ಔ
ಔ ಕನ್ನಡ ವರ್ಣಮಾಲೆಯ ಹದಿನಾಲ್ಕನೇ ಅಕ್ಷರವಾಗಿದೆ.ಇದು ಒಂದು ಸ್ವರಾಕ್ಷರ.
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಕನ್ನಡ ವರ್ಣಮಾಲೆಯಲ್ಲಿ 14ಯದು. ದೀರ್ಘ ಸ್ವರಾಕ್ಷರ. ವ್ಯಂಜನಗಳ ಜೊತೆ ಸೇರದೆ, ಸ್ವತಂತ್ರವಾಗಿ ದೊರಕುವುದು ಅಪುರ್ವ. ಆದುದರಿಂದ ಈ ಅಕ್ಷರದ ಬ್ರಾಹ್ಮೀಲಿಪಿಯ ಸ್ವರೂಪವನ್ನು ತಿಳಿಯುವುದು ಕಷ್ಟ. ಪ್ರ.ಶ. 12ನೆಯ ಶತಮಾನದ ಕಲ್ಯಾಣಿ ಚಾಲುಕ್ಯರ ಶಾಸನಗಳಲ್ಲಿ ಈ ಅಕ್ಷರ ಈಗಿರುವಂತೆ ಇರುವುದನ್ನು ಗಮನಿಸಬಹುದು. ಆದುದರಿಂದ ಪ್ರ.ಶ. 12ನೆಯ ಶತಮಾನಕ್ಕಿಂತ ಮುಂಚೆಯೇ ಇದು ಬ್ರಾಹ್ಮೀಲಿಪಿ ಯಿಂದ ವಿಕಾಸವಾಗಿರಬೇಕು. ಪ್ರ.ಶ. 12ನೆಯ ಶತಮಾನದಿಂದ ಈ ಅಕ್ಷರದ ರೂಪ ಸ್ಥಿರವಾಗಿದ್ದು ಬದಲಾವಣಿಯಿಲ್ಲದೆ ಮುಂದುವರಿಯುತ್ತಿದೆ.
ಶಾಸ್ರ್ರೀಯ ವಿವರ
ಬದಲಾಯಿಸಿಐ ಎಂಬ ಅಕ್ಷರಕ್ಕೆ ಅಯ್ ಎಂಬ ಉಚ್ಛಾರಣೆ ಬರುವಂತೆ ಔಗೆ ಅವ್ ಎಂಬ ಉಚ್ಛಾರಣೆಯೂ ಇರುವುದು ಕಂಡುಬಂದಿದೆ. ಇದು ಸಂಯುಕ್ತಸ್ವರ.[೧]
ಉಲ್ಲೇಖ
ಬದಲಾಯಿಸಿವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: