿದ್ದು ವಿವರಗಳು ಕಡಿಮೆ)
  19. ನಂಜರಾಜ ಒಡೆಯರು (1766-1770)
  20. ಬೆಟ್ಟದ ಚಾಮರಾಜ ಒಡೆಯರು (1770-1776)
  21. ಖಾಸಾ ಚಾಮರಾಜ ಒಡೆಯರು (1776-1796) ಮೈಸೂರು ಸಂಸ್ಥಾನ ಬ್ರಿಟಿಷರ ಅಧೀನದಲ್ಲಿದ್ದಾಗ...
  22. ಮುಮ್ಮಡಿ ಕೃಷ್ಣರಾಜ ಒಡೆಯರು (1799ರಲ್ಲಿ ಪಟ್ಟಕ್ಕೆ ಬಂದಾಗ ಕೇವಲ 5 ವರ್ಷದವರು ) ಆವರು ಸ್ವತಂತ್ರವಾಗಿ ಆಡಳಿತ ನಿರ್ವಹಿಸಿದ್ದು 1810ರಿಂದ ಬ್ರಿಟಿಷರ ತಂತ್ರದಿಂದ ಮುಮ್ಮಡಿ ಕೃಷ್ಣರಾಜ ಒಡೆಯರು ಆಡಳಿತವನ್ನು ಬ್ರಿಟಿಷ್ ಕಮಿಷನರಿಗೆ ಬಿಟ್ಟುಕೊಡಬೇಕಾಯಿತು.
  23. ಚಾಮರಾಜ ಒಡೆಯರು (1881-1902)
  24. ನಾಲ್ವಡಿ ಕೃಷ್ಣರಾಜ ಒಡೆಯರು (1902-1940)
  25. ಜಯಚಾಮರಾಜ ಒಡೆಯರು (1940ರಿಂದ ಪ್ರಜಾತಂತ್ರ ಸ್ಥಾಪನೆಯಾಗುವವರೆಗೆ, ನಂತರವೂ ರಾಜ ಪ್ರಮುಖರಾಗಿ, ರಾಜ್ಯಪಾಲರಾಗಿ ನಾಡಿಗೆ ಸೇವೆ ಸಲ್ಲಿಸಿದರು. ಮದ್ರಾಸು ರಾಜ್ಯದ ರಾಜ್ಯಪಾಲರಾಗಿ ನಿವೃತ್ತರಾದರು.)(ನಂಜರಾಜ ಒಡೆಯರ ಕಾಲಕ್ಕೆ ಹೈದರಾಲಿಯು ಪ್ರಬಲನಾಗಿ ಮೈಸೂರು ಸಂಸ್ಥಾನದ ಆಡಳಿತವನ್ನು ಕೈಗೆ ತೆಗೆದುಕೊಂಡನು, 1782ರಲ್ಲಿ ಅವನು ಮರಣ ಹೊಂದಿದನು. ನಂತರ ಅವನ ಮಗ ಟಿಪ್ಪೂಸುಲ್ತಾನನು ಸಂಸ್ಥಾನದ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದ್ದುದರಿಂದ, ನಂಜರಾಜರು, ಬೆಟ್ಟದ ಚಾಮರಾಜರು, ಖಾಸಾ ಚಾಮರಾಜರು ಕೇವಲ ಹೆಸರಿಗೆ ಮಾತ್ರ ರಾಜರಾಗಿದ್ದರು)

ಉಲ್ಲೇಖಗಳುಸಂಪಾದಿಸಿ

  1. ಬಾಲ್ಯ ವಿವಾಹ ಮಸೂದೆ ಮತ್ತು ಪುನರ್ವಸತಿಕರಣ
  • ೧(ಇಂಗ್ಲಿಷ್ ವಿಭಾಗ)A concise history of Karnataka : from pre-historic times to the presenthttps://lccn.loc.gov/80905179
  • (೨.ಮೈಸೂರು ಕೈಪಿಡಿ, ಮೈಸೂರು ಶಿಕ್ಷಣ ಇಲಾಖೆ ಪ್ರಕಟಣೆ )ಮೈಸುರು ಒಡೆಯರ ಇತಿಹಾಸ.