ಧ
ಧ, ಕನ್ನಡ ವರ್ಣಮಾಲೆಯ ತ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಮಹಾಪ್ರಾಣ
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಅಶೋಕನ ಕಾಲದಲ್ಲಿ ಬಲಕ್ಕೆ ಹೊರಭಾಗವನ್ನುಳ್ಳ ಮುಚ್ಚಿರುವ ಅರ್ಧವೃತ್ತದಂತೆ ಇದ್ದ ಈ ಬ್ರಾಹ್ಮೀ ಅಕ್ಷರ ಸಾತವಾಹನರ ಕಾಲದಲ್ಲಿ ಮೊಟ್ಟೆಯಂತೆ ನಯವಾದ ಮೂಲೆಗಳುಳ್ಳದ್ದಾಗಿ ಕದಂಬರ ಕಾಲಕ್ಕೆ ತಲೆಕಟ್ಟೂ ಹೊಕ್ಕಳೂ ಕಾಣುವಂತಾಗುತ್ತದೆ. ಕಲ್ಯಾಣ ಚಾಲುಕ್ಯರ ಕಾಲಕ್ಕೆ ತಲೆಕಟ್ಟು ಖಚಿತವಾಗುತ್ತದೆ. ಅಲ್ಪಪ್ರಾಣಾಕ್ಷರ ದ ದಿಂದ ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿರುವುದು ವಿಜಯನಗರದ ಅರಸರ ಕಾಲದ ಬರಹದಲ್ಲಿ ಕಾಣಬರುವ ಒಂದು ಮುಖ್ಯ ಬದಲಾವಣೆ. ಅಲ್ಲಿಂದಲೇ ಈ ಅಕ್ಷರದ ಹೊಸಗನ್ನಡ ರೂಪ ಸಿದ್ದಿಸಿತೆಂದು ತೋರುತ್ತದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: