ಢ
ಢ, ಕನ್ನಡ ವರ್ಣಮಾಲೆಯ ಟ-ವರ್ಗದ ನಾಲ್ಕನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ.ಮತ್ತು ಮಹಾಪ್ರಾಣಾಕ್ಷರ. ಈ ಅಕ್ಷರ ಘೋಷ ಸ್ಪರ್ಶ ಮೂರ್ಧನ್ಯ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ.
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಅಶೋಕನ ಕಾಲದಲ್ಲಿ ಆನೆ ಸೊಂಡಿಲಂತಿದ್ದ ಈ ಅಕ್ಷರಕ್ಕೆ ಕದಂಬರ ಕಾಲದಲ್ಲಿ ಹೊಕ್ಕಳೂ ಬಾದಾಮಿಯ ಚಾಳುಕ್ಯರ ಕಾಲಕ್ಕೆ ಸೂಕ್ಷ್ಮವಾಗಿ ತಲೆಕಟ್ಟೂ ಕಾಣಿಸಿಕೊಂಡವು. ಅಲ್ಪಪ್ರಾಣಾಕ್ಷರ ಡ ದಿಂದ ಇದನ್ನು ಬೇರ್ಪಡಿಸಲು ಇದರ ಹೊಕ್ಕಳು ಸೀಳಿದ್ದು ವಿಜಯನಗರದವರ ಕಾಲದಲ್ಲಿ. ಮೈಸೂರು ಅರಸರ ಕಾಲದ ರೂಪವೇ ಈಗ ಪ್ರಚಲಿತವಿದೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: