, ಕನ್ನಡ ವರ್ಣಮಾಲೆಯ ಮೊದಲನೇ ಅವರ್ಗೀಯ ವ್ಯಂಜನವಾಗಿದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ ಬದಲಾಯಿಸಿ

ಇದರ ಅತ್ಯಂತ ಪ್ರಾಚೀನ ರೂಪವನ್ನು ಅಶೋಕನ ಕಾಲದ ಬ್ರಾಹ್ಮೀ ಶಾಸನಗಳಲ್ಲಿ ಕಾಣಬಹುದು. ಅರ್ಧವೃತ್ತದ ನಡುವೆ ಒಂದು ಉದ್ದವಾದ ರೇಖೆಯನ್ನುಳ್ಳ ಅಶೋಕನ ಕಾಲದ ಈ ಅಕ್ಷರ ಶಾತವಾಹನರ ಕಾಲದಲ್ಲಿ ಮೂಲಸ್ವರೂಪವನ್ನು ಉಳಿಸಿಕೊಂಡರೂ ಅರ್ಧವೃತ್ತ ಅಗಲಗೊಂಡು ಖಂಡವೃತ್ತವಾಗುವ ಅಲ್ಪ ಬದಲಾವಣೆಯನ್ನು ಹೊಂದುತ್ತದೆ. ಕ್ರಿ.ಶ. ಐದನೆಯ ಶತಮಾನದ ಕದಂಬರ ಕಾಲದಲ್ಲಿ ಚೌಕತಲೆ ಕಾಣಿಸಿಕೊಳ್ಳುವುದಲ್ಲದೆ ಖಂಡವೃತ್ತದ ಎರಡು ಭಾಗಗಳೂ ಒಳಕ್ಕೆ ಬಾಗಿ ಮೇಲಿನವರೆಗೂ ಹೋಗುತ್ತದೆ. ಕ್ರಿ.ಶ ಆರನೆಯ ಶತಮಾನದ ಗಂಗರ ಕಾಲದಲ್ಲಿ ಖಂಡವೃತ್ತದ ಎಡಭಾಗ ಕೊಂಡಿಯಂತೆ ಸೇರಿಕೊಳ್ಳುತ್ತದೆ. ಕ್ರಿ.ಶ ಒಂಬತ್ತನೆಯ ಶತಮಾನದ ರಾಷ್ಟ್ರಕೂಟರ ಕಾಲದಲ್ಲಿ ಈ ಅಕ್ಷರ ತುಂಬ ಅಗಲಗೊಂಡು ಕೊಂಡಿಯು ಒಂದು ಸಣ್ಣ ವೃತ್ತದಂತಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದ ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಇದು ಸಂಪೂರ್ಣ ಪರಿವರ್ತನೆ ಹೊಂದಿ ಈಗಿನ ರೂಪವನ್ನು ತಾಳುತ್ತದೆ. ಇದೇ ರೂಪವೇ ಸ್ಥಿರಗೊಂಡು ಮುಂದೆಯೂ ಬಳಕೆಯಾಗುತ್ತದೆ. ಈ ಅಕ್ಷರ ತಾಲವ್ಯ ಜಿಹ್ವಾಮೂಲೀಯ ಅರ್ಧಸ್ವರ ಧ್ವನಿಯನ್ನು ಸೂಚಿಸುತ್ತದೆ.

 
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಯ&oldid=806961" ಇಂದ ಪಡೆಯಲ್ಪಟ್ಟಿದೆ