ಕನ್ನಡ ವರ್ಣಮಾಲೆಯ ಮೊದಲ ಅಕ್ಷರವಾಗಿದೆ. ಅ ಕನ್ನಡದ ಸ್ವರಾಕ್ಷರ. ನಾಮಿ ಸ್ವರಗಳಲ್ಲಿ ಅ ಮತ್ತು ಆ ಸೇರುತ್ತವೆ. ಹಾಗಾಗಿ ಸವರ್ಣದೀರ್ಘ ಸಂಧಿಗಳಲ್ಲಿ ಅ ಅಕ್ಷರದ ಪಾತ್ರವೂ ಇದೆ. ಸಂಧಿಕಾರ್ಯ ಲೋಪಸಂಧಿಯಲ್ಲಿ ಕಾರ ಲೋಪಸಂಧಿ ಬರುತ್ತದೆ. ಉದಾಹರಣೆಗೆ: ಅವನ+ಊರು=ಅವನೂರು ಎಂದಾಗುತ್ತದೆ. ಎಂದರೆ ಸಂಧಿ ಕಾರ್ಯದಲ್ಲಿ ಅ+ಊ=ಊ ಎಂದಾಗುತ್ತದೆ.[]

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ

ಬದಲಾಯಿಸಿ

ಕನ್ನಡ ವರ್ಣಮಾಲೆಯ ಮೊದಲನೆಯ ಅಕ್ಷರವಾದ ಅಕಾರದ ಅತ್ಯಂತ ಹಳೆಯ ರೂಪವನ್ನು ಪ್ರ. ಶ.ಪೂ. 3 ನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯ ಶಾಸನಗಳಲ್ಲಿ ಕಾಣಬಹುದು. ಆ ಕಾಲದ ಬ್ರಾಹ್ಮೀಲಿಪಿಯಿಂದ ಅಕಾರವು ವಿಕಾಸಹೊಂದಿ ಇಂದಿನ ರೂಪವನ್ನು ತಾಳಿತೆಂಬುದನ್ನು ಗಮನಿಸಬೇಕು. ಅಶೋಕನ ಬ್ರಾಹ್ಮೀಲಿಪಿಯಲ್ಲಿ ಇದು ಮೂರು ರೇಖೆಗಳಿಂದ ಕೂಡಿದ್ದು ಈಗಿನ ರೂಪಕ್ಕಿಂತ ಭಿನ್ನವಾಗಿ ಕಾಣುತ್ತದೆ. ಪ್ರ. ಶ . 2ನೇ ಶತಮಾನದ ಸಾತವಾಹನರ ಬ್ರಾಹ್ಮೀಲಿಪಿಯಲ್ಲಿ ಕಂಡುಬರುವ ಕೆಲವು ಬದಲಾವಣೆಗಳು ಗಮನಾರ್ಹ. ಅಕ್ಷರದ ಕೆಳತುದಿಗಳು ಬಾಗುತ್ತವೆ. ಮೇಲ್ಭಾಗದಲ್ಲಿ ಕದಂಬ ತ್ರಿಕೋನಾಕಾರದ ತುದಿಗಳು ಕಾಣಬರುತ್ತವೆ. 5ನೆಯ ಶತಮಾನ ಪ್ರ. ಶ 5ನೆಯ ಶತಮಾನದ ಕದಂಬರ ಲಿಪಿಯಲ್ಲಿ ಚೌಕಾಕಾರದ ತಲೆಕಟ್ಟನ್ನು ಗಮನಿಸಬಹುದು. ಮುಂದಿನ ಶತಮಾನದ ಬಾದಾಮಿಚಾಳುಕ್ಯರ 6ನೆಯ ಶತಮಾನ ಶಾಸನಗಳಲ್ಲಿ ಇದು ಅಗಲವಾಗಿ ಈಗಿನ ರೂಪಕ್ಕೆ ದಾರಿಮಾಡಿಕೊಡುತ್ತದೆ. ಪ್ರ. ಶ.9ನೆಯ ಶತಮಾನದ ರಾಷ್ರ್ಟಕೂಟರ ಶಾಸನಗಳಲ್ಲಿ ಪ್ರತ್ಯೇಕ ರೇಖೆಗಳು ಮಾಯವಾಗಿ ತುದಿಯಿಂದ ಕೊನೆಯವರೆಗೂ ವೃತ್ತಾಕಾರದ ಒಂದೇ ರೇಖೆಯು ಉಂಟಾಗುತ್ತದೆ.ಇದು ಈಗಿನ ರೂಪಕ್ಕೆ ಅತ್ಯಂತ ಸಮೀಪದ್ದಾಗಿ ಕಾಣುತ್ತದೆ. ಇದೇ ರೂಪ ಸ್ಥಿರಗೊಂಡು ಮುಂದಿನ ಶತಮಾನಗಳಲ್ಲಿ ಇನ್ನೂ ಗುಂಡಗಾಗಿ ಈಗಿನ ರೂಪವನ್ನು ಪ್ರ.ಶ 18ನೆಯ ಶತಮಾನದಲ್ಲಿ ತಾಳುತ್ತದೆ.

