ಥ
ಥ, ಕನ್ನಡ ವರ್ಣಮಾಲೆಯ ತ-ವರ್ಗದ ಎರಡನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಮಹಾಪ್ರಾಣ.
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಬ್ರಾಹ್ಮೀಲಿಪಿಯಲ್ಲಿದು ಒಂದು ವೃತ್ತವಾಗಿ ನಡುಬಿಂದುವಿನೊಡನೆ ಕಾಣಿಸಿಕೊಳ್ಳುತ್ತದೆ. ಕದಂಬರ ಕಾಲಕ್ಕೆ ಆಯಾಕಾರವಾಗುತ್ತದೆ. ಗಂಗರ ಕಾಲಕ್ಕೆ ಆಯಾಕಾರದ ತಳದಲ್ಲಿ ಹೊಕ್ಕಳು ಕಾಣಿಸಿಕೊಳ್ಳತ್ತದೆ. ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಅಸ್ಪಷ್ಟವಾಗಿ ಕಾಣತೊಡಗಿದ ತಲೆಕಟ್ಟು ಮುಂದಿನ ಎರಡು ಶತಮಾನಗಳಲ್ಲಿ ಸುಸ್ಪಷ್ಟವಾಗುತ್ತದೆ. ವಿಜಯನಗರದ ಕಾಲದಲ್ಲಿ ಹೊಕ್ಕಳು ಸೀಳಿರುವುದನ್ನು ಗಮನಿಸಬೇಕು. ಅಂದಿಗೆ ಈ ಅಕ್ಷರಕ್ಕೆ ಇಂದಿನ ರೂಪ ಸಿದ್ಧಿಸಿದಂತಾಯಿತು. ಮುಂದೆ ಇದೇ ರೂಪ ನಡೆದು ಬಂದಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: