ಆ
ಆ ಕನ್ನಡ ವರ್ಣಮಾಲೆಯ ಎರಡನೇ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇದು ಕನ್ನಡದ ವರ್ಣಮಾಲೆಯಲ್ಲಿ ಗುತಿಸಬಹುದಾದ ದೀರ್ಘಸ್ವರ. ಎರಡು ಅ ಗಳು ಸೇರಿದಾಗ ಆ ಆಗುತ್ತದೆ. ಎಂದರೆ ಅ+ಅ=ಆ ಇದನ್ನು ಸವರ್ಣದೀರ್ಘ ಸಂಧಿ ಎಂದು ಕರೆಯುತ್ತಾರೆ. ಅ ಮತ್ತು ಆ ಈ ಎರಡು ಸ್ವರಗಳನ್ನು ನಾಮಿಸ್ವರಗಳು ಎಂದು ಕರೆಯುತ್ತಾರೆ.
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಕನ್ನಡ ವರ್ಣಮಾಲೆಯಲ್ಲಿ ಎರಡನೆಯ ಅಕ್ಷರವಾದ ಆಕಾರ ಕ್ರಿ,ಪೂ. ಮೂರನೆಯ ಶತಮಾನದ ಅಶೋಕನ ಬ್ರಾಹ್ಮೀ ಲಿಪಿಯಲ್ಲಿ ಪ್ರತ್ಯೇಕ ರೂಪವನ್ನು ತಾಳದೆ, ಆಕಾರಕ್ಕೆ ದೀರ್ಘವನ್ನು ಸೂಚಿಸುವ ಒಂದು ಸಣ್ಣ ರೇಖೆಯನ್ನು ಮಾತ್ರ ಒಳಗೊಂಡಿದೆ. ಈ ರೂಪವೇ ಶಾತವಾಹನ, ಕದಂಬ, ಗಂಗ. ಬಾದಾಮಿ ಚಾಲುಕ್ಯರ ಕಾಲಗಳಲ್ಲೂ ಮುಂದುವರಿದಿದೆ. ಈ ಕಾಲದ ರೂಪಗಳಲ್ಲಿ ದೀರ್ಘಸೂಚಕ ರೇಖೆ ಡೊಂಕಾಗುತ್ತ ಹೋಗಿ, ಕೊನೆಗೆ ಹೊಯ್ಸಳರ ಕಾಲದಲ್ಲಿ ಒಂದು ಸಣ್ಣ ಕೊಂಡಿಯ ಆಕಾರವನ್ನು ಪಡೆದಿದೆ. ಕ್ರಿ.ಶ ಹದಿನೈದನೆಯ ಶತಮಾನದ ವಿಜಯನಗರ ಕಾಲದ ಶಾಸನಗಳಲ್ಲಿ ಈ ಕೊಂಡಿ ಅಕ್ಷರಕ್ಕೆ ಸೇರಿಕೊಂಡಿದೆ. ಈ ರೂಪವೇ ಮುಂದಿನ ಶತಮಾನಗಳಲ್ಲಿ ಮುಂದುವರಿದು ಈಗಿನ ಆಕಾರವಾಗಿದೆ.[೧]
ಭಾಷಾವಿಜ್ಞಾನ ಹಿನ್ನೆಲೆ
ಬದಲಾಯಿಸಿಕನ್ನಡ ವರ್ಣಮಾಲೆಯ ಈ ಎರಡನೆಯ ಅಕ್ಷರ ವಿವೃತ ಮಧ್ಯ ಅಗೋಲ ದೀರ್ಘ ಸ್ವರವನ್ನು ಸೂಚಿಸುತ್ತದೆ.
ಸ್ವರಾಕ್ಷರಗಳು ಎಂದರೇನು ?
ಬದಲಾಯಿಸಿ- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.[೨]
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಌ = ಲುೃ ಗೆ ಹತ್ತಿರವಾದ ಉಚ್ಚಾರ ೡ = ಲೂೃ ಗೆ ಹತ್ತಿರವಾದ ಉಚ್ಚಾರ
ದೀರ್ಘಸ್ವರ
ಬದಲಾಯಿಸಿಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಆ, ಈ, ಊ, ೠ, ೡ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಆ ಅಕ್ಷರವೂ ಒಂದಾಗಿದೆ.
ಕನ್ನಡದ ನಾವಿ ಸ್ವರಗಳು
ಬದಲಾಯಿಸಿಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.
ಹೃಸ್ವಸ್ವರ | ದೀರ್ಘಸ್ವರ |
---|---|
ಅ | ಆ |
ಇ | ಈ |
ಉ | ಊ |
ಎ | ಏ |
ಒ | ಓ |
ಕನ್ನಡ ಅಕ್ಷರವನ್ನು ಬರೆಯುವ ಮತ್ತು ಉಚ್ಛರಿಸುವ ವಿಧಾನ
ಬದಲಾಯಿಸಿಕನ್ನಡ | ದೇವನಾಗರಿ | ISO 15919 ಸಂಕೇತ | ಬರೆಯುವ ವಿಧಾನ | ಉಚ್ಚಾರಣೆ |
---|---|---|---|---|
ಆ | आ | ā |
ಎರಡಕ್ಷರದ ಪದಗಳು :
ಮೂರಕ್ಷರದ ಪದಗಳು :