, ಕನ್ನಡ ವರ್ಣಮಾಲೆಯ ಚ-ವರ್ಗದ ಮೂರನೇ ಅಕ್ಷರವಾಗಿದೆ. ಇದು ಒಂದು ವ್ಯಂಜನ. ಈ ಅಕ್ಷರ ತಾಲವ್ಯ ಘೋಷ ಸ್ಪರ್ಶಧ್ವನಿಯನ್ನು ಸೂಚಿಸುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಇದರ ಉಚ್ಚಾರಣೆ ಸ್ಪರ್ಶಕ್ಕೆ ಬದಲಾಗಿ ಅನುಘರ್ಷವಾಗಿಯೂ ಇದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಚಾರಿತ್ರಿಕ ಹಿನ್ನೆಲೆ ಬದಲಾಯಿಸಿ

ಕ್ರಿ.ಪೂ. ಮೂರನೆಯ ಶತಮಾನದ ಬ್ರಾಹ್ಮೀಲಿಪಿಯ ಈ ಅಕ್ಷರರೂಪ ಸುಮಾರು ಆರನೆಯ ಶತಮಾನದವರೆಗೆ ಹಾಗೆಯೆ ಮುಂದುವರಿಯುತ್ತದೆ, ಸಾತವಾಹನರ ಕಾಲದಲ್ಲಿ ಮೂರು ಅಡ್ಡರೇಖೆಗಳನ್ನು ಒಂದು ಲಂಬರೇಖೆಯೊಂದಿಗೆ ಸೇರಿಸಿರುವಂತೆ ಕಾಣುತ್ತದೆ. ಸುಮಾರು ಒಂಬತ್ತನೆಯ ಶತಮಾನದ ಸಮಯಕ್ಕೆ ಮೇಲಿನ ಅಡ್ಡರೇಖೆ ಸಣ್ಣದಾಗಿ ಕೆಳಗಿನ ಎರಡು ರೇಖೆಗಳು ಉದ್ದವಾಗುತ್ತವೆ ಮತ್ತು ಅಕ್ಷರದ ಅಗಲ ಹೆಚ್ಚಾಗುತ್ತದೆ. ಕ್ರಿ.ಶ. ಹನ್ನೊಂದನೆಯ ಶತಮಾನದಲ್ಲಿ ಈ ಅಕ್ಷರಕ್ಕೆ ಈಗಿರುವ ರೂಪ ಬರುತ್ತದೆ.

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜ&oldid=806924" ಇಂದ ಪಡೆಯಲ್ಪಟ್ಟಿದೆ