ರ
ಕನ್ನಡ ವರ್ಣಮಾಲೆಯಲ್ಲಿ ರ, ಕನ್ನಡ ವರ್ಣಮಾಲೆಯ ಎರಡನೇ ಅವರ್ಗೀಯ ವ್ಯಂಜನವಾಗಿದೆ. ರೇಫ. ವರ್ತ್ಸ್ಯ (ದಂತ್ಯ) ಕಂಪಿನ ಘೋಷ ಧ್ವನಿ.
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಈ ಅಕ್ಷರ ಅಶೋಕನ ಬ್ರಾಹ್ಮೀಲಿಪಿಯಲ್ಲಿ ಒಂದು ಡೊಂಕಾದ ಗೆರೆಯನ್ನುಳ್ಳದ್ದಾಗಿದೆ. ಸಾತವಾಹನ ಕಾಲದಲ್ಲಿ ಸ್ವಲ್ಪ ದಪ್ಪವಾಗಿಯೂ ಕೆಳಭಾಗದಲ್ಲಿ ಎಡಭಾಗಕ್ಕೆ ಬಗ್ಗಿಕೊಂಡು ಪರಿವರ್ತಿತವಾಗಿದೆ. ಕದಂಬರ ಕಾಲದಲ್ಲಿ ಚೌಕತಲೆಯ ಜೊತೆಗೆ ಕೆಳಗಿನ ಬಗ್ಗಿದ ರೇಖೆಯು ಮೇಲೆ ಬರುವ ಪ್ರವೃತ್ತಿಯನ್ನು ವ್ಯಕ್ತಪಡಿಸುತ್ತದೆ. ಬಾದಾಮಿಯ ಚಾಳುಕ್ಯರ ಕಾಲದಲ್ಲಿ ಸ್ಪಷ್ಟವಾಗಿ ತಲೆಕಟ್ಟು ಕಂಡುಬಂದು ಕೆಳಗಿನ ರೇಖೆಯ ತಲೆಕಟ್ಟಿನ ಸಮೀಪವಾಗಿ ಬರುವುದನ್ನು ಗಮನಿಸುತ್ತೇವೆ. ರಾಷ್ಟ್ರಕೂಟರ ಕಾಲದಲ್ಲಿ ಈ ರೇಖೆಯು ತಲೆಕಟ್ಟನ್ನು ಸೇರಿ ಈಗಿನ 'ಈ' ಅಕ್ಷರದ ಸ್ವರೂಪಕ್ಕೆ ಅತಿ ಸಮೀಪವಾಗಿ ಕಾಣಬರುತ್ತದೆ. ಹೊಯ್ಸಳ ಮತ್ತು ಅವರ ಸಮಕಾಲೀನರ ಕಾಲಗಳಲ್ಲಿ ವೃತ್ತ ಸ್ವಲ್ಪ ಉದ್ದವಾಗಿ ಬದಲಾವಣೆ ಹೊಂದೆ ತಲೆ ಕಟ್ಟು ಅಕ್ಷರಕ್ಕೆ ಸೇರಿದಂತೆ ಸ್ಥಿರವಾಗಿ ಉಳಿಯುತ್ತದೆ.
|
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: