ಸ್ವರ

ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು

ಸ್ವರವೆಂಬುದು ಭಾಷೆ, ವ್ಯಾಕರಣ ಮತ್ತು ಸಂಗೀತದಲ್ಲಿ ಕಂಡು ಬರುವ ಪದ. ಸಂಗೀತ ಕ್ಷೇತ್ರದಲ್ಲಿ ಸ್ವರ (ಸಂಗೀತ) ಎಂಬ ಪದ ಬಳಕೆಯಲ್ಲಿದೆ.

ಜೀವ ಸ್ವರ ಮತ್ತು ಧೀರ್ಘ ಸ್ವರ

ಸ್ವರಾಕ್ಷರಗಳು ಎಂದರೇನು ?ಸಂಪಾದಿಸಿ

ಕೇಶಿರಾಜ ಕನ್ನಡದಲ್ಲಿ ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.

 1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
 2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಌ - ಇದು 'ಲುೃ ಗೆ ಹತ್ತಿರದ ಉಚ್ಛಾರ ಹೊಂದಿದೆ

ವಿಧಗಳುಸಂಪಾದಿಸಿ

ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.

 1. ಹ್ರಸ್ವಸ್ವರ
 2. ದೀರ್ಘಸ್ವರ
 3. ಸಂಧ್ಯಕ್ಷರ
 4. ಪ್ಲುತ

ಹ್ರಸ್ವಸ್ವರಸಂಪಾದಿಸಿ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಎ. ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ.

ದೀರ್ಘಸ್ವರಸಂಪಾದಿಸಿ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಏ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಅಕ್ಷರಗಳು ಎಂದು ಕರೆಯುತ್ತಾರೆ.

ಸಂಧ್ಯಕ್ಷರಸಂಪಾದಿಸಿ

 • ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 4 – ಏ,ಐ,ಓ,ಔ.
 • ಸಂಧ್ಯಕ್ಷರಗಳಲ್ಲಿ ಗೂಢಸಂಧಿಯಿದೆ.
  • =ಅ+ಇ;ಆ+ಈ;ಅ+ಈ;ಆ+ಇ,
  • =ಅ+ಉ;ಆ+ಊ,
  • =ಅ+ಏ,
  • =ಅ+ಒ.

ಪ್ಲುತಸಂಪಾದಿಸಿ

ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾಽಽ, ತಮ್ಮಾಽಽ, ಹಾ! ರಾಮಾ!

ಸವರ್ಣಗಳುಸಂಪಾದಿಸಿ

ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣಗಳನ್ನು ಬಿಟ್ಟು ಉಳಿದ ಸ್ವರಗಳು ‘ನಾಮಿ’ ಸ್ವರಗಳು.

ಅನುಸ್ವಾರ ಮತ್ತು ವಿಸರ್ಗಸಂಪಾದಿಸಿ

ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ. (ಅಂ-ಅನುಸ್ವಾರ, ಅ ಃವಿಸರ್ಗ)

ಉಲ್ಲೇಖಸಂಪಾದಿಸಿ

"https://kn.wikipedia.org/w/index.php?title=ಸ್ವರ&oldid=1097940" ಇಂದ ಪಡೆಯಲ್ಪಟ್ಟಿದೆ