ಒ
ಒ ಇದು ಒಂದು ಸ್ವರಾಕ್ಷರ. ಕನ್ನಡ ವರ್ಣಮಾಲೆಯ ಹನ್ನೆರಡನೆಯ ಅಕ್ಷರವಾಗಿದೆ. ಇದು ಒಂದು ಸ್ವರಾಕ್ಷರ. ಇ ಕನ್ನಡದ ಹೃಸ್ವ ಸ್ವರ ಅಕ್ಷರ. ನಾಮಿಸ್ವರಗಳಲ್ಲಿ ಇ ಮತ್ತು ಈ ಜೊತೆ ಸೇರುತ್ತವೆ. ಹಾಗಾಗಿ ಸವರ್ಣಗಳಲ್ಲಿ ಒ ಅಕ್ಷರದ ಪಾತ್ರವೂ ಇದೆ.[೧]
|
ಚಾರಿತ್ರಿಕ ಹಿನ್ನೆಲೆ
ಬದಲಾಯಿಸಿಕನ್ನಡ ವರ್ಣಮಾಲೆಯಲ್ಲಿ ಹನ್ನೆರಡನೆಯದು. ಹ್ರಸ್ವಸ್ವರಾಕ್ಷರ. ಅಶೋಕನ ಕಾಲದ ಬ್ರಾಹ್ಮೀ ಲಿಪಿಯಲ್ಲಿ ಈ ಅಕ್ಷರ ಒಂದು ಲಂಬರೇಖೆಯ ಮೇಲ್ತುದಿಯ ಎಡಭಾಗದಲ್ಲಿ ಮತ್ತು ಕೆಳತುದಿಯ ಬಲಭಾಗದಲ್ಲಿ ಅಡ್ಡರೇಖೆಗಳಿಂದ ಕೂಡಿದೆ. ಸಾತವಾಹನರ ಕಾಲದಲ್ಲಿ ವಿಶೇಷ ಬದಲಾವಣೆಯಿಲ್ಲದೆ ಅದರ ಮೂಲೆಗಳು ಗುಂಡಗಾಗುತ್ತವೆ. ಸ್ವತಂತ್ರವಾಗಿ ಈ ಅಕ್ಷರ ದೊರಕುವುದು ಕಷ್ಟವಾದುದರಿಂದ 12ನೆಯ ಶತಮಾನದವರೆಗಿನ ಇದರ ರೂಪ ಹೇಗಿದ್ದಿತೆಂದು ಹೇಳುವುದು ಕಷ್ಟ.. ಕಲ್ಯಾಣಿ ಚಾಳುಕ್ಯರ ಶಾಸನಗಳಲ್ಲಿ ಇದು ಈಗಿರುವ ರೂಪಕ್ಕೆ ಬಹುಸಮೀಪವಾಗಿಯೇ ಇರುವುದು ಕಂಡುಬರುತ್ತದೆ. ಇದೇ ರೂಪ ಹೊಯ್ಸಳ, ವಿಜಯನಗರ ಕಾಲಗಳಲ್ಲಿಯೂ ಮುಂದುವರಿದು ಅಕ್ಷರದ ಪ್ರಸ್ತುತ ರೂಪ ಸ್ಥಿರವಾಗುತ್ತದೆ.
- ಈ ಅಕ್ಷರದ ಹ್ರಸ್ವ ಮತ್ತು ದೀರ್ಘ ರೂಪಗಳಿಗೆ ಅಷ್ಟಾಗಿ ವ್ಯತ್ಯಾಸಗಳು ಕಾಣಬರುವುದಿಲ್ಲ. ಮೊದಲ ರೂಪಗಳು ಸಂಸ್ಕೃತದಲ್ಲಿರುವಂತೆ ದೀರ್ಘವನ್ನೇ ಸೂಚಿಸುತ್ತವೆ. ಅನಂತರ ಕನ್ನಡ ಪದಪ್ರಯೋಗ ಹೆಚ್ಚಿದಂತೆಲ್ಲ ಹ್ರಸ್ವ ದೀರ್ಘಗಳ ರೂಪ ವ್ಯತ್ಯಾಸ ಖಚಿತವಾಗುತ್ತ ಬರುತ್ತದೆ. ಲಿಪಿಯ ದೃಷ್ಟಿಯಿಂದ ಈ ವ್ಯತ್ಯಾಸ ಯಾವಾಗ ಪ್ರಾರಂಭವಾಯಿತು ಎಂದು ಹೇಳಲು ಸಾಧ್ಯವಿಲ್ಲ. ಈ ಅಕ್ಷರ ಪಶ್ಚ ಅರ್ಧಸಂವೃತ ಗೋಲ ಸ್ವರವನ್ನು ಸೂಚಿಸುತ್ತದೆ.[೨]
ಸ್ವರಾಕ್ಷರಗಳು ಎಂದರೇನು ?
ಬದಲಾಯಿಸಿ- ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
- ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.
ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,
ಹೃಸ್ವಸ್ವರ
ಬದಲಾಯಿಸಿಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು ೫ - ಅ, ಇ, ಉ, ಋ, ಌ, ಎ, ಒ - ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ. ಇವುಗಳಲ್ಲಿ ಒ ಅಕ್ಷರವೂ ಒಂದಾಗಿದೆ.
ಕನ್ನಡದ ನಾಮಿ ಸ್ವರಗಳು
ಬದಲಾಯಿಸಿಈ ನಾಮಿ ಸ್ವರಗಳನ್ನು ಸವರ್ಣಗಳೆಂದು ಕರೆಯುತ್ತಾರೆ.
ಹೃಸ್ವಸ್ವರ | ದೀರ್ಘಸ್ವರ |
---|---|
ಅ | ಆ |
ಇ | ಈ |
ಉ | ಊ |
ಎ | ಏ |
ಒ | ಓ |
ಒ ಧ್ವನಿಯನ್ನು ಬರೆಯುವ ಉಚ್ಛರಿಸುವ ಕ್ರಮ
ಬದಲಾಯಿಸಿಕನ್ನಡ | ದೇವನಾಗರಿ | ISO 15919 ಸಂಕೇತ | ಅಕ್ಷರ ಚಿತ್ರಚಲನೆ Animation | ಉಚ್ಚಾರಣೆ |
---|---|---|---|---|
ಒ | ओ | o |
- ಪ್ರಾಣಿ ಸಂಬಂಧಿ ಪದ : ಒಂಟೆ
- ಮನುಷ್ಯ ಸಂಬಂಧಿ ಪದ : ಒಬೇರಾಯ
- ಸಸ್ಯ ಸಂಬಂಧಿ ಪದ : ಒಲ್ಲೆ ಸೊಪ್ಪು,
ಒ ಅಕ್ಷರದಿಂದ ಆರಂಭವಾಗುವ ಸಂಖ್ಯಾವಚಿ ಪದಗಳು
ಬದಲಾಯಿಸಿಉಲ್ಲೇಖ
ಬದಲಾಯಿಸಿ