ಕನ್ನಡ ವರ್ಣಮಾಲೆಯ ಈ ಮೊದಲನೆಯ ಅಕ್ಷರ ಎರಡು ಹ್ರಸ್ವಸ್ವರಧ್ವನಿಗಳನ್ನು ಸೂಚಿಸುತ್ತದೆ. ಒಂದು, ಸಾಮಾನ್ಯವಾದ ವಿವೃತ ಮಧ್ಯ ಅಗೋಲ ಸ್ವರ; ಇನ್ನೊಂದು, ಕೆಲವರ ಉಚ್ಚಾರದಲ್ಲಿ ಕಂಡುಬರುವ ಮಧ್ಯ -ಮಧ್ಯ ಅಗೋಲ ಸ್ವರ. ಇವು ಎರಡಕ್ಕೂ ಇರುವ ವ್ಯತ್ಯಾಸವನ್ನು ಅತ್ತೆ(ಅವಳು ನನ್ನ ಅತ್ತೆ’; ದುಃಖದಿಂದ ನಾನು ‘ಅತ್ತೆ’), ತಂದೆ (ಅವರು ನನ್ನ ‘ತಂದೆ’; ಅಂಗಡಿಯಿಂದ ‘ತಂದೆ’) ಮೊದಲಾದ ಪದಗಳ ಉಚ್ಚಾರದಲ್ಲಿ ಗಮನಿಸಬಹುದು.[]

 
evolution of kannada language alphabet -a

ಅ ಅಕ್ಷರ ಬೆಳೆದುಬಂದ ಇತಿಹಾಸ

ಬದಲಾಯಿಸಿ

ಬ್ರಾಹ್ಮಿ ಲಿಪಿಯಿಂದ ಅಕ್ಷರ ಕೆಳಗೆ ತೋರಿಸಿದಂತೆ ಬೆಳೆದು ಬಂದಿದೆ. []

ಅಕ್ಷರ ಕಾಲ ಪ್ರಮುಖ ರಾಜ ಮನೆತನ
  ಕ್ರಿ.ಪೂ ೩ ಅಶೋಕ
  ಕ್ರಿ.ಶ ೨ ಸಾತವಾಹನ
  ಕ್ರಿ.ಶ ೪ ಕದಂಬ
  ಕ್ರಿ.ಶ ೬ ಗಂಗ
  ಕ್ರಿ.ಶ ೬ ಬಾದಾಮಿ ಚಾಲುಕ್ಯ
  ಕ್ರಿ.ಶ ೯ ರಾಷ್ಟ್ರಕೂಟ
  ಕ್ರಿ.ಶ ೧೦ ಕಲ್ಯಾಣಿ ಚಾಲುಕ್ಯ
  ಕ್ರಿ.ಶ ೧೩ ಕಳಚೂರಿ
  ಕ್ರಿ.ಶ ೧೩ ಹೊಯ್ಸಳ
  ಕ್ರಿ.ಶ ೧೩ ಸೇವುಣ
  ಕ್ರಿ.ಶ ೧೫ ವಿಜಯನಗರ
  ಕ್ರಿ.ಶ ೧೮ ಮೈಸೂರು

ಕನ್ನಡದ ನಾಮಿ ಸ್ವರಗಳು

ಬದಲಾಯಿಸಿ

ಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.

ಹೃಸ್ವಸ್ವರ ದೀರ್ಘಸ್ವರ

ಅ ಕನ್ನಡ ಅಕ್ಷರದ ಬರವಣಿಗೆ ಮತ್ತು ಉಚ್ಚಾರಣೆ ವಿಧಾನ

ಬದಲಾಯಿಸಿ
ಕನ್ನಡ ದೇವನಾಗರಿ ISO 15919 ಸಂಕೇತ ಬರೆಯುವ ವಿಧಾನ ಉಚ್ಚಾರಣೆ
a  

ಅ ದಿಂದ ಆರಂಭವಾಗುವ ನಾಮಪದಗಳು

ಬದಲಾಯಿಸಿ

ಅ ದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು

ಬದಲಾಯಿಸಿ
  • ಅರುವತ್ತು ಅರುವತ್ತರಿಂದ ಅರುವತ್ತೊಂಬತ್ತು - ಒಟ್ಟು ಹತ್ತು ಪದಗಳು ಮಾತ್ರ ಕನ್ನಡದಲ್ಲಿ ಸಿಗುವ ಅ ಅಕ್ಷರದಿಂದ ಆರಂಭವಾಗುವ ಸಂಖ್ಯಾವಾಚಿಗಳು.

ಉಲ್ಲೇಖಗಳು

ಬದಲಾಯಿಸಿ
 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಅ&oldid=1201277" ಇಂದ ಪಡೆಯಲ್ಪಟ್ಟಿದೆ