ಚ
ಒಂದು ವ್ಯಂಜನ
ಚ, ಕನ್ನಡ ವರ್ಣಮಾಲೆಯ ಚ-ವರ್ಗದ ಮೊದಲನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಇದಕ್ಕೆ ಈಗಿನ ರೂಪದ ಅಲ್ಪಸ್ವಲ್ಪ ಹೋಲಿಕೆ ಕಂಡುಬರುವುದು ಗಂಗರ ಕಾಲದಲ್ಲಿ. ರೂಪ ಇನ್ನೂ ಸ್ಫುಟವಾಗುವುದು ಕಲ್ಯಾಣಿ ಚಾಳುಕ್ಯರ ಕಾಲಕ್ಕೆ. ಮುಂದಿನ ಶತಮಾನಗಳಲ್ಲಿ ಅಕ್ಷರದ ಪ್ರಾರಂಭದ ಎಡತುದಿಯಲ್ಲಿ ಸಣ್ಣ ಕೊಂಡಿ ಸೇರಿಕೊಳ್ಳುತ್ತದೆ. ಅಲ್ಲದೆ ಬ ಮತ್ತು ಭ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಬಲಭಾಗದಲ್ಲಿ ಹೆಚ್ಚಿನ ಒಂದು ಕೊಂಡಿ ಸೇರಿರುವುದು ಗಮನಾರ್ಹವಾದುದು. ಇದೇ ರೂಪವೇ ವಿಶೇಷ ಬದಲಾವಣೆಯಿಲ್ಲದೆ ಮುಂದುವರಿದು ಈಗಿನ ರೂಪವನ್ನು ತಾಳುತ್ತದೆ ಈ ಅಕ್ಷರ ತಾಲವ್ಯ ಅಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಸ್ಪರ್ಶಕ್ಕೆ ಬದಲಾಗಿ ಅನುಘರ್ಷವೂ ಆಗಿರುತ್ತದೆ.
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: