, ಕನ್ನಡ ವರ್ಣಮಾಲೆಯ ಕ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ, ಮಹಾಪ್ರಾಣಾಕ್ಷರ. ಇದು ಕಂಠ್ಯ ಘೋಷಸ್ಪರ್ಶ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ರೂಪಾಂತರಗಳು

ಬದಲಾಯಿಸಿ

ಅಶೋಕನ ಕಾಲದಿಂದ ಮೈಸೂರು ಅರಸರ ಕಾಲದವರೆಗಿನ ಬರೆಹಗಳನ್ನು ಪರಿಶೀಲಿಸಿದರೆ ಈ ಅಕ್ಷರದ ರೂಪ ಅದೆಷ್ಟು ಬದಲಾಗಿದೆಯೆಂಬುದು ಸ್ಪಷ್ಟವಾಗುತ್ತದೆ. ರಾಷ್ಟ್ರಕೂಟರ ಕಾಲಕ್ಕೆ ಈ ಅಕ್ಷರದ ಮುಖ್ಯ ಭಾಗವಾದ ಕೊಂಡಿಯೊಂದು ಬಲಭಾಗದಲ್ಲಿ ಮೂಡಿರುವುದನ್ನು ಕಾಣಬಹುದು. ಇದೇ ರೂಪ ನಾಲ್ಕು ಶತಮಾನಗಳ ಕಾಲ ನಡೆದುಬಂತು. ಆನಂತರ, ಇದೇ ರೂಪದ ಷ ಮತ್ತು ಹ ಕಾರಗಳಿಂದ ಇದನ್ನು ಪ್ರತ್ಯೇಕಿಸಲು ಇದರ ಹೊಕ್ಕಳನ್ನು ಸೀಳಿದಂತೆ ತೋರುತ್ತದೆ. ಹದಿನೆಂಟನೆಯ ಶತಮಾನದ ಹೊತ್ತಿಗೆ ಖಚಿತಗೊಂಡ ಈ ರೂಪವೇ ಇಂದಿಗೂ ಬಳಕೆಯಲ್ಲಿದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಘ&oldid=806918" ಇಂದ ಪಡೆಯಲ್ಪಟ್ಟಿದೆ